ದೇವರಿಗೆ ಥ್ಯಾಂಕ್ಸ್; ಕ್ಯಾನ್ಸರ್ ಗೆದ್ದು ಬಂದಿದ್ದಾಗಿ ಘೋಷಿಸಿದ ಇಸ್ರೇಲ್ ಪ್ರಧಾನಿ ನೆತನ್ಯಾಹು – Kannada News | Israeli PM Benjamin Netanyahu treated for early stage prostate cancer
ನವದೆಹಲಿ, ಏಪ್ರಿಲ್ 24: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಪ್ರಾಸ್ಟೇಟ್ ಕ್ಯಾನ್ಸರ್ಗೆ ತುತ್ತಾಗಿದ್ದರು ಎಂಬ ವಿಷಯ ಹೊರಬಿದ್ದಿದೆ. ಆದರೆ, ಅವರು ಈ ವಿಷಯವನ್ನು ಗುಟ್ಟಾಗಿಟ್ಟಿದ್ದರು. ಚಿಕಿತ್ಸೆ ಪಡೆದು ಕ್ಯಾನ್ಸರ್ನಿಂದ ಸಂಪೂರ್ಣವಾಗಿ ಗುಣಮುಖರಾಗಿರುವ ಅವರು ಈ ವಿಷಯವನ್ನು ಖುದ್ದಾಗಿ ಬಹಿರಂಗಪಡಿಸಿದ್ದಾರೆ. ಎಕ್ಸ್ನಲ್ಲಿನ ಪೋಸ್ಟ್‌ನಲ್ಲಿ ಅವರು ತಮ್ಮ ಪ್ರಾಸ್ಟೇಟ್ ಕ್ಯಾನ್ಸರ್ಗೆ ಸಂಬಂಧಿಸಿದ ಸಣ್ಣ ವೈದ್ಯಕೀಯ ಸಮಸ್ಯೆಯನ್ನು ಅನುಭವಿಸಿದ್ದಾಗಿ ಹೇಳಿಕೊಂಡಿದ್ದಾರೆ. ಈಗ ಸಂಪೂರ್ಣವಾಗಿ ಚಿಕಿತ್ಸೆ ನೀಡಲಾಗಿದೆ. ನಾನು ಕ್ಯಾನ್ಸರ್ ಅನ್ನು ಜಯಿಸಿದ್ದೇನೆ. ದೇವರಿಗೆ ಧನ್ಯವಾದಗಳು ಎಂದು ನೆತನ್ಯಾಹು ಪೋಸ್ಟ್…