ವಿಶ್ವ ಬೌದ್ಧಿಕ ಆಸ್ತಿ ದಿನImage Credit source: Freepik
ಬೌದ್ಧಿಕ ಆಸ್ತಿ (Intellectual Property) ಎಂಬುದು ಮಾನವನ ಬುದ್ಧಿಶಕ್ತಿಯ ಅಮೂರ್ತ ಸೃಷ್ಟಿಯನ್ನು ಒಳಗೊಂಡಿರುವ ಆಸ್ತಿಯ ವರ್ಗವಾಗಿದ್ದು, ಇದು ಬೆಲೆ ಕಟ್ಟಲಾಗದಷ್ಟು ಅಮೂಲ್ಯವಾಗಿದೆ. ಪೇಟೆಂಟ್‌ಗಳು, ಹಕ್ಕುಸ್ವಾಮ್ಯಗಳು, ಟ್ರೇಡ್‌ಮಾರ್ಕ್‌ಗಳು ಮತ್ತು ವಿನ್ಯಾಸಗಳು, ಕೃತಿಸ್ವಾಮ್ಯ ಇವೆಲ್ಲವೂ ಬೌದ್ಧಿಕ ಆಸ್ತಿಗಳಾಗಿದ್ದು, ಲೇಖಕ, ಕಥೆಗಾರ, ವಿಜ್ಞಾನಿ ಹೀಗೆ ಹಲವಾರು ಕ್ಷೇತ್ರಗಳಲ್ಲಿ ತಮ್ಮ ಬುದ್ಧಿ ಶಕ್ತಿ ಹಾಗೂ ಸೃಜನಶೀಲತೆಯಿಂದ ಹೊರ ತರುವ ಕಥೆ, ಸಂಗೀತ, ಪುಸ್ತಕ, ವಿನ್ಯಾಸಗಳನ್ನು ಬೇರೆ ಯಾರು ಕದಿಯದಂತೆ ಈ ಅಮೂಲ್ಯ ಬೌದ್ಧಿಕ ಆಸ್ತಿಯ ಹಕ್ಕುಗಳನ್ನು ರಕ್ಷಿಸಲು ಹಾಗೂ ಸೃಷ್ಟಿಕರ್ತರು, ಸಂಶೋಧಕರು, ಉದ್ಯಮಿಗಳ ಆಲೋಚನೆಗಳು ಮತ್ತು ಅವರು ನೀಡಿದ ಕೊಡುಗೆಗಳನ್ನು ಗೌರವಿಸಲು ಪ್ರತಿವರ್ಷ ಏಪ್ರಿಲ್ 26 ರಂದು ವಿಶ್ವ ಬೌದ್ಧಿಕ ಆಸ್ತಿಯ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ ಬನ್ನಿ.
ವಿಶ್ವ ಬೌದ್ಧಿಕ ಆಸ್ತಿ ದಿನದ ಇತಿಹಾಸವೇನು?
ವಿಶ್ವ ಬೌದ್ಧಿಕ ಆಸ್ತಿ ದಿನವನ್ನು ಪ್ರತಿ ವರ್ಷ ಏಪ್ರಿಲ್ 26 ರಂದು ಆಚರಿಸಲಾಗುತ್ತದೆ. ಈ ದಿನದ ಆಚರಣೆಯನ್ನು ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ (WIPO) 2000 ರಲ್ಲಿ ಪ್ರಾರಂಭಿಸಿತು. ಈ ದಿನ 1970 ರಲ್ಲಿ ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ (WIPO) ಯನ್ನು ಸ್ಥಾಪಿಸುವ ಸಮಾವೇಶವು ಜಾರಿಗೆ ಬಂದ ದಿನದ ಸ್ಮರಣಾರ್ಥವಾಗಿದೆ. ನಾವೀನ್ಯತೆ ಮತ್ತು ಸೃಜನಶೀಲತೆಯನ್ನು ಉತ್ತೇಜಿಸುವಲ್ಲಿ ಬೌದ್ಧಿಕ ಆಸ್ತಿ ಹಕ್ಕುಗಳ (ಪೇಟೆಂಟ್‌ಗಳು, ಹಕ್ಕುಸ್ವಾಮ್ಯಗಳು, ಟ್ರೇಡ್‌ಮಾರ್ಕ್‌ಗಳು ಮತ್ತು ವಿನ್ಯಾಸಗಳು) ಪ್ರಮುಖ ಪಾತ್ರದ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಇಟ್ಟುಕೊಂಡು ಈ ದಿನದ ಆಚರಣೆಯನ್ನು ಪ್ರಾರಂಭಿಸಲಾಯಿತು. ಅಂದಿನಿಂದ ಪ್ರತಿವರ್ಷ ಏಪ್ರಿಲ್ 26 ರಂದು ಈ ವಿಶೇಷ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ವಿಶ್ವ ಬೌದ್ಧಿಕ ಆಸ್ತಿ ದಿನವನ್ನು ಆಚರಿಸುವ ಮೂಲ ಉದ್ದೇಶವೇ ಬೌದ್ಧಿಕ ಆಸ್ತಿಯ ಹಕ್ಕು, ನಾವೀನ್ಯತೆ ಮತ್ತು ಸೃಜನಶೀಲತೆಯನ್ನು ಉತ್ತೇಜಿಸುವಲ್ಲಿ ಬೌದ್ಧಿಕ ಆಸ್ತಿಯ ಪಾತ್ರದ ಬಗ್ಗೆ ಜಾಗೃತಿ ಮೂಡಿಸುವ ಹಾಗೂ ಬೌದ್ಧಿಕ ಆಸ್ತಿಗಳಿಗೆ ಅಂತರಾಷ್ಟ್ರೀಯ ಮಾನ್ಯತೆ ತಂದುಕೊಡುವುದಾಗಿದೆ
ಈ ದಿನ ಸೃಜನಶೀಲತೆ ಮತ್ತು ನಾವೀನ್ಯತೆಯನ್ನು ಪ್ರೋತ್ಸಾಹಿಸುತ್ತದೆ, ಇದು ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ.
