All posts by nagaraj11081993

10ನೇ ದಿನ ಉತ್ಖನನ ವೇಳೆ ಕೋಟೆ ವೀರಭದ್ರೇಶ್ವರ ದೇಗುಲದ ಬಳಿ ಮತ್ತೊಂದು ಪ್ರಾಚ್ಯಾವಶೇಷ ಪತ್ತೆ! – Kannada News | Lakkundi Gold treasure: one More artefact found during excavations

ಗದಗ, (ಜನವರಿ 27): ಐತಿಹಾಸಿಕ ಲಕ್ಕುಂಡಿ (Lakkundi) ಗ್ರಾಮದಲ್ಲಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಪುರಾತತ್ವ ಇಲಾಖೆ ವತಿಯಿಂದ ಕಳೆದ 10 ದಿನಗಳಿಂದ ಉತ್ಖನನ ಕಾರ್ಯ ನಡೆಸುತ್ತಿವೆ. ಕೋಟೆ ವೀರಭದ್ರೇಶ್ವರ ದೇವಸ್ಥಾನದ ಬಳಿ 10×10 ಅಳತೆಯ ನಾಲ್ಕು ಬಾಕ್ಸ್‌ಗಳಲ್ಲಿ ಉತ್ಖನನ ನಡೆಯುತ್ತಿದ್ದು, 10 ಅಡಿ ಆಳ ತೆಗೆದಿರುವುದರಿಂದ A-1 ಬಾಕ್ಸ್‌ನಲ್ಲಿ ಬಿರುಕು ಕಾಣಿಸಿಕೊಂಡಿದೆ. ಯಾವುದೇ ಕ್ಷಣದಲ್ಲಿ ಮಣ್ಣು ಕುಸಿಯುವ ಆತಂಕ ಸಿಬ್ಬಂದಿಗಳನ್ನು ಕಾಡುತ್ತಿದೆ. ಇನ್ನು B-1 ಬ್ಲಾಕ್‌ನಲ್ಲಿ ಬೃಹತ್ ಗಾತ್ರದ ಕಲ್ಲು ಪತ್ತೆಯಾಗಿದ್ದು, ಕಲ್ಲು ಬೀಳುವ ಭೀತಿ ಉಂಟಾಗಿದೆ. A-ಬ್ಲಾಕ್‌ನಲ್ಲಿ ಬಂಡೆಗಳ ಸಮೂಹ ಇರುವುದರಿಂದ ಉತ್ಖನನ ಕಾರ್ಯಕ್ಕೆ ತೀವ್ರ ತೊಂದರೆ ಎದುರಾಗಿದೆ. ಸುಮಾರು 35 ಕ್ಕೂ ಹೆಚ್ಚು ಸಿಬ್ಬಂದಿಗಳು ಈ ಅಪಾಯಕಾರಿ ಪರಿಸ್ಥಿತಿಗಳ ನಡುವೆ ಉತ್ಖನನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. 10ನೇ ದಿನವಾದ ಇಂದು (ಜನವರಿ 27) ಉತ್ಖನನ ವೇಳೆ ಪ್ರಾಚ್ಯಾವಶೇಷ ಪತ್ತೆಯಾಗಿದೆ. ಹೌದು..ದೇವಕೋಷ್ಠದ ಮೇಲಿನ ಶಿಖರದ ಪ್ರಾಚ್ಯಾವಶೇಷ ಪತ್ತೆಯಾಗಿದ್ದು, ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಲಕ್ಕುಂಡಿ ಉತ್ಖನನ ಕಾರ್ಯ ಅಪಾಯದ ಹಂತಕ್ಕೆ: ಅಧಿಕಾರಿ, ಗ್ರಾಮಸ್ಥರಲ್ಲಿ ಮನೆ ಮಾಡಿದ ಆತಂಕ – Kannada News | Lakkundi Excavation Site in Danger: Fears Grow Over Possible stones and Soil Collapse

ಗದಗ, ಜನವರಿ 27: ಐತಿಹಾಸಿಕ ಲಕ್ಕುಂಡಿ (Lakkundi) ಗ್ರಾಮದಲ್ಲಿ ನಡೆಯುತ್ತಿರುವ ಉತ್ಖನನ (excavation) ಕಾರ್ಯ ಇದೀಗ 10ನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಕೂಡ ಕೆಲ ಪ್ರಾಚ್ಯಾವಶೇಷಗಳು ಪತ್ತೆ ಆಗಿವೆ. ಈ ಮಧ್ಯೆ ಉತ್ಖನನ ಕಾರ್ಯ ಅಪಾಯದ ಹಂತ ತಲುಪಿದೆ. ಕೋಟೆ ವೀರಭದ್ರೇಶ್ವರ ದೇವಸ್ಥಾನ ಮುಂಭಾಗದಲ್ಲಿ ನಡೆಯುತ್ತಿರುವ ಉತ್ಖನನ ಸ್ಥಳದಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದು, ಯಾವುದೇ ಕ್ಷಣದಲ್ಲಿ ಮಣ್ಣು ಕುಸಿಯುವ ಭೀತಿ ಎದುರಾಗಿದೆ. ಜೀವದ ಹಂಗು ತೊರೆದು ಸಿಬ್ಬಂದಿಗಳು ಉತ್ಖನನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಬಾಕ್ಸ್‌ನಲ್ಲಿ ಬಿರುಕು: ಮಣ್ಣು ಕುಸಿಯುವ ಆತಂಕ 

ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಪುರಾತತ್ವ ಇಲಾಖೆ ವತಿಯಿಂದ ಕಳೆದ 10 ದಿನಗಳಿಂದ ಉತ್ಖನನ ಕಾರ್ಯ ನಡೆಸುತ್ತಿವೆ. ಕೋಟೆ ವೀರಭದ್ರೇಶ್ವರ ದೇವಸ್ಥಾನದ ಬಳಿ 10×10 ಅಳತೆಯ ನಾಲ್ಕು ಬಾಕ್ಸ್‌ಗಳಲ್ಲಿ ಉತ್ಖನನ ನಡೆಯುತ್ತಿದ್ದು, 10 ಅಡಿ ಆಳ ತೆಗೆದಿರುವುದರಿಂದ A-1 ಬಾಕ್ಸ್‌ನಲ್ಲಿ ಬಿರುಕು ಕಾಣಿಸಿಕೊಂಡಿದೆ. ಯಾವುದೇ ಕ್ಷಣದಲ್ಲಿ ಮಣ್ಣು ಕುಸಿಯುವ ಆತಂಕ ಸಿಬ್ಬಂದಿಗಳನ್ನು ಕಾಡುತ್ತಿದೆ. ಇನ್ನು B-1 ಬ್ಲಾಕ್‌ನಲ್ಲಿ ಬೃಹತ್ ಗಾತ್ರದ ಕಲ್ಲು ಪತ್ತೆಯಾಗಿದ್ದು, ಕಲ್ಲು ಬೀಳುವ ಭೀತಿ ಉಂಟಾಗಿದೆ. A-ಬ್ಲಾಕ್‌ನಲ್ಲಿ ಬಂಡೆಗಳ ಸಮೂಹ ಇರುವುದರಿಂದ ಉತ್ಖನನ ಕಾರ್ಯಕ್ಕೆ ತೀವ್ರ ತೊಂದರೆ ಎದುರಾಗಿದೆ. ಸುಮಾರು 35 ಕ್ಕೂ ಹೆಚ್ಚು ಸಿಬ್ಬಂದಿಗಳು ಈ ಅಪಾಯಕಾರಿ ಪರಿಸ್ಥಿತಿಗಳ ನಡುವೆ ಉತ್ಖನನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಇದನ್ನೂ ಓದಿ: ಬೆಟಗೇರಿಯ ನಿಗೂಢ ಗವಿಯಲ್ಲೂ ಇದ್ಯಂತೆ ನಿಧಿ! ಸಂಪತ್ತಿಗಿದ್ಯಾ ಏಳು ಹೆಡೆ ಸರ್ಪದ ಕಾವಲು?

ಸ್ಥಳದಲ್ಲಿನ ಬಿರುಕುಗಳು, ದೊಡ್ಡ ಕಲ್ಲುಗಳಿಂದ ಉತ್ಖನನ ಕಾರ್ಯಕ್ಕೆ ಸವಾಲಾಗಿದೆ. ಸಿಬ್ಬಂದಿಗಳ ಸುರಕ್ಷತೆಗೆ ತಕ್ಷಣ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕ ವಲಯದಲ್ಲಿ ಒತ್ತಾಯ ಕೇಳಿಬರುತ್ತಿದೆ. ಈ ಕುರಿತು ಟಿವಿ9 ವರದಿ ಮಾಡಿದ್ದು, ಲಕ್ಕುಂಡಿ ಪ್ರಾಧಿಕಾರದ ಹಾಗೂ ಪುರಾತತ್ವ ಇಲಾಖೆ ಅಧಿಕಾರಿಗಳು ಅಲರ್ಟ್ ಆಗಿದ್ದು, ಸ್ಥಳಕ್ಕೆ ಆಗಮಿಸಿ ಪರಿಶೀಲನೆ‌ ಮಾಡಿದ್ದಾರೆ.

ಉತ್ಖನನ ಸ್ಥಳದಲ್ಲಿ ನಾಲ್ಕು ಬಾಕ್ಸ್ ಮಾಡಿ ಶೋಧ ಕಾರ್ಯ ನಡೆಯುತ್ತಿದ್ದು, ಇದೀಗ ನಾಲ್ಕು ಬಾಕ್ಸ್ ಮದ್ಯದ ಮಣ್ಣು ಪೂರ್ಣವಾಗಿ ತೆಗೆದು, ಒಂದು ಬಾಕ್ಸ್ ಮಾಡಲಾಗುತ್ತಿದೆ. ಹೀಗಾಗಿ ಬಾಕ್ಸ್ ಗಳ ಮದ್ಯದ ಮಣ್ಣು ತೆರವು ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಎರಡು ದಿನದಲ್ಲಿ ಮಣ್ಣು ತೆರವು ಮಾಡಲಾಗುವುದು.

ಉತ್ಖನ ಬಗ್ಗೆ ಮಾಜಿ ಸಚಿವ ಎಸ್ ಎಸ್ ಪಾಟೀಲ್ ಅಪಸ್ವರ 

ಇಂದು ಲಕ್ಕುಂಡಿ‌ ಉತ್ಖನ ಸ್ಥಳಕ್ಕೆ ಮಾಜಿ ಸಚಿವ ಎಸ್ ಎಸ್ ಪಾಟೀಲ್​​ ಭೇಟಿ ನೀಡಿದ್ದು, ಉತ್ಖನ ಬಗ್ಗೆ ಅಪಸ್ವರ ಎತ್ತಿದ್ದಾರೆ. ಮಣ್ಣು ಅಗೆಯುವುದು ಬಿಟ್ಟು ಯಂತ್ರಗಳಿಂದ ಮಣ್ಣು ತೆಗೆಯಬೇಕು. ಭೂಮಿಯಲ್ಲಿನ‌ ಸಂಪತ್ತು ಪತ್ತೆ ಮಾಡುವ‌ ಯಂತ್ರದಿಂದ ಶೋಧ ಮಾಡಬೇಕು ಎಂದಿದ್ದಾರೆ. ಲಕ್ಕುಂಡಿ ಉತ್ಸವ ಮಾಡದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಸರ್ಕಾರ ಲಕ್ಕುಂಡಿ ಉತ್ಸವ ಮಾಡಬೇಕು ಅಂತ ಒತ್ತಾಯಿಸಿದ್ದಾರೆ.

ಉತ್ಖನನ ವೇಳೆ ಪತ್ತೆಯಾಗಿದ್ದೇನು?

ಬೆಟಗೇರಿಯಲ್ಲಿ ರಾಷ್ಟ್ರಕೂಟರ ಕಾಲದ ವೀರಗಲ್ಲುಗಳು ಪತ್ತೆ ಆಗಿದ್ದು, ಯುದ್ಧದ ಭೀಕರತೆಯನ್ನ ಸಾರಿ ಸಾರಿ ಹೇಳುತ್ತಿವೆ. ಕಲ್ಲಿನಲ್ಲಿ ಕೆತ್ತನೆ ಮಾಡಿರುವ ಅಪರೂಪದ ಬೃಹತ್ ಆಕಾರದ ವೀರಗಲ್ಲುಗಳು. ಭೂಲೋಕ, ಮಧ್ಯಲೋಕ, ದೇವಲೋಕದ ಕಥೆ ಹೇಳುತ್ತಿವೆ.

9, 10 ನೇ ಶತಮಾನದಲ್ಲಿ ರಾಷ್ಟ್ರಕೂಟರ ಆಳ್ವಿಕೆಯಲ್ಲಿ ಯುದ್ದಗಳು ಆಗಿರುವ ಕುರುಹುಗಳು ಪತ್ತೆಯಾಗಿವೆ. ಇನ್ನು ಕೋಟೆ ವೀರಭದ್ರೇಶ್ವರ ದೇಗುಲದ ಬಳಿ ಉತ್ಖನನ ಮಾಡುವ ವೇಳೆ ದೇವಕೋಷ್ಠದ ಮೇಲಿನ ಶಿಖರದ ಪ್ರಾಚ್ಯಾವಶೇಷ ಪತ್ತೆ ಆಗಿದೆ.

