ರಕ್ಷಿತಾ ಶೆಟ್ಟಿ ಅವರು ಈ ಸೀಸನ್ನ ರನ್ನರ್ ಅಪ್ ಆಗಿದ್ದಾರೆ. ಅವರ ಜರ್ನಿ ಅನೇಕರಿಗೆ ಮಾದರಿ. ಅವರ ಪ್ರಯಾಣ ಮಿರಾಕಲ್ ಎನಿಸಿಕೊಂಡಿದೆ. ರಕ್ಷಿತಾ ಶೆಟ್ಟಿ ಅವರ ಆಟಕ್ಕೆ ಎಲ್ಲರೂ ಭೇಷ್ ಎಂದು ಹೇಳಿದ್ದಾರೆ.
ರಕ್ಷಿತಾ ಶೆಟ್ಟಿ ಅವರು ಮೊದಲ ದಿನವೇ ಹೊರ ಹೋದರು! ಮನೆಯವರ ವೋಟಿಂಗ್ ಆಧಾರದ ಮೇಲೆ ಅವರನ್ನು ಹೊರಕ್ಕೆ ಕಳುಹಿಸಲಾಯಿತು. ಇದು ಅನೇಕರಿಗೆ ಶಾಕಿಂಗ್ ಎನಿಸಿತು. ಒಂದು ವಾರ ಬಿಟ್ಟು ಅವರು ದೊಡ್ಮನೆಗೆ ಮರಳಿದರು.
ಅಶ್ವಿನಿ ಗೌಡ ಅವರು ರಕ್ಷಿತಾ ಶೆಟ್ಟಿಯನ್ನು ಗೋಳುಹೊಯ್ದುಕೊಂಡರು. ಗೆಜ್ಜೆ ವಿಷಯದಲ್ಲಿ ಅವರನ್ನು ಟೀಕಿಸಿದರು. ಆಗ ರಕ್ಷಿತಾ ಶೆಟ್ಟಿಗೆ ಮೈಲೇಜ್ ಸಿಕ್ಕಿತು.ಅಲ್ಲಿಂದ ಅವರನ್ನು ಯಾರೂ ಹಿಡಿಯೋರೇ ಇರಲಿಲ್ಲ.
ರಕ್ಷಿತಾ ಶೆಟ್ಟಿಗೆ ಸುದೀಪ್ ಪಾಠ ಹೇಳಿದರು. ಇದಾದ ಮರುದಿನವೇ ರಕ್ಷಿತಾ ಆಟ ಬದಲಾಯಿತು. ಆಟ ಬದಲಿಸಿಕೊಂಡು ಅವರು ಕಿಚ್ಚನ ಚಪ್ಪಾಳೆ ಪಡೆದುಕೊಂಡರು. ಅದು ಅವರ ಆಟ ಬದಲಿಸಿತು. ಅಂದಿನಿಂದ ಅವರು ಆಟ ಬದಲಿಸಿಕೊಂಡರು.
ರಕ್ಷಿತಾ ಶೆಟ್ಟಿ ಅವರು ಕೆಲ ವಾರಗಳ ಹಿಂದೆ ಎಲಿಮಿನೇಷನ್ ಮಾಡುವ ನಾಟಕ ಮಾಡಲಾಯಿತು. ಆ ಬಳಿಕ ಅವರನ್ನು ಸೀಕ್ರೆಟ್ ರೂಂನಲ್ಲಿ ಇಡಲಾಯಿತು. ಆ ಬಳಿಕ ರಕ್ಷಿತಾಗೆ
ದಾಖಲೆಗಳ ಸರದಾರ ವಿರಾಟ್ ಕೊಹ್ಲಿ (Virat Kohli) ಹೆಸರಿಗೆ ಹೊಸ ವಿಶ್ವ ದಾಖಲೆ ಸೇರ್ಪಡೆಯಾಗಿದೆ. ಅದು ಕೂಡ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (Sachin Tendulkar) ಅವರ ವರ್ಲ್ ರೆಕಾರ್ಡ್ ಅನ್ನು ಅಳಿಸಿ ಹಾಕುವ ಮೂಲಕ ಎಂಬುದು ವಿಶೇಷ.
ಬೆಂಗಳೂರು, ಜನವರಿ 19: ಮನೆಯಲ್ಲಿ ಶಾಂತಿ ಮತ್ತು ಸಕಾರಾತ್ಮಕ ವಾತಾವರಣವನ್ನು ನಿರ್ಮಿಸಲು ಅನೇಕ ಮಾರ್ಗಗಳಿವೆ. ಅವುಗಳಲ್ಲಿ ಒಂದು ವಿಶೇಷ ವಿಧಾನವೆಂದರೆ ಜೋಡಿ ಹಂಸಗಳ ಚಿತ್ರವನ್ನು ಮನೆಯಲ್ಲಿ ಇಡುವುದು. ಹಂಸಗಳನ್ನು ಲಕ್ಷ್ಮಿಯ ಸ್ವರೂಪವೆಂದು ಪರಿಗಣಿಸಲಾಗುತ್ತದೆ ಮತ್ತು ಅವು ಧನಾತ್ಮಕ ಶಕ್ತಿಯ ಸಂಕೇತವಾಗಿವೆ.
ವಾಸ್ತು ಶಾಸ್ತ್ರದ ಪ್ರಕಾರ, ಜೋಡಿ ಹಂಸಗಳ ಚಿತ್ರವನ್ನು ಮನೆಯ ಹಾಲ್‌ನಲ್ಲಿ, ಅಂದರೆ ಜನರು ಹೆಚ್ಚು ಓಡಾಡುವ ಜಾಗದಲ್ಲಿ ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖಮಾಡಿ ಇಡುವುದು ಶುಭಕರ. ಇದು ಅರ್ಧಕ್ಕೆ ನಿಂತ ಕೆಲಸಗಳನ್ನು ಪೂರ್ಣಗೊಳಿಸಲು, ಮನೆಯಲ್ಲಿನ ಕಲಹಗಳನ್ನು ಕಡಿಮೆ ಮಾಡಲು ಮತ್ತು ಆರ್ಥಿಕ ಲಾಭವನ್ನು ತರಲು ಸಹಾಯ ಮಾಡುತ್ತದೆ. ಮಕ್ಕಳು ಓದುವ ಜಾಗದಲ್ಲಿ ಈ ಚಿತ್ರವನ್ನು ಇಡುವುದರಿಂದ ಅವರ ಮನಸ್ಸು ಸ್ಥಿರವಾಗಿ, ಏಕಾಗ್ರತೆ ಹೆಚ್ಚಿ ಆಲೋಚನಾ ಶಕ್ತಿ ವೃದ್ಧಿಯಾಗುತ್ತದೆ. ಇದು ನಕಾರಾತ್ಮಕ ಶಕ್ತಿಗಳನ್ನು ನಿವಾರಿಸಿ, ಮನೆಯ ಯಜಮಾನನಿಗೆ ಉದ್ಯೋಗದಲ್ಲಿ ನೆಮ್ಮದಿ ಹಾಗೂ ಗೃಹಿಣಿಗೆ ಆತ್ಮಶಕ್ತಿಯನ್ನು ಹೆಚ್ಚಿಸುತ್ತದೆ. ಈ ನಂಬಿಕೆಗಳು ಮಾನಸಿಕ ಶಾಂತಿ ಮತ್ತು ಧೈರ್ಯವನ್ನು ನೀಡುತ್ತವೆ ಎಂದು ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 12’ ಅನ್ನು ಗಿಲ್ಲಿ ವಿನ್ನರ್ ಆಗಿದ್ದಾರೆ. ಅವರು ದೊಡ್ಮನೆಯಲ್ಲಿ ಮೊದಲ ದಿನದಿಂದಲೂ ಮನರಂಜನೆ ನೀಡುತ್ತಾ ಬಂದರು. ಈಗ ಬಿಗ್ ಬಾಸ್ ಅಲ್ಲಿ ಅವರು ಕಪ್ ಎತ್ತಿದ್ದಾರೆ. ಅವರ ಗೆಲುವಿನ ಬಗ್ಗೆ ಫ್ಯಾನ್ಸ್ ಕೂಡ ಖುಷಿ ವ್ಯಕ್ತಪಡಿಸಿದ್ದಾರೆ. ಗಿಲ್ಲಿಗೆ ಬಹುಮಾನ ಮೊತ್ತವಾಗಿ 50 ಲಕ್ಷ ರೂಪಾಯಿ ಸಿಕ್ಕಿದೆ. ಇದರ ಜೊತೆ ಮಾರುತಿ ಸುಜುಕಿ ವಿಕ್ಟೋರಿಸ್ ಕಾರು ಸಿಕ್ಕಿದೆ. ಸುದೀಪ್ 10 ಲಕ್ಷ ರೂಪಾಯಿ ಘೋಷಿಸಿದ್ದಾರೆ. ಇಲ್ಲಿ ಗಮನಿಸಬೇಕಾದ ವಿಷಯ ಎಂದರೆ ಇದರಲ್ಲಿ ಸಂಪೂರ್ಣ ಮೊತ್ತ ಅವರಿಗೆ ಸಿಗೋದಿಲ್ಲ. ಆ ಬಗ್ಗೆ ಇಲ್ಲಿದೆ ವಿವರ.