ಈ ಈ ದಿನದಂದು ಪ್ರಪಂಚದಾದ್ಯಂತ ವಿಚಾರ ಸಂಕಿರಣಗಳು, ಪ್ರದರ್ಶನಗಳು ಮತ್ತು ಸ್ಪರ್ಧೆಗಳು ಮುಂತಾದ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಕ್ರಿಕೆಟ್ ಎನ್ನುವುದು ಕೇವಲ ಅನುಭವದ ಆಟವಲ್ಲ, ಅದು ಪ್ರತಿಭೆಯ ಪ್ರದರ್ಶನ ಎಂಬುದನ್ನು 15 ವರ್ಷದ ವೈಭವ್ ಸೂರ್ಯವಂಶಿ (Vaibhav Sooryavanshi) ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ತಂಡದ ಬೌಲಿಂಗ್ ದಾಳಿಯನ್ನು ಪುಡಿ ಮಾಡಿದ ಸೂರ್ಯವಂಶಿ, ಐಪಿಎಲ್ ಇತಿಹಾಸ ಕಂಡ ಅತ್ಯಂತ ಸ್ಫೋಟಕ ಇನ್ನಿಂಗ್ಸ್‌ಗಳಲ್ಲಿ ಒಂದನ್ನು ಆಡಿ ಮುಗಿಸಿದ್ದಾರೆ. ಈ ಭರ್ಜರಿ ಇನಿಂಗ್ಸ್ನೊಂದಿಗೆ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಆ ದಾಖಲೆಗಳ ಮಾಹಿತಿ ಇಲ್ಲಿದೆ…
ಬೀದರ್, ಏಪ್ರಿಲ್ 26: ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುತ್ತಿದ್ದ ವಾಹನವನ್ನು ತಡೆದು ಅವುಗಳನ್ನು ಸ್ವತಃ ಶಾಸಕರೇ ರಕ್ಷಣೆ ಮಾಡಿರುವ ಘಟನೆ ಬಸವಕಲ್ಯಾಣ ತಾಲೂಕಿನ ಅಲಗೂಡ ಗ್ರಾಮದ ಸಮೀಪ ನಡೆದಿದೆ. ಬಸವಕಲ್ಯಾಣದಿಂದಾ ಅಲಗೂಡ ಚಿಟ್ಟಾ ಗ್ರಾಮದ ಮೂಲಕ ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ ಒಂದೆರಡಲ್ಲ ಬರೋಬ್ಬರಿ 23 ಗೋವುಗಳನ್ನು ಬಿಜೆಪಿ ಶಾಸಕ ಶರಣು ಸಲಗರ ರಕ್ಷಣೆ ಮಾಡಿದ್ದಾರೆ. ಮಂಠಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ರಕ್ಷಿಸಿದ ಗೋವುಗಳನ್ನು ಗೋಶಾಲೆಗೆ ರವಾನೆ ಮಾಡಲಾಗಿದೆ.
ಬೆಂಗಳೂರು (ಏ. 26): ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ದೆಹಲಿ ಕ್ಯಾಪಿಟಲ್ಸ್ (Delhi Capitals) ಮತ್ತು ಪಂಜಾಬ್ ಕಿಂಗ್ಸ್ ನಡುವೆ ನಡೆದ ಪಂದ್ಯದಲ್ಲಿ ರನ್ ಮಳೆಯೇ ಸುರಿಯಿತು. ಈ ಪಂದ್ಯದಲ್ಲಿ ಬ್ಯಾಟ್ಸ್‌ಮನ್‌ಗಳು ದಾಖಲೆ ಪುಸ್ತಕಕ್ಕೆ ಹಲವು ಪುಟ ಸೇರಿಸಿದರು. ಈ ಪಂದ್ಯದಲ್ಲಿ 529 ರನ್‌ಗಳು, 33 ಸಿಕ್ಸರ್‌ಗಳು ಮತ್ತು 49 ಬೌಂಡರಿಗಳು ಸಿಡಿದವು. ದೆಹಲಿಯ 264 ರನ್‌ಗಳ ಗುರಿಯನ್ನು ಕೇವಲ 18.5 ಓವರ್‌ಗಳಲ್ಲಿ ತಲುಪುವ ಮೂಲಕ ಪಂಜಾಬ್ ಕಿಂಗ್ಸ್ ಇತಿಹಾಸ ನಿರ್ಮಿಸಿತು. ಇದು ಐಪಿಎಲ್‌ನಲ್ಲಿ ಮಾತ್ರವಲ್ಲದೆ ವಿಶ್ವ ಟಿ20 ಕ್ರಿಕೆಟ್ ಇತಿಹಾಸದಲ್ಲಿಯೂ ಅತ್ಯಧಿಕ ಯಶಸ್ವಿ ರನ್-ಚೇಸ್ ಆಗಿದೆ. ಪಂಜಾಬ್ 2024 ರ ತನ್ನದೇ ಆದ 261 ರನ್‌ಗಳ (ಕೆಕೆಆರ್ ವಿರುದ್ಧ) ದಾಖಲೆಯನ್ನು ಮುರಿದು ಹೊಸ ದಾಖಲೆಯನ್ನು ಸ್ಥಾಪಿಸಿತು.
ಕೆಎಲ್ ರಾಹುಲ್ ಅಬ್ಬರ
ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಕೆ.ಎಲ್. ರಾಹುಲ್ ಅಜೇಯ 152 ರನ್ ಗಳಿಸಿ ಸಂಚಲನ ಸೃಷ್ಟಿಸಿದರು. ಐಪಿಎಲ್‌ನಲ್ಲಿ 150 ರನ್ ಗಳಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಐಪಿಎಲ್ ಇತಿಹಾಸದಲ್ಲಿ ಕ್ರಿಸ್ ಗೇಲ್ (175*) ಮತ್ತು ಬ್ರೆಂಡನ್ ಮೆಕಲಮ್ (158*) ನಂತರ ಮೂರನೇ ಅತ್ಯಧಿಕ ವೈಯಕ್ತಿಕ ಸ್ಕೋರ್ ಹೊಂದಿದ್ದಾರೆ.
ಗೇಲ್ ಶತಕಗಳ ಸಂಖ್ಯೆಗೆ ಸಮ
ಈ ಪಂದ್ಯದಲ್ಲಿ ಗಳಿಸಿದ ಶತಕವು ಕೆಎಲ್ ರಾಹುಲ್ ಅವರ ವೃತ್ತಿಜೀವನದ ಆರನೇ ಐಪಿಎಲ್ ಶತಕವಾಗಿದೆ. ಇದರೊಂದಿಗೆ, ಅವರು ಐಪಿಎಲ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ ಅವರ ದಾಖಲೆಯನ್ನು ಸರಿಗಟ್ಟಿದರು. ಈಗ, ವಿರಾಟ್ ಕೊಹ್ಲಿ (8) ಮತ್ತು ಜೋಸ್ ಬಟ್ಲರ್ (7) ಮಾತ್ರ ಅವರಿಗಿಂತ ಮುಂದಿದ್ದಾರೆ.
