Headlines

“ನೀನು ತುಂಬಾ ಸಣ್ಣಗಿದ್ದೀಯ, ಜಿಮ್‌ಗೆ ಹೋದ್ರೆ ಸೆಕ್ಸಿಯಾಗಿ ಕಾಣ್ತೀಯ”: ಟಿಸಿಎಸ್ ಸಹೋದ್ಯೋಗಿ ಬಗ್ಗೆ ಯುವತಿ ಸ್ಫೋಟಕ ಹೇಳಿಕೆ – Kannada News | Shocking Harassment and Conversion Plot at TCS Nashik: Female Employee Recalls Trauma

ನಾಸಿಕ್, ಏ.24: ದೇಶದ ಪ್ರತಿಷ್ಠಿತ ಐಟಿ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ನ ನಾಸಿಕ್ ಘಟಕದಲ್ಲಿ ಮನುಕುಲವೇ ಬೆಚ್ಚಿಬೀಳುವಂತಹ ಘಟನೆ ಬೆಳಕಿಗೆ ಬಂದಿತ್ತು. ಕೆಲಸದ ಸ್ಥಳದಲ್ಲಿ ಮಹಿಳಾ ಉದ್ಯೋಗಿಗಳಿಗೆ ಲೈಂಗಿಕ ಕಿರುಕುಳ ನೀಡುವುದರ ಜೊತೆಗೆ, ಬಲವಂತದ ಧಾರ್ಮಿಕ ಮತಾಂತರಕ್ಕೆ ಸಂಚು ರೂಪಿಸಿರುವ ಗಂಭೀರ ಆರೋಪ ಕೇಳಿಬಂದಿದೆ. ಈ ಘಟನೆಯನ್ನು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ‘ಕಾರ್ಪೊರೇಟ್ ಜಿಹಾದ್’ ಎಂದು ಬಣ್ಣಿಸಿದ್ದರು. ಇದೀಗ ಈ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ. ಈ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದ ಯುವತಿಯರು ಸ್ಫೋಟಕ ಹೇಳಿಕೆಗಳನ್ನು ನೀಡಿದ್ದಾರೆ. ಅಲ್ಲಿ ತಮ್ಮನ್ನು ನಡೆಸುಕೊಳ್ಳುತ್ತಿದ್ದ ಬಗ್ಗೆ ಹಾಗೂ ಅಸಭ್ಯ ಮಾತುಗಳ ಬಗ್ಗೆ ಹೇಳಿಕೆ ನೀಡಿದ್ದಾರೆ.

ಪ್ರಕರಣದ ತನಿಖೆ ಚುರುಕುಗೊಂಡಂತೆ ಒಬ್ಬೊಬ್ಬರೇ ಸಂತ್ರಸ್ತೆಯರು ತಮಗಾದ ಕಹಿ ಅನುಭವವನ್ನು ಹಂಚಿಕೊಳ್ಳುತ್ತಿದ್ದಾರೆ. ಟಿಸಿಎಸ್‌ನ ಮಹಿಳಾ ಉದ್ಯೋಗಿಯೊಬ್ಬರು ನೀಡಿರುವ ದೂರಿನ ಬಗ್ಗೆ ಇಲ್ಲಿ ನೋಡಿ ಮಾಹಿತಿ. ಆರೋಪಿಗಳಾದ ಶಾರುಖ್ ಖುರೇಷಿ ಮತ್ತು ರಜಾ ಮೆಮನ್ ಕೆಲಸದ ನೆಪದಲ್ಲಿ ಮಹಿಳೆಯನ್ನು ಪೀಡಿಸುತ್ತಿದ್ದರು. “ನಿನಗೆ ಬಾಯ್ ಫ್ರೆಂಡ್ ಇದ್ದಾನಾ?”, “ಯಾರನ್ನಾದರೂ ಇಷ್ಟಪಡುತ್ತೀಯಾ?” ಎಂದು ಕೇಳುತ್ತಾ ಮುಜುಗರ ಉಂಟುಮಾಡುತ್ತಿದ್ದರು.

“ನೀನು ತುಂಬಾ ಸಣ್ಣಗಿದ್ದೀಯಾ, ಜಿಮ್‌ಗೆ ಹೋದರೆ ಆಕರ್ಷಕವಾಗಿ ಕಾಣುತ್ತೀಯಾ” ಎಂದು ರಜಾ ಮೆಮನ್ ಅಶ್ಲೀಲವಾಗಿ ಕಾಮೆಂಟ್ ಮಾಡುತ್ತಿದ್ದ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.ಯುಗಾದಿ (ಗುಡಿ ಪಾಡ್ವ) ದಿನದಂದು ಹೊಸ ಬಟ್ಟೆ ಧರಿಸಿ ಬಂದಿದ್ದ ಸಂತ್ರಸ್ತೆಯನ್ನು ಪದೇ ಪದೇ ಹತ್ತಿರ ಕರೆದು, ಅಸಭ್ಯವಾಗಿ ದಿಟ್ಟಿಸುತ್ತಾ ಮಾನಸಿಕ ಕಿರುಕುಳ ನೀಡಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿ, ಕತ್ತು ಸೀಳಿ ಫ್ಲಶ್ ಮಾಡಲು ಯತ್ನಿಸಿದ 19 ವರ್ಷದ ಯುವತಿಯ ಬಂಧನ

ಆರೋಪಿಗಳು ಕೇವಲ ಕಿರುಕುಳಕ್ಕೆ ಸೀಮಿತವಾಗದೆ, ಉದ್ಯೋಗಿಗಳನ್ನು ಮತಾಂತರಗೊಳಿಸಲು ಪ್ರಯತ್ನಿಸುತ್ತಿದ್ದರು ಎಂಬ ಅಂಶ ತನಿಖೆಯಲ್ಲಿ ಬಹಿರಂಗವಾಗಿದೆ. ಕಂಪನಿಯಲ್ಲಿ ಈ ಆರೋಪಿಗಳ ಪ್ರಭಾವ ಹೆಚ್ಚಿದ್ದರಿಂದ ದೂರು ನೀಡಲು ಸಂತ್ರಸ್ತೆಯರು ಭಯಬಿದ್ದಿದ್ದರು. ಸದ್ಯ ಪೊಲೀಸರು ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದು, ಅವರ ಮೊಬೈಲ್​​​ ಸಾಧನಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಗಂಭೀರ ಪ್ರಕರಣವನ್ನು ಪರಿಗಣಿಸಿರುವ TCS ಸಂಸ್ಥೆಯು, ಆರೋಪಿಗಳನ್ನು ಕೆಲಸದಿಂದ ಅಮಾನತುಗೊಳಿಸಿದೆ. “ನಮ್ಮ ಸಂಸ್ಥೆಯಲ್ಲಿ ಕಿರುಕುಳಕ್ಕೆ ಯಾವುದೇ ಸ್ಥಾನವಿಲ್ಲ” ಎಂದು ಕಂಪನಿ ಸ್ಪಷ್ಟಪಡಿಸಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *