All posts by nagaraj11081993

Thalaivar 173: ರಜನಿಕಾಂತ್ ಮುಂದಿನ ಸಿನಿಮಾದಲ್ಲಿ ಖ್ಯಾತ ನಿರ್ದೇಶಕ ಶಂಕರ್ ವಿಲನ್? – Kannada News | Director Shankar to play villain in Rajinikanth new movie Thalaivar 173 film update

ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಅಭಿನಯದ 173ನೇ ಸಿನಿಮಾ ಬಗ್ಗೆ ಸಾಕಷ್ಟು ಇಂಟರೆಸ್ಟಿಂಗ್ ಸುದ್ದಿಗಳು ಕೇಳಿಬರುತ್ತಿವೆ. ಇನ್ನೂ ಶೀರ್ಷಿಕೆ ಅಂತಿಮವಾಗದ ಈ ಚಿತ್ರವನ್ನು ತಾತ್ಕಾಲಿಕವಾಗಿ ‘ತಲೈವರ್ 173’ (Thalaivar 173) ಎಂದು ಕರೆಯಲಾಗುತ್ತಿದೆ. ದಿನದಿಂದ ದಿನಕ್ಕೆ ಈ ಸಿನಿಮಾ ಕುತೂಹಲ ಕೆರಳಿಸುತ್ತಿದೆ. ಈಗ ಈ ಚಿತ್ರದ ಬಗ್ಗೆ ಒಂದು ಸ್ಫೋಟಕ ಮಾಹಿತಿ ಹೊರಬಿದ್ದಿದ್ದು, ಖ್ಯಾತ ನಿರ್ದೇಶಕ ಎಸ್. ಶಂಕರ್ (Shankar) ಅವರು ಈ ಸಿನಿಮಾದಲ್ಲಿ ರಜನಿಕಾಂತ್ ಎದುರು ಖಳನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿ ಹಬ್ಬಿದೆ.

ದಕ್ಷಿಣ ಭಾರತದ ಲೆಜೆಂಡರಿ ನಿರ್ದೇಶಕ ಎಂದೇ ಖ್ಯಾತರಾಗಿರುವ ಶಂಕರ್ ಅವರು ಈ ಹಿಂದೆ ಕೆಲವು ಚಿತ್ರಗಳಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ, ‘ತಲೈವರ್ 173’ ಚಿತ್ರದಲ್ಲಿ ಅವರು ಪೂರ್ಣ ಪ್ರಮಾಣದ ವಿಲನ್ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿ ಸಿನಿರಂಗದಲ್ಲಿ ಸಂಚಲನ ಮೂಡಿಸಿದೆ. ಇದು ನಿಜವಾದರೆ, ಬೆಳ್ಳಿತೆರೆಯ ಮೇಲೆ ರಜನಿ ಮತ್ತು ಶಂಕರ್ ಅವರನ್ನು ಮುಖಾಮುಖಿಯಾಗಿ ನೋಡಲು ಅಭಿಮಾನಿಗಳಿಗೆ ಹಬ್ಬವೇ ಸರಿ.

ವಿಶೇಷವೆಂದರೆ, ಈ ಚಿತ್ರವನ್ನು ಮತ್ತೊಬ್ಬ ದಿಗ್ಗಜ ಕಮಲ್ ಹಾಸನ್ ಅವರು ತಮ್ಮ ‘ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್’ ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿದ್ದಾರೆ. ದಶಕಗಳ ನಂತರ ರಜನಿ ಮತ್ತು ಕಮಲ್ ಈ ಚಿತ್ರದ ಮೂಲಕ ಒಂದಾಗುತ್ತಿರುವುದು ವಿಶೇಷ. ಅಷ್ಟೇ ಅಲ್ಲದೆ, ಈ ಚಿತ್ರದಲ್ಲಿ ಕಮಲ್ ಹಾಸನ್ ಅವರು ಒಂದು ಪ್ರಮುಖ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯೂ ದಟ್ಟವಾಗಿದೆ.

ಮೊದಲು ಈ ಚಿತ್ರಕ್ಕೆ ಬೇರೆ ನಿರ್ದೇಶಕರ ಹೆಸರು ಕೇಳಿಬಂದಿತ್ತಾದರೂ, ಈಗ ಸಿಬಿ ಚಕ್ರವರ್ತಿ ಅವರು ‘ತಲೈವರ್ 173’ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಕಮಲ್ ಹಾಸನ್ ನಿರ್ಮಾಣ, ರಜನಿಕಾಂತ್ ನಟನೆ ಮತ್ತು ಶಂಕರ್ ಖಳನಾಯಕನಾಗಿ ಕಾಣಿಸಿಕೊಳ್ಳಲಿರುವ ಈ ಸಿನಿಮಾ ಕಾಲಿವುಡ್‌ನ ಅತಿದೊಡ್ಡ ಮಲ್ಟಿಸ್ಟಾರರ್ ಚಿತ್ರವಾಗಿ ಹೊರಹೊಮ್ಮಲಿದೆ.

ಇದನ್ನೂ ಓದಿ: ‘ಜನ ನಾಯಗನ್’ ಯಾಕೆ ವಿಳಂಬ ಆಗಿದೆ ಅಂತ ಕೇಳಿದ್ದಕ್ಕೆ ಸೈಲೆಂಟ್ ಆದ ರಜನಿಕಾಂತ್

ರಜನಿಕಾಂತ್ ಅವರಿಗೆ ಭರ್ಜರಿ ಬೇಡಿಕೆ ಇದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಂಡು ಅವರು ನಟಿಸುತ್ತಿದ್ದಾರೆ. ಸದ್ಯಕ್ಕೆ ಅವರು ‘ಜೈಲರ್ 2’ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಆ ಸಿನಿಮಾದಲ್ಲಿ ಮೋಹನ್​ಲಾಲ್, ಶಿವರಾಜ್​ಕುಮಾರ್ ಮುಂತಾದ ಹಿರಿಯ ನಟರು ಅಭಿನಯಿಸಿರುವುದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

RCB ತಂಡದ ಮುಂದಿನ ಪಂದ್ಯಕ್ಕೆ ಇಬ್ಬರು ಅಲಭ್ಯ?

