All posts by nagaraj11081993

ಭಾರತ vs ಶ್ರೀಲಂಕಾ ಪಂದ್ಯವಲ್ಲ, ಅದೊಂದು ‘ನಾಟಕೀಯ ರಂಗಭೂಮಿ’! – Kannada News | Ashwin Reacts to India ‘A’ vs SL ‘A’ No Ball Drama

ಭಾರತ ‘ಎ’ ಮತ್ತು ಶ್ರೀಲಂಕಾ ‘ಎ’ ತಂಡಗಳ ನಡುವೆ ದಂಬುಲ್ಲಾದಲ್ಲಿ ನಡೆದ ತ್ರಿಕೋನ ಸರಣಿಯ ಪಂದ್ಯವು ಕ್ರಿಕೆಟ್ ಇತಿಹಾಸದಲ್ಲಿ ಒಂದು ಸ್ಮರಣೀಯ ಹಾಗೂ ವಿವಾದಾತ್ಮಕ ಅಧ್ಯಾಯವಾಗಿ ಉಳಿಯುವಂತಾಗಿದೆ. ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಈ ಪಂದ್ಯವು ಅಂತಿಮವಾಗಿ ಸೂಪರ್ ಓವರ್‌ಗೆ ತಲುಪಿದಾಗ, ಅಲ್ಲಿ ನಡೆದ ಘಟನೆಗಳು ಕೇವಲ ಕ್ರಿಕೆಟ್ ಆಟವಾಗಿ ಉಳಿಯದೆ, ಆಟಗಾರರ ನಡುವಿನ ಮಾನಸಿಕ ಯುದ್ಧವಾಗಿ ಮಾರ್ಪಟ್ಟಿತು. ಹೀಗಾಗಿಯೇ ಈ ಪಂದ್ಯವನ್ನು ಟೀಮ್ ಇಂಡಿಯಾದ ಮಾಜಿ ಆಟಗಾರ ರವಿಚಂದ್ರನ್ ಅಶ್ವಿನ್ “ಅತ್ಯುತ್ತಮ ನಾಟಕೀಯ ರಂಗಭೂಮಿ” ಎಂದು ಬಣ್ಣಿಸಿದ್ದಾರೆ.

ರವಿಚಂದ್ರನ್ ಅಶ್ವಿನ್ ಅವರು ಈ ಮ್ಯಾಚ್​ ಅನ್ನು “ಅತ್ಯುತ್ತಮ ನಾಟಕೀಯ ರಂಗಭೂಮಿ” ಎಂದು ಕರೆಯಲು ಮುಖ್ಯ ಕಾರಣ ಪಂದ್ಯದ ವೇಳೆ ಕಂಡು ಬಂದ ಟ್ವಿಸ್ಟ್ ಹಾಗೂ ಅವ್ಯವಸ್ಥೆ.

ಏಕೆಂದರೆ ಈ ಪಂದ್ಯವು ಟೈ ಆಗಿ ಸೂಪರ್ ಓವರ್‌ಗೆ ತಲುಪಿದಾಗ ಉಭಯ ತಂಡಗಳಲ್ಲಿ ತೀವ್ರ ಒತ್ತಡವಿತ್ತು. ಕ್ರೀಡಾಂಗಣದಲ್ಲಿ ನೆರೆದಿದ್ದ ಪ್ರೇಕ್ಷಕರಿಗೆ ಮತ್ತು ವೀಕ್ಷಕರಿಗೆ ಇದು ಯಾವುದೇ ರೋಮಾಂಚಕ ನಾಟಕ ಅಥವಾ ಸಿನಿಮಾಗೆ ಕಮ್ಮಿ ಇರಲಿಲ್ಲ ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.

ಅದರಲ್ಲೂ ಸೂಪರ್ ಓವರ್‌ನಲ್ಲಿ ಬಂದ ‘ನೋ ಬಾಲ್’ ತೀರ್ಪು ಪಂದ್ಯದ ಅತಿ ದೊಡ್ಡ ಟ್ವಿಸ್ಟ್ ಆಗಿತ್ತು. ಯಾವುದೇ ನಿಖರ ತಂತ್ರಜ್ಞಾನವಿಲ್ಲದೆ ಅಂಪೈರ್ ನೀಡಿದ ಈ ತೀರ್ಪು ನಾಟಕವೊಂದರ ವಿವಾದಾತ್ಮಕ ಸನ್ನಿವೇಶದಂತೆ ಇಡೀ ಪಂದ್ಯದ ದಿಕ್ಕನ್ನೇ ಬದಲಿಸಿತು ಎಂದು ಎಂಬುದು ಅಶ್ವಿನ್ ಅವರ ಅಭಿಪ್ರಾಯ.

ಇನ್ನು ಕತ್ತಲಾಗುತ್ತಿದ್ದ ಸಂದರ್ಭವನ್ನು ಬಳಸಿಕೊಂಡು ಶ್ರೀಲಂಕಾ ಆಟಗಾರರು ಕ್ರೀಸ್‌ಗೆ ಬರಲು ತಡ ಮಾಡಿದ್ದು ಪಕ್ಕಾ ಚಿತ್ರಕಥೆಯ ವಿಲನ್ ತಂತ್ರಗಳಂತೆ ಕಾಣಿಸಿತು. ಇದು ಭಾರತೀಯ ಆಟಗಾರರಲ್ಲಿ ತೀವ್ರ ಹತಾಶೆ ಮತ್ತು ಆಕ್ರೋಶವನ್ನು ಹುಟ್ಟುಹಾಕಿತು.

ಹಾಗೆಯೇ ಪಂದ್ಯದ ಕ್ಲೈಮ್ಯಾಕ್ಸ್‌ನಲ್ಲಿ ಯುವ ಆಟಗಾರರಾದ ವೈಭವ್ ಸೂರ್ಯವಂಶಿ ಮತ್ತು ವಿಶೇನ್ ಹಲಂಬಾಗೆ ಪರಸ್ಪರ ಮೈದಾನದಲ್ಲೇ ತಳ್ಳಾಡಿಕೊಂಡಿದ್ದು ಆಟದಲ್ಲಿದ್ದ ತೀವ್ರ ಮಾನಸಿಕ ಒತ್ತಡ ಮತ್ತು ಭಾವನೆಗಳ ಸ್ಫೋಟವನ್ನು ತೋರಿಸಿದೆ ಎಂದು ಅಶ್ವಿನ್ ಹೇಳಿದ್ದಾರೆ.

ಕ್ರೀಡಾ ಸ್ಫೂರ್ತಿಯ ದೃಷ್ಟಿಯಿಂದ ಇದು ಸರಿಯಲ್ಲದಿದ್ದರೂ, ವೀಕ್ಷಕರಿಗೆ ಮತ್ತು ಕ್ರಿಕೆಟ್ ಪ್ರಿಯರಿಗೆ ಇದೊಂದು ಮರೆಯಲಾಗದ, ಅತ್ಯಂತ ರೋಮಾಂಚಕ “ನಾಟಕೀಯ ಪಂದ್ಯವಾಗಿತ್ತು” ಎಂದು ರವಿಚಂದ್ರನ್ ಅಶ್ವಿನ್ ಹೇಳಿದ್ದಾರೆ.

ಇದನ್ನೂ ಓದಿ: ಕೊಡಗಿನಲ್ಲಿ ಫುಟ್​ಬಾಲ್ ಕ್ರೇಝ್: ತಲೆ ಎತ್ತಿ ನಿಂತ ಕ್ರಿಸ್ಟಿಯಾನೊ ರೊನಾಲ್ಡೊ!