ಇದನ್ನೂ ಓದಿ: ಗದಗ: ಚಿನ್ನದ ನಿಧಿ ಒಪ್ಪಿಸಿದ ಲಕ್ಕುಂಡಿಯ ಕುಟುಂಬಕ್ಕೆ ಗಣರಾಜ್ಯೋತ್ಸವ ದಿನ ಭರ್ಜರಿ ಉಡುಗೊರೆ ನೀಡಿದ ಸರ್ಕಾರ

ನಿಧಿ ಸಿಕ್ಕ ಬೆನ್ನಲ್ಲೇ ಉತ್ಖನನಕ್ಕೆ ರಾಜ್ಯ ಸರ್ಕಾರ ಮುಂದಾಗಿತ್ತು. ಸದ್ಯ ಉತ್ಖನನ ಜಾಗದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ನಾಲ್ಕು ಬಾಕ್ಸ್​ಗಳ ಮದ್ಯದ ಮಣ್ಣು ತೆರವು ಮಾಡಿ, ಒಂದೇ ಬಾಕ್ಸ್ ಮಾಡಿ, ಉತ್ಖನನ ಮುಂದುವರಿಸಲು ಅಧಿಕಾರಿಗಳು ಪ್ಲ್ಯಾನ್​ ಮಾಡಿದ್ದಾರೆ. ಉತ್ಖನನ ವೇಳೆ ಏನೆಲ್ಲಾ ಸಂಪತ್ತು ಸಿಗಲಿದೆ ಎನ್ನುವದು ಕುತೂಹಲ ಮೂಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

30 ರಿಂದ 35 ನೇ ವಯಸ್ಸಿನಲ್ಲಿ ಬಿಪಿ ಬರುವುದನ್ನು ತಡೆಯಲು ಈ ಟ್ರಿಕ್ಸ್ ಪಾಲಿಸಿ ನೋಡಿ! – Kannada News | Causes of Hypertension in Youth & How to Manage

ಇತ್ತೀಚಿನ ದಿನಗಳಲ್ಲಿ ಆರೋಗ್ಯ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದನ್ನು ಕಾಣಬಹುದು. ಚಿಕ್ಕ ವಯಸ್ಸಿನಲ್ಲಿಯೇ ಅಧಿಕ ರಕ್ತದೊತ್ತಡದ ಸಮಸ್ಯೆ (Hypertension) ಕಂಡುಬರುತ್ತಿರುವುದು ಬಹಳ ಕಳವಳಕಾರಿ ವಿಷಯ. ಅದರಲ್ಲಿಯೂ 30 ರಿಂದ 35 ವರ್ಷ ವಯಸ್ಸಿನವರಲ್ಲಿ ರಕ್ತದೊತ್ತಡ ಅಂದರೆ ಬಿಪಿ ಹೆಚ್ಚಾಗಿ ಕಂಡುಬರುತ್ತಿದೆ. ಇದಕ್ಕೆ ಕಾರಣಗಳು ಹಲವಾರಾದರೂ ಕೂಡ, ನಾವು ದಿನನಿತ್ಯ ಸೇವನೆ ಮಾಡುವ ಆಹಾರ, ಹದಗೆಟ್ಟ ಜೀವನಶೈಲಿ, ಮತ್ತು ಮಾನಸಿಕ ಒತ್ತಡ ಈ ಸಮಸ್ಯೆಯ ಹೆಚ್ಚಳಕ್ಕೆ ಗಮನಾರ್ಹ ಅಂಶವಾಗಿದೆ. ಅದರಲ್ಲಿಯೂ ಅಧಿಕ ರಕ್ತದೊತ್ತಡ ಬಹಳ ಅಪಾಯಕಾರಿಯಾಗಿದ್ದು ಇದನ್ನು ನಿಯಂತ್ರಿಸದಿದ್ದರೆ, ಅದು ಹೃದಯಾಘಾತದಿಂದ ಮಿದುಳಿನ ಪಾರ್ಶ್ವವಾಯುವಿನವರೆಗೆ ನಾನಾ ರೀತಿಯ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಹಾಗಾದರೆ ರಕ್ತದೊತ್ತಡ ಹೆಚ್ಚಾಗುವುದಕ್ಕೆ ಕಾರಣವೇನು, ಇದನ್ನು ಸುಲಭವಾಗಿ ನಿಯಂತ್ರಿಸಲು ಏನು ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ದೆಹಲಿಯ ಜಿಟಿಬಿ ಆಸ್ಪತ್ರೆಯ ವೈದ್ಯಕೀಯ ವಿಭಾಗದ ಡಾ. ಅಜಿತ್ ಕುಮಾರ್ ಹೇಳುವ ಪ್ರಕಾರ, ಬಿಪಿ ಅಥವಾ ಅಧಿಕ ರಕ್ತದೊತ್ತಡ ಮೌನವಾಗಿ ದೇಹದ ಮೇಲೆ ದಾಳಿ ಮಾಡುವಂತಹ ಕಾಯಿಲೆ. ಏಕೆಂದರೆ ಇದರ ಆರಂಭಿಕ ಲಕ್ಷಣಗಳು ಹೆಚ್ಚಾಗಿ ಗಮನಕ್ಕೆ ಬರುವುದಿಲ್ಲ. ಕೆಲವು ಸಂದರ್ಭಗಳಲ್ಲಿ, ಲಕ್ಷಣಗಳು ಕಂಡುಬಂದರೂ ಸಹ ಜನರಿಗೆ ಅವುಗಳ ಬಗ್ಗೆ ತಿಳಿದಿರುವುದಿಲ್ಲ. ಪರಿಣಾಮವಾಗಿ, ಈ ರೋಗವು ಕ್ರಮೇಣ ದೇಹದ ಮೇಲೆ ದಾಳಿ ಮಾಡುತ್ತದೆ. ಹಾಗಾಗಿ ಈ ಆರೋಗ್ಯ ಸಮಸ್ಯೆಯಿಂದ ದೂರವಿರಲು ಪ್ರತಿಯೊಬ್ಬರೂ ಕೂಡ ಮೊದಲು ಅಧಿಕ ರಕ್ತದೊತ್ತಡದ ಲಕ್ಷಣಗಳ ಬಗ್ಗೆ ತಿಳಿಯುವುದು ಮತ್ತು ಅವು ಕಂಡುಬಂದಾಗ ಬಹಳ ಎಚ್ಚರಿಕೆ ವಹಿಸುವುದು ಅನಿವಾರ್ಯವಾಗಿದೆ.