‘ಬಿಗ್ ಬಾಸ್’ ಅಲ್ಲಿ ಸ್ಪರ್ಧಿಸಿದರೆ ಸಾಕಷ್ಟು ಜನಪ್ರಿಯತೆ ಸಿಗುತ್ತದೆ. ಅದರಲ್ಲೂ ಗೆದ್ದವರಿಗೆ 50 ಲಕ್ಷ ರೂಪಾಯಿ ಸಿಗುತ್ತದೆ. ಗೆದ್ದ ವ್ಯಕ್ತಿಗೆ ಸಂಪೂರ್ಣ ಹಣ ಸಿಗುವುದಿಲ್ಲ ಎಂಬುದು ಅನೇಕರಿಗೆ ಗೊತ್ತಿಲ್ಲ. ಹೌದು, ಬಿಗ್ ಬಾಸ್ ಪ್ರೈಜ್ ಮೊತ್ತಕ್ಕೆ ಸರ್ಕಾರ ದೊಡ್ಡ ಮೊತ್ತದ ಟ್ಯಾಕ್ಸ್ ಹೇರುತ್ತದೆ. ಆ ಮೊತ್ತ ಕೇಳಿದರೆ ಯಾರಿಗಾದರೂ ಅಚ್ಚರಿ ಆಗುತ್ತದೆ.
ತೆರಿಗೆ ಎಷ್ಟು?
ಮನರಂಜನೆ ಕ್ಷೇತ್ರದಲ್ಲಿ ಸಿಗೋ ಬಹುಮಾನ ಮೊತ್ತಕ್ಕೆ ಸರ್ಕಾರ ಬರೋಬ್ಬರಿ ಶೇ. 30ರಷ್ಟು ಟ್ಯಾಕ್ಸ್ ವಿಧಿಸುತ್ತದೆ. ಬರುವ ಒಟ್ಟೂ ಹಣದಲ್ಲಿ ಶೇ. 30ರಷ್ಟು ಹಣ ಸರ್ಕಾರಕ್ಕೆ ಟ್ಯಾಕ್ಸ್ ರೂಪದಲ್ಲಿ ಹೋಗುತ್ತದೆ. ಈ ಟ್ಯಾಕ್ಸ್ ಮೊತ್ತವನ್ನು ಸಂಸ್ಥೆಯವರು ಕಡಿತ ಮಾಡಿಯೇ ವಿಜೇತರಿಗೆ ನೀಡುತ್ತಾರೆ. ಹೀಗಾಗಿ ಗಿಲ್ಲಿಗೆ ಈ ಹಣದಲ್ಲಿ ಸಿಗೋದು ಕೇವಲ 35 ಲಕ್ಷ ರೂಪಾಯಿ. ಗಿಲ್ಲಿಗೆ ಸುದೀಪ್ ಘೋಷಿಸಿರೋ 10 ಲಕ್ಷಕ್ಕೂ ಈ ಟ್ಯಾಕ್ಸ್ ಅನ್ವಯ ಆಗುತ್ತದೆಯೇ ಎಂಬ ಸ್ಪಷ್ಟನೆ ಇಲ್ಲ.
ಟಿವಿ ರಿಯಾಲಿಟಿ ಶೋ, ಲಾಟರಿ, ಸ್ಪರ್ಧೆ, ಕಾರ್ಡ್ ಗೇಮ್ನಲ್ಲಿ ಆಡಿ ಗೆದ್ದಲ್ಲಿ ಶೇ. 30 ತೆರಿಗೆ ಪಾವತಿಸಬೇಕು. ಕನಿಷ್ಠ 10 ಸಾವಿರ ರೂಪಾಯಿ ಇಂದ ಈ ತೆರಿಗೆ ಅನ್ವಯ ಆಗುತ್ತದೆ. ಅಂದರೆ ನೀವು ಮನರಂಜನಾ ಕ್ಷೇತ್ರದಲ್ಲಿ 10 ಸಾವಿರ ಬಹುಮಾನ ಗೆದ್ದರೆ ಮೂರು ಸಾವಿರ ಕಟ್ ಆಗಿ, 7 ಸಾವಿರ ಮಾತ್ರ ಕೈ ಸೇರುತ್ತದೆ.
ಉಳಿದ ಸ್ಪರ್ಧಿಗಳಿಗೂ ಇದು ಅನ್ವಯ
ಕೇವಲ ಗಿಲ್ಲಿ ಮಾತ್ರವಲ್ಲದೆ ರನ್ನರ್ ಅಪ್ ಆದ ರಕ್ಷಿತಾ ಅವರೂ ತೆರಿಗೆ ಹಣ ಪಾವತಿಸಬೇಕು. ಅವರಿಗೆ ಒಟ್ಟೂ 25 ಲಕ್ಷ ರೂಪಾಯಿ ಸಿಕ್ಕಿದ್ದು, ಇದರಲ್ಲಿ ಅವರಿಗೆ 17,50,000 ಮಾತ್ರ ಸಿಗಲಿದೆ. ಉಳಿದ ಮೊತ್ತ ತೆರಿಗೆ ರೂಪದಲ್ಲಿ ಸರ್ಕಾರದ ಕೈ ಸೇರಲಿದೆ.
ಬೆಂಗಳೂರು, ಜನವರಿ 19: ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ (Pradhan Mantri Fasal Bima Yojana – PMFBY) ಅನುಷ್ಠಾನದಲ್ಲಿ ಕರ್ನಾಟಕ (Karnataka) ರಾಜ್ಯವು ಎರಡನೇ ಸ್ಥಾನ ಪಡೆದುಕೊಂಡಿದೆ. ರಾಜ್ಯ ಸರ್ಕಾರದ ಈ ಮಹತ್ವದ ಸಾಧನೆಯನ್ನು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಅಭಿನಂದಿಸಿದೆ. 2024–25ನೇ ಸಾಲಿನಲ್ಲಿ ಪ್ರಧಾನಮಂತ್ರಿ ಬೆಳೆ ವಿಮೆ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತಂದಿರುವುದಕ್ಕಾಗಿ ಕರ್ನಾಟಕಕ್ಕೆ ಈ ಗೌರವ ಲಭಿಸಿದೆ. ಬೆಂಗಳೂರಿನಲ್ಲಿ ನಡೆದ 13ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ವತಿಯಿಂದ ರಾಜ್ಯ ಸರ್ಕಾರಕ್ಕೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕರ್ನಾಟಕದಲ್ಲಿ ಒಟ್ಟು 27,04,166 ರೈತರು ಬೆಳೆ ವಿಮೆ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದು, ಇವರಲ್ಲಿ 11,85,642 ರೈತರು ವಿಮಾ ಪರಿಹಾರಕ್ಕಾಗಿ ಕ್ಲೇಮ್ ಸಲ್ಲಿಸಿದ್ದಾರೆ. ಈ ಕ್ಲೇಮ್ ಮೊತ್ತ 2,094 ಕೋಟಿ ರೂ. ಆಗಿದೆ. ನೈಸರ್ಗಿಕ ವಿಕೋಪಗಳು, ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಸಮಯಕ್ಕೆ ಸರಿಯಾಗಿ ಪರಿಹಾರ ತಲುಪಿಸುವಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿದೆ ಎಂಬುದು ಈ ಸಾಧನೆಯಿಂದ ಸ್ಪಷ್ಟವಾಗಿದೆ.