ಶ್ರೀಲಂಕಾ ತಂಡಕ್ಕೆ ಸೂಪರ್ ಗೆಲುವು:

ಈ ಮ್ಯಾಚ್​ನಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ಎ ತಂಡವು 49.2 ಓವರ್​ಗಳಲ್ಲಿ 265 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ ಎ ತಂಡ 50 ಓವರ್​ಗಳಲ್ಲಿ 265 ರನ್ ಬಾರಿಸಿ ಪಂದ್ಯವನ್ನು ಟೈ ಮಾಡಿಕೊಂಡರು. ಆ ಬಳಿಕ ನಡೆದ ಸೂಪರ್ ಓವರ್​ನಲ್ಲಿ ಶ್ರೀಲಂಕಾ 16 ರನ್ ಬಾರಿಸಿದರು. 17 ರನ್​ಗಳ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ 6 ಎಸೆತಗಳಲ್ಲಿ ಕೇವಲ 9 ರನ್​ಗಳಿಸಿ 7 ರನ್​ಗಳಿಂದ ಸೋಲೊಪ್ಪಿಕೊಂಡಿತು.

Source link

ಹತ್ತೇ ನಿಮಿಷದಲ್ಲಿ ಉಳಿಯಿತು ಇನ್ನೂರು ಮಕ್ಕಳ ಜೀವ: ಹುಬ್ಬಳ್ಳಿ ಭಂಡಿವಾಡದಲ್ಲಿ ತಪ್ಪಿದ ಭಾರೀ ಅನಾಹುತ – Kannada News | Hubballi Miraculous Escape: 200 Students Safe as Govt School Roof Blows Away in Heavy Storm Just 10 Minutes After Closing

ಹುಬ್ಬಳ್ಳಿ, ಜೂನ್ 16: ಹುಬ್ಬಳ್ಳಿ ತಾಲೂಕಿನ ಭಂಡಿವಾಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಭಾರೀ ಅನಾಹುತ ಕೂದಲೆಳೆ ಅಂತರದಲ್ಲಿ ತಪ್ಪಿದೆ. ಏಕಾಏಕಿ ಬೀಸಿದ ಭಾರೀ ಗಾಳಿಗೆ ಶಾಲೆಯ ಮೇಲ್ಚಾವಣಿಯ ಶೀಟ್‌ಗಳು ಹಾರಿಹೋಗಿವೆ. ಅದೃಷ್ಟವಶಾತ್, ಶಾಲೆ ಮುಗಿದ ಹತ್ತೇ ನಿಮಿಷಗಳಲ್ಲಿ ಈ ಘಟನೆ ಸಂಭವಿಸಿದ್ದರಿಂದ 200ಕ್ಕೂ ಹೆಚ್ಚು ಮಕ್ಕಳು ಯಾವುದೇ ಅಪಾಯವಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸೋಮವಾರ ಸಂಜೆ 4:50 ರಿಂದ 5 ಗಂಟೆಯ ಸಮಯದಲ್ಲಿ (ಶಾಲೆ ಬಿಟ್ಟ ನಂತರ) ಕೇವಲ ಐದರಿಂದ ಹತ್ತು ನಿಮಿಷಗಳಲ್ಲಿ ಬಿರುಗಾಳಿ ಬೀಸಿದೆ. ಗಾಳಿಯ ತೀವ್ರತೆಗೆ ಶಾಲೆಯ ಎಲ್ಲಾ ಕೊಠಡಿಗಳ ಮೇಲ್ಚಾವಣಿ ಶೀಟ್‌ಗಳು ಹಾರಿಹೋಗಿದ್ದು, ಸುಮಾರು 300-400 ಮೀಟರ್ ದೂರದವರೆಗೆ ಬಿದ್ದಿವೆ. ಕೆಲವು ವಸ್ತುಗಳು ಸುತ್ತಮುತ್ತಲಿನ ಮನೆಗಳು ಮತ್ತು ಮರಗಳ ಮೇಲೆ ಬಿದ್ದಿವೆ. ಶಾಲೆಯ ಆವರಣದಲ್ಲಿದ್ದ ಅನೇಕ ವಸ್ತುಗಳು ಹಾನಿಗೊಳಗಾಗಿವೆ. ಸಮಯಕ್ಕೆ ಸರಿಯಾಗಿ ಮಕ್ಕಳು ಶಾಲೆ ಬಿಟ್ಟು ಹೋಗಿದ್ದರಿಂದ ಭಾರೀ ಅನಾಹುತ ತಪ್ಪಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

66 ರೌಡಿಶೀಟರ್​ಗಳಿಗೆ ಮುಕ್ತಿ ಸದ್ಯಕ್ಕಿಲ್ಲ: ಕ್ರಮ ತಡೆಹಿಡಿಯಲು ಸೂಚಿಸಿದ್ದೇನೆಂದ ಗೃಹ ಸಚಿವ ಖರ್ಗೆ – Kannada News | Karnataka Rowdy List Row: Home Minister Priyank Kharge Stays Relief to 66 Notorious Criminals Including Silent Sunil

ಬೆಂಗಳೂರು, ಜೂನ್ 16: 66 ನಟೋರಿಯಸ್ ರೌಡಿಶೀಟರ್‌ಗಳಿಗೆ ಪಟ್ಟಿಯಿಂದ ಮುಕ್ತಿ ನೀಡುವ ವಿಚಾರ ಗಮನಕ್ಕೆ ಬಂದಿದ್ದು, ಅದಕ್ಕೆ ತಡೆ ನೀಡಿದ್ದೇನೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಈ ವಿಷಯ ಸಂಬಂಧ ಬೆಂಗಳೂರು ಪೊಲೀಸ್ ಕಮಿಷನರ್ ಅವರೊಂದಿಗೆ ಮಾತನಾಡಿ, ಎಡವಟ್ಟು ಹೇಗೆ ಸಂಭವಿಸಿದೆ ಎಂಬುದನ್ನು ಕೂಲಂಕಷವಾಗಿ ಪರಿಶೀಲಿಸುವಂತೆ ಸೂಚಿಸಿದ್ದೇನೆ ಎಂದಿರುವ ಖರ್ಗೆ, ಲೋಪವನ್ನು ಸರಿಪಡಿಸಲು ಕೂಡಲೇ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ. ಈ 66 ರೌಡಿಶೀಟರ್‌ಗಳ ಪಟ್ಟಿಯಲ್ಲಿ 8 ಜನರು ಬಿಜೆಪಿ ಕಾರ್ಯಕರ್ತರು ಎಂದು ಗೃಹ ಸಚಿವರು ಉಲ್ಲೇಖಿಸಿದ್ದಾರೆ. ಸೈಲೆಂಟ್ ಸುನೀಲ ಎಂಬ ರೌಡಿಶೀಟರ್‌ನ ಹೆಸರನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿರುವ ಅವರು, ಪೊಲೀಸ್ ಇಲಾಖೆಯ ಕಾರ್ಯವೈಖರಿಯಲ್ಲಿನ ಈ ಲೋಪವನ್ನು ಸರಿಪಡಿಸಲು ಸರಕಾರ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು ನಗರ ಪೊಲೀಸ್ ಕಮಿಷನರ್​ ಸೀಮಂತ್ ಕುಮಾರ್ ಕೂಡ ಪ್ರತಿಕ್ರಿಯಿಸಿದ್ದು, ಕೈಬಿಟ್ಟಿರುವ ಪೈಕಿ ಬೆಂಗಳೂರಿನ 7 ರೌಡಿಶೀಟರ್​ಗಳಿದ್ದಾರೆ. ಉಳಿದವರು ಬೇರೆ ಬೇರೆ ಜಿಲ್ಲೆಯ ರೌಡಿಶೀಟರ್​​ಗಳು. ಕಾನೂನು ರೀತ್ಯಾ ಹಿನ್ನೆಲೆಯನ್ನು ಪರಿಶೀಲನೆ ಮಾಡುತ್ತೇವೆ. ಮತ್ತೊಮ್ಮೆ ಪರಿಶೀಲನೆ ಮಾಡಿ ಮುಂದಿನ ಕ್ರಮಕೈಗೊಳ್ಳುತ್ತೇವೆ ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಶಾಪಿಂಗ್ – ಸುತ್ತಾಟಕ್ಕೆ 1.1 ಲಕ್ಷ ರೂ; ತಿಂಗಳ ಖರ್ಚು ವೆಚ್ಚದ ಬಗ್ಗೆ ರಿವೀಲ್ ಮಾಡಿದ ಬೆಂಗಳೂರಿನ ಮಹಿಳೆ – Kannada News | Bengaluru: A woman from Bengaluru spends Rs 1.84 lakh per month