Source link

ಮೇ 2ರಂದು ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ: ಹೈಕೋರ್ಟ್​​ ಆದೇಶದ ಬೆನ್ನಲ್ಲೇ ಸಕಲ ಸಿದ್ಧತೆ – Kannada News | Postal Ballot Recount for Sringeri Assembly Seat on May 2 Following High Court Order

ಡಿ.ಎನ್. ಜೀವರಾಜ್ ಮತ್ತು ಟಿ.ಡಿ. ರಾಜೇಗೌಡ

ಚಿಕ್ಕಮಗಳೂರು, ಏಪ್ರಿಲ್​​ 26: ಕರ್ನಾಟಕ ಹೈಕೋರ್ಟ್ ನಿರ್ದೇಶನದಂತೆ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರುಎಣಿಕೆ ಮೇ 2ರಂದು ಐಡಿಎಸ್‌ಜಿ ಫಸ್ಟ್ ಗ್ರೇಡ್ ಕಾಲೇಜಿನಲ್ಲಿ ನಡೆಯಲಿದೆ. ಮರುಎಣಿಕೆ ಪ್ರಕ್ರಿಯೆಗೆ ಜಿಲ್ಲಾಡಳಿತ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ. ಎಡಿಸಿ ಗೌರವ್ ಶೆಟ್ಟಿ ಅವರನ್ನು ಚುನಾವಣಾಧಿಕಾರಿಯಾಗಿ ನೇಮಿಸಲಾಗಿದ್ದು, ನಾಲ್ವರು ಸಹಾಯಕ ಚುನಾವಣಾಧಿಕಾರಿಗಳನ್ನು ನಿಯೋಜಿಸಲಾಗಿದೆ. ಮತ ಎಣಿಕೆ ಕೊಠಡಿಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಬೆಳಗ್ಗೆ 8 ಗಂಟೆಗೆ ಮರುಎಣಿಕೆ ಪ್ರಾರಂಭವಾಗಲಿದೆ.

201 ಮತಗಳ ಅಂತರದಲ್ಲಿ ಸೋತಿದ್ದ ಜೀವರಾಜ್

2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ 201 ಮತಗಳ ಅಂತರದಿಂದ ಸೋತಿದ್ದರು. ಒಟ್ಟು 2,811 ಅಂಚೆ ಮತಗಳಲ್ಲಿ 279 ಮತಗಳು ತಿರಸ್ಕೃತವಾಗಿದ್ದವು. ಈ ಫಲಿತಾಂಶವನ್ನು ಪ್ರಶ್ನಿಸಿ ಡಿ.ಎನ್. ಜೀವರಾಜ್ ಮರುಎಣಿಕೆಗೆ ಮನವಿ ಮಾಡಿದ್ದರಾದರೂ, ಜಿಲ್ಲಾ ಚುನಾವಣಾಧಿಕಾರಿ ಅದನ್ನು ಪರಿಗಣಿಸದೆ ಟಿ.ಡಿ. ರಾಜೇಗೌಡರನ್ನು ವಿಜೇತರಾಗಿ ಘೋಷಿಸಿದ್ದರು. ಇದರಿಂದ ಅಸಮಾಧಾನಗೊಂಡ ಜೀವರಾಜ್ ಹೈಕೋರ್ಟ್ ಮೆಟ್ಟಿಲೇರಿದ್ದು, ಕೋರ್ಟ್​​ ಆದೇಶದಂತೆ ಇದೀಗ ಅಂಚೆ ಮತಗಳ ಮರುಎಣಿಕೆಗೆ ಸಿದ್ಧತೆ ನಡೆಸಲಾಗ್ತಿದೆ.

ಇದನ್ನೂ ಓದಿ: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಪತ್ರಗಳ ಮರುಪರಿಶೀಲನೆಗೆ ಹೈಕೋರ್ಟ್ ಆದೇಶ

ಶೃಂಗೇರಿ ಶಾಸಕರಾಗಿ ಟಿ.ಡಿ.ರಾಜೇಗೌಡ ಆಯ್ಕೆ ಅಸಿಂಧು ಕೋರಿ ಬಿಜೆಪಿಯ ಪರಾಜಿತ ಅಭ್ಯರ್ಥಿ ಡಿ.ಎನ್.ಜೀವರಾಜ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ನಟರಾಜ್ ಅವರಿದ್ದ ಹೈಕೋರ್ಟ್ ಪೀಠ, 279 ಅಂಚೆ ಮತಪತ್ರಗಳ ಮರುಪರಿಶೀಲನೆಗೆ ಆದೇಶ ಹೊರಡಿಸಿತ್ತು. ಅಲ್ಲದೆ  2 ವಾರಗಳಲ್ಲಿ ಮರುಪರಿಶೀಲನೆ ನಡೆಸಿ ಫಲಿತಾಂಶ ಪ್ರಕಟಿಸಲು ನಿರ್ದೇಶನ ನೀಡಿತ್ತು. ಇನ್ನು ಮತ ಮರುಎಣಿಕೆ ವೇಳೆ ಏಜೆಂಟ್‌ಗಳು, ಕಾಂಗ್ರೆಸ್ ಶಾಸಕ ಟಿ.ಡಿ. ರಾಜೇಗೌಡ ಹಾಗೂ ಸೋತ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಹಾಜರಾಗುವ ನಿರೀಕ್ಷೆಯಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Kashtabhanjan Hanuman: ಮೀಸೆಯುಳ್ಳ ಹನುಮ, ಪಾದದಡಿ ಶನಿ ದೇವ; ಭಕ್ತರ ಸಂಕಷ್ಟ ನಿವಾರಿಸುವ ಕಷ್ಟಭಂಜನ ಹನುಮಾನ್ – Kannada News | Kashtabhanjan Hanuman Sarangpur: Solve Problems and Shani Dosha at Gujarat’s Holy Temple

ದೇಶದಲ್ಲಿ ಹನುಮನಿಗೆ ಸಂಬಂಧಿಸಿದ ಅನೇಕ ದೇವಾಲಯಗಳಿವೆ. ಅವುಗಳಲ್ಲಿ ಹಲವು ವಿಶೇಷ ಆಧ್ಯಾತ್ಮಿಕ ಮಹತ್ವವನ್ನು ಹೊಂದಿವೆ. ಅವುಗಳಲ್ಲಿ ಒಂದು ಗುಜರಾತ್‌ನ ಸಾರಂಗಪುರದಲ್ಲಿರುವ ಕಷ್ಟಭಂಜನ ದೇವ್ ಹನುಮಾನ್ ದೇವಾಲಯ. “ಕಷ್ಟಭಂಜನ” ಎಂದರೆ ಕಷ್ಟಗಳನ್ನು ನಾಶಪಡಿಸುವವನು ಎಂದರ್ಥ. ಜೀವನದಲ್ಲಿ ಸಮಸ್ಯೆಗಳಿಂದ ಬಳಲುತ್ತಿರುವವರು ಇಲ್ಲಿಗೆ ಬಂದು ಪ್ರಾರ್ಥನೆ ಸಲ್ಲಿಸಿದರೆ ಶೀಘ್ರವೇ ನೆಮ್ಮದಿ ಸಿಗುತ್ತದೆ ಎಂಬುದು ಭಕ್ತರ ದೃಢ ನಂಬಿಕೆಯಾಗಿದೆ.