ಕೇಂದ್ರ ಕೃಷಿ ಇಲಾಖೆಯು ಕರ್ನಾಟಕ ಸರ್ಕಾರದ ರೈತಪರ ನೀತಿಗಳು ಹಾಗೂ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಕೂಡ ಇದೇ ರೀತಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಶುಭ ಹಾರೈಸಿದೆ. ಬೆಳೆ ವಿಮೆ ಯೋಜನೆಯ ಮೂಲಕ ರೈತರ ಆದಾಯ ರಕ್ಷಣೆ ಹಾಗೂ ಆರ್ಥಿಕ ಭದ್ರತೆಗೆ ರಾಜ್ಯ ಸರ್ಕಾರ ನೀಡುತ್ತಿರುವ ಒತ್ತಾಸೆ ಮತ್ತೊಮ್ಮೆ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ.
ಈ ಯೋಜನೆಯಡಿ ರೈತರು ಮುಂಗಾರು ಬೆಳೆಗೆ ಶೇ. 2 ಮತ್ತು ಹಿಂಗಾರು ಬೆಳೆಗೆ ಶೇ. 1.5 ರಷ್ಟು ಮಾತ್ರ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಉಳಿದ ಮೊತ್ತವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭರಿಸುತ್ತವೆ.
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಎಂದರೇನು?
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಎನ್ನುವುದು ನೈಸರ್ಗಿಕ ವಿಕೋಪಗಳು, ಕೀಟಬಾಧೆ ಅಥವಾ ರೋಗಗಳಿಂದಾಗಿ ಬೆಳೆ ನಷ್ಟ ಅನುಭವಿಸುವ ರೈತರಿಗೆ ಆರ್ಥಿಕ ರಕ್ಷಣೆ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರವು 2016ರಲ್ಲಿ ಜಾರಿಗೆ ತಂದ ಒಂದು ಮಹತ್ವಾಕಾಂಕ್ಷೆಯ ವಿಮಾ ಯೋಜನೆಯಾಗಿದೆ. ‘ಒಂದು ರಾಷ್ಟ್ರ, ಒಂದು ಯೋಜನೆ’ ಎಂಬ ತತ್ವದಡಿ ಕಾರ್ಯನಿರ್ವಹಿಸುವ ಈ ಯೋಜನೆಯಲ್ಲಿ, ರೈತರು ಅತ್ಯಂತ ಕಡಿಮೆ ಪ್ರೀಮಿಯಂ ದರವನ್ನು (ಮುಂಗಾರು ಬೆಳೆಗೆ ಶೇ 2, ಹಿಂಗಾರು ಬೆಳೆಗೆ ಶೇ 1.5 ಮತ್ತು ವಾಣಿಜ್ಯ/ತೋಟಗಾರಿಕೆ ಬೆಳೆಗಳಿಗೆ ಶೇ 5 ರಷ್ಟನ್ನು ರೈತರು ಪಾವತಿಸಬೇಕಾಗುತ್ತದೆ. ಉಳಿದ ಮೊತ್ತವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭರಿಸುತ್ತವೆ) ಪಾವತಿಸುವ ಮೂಲಕ ಬಿತ್ತನೆಯ ಪೂರ್ವ ಹಂತದಿಂದ ಕೊಯ್ಲಿನ ನಂತರದ ಹಂತದವರೆಗೆ ಸಂಭವಿಸುವ ಬೆಳೆ ಹಾನಿಗೆ ಸಮಗ್ರ ವಿಮಾ ರಕ್ಷಣೆಯನ್ನು ಪಡೆಯಬಹುದಾಗಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಫಿನಾಲೆ ಪೂರ್ಣಗೊಂಡಿದೆ. ಕಿಚ್ಚ ಸುದೀಪ್ ಅವರು ಗಿಲ್ಲಿನ ವಿನ್ನರ್ ಎಂದು ಘೋಷಣೆ ಮಾಡಿದರು. 112 ದಿನಗಳ ಕಾಲ ಎಲ್ಲರನ್ನೂ ರಂಜಿಸಿದ ಗಿಲ್ಲಿ ಗೆಲುವಿಗೆ ಅರ್ಹರು ಎಂದು ವೀಕ್ಷಕರು ಹೇಳುತ್ತಿದ್ದಾರೆ. ವಿನ್ನರ್ ಆದ ಗಿಲ್ಲಿಗೆ ಕಿಚ್ಚ ಸುದೀಪ್ ಅವರು ಬಹುಮಾನ ಘೋಷಣೆ ಮಾಡಿದರು. ಇದು ಸುದೀಪ್ ಹೃದಯ ವೈಶಾಲ್ಯತೆಯನ್ನು ತೋರಿಸುತ್ತದೆ.
ಕಿಚ್ಚ ಸುದೀಪ್ ಅವರು ಸೀಸನ್ ಚಪ್ಪಾಳೆಯನ್ನು ಧ್ರುವಂತ್ ಅವರಿಗೆ ನೀಡಿದರು. ಇದು ಚರ್ಚೆಗೆ ಕಾರಣ ಆಯಿತು. ಗಿಲ್ಲಿಗೆ ಇದು ಸೇರಬೇಕಿತ್ತು ಎಂಬುದು ಎಲ್ಲರ ಕೋರಿಕೆ ಆಗಿತ್ತು. ಆದರೆ, ಇದನ್ನು ಧ್ರುವಂತ್ಗೆ ನೀಡಿದ್ದು ಸರಿ ಅಲ್ಲ ಎಂಬ ಮಾತುಗಳು ವ್ಯಕ್ತವಾದವು. ಈ ವಿಷಯದಲ್ಲಿ ಸುದೀಪ್ ಅವರು ಸಾಕಷ್ಟು ದ್ವೇಷವನ್ನು ಕಟ್ಟಿಕೊಳ್ಳಬೇಕಾಯಿತು. ‘ಸುದೀಪ್ಗೆ ಗಿಲ್ಲಿಯನ್ನು ಕಂಡರೆ ಆಗೊಲ್ಲ’ ಎಂಬ ಮಾತುಗಳು ಕೇಳಿ ಬಂದವು. ಆದರೆ, ಹೃದಯದಿಂದ ಸುದೀಪ್ ಆ ರೀತಿ ಅಲ್ಲ ಎಂಬುದು ಸಾಬೀತಾಗಿದೆ.
ಕಿಚ್ಚ ಸುದೀಪ್ ಅವರು ಗಿಲ್ಲಿನ ವಿನ್ನರ್ ಎಂದು ಘೋಷಣೆ ಮಾಡಿದರು. ಆ ಬಳಿಕ ಗಿಲ್ಲಿಗೆ ಅಶ್ವಸೂರ್ಯ ರಿಯಾಲಿಟೀಸ್ ಕಡೆಯಿಂದ 50 ಲಕ್ಷ ರೂಪಾಯಿ ಹಣ ಸಿಕ್ಕಿತು. ಮಾರುತಿ ಸುಜುಕಿ ಕಡೆಯಿಂದ ವಿಕ್ಟೋರಿಸ್ ಕಾರು ಕೂಡ ದೊರೆಯಿತು. ಇಷ್ಟೇ ಅಲ್ಲ, ಸುದೀಪ್ ತಾವು 10 ಲಕ್ಷ ರೂಪಾಯಿ ನೀಡೋದಾಗಿ ಹೇಳಿದರು. ಕಿಚ್ಚನ ನಡೆಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಸುದೀಪ್ ಅವರು ಬಿಗ್ ಬಾಸ್ ವೇದಿಕೆಯನ್ನು ತುಂಬಾನೇ ಪ್ರೀತಿ ಮಾಡುತ್ತಾರೆ. ವೇದಿಕೆ ಏರುವ ಸ್ಪರ್ಧಿಗಳಿಗೂ ಸಾಕಷ್ಟು ಪ್ರೀತಿ ಕೊಡುತ್ತಾರೆ. ಅದಕ್ಕೆ ಈ ಘಟನೆ ಒಳ್ಳೆಯ ಉದಾಹರಣೆ. ಸುದೀಪ್ ನಡೆಯನ್ನು ಎಲ್ಲರೂ ಶ್ಲಾಘಿಸಿದ್ದಾರೆ. ಗಿಲ್ಲಿ ಅವರು ಬಿಗ್ ಬಾಸ್ ವಿನ್ನರ್ ಆದರೆ, ರಕ್ಷಿತಾ ಶೆಟ್ಟಿ ರನ್ನರ್ ಅಪ್ ಆಗಿದ್ದಾರೆ. ಅವರಿಗೆ 25 ಲಕ್ಷ ರೂಪಾಯಿ ಹಣ ಸಿಕ್ಕಿದೆ.