ಅಧಿಕ ರಕ್ತದೊತ್ತಡ ಕಂಡು ಬರುವ ಮೊದಲು ಕಾಣಿಸಿಕೊಳ್ಳುವ ಲಕ್ಷಣಗಳು:

  • ತಲೆನೋವು
  • ತಲೆಯಲ್ಲಿ ಭಾರ
  • ತಲೆತಿರುಗುವಿಕೆ
  • ಆತಂಕ
  • ಕಣ್ಣುಗಳು ಆಗಾಗ ಮಸುಕಾಗುವುದು
  • ಆಯಾಸ

ಇದನ್ನೂ ಓದಿ: ಅಧಿಕ ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತರಲು ನಿಂಬೆ ನೀರು ಕುಡಿಯುವುದು ಒಳ್ಳೆಯದೇ… ಇಲ್ಲಿದೆ ತಜ್ಞರ ಅಭಿಪ್ರಾಯ

ಅಧಿಕ ರಕ್ತದೊತ್ತಡ ನಿಯಂತ್ರಿಸಲು ಸಲಹೆಗಳು:

  • ಮೊದಲನೆಯದಾಗಿ ನೀವು ಸೇವನೆ ಮಾಡುವ ಆಹಾರದ ಬಗ್ಗೆ ಗಮನ ಹರಿಸುವುದು ಬಹಳ ಮುಖ್ಯ.
  • ಆಹಾರದಲ್ಲಿ ಉಪ್ಪನ್ನು ಕಡಿಮೆ ಮಾಡಿ. ದಿನಕ್ಕೆ 5 ಗ್ರಾಂ ಗಿಂತ ಹೆಚ್ಚು ಉಪ್ಪನ್ನು ಸೇವಿಸಬೇಡಿ.
  • ಜಂಕ್ ಫುಡ್ ಮತ್ತು ಪ್ಯಾಕ್ ಮಾಡಿದ ಆಹಾರಗಳನ್ನು ಸೇವನೆ ಮಾಡಬೇಡಿ.
  • ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ.
  • ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಿ.
  • ಪ್ರತಿದಿನ ವ್ಯಾಯಾಮ ಮಾಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಲ್ಲೆ, ಅತ್ಯಾಚಾರ ಬೆದರಿಕೆ, ಕಳ್ಳತನ ಆರೋಪ: ನಟಿ ಕಾವ್ಯಾ ಗೌಡ ಹೇಳಿದ್ದೇನು? – Kannada News | Actress Kavya Gowda says her relative threatens her

‘ರಾಧಾ ರಮಣ’ ಧಾರಾವಾಹಿ ನಟಿ ಕಾವ್ಯಾ ಗೌಡ (Kavya Gowda) ಹಾಗೂ ಅವರ ಪತಿ ಸೋಮಶೇಖರ್ ಮೇಲೆ ಹಲ್ಲೆ ನಡೆದಿದ್ದು, ನಟಿ ಕಾವ್ಯಾಗೆ ಅತ್ಯಾಚಾರ ಬೆದರಿಕೆ ಹಾಕಲಾಗಿದೆ. ಈ ಬಗ್ಗೆ ಮಾತನಾಡಿರುವ ನಟಿ ಕಾವ್ಯಾ, ‘ಇದು ಮೊದಲ ಬಾರಿ ಅಲ್ಲ ಎರಡನೇ ಬಾರಿ ಹೀಗೆ ಹಲ್ಲೆ ಆಗುತ್ತಿದೆ. ನನ್ನ ಪತಿಗೆ ಹಿಂದೆಯಿಂದ ಚಾಕು ಹಾಕಲಾಯ್ತು, ನನ್ನ ಮಗಳಿಗೂ ಹಲ್ಲೆ ಮಾಡಲಾಯ್ತು. ನನಗೆ ಅತ್ಯಾಚಾರ ಮಾಡುವುದಾಗಿ ನೇರವಾಗಿ ಬೆದರಿಕೆ ಹಾಕಲಾಗಿದೆ. ಹೀಗಿರುವಾಗ ನಾನು ಕಾನೂನಿನ ಮೊರೆ ಹೋಗಲೇ ಬೇಕಾಯ್ತು. ನನ್ನ ಮೇಲೆ ಹಲ್ಲೆ ಮಾಡಿದ್ದಾರೆ, ಯಾರು ಮಾಡಿದ್ದಾರೋ ಅವರು ಅನುಭವಿಸುತ್ತಾರೆ’ ಎಂದಿದ್ದಾರೆ ಕಾವ್ಯಾ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

Source link

ಹಿಮಪಾತದಿಂದ ಯಜಮಾನ ಸತ್ತರೂ 3 ದಿನ ಹೆಣದ ಬಳಿಯೇ ನಿಂತು ಕಾದ ಸಾಕುನಾಯಿ! – Kannada News | Owner Dies In Himachal Pradesh Snowfall Loyal Pet Dog Pitbull Guard Bodies For 3 Days

ಚಂಬಾ, ಜನವರಿ 27: ನಿಯತ್ತಿಗೆ ಇನ್ನೊಂದು ಹೆಸರೇ ನಾಯಿ. ನಾಯಿ ತನಗೆ ಕೊಂಚ ಪ್ರೀತಿ ತೋರಿದರೂ, ಒಂದು ತುತ್ತು ಅನ್ನ ಹಾಕಿದರೂ ಅವರನ್ನು ಸಾಯೋವರೆಗೂ ಮರೆಯುವುದಿಲ್ಲ. ಹಿಮಾಚಲ ಪ್ರದೇಶದಲ್ಲಿ ಒಂದು ವಿಚಿತ್ರವಾದ ಮನ ಕಲಕುವ ಘಟನೆ ನಡೆದಿದೆ. ಹಿಮಾಚಲ ಪ್ರದೇಶಕ್ಕೆ ಹೋಗಿದ್ದ ಅಣ್ಣ-ತಮ್ಮಂದಿರಿಬ್ಬರು ತಮ್ಮ ಜೊತೆಗೆ ಸಾಕುನಾಯಿಯಾದ ಪಿಟ್ ಬುಲ್ ಅನ್ನು ಕೂಡ ಕರೆದುಕೊಂಡು ಹೋಗಿದ್ದರು. ಅಲ್ಲಿ ರೀಲ್ಸ್ ಮಾಡುತ್ತಿದ್ದಾಗ ಹಿಮಪಾತವಾಗಿತ್ತು. ಇದರಿಂದ ಆ ಇಬ್ಬರು ಹಿಮದಡಿ (Snowfall) ಸಿಲುಕಿ ಮೃತಪಟ್ಟಿದ್ದರು.