ಬೆಂಗಳೂರು, ಜೂನ್ 16: ಇಂದಿನ ದುಬಾರಿ ದುನಿಯಾದಲ್ಲಿ ಎಷ್ಟೇ ದುಡಿದರೂ ಜೀವನ ನಿರ್ವಹಣೆ ತುಂಬಾ ಕಷ್ಟಕರ. ಬೆಂಗಳೂರಿನಲ್ಲಿ (Bengaluru) ವಸತಿ ವೆಚ್ಚಗಳು ಮತ್ತು ಜೀವನಶೈಲಿ ವೆಚ್ಚಗಳು ಏರುತ್ತಲೇ ಇರುವುದರಿಂದ, ನಗರದಲ್ಲಿ ಆರಾಮವಾಗಿ ಬದುಕಲು ಕಷ್ಟವಾಗುತ್ತಿದೆ. ಈ ನಗರದಲ್ಲಿ ವಾಸಿಸುತ್ತಿರುವ ಜನರು ಎಷ್ಟೇ ದುಡಿದ್ರೂ ಸಾಕಾಗುತ್ತಿಲ್ಲ. ಇದೀಗ ಬೆಂಗಳೂರಿನಲ್ಲಿ ನೆಲೆಸಿರುವ ಮಹಿಳೆಯೊಬ್ಬರು ತಮ್ಮ ಮಾಸಿಕ ಖರ್ಚು ವೆಚ್ಚದ ಬಗ್ಗೆ ಮಾತನಾಡಿದ್ದಾರೆ. ಮೇ ತಿಂಗಳಲ್ಲಿ 1.84 ಲಕ್ಷ ರೂ ಖರ್ಚು ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಈ ಪೋಸ್ಟ್ ಸದ್ಯ ವೈರಲ್ ಆಗಿದ್ದು ಆನ್ಲೈನ್‌ನಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.

@bloomingalchemy_nee ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡ ಮಹಿಳೆ ಬೆಂಗಳೂರಿನಲ್ಲಿ ನನ್ನ ಖರ್ಚುಗಳು – ಮೇ 2026 ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ಮೇ ತಿಂಗಳಿನ ತನ್ನ ಪ್ರಮುಖ ಖರ್ಚು ವೆಚ್ಚಗಳನ್ನು ಪಟ್ಟಿ ಮಾಡಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

2 ಬಿಹೆಚ್ ಕೆ ಅಪಾರ್ಟ್‌ಮೆಂಟ್‌ನ ಬಾಡಿಗೆಗೆ 45,000 ರೂ, ವಿದ್ಯುತ್‌ಗೆ 3,250 ರೂ, ಸ್ವಿಗ್ಗಿ ಆರ್ಡರ್‌ಗಳಿಗೆ 7,500 ರೂ, ಅಡುಗೆಯವರಿಗೆ 6,000 ರೂ, ಮನೆಕೆಲಸದಾಕೆಗೆ 4,000 ರೂ ಹಾಗೂ ಉಬರ್ ಸವಾರಿಗಳಿಗೆ 8,000 ರೂ ಖರ್ಚು ವೆಚ್ಚಗಳನ್ನು ಪಟ್ಟಿ ಮಾಡಿದ್ದಾರೆ. ಕೆಫೆಗಳು ಹಾಗೂ ಸುತ್ತಾಟಗಳಿಗೆ 60,000 ರೂ ಹಾಗೂ ಶಾಪಿಂಗ್‌ಗೆ 50,000 ರೂ ಖರ್ಚು ತಗಲುತ್ತದೆ. ಹೂಡಿಕೆಗಳನ್ನು ಹೊರತುಪಡಿಸಿ, ತಿಂಗಳಿಗೆ ಅವರ ಒಟ್ಟು ಖರ್ಚು 1,83,750 ರೂ ಆಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ನನ್ನ ಜೀವನದ ತಪ್ಪು ನಿರ್ಧಾರವಿದು; ಗುರುಗ್ರಾಮದಿಂದ ಬೆಂಗಳೂರಿಗೆ ಸ್ಥಳಾಂತರಗೊಂಡ ಮಹಿಳೆ ಹೀಗೆಂದಿದ್ದೇಕೆ?

ಈ ಪೋಸ್ಟ್ ಗೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬ ಬಳಕೆದಾರ, ಖರ್ಚು ವೆಚ್ಚಗಳು ಇತಿಮಿತಿಯಲ್ಲಿದ್ದರೆ ಒಳ್ಳೆಯದು ಎಂದಿದ್ದಾರೆ. ಇನ್ನೊಬ್ಬರು, ನೀವು ಪ್ರತಿ ತಿಂಗಳು ಊಟ ಹಾಗೂ ಶಾಪಿಂಗ್‌ಗೆ 1.1 ಲಕ್ಷ ಖರ್ಚು ಮಾಡುತ್ತೀರಾ ಎಂದು ಕೇಳಿದ್ದಾರೆ. ಮತ್ತೊಬ್ಬರು, ಖರ್ಚು ವೆಚ್ಚಗಳಿಗೆ ಲಗಾಮು ಹಾಕೋದು ಒಳ್ಳೆಯದು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 1:35 pm, Tue, 16 June 26

Source link

ಶಿವರಾಜ್ ಕುಮಾರ್ ಅವರ ಕೊಂಡಾಡಿದ ಮೆಗಾಸ್ಟಾರ್ ಚಿರಂಜೀವಿ – Kannada News | Megastar Chiranjeevi praised Shiva Rajkumar for doing Peddi movie

ಶಿವರಾಜ್ ಕುಮಾರ್ (Shiva Rajkumar) ಕನ್ನಡದ ಸ್ಟಾರ್ ನಟ, ಅವರು ನಟನೆಯಿಂದ ಮಾತ್ರವಲ್ಲದೆ ತಮ್ಮ ವ್ಯಕ್ತಿತ್ವದಿಂದಲೂ ಅಭಿಮಾನಿಗಳಿಗೆ, ಚಿತ್ರರಂಗದವರಿಗೆ ಹತ್ತಿರವಾಗಿದ್ದಾರೆ. ಕನ್ನಡ ಮಾತ್ರವಲ್ಲದೆ ನೆರೆಯ ಚಿತ್ರರಂಗಗಳಲ್ಲಿಯೂ ಶಿವಣ್ಣನಿಗೆ ಬಹಳ ಒಳ್ಳೆಯ ಹೆಸರಿದೆ. ಇದೇ ಕಾರಣಕ್ಕೆ ಪರ ಭಾಷೆ ಸಿನಿಮಾಗಳಿಂದಲೂ ಶಿವರಾಜ್ ಕುಮಾರ್ ಅವರಿಗೆ ಒಳ್ಳೆಯ ಆಫರ್​​ಗಳು ಬರುತ್ತಲೇ ಇರುತ್ತವೆ. ಶಿವಣ್ಣ ಸಹ ಗೌರವಪೂರ್ವಕವಾಗಿ ಪಾತ್ರಗಳನ್ನು ಒಪ್ಪಿಕೊಂಡು ನಟಿಸುತ್ತಿರುತ್ತಾರೆ. ಇತ್ತೀಚೆಗಷ್ಟೆ ಟಾಲಿವುಡ್​ ಸ್ಟಾರ್ ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ ಶಿವಣ್ಣ ನಟಿಸಿದ್ದು, ಸಿನಿಮಾ ಜೊತೆಗೆ ಪಾತ್ರವೂ ಹಿಟ್ ಆಗಿದೆ.

ಇತ್ತೀಚೆಗೆ ಮೆಗಾಸ್ಟಾರ್ ಚಿರಂಜೀವಿ ಅವರು ತಮ್ಮ ಪುತ್ರ ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾದ ಬಗ್ಗೆ ಮಾತನಾಡುತ್ತಾ ಶಿವಣ್ಣ ಅವರನ್ನು ಕೊಂಡಾಡಿದ್ದಾರೆ. ‘ಶಿವರಾಜ್ ಕುಮಾರ್, ನಮ್ಮ ಶಿವಣ್ಣ ಆ ಪಾತ್ರವನ್ನು ಒಪ್ಪಿಕೊಂಡು, ನಟಿಸುತ್ತೀನಿ ಎಂದಿದ್ದೇ ನಮ್ಮ ಪಾಲಿಗೆ ಮೊದಲ ಯಶಸ್ಸು, ಅದು ನಿನ್ನ ಅದೃಷ್ಟ’ ಎಂದು ನಿರ್ದೇಶಕ ಬುಚ್ಚಿಬಾಬು ಸನಾಗೆ ಚಿರಂಜೀವಿ ಹೇಳಿದ್ದಾರೆ.

‘ಅವರೊಬ್ಬ ಅದ್ಭುತವಾದ ನಟ, ಅಷ್ಟೇ ಅದ್ಭುತವಾದ ವ್ಯಕ್ತಿ. ಪಾತ್ರವೇ ಅವರಾಗಿ ಅವರು ನಟಿಸಿದ್ದಾರೆ. ಚರಣ್ ಅನ್ನು ಗದರಿಸುವುದಾಗಲಿ, ಬೈಯ್ಯುವುದಾಗಲಿ ಮಾಡಬೇಕು ಎಂದರೆ ಅದಕ್ಕೆ ಒಳ್ಳೆಯ ಖಡಕ್ ಆದ ನಟನೆ ಆಗಿರಬೇಕು, ಶಿವಣ್ಣ ಆ ಸಿನಿಮಾನಲ್ಲಿ ರಾಮ್ ಚರಣ್ ಪಾತ್ರವನ್ನು ಬೈಯ್ಯುತ್ತಿದ್ದರೆ ಒಬ್ಬ ತಂದೆಯೇ ಮಗನನ್ನು ಬೈಯ್ಯುತ್ತಿರುವಂತೆ ಶಿಸ್ತು ಕಲಿಸುತ್ತಿರುವಂತೆ ಕಾಣುತ್ತದೆ, ಬಹಳ ಚೆನ್ನಾಗಿ ಅವರಿಬ್ಬರ ಸೀನ್​​ಗಳು ಮೂಡಿ ಬಂದಿವೆ’ ಎಂದಿದ್ದಾರೆ ಚಿರಂಜೀವಿ.

ಇದನ್ನೂ ಓದಿ:ವಿಕಲಚೇತನ ಯುವಕನ ಚಿತ್ರಕಲೆ ಮೆಚ್ಚಿದ ಶಿವರಾಜ್ ಕುಮಾರ್

ಚಿರಂಜೀವಿ ಅವರು ದಶಕಗಳಿಂದಲೂ ದೊಡ್ಮನೆಯೊಟ್ಟಿಗೆ ಆಪ್ತ ಬಂಧ ಹೊಂದಿರುವವರು. ರಾಜ್​ಕುಮಾರ್ ಅವರೊಟ್ಟಿಗೆ ಚಿರಂಜೀವಿ ಅವರಿಗೆ ಆಪ್ತ ಬಂಧವಿತ್ತು. ಈಗ ಶಿವಣ್ಣ ತೆಲುಗಿನಲ್ಲಿ ನಟಿಸಿರುವಂತೆ ಚಿರಂಜೀವಿ ಸಹ ಕನ್ನಡದಲ್ಲಿ ನಟಿಸಿದ್ದಾರೆ. ರವಿಚಂದ್ರನ್ ನಟನೆಯ ‘ಸಿಪಾಯಿ’ ಮತ್ತು ಅರ್ಜುನ್ ಸರ್ಜಾ ನಟನೆಯ ‘ಶ್ರೀ ಮಂಜುನಾಥ’ ಸಿನಿಮಾಗಳಲ್ಲಿ ಚಿರಂಜೀವಿ ಅವರು ಅತಿಥಿ ಪಾತ್ರಗಳಲ್ಲಿ ನಟನೆ ಮಾಡಿದ್ದಾರೆ. ಇಲ್ಲಿಯೂ ಅವರಿಗೆ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ.

ಶಿವರಾಜ್ ಕುಮಾರ್ ಅವರು ‘ಪೆದ್ದಿ’ ಸಿನಿಮಾನಲ್ಲಿ ಗೌರ ನಾಯ್ಡು ಹೆಸರಿನ ಕುಸ್ತಿ ಗುರುವಿನ ಪಾತ್ರದಲ್ಲಿ ನಟಿಸಿದ್ದಾರೆ. ರಾಮ್ ಚರಣ್​​ಗೆ ಕುಸ್ತಿ ಹೇಳಿಕೊಟ್ಟು ಆ ಪಾತ್ರದ ವ್ಯಕ್ತಿತ್ವ ಬದಲಿಸುವ ಪಾತ್ರ ಶಿವಣ್ಣ ಅವರದ್ದು. ಶಿವಣ್ಣನಿಗೆ ಕೆಲವು ಮಾಸ್ ಸೀನ್​​ಗಳ ಜೊತೆಗೆ ಭಾವುಕ ದೃಶ್ಯಗಳು ಸಹ ಸಿನಿಮಾನಲ್ಲಿ ಇವೆ. ‘ಪೆದ್ದಿ’ ಶಿವಣ್ಣ ನಟಿಸಿರುವ ಎರಡನೇ ತೆಲುಗು ಸಿನಿಮಾ. ಈ ಹಿಂದೆ ‘ಗೌತಮಿ ಪುತ್ರ ಶಾತಕರ್ಣಿ’ ಸಿನಿಮಾನಲ್ಲಿ ಶಿವಣ್ಣ ಅತಿಥಿ ಪಾತ್ರದಲ್ಲಿ ನಟಿಸಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Mega Job Fair 2026: ಮೈಸೂರಿನ ಉದ್ಯೋಗಾಕಾಂಕ್ಷಿಗಳಿಗೆ ಗುಡ್ನ್ಯೂಸ್​; ಜೂ. 24 ಬೃಹತ್ ಉದ್ಯೋಗ ಮೇಳ! – Kannada News | Periyapatna Mega Job Fair 2026: Mysuru District Offers Career Opportunities for Youth

ಮೈಸೂರು: ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಒಂದು ಮಹತ್ವದ ಸಿಹಿ ಸುದ್ದಿ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮಾನ್ಯ ಸಂಸದರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರ ನೇತೃತ್ವದಲ್ಲಿ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಮೈಸೂರು ಮತ್ತು ಬಿ.ಜಿ.ಎಸ್ ಶಿಕ್ಷಣ ಸಂಸ್ಥೆಗಳು ಪಿರಿಯಾಪಟ್ಟಣ ಇವರ ಜಂಟಿ ಸಹಯೋಗದೊಂದಿಗೆ ಪಿರಿಯಾಪಟ್ಟಣ ತಾಲೂಕಿನಲ್ಲಿ ಒಂದು ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.

ಅರ್ಹ ಹಾಗೂ ಆಸಕ್ತ ಯುವಕ-ಯುವತಿಯರಿಗೆ ಉದ್ಯೋಗಾವಕಾಶ ಒದಗಿಸುವ ನಿಟ್ಟಿನಲ್ಲಿ ಈ ಮೇಳವು ಒಂದು ಅತ್ಯುತ್ತಮ ವೇದಿಕೆಯಾಗಲಿದ್ದು, ಪ್ರವೇಶ ಸಂಪೂರ್ಣ ಉಚಿತವಾಗಿರುತ್ತದೆ.

ಉದ್ಯೋಗ ಮೇಳದ ಸಂಪೂರ್ಣ ವಿವರಗಳು:

  • ದಿನಾಂಕ: 24-06-2026 (ಬುಧವಾರ)
  • ಸಮಯ: ಬೆಳಿಗ್ಗೆ 8:00 ರಿಂದ ಸಂಜೆ 4:00 ರವರೆಗೆ
  • ಸ್ಥಳ: ಬಿ.ಜಿ.ಎಸ್ ಶಿಕ್ಷಣ ಸಂಸ್ಥೆಗಳು, ಅಬ್ಬೂರು ಗ್ರಾಮ, ಪಿರಿಯಾಪಟ್ಟಣ ತಾಲ್ಲೂಕು, ಮೈಸೂರು ಜಿಲ್ಲೆ.