ಟಿ20ಯಲ್ಲಿ ಭಾರತೀಯರ ರಾಜನಾದ ರಾಹುಲ್
ಕೆಎಲ್ ರಾಹುಲ್ ಈಗ ಟಿ20 ಕ್ರಿಕೆಟ್‌ನಲ್ಲಿ (ಪುರುಷರ ಟಿ20) ಅತಿ ಹೆಚ್ಚು ವೈಯಕ್ತಿಕ ಸ್ಕೋರ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್ ಆಗಿದ್ದಾರೆ. ಅವರು ತಿಲಕ್ ವರ್ಮಾ ಅವರ ದಾಖಲೆಯನ್ನು (ಮೇಘಾಲಯ ವಿರುದ್ಧ 151 ರನ್) ಹಿಂದಿಕ್ಕಿದ್ದಾರೆ.
ಈ ಪಂದ್ಯದಲ್ಲಿ ಕೆಎಲ್ ರಾಹುಲ್ ಮತ್ತು ನಿತೀಶ್ ರಾಣಾ ನಡುವೆ 220 ರನ್‌ಗಳ ಬೃಹತ್ ಜೊತೆಯಾಟ ಕಂಡುಬಂದಿತು. ಇದು ಐಪಿಎಲ್ ಇತಿಹಾಸದಲ್ಲಿ ಎರಡನೇ ಅತ್ಯಧಿಕ ಪಾಲುದಾರಿಕೆಯಾಗಿದೆ. ಕೊಹ್ಲಿ ಮತ್ತು ಡಿವಿಲಿಯರ್ಸ್ (229 ರನ್‌ಗಳು) ಇನ್ನೂ ಈ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಹೊಂದಿದ್ದಾರೆ.
ಅತಿ ದೊಡ್ಡ ರನ್ ಚೇಸ್
ಪಂಜಾಬ್ ಕಿಂಗ್ಸ್ ತಂಡವು ಐಪಿಎಲ್‌ನಲ್ಲಿ ಮಾತ್ರವಲ್ಲದೆ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಚೇಸ್ ಮಾಡಿದ ದಾಖಲೆಯನ್ನು ಮತ್ತೊಮ್ಮೆ ಸ್ಥಾಪಿಸಿದೆ. ಈ ಹಿಂದೆ ಅವರು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 265 ರನ್‌ಗಳ ಗುರಿಯನ್ನು ಬೆನ್ನಟ್ಟಿ ಈ ದಾಖಲೆಯನ್ನು ಹೊಂದಿದ್ದರು. ಇದಕ್ಕೂ ಮೊದಲು, ಪಂಜಾಬ್ ಕಿಂಗ್ಸ್ ತಂಡದ ಅತ್ಯಧಿಕ ರನ್ ಚೇಸ್ 2025 ರಲ್ಲಿ ಕೆಕೆಆರ್ ವಿರುದ್ಧವಾಗಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ನಟ ಚೇತನ್ ಅಹಿಂಸಾ ಅವರು ಇತ್ತೀಚೆಗೆ ಡಾ. ರಾಜ್ಕುಮಾರ್ ಸಮಾಧಿ (Dr Rajkumar Samadhi) ಬಗ್ಗೆ ನೀಡಿದ ಹೇಳಿಕೆಯಿಂದ ವಿವಾದ ಸೃಷ್ಟಿ ಆಯಿತು. ಸಮಾಧಿ ನಿರ್ಮಾಣಕ್ಕೆ ಸರ್ಕಾರ ಎರಡೂವರೆ ಎಕರೆ ಜಾಗ ನೀಡಿದ್ದು ಸೂಕ್ತವಲ್ಲ ಎಂದು ಚೇತನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಅದಕ್ಕೆ ಡಾ. ರಾಜ್ಕುಮಾರ್ ಅಭಿಮಾನಿಗಳು, ಕನ್ನಡಪರ ಸಂಘಟನೆ ಕಾರ್ಯಕರ್ತರು ಖಂಡನೆ ವ್ಯಕ್ತಪಡಿಸಿದರು. ಚೇತನ್ ಅಹಿಂಸಾ (Chetan Kumar Ahimsa) ಕ್ಷಮೆ ಕೇಳಬೇಕು ಎಂದು ಎಲ್ಲರೂ ಒತ್ತಾಯಿಸಿದರು. ಆದರೆ ಚೇತನ್ ಅವರು ಕ್ಷಮೆ ಕೇಳುವಾಗ ಸುತ್ತಿ ಬಳಸಿ ಮಾತನಾಡಿದರು. ನೇರವಾಗಿ ಅವರು ಕ್ಷಮೆ ಕೇಳುವುದಕ್ಕೂ ಮುನ್ನ ತಮ್ಮ ಹೇಳಿಕೆಯನ್ನು ಸಮರ್ಥಿಸುವ ಪ್ರಯತ್ನ ಮಾಡಿದರು. ಅದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.
ಕೊಪ್ಪಳ, ಏಪ್ರಿಲ್ 26: ತುಂಗಭದ್ರಾ ಜಲಾಶಯ ಕ್ರಸ್ಟ್ ಗೇಟ್ ಅಳವಡಿಕೆ ಕಾರ್ಯ ನಿಗದಿತ ಸಮಯಕ್ಕೂ ಮೊದಲೇ ಪೂರ್ಣಗೊಂಡಿದೆ. ತಾಲೂಕಿನ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಡ್ಯಾಂ ನಿರ್ಮಾಣವಾಗಿ 8 ದಶಕಗಳ ನಂತರ 33 ಗೇಟ್ ಬದಲಾವಣೆ ಮಾಡಲಾಗಿದೆ. 2024ರ ಆಗಸ್ಟ್ 10ರಂದು ಜಲಾಶಯದ 19ನೇ ಗೇಟ್ ಕಿತ್ತು ಹೋಗಿತ್ತು. ತಜ್ಞರ ಸಲಹೆಯ ಮೇರೆಗೆ ಜಲಾಶಯದ ಎಲ್ಲಾ ಗೇಟ್ಗಳ ಬದಲಾವಣೆ ಮಾಡಲಾಗಿದೆ. ಟಿ.ಬಿ.ಡ್ಯಾಂನ 12 ಗೇಟ್ಗಳ ಇಳಿಸುವ, ಏರಿಸುವ ಪರೀಕ್ಷೆ ಪೂರ್ಣವಾಗಿದ್ದು, ಉಳಿದ ಗೇಟ್ಗಳ ಪರೀಕ್ಷೆ ಮಾಡಬೇಕಿದೆ. ಮೇ ಅಂತ್ಯಕ್ಕೆ ಗೇಟ್ ಅಳವಡಿಕೆ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿತ್ತು. ಆದರೆ ಇದೀಗ ಅವಧಿಗೂ ಮೊದಲೇ ಕಾಮಗಾರಿ ಮುಗಿದಿದ್ದರಿಂದ ರೈತರು ಸಂತಸಗೊಂಡಿದ್ದಾರೆ.