ಅಶ್ವಿನಿ, ಬಿಗ್ಬಾಸ್(Bigg Boss) ಕನ್ನಡ ಸೀಸನ್ 12ರ ಅಪರೂಪದ ಸ್ಪರ್ಧಿ. ಹೋರಾಟಗಾರ್ತಿ, ತಾಯಿ, ಸಹೋದರಿ, ಜಗಳಗಂಟಿ, ಮಾಸ್ಟರ್ ಮೈಂಡ್ ಹೀಗೆ ಆಟದ ಬೇರೆ ಬೇರೆ ಹಂತದಲ್ಲಿ ಬೇರೆ ಬೇರೆ ರೀತಿಯಾಗಿ ತಮ್ಮನ್ನು ತೋರ್ಪಡಿಸಿಕೊಂಡ ಅಶ್ವಿನಿ, ಗಿಲ್ಲಿಗೆ ನಿಜವಾದ ಪ್ರತಿಸ್ಪರ್ಧಿ ಎನಿಸಿಕೊಂಡಿದ್ದರು. ಅಶ್ವಿನಿಗೆ ಇರುವ ರಕ್ಷಣಾ ವೇದಿಕೆ ಹಿನ್ನೆಲೆ ಹಾಗೂ ದಿಟ್ಟ ಮಹಿಳೆಯಾಗಿ ಅವರು ಸಂಪಾದಿಸಿರುವ ಮಹಿಳಾ ಸ್ಪರ್ಧಿಗಳ ಕಾರಣಕ್ಕೆ ಅಶ್ವಿನಿ ಗೆಲ್ಲುವ ಸ್ಪರ್ಧಿ ಎನಿಸಿಕೊಂಡಿದ್ದರು. ಆದರೆ ಅದೀಗ ಸುಳ್ಳಾಗಿದೆ ಅಶ್ವಿನಿ ಅವರು ಅದ್ಭುತವಾದ ಆಟದ ಹೊರತಾಗಿಯೂ ಎರಡನೇ ರನ್ನರ್ ಅಪ್ ಆಗಿದ್ದಾರೆ.
ಅಶ್ವಿನಿ, ಇಡೀ ಸೀಸನ್ನಲ್ಲಿ ಆರಂಭದಿಂದಲೂ ಒಂದಲ್ಲ ಒಂದು ಕಾರಣಕ್ಕೆ ವೈರಲ್ ಆಗುತ್ತಲೇ ಇದ್ದರು. ಆರಂಭದಲ್ಲಿ ಬಲು ಗಂಭೀರವಾಗಿ, ಪ್ರಬುದ್ಧೆಯಾಗಿ ತಮ್ಮನ್ನು ತಾವು ತೋರ್ಪಡಿಸಿಕೊಂಡ ಅಶ್ವಿನಿ, ರಕ್ಷಿತಾರ ಘಟನೆಯ ಬಳಿಕ ಮನೆಯಲ್ಲಿ ವಿಲನ್ ರೀತಿ ಬಿಂಬಿತವಾಗಲು ಆರಂಭಿಸಿದರು. ಆತ್ಮಗೌರವಕ್ಕಾಗಿ ಇತರರ ಗೌರವಕ್ಕಾಗಿ, ಸ್ವ ಆತ್ಮಗೌರವಕ್ಕಾಗಿ, ಟಾಸ್ಕ್ಗಾಗಿ, ಅಧಿಕಾರಕ್ಕಾಗಿ ಹೀಗೆ ಹಲವು ಕಾರಣಗಳಿಗೆ ಹಲವರೊಟ್ಟಿಗೆ ಜಗಳ ಮಾಡಿದ ಅಶ್ವಿನಿ ಅವರನ್ನು ಜಗಳಗಂಟಿ ಎಂದೇ ಮನೆಯಲ್ಲಿ ಕೆಲವರು ಬಿಂಬಿಸಿದ್ದರು.
ಅಷ್ಟು ಮಾತ್ರವಲ್ಲದೆ, ತಮ್ಮಿಂದ ತಪ್ಪಾಗಿದೆ ಎಂಬುದು ಗೊತ್ತಾದಾಗ ಬಹಳ ಕಿರಿಯಳಾದ ರಕ್ಷಿತಾ ಬಳಿ ಕ್ಷಮೆ ಕೇಳಿದರು. ಸೀಸನ್ನ ಕೊನೆಯ ವರೆಗೆ ಕೇಳುತ್ತಲೇ ಬಂದರು. ಜಗಳ ಮಾಡಿದ ರಘು ಜೊತೆಗೆ ಗೆಳೆತನ ಮಾಡಿಕೊಂಡರು. ಎಲ್ಲರೂ ದೂರ ತಳ್ಳಿದ್ದ ಧ್ರುವಂತ್ ಅನ್ನು ಗೆಳೆಯರನ್ನಾಗಿ ಮಾಡಿಕೊಂಡು ಅವರಲ್ಲಿ ಆಟದ ಸ್ಪೂರ್ತಿ ತುಂಬಿದರು. ಎಷ್ಟೇ ಜಗಳ ಆದರೂ ಮನೆಯವರಿಗೆ ಅಡುಗೆ ಮಾಡಿ ಹಾಕಿ ತಾಯಿಯಂತೆ ನೋಡಿಕೊಂಡರು.
ಗಿಲ್ಲಿ ಮತ್ತು ಗ್ಯಾಂಗ್ ಅಶ್ವಿನಿ ಅವರನ್ನು ನಾನಾ ರೀತಿಯಲ್ಲಿ ಟೀಕೆ ಮಾಡಿತ್ತು. ಸ್ವತಃ ಗಿಲ್ಲಿ, ಅಶ್ವಿನಿಯನ್ನು ‘ಮುದುಕಿ, ಹಲ್ಲು ಸೆಟ್ಟು, ಬಿಳಿ ಕೂದಲು’ ಎಂದೆಲ್ಲ ಹೀನಾಯವಾಗಿ ಟೀಕೆ ಮಾಡಿದ್ದರು, ಅಷ್ಟೆಲ್ಲ ಅವಮಾನಗಳು ಆದರೂ ಸಹ ಒಮ್ಮೆ ಸಹ ಬಿಟ್ಟು ಕೊಡದೆ ಹೋರಾಡಿದರು. ಸ್ವತಃ ಗಿಲ್ಲಿಯೇ ಅವರಷ್ಟು ಗಟ್ಟಿ ಮಹಿಳೆಯನ್ನು ನಾನು ನೋಡಿಲ್ಲ ಎಂದುಬಿಟ್ಟರು. ಅವಶ್ಯಕತೆ ಇದ್ದಾಗ ಹುಲಿಯಂತೆ ಹೋರಾಡಿದ ಅಶ್ವಿನಿ, ಸುದೀಪ್ ಹೇಳಿದರೆಂದು ಅಚಾನಕ್ಕಾಗಿ ತಮ್ಮ ವ್ಯಕ್ತಿತ್ವವನ್ನೇ ಬದಲಾಯಿಸಿಕೊಂಡು ಮೆತ್ತಗಾಗಿಬಿಟ್ಟರು, ಅವಮಾನಗಳನ್ನು ನಗುವಿಂದಲೇ ಸಹಿಸಿಕೊಂಡರು. ಒಟ್ಟಾರೆ ಎಲ್ಲ ರೀತಿಯಲ್ಲಿಯೂ ಅಶ್ವಿನಿ ಆಟ ಆಡಿದರು.
