All posts by nagaraj11081993

DISCOMs: ಹಲವು ವರ್ಷಗಳ ಬಳಿಕ ಮೊದಲ ಆದಾಯ ಸವಿದ ಭಾರತದ ಡಿಸ್ಕಾಂ ಕಂಪನಿಗಳು – Kannada News | India’s Power distributing DISCOMs see first profit in over a decade of losses

ನವದೆಹಲಿ, ಜನವರಿ 18: ಭಾರತದ ವಿದ್ಯುತ್ ವಿತರಣಾ ಕಂಪನಿಗಳು (ಡಿಸ್ಕಾಂ) 2024-25ರ ಹಣಕಾಸು ವರ್ಷದಲ್ಲಿ 2,701 ಕೋಟಿ ರೂ ನಿವ್ವಳ ಲಾಭ ಗಳಿಸಿವೆ. ಇದು ತೆರಿಗೆ ಕಳೆದ ನಂತರ ಉಳಿಯುವ ಲಾಭವಾಗಿದೆ. ಭಾರತದ ಒಟ್ಟೂ ಡಿಸ್ಕಾಂ ಕಂಪನಿಗಳಿಗೆ ಸಿಕ್ಕಿರುವ ಒಟ್ಟೂ ಪಿಎಟಿ ಲಾಭ ಇದು. ಹತ್ತಕ್ಕೂ ಹೆಚ್ಚು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಈ ಕಂಪನಿಗಳು ಲಾಭ ಕಂಡಿವೆ.

ನಷ್ಟಗಳ ಕೂಪದಲ್ಲೇ ಸಿಲುಕಿದ್ದ ಡಿಸ್ಕಾಂ ಕಂಪನಿಗಳು ಲಾಭದ ಹಳಿಗೆ ಬರುವಂತಾಗಲು ಹಲವು ವರ್ಷಗಳ ಸುಧಾರಣಾ ಹಾದಿಯೇ ಕಾರಣವಾಗಿದೆ. 2024-25ರಲ್ಲಿ ಡಿಸ್ಕಾಂಗಳು ಲಾಭ ಕಂಡಿರುವುದು ವಿದ್ಯುತ್ ವಿತರಣಾ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಆರಂಭವಾದಂತಿದೆ ಎಂದು ಕೇಂದ್ರ ವಿದ್ಯುತ್ ಸಚಿವ ಮನೋಹರಲಾಲ್ ಹೇಳಿದ್ದಾರೆ.

ಇದನ್ನೂ ಓದಿ: ಸದ್ದಿಲ್ಲದೆ ಟ್ರಂಪ್​ಗೆ ಮೋದಿ ತಿರುಗೇಟು; ಅಮೆರಿಕದ ದ್ವಿದಳ ಧಾನ್ಯಗಳ ಮೇಲೆ ಶೇ. 30ರಷ್ಟು ಸುಂಕ ವಿಧಿಸಿದ ಭಾರತ

2013-14ರಲ್ಲಿ ಡಿಸ್ಕಾಂ ಕಂಪನಿಗಳಿಗೆ ಒಟ್ಟು ಆಗಿದ್ದ ನಷ್ಟ 67,962 ಕೋಟಿ ರೂ. 2023-24ರ ಹಣಕಾಸು ವರ್ಷದಲ್ಲಿ ಇವು 25,553 ಕೋಟಿ ರೂ ನಷ್ಟ ಕಂಡಿದ್ದವು. ಈಗ 2024-25ರಲ್ಲಿ 2,701 ಕೋಟಿ ರೂ ಲಾಭ ಮಾಡಿವೆ.

ಸರ್ಕಾರದ ವಿವಿಧ ಸುಧಾರಣಾ ಕ್ರಮಗಳು

ವಿತರಣಾ ಕ್ಷೇತ್ರದ ಪುನಾರಚನೆ ಸ್ಕೀಮ್ (ಆರ್​ಡಿಎಸ್​ಎಸ್), ಎಲೆಕ್ಟ್​ರಿಸಿಟಿ ನಿಯಮಗಳಿಗೆ ತಿದ್ದುಪಡಿ, ತಡಪಾವತಿ ಸುಂಕ ನಿಯಮ, ವಿದ್ಯುತ್ ವಿತರಣೆ ಖಾತೆ ಮತ್ತು ಹೆಚ್ಚುವರಿ ಮಾಹಿತಿ ನಿಯಮ 2025 ಇತ್ಯಾದಿ ಸರ್ಕಾರ ಕೈಗೊಂಡ ಅನೇಕ ಸುಧಾರಣಾ ಕ್ರಮಗಳು ವಿದ್ಯುತ್ ವಿತರಣಾ ಕ್ಷೇತ್ರದಲ್ಲಿ ಪರಿವರ್ತನೆಯನ್ನೇ ತಂದಿವೆ ಎಂದು ಹೇಳಲಾಗುತ್ತಿದೆ.

ತಗ್ಗಿದ ವಿದ್ಯುತ್ ಪೋಲು

ಈ ಸುಧಾರಣೆಗಳಿಂದ ಡಿಸ್ಕಾಂಗಳ ಆದಾಯದಲ್ಲಿ ಸುಧಾರಣೆ ಕಂಡಿರುವುದು ಮಾತ್ರವಲ್ಲ, ಅವುಗಳ ಕಾರ್ಯನಿರ್ವಹಣೆಯ ಇತರ ಸೂಚಕಗಳಲ್ಲೂ ಪ್ರಗತಿ ಕಾಣಬಹುದಾಗಿದೆ. ಎಟಿ ಅಂಡ್ ಸಿ ನಷ್ಟ 2013-14ರಲ್ಲಿ ಶೇ. 22.62 ಇತ್ತು. 2024-25ರಲ್ಲಿ ಇದು ಶೇ. 15.04ಕ್ಕೆ ಇಳಿಕೆಯಾಗಿದೆ.

ಇದನ್ನೂ ಓದಿ: 2026ರಲ್ಲಿ ಭಾರತವಾಗಲಿದೆ ವಿಶ್ವದ ಎರಡನೇ ಅತಿದೊಡ್ಡ ಸೌರ ಮಾರುಕಟ್ಟೆ

ಎಟಿ ಅಂಡ್ ಸಿ ಎಂದರೆ ಅಗ್ರಿಗೇಟ್ ಟೆಕ್ನಿಕಲ್ ಮತ್ತು ಕಮರ್ಷಿಯಲ್. ವಿದ್ಯುತ್ ವಿತರಣೆ ವೇಳೆ ಆಗುವ ವಿದ್ಯುತ್ ಪೋಲು, ಮೀಟರ್ ದೋಷ, ಬಿಲ್ಲಿಂಗ್ ದೋಷ ಇತ್ಯಾದಿ ಕಾರಣದಿಂದ ಆಗುವ ಲಾಭ ನಷ್ಟವನ್ನು ಎಟಿ ಅಂಡ್ ಸಿ ನಷ್ಟ ಎಂದು ಪರಿಗಣಿಸಲಾಗುತ್ತದೆ. ಈ ನಷ್ಟದಲ್ಲಿ ಇಳಿಮುಖ ಆಗುತ್ತಿರುವುದು ಈ ಸೆಕ್ಟರ್​ನ ಕಾರ್ಯಕ್ಷಮತೆ ಹೆಚ್ಚುತ್ತಿರುವುದರ ಸಂಕೇತವಾಗಿದೆ.