ವಾಷಿಂಗ್ಟನ್, ಏಪ್ರಿಲ್ 26: ಶ್ವೇತಭವನದಲ್ಲಿ ಪತ್ರಿಕಾಗೋಷ್ಠಿ ವೇಳೆ ಗುಂಡಿನ ದಾಳಿ ನಡೆಸಿದ್ದ ಆರೋಪಿಯ ಫೋಟೊವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಿಡುಗಡೆ ಮಾಡಿದ್ದಾರೆ. ನೂರಾರು ಅತಿಥಿಗಳು ಸೇರಿದ್ದ ಹೋಟೆಲ್‌ನ ಬಾಲ್ ರೂಂನ ಹೊರಗಿನ ಸ್ಕ್ರೀನಿಂಗ್ ಪ್ರದೇಶದಲ್ಲಿ ಬಂದೂಕುಧಾರಿಯನ್ನು ಬಂಧಿಸಲಾಗಿದೆ. ಟ್ರಂಪ್ ಅವರನ್ನು ವೇದಿಕೆಯಿಂದ ಕೆಳಗಿಳಿಸಲಾಯಿತು. ಶ್ವೇತಭವನದ ವರದಿಗಾರರ ಭೋಜನ ಕೂಟದಿಂದ ಶಂಕಿತ ಶೂಟರ್‌ನ ಮೊದಲ ಚಿತ್ರ ಹೊರಬಂದಿದ್ದು, ವಾಷಿಂಗ್ಟನ್ ಹಿಲ್ಟನ್‌ನ ಮೆಟ್ಟಿಲುಗಳ ಬಳಿ ಕಾನೂನು ಜಾರಿ ಸಂಸ್ಥೆಗಳು ಆತನನ್ನು ಬಂಧಿಸಿರುವುದನ್ನು ತೋರಿಸುತ್ತದೆ. ಶಂಕಿತ ಶೂಟರ್ ಅನ್ನು ಕ್ಯಾಲಿಫೋರ್ನಿಯಾದ ಟೊರೆನ್ಸ್‌ನ 31 ವರ್ಷದ ಕೋಲ್ ತೋಮಸ್ ಅಲೆನ್ ಎಂದು ಗುರುತಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವೇಗಿ ಲುಂಗಿ ಎನ್ಗಿಡಿ ಅವರು ಈಗ ಚೇತರಿಸಿಕೊಂಡಿದ್ದಾರೆ. ಈ ಚೇತರಿಕೆಯ ಬೆನ್ನಲ್ಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ಅವರು ಶನಿವಾರ ರಾತ್ರಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹೋಟೆಲ್‌ಗೆ ಮರಳಿದ್ದಾರೆ ಎಂದು ವರದಿಯಾಗಿದೆ.
ಘಟನೆಯ ಹಿನ್ನೆಲೆ:
ಶನಿವಾರ ಸಂಜೆ ನಡೆದ ಐಪಿಎಲ್ನ 35ನೇ ಪಂದ್ಯದ ವೇಳೆ ಪಂಜಾಬ್ ಕಿಂಗ್ಸ್ ಬ್ಯಾಟಿಂಗ್ ಮಾಡುತ್ತಿದ್ದಾಗ, ಮೂರನೇ ಓವರ್‌ನಲ್ಲಿ ಮಿಡ್-ಆಫ್‌ನಲ್ಲಿ ಕ್ಯಾಚ್ ಹಿಡಿಯಲು ಪ್ರಯತ್ನಿಸಿದ ಲುಂಗಿ ಎನ್ಗಿಡಿ ಅವರು ಸಮತೋಲನ ತಪ್ಪಿ ಹಿಮ್ಮುಖವಾಗಿ ಬಿದಿದ್ದರು. ಈ ವೇಳೆ ಅವರ ಕುತ್ತಿಗೆ ಮತ್ತು ತಲೆಯ ಹಿಂಭಾಗ ನೆಲಕ್ಕೆ ಬಲವಾಗಿ ಬಡಿದಿತ್ತು. ಮೈದಾನದಲ್ಲೇ ಪ್ರಥಮ ಚಿಕಿತ್ಸೆ ನೀಡಿದರೂ ಚೇತರಿಸಿಕೊಳ್ಳದ ಕಾರಣ, ಅವರನ್ನು ತಕ್ಷಣವೇ ಸ್ಟ್ರೆಚರ್ ಮೂಲಕ ಮೈದಾನದಿಂದ ಹೊರಗೆ ಕರೆದೊಯ್ಯಲಾಗಿತ್ತು.
ದೆಹಲಿ ಪೊಲೀಸರ ಸಾಹಸ:
ಪರಿಸ್ಥಿತಿಯ ಗಂಭೀರತೆಯನ್ನು ಅರಿತ ದೆಹಲಿ ಸಂಚಾರಿ ಪೊಲೀಸರು, ಕ್ರೀಡಾಂಗಣದಿಂದ ಬಿಎಲ್‌ಕೆ-ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯವರೆಗೆ ‘ಗ್ರೀನ್ ಕಾರಿಡಾರ್’ ನಿರ್ಮಿಸಿದ್ದರು. ಇದರಿಂದಾಗಿ ದಟ್ಟಣೆಯ ಸಮಯದಲ್ಲೂ ಕೇವಲ 11 ನಿಮಿಷಗಳಲ್ಲಿ ಅಂಬ್ಯುಲೆನ್ಸ್ ಆಸ್ಪತ್ರೆಯನ್ನು ತಲುಪಲು ಸಾಧ್ಯವಾಯಿತು.