ಸುದೀಪ್ ಅವರು ಸ್ವತಃ ಅಶ್ವಿನಿಯ ಆಟವನ್ನು ಬಹುವಾಗಿ ಕೊಂಡಾಡಿದರು. ಅಶ್ವಿನಿ ಅವರ ಛಲ, ಕಿಚ್ಚು, ಅವರ ಪ್ರಬುದ್ಧತೆಯನ್ನು ಸುದೀಪ್ ಅವರು ಹೊಗಳಿದರು. ಅಶ್ವಿನಿ ಅವರು ಸಹ ಖುಷಿಯಿಂದಲೇ ಎವಿಕ್ಷ್ ಅನ್ನು ಒಪ್ಪಿಕೊಂಡು ಇತರೆ ಸ್ಪರ್ಧಿಗಳಾದ ರಕ್ಷಿತಾ ಮತ್ತು ಗಿಲ್ಲಿಗೆ ಶುಭ ಹಾರೈಸಿದರು. ಮಾತ್ರವಲ್ಲದೆ, ಸೀಸನ್ನ ಆರಂಭದಲ್ಲಿ ಮಾಡಿದ ತಪ್ಪಿಗೆ ಮತ್ತೊಮ್ಮೆ ರಕ್ಷಿತಾಗೆ ಕ್ಷಮೆ ಕೇಳಿ ವೇದಿಕೆಯಿಂದ ಕೆಳಗಿಳಿದರು.
‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ 23 ಸ್ಪರ್ಧಿಗಳನ್ನು ಹಿಂದಿಕ್ಕಿ ಗಿಲ್ಲಿ ನಟ ವಿನ್ ಆಗಿದ್ದಾರೆ. ಗಿಲ್ಲಿ ಕೈನ ಎತ್ತೋ ಮೂಲಕ ಸುದೀಪ್ ವಿನ್ನರ್ ಘೋಷಣೆ ಮಾಡಿದರು. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ. 40 ಕೋಟಿಗೂ ಅಧಿಕ ವೋಟ್ ಪಡೆದು ಗೆಲುವು ಸಾಧಿಸಿದ್ದಾರೆ ಗಿಲ್ಲಿ ನಟ. ಅವರ ಅಭಿಮಾನಿಗಳ ಆಸೆ ಈಡೇರಿದೆ. ರಕ್ಷಿತಾಗೆ ರನ್ನರ್ ಅಪ್ ಸ್ಥಾನ ಸಿಕ್ಕಿದೆ.
ಈ ಮೊದಲು ಹಲವು ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಸಿ ಗಿಲ್ಲಿ ನಟ ಗಮನ ಸೆಳೆದರು. ಎಲ್ಲಾ ಶೋಗಲ್ಲಿ ಅವರು ರನ್ನರ್ ಅಪ್ ಸ್ಥಾನಕ್ಕೆ ಖುಷಿಪಟ್ಟುಕೊಳ್ಳಬೇಕಿತ್ತು.ಇದನ್ನು ಗಿಲ್ಲಿ ಕೂಡ ಹೇಳಿಕೊಂಡಿದ್ದರು. ಅವರಿಗೆ ಈ ವಿಷಯದಲ್ಲಿ ತುಂಬಾನೇ ಬೇಸರ ಇತ್ತು. ಕೊನೆಗೂ ಗಿಲ್ಲಿಗೆ ಗೆಲುವು ಸಿಕ್ಕಿದೆ. ಅವರು ಬರೋಬ್ಬರಿ 40 ಕೋಟಿಗೂ ಅಧಿಕ ಮತ ಪಡೆದಿದ್ದಾರೆ.
ಕಳೆದ ಬಾರಿಯ ವಿನ್ನರ್ ಹನುಮಂತ 5 ಕೊಟಿ ವೋಟ್ ಪಡೆದಿದ್ದರು. ಇದಕ್ಕಿಂತ ಹತ್ತು ಪಟ್ಟು ವೋಟ್ನ ಗಿಲ್ಲಿ ಪಡೆದುಕೊಂಡಿದ್ದಾರೆ ಎಂಬುದು ವಿಶೇಷ. ಗಿಲ್ಲಿ ಕ್ರೇಜ್ಗೆ ವೋಟಿಂಗ್ ಲೈನ ಶೇಕ್ ಆಗಿದೆ. ಗಿಲ್ಲಿ ಫ್ಯಾನ್ಸ್ ಕ್ರೇಜ್ ಏನು ಎಂಬುದು ಗೊತ್ತಾಗಿದೆ.
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ನಟ ಅವರು ಎಂಟ್ರಿ ಕೊಟ್ಟಾಗಲೇ ಕ್ರೇಜ್ ನಿಧಾನಕ್ಕೆ ಆರಂಬ ಆಯಿತು. ಯಾವಾಗ ಅಶ್ವಿನಿ ಜೊತೆ ಅವರು ಸೆಣೆಸಾಟಕ್ಕೆ ಇಳಿದರೋ ಆಗ ಅವರ ಕ್ರೇಜ್ ಹೆಚ್ಚುತ್ತಾ ಹೋಯಿತು. ಅವರು ಕೊಡೋ ತಿರುಗೇಟಿಗೆ ಎಲ್ಲರೂ ಫಿದಾ ಆದರು. ಪ್ರತಿ ಹಂತದಲ್ಲೂ ಹಾಸ್ಯ ಮಾಡುತ್ತಾ ಮನರಂಜನೆ ನೀಡಿದರು. ಈ ಕಾರಣದಿಂದ ಗಿಲ್ಲಿ ನಟ ಎಲ್ಲರಿಗೂ ಇಷ್ಟ ಆದರು. ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಎಲ್ಲರೂ ಗಿಲ್ಲಿಯ ಅಭಿಮಾನಿ ಆದರು. ನಂತರದಲ್ಲಿ ಅವರಿಗೆ ಕಾಂಪಿಟೇಟರ್ ಇಲ್ಲ ಎಂಬಂತಾಯಿತು. ಕೊನೆಗೂ ಅವರು ಗೆದ್ದು ಬೀಗಿದ್ದಾರೆ.
ಗಿಲ್ಲಿಗೆ 50 ಲಕ್ಷ ಕ್ಯಾಶ್ ಪ್ರೈಸ್ ಸಿಕ್ಕಿದೆ. ಇದರ ಜೊತೆಗೆ ಮಾರುತಿ ಸುಜುಕಿ ವಿಕ್ಟರಿಸ್ ಕಾರ್ ಅವರ ಕೈ ಸೇರಿದೆ. ಇದು ಅವರ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಗಿಲ್ಲಿ ಜೀವನ ಇದರಿಂದ ಮತ್ತಷ್ಟು ಸುಧಾರಿಸಲಿದೆ ಎಂಬುದು ಅಭಿಮಾನಿಗಳ ಆಶಯ.
ಅಂತಸ್ತಿನ ವಿಚಾರದಲ್ಲಿ ನಿಮಗೇ ಅಸಮಾಧನ. ಪ್ರೇಮ ಜೀವನ ಸುಧಾರಿಸುತ್ತದೆ. ಆರ್ಥಿಕ ಪರಿಸ್ಥಿತಿಯೂ ಮೊದಲಿಗಿಂತ ಉತ್ತಮವಾಗಿರುತ್ತದೆ. ಬೇಡದ ಸಂಗತಿಗಳೇ ಹೆಚ್ಚು ತಲೆಯಲ್ಲಿ ಓಡಾಡಬಹುದು. ಜೀವನದಲ್ಲಿ ಅನೇಕ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ನಿಮ್ಮ ಮೇಲೆ ಹಿತಶತ್ರುಗಳು ಆಕ್ರಮಣ ಮಾಡಬಹುದು. ಯೋಚಿಸದೆ ಹೂಡಿಕೆ ಮಾಡಬೇಡಿ. ಹುಡುಗಾಟಿಕೆಯಿಂದ ಏನಾದರೂ ಅವಗಡ ಉಂಟಾದೀತು. ನಿಮ್ಮ ನೋವಿಗೆ ಸ್ಪಂದಿಸಿದವರ ಜೊತೆ ಸಮಯ ಕಳೆಯುವಿರಿ. ಯುಕ್ತಿಯನ್ನು ಬಳಸುವಷ್ಟು ತಾಳ್ಮೆ ನಿಮಗೆ ಬೇಕು.