ಹಾಗೆಯೇ, ಸರಬರಾಜು ವೆಚ್ಚ ಹಾಗೂ ವಾಸ್ತವ ಆದಾಯದ ನಡುವಿನ ಅಂತರ 2013-14ರಲ್ಲಿ ಪ್ರತೀ ಕೆಡಬ್ಲ್ಯುಎಚ್​ಗೆ 78 ಪೈಸೆ ಇತ್ತು. 2024-25ರಲ್ಲಿ ಇದು 6 ಪೈಸೆಗೆ ಇಳಿಕೆ ಆಗಿದೆ. ಹಾಗೆಯೇ, ವಿದ್ಯುತ್ ಉತ್ಪಾದನಾ ಕಂಪನಿಗಳಿಗೆ ಕೊಡಬೇಕಿರುವ ಬಾಕಿ ಹಣದಲ್ಲೂ ಗಣನೀಯ ಇಳಿಕೆ ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

IND vs NZ: ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿದ ಟೀಮ್ ಇಂಡಿಯಾ – Kannada News | India vs New Zealand 3rd ODI Toss Update and Playing XI

ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಮೂರು ಪಂದ್ಯಗಳ ಏಕದಿನ ಸರಣಿಯ ಕೊನೆಯ ಮ್ಯಾಚ್ ಶುರುವಾಗಿದೆ. ಇಂದೋರ್​ನ ಹೋಲ್ಕರ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಭಾರತ ತಂಡದ ನಾಯಕ ಶುಭ್​ಮನ್ ಗಿಲ್ ಬೌಲಿಂಗ್ ಆಯ್ದುಕೊಂಡಿದ್ದಾರೆ.

ಇನ್ನು ಈ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್​ನಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ರಾಜ್​ಕೋಟ್​ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಪ್ರಸಿದ್ಧ್ ಕೃಷ್ಣ ಅವರನ್ನು ಈ ಬಾರಿ ಕೈ ಬಿಡಲಾಗಿದ್ದು, ಅವರ ಬದಲಿಗೆ ಅರ್ಷದೀಪ್ ಸಿಂಗ್​ಗೆ ಅವಕಾಶ ನೀಡಲಾಗಿದೆ. ಅದರಂತೆ ಟೀಮ್ ಇಂಡಿಯಾದ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿದೆ…

ಭಾರತ ಪ್ಲೇಯಿಂಗ್ XI: ರೋಹಿತ್ ಶರ್ಮಾ, ಶುಭಮನ್ ಗಿಲ್ (ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ, ಹರ್ಷಿತ್ ರಾಣಾ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್.

ನ್ಯೂಝಿಲೆಂಡ್ ಪ್ಲೇಯಿಂಗ್ XI: ಡೆವೊನ್ ಕಾನ್ವೇ, ಹೆನ್ರಿ ನಿಕೋಲ್ಸ್, ವಿಲ್ ಯಂಗ್, ಡೇರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಹೇ(ವಿಕೆಟ್ ಕೀಪರ್), ಮೈಕೆಲ್ ಬ್ರೇಸ್‌ವೆಲ್ (ನಾಯಕ), ಝಕಾರಿ ಫೌಲ್ಕ್ಸ್, ಕ್ರಿಸ್ಟಿಯನ್ ಕ್ಲಾರ್ಕ್, ಕೈಲ್ ಜೇಮಿಸನ್, ಜೇಡನ್ ಲೆನ್ನೊಕ್ಸ್.

ಫೈನಲ್ ಫೈಟ್ ಪಂದ್ಯ:

ಈ ಪಂದ್ಯವು ಸರಣಿ ನಿರ್ಣಾಯಕ. ಏಕೆಂದರೆ ಮೂರು ಪಂದ್ಯಗಳ ಸರಣಿಯ ಮೊದಲ ಮ್ಯಾಚ್​ನಲ್ಲಿ ಟೀಮ್ ಇಂಡಿಯಾ ಗೆದ್ದರೆ, ದ್ವಿತೀಯ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡ ಗೆಲುವು ದಾಖಲಿಸಿದೆ. ಅದರಂತೆ ಇದೀಗ ಮೂರನೇ ಪಂದ್ಯವು ಫೈನಲ್ ಫೈಟ್ ಆಗಿ ಮಾರ್ಪಟ್ಟಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ 2-1 ಅಂತರದಿಂದ ಸರಣಿ ಗೆಲ್ಲಲಿದೆ. ಹೀಗಾಗಿ ಇಂದಿನ ಪಂದ್ಯದಲ್ಲೂ ಉಭಯ ತಂಡಗಳಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.

ಭಾರತ ಏಕದಿನ ತಂಡ: ಶುಭ್​ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಆಯುಷ್ ಬದೋನಿ, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ, ಪ್ರಸಿದ್ಧ್ ಕೃಷ್ಣ, ಅರ್ಷದೀಪ್ ಸಿಂಗ್, ಕುಲ್ದೀಪ್ ಯಾದವ್, ನಿತೀಶ್ ಕುಮಾರ್ ರೆಡ್ಡಿ, ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್ (ವಿಕೆಟ್ ಕೀಪರ್).

ಇದನ್ನೂ ಓದಿ: ಸಿಕ್ಸರ್​ಗಳ ಸುರಿಮಳೆ… ಟಿ20 ಕ್ರಿಕೆಟ್​ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಾಣ

ನ್ಯೂಝಿಲೆಂಡ್ ಏಕದಿನ ತಂಡ: ಮೈಕೆಲ್ ಬ್ರೇಸ್‌ವೆಲ್ (ನಾಯಕ), ಆದಿ ಅಶೋಕ್, ಕ್ರಿಸ್ಟಿಯನ್ ಕ್ಲಾರ್ಕ್, ಜೋಶ್ ಕ್ಲಾರ್ಕ್ಸನ್, ಡೆವೊನ್ ಕಾನ್ವೆ, ಝ್ಯಾಕ್ ಫೌಲ್ಕ್ಸ್, ಮಿಚ್ ಹೇ (ವಿಕೆಟ್ ಕೀಪರ್), ಕೈಲ್ ಜೇಮಿಸನ್, ನಿಕ್ ಕೆಲ್ಲಿ, ಜೇಡನ್ ಲೆನಾಕ್ಸ್, ಡೇರಿಲ್ ಮಿಚೆಲ್, ಹೆನ್ರಿ ನಿಕೋಲ್ಸ್, ಗ್ಲೆನ್ ಫಿಲಿಪ್ಸ್, ಮೈಕೆಲ್ ರೇ, ವಿಲ್ ಯಂಗ್.