ಹಿಮಪಾತದ ನಂತರ ನಾಪತ್ತೆಯಾಗಿದ್ದ ಬಿಕ್ಷಿತ್ ರಾಣಾ ಮತ್ತು ಪಿಯೂಷ್ ಎಂಬ ಕಸಿನ್​ಗಳಿಗಾಗಿ ಹುಡುಕಾಟ ನಡೆದಿತ್ತು. ಈ ಘಟನೆ ನಡೆದು 3 ದಿನಗಳ ನಂತರ ಅವರ ಮೃತದೇಹ ಪತ್ತೆಯಾಗಿದೆ. ವಿಚಿತ್ರವೆಂದರೆ ಆ ಮೃತದೇಹಗಳ ಪಕ್ಕದಲ್ಲಿ ಅವರ ಮುದ್ದಿನ ಸಾಕುನಾಯಿ ಪಿಟ್​ಬುಲ್ 72 ಗಂಟೆಗಳಿಂದ ಕಾಯುತ್ತಾ ನಿಂತಿತ್ತು. ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯ ಭರ್ಮೋರ್‌ನಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ.

ಇದನ್ನೂ ಓದಿ: Video: ಊಟ, ನಿದ್ರೆ ಬಿಟ್ಟು ಮಾಲೀಕರ ಶವದ ಬಳಿ ಕುಳಿತ ಶ್ವಾನ, ಅಂತ್ಯಕ್ರಿಯೆಗೂ ಟ್ರ್ಯಾಕ್ಟರ್ ಹತ್ತಿ ಬಂದ ನಾಯಿ

ಬಿಕ್ಷಿತ್ ರಾಣಾ ಮತ್ತು ಪಿಯೂಷ್ ಎಂಬ ಇಬ್ಬರು ಯುವಕರು ಭರ್ಮೋರ್‌ನ ಭರ್ಮಣಿ ದೇವಾಲಯದ ಬಳಿ ವೀಡಿಯೊಗಳನ್ನು ಚಿತ್ರೀಕರಿಸುವಾಗ ನಾಪತ್ತೆಯಾಗಿದ್ದರು. ಕೆಟ್ಟ ಹವಾಮಾನ ಪರಿಸ್ಥಿತಿಗಳ ನಡುವೆ ಹಿಮದಲ್ಲಿ ಸಿಲುಕಿ ಅವರು ನಂತರ ಸಾವನ್ನಪ್ಪಿದ್ದಾರೆ ಎಂದು ಕಂಡುಬಂದಿದೆ. ರಕ್ಷಣಾ ತಂಡಗಳು ಮತ್ತು ಸ್ಥಳೀಯ ಗ್ರಾಮಸ್ಥರು 4 ದಿನಗಳ ನಂತರ ಆ ಸ್ಥಳಕ್ಕೆ ತಲುಪಿದಾಗ, ಅವರು ಕಂಡ ದೃಶ್ಯವು ಎಲ್ಲರನ್ನೂ ಭಾವುಕರನ್ನಾಗಿ ಮಾಡಿತು. ಪಿಯೂಷ್‌ನ ದೇಹವು ಹಿಮದ ಪದರಗಳ ಅಡಿಯಲ್ಲಿ ಹೂತುಹೋಗಿತ್ತು, ಆದರೆ ಅವರ ಪಕ್ಕದಲ್ಲಿಯೇ ಅವನ ಸಾಕು ನಾಯಿ ಕಾವಲಾಗಿ ಕುಳಿತಿತ್ತು.

ರಕ್ಷಣಾ ತಂಡವು ಆ ಮೃತದೇಹವನ್ನು ಹೊರತೆಗೆಯಲು ಪ್ರಯತ್ನಿಸಿದಾಗ, ಆ ನಾಯಿ ಆರಂಭದಲ್ಲಿ ಆಕ್ರಮಣಕಾರಿಯಾಯಿತು. ಅಪರಿಚಿತರು ಅದರ ಮಾಲೀಕರಿಗೆ ಹಾನಿ ಮಾಡಲು ಬಂದಿದ್ದಾರೆ ಎಂದು ಅದು ಭಾವಿಸಿತು. ಆದರೆ, ಕೊನೆಗೂ ಆ ನಾಯಿಯ ಮನವೊಲಿಸಿ ಆ ಮೃತದೇಹಗಳನ್ನು ಹೊರಗೆ ತೆಗೆಯಲಾಯಿತು. ಈ ಹೃದಯಸ್ಪರ್ಶಿ ಘಟನೆ ಅಲ್ಲಿ ಸೇರಿದ್ದವರ ಕಣ್ಣಲ್ಲಿ ನೀರು ತುಂಬಿಸಿತು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲೂ ವೈರಲ್ ಆಗಿದ್ದು, ನೆಟ್ಟಿಗರನ್ನು ಭಾವುಕರನ್ನಾಗಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅರೆಸ್ಟ್​ ಆದ್ರೂ ಖುಷಿ ಖುಷಿಯಲ್ಲಿರುವ ರಾಜೀವ್ ಗೌಡ ಹೇಳಿದ್ದೇನು? – Kannada News | Sidlaghatta official threat case: Accused Rajeev Gowda First Reaction after Arrested By Police

ಚಿಕ್ಕಬಳ್ಳಾಪುರ, (ಜನವರಿ 27): ಶಿಡ್ಲಘಟ್ಟದ ನಗರಸಭೆ ಪೌರಾಯುಕ್ತೆ ಅಮೃತಗೌಡ ಅವರಿಗೆ ಧಮ್ಕಿ ಹಾಕಿದ ಪ್ರಕರಣಕ್ಕೆ (Sidlaghatta official threat case) ಸಂಬಂಧಿಸಿದಂತೆ ಆರೋಪಿ ಕಾಂಗ್ರೆಸ್‌ ಮುಂಖಂಡ ರಾಜೀವ್ ಗೌಡನನ್ನು (Rajeev Gowda) ಬಂಧಿಸಲಾಗಿದೆ. ಕಳೆದ 14 ದಿನಗಳಿಂದ ಮಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ ರಾಜೀವ್ ಗೌಡ ನಿನ್ನೆ(ಜನವರಿ 26) ಕೇರಳದ ಗಡಿಭಾಗದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಸದ್ಯ ಪೊಲೀಸರು ಆರೋಪಿ ರಾಜೀವ್ ಗೌಡನನ್ನು ಶಿಡ್ಲಘಟ್ಟಕ್ಕೆ ಕರೆತಂದಿದ್ದು, ವೈದ್ಯಕೀಯ ತಪಾಸಣೆ ಮಾಡಿಸಿದ್ದಾರೆ. ಈ ವೇಲೆ ರಾಜೀವ್ ಗೌಡ ಏನು ಹೇಳಿದ್ದಾನೆ ಎನ್ನುವುದನ್ನು ನೋಡಿ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಗಿಲ್ಲಿ ಮೊದಲ ಬಾರಿ ವೇದಿಕೆ ಏರಿದಾಗ ಏನಾಗಿತ್ತು? ನಂತರ ಗಿಲ್ಲಿ ಮಾಡಿದ್ದೇನು? – Kannada News | How was Gilli Nata in his initial days Guru explains