ದೇವಾಲಯದ ಸ್ಥಾಪನೆಯ ಹಿಂದಿನ ಇತಿಹಾಸ:

ಈ ದೇವಾಲಯದ ಸ್ಥಾಪನೆಯ ಹಿಂದೆ ಒಂದು ರೋಚಕ ಇತಿಹಾಸವಿದೆ. ಇಲ್ಲಿನ ಹನುಮಂತನ ವಿಗ್ರಹವನ್ನು ಸದ್ಗುರು ಗೋಪಾಲಾನಂದ ಸ್ವಾಮಿಗಳು ಪ್ರತಿಷ್ಠಾಪಿಸಿದರು ಎಂದು ಹೇಳಲಾಗುತ್ತದೆ. ಅವರು ತಮ್ಮ ದಂಡದಿಂದ ಈ ವಿಗ್ರಹವನ್ನು ಮುಟ್ಟಿದ ಕ್ಷಣವೇ ಅದರಲ್ಲಿ ದೈವೀ ಶಕ್ತಿ ಸಂಚರಿಸಿ ಜೀವಂತವಾಯಿತು ಎಂಬ ಕಥೆಯು ಈ ಕ್ಷೇತ್ರದ ಪಾವಿತ್ರ್ಯತೆಯನ್ನು ಹೆಚ್ಚಿಸಿದೆ. ಕಾಲಾನಂತರದಲ್ಲಿ, 1899ರಲ್ಲಿ ವಡ್ತಾಲ್‌ನ ಕೊಥಾರಿ ಗೋರ್ಧಂಡಾಸ್ ಅವರ ನೇತೃತ್ವದಲ್ಲಿ ದೇವಾಲಯಕ್ಕೆ ಭವ್ಯವಾದ ರೂಪ ನೀಡಲಾಯಿತು. ಈ ಸಂಕೀರ್ಣದಲ್ಲಿ ಸ್ವಾಮಿ ನಾರಾಯಣರಿಗಾಗಿ ಮೀಸಲಾದ ಪ್ರತ್ಯೇಕ ಮಂದಿರವೂ ಇದ್ದು, ಅವರ ಬೋಧನೆಗಳನ್ನು ಅಲ್ಲಿ ಸಂರಕ್ಷಿಸಲಾಗಿದೆ.

54 ಅಡಿ ಎತ್ತರದ ಹನುಮಂತನ ಪ್ರತಿಮೆ:

ಇತ್ತೀಚೆಗೆ ಈ ದೇವಾಲಯದ ಆವರಣದಲ್ಲಿ ಸ್ಥಾಪಿಸಲಾದ 54 ಅಡಿ ಎತ್ತರದ ಹನುಮಂತನ ಪ್ರತಿಮೆಯು ಜಗತ್ತಿನ ಗಮನ ಸೆಳೆಯುತ್ತಿದೆ. ಸಾವಿರಾರು ಕಿಲೋ ಲೋಹದಿಂದ ನಿರ್ಮಿಸಲಾದ ಈ ದೈತ್ಯ ಪ್ರತಿಮೆಯು ದೂರದ ಊರುಗಳಿಂದಲೂ ಭಕ್ತರಿಗೆ ದರ್ಶನ ನೀಡುತ್ತದೆ. ಈ ಪ್ರತಿಮೆಯ ವಿನ್ಯಾಸವು ಅತ್ಯಂತ ವಿಶಿಷ್ಟವಾಗಿದ್ದು, ಹನುಮಂತನನ್ನು ಶೌರ್ಯದ ಸಂಕೇತವಾದ ಮೀಸೆಯೊಂದಿಗೆ ಚಿತ್ರಿಸಲಾಗಿದೆ. ಸುವರ್ಣ ವಸ್ತ್ರಗಳಿಂದ ಕಂಗೊಳಿಸುವ ಈ ಸ್ವಾಮಿಯ ಸುತ್ತಲೂ ವಾನರ ಸೈನ್ಯವು ಕಾವಲು ನಿಂತಂತೆ ಕೆತ್ತಲಾಗಿದೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಹನುಮಂತನ ಪಾದದ ಕೆಳಗೆ ಶನಿ ದೇವ:

ಈ ದೇವಾಲಯದ ಅತ್ಯಂತ ವಿಶಿಷ್ಟ ಅಂಶವೆಂದರೆ ಹನುಮಂತನ ಪಾದದ ಕೆಳಗೆ ಶನಿ ದೇವನು ನೆಲೆಸಿರುವುದು. ಪುರಾಣದ ಪ್ರಕಾರ, ಭಕ್ತರಿಗೆ ನೀಡುವ ತೊಂದರೆಯ ವಿಷಯದಲ್ಲಿ ಹನುಮಂತ ಮತ್ತು ಶನಿಯ ನಡುವೆ ನಡೆದ ವಾದದಲ್ಲಿ ಹನುಮಂತನು ಜಯಗಳಿಸುತ್ತಾನೆ. ಆಗ ಶನಿ ದೇವನು ಹನುಮನ ಭಕ್ತರಿಗೆ ಎಂದೂ ತೊಂದರೆ ಕೊಡುವುದಿಲ್ಲವೆಂದು ಮಾತು ನೀಡಿ ಆತನ ಪಾದಕ್ಕೆ ಶರಣಾದನು ಎಂಬ ಕಥೆಯಿದೆ. ಇದೇ ಕಾರಣಕ್ಕೆ, ಶನಿ ದೋಷ ಅಥವಾ ಸಾಡೇಸಾತಿ ಪ್ರಭಾವ ಇರುವವರು ಇಲ್ಲಿಗೆ ಬಂದು ದರ್ಶನ ಪಡೆದರೆ ಗ್ರಹ ದೋಷಗಳಿಂದ ಮುಕ್ತಿ ಹೊಂದುತ್ತಾರೆ ಎಂಬ ನಂಬಿಕೆ ಬಲವಾಗಿದೆ.