ವೃಷಭ ರಾಶಿ:
ಭಾವನಾತ್ಮಕ ಸಂಬಂಧಗಳಲ್ಲಿ ಜಗಳಗಳು ಸಾಧ್ಯ. ಇಂದು ವಿದ್ಯಾರ್ಥಿಗಳಿಗೆ ಒಳ್ಳೆಯ ದಿನವಾಗಲಿದೆ. ಪರಿವರ್ತನೆ ಸಕಾರಣಕ್ಕಾದರೆ ಉತ್ತಮ. ಕಚೇರಿಯಲ್ಲಿ ನಿಮಗೆ ಹೆಚ್ಚುವರಿ ಕೆಲಸದ ಜವಾಬ್ದಾರಿಗಳು ಸಿಗುತ್ತವೆ. ಕೆಲಸದ ಸವಾಲುಗಳು ಹೆಚ್ಚಾಗುತ್ತವೆ. ಹಣಕಾಸಿನ ವಿಷಯಗಳಲ್ಲಿ ನೀವು ಏರಿಳಿತಗಳನ್ನು ಎದುರಿಸಬೇಕಾಗುತ್ತದೆ. ಯಾರನ್ನೂ ಮೆಚ್ಚುವ ನಿಮ್ಮ ಗುಣವು ಶ್ಲಾಘ್ಯವೇ. ಬಂಧುಗಳ ಮನೆಯಲ್ಲಿ ನೀವು ಇಂದು ಅನಿರೀಕ್ಷಿತವಾಗಿ ಭೋಜನ ಮಾಡುವಿರಿ. ಪ್ರಾರಂಭಿಸಿದ ಕೆಲಸದಲ್ಲಿ ಉತ್ಸಾಹ ಹೆಚ್ಚಿದ್ದರೂ ಮಾರ್ಗದಲ್ಲಿ ಗೊಂದಲ ಎನಿಸಬಹುದು.
ಮಿಥುನ ರಾಶಿ:
ಸಮಯದ ಬಗ್ಗೆ ಗಾಂಭೀರ್ಯವು ಕಡಿಮೆ ಆಗುವುದು. ವೈಯಕ್ತಿಕ ಮತ್ತು ವೃತ್ತಿಪರ ಜೀವನದ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳಿ. ಸಂಗಾತಿಯ ಜೊತೆ ಗುಣಮಟ್ಟದ ಸಮಯವನ್ನು ಕಳೆಯುವಿರಿ. ಹೊಸ ಹೂಡಿಕೆ ಅವಕಾಶಗಳು ಲಭ್ಯವಾಗುತ್ತವೆ. ಪುಣ್ಯಸ್ಥಳಹಳ ಬಗ್ಗೆ ನಂಬಿಕೆ ಹೆಚ್ಚಾಗುವುದು. ನಿಮ್ಮ ವೃತ್ತಿಜೀವನದಲ್ಲಿ ಹೊಸ ಅವಕಾಶಗಳು ಸಿಗಬಹುದು. ಮಕ್ಕಳ ಕಾಳಜಿಯು ಅತಿಯಾಗುವುದು. ನಿಮ್ಮ ಮಾತು ಸತ್ಯವಾಯಿತೆಂಬ ಸಂತೋಂಷವಿರುವುದು. ಖುಷಿಯಿಂದ ಮಾರ್ಗಗಳನ್ನು ಹುಡುಕುವಿರಿ.
ಕರ್ಕಾಟಕ:
ಇಂದು ಗೌಪ್ಯವಾಗಿ ಅಧಿಕಾರಿಗಳನ್ನು ಭೇಟಿ ಮಾಡುವಿರಿ. ಹೊಸ ಆದಾಯದ ಮಾರ್ಗಗಳು ಸಹ ತೆರೆದುಕೊಳ್ಳುತ್ತವೆ. ಇಂದು ನಿಮ್ಮ ಪ್ರೀತಿಪಾತ್ರರು ನಿಮ್ಮ ಜೊತೆ ಇರುತ್ತಾರೆ. ನಿಮಗೆ ಉದ್ಯೋಗದಲ್ಲಿ ಉತ್ತಮ ಅವಕಾಶಗಳು ಸಿಗುತ್ತವೆ. ಮನೆಗೆ ಬೇಕಾಗದ ಖರ್ಚುಗಳನ್ನು ತಪ್ಪಿಸಿ. ಕುಟುಂಬವರ ಜೊತೆ ಸಮಯವನ್ನು ಕಳೆಯುವುದು ಆಗದು. ಕಾರಣಾಂತರಗಳಿಂದ ನಿಮ್ಮ ಜೀವನದ ಮಾರ್ಗವು ಬದಲಾಗುವುದು. ನಿಮಗೆ ಇಂದು ವಾದದಲ್ಲಿ ಸೋಲಾಗಬಹುದು. ಮುಗ್ಗರಿಸಿ ಬೀಳುವುದು ಬೇಡ. ನಡಿಗೆ ಸಾವಧಾನದಿಂದ ಇರಲಿ.
ಸಿಂಹ ರಾಶಿ:
ಇಂದು ತಮ್ಮ ಮಾತನ್ನು ನಿಯಂತ್ರಿಸಬೇಕು ಮತ್ತು ನಿಂದನೀಯ ಪದಗಳನ್ನು ಬಳಸಬಾರದು. ಹಿರಿಯರಿಂದ ನಿಮಗೆ ಆಶೀರ್ವಾದ ಸಿಗುತ್ತದೆ. ಸಣ್ಣ ಭೂಮಿಯ ಖರೀದಿಸುವ ಸಾಧ್ಯತೆಗಳಿವೆ. ರಕ್ಷಣೆಯ ಸ್ಥಾನದಲ್ಲಿ ಇರುವವರಿಗೆ ಭಯವಿರುವುದು. ಸಂಕಟವನ್ನು ಪರಿಹರಿಸಿಕೊಳ್ಳುವ ಮಾರ್ಗವು ವಿಳಂಬವಾಗಿ ಸಿಗುವುದು. ಪರರ ವಸ್ತುವನ್ನು ಅವರಿಗೆ ಹಿಂತಿರುಗಿಸಲು ನಿಮಗೆ ಆಗದೇ ಹೋಗುವುದು. ದಾಂಪತ್ಯದಲ್ಲಿ ಹೊಂದಾಣಿಕೆಗೆ ಇಬ್ಬರೂ ಪ್ರಯತ್ನಶೀಲರಾಗುವುದು ಉತ್ತಮ. ವಿದೇಶದಲ್ಲಿರುವ ಮಕ್ಕಳ ಆರೋಗ್ಯದಲ್ಲಿ ತೊಂದರೆ ಕಾಣಿಸಿಕೊಳ್ಳಬಹುದು.
ಕನ್ಯಾ ರಾಶಿ:
ರಾಜಕೀಯದಿಂದ ಅಂತರ ಕಾಯ್ದುಕೊಳ್ಳಿ. ಯಾವುದೇ ವಿವಾದಿತ ಮಾತುಗಳನ್ನಾಡಿ ಸಿಕ್ಕಿಕೊಳ್ಳಬೇಕಾದೀತು. ನಿಮ್ಮ ಎಲ್ಲಾ ಕೆಲಸಗಳಲ್ಲಿ ನೀವು ಸುಲಭವಾಗಿ ಯಶಸ್ಸನ್ನು ಸಾಧಿಸುವಿರಿ. ನಿಮ್ಮ ಖರ್ಚುಗಳ ಮೇಲೆ ನಿಗಾ ಇರಿಸಿ ಮತ್ತು ಅನುಪಯುಕ್ತ ವಸ್ತುಗಳಿಗೆ ಹಣವನ್ನು ಖರ್ಚು ಮಾಡುವುದನ್ನು ತಪ್ಪಿಸಿ. ನಾಯಕತ್ವ ಸಿಕ್ಕಿ ಅದನ್ನು ನಿಭಾಯಿಸುವುದು ಕಷ್ಟ. ದಿವಸದ ವ್ಯವಸ್ಥೆಯನ್ನು ಕ್ರಮಬದ್ಧ ಮಾಡಿಕೊಳ್ಳಿ. ಮಾತಿನಿಂದ ಅಳೆದ ನಿಮ್ಮ ಮಾಪನವು ಸರಿಯಾಗದೇ ಇರುವುದು. ನಿಮ್ಮದೇ ಆದ ಸಂಸ್ಥೆಯನ್ನು ಆರಂಭಿಸಲು ಕೆಲವರನ್ನು ಸೇರಿಸಿಕೊಳ್ಳುವಿರಿ. ಮಾನಸಿಕ ಆಯಾಸದಿಂದ ನೀವು ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕಾಗಬಹುದು.