ಗಿಲ್ಲಿ ನಟ (Gilli Nata), ಪ್ರಸ್ತುತ ರಾಜ್ಯದಾದ್ಯಂತ ಹೆಚ್ಚು ಪ್ರಚಲಿತದಲ್ಲಿರುವ ಹೆಸರು. ಬಿಗ್​​ಬಾಸ್ ವಿನ್ನರ್ ಆಗಿರುವ ಗಿಲ್ಲಿಗೆ ರಾಜ್ಯದ ಜನ ಭರಪೂರ ಪ್ರೀತಿ ಕೊಡುತ್ತಿದ್ದಾರೆ. ಗಿಲ್ಲಿ ಹೋದಲ್ಲೆಲ್ಲ ಜನ ಸಾಗರವೇ ಸೇರುತ್ತಿದೆ. ಬಿಗ್​​ಬಾಸ್ ಮನೆಯಲ್ಲಿದ್ದಾಗ ಗಿಲ್ಲಿ ತಮ್ಮ ಹಾಸ್ಯ, ತಮ್ಮ ಮ್ಯಾನರಿಸಂ ಇನ್ನಿತರೆಗಳಿಂದ ಗಮನ ಸೆಳೆದಿದ್ದಾರೆ. ಈಗ ಗಿಲ್ಲಿ ಸೆಲೆಬ್ರಿಟಿ. ಗಿಲ್ಲಿ ವೇದಿಕೆ ಏರಿದರೆ ಜನ ಚಪ್ಪಾಳೆ, ಶಿಳ್ಳೆ ಹೊಡೆಯುತ್ತಿದ್ದಾರೆ. ಆದರೆ ಗಿಲ್ಲಿ ಮೊದಲ ಬಾರಿಗೆ ವೇದಿಕೆ ಏರಿದಾಗ ಏನಾಗಿತ್ತು ಗೊತ್ತೆ? ಗಿಲ್ಲಿಯ ಗೆಳೆಯರು, ಗಿಲ್ಲಿಗೆ ಆರಂಭದಲ್ಲಿ ಅವಕಾಶಗಳನ್ನು ನೀಡಿದ ಗುರು ಅವರು ಈ ಬಗ್ಗೆ ಟಿವಿ9 ಜೊತೆಗೆ ಮಾತನಾಡಿದ್ದಾರೆ.

ಗುರು ಅವರು ಬೇರೆ ಬೇರೆ ಜಿಲ್ಲೆಗಳಲ್ಲಿ ವೇದಿಕೆ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ಗಿಲ್ಲಿಯ ಯೂಟ್ಯೂಬ್ ವಿಡಿಯೋಗಳನ್ನು ನೋಡಿ ಗುರು ಅವರು ಗಿಲ್ಲಿಗೆ ಕರೆ ಮಾಡಿ ವೇದಿಕೆ ಕಾರ್ಯಕ್ರಮ ನೀಡಲು ಕರೆದರಂತೆ. ಈ ಬಗ್ಗೆ ಸ್ವತಃ ಗಿಲ್ಲಿ ಸಹ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಆದರೆ ಗಿಲ್ಲಿ ಮೊದಲ ಬಾರಿಗೆ ವೇದಿಕೆ ಏರಿದಾಗ ಬಹಳ ಭಯಗೊಂಡಿದ್ದರಂತೆ. ಬಹಳ ನರ್ವಸ್ ಆಗಿದ್ದರಂತೆ. ಗಿಲ್ಲಿಗೆ ಕೇವಲ ಐದು ನಿಮಿಷ ಸಹ ವೇದಿಕೆ ಮೇಲೆ ನಿಲ್ಲಲು ಆಗಿರಲಿಲ್ಲವಂತೆ.

ಗಿಲ್ಲಿ ಮೊದಲ ಬಾರಿಗೆ ತನ್ನ ಯೂಟ್ಯೂಬ್ ವಿಡಿಯೋದ ವೇಷದಲ್ಲಿಯೇ ವೇದಿಕೆ ಏರಿದ್ದರಂತೆ. ಭಯದಲ್ಲಿಯೇ ಮೊದಲ ಐದು ನಿಮಿಷ ಅದೂ ಇದೂ ತಮಾಷೆ ಡೈಲಾಗ್​​ಗಳನ್ನು ಹೇಳಿದ ಗಿಲ್ಲಿ, ನವರ್ಸ್​​ ಆಗಿ ವೇದಿಕೆ ಇಳಿದು ಬಿಟ್ಟರಂತೆ. ಆಗ ಗುರು ಅವರು ನೀವು ಕನಿಷ್ಟ 30 ನಿಮಿಷವಾದರೂ ಜನರನ್ನು ಎಂಗೇಜಿಂಗ್ ಆಗಿ ಇಡಬೇಕು, ಜನರನ್ನು ನಗಿಸಬೇಕು ಎಂದರಂತೆ. ಆ ಬಳಿಕ ಗಿಲ್ಲಿ, ಅದಕ್ಕಾಗಿ ತಯಾರಿ ಮಾಡಲು ಆರಂಭಿಸಿದರಂತೆ.