ಶನಿವಾರದಂದು ಇಲ್ಲಿ ಜನಸಾಗರ:

ವಿಶೇಷವಾಗಿ ಪ್ರತಿ ಶನಿವಾರದಂದು ಇಲ್ಲಿ ಜನಸಾಗರವೇ ಹರಿದು ಬರುತ್ತದೆ. ಅಂದು ನಡೆಯುವ ವಿಶೇಷ ಪೂಜೆಗಳು, ಹೋಮಗಳು ಮತ್ತು ಹವನಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳು ದೂರವಾಗುತ್ತವೆ ಎಂಬ ವಿಶ್ವಾಸ ಭಕ್ತರಲ್ಲಿದೆ. ಸಾರಂಗಪುರದ ಈ ಪುಣ್ಯಕ್ಷೇತ್ರವು ಕೇವಲ ಒಂದು ಧಾರ್ಮಿಕ ಸ್ಥಳವಾಗಿರದೆ, ಲಕ್ಷಾಂತರ ಜನರಿಗೆ ಜೀವನದಲ್ಲಿ ಹೊಸ ಭರವಸೆ, ಧೈರ್ಯ ಮತ್ತು ಶಾಂತಿಯನ್ನು ನೀಡುವ ದಿವ್ಯ ಚೇತನವಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರೈಲು ಹತ್ತಲು ಹೋಗಿ ಕಾಲು ಜಾರಿ ಬಿದ್ದು ಪ್ರಾಣ ಕಳೆದುಕೊಂಡ ಅವಳಿ ಶಿಶುಗಳ ತಾಯಿ – Kannada News | Tragedy at Koderma Station: Young Mother Dies in Train Mishap

ಕೊಡೆರ್ಮಾ, ಏಪ್ರಿಲ್ 26: ಮಹಿಳೆಯೊಬ್ಬರು ರೈಲು ಹತ್ತಲು ಹೋಗಿ ಆಯತಪ್ಪಿ ಬಿದ್ದು, ರೈಲಿನಡಿ ಪ್ರಾಣಬಿಟ್ಟಿರುವ ಘಟನೆ ಜಾರ್ಖಂಡ್​ನ ಕೊಡೆರ್ಮಾ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.ಚಲಿಸುತ್ತಿದ್ದ ರೈಲನ್ನು ಹತ್ತಲು ಹೋಗಿ 24 ವರ್ಷದ ಮಹಿಳೆ ರೈಲು ಮತ್ತು ಪ್ಲಾಟ್‌ಫಾರ್ಮ್ ನಡುವಿನ ಅಂತರದಲ್ಲಿ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ. ರೈಲು ನಿಲ್ದಾಣದಿಂದ ಹೊರಡಲು ಪ್ರಾರಂಭಿಸಿದಾಗ ಯುವತಿ ತನ್ನಿಬ್ಬರು ಮಕ್ಕಳೊಂದಿಗೆ ರೈಲನ್ನು ಹತ್ತಲು ಪ್ರಯತ್ನಿಸಿದ್ದಾರೆ.

ಆದರೆ, ಸಮತೋಲನ ತಪ್ಪಿದ ಅವರು ಪ್ಲಾಟ್‌ಫಾರ್ಮ್ ಮತ್ತು ರೈಲಿನ ನಡುವಲ್ಲಿ ಬಿದ್ದಿದ್ದಾರೆ. ಅಲ್ಲಿದ್ದ ಪ್ರಯಾಣಿಕರು ಕಿರುಚಾಡುವಷ್ಟರಲ್ಲೇ ರೈಲಿನ ಚಕ್ರಗಳು ಆಕೆಯ ಪ್ರಾಣಪಕ್ಷಿಯನ್ನು ಹಾರಿಸಿದ್ದವು. ಈ ದುರಂತದ ಅತ್ಯಂತ ಕಟು ಸತ್ಯವೆಂದರೆ ಆಕೆಯ ಜೊತೆಗಿದ್ದ ಇಬ್ಬರು ಮುಗ್ಧ ಮಕ್ಕಳು. ತಾಯಿ ಹಳಿಯ ಮೇಲೆ ಶವವಾಗಿ ಬಿದ್ದಿದ್ದರೆ, ಏನೂ ಅರಿಯದ ಆ ಮಕ್ಕಳು ಅಪರಿಚಿತರ ತೋಳುಗಳಲ್ಲಿ ಕುಳಿತು ಅಳುತ್ತಿರುವ ದೃಶ್ಯ ಕಲ್ಲೆದೆಯನ್ನೂ ಕರಗಿಸುವಂತಿದೆ.

ಘಟನೆಯ ನಂತರ ಕೊಡೆರ್ಮಾ ನಿಲ್ದಾಣದಲ್ಲಿ ಸ್ಮಶಾನ ಮೌನ ಆವರಿಸಿದೆ. ರೈಲ್ವೆ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದಿದ್ದು, ಮಕ್ಕಳನ್ನು ಸುರಕ್ಷಿತವಾಗಿ ಶಿಶು ಪಾಲನಾ ಕೇಂದ್ರಕ್ಕೆ ಹಸ್ತಾಂತರಿಸಿದ್ದಾರೆ. ಮೃತ ಯುವತಿಯ ಕುಟುಂಬದವರನ್ನು ಪತ್ತೆಹಚ್ಚುವ ಕೆಲಸ ಮುಂದುವರೆದಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Fake Ai Cheque: ಸಾಮಾಜಿಕ ಜಾಲತಾಣಗಳನ್ನು ಬೆಚ್ಚಿಬೀಳಿಸಿದ ಬ್ಯಾಂಕ್ ಚೆಕ್: ಅಷ್ಟಕ್ಕೂ ಇದರಲ್ಲಿ ಏನಿದೆ ನೋಡಿ – Kannada News | Viral news a person created a fake bank cheque for rs 69000 using the chatgpt 2 0 tool

