Headlines

ಟಾರ್ಗೆಟ್ಟೇ ಬೇರೆ, ದರೋಡೆ ಮಾಡಿದ ಬಂಗಾರದ ಅಂಗಡಿಯೇ ಬೇರೆ!: ವಿಜಯಪುರ ರಾಬರಿ ಕೇಸ್​​ಗೆ ಹೊಸ ಟ್ವಿಸ್ಟ್​​ – Kannada News | Vijayapura Robbery Case Takes New Turn: Accused Targeted Another Shop but Robbed Bhumika Jewellers

ವಿಜಯಪುರ, ಜನವರಿ 27: ಜಿಲ್ಲೆಯ ಚಡಚಣ ತಾಲೂಕಿನ ಹಲಸಂಗಿ ಗ್ರಾಮದಲ್ಲಿನ ಭೂಮಿಕಾ ಜ್ಯುವೆಲರಿ ಶಾಪ್ ದರೋಡೆ ಪ್ರಕರಣ ಸಂಬಂಧ ಅಚ್ಚರಿಯ ಮಾಹಿತಿ ತನಿಖೆ ವೇಳೆ ಬಯಲಾಗಿದೆ. ದರೋಡೆಕೋರರು ರಾಬರಿ ಮಾಡಲು ಪ್ಲ್ಯಾನ್​​ ಮಾಡಿಕೊಂಡು ಬಂದಿದ್ದ ಬಂಗಾರದ ಅಂಗಡಿಯೇ ಬೇರೆಯಾಗಿತ್ತು. ಆದರೆ ಅಲ್ಲಿ ಹೆಚ್ಚು ಜನರಿದ್ದ ಕಾರಣ ಯೂಟರ್ನ್ ಮಾಡಿಕೊಂಡು ಬಂದು ಈ ಶಾಪ್​​ಗೆ ನುಗ್ಗಿದ್ದಾರೆ ಎಂಬುದು ಗೊತ್ತಾಗಿದೆ. ವಿಜಯಪುರದಿಂದ ಸೊಲ್ಲಾಪುರ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 52ರ ಮೂಲಕ ಹಲಸಂಗಿ ಗ್ರಾಮಕ್ಕೆ ಎಂಟ್ರಿ ಕೊಟ್ಟಿದ್ದ ಆರೋಪಿಗಳು, ಗ್ರಾಮ ಪಂಚಾಯಿತಿ ಬಳಿಯ ರಸ್ತೆಯಿಂದ ಗ್ರಾಮದ ಮಧ್ಯ ಭಾಗದಲ್ಲಿರುವ ಜ್ಯುವೆಲರಿ ಶಾಪ್​​ಗಳತ್ತ ಚಿತ್ತನೆಟ್ಟಿದ್ದರು. ಭೂಮಿಕಾ ಜ್ಯುವೆಲರಿ ಶಾಪ್ ದಾಟಿ ಬೇರೆ ಬಂಗಾರದ ಅಂಗಡಿಗಳತ್ತ ಮೊದಲು ಹೋಗಿದ್ದರು. ಬಳಿಕ ಹಿಂದಿರುಗಿ ಬಂದು ಗನ್​​ ತೋರಿಸಿ ಭೂಮಿಕಾ ಜ್ಯುವೆಲರಿ ಶಾಪ್​​ನಲ್ಲಿ ದರೋಡೆ ನಡೆಸಿದ್ದಾರೆ ಎನ್ನಲಾಗಿದೆ. ಬಂದ ಮಾರ್ಗದ ಮೂಲಕವೇ ಆರೋಪಿಗಳು ಎಸ್ಕೇಪ್​​ ಆಗಿದ್ದು, ದರೋಡೆಕೋರರ ಪತ್ತೆಗೆ ವಿಶೇಷ ತಂಡಗಳ ರಚನೆ ಮಾಡಿ ಎಸ್ಪಿ ಲಕ್ಷ್ಮಣ ನಿಂಬರಗಿ ಆದೇಶಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *