Headlines

AB de Villiers: ವೈಭವ್​ನ ನೋಡಿದಾಗ ನನಗೆ ಆ ಬ್ಯಾಟರ್​ ನೆನಪಾಗ್ತಾರೆ!

AB de Villiers: ವೈಭವ್​ನ ನೋಡಿದಾಗ ನನಗೆ ಆ ಬ್ಯಾಟರ್​ ನೆನಪಾಗ್ತಾರೆ!

ವಂಡರ್ ಕಿಡ್ ಖ್ಯಾತಿಯ ವೈಭವ್ ಸೂರ್ಯವಂಶಿಯ (Vaibhav Sooryavanshi) ಆರ್ಭಟ ಮುಂದುವರೆದಿದೆ. ಯುವ ದಾಂಡಿಗನ ಈ ಆರ್ಭಟವೇ ಈಗ ಕ್ರಿಕೆಟ್ ಲೋಕದ ಹಾಟ್ ಟಾಪಿಕ್. ಈ ಟಾಪಿಕ್ ಕುರಿತಾಗಿ ಸಿಡಿಲಬ್ಬರದ ಸಿಡಿಲಮರಿ ಎಬಿ ಡಿವಿಲಿಯರ್ಸ್ ಕೂಡ ಮಾತನಾಡಿದ್ದಾರೆ.

ಖಾಸಗಿ ಲೈವ್ ಚರ್ಚೆಯಲ್ಲಿ ಕಾಣಿಸಿಕೊಂಡ ಎಬಿಡಿ, ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್​ ಅನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. “ನನಗೆ ವೈಭವ್ ಅತ್ಯಂತ ಪ್ರಭಾವಶಾಲಿ ಎಂದು ಅನಿಸಿದ್ದು ಆತನ ಸಿದ್ಧತೆ. ಅಂದರೆ 15ನೇ ವಯಸ್ಸಿನಲ್ಲಿರುವ ಆತನಿಗೆ ಇರುವುದು ಅದ್ಭುತ ಸ್ಪಷ್ಟತೆ. ಎದುರಾಳಿ ಬೌಲರ್​ಗಳ ಶೈಲಿಯನ್ನು ಅಧ್ಯಯನ ಮಾಡುವುದು ಅಂದುಕೊಂಡಷ್ಟು ಸುಲಭವಲ್ಲ”.

“ಮೈದಾನದ ಪರಿಸ್ಥಿತಿಯನ್ನು ಅರಿತುಕೊಳ್ಳುವುದು, ಪಂದ್ಯಕ್ಕೂ ಮುನ್ನ ಅದಕ್ಕೆ ಮಾನಸಿಕವಾಗಿ ಸಿದ್ಧರಾಗುವುದು, ಯಾವುದೂ ಸಹ ಸುಲಭವಲ್ಲ. ಆದರೆ ಇವೆಲ್ಲದಕ್ಕೂ ಆತ ಸಿದ್ಧಗೊಳ್ಳುತ್ತಿದ್ದಾನೆ. ಪಂದ್ಯಕ್ಕೂ ಮುನ್ನ ಮಾನಸಿಕವಾಗಿ ಸಿದ್ಧನಾಗುತ್ತಿರುವ ರೀತಿಯೇ ಅಪರೂಪವಾದದ್ದು” ಎಂದು ಎಬಿ ಡಿಲಿಯರ್ಸ್ ಹೇಳಿದ್ದಾರೆ.