Source link

Gadag: ಉತ್ಖನನದ ವೇಳೆ ಲಕ್ಕುಂಡಿಯಲ್ಲಿ ಪತ್ತೆಯಾಯ್ತು ಪುರಾತನ ಶಿವಲಿಂಗ! – Kannada News | Ancient Shiva Linga Unearthed in Lakkundi Fort Wall Amidst Excavation

ಗದಗ, ಜನವರಿ 18: ತಾಲೂಕಿನ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಉತ್ಖನನ ಕಾರ್ಯ ಮುಂದುವರಿದಿದ್ದು, ಈ ಸಂದರ್ಭದಲ್ಲಿಯೇ ಲಕ್ಕುಂಡಿಯಲ್ಲಿನ ಕೋಟೆ ಗೋಡೆಯ ಪಕ್ಕದಲ್ಲಿದ್ದ ಶಾಲಾ ಕಟ್ಟಡವನ್ನು ಕೆಡವುವಾಗ ಅಲ್ಲಿ ಪುರಾತನ ಕಾಲದ ಶಿವಲಿಂಗವೊಂದು ಪತ್ತೆಯಾಗಿದೆ. ನಿಧಿ ಶೋಧದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ನಡೆಯುತ್ತಿರುವ ಉತ್ಖನನ ಜಾಗಕ್ಕೆ ಸಮೀಪದಲ್ಲಿಯೇ ಈ ಲಿಂಗ ಕಂಡುಬಂದಿದೆ. ಸಂಪೂರ್ಣವಾಗಿ ಡೆಮಾಲಿಶ್ ಮಾಡಿದ ಶಾಲೆಯ ಗೋಡೆಯ ಭಾಗದಲ್ಲಿ ಗ್ರಾಮಸ್ಥರ ಕಣ್ಣಿಗೆ ಈ ಶಿವಲಿಂಗ ಮೊದಲು ಬಿದ್ದಿದೆ. ಈ ಲಿಂಗವು ಬಹಳ ಹಳೆಯ ಕಾಲದ್ದಾಗಿರಬಹುದು ಎಂದು ಸ್ಥಳೀಯರು ಊಹಿಸಿದ್ದಾರೆ. ಪುರಾತತ್ವ ಇಲಾಖೆಯು ಈ ಲಿಂಗದ ಕುರಿತು ಪರಿಶೀಲನೆ ನಡೆಸುತ್ತಿದ್ದು, ಇದು ಯಾವ ಕಾಲಮಾನಕ್ಕೆ ಸೇರಿದ್ದು ಎಂಬ ಬಗ್ಗೆ ಸ್ಪಷ್ಟಪಡಿಸಬೇಕಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮುಗಿಯಿತು ಬಿಗ್ ಬಾಸ್ ಕನ್ನಡ ಸೀಸನ್ 12: ಕಿಚ್ಚ ಸುದೀಪ್ ಕೊನೆಯ ಮಾತು ಇದು – Kannada News | Kichcha Sudeep shares his farewell words as Bigg Boss Kannada Season 12 comes to end

‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಇಂದು (ಜನವರಿ 18) ಮುಕ್ತಾಯ ಆಗುತ್ತಿದೆ. 112 ದಿನಗಳ ಕಾಲ ನಡೆದ ಈ ಶೋ ತುಂಬಾ ಜನಪ್ರಿಯತೆ ಪಡದುಕೊಂಡಿದೆ. ಕಿಚ್ಚ ಸುದೀಪ್ (Kichcha Sudeep) ಅವರ ನಿರೂಪಣೆಯಲ್ಲಿ ವೀಕ್ಷಕರಿಗೆ ಸಖತ್ ಮನರಂಜನೆ ಸಿಕ್ಕಿದೆ. ಒಟ್ಟು 24 ಸ್ಪರ್ಧಿಗಳು ಈ ಬಾರಿ ಬಿಗ್ ಬಾಸ್ ಮನೆಗೆ ಬಂದು ಹೋಗಿದ್ದಾರೆ. ಅಂತಿಮವಾಗಿ ಗಿಲ್ಲಿ ನಟ (Gilli Nata), ಕಾವ್ಯಾ ಶೈವ, ಅಶ್ವಿನಿ ಗೌಡ, ಧನುಷ್, ಮ್ಯೂಟೆಂಟ್ ರಘು, ರಕ್ಷಿತಾ ಶೆಟ್ಟಿ ಅವರು ಫಿನಾಲೆಗೆ ಬಂದಿದ್ದಾರೆ. ಯಾರು ವಿನ್ ಎಂಬುದನ್ನು ಕಿಚ್ಚ ಸುದೀಪ್ ಅವರು ಇಂದು ರಾತ್ರಿ ಘೋಷಿಸಲಿದ್ದಾರೆ. ಅದಕ್ಕೂ ಮುನ್ನ ಅವರು ಈ ಸೀಸನ್ ಬಗ್ಗೆ ತಮ್ಮ ಕೊನೆಯ ಮಾತುಗಳನ್ನು ಹೇಳಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚ ಸುದೀಪ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋಗೆ ವಿದಾಯ ಹೇಳಿದ್ದಾರೆ. ‘ಹೀಗೆ.. ಇಂದಿನ ಸೂರ್ಯಾಸ್ತದ ವೇಳೆಗೆ ಬಿಗ್ ಬಾಸ್ ಕನ್ನಡ ಸೀಸನ್ 12 ಮುಕ್ತಾಯ ಆಗುತ್ತದೆ. ಇದು ಗಮನಾರ್ಹ ಸೀಸನ್. ದೃಶ್ಯ ವೈಭವದಿಂದ ಕೂಡಿದ ಈ ಅದ್ಭುತ ಪಯಣವು ಬಿಗ್ ಬಾಸ್ ಪ್ರತಿ ಸೀಸನ್​​ನಲ್ಲಿ ಹೇಗೆ ಬೆಳವಣಿಗೆ ಕಾಣುತ್ತಿದೆ ಎಂಬುದಕ್ಕೆ ಸಾಕ್ಷಿ ಆಗಿದೆ’ ಎಂದು ಕಿಚ್ಚ ಸದೀಪ್ ಅವರು ಹೇಳಿದ್ದಾರೆ.

