ಬೆಂಗಳೂರು: ನಡುರಸ್ತೆಯಲ್ಲೇ ಪೊಲೀಸರೆದುರೇ ಯುವಕನಿಗೆ ಯದ್ವಾತದ್ವ ಹೊಡೆದ ಹುಡುಗಿಯರು! ವಿಡಿಯೋ ವೈರಲ್ – Kannada News | Viral Video: Two Young Women Thrash Youth in the Middle of Koramangala Road Over Pub Dispute
ಬೆಂಗಳೂರು, ಏಪ್ರಿಲ್ 24: ಸಿಲಿಕಾನ್ ಸಿಟಿ ಬೆಂಗಳೂರಿನ ಕೋರಮಂಗಲದಲ್ಲಿ ಹೈಡ್ರಾಮಾವೊಂದು ನಡೆದಿದೆ. ಯುವಕನೊಬ್ಬ ತಮಗೆ ಕಿರಿಕಿರಿ ನೀಡಿದ್ದಾನೆ ಎಂದು ಆರೋಪಿಸಿ ಇಬ್ಬರು ಯುವತಿಯರು ಆತನಿಗೆ ನಡುರಸ್ತೆಯಲ್ಲೇ ಪೊಲೀಸರೆದುರೇ ಮನಬಂದಂತೆ ಹೊಡೆದ ಘಟನೆ ಬೆಳಕಿಗೆ ಬಂದಿದೆ. ಪಬ್‌ವೊಂದರ ಒಳಗೆ ಯುವಕ ತಮಗೆ ತೊಂದರೆ ನೀಡಿದ್ದಾನೆ ಎಂದು ಆಕ್ರೋಶಗೊಂಡ ಯುವತಿಯರು, ಆತನನ್ನು ರಸ್ತೆಗೆ ಎಳೆದು ತಂದು ಹಲ್ಲೆ ಮಾಡಿದ್ದಾರೆ. ಸ್ಥಳದಲ್ಲಿದ್ದ ಪೊಲೀಸರು ಯುವತಿಯರನ್ನು ತಡೆಯಲು ಪ್ರಯತ್ನಿಸಿ, ‘ಹೊಡೆಯಬೇಡಿ, ಠಾಣೆಗೆ ಬಂದು ದೂರು ನೀಡಿ’ ಎಂದು ಎಷ್ಟೇ ಮನವಿ ಮಾಡಿದರೂ ಕೇಳದ…