ಅರ್ಹತೆ ಮತ್ತು ವಯೋಮಿತಿ:

ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲು ವಿವಿಧ ಶೈಕ್ಷಣಿಕ ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಎಸ್‌ಎಸ್‌ಎಲ್‌ಸಿ (SSLC), ಪಿಯುಸಿ (PUC), ಡಿಪ್ಲೋಮಾ, ಐಟಿಐ (ITI), ಯಾವುದೇ ಪದವಿ (Graduate) ಮತ್ತು ಸ್ನಾತಕೋತ್ತರ ಪದವಿ (Post Graduate) ಪಡೆದವರು ಭಾಗವಹಿಸಬಹುದು. 18 ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ಈ ಸುವರ್ಣಾವಕಾಶವನ್ನು ಬಳಸಿಕೊಳ್ಳಬಹುದು.

ಇದನ್ನೂ ಓದಿ: ಲಿಖಿತ ಪರೀಕ್ಷೆಯಿಲ್ಲದೆ ಸಿಗಲಿದೆ ತಿಂಗಳಿಗೆ 2.25 ಲಕ್ಷ ರೂ. ಸಂಬಳದ ಉದ್ಯೋಗ! ಅರ್ಜಿ ಸಲ್ಲಿಸುವುದು ಹೇಗೆ?

ಆನ್‌ಲೈನ್ ನೋಂದಣಿ ಮತ್ತು ಸಂಪರ್ಕ ಮಾಹಿತಿ:

ಉದ್ಯೋಗ ಮೇಳದಲ್ಲಿ ಭಾಗವಹಿಸಲು ಇಚ್ಛಿಸುವ ಆಸಕ್ತ ಅಭ್ಯರ್ಥಿಗಳು ಕೆಳಗಿನ ಗೂಗಲ್ ಫಾರ್ಮ್ ಲಿಂಕ್ ಬಳಸಿ ತಕ್ಷಣವೇ ನೋಂದಾಯಿಸಿಕೊಳ್ಳಬಹುದು:

ಇಲ್ಲಿ ಕ್ಲಿಕ್ ಮಾಡಿ ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಿ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ನಿಮಗೆ ಉದ್ಯೋಗ ಮೇಳದ ಕುರಿತು ಯಾವುದೇ ಪ್ರಶ್ನೆಗಳು ಅಥವಾ ಹೆಚ್ಚಿನ ಮಾಹಿತಿ ಅಗತ್ಯವಿದ್ದರೆ, ಈ ಕೆಳಗಿನ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ:

  • 9036356862
  • 9964463361
  • 8748984360

ಮುಖ್ಯ ಸೂಚನೆ:

ಉದ್ಯೋಗಾಕಾಂಕ್ಷಿಗಳು ಮೇಳಕ್ಕೆ ಬರುವಾಗ ತಮ್ಮ ರೆಸ್ಯೂಮ್ (Resume/Biodata) ಹಾಗೂ ಶೈಕ್ಷಣಿಕ ದಾಖಲಾತಿಗಳ ಜೆರಾಕ್ಸ್ ಪ್ರತಿಗಳೊಂದಿಗೆ ಹಾಜರಾಗಲು ಕೋರಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Cough Syrup: ಇನ್ಮುಂದೆ ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಕೆಮ್ಮಿನ ಸಿರಪ್ ಸಿಗಲ್ಲ, ಕೇಂದ್ರ ಸರ್ಕಾರದಿಂದ ಹೊಸ ನಿಯಮ – Kannada News | Cough Syrup Rule: Doctor’s Prescription Now Mandatory for Purchase in India

ಸಿರಪ್-ಸಾಂದರ್ಭಿಕ ಚಿತ್ರImage Credit source: Vecteezy

ನವದೆಹಲಿ, ಜೂನ್ 16: ಇನ್ನುಮುಂದೆ ಮೆಡಿಕಲ್ ಶಾಪ್​ನಲ್ಲಿ ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಕೆಮ್ಮಿನ ಸಿರಪ್(Cough Syrup) ಕೊಡುವಂತಿಲ್ಲ ಎಂದು ಕೇಂದ್ರ ಸರ್ಕಾರ ಹೊಸ ನಿಯಮವನ್ನು ಜಾರಿ ಮಾಡಿದೆ. ಸಾರ್ವಜನಿಕ ಆರೋಗ್ಯ ರಕ್ಷಣೆಯನ್ನು ಬಲಪಡಿಸಲು ಮತ್ತು ಕೆಮ್ಮಿನ ಸಿರಪ್​ಗಳ ಅತಿಯಾದ ದುರುಪಯೋಗವನ್ನು ತಡೆಗಟ್ಟಲು ಕೇಂದ್ರ ಸರ್ಕಾರವು ಅತ್ಯಂತ ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಜೂನ್ 9ರಂದು ಹೊರಡಿಸಿರುವ ಅಧಿಸೂಚನೆ ಪ್ರಕಾರ, ಇನ್ನುಮುಂದೆ ವೈದ್ಯರ ಅಧಿಕೃತ ಪ್ರಿಸ್ಕ್ರಿಪ್ಷನ್ ಇಲ್ಲದೆ ಯಾವುದೇ ಕೆಮ್ಮು, ಶೀತ ಹಾಗೂ ಜ್ವರಕ್ಕೆ ಸಿರಪ್ ಪಡೆದುಕೊಳ್ಳಲು ಸಾಧ್ಯವಿಲ್ಲ.

ಕೇಂದ್ರ ಸರ್ಕಾರವು 1945ರ ಹಳೆಯ ಔಷಧ ನಿಯಮಗಳ ವೇಳಾಪಟ್ಟಿ ಕೆ ಸಿರಪ್ ಪದವನ್ನು ಅಧಿಕೃತವಾಗಿ ತೆಗೆದುಹಾಕಿದೆ. ಈ ಹಿಂದೆ 1,000 ಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಸಣ್ಣ ಹಳ್ಳಿಗಳಲ್ಲಿ ಕೆಮ್ಮಿನ ಸಿರಪ್‌ಗಳನ್ನು ಮಾರಾಟ ಮಾಡಲು ಕೆಲವು ಪರವಾನಗಿ ನಿಯಮಗಳಿಂದ ವಿನಾಯಿತಿ ನೀಡಲಾಗಿತ್ತು. ಆದರೆ ಇನ್ನು ಮುಂದೆ ಸಣ್ಣ ಹಳ್ಳಿಗಳಲ್ಲೂ ಪರವಾನಗಿ ಇಲ್ಲದೆ ಸಿರಪ್ ಮಾರಾಟ ಮಾಡುವಂತಿಲ್ಲ.

ಹೊಸ ಬದಲಾವಣೆಯ ನಂತರ, ಎಲ್ಲಾ ರೀತಿಯ ಕೆಮ್ಮಿನ ಸಿರಪ್‌ಗಳನ್ನು 1940 ರ ಔಷಧಗಳು ಮತ್ತು ಸೌಂದರ್ಯವರ್ಧಕ ಕಾಯ್ದೆಯಡಿ ಪರವಾನಗಿ ಪಡೆದ ಔಷಧಾಲಯಗಳ ಮೂಲಕ ಮಾತ್ರ ಮಾರಾಟ ಮಾಡಬೇಕಾಗುತ್ತದೆ. ಗ್ರಾಹಕರು ವೈದ್ಯರ ಚೀಟಿಯನ್ನು ತೋರಿಸುವುದು ಈಗ ಕಡ್ಡಾಯವಾಗಿದೆ.