Fake Ai Cheque: ಎಐ ಇಂದು ನೈಜ ಮತ್ತು ನಕಲಿ ನಡುವಿನ ಗೆರೆಯನ್ನು ವೇಗವಾಗಿ ಮಸುಕುಗೊಳಿಸುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಚಾಟ್ ಜಿಪಿಟಿ 2.0 (ChatGPT 2.0) ಪರಿಕರವನ್ನು ಬಳಸಿಕೊಂಡು ವ್ಯಕ್ತಿಯೊಬ್ಬ 69,000 ರೂ.ಗಳ ನಕಲಿ ಬ್ಯಾಂಕ್ ಚೆಕ್ ಸೃಷ್ಟಿಸಿರುವ ಪೋಸ್ಟ್ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸಿರೀಶ್ ಎಂಬ ವ್ಯಕ್ತಿ UCO ಬ್ಯಾಂಕಿನಿಂದ 69,000 ರೂ.ಗಳ ಚೆಕ್ ಅನ್ನು ರಚಿಸಲು ChatGPT 2.0 ಪರಿಕರವನ್ನು ಬಳಸಿದ್ದಾರೆ. ನಂತರ ಅವರು ಸಾಮಾಜಿಕ ಮಾಧ್ಯಮದಲ್ಲಿ “ನಾವು ಎಷ್ಟು ಅಪಾಯದಲ್ಲಿದ್ದೇವೆ ನೋಡಿ” ಎಂಬ ಶೀರ್ಷಿಕೆಯೊಂದಿಗೆ ಚೆಕ್‌ನ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಈ ಎಐ ಚೆಕ್ ನೋಡಲು ಥೇಟ್ ನಿಜವಾದ ಚೆಕ್‌ನಂತೆಯೇ ಕಾಣುತ್ತದೆ, ಬ್ಯಾಂಕ್ ಹೆಸರು, ಶಾಖೆಯ ವಿವರಗಳು, ಖಾತೆ ಸಂಖ್ಯೆ, ಸಹಿ ಮತ್ತು ಚೆಕ್‌ನ ಕೆಳಭಾಗದಲ್ಲಿರುವ MICR ಬ್ಯಾಂಡ್ ಪೋಸ್ಟ್‌ನಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.

ಪೋಸ್ಟ್ ಅಪ್ಲೋಡ್ ಮಾಡಿದ ಕೆಲವೇ ಕ್ಷಣಗಳಲ್ಲಿ ಇದು ಫುಲ್ ವೈರಲ್ ಆಗಿದೆ. AI ಸಹಾಯದಿಂದ ಕೆಲವೇ ಸೆಕೆಂಡುಗಳಲ್ಲಿ ನಿಜವಾದ ಚೆಕ್‌ನಂತೆ ಕಾಣುವ ನಕಲಿ ಚೆಕ್ ಅನ್ನು ನೋಡಿ ನೆಟಿಜನ್‌ಗಳು ಆಶ್ಚರ್ಯಚಕಿತರಾದರು. ಈ ಚೆಕ್ ಅನ್ನು OpenAI ನ ಹೊಸ ChatGPT ಇಮೇಜ್ 2.0 ಉಪಕರಣವನ್ನು ಬಳಸಿಕೊಂಡು ರಚಿಸಲಾಗಿದೆ. ಇದು ಇತ್ತೀಚೆಗೆ OpenAI ಪರಿಚಯಿಸಿದ ಹೊಸ ಫೋಟೋ-ಜನರೇಟಿಂಗ್ ಸಾಧನವಾಗಿದೆ.

ಈ ಘಟನೆಯ ನಂತರ, ಜನರು ತಮ್ಮ ಬ್ಯಾಂಕ್ ಖಾತೆಗಳಲ್ಲಿನ ಹಣ ಸುರಕ್ಷಿತವಾಗಿದೆಯೇ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಆದಾಗ್ಯೂ, ಜನರು ಒತ್ತಡಕ್ಕೆ ಒಳಗಾಗಬೇಡಿ ಎಂದು ಅಧಿಕಾರಿಗಳು ಸಲಹೆ ನೀಡುತ್ತಿದ್ದಾರೆ. ಗ್ರಾಹಕರು ಈ ನಕಲಿ ಚೆಕ್‌ಗೆ ಭಯಪಡುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.

Video: ಮರಳಿ ಬಾಲ್ಯವನ್ನು ನೆನಪಿಸುವಂತಿದೆ ಈ ದೃಶ್ಯ; ಪಾಠದ ನಡುವೆ ತಿಂಡಿ ತಿಂದ ಪುಟಾಣಿ

ಚಾಟ್ ಜಿಪಿಟಿ ಬಳಸಿಕೊಂಡು ನಕಲಿ ಬ್ಯಾಂಕ್ ಚೆಕ್ ಸೃಷ್ಟಿಸಿರುವ ಪೋಸ್ಟ್

ತಜ್ಞರು ಹೇಳುವುದೇನು?

ಮೂಲ ಚೆಕ್ ಪೇಪರ್‌ನ ಗುಣಮಟ್ಟವು ನಕಲಿ ಚೆಕ್ ಪೇಪರ್‌ಗಿಂತ ಬಹಳ ಭಿನ್ನವಾಗಿದೆ. ಅದರ ಮೇಲಿನ ವಾಟರ್‌ಮಾರ್ಕ್‌ಗಳು ಮತ್ತು ಭದ್ರತಾ ವೈಶಿಷ್ಟ್ಯಗಳನ್ನು AI ನಕಲು ಮಾಡುವುದಿಲ್ಲ ಎಂದು ತಜ್ಞರು ಹೇಳುತ್ತಾರೆ. ಬ್ಯಾಂಕುಗಳು ಚೆಕ್‌ನ ನೋಟವನ್ನು ಮಾತ್ರ ನೋಡುವುದಿಲ್ಲ, ಅವರು CTS ನಿಯಮಗಳನ್ನು ಅನುಸರಿಸುತ್ತಾರೆ. UV ಬೆಳಕಿನಲ್ಲಿ ಮಾತ್ರ ಗೋಚರಿಸುವ ಮೂಲ ಚೆಕ್‌ಗಳ ಮೇಲಿನ VOID ಗುರುತು AI ನಿಂದ ರಚಿಸಲ್ಪಟ್ಟಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ಇತರ ಭದ್ರತಾ ಮಾನದಂಡಗಳಿಂದಾಗಿ ಫೋಟೋ ಹೊಂದಿರುವ AI ಯೊಂದಿಗೆ ಹಣವನ್ನು ಹಿಂಪಡೆಯುವುದು ಅಸಾಧ್ಯ ಎಂದು ಅಧಿಕಾರಿಗಳು ಹೇಳುತ್ತಾರೆ.

ಜನರು ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು?