ಇದನ್ನೂ ಓದಿ:ಗಿಲ್ಲಿ ನಟನಿಗೆ ಬಿಗ್ ಬಾಸ್​ನಿಂದ ಕಾರು ಸಿಗೋದು ಯಾವಾಗ? ಕೊನೆಗೂ ಸಿಕ್ತು ಉತ್ತರ

ಗುರು ಹೇಳುವಂತೆ, ಗಿಲ್ಲಿಗೆ ಯಾರಾದರೂ ಒಬ್ಬರು ಎದುರಿಗೆ ಇರಬೇಕು, ಇನ್ನೊಬ್ಬರು ಮಾತನಾಡಿಸುತ್ತಿದ್ದರೆ ಗಿಲ್ಲಿ ಬೇಕಾದರೆ ಮೂರು ನಾಲ್ಕು ಗಂಟೆ ಮಾತನಾಡುತ್ತಾರೆ, ನಗಿಸುತ್ತಾರೆ ಆದರೆ ಒಬ್ಬರಿಗೇ ಮಾಡುವುದು ಅವರಿಗೆ ಕಷ್ಟ. ನಮ್ಮೊಂದಿಗೆ ಹಲವು ಜಿಲ್ಲೆಗಳಲ್ಲಿ ಶೋಗಳನ್ನು ಮಾಡಿದ್ದಾರೆ. ನಮ್ಮೊಟ್ಟಿಗೆ ಇದ್ದಾಗಲೂ ಸಹ ಬೇರೆ ಭಾಷೆಗಳ ಕಾಮಿಡಿ ವಿಡಿಯೋಗಳನ್ನು ನೋಡುವುದು ಅವುಗಳಿಂದ ಕಲಿಯುವುದು ಮಾಡುತ್ತಲೇ ಇರುತ್ತಿದ್ದರು. ಮೊಬೈಲ್​​ನಲ್ಲಿ ಸದಾ ಕಾಮಿಡಿ ವಿಡಿಯೋಗಳನ್ನು ನೋಡುತ್ತಾ ಪಂಚ್, ಡೈಲಾಗ್ ಡೆಲಿವರಿಗಳನ್ನು ಕಲಿಯುತ್ತಿದ್ದರು ಎಂದು ನೆನಪಿಸಿಕೊಂಡಿದ್ದಾರೆ ಗುರು.

ನಮ್ಮೊಟ್ಟಿಗೆ ಹಲವು ಜಿಲ್ಲೆಗಳಲ್ಲಿ ಗಿಲ್ಲಿ ಸುತ್ತಿದ್ದಾರೆ. ನಮಗಾಗಿ ಹಲವು ಶೋಗಳನ್ನು ಮಾಡಿದ್ದಾರೆ. ಬಹಳ ಒಳ್ಳೆಯ ವ್ಯಕ್ತಿ, ಸಂಭಾವಿತ. ‘ಭರ್ಜರಿ ಬ್ಯಾಚುಲರ್’ ಬಳಿಕ ಗಿಲ್ಲಿ ಮತ್ತು ಗಗನಾ ಅವರನ್ನು ಹಲವಾರು ಶೋಗಳಿಗೆ ನಾವು ಕರೆದುಕೊಂಡು ಹೋಗಿದ್ದೇವೆ. ಅವರಿಬ್ಬರ ಕೆಮಿಸ್ಟ್ರಿ ಚೆನ್ನಾಗಿತ್ತು. ಆದರೆ ಹೋದಲ್ಲೆಲ್ಲ ಇವರನ್ನು ಜೋಡಿಗಳಂತೆ ಬಿಂಬಿಸಲು ಪ್ರಾರಂಭಿಸಿದರು. ಅದು ಗಗನಾ ಅವರ ಮನೆಯವರಿಗೆ ಹಿಡಿಸಲಿಲ್ಲ. ಮಾತ್ರವಲ್ಲದೆ ಇದೇ ವಿಷಯಕ್ಕೆ ಇಬ್ಬರಿಗೂ ಸಣ್ಣ ಈಗೋ ಕ್ಲ್ಯಾಷ್ ಸಹ ಆಯ್ತು ಅನಿಸುತ್ತದೆ’ ಎಂದಿದ್ದಾರೆ ಗುರು.

ಗುರು ಅವರು ಗಿಲ್ಲಿ ಮತ್ತು ಗಗನಾ ಅವರನ್ನು ಹಾಕಿಕೊಂಡು ಸಿನಿಮಾ ಮಾಡುವ ಆಲೋಚನೆಯನ್ನೂ ಹೊಂದಿದ್ದರಂತೆ. ಆದರೆ ಆಗ ಆಗಿರಲಿಲ್ಲವಂತೆ. ಈಗ ಕಾವ್ಯಾ ಮತ್ತು ಗಿಲ್ಲಿಯನ್ನು ಹಾಕಿಕೊಂಡು ಸಿನಿಮಾ ಮಾಡುವ ಯೋಜನೆ ಮಾಡುತ್ತಿದ್ದೇವೆ ಎಂದು ಸಹ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 4:54 pm, Tue, 27 January 26

Source link

ಜೈಲಿನಿಂದ ಆಚೆ ಬರುವ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಶಾಕ್ ​ – Kannada News | Dharwad Yogesh Gowda Murder Case: Karnataka High Court Rejects Congress MLA Vinay Kulkarni Bail Plea

ಬೆಂಗಳೂರು, (ಜನವರಿ 27): ಧಾರವಾಡ ಬಿಜೆಪಿ ಮುಖಂಡ ಯೋಗೀಶ್‌ ಗೌಡ  ಕೊಲೆ ಪ್ರಕರಣದಲ್ಲಿ((Yogesh Gowda Murder Case)) 15ನೇ ಆರೋಪಿಯಾಗಿರುವ ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿ (Vinay Kulkarni) ಅವರ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಸಿದೆ. ಸುಪ್ರೀಂಕೋರ್ಟ್​ಗೇ ಅರ್ಜಿ ಸಲ್ಲಿಸುವುದು ಸೂಕ್ತವೆಂದು ಹೇಳಿ ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರಿದ್ದ ಹೈಕೋರ್ಟ್ (Karnataka High Court) ಪೀಠ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ವಿನಯ್ ಕುಲಕರ್ಣಿಗೆ ಜೈಲೇ ಗತಿಯಾಗಿದೆ.