ಆರೋಗ್ಯ ಸ್ಥಿತಿ:
ಆಸ್ಪತ್ರೆಯಲ್ಲಿ ಲುಂಗಿ ಎನ್ಗಿಡಿ ಅವರಿಗೆ ಸಿಟಿ ಸ್ಕ್ಯಾನ್ (CT Scan) ಸೇರಿದಂತೆ ಹಲವು ಪರೀಕ್ಷೆಗಳನ್ನು ನಡೆಸಲಾಗಿದ್ದು, ಅದೃಷ್ಟವಶಾತ್, ಅವರ ಬೆನ್ನುಮೂಳೆ ಅಥವಾ ಮೆದುಳಿಗೆ ಯಾವುದೇ ಗಂಭೀರ ಹಾನಿಯಾಗಿಲ್ಲ ಎಂದು ವೈದ್ಯರು ಖಚಿತಪಡಿಸಿದ್ದಾರೆ.
ನ್ಯೂರೋ ಸರ್ಜನ್ ಮೇಲ್ವಿಚಾರಣೆಯಲ್ಲಿ ಕೆಲವು ಗಂಟೆಗಳ ಕಾಲ ನಿಗಾದಲ್ಲಿ ಇರಿಸಿದ ನಂತರ, ಅವರ ಆರೋಗ್ಯ ಸ್ಥಿರವಾಗಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ವೈದ್ಯರು ಡಿಸ್ಚಾರ್ಚ್ಗೆ ಸೂಚಿಸಿದ್ದಾರೆ. ಅದರಂತೆ ಇದೀಗ ಲುಂಗಿ ಎನ್ಗಿಡಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹೋಟೆಲ್‌ಗೆ ಮರಳಿದ್ದಾರೆ. ಇದಾಗ್ಯೂ ಅವರಿಗೆ ವೈದ್ಯರು ಹೆಚ್ಚಿನ ವಿಶ್ರಾಂತಿ ಸೂಚಿಸಿದ್ದಾರೆ.
ಇತ್ತ ವೈದ್ಯರು ವಿಶ್ರಾಂತಿ ಸೂಚಿಸಿರುವ ಕಾರಣ ಲುಂಗಿ ಎನ್ಗಿಡಿ ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿಲ್ಲ. ಅವರ ಬದಲಿಗೆ ಡೆಲ್ಲಿ ಕ್ಯಾಪಿಟಲ್ಸ್ ಪರ ಮಿಚೆಲ್ ಸ್ಟಾರ್ಕ್ ಕಣಕ್ಕಿಳಿಯಲಿದ್ದಾರೆ. ಸ್ಟಾರ್ಕ್ ಐಪಿಎಲ್ನ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಿದ್ದರು. ಇದೀಗ ಸಂಪೂರ್ಣ ಫಿಟ್ನೆಸ್ನೊಂದಿಗೆ ಮರಳಿರುವ ಸ್ಟಾರ್ಕ್ ಮುಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿಯುವುದು ಖಚಿತ ಎಂದೇ ಹೇಳಬಹುದು.
ಪುಣೆ, ಏಪ್ರಿಲ್ 26: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಗರ್ಭಿಣಿಯೊಬ್ಬರಿಗೆ ಹಠಾತ್ತನೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಸ್ಥಳೀಯರ ಸಹಾಯದಿಂದ ವೈದ್ಯರು ರಸ್ತೆಯಲ್ಲೇ ಹೆರಿಗೆ ಮಾಡಿಸಿರುವ ಘಟನೆ ಪುಣೆಯಲ್ಲಿ ನಡೆದಿದೆ. ಮಹಿಳೆ ನೋವಿನಿಂದ ನರಳುತ್ತಿದ್ದರು, ಸುತ್ತಮುತ್ತಲಿನ ಪರಿಸ್ಥಿತಿ ಒಂದು ಕ್ಷಣ ಸ್ತಬ್ಧವಾಯಿತು.ಮಹಿಳೆಯರು ಸುತ್ತುವರೆದು ತಮ್ಮ ಸೀರೆ ಹಾಗೂ ದುಪಟ್ಟಾವನ್ನೇ ಪರದೆಯಂತೆ ಹಿಡಿದು ಸಹಾಯ ಮಾಡಿದರು. ಪುರುಷರು ವಾಹನಗಳ ಸಂಚಾರವನ್ನು ತಡೆದು ರಸ್ತೆಯಲ್ಲಿ ದಾರಿ ಮಾಡಿಕೊಟ್ಟರು. ಅಲ್ಲಿ ಯಾರು ಯಾರಿಗೆ ಸಂಬಂಧಿಕರಲ್ಲದಿದ್ದರೂ, ಎಲ್ಲರ ಉದ್ದೇಶ ಆ ತಾಯಿ ಮತ್ತು ಮಗುವನ್ನು ರಕ್ಷಿಸುವುದೊಂದೇ ಆಗಿತ್ತು.
ಅದೃಷ್ಟವಶಾತ್, ಹತ್ತಿರದಲ್ಲೇ ಇದ್ದ ವೈದ್ಯರೊಬ್ಬರು ವಿಷಯ ತಿಳಿದು ಸ್ಥಳಕ್ಕೆ ಓಡಿ ಬಂದಿದ್ದರು. ಸುಸಜ್ಜಿತ ವೈದ್ಯಕೀಯ ಉಪಕರಣಗಳಿಲ್ಲದಿದ್ದರೂ, ಲಭ್ಯವಿದ್ದ ಸಂಪನ್ಮೂಲಗಳನ್ನು ಬಳಸಿಕೊಂಡು ಅತ್ಯಂತ ಜಾಗರೂಕತೆಯಿಂದ ರಸ್ತೆಯ ಮೇಲೆಯೇ ಹೆರಿಗೆ ಮಾಡಿಸಿದರು. ಸ್ವಲ್ಪ ಸಮಯದ ನಂತರ, ಆ ರಸ್ತೆಯ ಸದ್ದನ್ನೆಲ್ಲಾ ಮೀರಿಸಿ ಪುಟ್ಟ ಮಗುವಿನ ಅಳು ಕೇಳಿಸಿತ್ತು. ವೈದ್ಯರ ಸಮಯಪ್ರಜ್ಞೆ ಮತ್ತು ಜನರ ಸಹಕಾರದಿಂದ ತಾಯಿ ಮತ್ತು ಮಗು ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿ ಸುರಕ್ಷಿತವಾಗಿದ್ದಾರೆ. ನಂತರ ಬಂದ ಆಂಬ್ಯುಲೆನ್ಸ್ ಮೂಲಕ ಅವರನ್ನು ಆಸ್ಪತ್ರೆಗೆ ಕಳುಹಿಸಲಾಯಿತು.