ಆದಾಗ್ಯೂ, ಈ ನಕಲಿ ಚೆಕ್‌ಗಳಿಂದ ಬ್ಯಾಂಕುಗಳನ್ನು ವಂಚಿಸುವುದು ಕಷ್ಟವಾದರೂ, ಸಾಮಾನ್ಯ ಜನರು ಮೋಸ ಹೋಗುವ ಅಪಾಯವಿದೆ ಎಂದು ತಜ್ಞರು ಹೇಳುತ್ತಾರೆ. ಆದ್ದರಿಂದ, ಜನರು ಅಂತಹ ವಿಷಯಗಳ ಬಗ್ಗೆ ಬಹಳ ಜಾಗರೂಕರಾಗಿರಲು ಸೂಚಿಸಲಾಗಿದೆ. ಅವುಗಳ ಬಗ್ಗೆ ನಿಮಗೆ ಯಾವುದೇ ಸಂದೇಹಗಳಿದ್ದರೆ, ನೀವು ತಕ್ಷಣ ಹತ್ತಿರದ ಬ್ಯಾಂಕಿನ ಅಧಿಕಾರಿಗಳನ್ನು ಸಂಪರ್ಕಿಸಬೇಕು.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Shreyas Iyer: ಅವರು ಹೊಡೆದಿದ್ದಾರೆ, ನಾವು ತಿರುಗಿಸಿ ಹೊಡಿಬೇಕು ಅಷ್ಟೇ! – Kannada News | Shreyas iyer Post match interview after DC vs PBKS Match

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 35ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ಭರ್ಜರಿ ಗೆಲುವು ದಾಖಲಿಸಿದೆ. ಇದು ಅಂತಿಂಥ ಗೆಲುವಲ್ಲ. ಬದಲಾಗಿ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಗರಿಷ್ಠ ಚೇಸಿಂಗ್ ದಾಖಲೆಯಾಗಿದೆ. ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್​ಗಳಲ್ಲಿ 264 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ 18.5 ಓವರ್​ಗಳಲ್ಲಿ 265 ರನ್​ಗಳಿಸಿ 5 ವಿಕೆಟ್​ಗಳ ಅಮೋಘ ಗೆಲುವು ದಾಖಲಿಸಿದೆ.

ಈ ಗೆಲುವಿನ ಮಾತನಾಡಿದ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್, ಕಡು ಬಿಸಿಲಿನಲ್ಲಿ ಬೌಲರ್‌ಗಳು ಸಿಕ್ಸರ್-ಬೌಂಡರಿಗಳ ಸುರಿಮಳೆ ಎದುರಿಸುವಾಗ ಯಾವುದೇ ನಾಯಕನಿಗೆ ಗೊಂದಲ ಉಂಟಾಗುವುದು ಸಹಜ. ನಮ್ಮ ಬೌಲರ್‌ಗಳು ರನ್ ಬಿಟ್ಟುಕೊಡುತ್ತಿರುವಾಗ ಮಾನಸಿಕವಾಗಿ ಸ್ವಲ್ಪ ವಿಚಲಿತರಾಗುತ್ತೇವೆ. ಆದರೆ ಅಂತಹ ಸಂದರ್ಭದಲ್ಲೂ ಎದುರಾಳಿ ತಂಡ ಎಷ್ಟು ರನ್ ಗಳಿಸಿದರೂ ನಾವು ಅವರಿಗಿಂತ ಒಂದು ರನ್ ಹೆಚ್ಚು ಹೊಡೆಯಬೇಕು ಎಂಬ ಸರಳ ಮತ್ತು ದೃಢವಾದ ಮೈಂಡ್‌ಸೆಟ್ ಅಳವಡಿಸಿಕೊಂಡಿದ್ದಾಗಿ ಶ್ರೇಯಸ್ ಅಯ್ಯರ್ ಹೇಳಿದ್ದಾರೆ.

ಈ ಪಂದ್ಯದಲ್ಲಿ ಕೆ.ಎಲ್. ರಾಹುಲ್ (152) ಅವರ ಬ್ಯಾಟಿಂಗ್ ಪ್ರದರ್ಶನವನ್ನು ಮುಕ್ತಕಂಠದಿಂದ ಶ್ಲಾಘಿಸಿದ ಶ್ರೇಯಸ್ ಅಯ್ಯರ್, ರಾಹುಲ್ ಯಾವುದೇ ಒತ್ತಡವಿಲ್ಲದೆ, ಸುಲಭವಾಗಿ ಇಂಪ್ರೊವೈಸೇಶನ್ ಮಾಡುತ್ತಾ ಆಡಿದ ರೀತಿ ಕಣ್ಣಿಗೆ ಹಬ್ಬವಾಗಿತ್ತು ಎಂದು ಅವರು ಬಣ್ಣಿಸಿದ್ದಾರೆ.

ಆದರೆ ಅವರಿಂದ ಸಾಧ್ಯವಾದರೆ ನಮ್ಮಿಂದಲೂ ಸಾಧ್ಯ ಎಂಬ ನಂಬಿಕೆ ನನ್ನಲ್ಲಿತ್ತು. ಹೀಗಾಗಿಯೇ ಚೇಸಿಂಗ್ ಆರಂಭಿಸುವ ಮುನ್ನ ಪಂಜಾಬ್ ತಂಡದ ಡ್ರೆಸ್ಸಿಂಗ್ ರೂಮ್‌ನಲ್ಲಿ ನಡೆದ ಚರ್ಚೆ ತುಂಬಾ ಸರಳವಾಗಿತ್ತು. ಈ ಹಿಂದಿನ ಪಂದ್ಯಗಳಲ್ಲಿ 220-225 ರನ್‌ಗಳನ್ನು ಚೇಸ್ ಮಾಡಿದ ಅನುಭವ ತಂಡಕ್ಕಿತ್ತು. ಆದ್ದರಿಂದ ಪವರ್‌ಪ್ಲೇನಲ್ಲೇ ಗರಿಷ್ಠ ರನ್ ಗಳಿಸಿ ಅಡಿಪಾಯ ಹಾಕಿಕೊಡಲು ಬ್ಯಾಟರ್‌ಗಳಿಗೆ ಸೂಚಿಸಲಾಗಿತ್ತು. ಅದೇ ರೀತಿ ಆರಂಭಿಕ ಆಟಗಾರರು ಸ್ಫೋಟಕವಾಗಿ ಆಡಿ ಉಳಿದ ಬ್ಯಾಟರ್‌ಗಳಿಗೆ ಕೆಲಸವನ್ನು ಸುಲಭಗೊಳಿಸಿದರು.

ಅಷ್ಟೇ ಅಲ್ಲದೆ ನಮ್ಮ ಪ್ಲ್ಯಾನಿಂಗ್ ಕೂಡ ಸರಳವಾಗಿತ್ತು. ಅವರಿಗೆ ಸಾಧ್ಯವಾದರೆ, ನಮಗೂ ಸಾಧ್ಯವಾಗುತ್ತೆ. ಡೆಲ್ಲಿ ಕ್ಯಾಪಿಟಲ್ಸ್ ಹೊಡೆದಿದ್ದಾರೆ. ನಾವು ಕೂಡ ಹೊಡೆಯಬಲ್ಲೆವು. ಹೀಗಾಗಿ ನಾವು ತಿರುಗಿಸಿ ಹೊಡೆಯಬೇಕು ಎಂಬುದಷ್ಟೇ ನಮ್ಮ ದ್ಯೇಯವಾಗಿತ್ತು. ಅದರಂತೆ ನಮ್ಮ ಬ್ಯಾಟರ್​ಗಳು ಅದ್ಭುತ ಪ್ರದರ್ಶನ ನೀಡಿದ್ದಾರೆ. ಈ ಪ್ರಚಂಡ ಬ್ಯಾಟಿಂಗ್​ನೊಂದಿಗೆ ಬೃಹತ್ ಮೊತ್ತ ಚೇಸ್ ಮಾಡಿರುವುದು ಖುಷಿ ಕೊಟ್ಟಿದೆ ಎಂದು ಶ್ರೇಯಸ್ ಅಯ್ಯರ್ ಹೇಳಿದ್ದಾರೆ.