ಧಾರವಾಡ ಜಿಲ್ಲಾ ಪಂಚಾಯಿತಿ ಬಿಜೆಪಿ ಸದಸ್ಯರಾಗಿದ್ದ ಯೋಗೇಶ್ ಗೌಡ ಕೊಲೆ ಪ್ರಕರಣದ 15ನೇ ಆರೋಪಿಯಾಗಿದ್ದು, ಈ ಪ್ರಕರಣ ಸಂಬಂಧ ವಿನಯ್ ಕುಲಕರ್ಣಿಗೆ 2021ರಲ್ಲೇ ಕೋರ್ಟ್​​ನಿಂದ ಜಾಮೀನು ಸಿಕ್ಕಿತ್ತು. ಆದ್ರೆ, ಇತ್ತೀಚೆಗೆ ಸಾಕ್ಷಗಳಿಗೆ ಬೆದರಿಕೆ ಹಾಕುವ ಮೂಲಕ ಜಾಮೀನು ಷರತ್ತುಗಳನ್ನು ವಿನಯ್ ಕುಲಕರ್ಣಿ ಉಲ್ಲಂಘಿಸಿದ್ದು, ಜಾಮೀನು ರದ್ದುಪಡಿಸುವಂತೆ ಸಿಬಿಐ ಸುಪ್ರೀಂಕೋರ್ಟ್​ ಮೊರೆ ಹೋಗಿತ್ತು. ಬಳಿಕ ಸುಪ್ರೀಂಕೋರ್ಟ್​ ಸಿಬಿಐನ ಸಾಕ್ಷಿಗಳನ್ನ ಪರಿಶೀಲಿಸಿ ವಿನಯ್ ಕುಲಕರ್ಣಿಗೆ ನೀಡಿದ್ದ ಜಾಮೀನು ರದ್ದುಗೊಳಿಸಿ ಆದೇಶ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ವಿನಯ್ ಕುಲಕರ್ಣಿ ಮತ್ತೆ ಜೈಲಿಗೆ ಹೋಗಬೇಕಾಯ್ತು. ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿದ್ದಾರೆ. ಇದೀಗ ಹೈಕೋರ್ಟ್​ ಹೇಳಿದಂತೆ ವಿನಯ್ ಕುಲಕರ್ಣಿ ಜಾಮೀನುಗಾಗಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಬೇಕು.

Published On – 5:12 pm, Tue, 27 January 26

Source link

ಶಿವಮೊಗ್ಗ: ಶಾಲೆಯಲ್ಲಿ ನೀಡಿದ ಮಾತ್ರೆ ನುಂಗಿ 59 ವಿದ್ಯಾರ್ಥಿಗಳು ಅಸ್ವಸ್ಥ; ಆಸ್ಪತ್ರೆಗೆ ಶಿಫ್ಟ್ – Kannada News | Shivamogga School Students Ill: 59 Hospitalized After Anemia Tablets in Bhadravathi

ಶಿವಮೊಗ್ಗ, ಜನವರಿ 27: ಜಿಲ್ಲೆಯ ಭದ್ರಾವತಿ ತಾಲೂಕಿನ ಅರಳಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಮಾತ್ರೆ ತಿಂದು ಅಸ್ವಸ್ಥರಾಗಿರುವಂತಹ ಘಟನೆ ನಡೆದಿದೆ. ಅನಿಮಿಯಾ ತಡೆಗಟ್ಟಲು ವಾರಕ್ಕೊಮ್ಮೆ ಖನಿಜಾಶಂದ ಮಾತ್ರೆ ನೀಡಲಾಗುತ್ತದೆ. ಇಂದು ಮಧ್ಯಾಹ್ನ ಶಾಲೆಯಲ್ಲಿ ಮಾತ್ರೆ ನೀಡಲಾಗಿತ್ತು. ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಸರ್ಕಾರಿ ಶಾಲೆಯಲ್ಲಿ ಸುಮಾರು 59 ವಿದ್ಯಾರ್ಥಿಗಳಿಗೆ ಏಕಾಏಕಿ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಅಸ್ವಸ್ಥರಾಗಿದ್ದಾರೆ. ಅಸ್ವಸ್ಥ ವಿದ್ಯಾರ್ಥಿಗಳಿಗೆ ಭದ್ರಾವತಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಯಾವುದೇ ವಿದ್ಯಾರ್ಥಿಗಳಿಗೆ ಜೀವಾಪಾಯವಿಲ್ಲ ಎಂದು ಟಿಹೆಚ್​ಓ ಹಾಗೂ ಬಿಇಓ ನಾಗೆಂದ್ರಪ್ಪ ಸ್ಪಷ್ಟನೆ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

‘ಮಿನಿ ಕಾಶ್ಮೀರ’ದಲ್ಲಿ ಮಕ್ಕಳ ಆಟ: ಪ್ರವಾಸಿಗರಿಗೆ ಇದು ಸ್ವರ್ಗ – Kannada News | Experience Bhaderwah Winter: Jammu and Kashmir’s Snowfall Wonderland Boosts Tourism

ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಭದರ್ವಾ (Bhaderwah) ಕಣಿವೆಯಲ್ಲಿ ಈಗ ಪ್ರಕೃತಿಯ ವೈಭವ ಮೇಳೈಸಿದೆ! ಜನವರಿ ತಿಂಗಳ ಈ ಚಳಿಯಲ್ಲಿ ಅಲ್ಲಿ ಬೀಳುತ್ತಿರುವ ದಟ್ಟವಾದ ಹಿಮಪಾತವು (Snowfall) ಪ್ರವಾಸಿಗರಿಗೆ ಮತ್ತು ಸ್ಥಳೀಯರಿಗೆ ಹಬ್ಬದ ವಾತಾವರಣ ತಂದಿದೆ. ಹಿಮದ ಮನುಷ್ಯನನ್ನು (Snowman) ಮಾಡುವುದು, ಒಬ್ಬರಿಗೊಬ್ಬರು ಹಿಮದ ಉಂಡೆಗಳನ್ನು ಎಸೆಯುತ್ತಾ ಆಡುವುದು ಮತ್ತು ಹಿಮದ ಮೇಲೆ ಜಾರುವ (Sledding) ಮೂಲಕ ಮಕ್ಕಳು ಈ ಕ್ಷಣಗಳನ್ನು ಸವಿಯುತ್ತಿದ್ದಾರೆ. ಭದರ್ವಾ ಕಣಿವೆಯನ್ನು ‘ಮಿನಿ ಕಾಶ್ಮೀರ’ ಎಂದೇ ಕರೆಯಲಾಗುತ್ತದೆ. ಇಲ್ಲಿನ ದೇವದಾರು ಮರಗಳು ಮತ್ತು ಬೆಟ್ಟಗುಡ್ಡಗಳು ಸಂಪೂರ್ಣವಾಗಿ ಬಿಳಿ ಹಾಸಿಗೆಯಿಂದ ಮುಚ್ಚಿಹೋಗಿದ್ದು, ಸ್ವರ್ಗದಂತೆ ಕಾಣುತ್ತಿದೆ. ಈ ಹಿಮಪಾತವು ಕೇವಲ ಸ್ಥಳೀಯರಿಗಷ್ಟೇ ಅಲ್ಲದೆ, ಪ್ರವಾಸಿಗರನ್ನೂ ಆಕರ್ಷಿಸುತ್ತಿದೆ. ಇದರಿಂದ ಸ್ಥಳೀಯ ಹೋಟೆಲ್ ಮತ್ತು ಹೋಂಸ್ಟೇ ಉದ್ಯಮಕ್ಕೆ ಹೆಚ್ಚಿನ ಬೆಂಬಲ ಸಿಗುತ್ತಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link