‘ಶ್ರದ್ಧೆಯಿಂದ ಕಾರ್ಯಕ್ರಮ ವೀಕ್ಷಿಸಿ ಬೆಂಬಲ ನೀಡಿದ ಎಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು. ಎಲ್ಲ ಸ್ಪರ್ಧಿಗಳಿಗೆ ಮತ್ತು ವಿಜೇತರಿಗೆ ನನ್ನ ಅಭಿನಂದನೆಗಳು. ಈ ಅಗಾಧವಾದ ಯಶಸ್ಸಿಗಾಗಿ ತಂತ್ರಜ್ಞರ ತಂಡಕ್ಕೆ ನನ್ನ ಕಡೆಯಿಂದ ದೊಡ್ಡ ಅಭಿನಂಧನೆ. ನೀವೆಲ್ಲ ಇಲ್ಲ ಎಂದರೆ ಬಿಗ್ ಬಾಸ್ ಕಾರ್ಯಕ್ರಮವೇ ಇಲ್ಲ’ ಎಂದಿದ್​ದಾರೆ ಕಿಚ್ಚ ಸುದೀಪ್.

‘ಬಿಗ್ ಬಾಸ್ ಕನ್ನಡ ಸೀಸನ್ 13 ಶುರು ಆಗುವ ತನಕ ಬಿಗ್ ಬಾಸ್ ವಿಶ್ರಾಂತಿ ಪಡೆಯಲಿ ಎಂದು ಈ ಸೂರ್ಯಾಸ್ತದ ವೇಳೆಗೆ ನಾವು ಬಾಗಿಲುಗಳನ್ನು ಗೌರವದಿಂದ ಮುಚ್ಚುತ್ತೇನೆ’ ಎಂದು ಕಿಚ್ಚ ಸುದೀಪ್ ಅವರು ಹೇಳಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ಅವರ ಈ ಪೋಸ್ಟ್ ವೈರಲ್ ಆಗಿದೆ. ಕೇವಲ 4 ಗಂಟೆಯಲ್ಲಿ 13 ಸಾವಿರಕ್ಕೂ ಅಧಿಕ ಕಮೆಂಟ್​ಗಳು ಬಂದಿವೆ. ಬಿಗ್ ಬಾಸ್ ಕಾರ್ಯಕ್ರಮಕ್ಕೆ ಎಷ್ಟು ಜನಪ್ರಿಯತೆ ಎಂಬುದಕ್ಕೆ ಇದೇ ಸಾಕ್ಷಿ.

ಇದನ್ನೂ ಓದಿ: Bigg Boss Kannada Winner: ಗಿಲ್ಲಿ ನಟ ಗೆದ್ದಾಯಿತು; ತೀರ್ಪು ನೀಡಿದ ‘ಬಿಗ್ ಬಾಸ್ ಕನ್ನಡ 12’ ವೀಕ್ಷಕರು

ಬಿಗ್ ಬಾಸ್ ನಿರೂಪಣೆ ಮಾಡುವುದು ಅಷ್ಟು ಸುಲಭವಲ್ಲ. ಎಲ್ಲ ರೀತಿಯ ವ್ಯಕ್ತಿತ್ವ ಇರುವ ಸ್ಪರ್ಧಿಗಳು ನಿಭಾಯಿಸಬೇಕು. ಎಷ್ಟೇ ಬ್ಯುಸಿ ಆಗಿದ್ದರೂ ಕೂಡ ಪ್ರತಿ ವಾರ ತಪ್ಪದೇ ವಾರಾಂತ್ಯದ ಸಂಚಿಕೆ ನಡೆಸಿಕೊಡಬೇಕು. ಸೋಶಿಯಲ್ ಮೀಡಿಯಾದಲ್ಲಿ ಬರುವ ಕೆಲವು ಟೀಕೆಗಳನ್ನೂ ಎದುರಿಸಬೇಕು. ಇವೆಲ್ಲವನ್ನೂ ಕಿಚ್ಚ ಸುದೀಪ್ ಅವರು ನಿಭಾಯಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಯಾದ ರೋಡ್ ರೇಜ್; ಎಕ್ಸ್ ಪೋಸ್ಟ್ ನೋಡಿ ಆರೋಪಿಯನ್ನು ಹಿಡಿದ ಪೊಲೀಸರು – Kannada News | Bengaluru Road Rage: Scooter Rider Arrested After Knife Threat Caught on Dashcam

ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಯಾದ ರೋಡ್ ರೇಜ್

ಬೆಂಗಳೂರು, ಜನವರಿ 18: ನಗರದಲ್ಲಿ ರೋಡ್ ರೇಜ್ ಪ್ರಕರಣಗಳಿಗೆ ಕೊನೆಯಿಲ್ಲದಂತಾಗಿದ್ದು,   ಶುಕ್ರವಾರ (ಜನವರಿ 16) ಸಂಜೆ ಮಾಲ್ ಎದುರು ಕಾರ್ ಒಂದನ್ನು ನಿಲ್ಲಿಸಿದ ಆರೋಪಿ, ಅವಾಚ್ಯ ಶಬ್ಧಗಳಿಂದ ಬೈದು ಪರಾರಿಯಾಗಿದ ಘಟನೆ ನಡೆದಿದೆ. ಈ ಕುರಿತು ಸಂತ್ರಸ್ತರು ಎಕ್ಸ್ ಪೋಸ್ಟ್ ಹಂಚಿಕೊಂಡ ನಂತರ ಘಟನೆ ಪೊಲೀಸರ ಗಮನಕ್ಕೆ ಬಂದಿದ್ದು, ದ್ವಿಚಕ್ರವಾಹನ ಸವಾರನ ವಿರುದ್ಧ ಬೆಂಗಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಧ್ಯರಸ್ತೆಯಲ್ಲಿ ಕಾರನ್ನು ನಿಲ್ಲಿಸಿ, ಅವಾಚ್ಯ ಶಬ್ಧಗಳಿಂದ ನಿಂದನೆ