ಇದನ್ನೂ ಓದಿ: VIDEO: ಅಭಿಷೇಕ್ ಶರ್ಮಾ ಕೈ ಹಿಡಿದು ಎಳೆದ ಯುವತಿ!

ಸದ್ಯ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಪಂಜಾಬ್ ಕಿಂಗ್ಸ್ ತಂಡವು ಮೊದಲಾರ್ಧದಲ್ಲಿ 6 ಗೆಲುವುಗಳೊಂದಿಗೆ ಒಟ್ಟು 13 ಅಂಕಗಳನ್ನು ಕಲೆಹಾಕಿದೆ. ಈ ಮೂಲಕ ಅಯ್ಯರ್ ನೇತೃತ್ವದ ಪಂಜಾಬ್ ಪಡೆಯು ಈ ಬಾರಿ ಟ್ರೋಫಿ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ.

Source link

ಮೇ 15ಕ್ಕೆ ಗುಡ್ ನ್ಯೂಸ್ ಸಿಗತ್ತಾ? ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಿಕೆ ಶಿವಕುಮಾರ್! – Kannada News | DK Shivakumar’s Birthday: Karnataka Deputy CM DKS Bans Birthday Banners

ಬೆಂಗಳೂರು, ಏಪ್ರಿಲ್ 26: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivkumar) ಅವರ ಮೇ 15 ರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ರಾಜಕೀಯ ವಲಯದಲ್ಲಿ ಗುಡ್ ನ್ಯೂಸ್​ನ ನಿರೀಕ್ಷೆಗಳು ಗರಿಗೆದರಿವೆ. ಆದರೆ, ಈ ಕುರಿತು ಮಾತನಾಡಿದ ಡಿ.ಕೆ. ಶಿವಕುಮಾರ್, ತಮ್ಮ ಹುಟ್ಟುಹಬ್ಬದಂದು ಯಾವುದೇ ಕಾರ್ಯಕರ್ತರು ಅಥವಾ ಅಭಿಮಾನಿಗಳು ಫ್ಲೆಕ್ಸ್, ಬ್ಯಾನರ್‌ಗಳನ್ನು ಹಾಕದಂತೆ ಸ್ಪಷ್ಟ ಸೂಚನೆ ನೀಡಿದ್ದಾರೆ.ನಜಾಹೀರಾತು ಬೇಕಿದ್ದರೆ ಹಣ ಕಟ್ಟಿ ಮಾಡಿಕೊಳ್ಳಿ, ಆದರೆ ರಸ್ತೆಯಲ್ಲಿ ಹಾಕಬಾರದು ಎಂದು ಮನವಿ ಮಾಡಿದ್ದಾರೆ.

ಪಕ್ಷದಲ್ಲಿನ ಸಿಎಂ ಕುರ್ಚಿ ಕಾದಾಟ ಮತ್ತು ಸಚಿವ ಸಂಪುಟ ಪುನಾರಚನೆ ಕುರಿತ ಗೊಂದಲಗಳ ನಡುವೆ, ಸಚಿವ ಸತೀಶ್ ಜಾರಕಿಹೊಳಿ ಅವರ ಪಕ್ಷದಲ್ಲಿ ಗೊಂದಲವಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ನಮಗೆ ನಮ್ಮ ಪಕ್ಷದ ಮೇಲೆ ವಿಶ್ವಾಸ ಇದೆ. ಯಾವ ಸಮಯದಲ್ಲಿ ಏನು ಮಾಡಬೇಕೋ ಅದನ್ನು ಮಾಡ್ತಾರೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದೆಹಲಿಯಲ್ಲಿ ಟೇಕ್ ಆಫ್ ವೇಳೆ ಸ್ವಿಸ್ ಏರ್ ವಿಮಾನದ ಎಂಜಿನ್ ವಿಫಲ, ಕಾಣಿಸಿಕೊಂಡ ಬೆಂಕಿ, ಆರು ಪ್ರಯಾಣಿಕರಿಗೆ ಗಾಯ – Kannada News | Engine Failure Sparks Fire on Swiss Air Flight at Delhi Airport

ನವದೆಹಲಿ, ಏಪ್ರಿಲ್ 26: ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಮುಂಜಾನೆ ಸಂಭವಿಸಬಹುದಾಗಿದ್ದ ಭಾರಿ ವಿಮಾನ(Flight) ದುರಂತವೊಂದು ಪೈಲಟ್‌ಗಳ ಸಮಯಪ್ರಜ್ಞೆಯಿಂದ ತಪ್ಪಿದೆ. ಜ್ಯೂರಿಚ್‌ಗೆ ಹೊರಟಿದ್ದ ಸ್ವಿಸ್ ಏರ್ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.

ದೆಹಲಿಯಿಂದ ಜ್ಯೂರಿಚ್‌ಗೆ ಹೊರಟಿದ್ದ ಸ್ವಿಸ್ ಇಂಟರ್‌ನ್ಯಾಷನಲ್ ಏರ್ ಲೈನ್ಸ್ (LX147) ವಿಮಾನವು ಭಾನುವಾರ ಮುಂಜಾನೆ ರನ್‌ವೇಯಲ್ಲಿ ಓಡುತ್ತಿದ್ದಾಗ ತಾಂತ್ರಿಕ ಸಂಕಷ್ಟಕ್ಕೆ ಸಿಲುಕಿತು. ಎಂಜಿನ್‌ನಲ್ಲಿ ಕಾಣಿಸಿಕೊಂಡ ದೋಷದಿಂದಾಗಿ ವಿಮಾನ ನಿಲ್ದಾಣದಲ್ಲಿ ಸಂಪೂರ್ಣ ತುರ್ತು ಪರಿಸ್ಥಿತಿ ಘೋಷಿಸಲಾಯಿತು.

