Is Sugarcane Juice Bad for You? When to Skip This Summer DrinkImage Credit source: Getty Images
ಬೇಸಿಗೆ ಕಾಲದಲ್ಲಿ ನಾನಾ ರೀತಿಯ ಭಕ್ಷ್ಯಗಳ ಸೇವನೆಗಿಂತ ದ್ರವರೂಪದ ಆಹಾರವೇ ಬೆಸ್ಟ್ ಎನಿಸುತ್ತದೆ. ಹಾಗಾಗಿ ಎಳನೀರು, ಕಬ್ಬಿನ ಜ್ಯೂಸ್ (Sugarcane Juice) ಹೀಗೆ ವಿವಿಧ ರೀತಿಯ ಆರೋಗ್ಯಕ್ಕೆ ಉತ್ತಮವಾದ ಪಾನೀಯಗಳನ್ನು ಸೇವನೆ ಮಾಡುವುದು ಸಾಮಾನ್ಯ. ಇವು ದೇಹಕ್ಕೆ ತಂಪು ನೀಡುವುದರಿಂದ ಜನ ಹೆಚ್ಚೆಚ್ಚು ಸೇವನೆ ಮಾಡುತ್ತಾರೆ. ಆದರೆ ನಿಮಗೆ ಗೊತ್ತಾ… ಶುಗರ್ ಕೆನ್ ಜ್ಯೂಸ್ ಎಲ್ಲರಿಗೂ ಒಳ್ಳೆಯದಲ್ಲ. ಹೌದು, ಆರೋಗ್ಯ ತಜ್ಞರು ಹೇಳುವ ಪ್ರಕಾರ, ಕೆಲವು ಆರೋಗ್ಯ ಸಮಸ್ಯೆಗಳಿರುವವರು ಇದನ್ನು ಮಿತವಾಗಿ ಅಥವಾ ಸಂಪೂರ್ಣವಾಗಿ ತಪ್ಪಿಸುವುದು ಉತ್ತಮ ಎನ್ನುತ್ತಾರೆ. ಹಾಗಾದರೆ ಕಬ್ಬಿನ ರಸ ಯಾರಿಗೆ ಒಳ್ಳೆಯದಲ್ಲ, ಯಾವ ರೀತಿಯ ಆರೋಗ್ಯ ಸಮಸ್ಯೆ ಉಲ್ಬಣಕ್ಕೆ ಕಾರಣವಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಸಂಪೂರ್ಣ ಮಾಹಿತಿ ಸ್ಟೋರಿಯಲ್ಲಿದೆ.
ಡಯಾಬಿಟೀಸ್ ಇರುವವರು ಎಚ್ಚರ ವಹಿಸಿ;
ವೈದ್ಯರ ಪ್ರಕಾರ, ಮಧುಮೇಹ (ಡಯಾಬಿಟೀಸ್) ಇರುವವರು ಕಬ್ಬಿನ ಜ್ಯೂಸ್ ಕುಡಿಯುವುದು ಬಹಳ ಅಪಾಯಕಾರಿ ಆಗಬಹುದು. ಇದರಲ್ಲಿ ನೈಸರ್ಗಿಕ ಸಕ್ಕರೆ ಪ್ರಮಾಣ ಹೆಚ್ಚು ಇರುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತಕ್ಷಣ ಹೆಚ್ಚಿಸುವ ಸಾಧ್ಯತೆ ಇದೆ. ಆದ್ದರಿಂದ ಶುಗರ್ ಲೆವೆಲ್ ನಿಯಂತ್ರಣದಲ್ಲಿ ಇಲ್ಲದವರು ಇದನ್ನು ಕುಡಿಯದಿರುವುದೇ ಒಳ್ಳೆಯದು.
ಅತಿಯಾಗಿ ತೂಕ ಹೊಂದಿರುವವರು;
ತೂಕ ಹೆಚ್ಚಿರುವವರು (ಒಬಿಸಿಟಿ) ಕೂಡ ಕಬ್ಬಿನ ಜ್ಯೂಸ್ ಸೇವನೆ ಮಾಡುವಾಗ ಎಚ್ಚರಿಕೆ ವಹಿಸಬೇಕು. ಈ ಪಾನೀಯದಲ್ಲಿ ಹೆಚ್ಚಿನ ಕ್ಯಾಲೊರಿ ಇರುವುದರಿಂದ ತೂಕ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ವೈದ್ಯರ ಸಲಹೆಯೊಂದಿಗೆ ಮಾತ್ರ ವಾರಕ್ಕೆ ಒಂದು ಬಾರಿ ಮಿತ ಪ್ರಮಾಣದಲ್ಲಿ ಸೇವಿಸುವುದು ಸೂಕ್ತ.
ಇದನ್ನೂ ಓದಿ: ಬಿಸಿಲಿನಲ್ಲಿ ತಣ್ಣಗಿರುವ ಕಬ್ಬಿನ ರಸ ಕುಡಿಯುವವರು ಈ ವಿಷಯಗಳನ್ನು ಮರೆಯಬೇಡಿ
ಜೀರ್ಣಕ್ರಿಯೆ ಸಮಸ್ಯೆಯಿರುವವರು;
ಅಜೀರ್ಣ, ಗ್ಯಾಸ್ಟ್ರಿಕ್ ಅಥವಾ ಹೊಟ್ಟೆ ನೋವಿನ ಸಮಸ್ಯೆ ಇರುವವರು ಶುಗರ್ ಕೆನ್ ಜ್ಯೂಸ್ ತಪ್ಪಿಸುವುದು ಉತ್ತಮ. ಕೆಲವೊಮ್ಮೆ ಇದು ಪಾಚಕ ಸಮಸ್ಯೆಗಳನ್ನು ಹೆಚ್ಚಿಸಬಹುದು ಮತ್ತು ಹೊಟ್ಟೆಯಲ್ಲಿ ಅಸೌಕರ್ಯ ಉಂಟುಮಾಡಬಹುದು.
ಸೇವನೆ ವೇಳೆ ಗಮನಿಸಬೇಕಾದ ವಿಷಯಗಳು:
ಶುಗರ್ ಕೆನ್ ಜ್ಯೂಸ್ ಯಾವಾಗಲೂ ತಾಜಾ ಮತ್ತು ಸ್ವಚ್ಛವಾಗಿ ತಯಾರಿಸಿದದ್ದನ್ನೇ ಸೇವಿಸಬೇಕು. ಖಾಲಿ ಹೊಟ್ಟೆಯಲ್ಲಿ ಕುಡಿಯುವುದನ್ನು ತಪ್ಪಿಸಬೇಕು. ಹೆಚ್ಚಿನ ಪ್ರಮಾಣದಲ್ಲಿ ಕುಡಿಯುವುದು ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಆದರೆ ಅದು ಎಲ್ಲರಿಗೂ ಸಮಾನವಾಗಿ ಲಾಭ ನೀಡುವುದಿಲ್ಲ. ವಿಶೇಷವಾಗಿ ಮಧುಮೇಹ, ಅತಿಯಾದ ತೂಕ ಅಥವಾ ಜೀರ್ಣಕ್ರಿಯೆ ಸಮಸ್ಯೆಗಳಿರುವವರು ವೈದ್ಯರ ಸಲಹೆಯೊಂದಿಗೆ ಮಾತ್ರ ಇದನ್ನು ಸೇವಿಸಬೇಕು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