ಶಾಲಿವಾಹನ ಶಕೆ 1949ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ವೈಶಾಖ, ಸೌರ ಮಾಸ : ಮೇಷ, ಮಹಾನಕ್ಷತ್ರ : ಅಶ್ವಿನೀ, ವಾರ : ಭಾನು, ಪಕ್ಷ : ಶುಕ್ಲ, ತಿಥಿ : ನವಮೀ, ನಿತ್ಯನಕ್ಷತ್ರ : ಪೂರ್ವಾಫಲ್ಗುಣೀ, ಯೋಗ : ಧೃತಿ, ಕರಣ : ಬವ, ಸೂರ್ಯೋದಯ – 06 – 05 am, ಸೂರ್ಯಾಸ್ತ – 06 – 38 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 17:05 – 18:39, ಯಮಗಂಡ ಕಾಲ 12:22 – 13:56, ಗುಳಿಕ ಕಾಲ 15:30 – 17:05
ಮೇಷ ರಾಶಿ :
ಯೋಜಿಸಲಾದ ಕೆಲಸಗಳು ನಿಧಾನವಾಗಿ ಪೂರ್ಣಗೊಳ್ಳುತ್ತವೆ. ಆದಾಯ ಗಳಿಕೆಯ ಪ್ರಯತ್ನಗಳು ಯಶಸ್ವಿಯಾಗುತ್ತವೆ. ಉದ್ಯೋಗ ಬದಲಾವಣೆಯ ಪ್ರಯತ್ನಗಳಿಗೆ ಸಕಾರಾತ್ಮಕ ಪ್ರತಿಕ್ರಿಯೆ ಸಿಗುತ್ತದೆ. ಜಗಳದಲ್ಲಿ ಮಧ್ಯಪ್ರವೇಶಿಸಿ ಸಮಾಧಾನ ಮಾಡುವಿರಿ. ಆಪ್ತರಿಗೆ ಉಡುಗೊರೆ ಕೊಡಲಿದ್ದೀರಿ. ಅಕಾರಣವಾಗಿ ಬರುವ ಕೋಪವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವಿರಿ. ಸಣ್ಣ ವಿಚಾರಕ್ಕೆ ಸುಮ್ಮನೇ ಗದ್ದಲ ಮಾಡಿಕೊಳ್ಳುವಿರಿ. ಯಾವುದೋ ಗಹನವಾದ ಆಲೋಚನೆಯಲ್ಲಿ ನೀವು ಮುಳುಗಿರುವಿರಿ.
ವೃಷಭ ರಾಶಿ :
ವ್ಯಾಪಾರದಲ್ಲಿ ನಷ್ಟಕ್ಕೆ ಪಾಲುದಾರರನ್ನು ತೋರಿಸುವುದು ಬೇಡ. ಅದನ್ನು ಗಣನೆಗೆ ತೆಗೆದುಕೊಳ್ಳದೇ ಮುಂದುವರಿಯುವಿರಿ. ಆರ್ಥಿಕ ಪರಿಸ್ಥಿತಿ ಸ್ಥಿರವಾಗಿರುತ್ತದೆ. ಹೊಸ ಉದ್ಯೋಗ ಪ್ರಯತ್ನಗಳು ಸಕಾರಾತ್ಮಕವಾಗಿರುತ್ತವೆ. ವಿವಾಹ ಪ್ರಯತ್ನಗಳು ಯಶಸ್ವಿಯಾಗುತ್ತವೆ. ಬಹಳ ದಿನಗಳಿಂದ ಅಡಗಿದ್ದ ದುಃಖವು ಇಂದು ಪ್ರಕಟವಾದೀತು. ಅತಿಯಾದ ಸಂತೋಷದ ಕ್ಷಣವು ನಿಮ್ಮ ಪಾಲಿಗೆ ಇರಲಿದೆ. ದೀರ್ಘಕಾಲದ ಸ್ನೇಹವು ಹೊಸದಾಗಿ ಆರಂಭವಾಗಲಿದೆ.
ಮಿಥುನ ರಾಶಿ :
ಮನೆಯ ವಸ್ತುಗಳನ್ನು ಇನ್ನೊಬ್ಬರಿಗೆ ಕೊಡಲು ಇಚ್ಛಿಸುವುದಿಲ್ಲ. ವೈಯಕ್ತಿಕ ಸಮಸ್ಯೆಗಳಿಂದ ಪರಿಹಾರ ಪಡೆಯುತ್ತೀರಿ. ವೃತ್ತಿ ಮತ್ತು ಉದ್ಯೋಗಗಳಲ್ಲಿ ಪ್ರಾಮುಖ್ಯತೆ ಹೆಚ್ಚಾಗುತ್ತದೆ. ವ್ಯವಹಾರದಲ್ಲಿ ಸಣ್ಣ ಲಾಭಗಳ ಸಾಧ್ಯತೆ ಇದೆ. ನಟರಿಗೆ ಅವಕಾಶವು ಸಿಕ್ಕೂ ಸಿಗದಂತೆ ಆಗಬಹುದು. ಎಲ್ಲ ಸನ್ನಿವೇಶಕ್ಕೂ ಒಂದೇ ಪರಿಹಾರವು ಇರದು. ಮನೋರಥವನ್ನು ಈಡೇರಿಸಿಕೊಳ್ಳುವುದು ನಿಮಗೆ ಕಷ್ಟವಾಗುವುದು.