ತುಲಾ ರಾಶಿ :
ದೂರದಲ್ಲಿ ಇರುವ ನಿಮಗೆ ಕುಟುಂಬದ ವಾರ್ತೆಯು ಖುಷಿಯನ್ನು ಕೊಡುವುದು. ಪ್ರೀತಿಯನ್ನು ನೀವು ಲಘುವಾಗಿ ಕಂಡು ಪ್ರಿಯಕರನಿಂದ ದೂರಾಗುವಿರಿ. ಚಿಂತನಶೀಲ ಹೂಡಿಕೆ ನಿರ್ಧಾರಗಳು ಉತ್ತಮ ಲಾಭವನ್ನು ನೀಡುತ್ತವೆ. ನಿಮ್ಮಿಂದ ಬಣ್ಣದ ಮಾತುಗಳನ್ನು ನಿರೀಕ್ಷಿಸಲಾಗದು. ನಿಮ್ಮ ಖರ್ಚುಗಳನ್ನು ನಿಯಂತ್ರಿಸುತ್ತಿರಿ. ಬಜೆಟ್‌ಗೆ ಅನುಗುಣವಾಗಿ ಖರ್ಚುಗಳನ್ನು ನಿರ್ಧರಿಸಿ. ದೀರ್ಘಾವಧಿಯ ಆರ್ಥಿಕ ಗುರಿಗಳತ್ತ ಗಮನಹರಿಸಿ. ವ್ಯವಹಾರದಲ್ಲಿ ಬೆಳವಣಿಗೆಗೆ ಹೊಸ ಅವಕಾಶಗಳು ದೊರೆಯುತ್ತವೆ.
ವೃಶ್ಚಿಕ ರಾಶಿ:
ಹಣಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಬಹಳ ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಿ. ಇಂದು, ಚಿಂತನಶೀಲ ಹೂಡಿಕೆ ನಿರ್ಧಾರಗಳು ಉತ್ತಮ ಲಾಭವನ್ನು ನೀಡುತ್ತವೆ. ಉತ್ಸಾಹದಿಂದ ಇರಲು ನಿಮಗೆ ಮಾರ್ಗಗಳೂ ಕಡಿಮೆ ಇರಬಹುದು. ಇಷ್ಟವಿಲ್ಲದಿದ್ದರೂ ಉದ್ಯೋಗಕ್ಕೆ ತೆರಳಬೇಕಾದೀತು. ಮೇಲಧಿಕಾರಿಗಳ ಮಾತು ಕಿರಿಕಿರಿ ಎನಿಸಬಹುದು. ಉದ್ಯೋಗವನ್ನು ಬದಲಿಸುವ ಮೊದಲು ಸ್ನೇಹಿತರ ಸಲಹೆಯನ್ನು ಪಡೆಯುವಿರಿ. ಯಾವುದೋ ಗುಂಗಿನಲ್ಲಿ ಇಂದಿನ ಕೆಲಸವೆಲ್ಲ ಹಾಳಾಗುವುದು. ಸ್ವಾರ್ಥದಿಂದ ನಿಮಗೇ ತೊಂದರೆಯಾಗುವುದು ಎಂದು ಮನವರಿಕೆ ಆಗುವುದು.
ಧನು ರಾಶಿ:
ಮಾತಿನಲ್ಲಿ ಒರಟು ಕಾಣಿಸುವುದು. ಒಳ್ಳೆಯದರ ಕಡೆಗೆ ನಿಮ್ಮ ಒಲವಿರಲಿ. ನಿಮ್ಮ ಸಂಗಾತಿಯ ವ್ಯವಹಾರದಲ್ಲಿ ಭಿನ್ನಾಭಿಪ್ರಾಯ. ಪ್ರಶಂಸೆಯನ್ನು ಯಥಾವತ್ತಾಗಿ ತೆಗೆದುಕೊಳ್ಳುವಂತಿಲ್ಲ. ಮಿತ್ರರಿಗೆ ವಂಚಿಸುವ ಆಲೋಚನೆ ಬರಲಿದೆ. ಯಂತ್ರಗಳನ್ನು ಬಳಸಿಕೊಂಡು ಸಣ್ಣ ಉದ್ಯೋಗವನ್ನು ಆರಂಭಿಸುವಿರಿ. ವಿದೇಶದಲ್ಲಿ ಜೀವನಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಪ್ರವಚನಕಾರರಿಗೆ ಉತ್ತಮ ಅವಕಾಶಗಳು ಲಭ್ಯವಿರಲಿದೆ. ದೌರ್ಬಲ್ಯವನ್ನು ನೀವು ಸಕಾರಾತ್ಮಕವಾಗಿ ತೆಗೆದುಕೊಂಡವು ಸಾಧಿಸುವಿರಿ. ವಿದೇಶದ ಬಂಧುಗಳು ನಿಮ್ಮ ಉದ್ಯಮಕ್ಕೆ ಸಹಾಯ ಮಾಡುವರು.
ಮಕರ ರಾಶಿ:
ನಿಮ್ಮ ಜೀವನಕ್ಕೆ ಸಂಗಾತಿಯಾವಿ ಬರುವವರ ಜೊತೆ ಮುಜುಗರದಿಂದ ಮಾತನಾಡುವಿರಿ. ಸಹವಾಸ ನಿಮಗೆ ಸಿಗುತ್ತದೆ. ರಾಜಕೀಯದಿಂದ ನಿಮಗೆ ಪ್ರೇರಣೆ ಸಿಗುವುದು. ಆರ್ಥಿಕ ಲಾಭದಿಂದ ನೀವು ಸಂತೋಷ ಇರುವುದು ನಿಮ್ಮ ಮುಖದಲ್ಲಿ ಕಾಣಿಸುವುದು. ಹಳೆಯ ವಾಹನವನ್ನು ನೀವು ಖರೀದಿಸುವಿರಿ. ಸಾಲ ಮಾಡುವಾಗ ನಿಮ್ಮ ಆದಾಯವನ್ನು ಗಮನದಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು. ತಾಯಿಯ ಆರೋಗ್ಯದಲ್ಲಿ ಆದ ವ್ಯತ್ಯಾಸದಿಂದ ಚಿಂತೆಗೆ ಒಳಗಾಗುವಿರಿ. ಪ್ರಭಾವೀ ಜನರ ಭೇಟಿಯಿಂದ ಭವಿಷ್ಯಕ್ಕೆ ಅನೇಕ ಲಾಭವು ಆಗಲಿದೆ.
ಕುಂಭ ರಾಶಿ:
ಸ್ನೇಹಿತರ ಸಹಾಯದಿಂದ ಹೊಸ ವ್ಯವಹಾರವನ್ನು ಪ್ರಾರಂಭಿಸಲು ಸಾಧ್ಯವಾಗಬಹುದು. ನಿಮಗೆ ಗೊತ್ತೇ ಅಗದಂತೆ ವಂಚನೆಯಲ್ಲಿ ಸಿಕ್ಕಿಬೀಳುವಿರಿ. ಅರೋಗ್ಯದ ಸುಧಾರಣೆಗೆ ವೈದ್ಯರ ಸಲಹೆ ಅವಶ್ಯಕ. ಎಲ್ಲರ ಮೇಲೂ ವಿನಾ ಕಾರಣ ಕೋಪ ಮಾಡಿಕೊಳ್ಳುವಿರಿ. ರಾಜಕೀಯವನ್ನು ಬಂಧುಗಳ ನಡುವೆಯೂ ಮಾಡುವಿರಿ. ಆಸಕ್ತಿ ಇಲ್ಲದೇ ಇದ್ದರೂ ಕರ್ತವ್ಯದಲ್ಲಿ ಲೋಪವಿರಬಾರದು. ನಿಮ್ಮಿಂದ ಸಂಗಾತಿಗೆ ಬೇಸರವುಂಟಾಗುವುದು. ಮನಸ್ಸು ಚಂಚಲದಿಂದ ಯಾರ ಮಾತನ್ನೂ ಕೇಳುವ ಮನಃಸ್ಥಿತಿಯಲ್ಲಿ ಇರಲಾರಿರಿ. ದೂರದ ಬಂಧುಗಳು ಪರಿಚಿತರಾಗಿ ಅವರ ಜೊತೆ ಕಾಲ ಕಳೆಯುವಿರಿ. ನಿಮಗೆ ಕೃತಜ್ಞತೆ ಇರಲಿ.