ಮತ್ತಷ್ಟು ಓದಿ: 2 ವರ್ಷದೊಳಗಿನ ಮಕ್ಕಳಿಗೆ ಶೀತ, ಕೆಮ್ಮಿನ ಸಿರಪ್ ನೀಡಬೇಡಿ; 11 ಮಕ್ಕಳ ಸಾವಿನ ಬಳಿಕ ಕೇಂದ್ರ ಸರ್ಕಾರ ಎಚ್ಚರಿಕೆ

ದುರುಪಯೋಗಪಡಿಸಿಕೊಳ್ಳುತ್ತಿರುವುದು ಹೆಚ್ಚಾಗಿದೆ. ಇದನ್ನು ತಡೆಯಲು ಮತ್ತು ದೇಶಾದ್ಯಂತ ಜವಾಬ್ದಾರಿಯುತ ಔಷಧ ಮಾರಾಟವನ್ನು ಖಚಿತಪಡಿಸಿಕೊಳ್ಳಲು ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ನಿಯಮ ಉಲ್ಲಂಘಿಸುವ ತಯಾರಕರು ಹಾಗೂ ವಿತರಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 1:19 pm, Tue, 16 June 26

Source link

500, 1000, 2000 ಮತ್ತು 14000… ದಾಖಲೆಗಳ ಮೇಲೆ ಕಣ್ಣಿಟ್ಟಿರುವ ರೂಟ್ – Kannada News | Joe Root Set for Historic Milestones as Interim England Captain

500, 1000, 2000 ಮತ್ತು 14000… ಇವು ಕೇವಲ ಅಂಕಿ-ಅಂಶಗಳಲ್ಲ, ನ್ಯೂಝಿಲೆಂಡ್ ವಿರುದ್ಧ ಇಂಗ್ಲೆಂಡ್‌ನ ಸ್ಟಾರ್ ಬ್ಯಾಟರ್ ಜೋ ರೂಟ್ ಮುಂದಿರುವ ದಾಖಲೆಗಳು! ಒಂದು ಕಡೆ ಕಿವೀಸ್ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ 2,000 ರನ್ ಪೂರೈಸುವ ವಿಶ್ವದ ಮೊದಲ ಬ್ಯಾಟರ್ ಆಗುವ ಸನಿಹದಲ್ಲಿರುವ ರೂಟ್, ಮತ್ತೊಂದೆಡೆ ಇಂಗ್ಲೆಂಡ್ ತಂಡದ ಹಂಗಾಮಿ ನಾಯಕನಾಗಿ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ. ನಾಯಕತ್ವದ ಜವಾಬ್ದಾರಿಯೊಂದಿಗೆ ಮೈದಾನಕ್ಕಿಳಿಯಲಿರುವ ಜೋ ರೂಟ್ ಕಣ್ಣಿಟ್ಟಿರುವ ಪ್ರಮುಖ ದಾಖಲೆಗಳ ಪಟ್ಟಿ ಈ ಕೆಳಗಿನಂತಿದೆ…

  • 2000 ರನ್ ಗಳ ಐತಿಹಾಸಿಕ ಮೈಲಿಗಲ್ಲು: ಜೋ ರೂಟ್ ನ್ಯೂಝಿಲೆಂಡ್ ವಿರುದ್ಧ ಇದುವರೆಗೆ ಆಡಿದ 22 ಟೆಸ್ಟ್ ಪಂದ್ಯಗಳಿಂದ 1,934 ರನ್ ಗಳಿಸಿದ್ದಾರೆ. ಇನ್ನು ಕೇವಲ 66 ರನ್ ಗಳಿಸಿದರೆ, ಕಿವೀಸ್ ವಿರುದ್ಧ ಟೆಸ್ಟ್ ಇತಿಹಾಸದಲ್ಲೇ 2,000 ರನ್ ಪೂರೈಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ರೂಟ್ ಪಾತ್ರರಾಗಲಿದ್ದಾರೆ. ಈಗಾಗಲೇ ಜಾವೇದ್ ಮಿಯಾಂದಾದ್ (1,919 ರನ್) ಅವರ 31 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿರುವ ರೂಟ್ ಲೀಡ್ಸ್​ನಲ್ಲಿ ಹೊಸ ಇತಿಹಾಸ ಬರೆಯುವುದನ್ನು ಎದುರು ನೋಡಬಹುದು.
  •  1000 ರನ್​ಗಳ ಸರದಾರ: ನ್ಯೂಝಿಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್​ನಲ್ಲಿ ಇಂಗ್ಲೆಂಡ್​ನಲ್ಲಿ 1000 ರನ್ ಕಲೆಹಾಕಿದ ದಾಖಲೆ ಬರೆಯಲು ಜೋ ರೂಟ್​ಗೆ ಬೇಕಿರುವುದು ಕೇವಲ 72 ರನ್​ಗಳು ಮಾತ್ರ. ಈಗಾಗಲೇ ಇಂಗ್ಲೆಂಡ್ ಪಿಚ್​ನಲ್ಲಿ ಕಿವೀಸ್ ವಿರುದ್ಧ 928 ರನ್ ಕಲೆಹಾಕಿರುವ ರೂಟ್ ಈ ಬಾರಿ ಸಾವಿರ ರನ್ ಸರದಾರ ಎನಿಸಿಕೊಳ್ಳುವ ನಿರೀಕ್ಷೆಯಿದೆ.
  • 14000 ಟೆಸ್ಟ್ ರನ್​: ಜೋ ರೂಟ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 14,000 ಟೆಸ್ಟ್ ರನ್ ಗಳ ಬೃಹತ್ ಮೈಲಿಗಲ್ಲನ್ನು ತಲುಪುವ ಸನಿಹದಲ್ಲಿದ್ದಾರೆ. ಈಗಾಗಲೇ 13,952 ರನ್ ಗಳಿಸಿರುವ ರೂಟ್ 2ನೇ ಟೆಸ್ಟ್​ನಲ್ಲಿ 48 ರನ್ ಬಾರಿಸಿದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ.
  •  500 ಟೆಸ್ಟ್ ರನ್‌: ಜೋ ರೂಟ್ ನ್ಯೂಝಿಲೆಂಡ್ ವಿರುದ್ಧ ಇಂಗ್ಲೆಂಡ್ ತಂಡದ ನಾಯಕನಾಗಿ ತಮ್ಮ ಏಳನೇ ಟೆಸ್ಟ್ ಪಂದ್ಯವನ್ನು ಆಡಲಿದ್ದಾರೆ . ಈ ಹಿಂದೆ ಆಡಿರುವ ಆರು ಟೆಸ್ಟ್‌ಗಳಲ್ಲಿ, ಅವರು 43.45 ರ ಸರಾಸರಿಯಲ್ಲಿ 478 ರನ್ ಗಳಿಸಿದ್ದಾರೆ. ಇನ್ನು 22 ನೇ ರನ್ ಗಳಿಸಿದರೆ ನ್ಯೂಝಿಲೆಂಡ್ ವಿರುದ್ಧ 500 ರನ್ ಕಲೆಹಾಕಿದ ಇಂಗ್ಲೆಂಡ್ ನಾಯಕ ಎನಿಸಿಕೊಳ್ಳಲಿದ್ದಾರೆ.

ಕ್ಯಾಪ್ಟನ್ ರೂಟ್:

ಮೊದಲ ಟೆಸ್ಟ್ ಪಂದ್ಯದ ಬಳಿಕ ತಡರಾತ್ರಿಯ ಕರ್ಫ್ಯೂ ನಿಯಮವನ್ನು ಉಲ್ಲಂಘಿಸಿದ ಕಾರಣಕ್ಕಾಗಿ ನಾಯಕ ಬೆನ್ ಸ್ಟೋಕ್ಸ್ ಮತ್ತು ವೇಗಿ ಗಸ್ ಅಟ್ಕಿನ್ಸನ್ ಅವರನ್ನು ಇಂಗ್ಲೆಂಡ್ ತಂಡದಿಂದ ಅಮಾನತುಗೊಳಿಸಲಾಗಿದೆ. ಹೀಗಾಗಿ 2ನೇ ಟೆಸ್ಟ್ ಪಂದ್ಯಕ್ಕೆ ಜೋ ರೂಟ್ ಅವರನ್ನು ಕ್ಯಾಪ್ಟನ್ ಆಗಿ ನೇಮಿಸಲಾಗಿದೆ.

ಇದನ್ನೂ ಓದಿ: ಹೊಸ ಇತಿಹಾಸ… ಒಂದೇ ದಿನ 4 ಪಂದ್ಯಗಳು ಡ್ರಾ..!

