
ನವದೆಹಲಿ, ಏಪ್ರಿಲ್ 10: ಕಳೆದ ಒಂದು ಒಂದೂವರೆ ವರ್ಷದಿಂದ ಭಾರತದ ಈಕ್ವಿಟಿ ಮಾರುಕಟ್ಟೆ (stock market) ಹಿನ್ನಡೆಯಲ್ಲಿದ್ದರೂ ಹೂಡಿಕೆ ಆಕರ್ಷಿಸುವುದರಲ್ಲಿ ಹಿಂದೆ ಬಿದ್ದಿಲ್ಲ. ಮ್ಯೂಚುವಲ್ ಫಂಡ್ನ ಒಟ್ಟಾರೆ ಅಸೆಟ್ಗಳು (Mutual Fund AUMs) ಕಡಿಮೆಗೊಂಡರೂ ಈಕ್ವಿಟಿ ಸ್ಕೀಮ್ಗಳು ಭರ್ಜರಿ ಹೂಡಿಕೆ ಪಡೆದಿವೆ. ಭಾರತೀಯ ಮ್ಯೂಚುವಲ್ ಫಂಡ್ ಸಂಸ್ಥೆಯಾದ ಎಎಂಎಫ್ಐ ಇಂದು (ಏ. 10) ಬಿಡುಗಡೆ ಮಾಡಿದ ಮಾರ್ಚ್ ತಿಂಗಳ ದತ್ತಾಂಶದಲ್ಲಿ ಕೆಲ ಕುತೂಹಲಕಾರಿ ಅಂಶಗಳನ್ನು ಗಮನಿಸಬಹುದು.
ಮಾರ್ಚ್ ತಿಂಗಳಲ್ಲಿ ಮ್ಯೂಚುವಲ್ ಫಂಡ್ ಉದ್ಯಮದ ಒಟ್ಟು ಎಯುಎಂ ಅಥವಾ ನಿರ್ವಹಿತ ಆಸ್ತಿ 73.73 ಲಕ್ಷ ಕೋಟಿ ರೂ ಇದೆ. ಫೆಬ್ರುವರಿಯಲ್ಲಿ ಈ ಎಯುಎಂ 82.03 ಲಕ್ಷ ಕೋಟಿ ರೂನಷ್ಟು ಇತ್ತು. ಫೆಬ್ರುವರಿಗೆ ಹೋಲಿಸಿದರೆ ಮಾರ್ಚ್ನಲ್ಲಿ ಮ್ಯೂಚುವಲ್ ಫಂಡ್ನ ಒಟ್ಟು ನಿರ್ವಹಿತ ಆಸ್ತಿಯಲ್ಲಿ ಶೇ. 10ರಷ್ಟು ಇಳಿಕೆಯಾಗಿದೆ.
ಇದನ್ನೂ ಓದಿ: ಎಡಿಬಿ ವರದಿ: ಭಾರತದ ಜಿಡಿಪಿ ಬೆಳವಣಿಗೆ 2025ರಲ್ಲಿ ಶೇ. 6.9, 2027ರಲ್ಲಿ ಶೇ. 7.3 ಅಂದಾಜು
ಒಟ್ಟಾರೆ ಎಯುಎಂ ಕುಸಿತ ಕಂಡರೂ ಈಕ್ವಿಟಿ ಸ್ಕೀಮ್ಗಳಿಗೆ ಭರ್ಜರಿ ಒಳಹರಿವು ಬಂದಿದೆ. ಫೆಬ್ರುವರಿಗಿಂತ ಮಾರ್ಚ್ನಲ್ಲಿ ಶೇ. 55ರಷ್ಟು ಹೂಡಿಕೆ ಜಂಪ್ ಆಗಿದೆ. ಫೆಬ್ರುವರಿಯಲ್ಲಿ ಮ್ಯುಚುವಲ್ ಫಂಡ್ನ ಈಕ್ವಿಟಿ ಸ್ಕೀಮ್ಗಳಿಗೆ 25,965 ಕೋಟಿ ರೂ ಹೂಡಿಕೆ ಬಂದಿತ್ತು. ಮಾರ್ಚ್ನಲ್ಲಿ ಅದು 40,366 ಕೋಟಿ ರೂಗೆ ಏರಿದೆ.