ವಿಮಾನವು ರನ್‌ವೇ 28/10 ರಲ್ಲಿ ಜ್ಯೂರಿಚ್‌ಗೆ ಹಾರಲು ವೇಗವನ್ನು ಹೆಚ್ಚಿಸುತ್ತಿದ್ದಾಗ, ಪೈಲಟ್‌ಗಳು ಎಂಜಿನ್‌ನಲ್ಲಿ ತಾಂತ್ರಿಕ ಸಮಸ್ಯೆಯನ್ನು ಪತ್ತೆಹಚ್ಚಿದರು. ವಿಮಾನದಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಪೈಲಟ್‌ಗಳು, ಒಂದು ಕ್ಷಣವೂ ತಡಮಾಡದೆ ಟೇಕ್ ಆಫ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ವಿಮಾನವನ್ನು ರನ್‌ವೇಯಲ್ಲೇ ನಿಲ್ಲಿಸಿದರು. ಪೈಲಟ್‌ಗಳ ಈ ಕ್ಷಿಪ್ರ ನಿರ್ಧಾರದಿಂದಾಗಿ ದೊಡ್ಡ ಮಟ್ಟದ ಅನಾಹುತವೊಂದು ತಪ್ಪಿದಂತಾಗಿದೆ.

ಮತ್ತಷ್ಟು ಓದಿ: 2 ತಿಂಗಳಿಂದ ಮುಚ್ಚಿದ್ದ ಇರಾನ್​ನ ಟೆಹ್ರಾನ್ ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟ ಆರಂಭ

ವಿಮಾನದಲ್ಲಿ 228 ಪ್ರಯಾಣಿಕರು ಮತ್ತು 4 ಶಿಶುಗಳು ಸೇರಿದಂತೆ ಒಟ್ಟು 232 ಮಂದಿ ಇದ್ದರು. ಹೊಗೆ ಕಾಣಿಸಿಕೊಂಡಿದ್ದರಿಂದ ಭಯಭೀತರಾಗಿದ್ದ ಪ್ರಯಾಣಿಕರನ್ನು ತುರ್ತು ಸ್ಲೈಡ್‌ಗಳನ್ನು (Emergency Slides) ಬಳಸಿ ಕೆಳಗಿಳಿಸಲಾಯಿತು. ಈ ಧಾವಂತದ ಸ್ಥಳಾಂತರ ಪ್ರಕ್ರಿಯೆಯ ಸಮಯದಲ್ಲಿ ಆರು ಪ್ರಯಾಣಿಕರು ಸಣ್ಣಪುಟ್ಟ ಗಾಯಗಳಿಗೆ ಒಳಗಾಗಿದ್ದಾರೆ. ಗಾಯಾಳುಗಳಿಗೆ ತಕ್ಷಣವೇ ವೈದ್ಯಕೀಯ ಚಿಕಿತ್ಸೆ ನೀಡಲಾಗಿದ್ದು, ಯಾರಿಗೂ ಗಂಭೀರ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

ಘಟನೆಯ ನಂತರ ವಿಮಾನ ನಿಲ್ದಾಣದಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು. ಎಲ್ಲಾ ಸುರಕ್ಷತಾ ಶಿಷ್ಟಾಚಾರಗಳನ್ನು ಪಾಲಿಸಲಾಯಿತು. ಪ್ರಸ್ತುತ ಸ್ವಿಸ್ ಏರ್ ವಿಮಾನವನ್ನು ತಾಂತ್ರಿಕ ತಂಡಗಳು ಪರಿಶೀಲಿಸುತ್ತಿವೆ. ಎಂಜಿನ್ ಅಸಮರ್ಪಕ ಕಾರ್ಯಕ್ಕೆ ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲಾಗುತ್ತಿದೆ. ಏತನ್ಮಧ್ಯೆ, ವಿಮಾನಯಾನ ಸಂಸ್ಥೆಯು ಸಂಕಷ್ಟಕ್ಕೀಡಾದ ಪ್ರಯಾಣಿಕರಿಗೆ ಹೋಟೆಲ್ ವಸತಿ ಮತ್ತು ಜ್ಯೂರಿಚ್‌ಗೆ ತೆರಳಲು ಪರ್ಯಾಯ ವಿಮಾನಗಳ ವ್ಯವಸ್ಥೆ ಮಾಡಲು ಕ್ರಮ ಕೈಗೊಂಡಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 11:20 am, Sun, 26 April 26

Source link

ನಡುರಸ್ತೆಯಲ್ಲಿ ಒಂಟಿ‌ ಕೋರೆ‌ ಸಲಗದ ಬಿಂದಾಸ್ ವಾಕ್!

ಚಿಕ್ಕಮಗಳೂರು, ಏಪ್ರಿಲ್ 26: ಮಲೆನಾಡು ಪ್ರದೇಶದಲ್ಲಿ ಕಾಡಾನೆಗಳ ಉಪಟಳ ದಿನೇದಿನೇ ಹೆಚ್ಚುತ್ತಿದ್ದು, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗಡಿ ಭಾಗದಲ್ಲಿ ಮತ್ತೊಮ್ಮೆ ಆತಂಕದ ವಾತಾವರಣ ನಿರ್ಮಾಣವಾಗಿದೆ. ವಗಡೆ ಶಾಲೆ ಸಮೀಪ ಒಂಟಿ ಕೋರೆ ಸಲಗ ರಸ್ತೆ ಮೇಲೆ ಬಿಂದಾಸ್ ಸಂಚಾರ ನಡೆಸಿ, ಜನರಲ್ಲಿ ಭೀತಿ ಉಂಟುಮಾಡಿದೆ. ದೇವನಗೂಲ್ ಹಾಗೂ ವಗಡೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಈ ಆನೆ ಓಡಾಡುತ್ತಿರುವುದು ಸ್ಥಳೀಯರ ನಿದ್ರೆ ಕೆಡಿಸಿದೆ. ಅಲ್ಲದೆ ಆನೆ ಜನವಸತಿ ಪ್ರದೇಶಗಳತ್ತ ಬರುತ್ತಿರುವ ಹಿನ್ನೆಲೆಯಲ್ಲಿ ಜೀವಭಯ ಹೆಚ್ಚಾಗಿದೆ. ಕೂಡಲೇ ಈ ಕೋರೆ ಸಲಗವನ್ನು ಸೆರೆ ಹಿಡಿದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕೆಂದು ಗ್ರಾಮಸ್ಥರು ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ. ಘಟನೆ ಮೂಡಿಗೆರೆ ಅರಣ್ಯ ವ್ಯಾಪ್ತಿಯಲ್ಲಿ ನಡೆದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link