ಪತಿ, ಸಹೋದರ ಮಾವ ಆತ್ಮಹತ್ಯೆ: ಮದ್ವೆಯಾಗಿ 45 ದಿನಕ್ಕೆ ಬೇರೊಬ್ಬನೊಂದಿಗೆ ಓಡಿಹೋಗಿದ್ದ ಮಹಿಳೆ ಅರೆಸ್ಟ್ – Kannada News | Davanagere: Husband and Uncle Suicide case; Wife Arrest
ದಾವಣಗೆರೆ, ಜನವರಿ 28: ಪತ್ನಿ ಬೇರೊಬ್ಬನ ಜೊತೆ ಪರಾರಿ ಹಿನ್ನೆಲೆ ಪತಿ ಮತ್ತು ಸಹೋದರ ಮಾವ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪ್ರೇಮಿ ಶಿವಕುಮಾರ ಹಾಗೂ ಸರಸ್ವತಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಆರೋಪಿ ಪತ್ನಿ ಸರಸ್ವತಿಯನ್ನು ಪೊಲೀಸರು ಬಂಧಿಸಿದ್ದಾರೆ. ಶಿವಕುಮಾರಗಾಗಿ ಶೋಧ ನಡೆದಿದೆ. ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಎಸ್ಪಿ ಉಮಾ ಪ್ರಶಾಂತ್, ಪ್ರೀತಿಸಿದ ಯುವಕನೊಂದಿಗೆ ಓಡಿ ಹೋಗಿದ್ದ ಸರಸ್ವತಿ ಮದುವೆಗೂ ಮೊದಲೇ ಆರೋಪಿ ಶಿವಕುಮಾರನನ್ನ ಪ್ರೀತಿಸುತ್ತಿದ್ದಳು. ಜನವರಿ 23ರಂದು ಗುಮ್ಮನೂರ ಗ್ರಾಮದಿಂದ ತನ್ನ ಪ್ರಿಯತಮನ ಜೊತೆಗೆ…