ಈಕ್ವಿಟಿ ಸೆಗ್ಮೆಂಟ್ಗೆ ಬಂದರೆ ಲಾರ್ಜ್ ಕ್ಯಾಪ್, ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್, ಹೀಗೆ ಎಲ್ಲಾ ಗಾತ್ರದ ಈಕ್ವಿಟಿಗಳಿಗೂ ಒಳಹರಿವು ಏರಿಳಿತದಲ್ಲಿ ಹೆಚ್ಚಿನ ಅಂತರ ಕಾಣುತ್ತಿಲ್ಲ. ಲಾರ್ಜ್ ಕ್ಯಾಪ್ ಫಂಡ್ಗಳಿಗೆ ಬಂದ ಹೂಡಿಕೆ 2,111.7 ಕೋಟಿ ರೂನಿಂದ 2,997.8 ಕೋಟಿ ರೂಗೆ ಏರಿದೆ. ಮಿಡ್ಕ್ಯಾಪ್ ಫಂಡ್ಗಳಿಗೆ ಹೂಡಿಕೆ 4,003 ಕೋಟಿ ರೂನಿಂದ 6,063.5 ಕೋಟಿ ರೂಗೆ ಏರಿದೆ. ಸ್ಮಾಲ್ ಕ್ಯಾಪ್ ಫಂಡ್ಗಳು ಮಾರ್ಚ್ನಲ್ಲಿ 6,263.6 ಕೋಟಿ ರೂ ಹೂಡಿಕೆ ಆಕರ್ಷಿಸಿವೆ.
ಇದನ್ನೂ ಓದಿ: ಭಾರತ ಶೇ 7.8, ಅಮೆರಿಕ ಶೇ. 0.5; ಆರ್ಥಿಕ ಬೆಳವಣಿಗೆ ವೇಗದಲ್ಲಿ ಅಜಗಜಾಂತರ
ಮ್ಯುಚುವಲ್ ಫಂಡ್ಗಳಿಗೆ ಹೂಡಿಕೆಗಳು ಎಸ್ಐಪಿ ಮೂಲಕ ಹರಿದುಬರುವುದು ಹೆಚ್ಚುತ್ತಿದೆ. ಫೆಬ್ರುವರಿಯಲ್ಲಿ 29,845 ಕೋಟಿ ರೂ ಹೂಡಿಕೆಗಳು ಎಸ್ಐಪಿ ಮೂಲಕ ಆಗಿದ್ದವು. ಮಾರ್ಚ್ನಲ್ಲಿ ಅದು 32,087 ಕೋಟಿ ರೂಗೆ ಏರಿದೆ.
ನಿರ್ಗಮನ ಕಂಡ ಫಂಡ್ಗಳು
ಲಿಕ್ವಿಡ್ ಫಂಡ್ಗಳಲ್ಲಿ ಹೊರಹರಿವು ಹೆಚ್ಚಿದೆ. ಗೋಲ್ಡ್ ಇಟಿಎಫ್ಗಳಲ್ಲಿ ಹೂಡಿಕೆ ಕಡಿಮೆಗೊಂಡಿದೆ. ಅಚ್ಚರಿಯ ಸಂಗತಿ ಎಂದರೆ ಹೈಬ್ರಿಡ್ ಫಂಡ್ಗಳಿಂದ 16,538.5 ಕೋಟಿ ರೂ ಮೊತ್ತದ ಹೂಡಿಕೆಗಳು ನಿರ್ಗಮಿಸಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