ಶುಕ್ರವಾರ ಸಂಜೆ ಸುಮಾರು 6 ಗಂಟೆ ವೇಳೆಗೆ ಪ್ರೆಸ್ಟೀಜ್ ಶಾಂತಿನಿಕೇತನ ಮಾಲ್ ಎದುರು ಈ ಘಟನೆ ನಡೆದಿದ್ದು, ಈ ಕುರಿತು ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಸ್ಕೂಟರ್ ಸವಾರನಾದ ಅರ್ಬಾಜ್ ಖಾನ್‌, ಎ. ರೆಡ್ಡಿ ಎಂಬವರ ಕಾರನ್ನು ಮಧ್ಯರಸ್ತೆಯಲ್ಲಿ ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎನ್ನಲಾಗಿದೆ. ಅಲ್ಲದೆ, ಏಕಾಏಕಿ ಚಾಕುವನ್ನು ಹೊರತೆಗೆದು ಕಾರಿನೊಳಗಿದ್ದವರಿಗೆ ಬೆದರಿಕೆ ಹಾಕಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ ಬೆಂಗಳೂರು ಏರ್​ಪೋರ್ಟ್ ಚೆಕಿಂಗ್ ಪಾಯಿಂಟ್ ಬಳಿಯೇ ರೋಡ್​ರೇಜ್: ಸಿನಿಮೀಯ ರೀತಿಯಲ್ಲಿ ಕಾರು ಚೇಸ್ ಮಾಡಿ ಬೈಕ್ ಸವಾರನ ಕಿರಿಕ್

ಎಕ್ಸ್ ಪೋಸ್ಟ್ ನೋಡಿ ಆರೊಪಿಯನ್ನು ಸೆರೆಹಿಡಿದ ಪೊಲೀಸರು

ಘಟನೆಯ ನಂತರ ಸಂತ್ರಸ್ತರು ತಮ್ಮ ಕಾರಿನ ಡ್ಯಾಶ್‌ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯವನ್ನು Xನಲ್ಲಿ ಹಂಚಿಕೊಂಡಿದ್ದು, ಬೆಂಗಳೂರು ಪೊಲೀಸ್‌ ಇಲಾಖೆಯನ್ನು ಟ್ಯಾಗ್ ಮಾಡಿದ್ದರು. ಪೋಸ್ಟ್ ನೋಡಿದ ಬಳಿಕ ವಿಡಿಯೋದಲ್ಲಿ ಕಾಣಿಸಿಕೊಂಡ ಸ್ಕೂಟರ್‌ನ ನೋಂದಣಿ ಸಂಖ್ಯೆಯ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸಾರ್ವಜನಿಕ ರಸ್ತೆಯಲ್ಲಿ ವಾಹನವನ್ನು ಅಕ್ರಮವಾಗಿ ತಡೆದು, ಮಾರಕಾಸ್ತ್ರ ತೋರಿಸಿ ಬೆದರಿಕೆ ಹಾಕಿದ ಆರೋಪದಡಿ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಡಿಕೆಶಿಗೆ ನಿಂದನೆ ಆರೋಪ: ‘ಕೈ’ ಕಾರ್ಯಕರ್ತರಿಂದ ಜನಾರ್ದನ ರೆಡ್ಡಿ ಮನೆಗೆ ಮುತ್ತಿಗೆ ಯತ್ನ – Kannada News | Congress Workers Protest at Janardhan Reddys Bengaluru Residence Following Remarks Against DCM DK Shivakumar

ಬೆಂಗಳೂರು, ಜನವರಿ 18: ಡಿಸಿಎಂ ಡಿ.ಕೆ.ಶಿವಕುಮಾರ್​​ಗೆ ಗಾಲಿ ಜನಾರ್ದನರೆಡ್ಡಿ ನಿಂದನೆ ಆರೋಪ ಹಿನ್ನೆಲೆ ಬೆಂಗಳೂರಿನಲ್ಲಿ ರೇಸ್​ಕೋರ್ಸ್​ ರಸ್ತೆಯಲ್ಲಿರುವ ಶಾಸಕರ ನಿವಾಸಕ್ಕೆ ಕಾಂಗ್ರೆಸ್ ಕಾರ್ಯಕರ್ತರಿಂದ ಮುತ್ತಿಗೆ ಯತ್ನ ನಡೆದಿದೆ. ಮನೋಹರ್ ನೇತೃತ್ವದಲ್ಲಿ ಜನಾರ್ದನರೆಡ್ಡಿ ಮನೆ ಮುಂದೆ ಕಾಂಗ್ರೆಸ್ ಕಾರ್ಯಕರ್ತರ ದಿಢೀರ್ ಪ್ರತಿಭಟನೆ ನಡೆಸಿದ್ದು, ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರನ್ನು ಈ ವೇಳೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನನಗೆ ರಕ್ಷಣೆ ನೀಡಲಾಗಿಲ್ಲ ಅಂದ್ರೆ ಡಿಸಿಎಂ ಆಗಿ ಏನು ಕಿಸಿದಿದ್ದೀಯಾ? ಎಂದು ಬಳ್ಳಾರಿ ಸಮಾವೇಶದಲ್ಲಿ ಡಿಕೆಶಿ ಬಗ್ಗೆ ಜನಾರ್ದನರೆಡ್ಡಿ ಟೀಕೆ ಮಾಡಿದ್ದರು. ಇದನ್ನು ಖಂಡಿಸಿ ಕಾಂಗ್ರೆಸ್​​ ಕಾರ್ಯಕರ್ತರು ಮುತ್ತಿಗೆ ಯತ್ನ ನಡೆಸಿದ್ದರು.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮುಂಬೈನಲ್ಲಿ ವಿಜಯ, ಕಾಜಿರಂಗದಲ್ಲಿ ಸಂಭ್ರಮ, ಕಾಂಗ್ರೆಸ್ ದೇಶದಲ್ಲಿ ವಿಶ್ವಾಸ ಕಳೆದುಕೊಂಡಿದೆ ಎಂದ ಪ್ರಧಾನಿ ಮೋದಿ – Kannada News | Victory in Mumbai, Message From Kaziranga: PM Modi Takes Aim at Congress

ಅಸ್ಸಾಂ, ಜನವರಿ 18: ಬಿಜೆಪಿ ಜನರ ಮೊದಲ ಆಯ್ಕೆ, ಕಾಂಗ್ರೆಸ್ ಪಕ್ಷವು ದೇಶದಲ್ಲಿ ನಂಬಿಕೆ ಕಳೆದುಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪ್ರಧಾನಿ ನಭಾನುವಾರ ಅಸ್ಸಾಂನ ಕಲಿಯಾಬೋರ್‌ನಲ್ಲಿ 6,957 ಕೋಟಿ ರೂ. ವೆಚ್ಚದ ಕಾಜಿರಂಗ ಎಲಿವೇಟೆಡ್ ಕಾರಿಡಾರ್‌ಗೆ ಶಂಕುಸ್ಥಾಪನೆ ನೆರವೇರಿಸಿದರು. ಎರಡು ಅಮೃತ್ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಿದರು. ದೇಶವು ಕಾಂಗ್ರೆಸ್ ಪಕ್ಷದ ನಕಾರಾತ್ಮಕ ರಾಜಕೀಯವನ್ನು ತಿರಸ್ಕರಿಸುತ್ತಿದೆ ಎಂದರು.