ಮೀನ ರಾಶಿ:
ನಿಮ್ಮ ಪ್ರೀತಿಪಾತ್ರರಿಂದ ನಿಮಗೆ ಬೆಂಬಲ ಸಿಗುತ್ತದೆ. ದೂರ ಪ್ರಯಾಣ ಮಾಡುವ ಸಾಧ್ಯತೆಗಳಿವೆ. ಇದರಿಂದ ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ಗಮನವನ್ನು ಕೊಡಬೇಕಸದೀತು. ನಿಮ್ಮ ವೃತ್ತಿಯು ನಿಮಗೆ ಗೌರವವನ್ನು ಕೊಡಿಸುವುದು. ನಿಮ್ಮ ವಸ್ತುವು ಕಳ್ಳರಿಂದ ಅಪಹರಣ ಆಗುತ್ತದೆ ಎಂಬ ಭಯವು ಇರುವುದು. ಇನ್ನೊಬ್ಬರ ಬಳಿ ಇರುವ ನಿಮ್ಮ ವಸ್ತುವನ್ನು ಬಹಳ ಪ್ರಯತ್ನದಿಂದ ಪಡೆಯುವಿರಿ. ಬಂಧುಗಳಿಗಾಗಿ ಸಾಲ ಮಾಡುವ ಹಾಗೆ ಅಸದ ಆಗಬಹುದು. ಕೃಷಿಯಲ್ಲಿ ಆದ ಪ್ರಗತಿಯಿಂದ ಸಂತೋಷವಾಗುವುದು.
ಜನವರಿ 19, 2026ರ ಪಂಚಾಂಗ:
ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಶಿಶಿರ, ಚಾಂದ್ರ ಮಾಸ : ಮಾಘ, ಸೌರ ಮಾಸ : ಮಕರ, ಮಹಾನಕ್ಷತ್ರ : ಪೂರ್ವಾಷಾಢ, ವಾರ : ಸೋಮ, ಪಕ್ಷ : ಶುಕ್ಲ, ತಿಥಿ : ಪ್ರತಿಪತ್, ನಿತ್ಯನಕ್ಷತ್ರ : ಶ್ರವಣಾ ಯೋಗ : ವಜ್ರ, ಕರಣ : ಬವ, ಸೂರ್ಯೋದಯ – 06 – 54 am, ಸೂರ್ಯಾಸ್ತ – 06 – 16 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 08-19 – 09:45, ಯಮಗಂಡ ಕಾಲ 11:10 – 12:35, ಗುಳಿಕ ಕಾಲ 14:00 – 15:26
ಶೀತ, ಕಫ, ಕೆಮ್ಮು ಇಂಥವುಗಳು ಹೆಚ್ಚಾಗಿ, ವೈದ್ಯರ ಬಳಿ ತೆರಳಲೇ ಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ನಿಮಗೆ ಸ್ವಲ್ಪ ಕೂಡ ಇಷ್ಟ ಇಲ್ಲದ ವ್ಯಕ್ತಿಯ ಜೊತೆಯಾಗಿ ಅಥವಾ ಕೈ ಕೆಳಗೆ ಕೆಲಸ ಮಾಡಬೇಕಾದ ಪರಿಸ್ಥಿತಿ ಬರಲಿದೆ. ಇದರಿಂದ ನಿಮಗೆ ಮಾನಸಿಕ ನೆಮ್ಮದಿ ಇಲ್ಲದಂತಾಗಲಿದೆ. ಇನ್ನು ನಿಮ್ಮಲ್ಲಿ ಯಾರು ಬಟ್ಟೆ ವ್ಯಾಪಾರ ಮಾಡುತ್ತಾ ಇದ್ದೀರಿ ಅಂಥವರಿಗೆ ಈಗಾಗಲೇ ಕೊಟ್ಟಿರುವಂಥ ಸಾಲದ ವಸೂಲಾತಿ ಕಷ್ಟ ಎನಿಸಲಿದ್ದು, ನಿಮ್ಮಲ್ಲಿ ಕೆಲವರು ಪೊಲೀಸ್ ಸ್ಟೇಷನ್ ಗೆ ಈ ಬಗ್ಗೆ ದೂರು ನೀಡಲಿದ್ದೀರಿ.
ಗ್ಯಾಜೆಟ್, ಸೈಕಲ್, ಕನಿಷ್ಠ ವಾಟರ್ ಕ್ಯಾನ್ ಹೀಗೆ ಯಾವುದಕ್ಕಾದರೂ ಬಜೆಟ್ ಗಿಂತ ಹೆಚ್ಚು ಖರ್ಚು ಮಾಡಲಿದ್ದೀರಿ. ಉದ್ಯೋಗಸ್ಥರು ತಮ್ಮ ಬೆಳವಣಿಗೆ ಬಗ್ಗೆ ಬೇಸರಪಟ್ಟು, ಈಗಿರುವ ವಿಭಾಗ ಅಥವಾ ಪ್ರಾಜೆಕ್ಟ್ ನಿಂದ ಬೇರೆಡೆ ವರ್ಗಾವಣೆ ಮಾಡುವಂತೆ ತಮ್ಮ ಮೇಲಧಿಕಾರಿಗಳ ಜೊತೆ ಮಾತುಕಡೆ ನಡೆಸುವ ಸಾಧ್ಯತೆ ಇದೆ. ಸಣ್ಣ ಅಜಾಗರೂಕತೆಯೊಂದು ದೊಡ್ಡ ಬೆಲೆ ತೆರುವಂತೆ ಮಾಡಬಹುದು. ಆದ್ದರಿಂದ ನಿಮ್ಮ ಪಾಲಿನ ಜವಾಬ್ದಾರಿಯನ್ನು ಬೇರೆಯವರಿಗೆ ವರ್ಗಾಯಿಸಬೇಡಿ.
ನಿಮಗೆ ಹೆಜ್ಜೆಹೆಜ್ಜೆಗೆ ಕಿರಿಕಿರಿ ಮಾಡುತ್ತಾ ಇದ್ದವರ ಕೆಲವು ತಪ್ಪುಗಳು ನಿಮ್ಮ ಕಣ್ಣಿಗೆ ಬಿದ್ದು, ಅದರಿಂದ ಎಷ್ಟು ಗೋಳು ಬರಿಸಬಹುದೋ ಅಷ್ಟು ಕಿರುಕುಳ ನೀಡುವುದಕ್ಕೆ ಮುಂದಾಗಲಿದ್ದೀರಿ. ನಿಮಗೆ ನೆನಪಿರಬೇಕಾದ ಸಂಗತಿ ಏನೆಂದರೆ, ಇದು ಇಲ್ಲಿಗೇ ಮುಗಿಯುವುದಿಲ್ಲ. ವೃತ್ತಿ- ವ್ಯವಹಾರ ಮಾಡುತ್ತಿರುವವರಿಗೆ ಅನುಭವದ ಆಧಾರದಲ್ಲಿ ನೀವು ತೆಗೆದುಕೊಂಡಿದ್ದ ತೀರ್ಮಾನಗಳು ಒಳ್ಳೆ ಫಲ ನೀಡಲಿದೆ. ಅದರ ಫಲಿತಾಂಶ ಎಂಬಂತೆ ನಿಮಗೆ ದೊಡ್ಡ ದೊಡ್ಡ ಜವಾಬ್ದಾರಿ ವಹಿಸಬಹುದು.