ಈ ಹಿಂದೆ ಇಂಗ್ಲೆಂಡ್ ಟೆಸ್ಟ್ ತಂಡವನ್ನು 64 ಪಂದ್ಯಗಳಲ್ಲಿ ಮುನ್ನಡೆಸಿದ್ದ ರೂಟ್ 27 ಮ್ಯಾಚ್​ಗಳಲ್ಲಿ ಜಯ ತಂದು ಕೊಟ್ಟಿದ್ದರು. ಇನ್ನು ರೂಟ್ ನಾಯಕತ್ವದಲ್ಲಿ ಆಂಗ್ಲ ಪಡೆ 11 ಪಂದ್ಯಗಳಲ್ಲಿ ಡ್ರಾ ಸಾಧಿಸಿದರೆ, 26 ಮ್ಯಾಚ್​ಗಳಲ್ಲಿ ಸೋಲನುಭವಿಸಿತ್ತು. ಇದೀಗ 65ನೇ ಪಂದ್ಯದಲ್ಲಿ ನಾಯಕನಾಗಿ ಕಣಕ್ಕಿಳಿಯಲು ಜೋ ರೂಟ್ ಸಿದ್ಧರಾಗಿದ್ದು, ಈ ಬಾರಿ ಮತ್ತೊಮ್ಮೆ ತಮ್ಮ ನಾಯಕತ್ವದ ಕಮಾಲ್ ಮಾಡಲಿದ್ದಾರಾ ಕಾದು ನೋಡಬೇಕಿದೆ.

Source link

ಎನ್​ಆರ್​ಐಗಳ ಡೆಪಾಸಿಟ್​ಗಳನ್ನು ಕೈಬೀಸಿ ಕರೆಯುತ್ತಿವೆ ಭಾರತದ ಹೊಸ FCNR(B) ದರಗಳು; ಅನಿವಾಸಿ ಭಾರತೀಯರಿಗೆ ಹೇಗೆ ಲಾಭ? – Kannada News | How India’s new FCNR B rates can benefit NRIs

ನವದೆಹಲಿ, ಜೂನ್ 16: ಭಾರತೀಯ ರಿಸರ್ವ್ ಬ್ಯಾಂಕ್ (RBI) ಇತ್ತೀಚೆಗೆ ಕೈಗೊಂಡಿರುವ ಮಹತ್ವದ ನಿರ್ಧಾರದಿಂದಾಗಿ ಭಾರತದಲ್ಲಿ FCNR (B) ಠೇವಣಿಗಳ ಮೇಲಿನ ಬಡ್ಡಿ ದರಗಳು ದಾಖಲೆ ಮಟ್ಟಕ್ಕೆ ಏರಿಕೆಯಾಗಿವೆ. ಅನಿವಾಸಿ ಭಾರತೀಯರಿಗೆ (NRIs) ಇದು ಸುವರ್ಣಾವಕಾಶವಾಗಿ ಮಾರ್ಪಟ್ಟಿದೆ. ಎಫ್‌ಸಿಎನ್‌ಆರ್(ಬಿ) – Foreign Currency Non-Resident (Bank) Deposit- ಎಂದರೆ ಅನಿವಾಸಿ ಭಾರತೀಯರು ತಾವು ವಿದೇಶದಲ್ಲಿ ಗಳಿಸಿದ ಹಣವನ್ನು ಭಾರತೀಯ ಬ್ಯಾಂಕುಗಳಲ್ಲಿ ವಿದೇಶಿ ಕರೆನ್ಸಿಯ ರೂಪದಲ್ಲೇ (ಉದಾಹರಣೆಗೆ ಯುಎಸ್ ಡಾಲರ್, ಬ್ರಿಟಿಷ್ ಪೌಂಡ್, ಯುರೋ ಇತ್ಯಾದಿ) ಇಡಬಹುದಾದ ಒಂದು ಫಿಕ್ಸೆಡ್ ಡೆಪಾಸಿಟ್ (Fixed Deposit) ಯೋಜನೆ ಆಗಿದೆ.

ಜೂನ್ 2026ರಲ್ಲಿ ಆರ್‌ಬಿಐ (RBI) ಬ್ಯಾಂಕುಗಳಿಗಾಗಿ ಒಂದು ವಿಶೇಷ ‘ಫಾರೆಕ್ಸ್ ಸ್ವಾಪ್ ವಿಂಡೋ’ (Forex Swap Window) ಸೌಲಭ್ಯವನ್ನು ಮುಕ್ತಗೊಳಿಸಿದೆ. ಇದರ ಅಡಿಯಲ್ಲಿ ಸೆಪ್ಟೆಂಬರ್ 30 ರವರೆಗೆ ಜಮೆಯಾಗುವ ಹೊಸ FCNR(B) ಠೇವಣಿಗಳ ಮೇಲಿನ ‘ಕರೆನ್ಸಿ ಏರಿಳಿತದ ರಿಸ್ಕ್ ವೆಚ್ಚವನ್ನು’ (Hedging Cost) ಆರ್‌ಬಿಐ ತಾನೇ ಭರಿಸಲಿದೆ. ಇದರಿಂದಾಗಿ ಬ್ಯಾಂಕುಗಳ ಮೇಲಿನ ಆರ್ಥಿಕ ಹೊರೆ ತಪ್ಪುತ್ತದೆ. ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಹೆಚ್ಚಿನ ಬಡ್ಡಿ ನೀಡಲು ಸಾಧ್ಯವಾಗುತ್ತದೆ. ಈ ಮೊದಲು ಶೇಕಡಾ 3 ರಿಂದ 4 ರಷ್ಟಿದ್ದ ಬಡ್ಡಿ ದರಗಳು, ಈಗ ಶೇ. 6 ರಿಂದ 7.1 ರಷ್ಟು ದಾಖಲೆ ಮಟ್ಟಕ್ಕೆ ಜಿಗಿದಿವೆ.

ಇದನ್ನೂ ಓದಿ: ಷೇರುಪೇಟೆಯಲ್ಲಿ ಧೂಳೆಬ್ಬಿಸುತ್ತಿರುವ ಸ್ಪೇಸ್​ಎಕ್ಸ್; ಇಲಾನ್ ಮಸ್ಕ್ ಒಂದು ದಿನದಲ್ಲಿ ಗಳಿಸಿದ ಸಂಪತ್ತು ವಾರನ್ ಬಫೆಟ್​ನ ಒಟ್ಟೂ ಸಂಪತ್ತಿಗೆ ಸಮ

ಪ್ರಮುಖ ಬ್ಯಾಂಕುಗಳ ಪ್ರಸ್ತುತ ಬಡ್ಡಿ ದರಗಳು (USD ಠೇವಣಿಗಳ ಮೇಲೆ)

  • ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್: ಶೇ. 7.10
  • ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಶೇ 7.13
  • ಐಸಿಐಸಿಐ ಬ್ಯಾಂಕ್: ಶೇ. 6.50
  • ಎಚ್‌ಡಿಎಫ್‌ಸಿ ಬ್ಯಾಂಕ್: ಶೇ. 6
  • ಆಕ್ಸಿಸ್ ಬ್ಯಾಂಕ್: ಶೇ. 6
  • ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI): ಶೇ. 5.75 – 6.00