ಮುಂಬೈನಲ್ಲಿ ಕಾಂಗ್ರೆಸ್​ ಈಗ ನಾಲ್ಕನೇ ಅಥವಾ ಐದನೇ ಸ್ಥಾನದಲ್ಲಿರುವ ಪಕ್ಷವಾಗಿದೆ. ಕಾಂಗ್ರೆಸ್ ವರ್ಷಗಳ ಕಾಲ ಆಳ್ವಿಕೆ ನಡೆಸಿದ ಮಹಾರಾಷ್ಟ್ರವು ಸಂಪೂರ್ಣ ಹಾಳಾಗಿದೆ. ಕಾಂಗ್ರೆಸ್ ರಾಷ್ಟ್ರದ ವಿಶ್ವಾಸವನ್ನು ಕಳೆದುಕೊಂಡಿದೆ. ಕಾಂಗ್ರೆಸ್ ಯಾವುದೇ ಅಭಿವೃದ್ಧಿ ಕಾರ್ಯಸೂಚಿಯನ್ನು ಹೊಂದಿಲ್ಲ. ಅಂತಹ ಕಾಂಗ್ರೆಸ್ ಅಸ್ಸಾಂಗೆ ಅಥವಾ ಕಾಜಿರಂಗಕ್ಕೆ ಎಂದಿಗೂ ಒಳ್ಳೆಯದನ್ನು ಮಾಡಲು ಸಾಧ್ಯವಿಲ್ಲ.

ಬಿಜೆಪಿ ಜನರ ಮೊದಲ ಆಯ್ಕೆಯಾಗಿದೆ . ಕಳೆದ ಒಂದೂವರೆ ವರ್ಷಗಳಲ್ಲಿ, ಬಿಜೆಪಿಯ ಮೇಲಿನ ದೇಶದ ನಂಬಿಕೆ ಸ್ಥಿರವಾಗಿ ಹೆಚ್ಚಾಗಿದೆ. ಇತ್ತೀಚೆಗೆ, ಚುನಾವಣೆಗಳು ನಡೆದ ಬಿಹಾರದಲ್ಲಿ, 20 ವರ್ಷಗಳ ನಂತರವೂ, ಜನರು ಬಿಜೆಪಿಗೆ ದಾಖಲೆಯ ಸಂಖ್ಯೆಯ ಮತಗಳನ್ನು ನೀಡಿದರು. ಅದು ದಾಖಲೆಯ ಸಂಖ್ಯೆಯ ಸ್ಥಾನಗಳನ್ನು ಗೆದ್ದಿದೆ.

ಕಾಜಿರಂಗ ಕೇವಲ ರಾಷ್ಟ್ರೀಯ ಉದ್ಯಾನವಲ್ಲ, ಅದು ಅಸ್ಸಾಂನ ಆತ್ಮ ಎಂದು ಪ್ರಧಾನಿ ಮೋದಿ ಹೇಳಿದರು. ಇದು ಭಾರತದ ಜೀವವೈವಿಧ್ಯದ ಅಮೂಲ್ಯ ರತ್ನವಾಗಿದೆ. ಯುನೆಸ್ಕೋ ಇದನ್ನು ವಿಶ್ವ ಪರಂಪರೆಯ ತಾಣವೆಂದು ಘೋಷಿಸಿದೆ. ಬೋಡೋ ಸಮುದಾಯದ ಪ್ರತಿಭಾನ್ವಿತ ಹೆಣ್ಣುಮಕ್ಕಳು ತಮ್ಮ ಬಾಗೂರುಂಬಾ ಪ್ರದರ್ಶನದೊಂದಿಗೆ ಹೊಸ ದಾಖಲೆಯನ್ನು ಸ್ಥಾಪಿಸಿದರು. ಈ ವಿಶಿಷ್ಟ ಮತ್ತು ಉತ್ಸಾಹಭರಿತ ಪ್ರದರ್ಶನದಲ್ಲಿ 10,000 ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿದ್ದರು, ಇದು ಹಾಜರಿದ್ದ ಎಲ್ಲರನ್ನೂ ಆಕರ್ಷಿಸಿತು ಎಂದರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

Mouni Amavasya: ಇಂದು ಮೌನಿ ಅಮಾವಾಸ್ಯೆ; ಮಹಿಳೆಯರು ತಪ್ಪದೇ ಈ ನಿಯಮ ಪಾಲಿಸಿ – Kannada News | Mouni Amavasya: House Purity, Positive Energy and Women’s Spiritual Practices

ಮೌನಿ ಅಮಾವಾಸ್ಯೆಯಂದು ಮನೆಯನ್ನು ಶುದ್ಧ ಮತ್ತು ಪವಿತ್ರವಾಗಿಡುವುದು ಅತ್ಯಂತ ಮುಖ್ಯವೆಂದು ಪರಿಗಣಿಸಲಾಗಿದೆ. ಪೂಜಾ ಸ್ಥಳ, ಅಂಗಳ, ಅಡುಗೆಮನೆ ಮತ್ತು ಎಲ್ಲಾ ಸಾಮಾನ್ಯ ಪ್ರದೇಶಗಳನ್ನು ಒಳಗೊಂಡಂತೆ ಈ ದಿನ ಇಡೀ ಮನೆಯನ್ನು ವಿಶೇಷವಾಗಿ ಸ್ವಚ್ಛಗೊಳಿಸಬೇಕು. ಇದು ಬಾಹ್ಯ ಶುಚಿತ್ವವನ್ನು ಮಾತ್ರವಲ್ಲದೆ, ಆಂತರಿಕ ಶುದ್ಧೀಕರಣ ಮತ್ತು ಮಾನಸಿಕ ಸ್ಥಿರತೆಯನ್ನು ಸಂಕೇತಿಸುತ್ತದೆ.