“ನನಗೆ ಕೆಲವೊಮ್ಮೆ ವೈಭವ್ ಸೂರ್ಯವಂಶಿಯ ಆಟವು ಆಸ್ಟ್ರೇಲಿಯಾದ ಮಾಜಿ ಆಟಗಾರ ಮ್ಯಾಥ್ಯೂ ಹೇಡನ್ ಅವರನ್ನು ನೆನಪಿಸುತ್ತದೆ. ಹೇಡನ್ ಕೂಡ ಮ್ಯಾಚ್ ಆರಂಭಕ್ಕೂ ಮುನ್ನ ಮೈದಾನದ ಪಿಚ್ ಮೇಲೆ ನಿಂತು, ತಾನು ಹೇಗೆ ಬ್ಯಾಟಿಂಗ್ ಮಾಡಬೇಕು. ಯಾವ ರೀತಿ ಶಾಟ್​ಗಳನ್ನು ಬಾರಿಸಬೇಕು ಎಂಬುದನ್ನು ಕಣ್ಮುಚ್ಚಿ ದೃಶ್ಯೀಕರಿಸಿಕೊಳ್ಳುತ್ತಿದ್ದೆರು. ವೈಭವ್ ಸೂರ್ಯವಂಶಿ ಕೂಡ ಪಂದ್ಯಕ್ಕೂ ಮುನ್ನ ಈ ರೀತಿ ಸಿದ್ಧತೆ ಮಾಡಿಕೊಳ್ಳುತ್ತಿರುವುದನ್ನು ನೋಡಿದೆ” ಎಂದು ಎಬಿಡಿ ಹೇಳಿದ್ದಾರೆ.

“ಕುತೂಹಲಕಾರಿ ವಿಷಯ ಎಂದರೆ ವೈಭವ್ ಸೂರ್ಯವಂಶಿ ಯಾರನ್ನೇ ನಕಲು ಮಾಡಲು ಮುಂದಾಗುತ್ತಿಲ್ಲ ಎಂಬುದು. ಅಂದರೆ ಆತ ಹೊಸದಾಗಿ ರೂಪುಗೊಳ್ಳುತ್ತಿದ್ದಾನೆ. ತಾನು ಹೇಗೆ ಬ್ಯಾಟಿಂಗ್ ಮಾಡಬೇಕು, ಯಾವ ರೀತಿ ಒಗ್ಗಿಕೊಳ್ಳಬೇಕು, ಅಭ್ಯಾಸಗಳನ್ನು ಹೇಗೆ ರೂಪಿಸಿಕೊಳ್ಳಬೇಕು ಎಂಬುದರ ಬಗ್ಗೆ ಸ್ಪಷ್ಟತೆ ಇದೆ. ವಿಶ್ವದ ಅತ್ಯುತ್ತಮ ಆಟಗಾರರು ತಮ್ಮ ವೃತ್ತಿಜೀವನದ ಆರಂಭದಲ್ಲಿ ತಮಗೆ ಯಾವುದೇ ಸೂಕ್ತ ಎಂಬುದು ಕಂಡುಕೊಳ್ಳುತ್ತಾರೆ. ವೈಭವ್ ಸೂರ್ಯವಂಶಿ ಕೂಡ ಅದೇ ಹಾದಿಯಲ್ಲಿದ್ದಾರೆ. ತಮಗೇನು ಬೇಕು ಎಂಬ ಸೂತ್ರವನ್ನು ಆರಂಭದಲ್ಲೇ ಕಂಡುಕೊಂಡಿದ್ದಾರೆ”.

ಇದನ್ನೂ ಓದಿ: ವಿಶ್ವ ದಾಖಲೆ… ಪೊಲಾರ್ಡ್​ಗೆ​ 652 ಇನಿಂಗ್ಸ್, ವೈಭವ್​ಗೆ ಜಸ್ಟ್​ 33 ಇನಿಂಗ್ಸ್​!

“ಈಗ ಜಸ್ಟ್ 15 ವರ್ಷ ಅಷ್ಟೇ. ಈಗಲೇ ಆತನಿಗೆ ಕೆರಿಯರ್ ಬಗ್ಗೆ ಸ್ಪಷ್ಟತೆ ಇದೆ. ಇದೇ ಹಾದಿಯಲ್ಲಿ ಸಾಗಿದರೆ ವೈಭವ್ ಸೂರ್ಯವಂಶಿ ಸೂಪರ್ ಸ್ಟಾರ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೀಗಾಗಿ ವೈಭವ್ ಸೂರ್ಯವಂಶಿ ಮುಂಬರುವ ದಿನಗಳಲ್ಲಿ ಕ್ರಿಕೆಟ್ ಅಂಗಳವನ್ನು ಆಳಿದರೂ ಅಚ್ಚರಿಪಡಬೇಕಿಲ್ಲ” ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.

 

Source link

Leave a Reply

Your email address will not be published. Required fields are marked *