NRI ಹೂಡಿಕೆದಾರರಿಗೆ ಇದರಿಂದ ಆಗುವ 4 ಪ್ರಮುಖ ಲಾಭಗಳು

  1. ಕರೆನ್ಸಿ ನಷ್ಟದ ಭಯವಿಲ್ಲ: ಸಾಮಾನ್ಯವಾಗಿ ವಿದೇಶದಿಂದ ಭಾರತಕ್ಕೆ ಹಣ ಕಳುಹಿಸಿ NRE ಅಕೌಂಟ್‌ನಲ್ಲಿ ಇಟ್ಟಾಗ, ರೂಪಾಯಿ ಮೌಲ್ಯ ಕುಸಿದರೆ (Depreciation) ನಷ್ಟವಾಗುವ ಸಾಧ್ಯತೆ ಇರುತ್ತದೆ. ಆದರೆ FCNR(B) ನಲ್ಲಿ ನೀವು ಡಾಲರ್ ರೂಪದಲ್ಲೇ ಹಣ ಇಡುವುದರಿಂದ ಮತ್ತು ವಾಪಸ್ ಪಡೆಯುವಾಗಲೂ ಡಾಲರ್ ರೂಪದಲ್ಲೇ ಸಿಗುವುದರಿಂದ ರೂಪಾಯಿ ಮೌಲ್ಯದ ಏರಿಳಿತ ನಿಮ್ಮ ಹೂಡಿಕೆಯ ಮೇಲೆ ಯಾವುದೇ ಪ್ರಭಾವ (No Currency Risk) ಬೀರುವುದಿಲ್ಲ.
  2. ಭಾರತದಲ್ಲಿ ಸಂಪೂರ್ಣ ತೆರಿಗೆ ಮುಕ್ತ: ಭಾರತದ ಆದಾಯ ತೆರಿಗೆ ನಿಯಮಗಳ ಪ್ರಕಾರ, FCNR(B) ಠೇವಣಿಗಳ ಮೇಲೆ ಗಳಿಸುವ ಸಂಪೂರ್ಣ ಬಡ್ಡಿ ಆದಾಯಕ್ಕೆ ಭಾರತದಲ್ಲಿ ಯಾವುದೇ ತೆರಿಗೆ ಇರುವುದಿಲ್ಲ (100% Tax-Free).
  3. ಸುಲಭವಾಗಿ ವಿದೇಶಕ್ಕೆ ಮರು-ಸಾಗಣೆ: ಈ ಖಾತೆಯಲ್ಲಿರುವ ಅಸಲು ಮತ್ತು ಬಡ್ಡಿ ಹಣ ಎರಡನ್ನೂ ಯಾವುದೇ ಮಿತಿ ಅಥವಾ ಕಠಿಣ ನಿಯಮಗಳಿಲ್ಲದೆ, ನೀವು ವಾಸಿಸುತ್ತಿರುವ ವಿದೇಶಕ್ಕೆ ಸುಲಭವಾಗಿ ವರ್ಗಾಯಿಸಿಕೊಳ್ಳಬಹುದು (Full Repatriation).
  4. ದೇಶಿ ಬ್ಯಾಂಕುಗಳಿಗಿಂತ ಹೆಚ್ಚಿನ ಲಾಭ: ಪ್ರಸ್ತುತ ಅಮೆರಿಕ ಅಥವಾ ಯೂರೋಪ್‌ನ ಬ್ಯಾಂಕುಗಳಲ್ಲಿ ಸ್ಥಿರ ಠೇವಣಿಗಳ (CDs) ಮೇಲೆ ಶೇಕಡಾ 4 ರಿಂದ 5 ರಷ್ಟು ಮಾತ್ರ ಬಡ್ಡಿ ಸಿಗುತ್ತಿದೆ. ಆದರೆ ಭಾರತದ ಬ್ಯಾಂಕುಗಳು ಸುರಕ್ಷಿತವಾಗಿ ಅದೇ ಡಾಲರ್ ಮೇಲೆ 6% ರಿಂದ 7% ಕ್ಕಿಂತ ಹೆಚ್ಚು ಬಡ್ಡಿ ನೀಡುತ್ತಿರುವುದರಿಂದ NRIಗಳಿಗೆ ಇದು ಅತ್ಯುತ್ತಮ ಮತ್ತು ಸುರಕ್ಷಿತ ಹೂಡಿಕೆಯಾಗಿದೆ.

ಇದನ್ನೂ ಓದಿ: ಡೀಸಲ್ ಮತ್ತು ಜೆಟ್ ಇಂಧನದ ಮೇಲಿನ ರಫ್ತು ಸುಂಕ ಹೆಚ್ಚಳ; ಪೆಟ್ರೋಲ್ ರೀಟೇಲ್ ಬೆಲೆ ಮೇಲೆ ಪರಿಣಾಮ ಬೀರುತ್ತಾ?

ಸೆಪ್ಟೆಂಬರ್ 30ರವರೆಗೆ ಇದೆ ಈ ಆಫರ್

ಆರ್‌ಬಿಐ ನೀಡಿರುವ ಈ ವಿಶೇಷ ರಿಯಾಯಿತಿ ಸೌಲಭ್ಯವು 2026ರ ಸೆಪ್ಟೆಂಬರ್ 30 ರವರೆಗೆ ಮಾತ್ರ ಲಭ್ಯವಿರುತ್ತದೆ. ಈ ಅವಧಿಯ ಒಳಗಾಗಿ ಆರಂಭಿಸುವ 3 ರಿಂದ 5 ವರ್ಷಗಳ ಅವಧಿಯ ಠೇವಣಿಗಳಿಗೆ ಮಾತ್ರ ಈ ಹೆಚ್ಚಿನ ಬಡ್ಡಿ ದರ ಅನ್ವಯವಾಗುತ್ತದೆ. ಕನಿಷ್ಠ 1 ವರ್ಷದ ಲಾಕ್-ಇನ್ ಅವಧಿ ಇರಲಿದ್ದು, ಅವಧಿಗೂ ಮುನ್ನ ಹಣ ಹಿಂಪಡೆದರೆ ಬಡ್ಡಿಯಲ್ಲಿ ಕಡಿತವಾಗುವ ಸಾಧ್ಯತೆ ಇರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ತಾಯಿ ಪಾರ್ಥೀವ ಶರೀರದ ಎದುರು ಕಣ್ಣೀರು ಹಾಕಿದ ಶ್ರೀಮುರಳಿ

ನಟ ಶ್ರೀಮುರುಳಿ ಹಾಗೂ ವಿಜಯ್ ರಾಘವೇಂದ್ರ ಅವರ ತಾಯಿ ಜಯಮ್ಮ ಇಂದು (ಜೂನ್ 16) ನಿಧನ ಹೊಂದಿದ್ದಾರೆ. ಸದಾ ಧೈರ್ಯದಿಂದ ಇರುತ್ತಿದ್ದ ‘ರೋರಿಂಗ್ ಸ್ಟಾರ್’ ಶ್ರೀಮುರುಳಿ ಅವರು ಅಮ್ಮನ ಪಾರ್ಥಿವ ಶರೀರವನ್ನು ನೋಡುತ್ತಿದ್ದಂತೆ ತಡೆಯಲಾರದೆ ಕಣ್ಣೀರಿಟ್ಟ ಘಟನೆ ಎಲ್ಲರನ್ನೂ ಭಾವುಕರನ್ನಾಗಿಸಿದೆ. ಯಾವಾಗಲೂ ಬೆಳ್ಳಿತೆರೆಯ ಮೇಲೆ ರಗಡ್ ಆಕ್ಷನ್ ಪಾತ್ರಗಳ ಮೂಲಕ ಅಬ್ಬರಿಸುವ ಶ್ರೀಮುರುಳಿ, ವೈಯಕ್ತಿಕ ಜೀವನದಲ್ಲಿ ತಾಯಿಗೆ ಅತಿಯಾಗಿ ಹತ್ತಿರವಾಗಿದ್ದರು. ತಮ್ಮ ಸಿನಿ ಜರ್ನಿ ಹಾಗೂ ವೈಯಕ್ತಿಕ ಬೆಳವಣಿಗೆಗೆ ಸದಾ ಬೆನ್ನೆಲುಬಾಗಿ ನಿಲ್ಲುತ್ತಿದ್ದ ಅಮ್ಮ ಇನ್ನು ನೆನಪು ಮಾತ್ರ ಎಂಬ ಸತ್ಯವನ್ನು ಅರಗಿಸಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ಜಯಮ್ಮ ಅವರ ಪಾರ್ಥಿವ ಶರೀರದ ಮುಂದೆ ಮೌನವಾಗಿ ಕಣ್ಣೀರು ಸುರಿಸುತ್ತಿದ್ದ ಶ್ರೀಮುರುಳಿ ಅವರನ್ನು ನೋಡಿ ಅಲ್ಲಿ ನೆರೆದಿದ್ದ ಬಂಧುಗಳು ಮತ್ತು ಚಿತ್ರರಂಗದ ಸ್ನೇಹಿತರು ಸಾಂತ್ವನ ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link