ದೀಪಗಳನ್ನು ಬೆಳಗಿಸಿ, ಧೂಪದ್ರವ್ಯ ಮತ್ತು ಅಗರಬತ್ತಿಗಳನ್ನು ಬಳಸಿ, ಮತ್ತು ಎಲ್ಲಾ ಕುಟುಂಬ ಸದಸ್ಯರು ಸಾಮೂಹಿಕ ಧ್ಯಾನ ಮತ್ತು ಜಪದಲ್ಲಿ ಭಾಗವಹಿಸುವಂತೆ ಮಾಡಿ. ವಿಶೇಷವಾಗಿ ಮಹಿಳೆಯರು ಸಾತ್ವಿಕ ಆಹಾರವನ್ನು ಸೇವಿಸಬೇಕು ಮತ್ತು ಅನಗತ್ಯ ಕೆಲಸ, ಶಬ್ದ ಅಥವಾ ನಕಾರಾತ್ಮಕ ಚಟುವಟಿಕೆಗಳಿಂದ ದೂರವಿರಬೇಕು. ಈ ಅಭ್ಯಾಸವು ಮನೆಯಲ್ಲಿ ಸಕಾರಾತ್ಮಕ ಶಕ್ತಿ, ಧಾರ್ಮಿಕ ವಾತಾವರಣ ಮತ್ತು ಪವಿತ್ರ ವಾತಾವರಣವನ್ನು ಬೆಳೆಸುತ್ತದೆ, ಇದು ಎಲ್ಲಾ ಕುಟುಂಬ ಸದಸ್ಯರಿಗೆ ಶುಭಕರವಾಗಿದೆ.

ಮಹಿಳೆಯರಿಗೆ ವಿಶೇಷ ನಿಯಮ ಮತ್ತು ಮುನ್ನೆಚ್ಚರಿಕೆ:

ಮೌನಿ ಅಮಾವಾಸ್ಯೆಯಂದು, ಮಹಿಳೆಯರು ಕೆಲವು ನಿಯಮಗಳು ಮತ್ತು ಸಂಪ್ರದಾಯಗಳನ್ನು ಅನುಸರಿಸುವುದು ಅಗತ್ಯ. ಆಹಾರವನ್ನು ತಯಾರಿಸುವಾಗ, ಸಾತ್ವಿಕ ಮತ್ತು ಶುದ್ಧ ಪದಾರ್ಥಗಳನ್ನು ಬಳಸಿ ಮತ್ತು ಅದನ್ನು ಇಡೀ ಕುಟುಂಬಕ್ಕೆ ಭಕ್ತಿಯಿಂದ ಅರ್ಪಿಸಿ. ಮಹಿಳೆಯರು ಮೌನವನ್ನು ಪಾಲಿಸಬೇಕು ಮತ್ತು ಕೋಪ, ಆತುರ ಅಥವಾ ನಕಾರಾತ್ಮಕ ಆಲೋಚನೆಗಳಿಂದ ದೂರವಿರಬೇಕು. ಪೂಜೆ ಮಾಡುವಾಗ ಶುದ್ಧ ಮತ್ತು ಸಾತ್ವಿಕ ಬಟ್ಟೆಗಳನ್ನು ಧರಿಸಿ, ಮತ್ತು ಎಲ್ಲಾ ಕುಟುಂಬ ಸದಸ್ಯರ ಬಗ್ಗೆ ಸಂಯಮ, ತಾಳ್ಮೆ ಮತ್ತು ಸಕಾರಾತ್ಮಕ ನಡವಳಿಕೆಯನ್ನು ಕಾಪಾಡಿಕೊಳ್ಳಿ, ಶುದ್ಧ ಮತ್ತು ಶಾಂತಿಯುತ ಮನೆಯ ವಾತಾವರಣವನ್ನು ಖಚಿತಪಡಿಸಿಕೊಳ್ಳಿ.

ಇದನ್ನೂ ಓದಿ: ಮನೆಯ ಈ 5 ಸ್ಥಳಗಳಲ್ಲಿ ನವಿಲು ಗರಿ ಇರಿಸಿ; ಹಣಕ್ಕೆಂದೂ ಕೊರತೆಯಾಗದು!

ಪೂಜೆ, ಅರ್ಪಣೆ ಮತ್ತು ಧ್ಯಾನದ ಮಹತ್ವ:

ಮೌನಿ ಅಮಾವಾಸ್ಯೆಯಂದು ಪಿತೃ ತರ್ಪಣ ಮಾಡುವುದು ಮಹಿಳೆಯರಿಗೆ ವಿಶೇಷವಾಗಿ ಫಲಪ್ರದವೆಂದು ಪರಿಗಣಿಸಲಾಗಿದೆ. ಈ ದಿನ, ಮಹಿಳೆಯರು ಗಂಗಾನದಿಯಲ್ಲಿ ಸ್ನಾನ ಮಾಡಿದ ನಂತರ ಅಥವಾ ಶುದ್ಧ ನೀರನ್ನು ಬಳಸಿ ತರ್ಪಣ ಮಾಡಬಹುದು, ಇದು ಅವರ ಆಧ್ಯಾತ್ಮಿಕ ಶುದ್ಧತೆ ಮತ್ತು ಸದ್ಗುಣವನ್ನು ಹೆಚ್ಚಿಸುತ್ತದೆ. ತರ್ಪಣವು ದರ್ಬೆ ಹುಲ್ಲು, ಎಳ್ಳು ಮತ್ತು ನೀರನ್ನು ಬಳಸಿ, ಪೂರ್ವಜರನ್ನು ಸ್ಮರಿಸುವುದು ಮತ್ತು ಭಕ್ತಿಯಿಂದ ಅರ್ಪಿಸಬೇಕು.

ಧ್ಯಾನ ಮತ್ತು ಜಪ ಮಾಡುವಾಗ, ಧ್ಯಾನ, ಮೌನ ಮತ್ತು ಸಂಪೂರ್ಣ ಏಕಾಗ್ರತೆಯನ್ನು ಕಾಪಾಡಿಕೊಳ್ಳಬೇಕು. ಈ ದಿನದಂದು ದಾನ ಮಾಡುವುದು ಸಹ ಅತ್ಯಂತ ಪುಣ್ಯಕರವಾಗಿದೆ. ಧಾರ್ಮಿಕವಾಗಿ ನಡೆಸುವ ಪೂಜೆ ಮತ್ತು ತರ್ಪಣವು ಪೂರ್ವಜರಿಗೆ ಶಾಂತಿಯನ್ನು ತರುವುದಲ್ಲದೆ, ಮನೆಗೆ ಸಂತೋಷ, ಅದೃಷ್ಟ, ಮಾನಸಿಕ ಶಾಂತಿ ಮತ್ತು ಸಕಾರಾತ್ಮಕ ಶಕ್ತಿಯನ್ನು ತರುತ್ತದೆ ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:14 pm, Sun, 18 January 26