ಕರ್ಕಾಟಕ ರಾಶಿ :
ಪಾಲುದಾರಿಕೆಯನ್ನು ಪಡೆಯುವ ಮೊದಲು ಸಾಧ್ಯಾಸಾಧ್ಯತೆಗಳ ಬಗ್ಗೆ ಗಮನವಿರಲಿ. ವ್ಯವಹಾರಗಳು ತೃಪ್ತಿಕರವಾಗಿ ಮುಂದುವರಿಯುತ್ತದೆ. ಆದಾಯ ಗಮನಾರ್ಹವಾಗಿ ಹೆಚ್ಚಾಗುವ ಸಾಧ್ಯತೆಯಿದೆ. ನಿಮ್ಮ ಉದ್ಯೋಗಕ್ಕೆ ಯಾರಿಂದಲಾದರೂ ಹೂಡಿಕೆಯನ್ನು ಮಾಡಿಸಿಕೊಳ್ಳುವಿರಿ. ಪ್ರಭಾವೀ ವ್ಯಕ್ತಿಗಳಿಂದ ನಿಮಗೆ ವಂಚನೆಯಾಗಿದೆ ಎಂದನಿಸಬಹುದು. ರಸ್ತೆಯಲ್ಲಿ ಸಂಚರಿಸುವಾಗ ಎಚ್ಚರ.
ಸಿಂಹ ರಾಶಿ :
ಕಛೇರಿಯ ಕೆಲಸಗಳ ಕಡೆ ವೈಯಕ್ತಿಕ ವಿಚಾರದ ಕಡೆ ಗಮನ ನೀಡಿಲಾಗದು. ಜೀವನವು ಸುಗಮವಾಗಿ ಸಾಗುತ್ತದೆ. ಹಣಕಾಸಿನ ವ್ಯವಹಾರಗಳು ಯಶಸ್ವಿಯಾಗಿ ಮತ್ತು ತೃಪ್ತಿಕರವಾಗಿ ಪೂರ್ಣಗೊಳ್ಳುತ್ತವೆ. ನಿರುದ್ಯೋಗಿಗಳ ಪ್ರಯತ್ನಗಳಿಗೆ ಸಕಾರಾತ್ಮಕ ಪ್ರತಿಕ್ರಿಯೆ ಸಿಗುತ್ತದೆ. ಕೆಲವು ವಿಚಾರಗಳಿಗೆ ಮತ್ತೆ ಮತ್ತೆ ಹೇಳಿಸಿಕೊಳ್ಳಬೇಕಾದೀತು. ಕಛೇರಿಯ ಕಾರ್ಯವನ್ನು ಮನೆಯಲ್ಲಿ ಇದ್ದು ಮಾಡಬೇಕಾಗಬಹುದು.
ಕನ್ಯಾ ರಾಶಿ :
ಆರ್ಥಿಕವಾಗಿ ನಿಮ್ಮ ನಡೆಯು ಅರ್ಥವಾಗದೇ ಇರುವುದು. ಹಿರಿಯರಿಗೆ ಎದುರು ಮಾತನಾಡಿ ಅನಂತರ ಪಶ್ಚಾತ್ತಾಪಪಡುವಿರಿ. ಆದಾಯ ನಿರೀಕ್ಷೆಯಂತೆ ಹೆಚ್ಚಾಗುವ ಸಾಧ್ಯತೆಯಿದೆ. ನೀವು ಕೆಲಸದಲ್ಲಿ ಅಧಿಕಾರವನ್ನು ಪಡೆಯುತ್ತೀರಿ. ಆರೋಗ್ಯ ಸ್ಥಿರವಾಗಿರುತ್ತದೆ. ಯಾರನ್ನಾದರೂ ದೂಷಿಸಿ ಅವರ ವಿರೋಧವನ್ನು ಕಟ್ಟಿಕೊಳ್ಳುವಿರಿ. ಮಾತುಗಾರರು ಎಂದಿನ ವಾಚಾಳಿತನವನ್ನು ಕಡಿಮೆಮಾಡುವರು. ಸಿಟ್ಟಿನ ಸ್ವಭಾವವನ್ನು ಬದಲಿಸಿಕೊಳ್ಳುವುದು ಸೂಕ್ತ.
ತುಲಾ ರಾಶಿ :
ಪ್ರಭಾವಿ ಜನರ ಭೇಟಿಯಿಂದ ಉದ್ಯೋಗದ ಬದಲಾವಣೆ ಸಾಧ್ಯವಾಗುವುದು. ಭೂಮಿಯ ಲಾಭಕ್ಕಾಗಿ ಹೆಚ್ಚು ಓಡಾಟ ಮಾಡಬೇಕಾಗುವುದು. ಇಡೀ ದಿನ ತೃಪ್ತಿಕರವಾಗಿ ಕಳೆಯುತ್ತದೆ. ಆದರೆ ನಿಮ್ಮ ವೃತ್ತಿ ಮತ್ತು ಉದ್ಯೋಗದಲ್ಲಿ ಸ್ವಲ್ಪ ಕೆಲಸದ ಒತ್ತಡ ಇರುತ್ತದೆ. ವ್ಯವಹಾರಗಳು ನಿರೀಕ್ಷಿತ ಲಾಭವನ್ನು ಗಳಿಸುತ್ತವೆ. ಸ್ನೇಹತರ ಜೊತೆ ಮೋಜಿನಲ್ಲಿ ದಿನವನ್ನು ಮುಗಿಸುವಿರಿ. ಎಲ್ಲವನ್ನೂ ಒಮ್ಮೆಲೇ ಪಡೆಯಬೇಕು ಎಂಬ ಮನೋಭಾವವು ಸದ್ಯಕ್ಕೆ ಬೇಡ. ಅಪರಿಚಿತರ ಜೊತೆ ವಿವಾದ ಬೇಡ.
ವೃಶ್ಚಿಕ ರಾಶಿ :
ಇಂದು ಅನಿರೀಕ್ಷಿತವಾಗಿ ಆದಾಯ ಸ್ವಲ್ಪ ಹೆಚ್ಚಾಗುವ ಸಾಧ್ಯತೆ ಇದೆ. ಆರೋಗ್ಯಕ್ಕೆ ಯಾವುದೇ ಕೊರತೆ ಇಲ್ಲ. ವಿದೇಶಿ ಉದ್ಯೋಗಗಳಿಗೆ ಅವಕಾಶಗಳಿವೆ. ನಿಮ್ಮ ವಿವಾಹ ಪ್ರಯತ್ನಗಳಲ್ಲಿ ಶುಭಸುದ್ದಿ ಸಿಗುತ್ತದೆ. ಮಕ್ಕಳು ತಮ್ಮ ಅಧ್ಯಯನದಲ್ಲಿ ಪ್ರಗತಿ ಸಾಧಿಸುತ್ತಾರೆ. ಮನಃಶಾಂತಿಯು ಇರುವ ಕಾರಣ ಯಾವುದೇ ಉದ್ವೇಗಕ್ಕೆ ಒಳಗಾಗುವುದಿಲ್ಲ. ಔದಾಸೀನ್ಯದಿಂದ ವ್ಯಾಪಾರದಲ್ಲಿ ನಷ್ಟವಾಗಲಿದೆ. ಮಿತ್ರರಿಂದ ಸಿಗಬೇಕಾದ ಹಣಕ್ಕೆ ಕತ್ತರಿ ಬೀಳುವ ಸಾಧ್ಯತೆ ಇದೆ.
ಧನು ರಾಶಿ :
ನಿಮಗೆ ಆಪ್ತರ ಕಷ್ಟಗಳಗೆ ಸ್ಪಂದಿಸಲು ಆಗದೇ ಇರಬಹುದು. ವಿವಾಹ ಯೋಗವನ್ನು ನೀವು ಒಪ್ಪಿಕೊಳ್ಳವುದು ಅನಿವಾರ್ಯ. ಯಾರಿಂದಲೂ ಧನಸಹಾಯವನ್ನು ಪಡೆಯಬಾರದು ಎಂಬ ಸಂಕಲ್ಪ ನಿಮ್ಮದಾಗಿರುವುದು. ಕೆಲಸದ ಜೀವನವು ಹೊಸ ಎತ್ತರವನ್ನು ಪಡೆಯುತ್ತದೆ. ಆದಾಯ ಗಮನಾರ್ಹವಾಗಿ ಹೆಚ್ಚಾಗುವ ಸಾಧ್ಯತೆಯಿದೆ. ಉದ್ಯಮದ ಕಾರಣ ಇರುವ ಸ್ಥಳದಿಂದ ದೂರ ಹೋಗಬೇಕಾಗುವದು. ಸುಳ್ಳಯ ನಿಮ್ಮ ಕೆಲಸವನ್ನು ಮಾಡಿಸಿಕೊಳ್ಳುವಿರಿ.
ಮಕರ ರಾಶಿ :
ವೃತ್ತಿಕ್ಷೇತ್ರದಲ್ಲಿ ಸಹೋದ್ಯೋಗಿಗಳಿಂದ ತೊಂದರೆ ಬರಬಹುದು. ಸಲ್ಲದ ಅಪವಾದವನ್ನು ಒಪ್ಪಿಕೊಳ್ಳಲಾರಿರಿ. ನೀವು ಕೈಗೊಳ್ಳುವ ಯಾವುದೇ ಪ್ರಯತ್ನವು ಖಂಡಿತವಾಗಿಯೂ ಯಶಸ್ವಿಯಾಗುತ್ತದೆ. ಆದಾಯ ಹೆಚ್ಚಾಗಲಿದೆ. ವ್ಯರ್ಥ ಖರ್ಚು ಹೆಚ್ಚಾಗುವ ಸಾಧ್ಯತೆಯೂ ಇದೆ. ನಿರುದ್ಯೋಗಿಗಳಿಗೆ ವಿದೇಶದಿಂದ ಅಪೇಕ್ಷಿತ ಮಾಹಿತಿ ಸಿಗಲಿದೆ. ಸಹೋದ್ಯೋಗಿಗಳ ಜೊತೆ ನಿಮ್ಮ ಮಾತು ಅಸಹವಾಗಿರುವುದು. ವಿವಾದದಲ್ಲಿರುವ ಆಸ್ತಿಯಿಂದ ಮಾರಾಟವು ನಿಧಾನವಾಗುವುದು.
ಕುಂಭ ರಾಶಿ :
ಹಿತಶತ್ರುಗಳಿಂದ ನಿಮಗೆ ಹಿನ್ನಡೆಯಾಗಲಿದೆ. ನಿಮ್ಮ ವಸ್ತುಗಳ ಕಳ್ಳತನ ಆಗಬಹುದು. ಆರೋಗ್ಯದ ಬಗ್ಗೆ ಸ್ವಲ್ಪ ಗಮನ ಹರಿಸುವುದು ಅಗತ್ಯ. ಕೆಲಸದ ಜೀವನವು ಸಕಾರಾತ್ಮಕವಾಗಿರುತ್ತದೆ. ವೃತ್ತಿಪರ ಜೀವನ ತೃಪ್ತಿಕರವಾಗಿ ಮುಂದುವರಿಯುತ್ತದೆ. ನಿಮ್ಮನ್ನು ಪ್ರೀತಿಸುವವರಿಗೆ ಸಮಯವನ್ನು ಕೊಡಿ. ಹಣವನ್ನು ಅನ್ಯ ಕಾರ್ಯಕ್ಕೆ ಬಳಸುವಿರಿ. ಕಲಾವಿದರು ಅವಕಾಶದಿಂದ ವಂಚಿತರಾಗಬೇಕಾಗುವುದು. ಇಂದು ನಿಮಗೆ ಸಾಮಾಜಿಕ ಕಾರ್ಯಗಳಿಗೆ ಪ್ರೇರಣೆ ಸಿಗಬಹುದು.
ಮೀನ ರಾಶಿ :
ಇಂದು ವಿಶೇಷ ದ್ರವ್ಯ ಲಾಭದಿಂದ ಸಂತಸವು ಇರಲಿದೆ. ಗೊಂದಲಗಳಿಂದ ನಿಮ್ಮ ಕಾರ್ಯವು ವೇಗವನ್ನು ಕಳೆದುಕೊಳ್ಳುವುದು. ಉದ್ಯೋಗದಲ್ಲಿ ಒಂದು ಹೆಜ್ಜೆ ಮೇಲಕ್ಕೆ ಸಾಗುವ ಅವಕಾಶ ಸಿಗುತ್ತದೆ. ವೃತ್ತಿ ಮತ್ತು ವ್ಯವಹಾರಗಳು ಲಾಭದಾಯಕವಾಗಿ ಮುಂದುವರಿಯುತ್ತವೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಪ್ರದರ್ಶನವನ್ನು ನೀಡುವರು. ಬಂಧುಗಳ ವಿವಾಹದ ಕಾರ್ಯಕ್ಕೆ ಓಡಾಟ ಮಾಡಬೇಕಾದೀತು. ಇಂದು ಒಂದಿಷ್ಟು ಆಯಾಸ ಬಿಟ್ಟರೆ, ಮತ್ತೇನೂ ಆಗದು.