Source link

Gold Rate Today Bangalore: ಚಿನ್ನ, ಬೆಳ್ಳಿ ಬೆಲೆಗಳ ಏರಿಕೆ; ಇಲ್ಲಿದೆ ದರಪಟ್ಟಿ – Kannada News | Gold Price Today on 18th January 2026, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಜನವರಿ 18: ಈ ವಾರ ಏರಿಳಿತಗಳನ್ನು ಕಂಡಿದ್ದ ಚಿನ್ನದ ಬೆಲೆ (Gold Rate), ವಾರಾಂತ್ಯದಲ್ಲಿ ಗ್ರಾಮ್​ಗೆ 35 ರೂ ಹೆಚ್ಚಿದೆ. ವಿದೇಶಗಳಲ್ಲಿ ಅಲ್ಪ ಏರಿಳಿತಗಳಾಗಿವೆ. ಬೆಳ್ಳಿ ಬೆಲೆಯೂ ತುಸು ಏರಿದೆ. ಗ್ರಾಮ್​ಗೆ 3 ರೂ ಬೆಲೆ ಹೆಚ್ಚಳ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,31,800 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,43,780 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 29,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,31,800 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 29,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 31,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜನವರಿ 18ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,378 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,180 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,784 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 295 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,378 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,180 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 295 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,180 ರೂ
  • ಚೆನ್ನೈ: 13,280 ರೂ
  • ಮುಂಬೈ: 13,180 ರೂ
  • ದೆಹಲಿ: 13,195 ರೂ
  • ಕೋಲ್ಕತಾ: 13,180 ರೂ
  • ಕೇರಳ: 13,180 ರೂ
  • ಅಹ್ಮದಾಬಾದ್: 13,185 ರೂ
  • ಜೈಪುರ್: 13,195 ರೂ
  • ಲಕ್ನೋ: 13,195 ರೂ
  • ಭುವನೇಶ್ವರ್: 13,180 ರೂ

ಇದನ್ನೂ ಓದಿ: ಎಷ್ಟು ದುಡಿದರೂ ಹಣ ನಿಲ್ಲುತ್ತಿಲ್ಲವಾ? ಈ 50-30-20 ಟ್ರಿಕ್ಸ್ ಉಪಯೋಗಿಸಿ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 585 ರಿಂಗಿಟ್ (13,078 ರುಪಾಯಿ)
  • ದುಬೈ: 512.75 ಡಿರಾಮ್ (12,663 ರುಪಾಯಿ)
  • ಅಮೆರಿಕ: 143 ಡಾಲರ್ (12,971 ರುಪಾಯಿ)
  • ಸಿಂಗಾಪುರ: 184.70 ಸಿಂಗಾಪುರ್ ಡಾಲರ್ (12,997 ರುಪಾಯಿ)
  • ಕತಾರ್: 510 ಕತಾರಿ ರಿಯಾಲ್ (12,693 ರೂ)
  • ಸೌದಿ ಅರೇಬಿಯಾ: 520 ಸೌದಿ ರಿಯಾಲ್ (12,578 ರುಪಾಯಿ)
  • ಓಮನ್: 54.40 ಒಮಾನಿ ರಿಯಾಲ್ (12,818 ರುಪಾಯಿ)
  • ಕುವೇತ್: 41.78 ಕುವೇತಿ ದಿನಾರ್ (12,393 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 295 ರೂ
  • ಚೆನ್ನೈ: 310 ರೂ
  • ಮುಂಬೈ: 295 ರೂ
  • ದೆಹಲಿ: 295 ರೂ
  • ಕೋಲ್ಕತಾ: 295 ರೂ
  • ಕೇರಳ: 310 ರೂ
  • ಅಹ್ಮದಾಬಾದ್: 295 ರೂ
  • ಜೈಪುರ್: 295 ರೂ
  • ಲಕ್ನೋ: 295 ರೂ
  • ಭುವನೇಶ್ವರ್: 310 ರೂ
  • ಪುಣೆ: 295

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

4 ತಿಂಗಳು ಹೇಗೆ ಕಳೆಯಿತೋ ಗೊತ್ತಿಲ್ಲ; ಗಿಲ್ಲಿ ಕಾಮಿಡಿ ನೋಡಿ ಬಿಗ್ ಬಾಸ್ ವೀಕ್ಷಕರ ಮನದ ಮಾತು

‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋ (BBK 12) ಅಂತಿಮ ಹಂತಕ್ಕೆ ಬಂದಿದೆ. ಇಂದು (ಜನವರಿ 18) ಅದ್ದೂರಿಯಾಗಿ ಫಿನಾಲೆ ನಡೆಯುತ್ತಿದೆ. ಗಿಲ್ಲಿ ನಟ ಅವರು ವಿನ್ ಆಗುತ್ತಾರೆ ಎಂದು ಅವರ ಅಭಿಮಾನಿಗಳಿಗೆ ಶೇಕಡ 100ರಷ್ಟು ಭರವಸೆ ಇದೆ. ಮಂಡ್ಯದಲ್ಲಿ ಗಿಲ್ಲಿ ನಟ (Gilli Nata) ಅವರ ಬ್ಯಾನರ್​​ಗೆ ಎಳನೀರಿನ ಅಭಿಷೇಕ ಮಾಡಲಾಗಿದೆ. ‘ಡಮಾಲ್ ಡಿಮೀಲ್ ಡಕ್ಕಾ, ಗಿಲ್ಲಿ ಗೆಲ್ಲೋದು ಪಕ್ಕಾ’ ಎಂಬ ಸ್ಲೋಗನ್ ಎಲ್ಲ ಕಡೆಗಳಲ್ಲಿ ಕೇಳಿಬರುತ್ತಿದೆ. ‘ನಾವು ಪ್ರತಿ ದಿನ ಬಿಗ್ ಬಾಸ್ ನೋಡಿದ್ದೇ ಗಿಲ್ಲಿ ನಟ ಅವರ ಹಾಸ್ಯಕ್ಕಾಗಿ. ಗಿಲ್ಲಿಗೆ ಸರಿಸಾಟಿ ಯಾರೂ ಇಲ್ಲ. 4 ತಿಂಗಳು ಹೇಗೆ ಕಳೆಯಿತು ಅಂತ ಗೊತ್ತಾಗಲೇ ಇಲ್ಲ. ಅವನು ರೈತರ ಮಗ. ಪಳಾರ್ ಗಿಲ್ಲಿಗೆ ಜಯವಾಗಲಿ’ ಎಂದು ಫ್ಯಾನ್ಸ್ ಹೇಳಿದ್ದಾರೆ. ರಕ್ಷಿತಾ ಶೆಟ್ಟಿ, ಅಶ್ವಿನಿ ಗೌಡ, ಗಿಲ್ಲಿ ನಟ, ಕಾವ್ಯಾ ಶೈವ, ಧನುಷ್ ಗೌಡ ಮತ್ತು ಮ್ಯೂಟೆಂಟ್ ರಘು ಅವರು ಫಿನಾಲೆಗೆ (Bigg Boss Kannada Finale) ಬಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link