All posts by nagaraj11081993

ಕೊಲೆಗಾರನಿಗೆ ನಾಯಕನ ಪಟ್ಟ: ‘ಲಾರೆನ್ಸ್ ಆಫ್ ಪಂಜಾಬ್’ ಸಾಕ್ಷ್ಯಚಿತ್ರ ನಿಷೇಧ – Kannada News | Lawrence of Punjab Dacuseries banned by Central government

‘ನಾಯಕ’ ಎಂದರೆ ಒಳ್ಳೆಯವ, ಮಹಿಳೆಯರ ಘನತೆ ಕಾಪಾಡುವವ, ಶಿಷ್ಟರ ರಕ್ಷಣೆ ಮಾಡುವಾತ, ಸುಳ್ಳು ಹೇಳದವ, ಅನ್ಯಾಯದ ವಿರದ್ಧ ಹೋರಾಡುವವ, ಹಣಕ್ಕಾಗಿ ತನ್ನ ಆದರ್ಶ ತ್ಯಜಿಸದವ, ಹಿಂಸೆಯ ವಿರುದ್ಧ ನಿಲ್ಲುವವ. ಆದರೆ ಇತ್ತೀಚೆಗಿನ ಸಿನಿಮಾಗಳಲ್ಲಿ ‘ನಾಯಕ’ ಎಂದರೆ ರೌಡಿ, ಮಹಿಳಾ ಪೀಡಕ, ಹಿಂಸೆಯನ್ನು ಎಂಜಾಯ್ ಮಾಡುವವ ಎಂದಾಗಿದೆ. ಆದರೆ ಈಗ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ, ನಿಜ ಜೀವನದಲ್ಲಿ ರೌಡಿ, ಭೂಗತ ಪಾತಕಿ, ಕೊಲೆಗಾರರ ಆಗಿರುವವನನ್ನು ‘ನಾಯಕ’ನನ್ನಾಗಿಸಲಾಗುತ್ತಿದೆ. ಇಂಥಹದೇ ಥೀಮ್​​ನ ಒಂದು ಡಾಕ್ಯು ಸೀರೀಸ್ ಒಂದು ಬಿಡುಗಡೆ ಆಗಲಿದ್ದು, ಅದರ ಹೆಸರು ‘ಲಾರೆನ್ಸ್ ಆಫ್ ಪಂಜಾಬ್’ (Lawrence of Punjab) ಇದರ ನಿಷೇಧಕ್ಕೆ ಈಗ ಒತ್ತಾಯ ಕೇಳಿಬಂದಿತ್ತು. ಅದರಂತೆ ಸರ್ಕಾರ ಇದೀಗ ಡಾಕ್ಯು ಸೀರೀಸ್ ಬಿಡುಗಡೆಗೆ ನಿಷೇಧ ಹೇರಿದೆ.

‘ಲಾರೆನ್ಸ್ ಆಫ್ ಪಂಜಾಬ್’ ಡಾಕ್ಯು ಸೀರೀಸ್ (ಸಾಕ್ಷ್ಯ ಸರಣಿ) ಕುಖ್ಯಾತ ಭೂಗತ ಪಾತಕಿ ಲಾರೆನ್ಸ್ ಬಿಷ್ಣೋಯಿ ಕುರಿತಾಗಿದ್ದಾಗಿದೆ. ಸಾಕ್ಷ್ಯ ಸರಣಿ ಆಗಿದ್ದು, ನಿಜ ವ್ಯಕ್ತಿ, ದೃಶ್ಯಗಳು, ವಿಡಿಯೋಗಳ ಜೊತೆಗೆ ಚಿತ್ರೀಕರಿಸಿದ ದೃಶ್ಯಗಳನ್ನು ಸಹ ಒಳಗೊಂಡಿತ್ತು. ಈ ಸಾಕ್ಷ್ಯ ಸರಣಿಯಲ್ಲಿ ಲಾರೆನ್ಸ್ ಬಿಷ್ಣೋಯಿಯನ್ನು ‘ಹೀರೋ’ ಎಂಬಂತೆ ಬಿಂಬಿಸಲಾಗಿದೆ ಎಂಬ ಆರೋಪವಿತ್ತು. ಇಲ್ಲಿ ತಿಳಿಯಬೇಕಾದ ವಿಷಯವೆಂದರೆ ಲಾರೆನ್ಸ್ ಬಿಷ್ಣೊಯಿ ಪಾತಕಿ ಆಗಿದ್ದು, ಆತನ ಮೇಲೆ 80ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ ಬಹುತೇಕ ಕ್ರಿಮಿನಲ್ ಪ್ರಕರಣಗಳು. ಕೊಲೆ, ಅತ್ಯಾಚಾರ, ವಂಚನೆ, ಬೆದರಿಕೆ, ವಸೂಲಿ, ಸುಲಿಗೆ ಇನ್ನೂ ಹಲವು. ಆರು ಗಂಭೀರ ಪ್ರಕರಣಗಳಲ್ಲಿ ಲಾರೆನ್ಸ್ ಅಪರಾಧಿ ಎಂದು ಈಗಾಗಲೇ ಘೋಷಣೆ ಸಹ ಆಗಿದೆ. ಇಂಥಹಾ ವ್ಯಕ್ತಿಯ ಬಗ್ಗೆ ಇದೀಗ ಸಾಕ್ಷ್ಯಚಿತ್ರ ನಿರ್ಮಿಸಲಾಗಿದೆ.

‘ಲಾರೆನ್ಸ್ ಆಫ್ ಪಂಜಾಬ್’ ಡಾಕ್ಯುಸೀರಿಸ್ ಬಿಡುಗಡೆಗೆ ಹಲವರು ವಿರೋಧ ವ್ಯಕ್ತಪಡಿಸಿದ್ದರು. ಈ ಕುರಿತು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಹ ಸಲ್ಲಿಸಲಾಗಿತ್ತು. ಸ್ವತಃ ಪಂಜಾಬ್ ಕಾಂಗ್ರೆಸ್, ಈ ಕುರಿತು ಅರ್ಜಿ ಸಲ್ಲಿಸಿ, ನಿಷೇಧಕ್ಕೆ ಒತ್ತಾಯಿಸಿತ್ತು. ಲಾರೆನ್ಸ್ ಬಿಷ್ಣೋಯಿ ಸಹೋದರ ಸಂಬಂಧಿ ಸಹ ಡಾಕ್ಯುಸೀರೀಸ್ ಬಿಡುಗಡೆಗೆ ವಿರೋಧಿಸಿದ್ದರು. ಅಲ್ಲದೆ, ಬಿಷ್ಣೋಯಿ ಗ್ಯಾಂಗ್​​ನಿಂದ ಹತ್ಯೆಯಾದ ಖ್ಯಾತ ಗಾಯಕ, ಪಂಜಾಬ್ ಕಾಂಗ್ರೆಸ್ ಯುವ ಮುಖಂಡ ಸಿಧು ಮೂಸೆವಾಲ ತಂದೆಯವರೂ ಸಹ ಈ ಡಾಕ್ಯು ಸೀರೀಸ್ ಬಿಡುಗಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ:‘ರಾಜ ಶಿವಾಜಿ’ ಸಿನಿಮಾದ ಕಲಾವಿದರಿಗೆ ಸಿಕ್ಕಿದೆ ಭಾರೀ ಸಂಭಾವನೆ

ಲಾರೆನ್ಸ್ ಬಿಷ್ಣೋಯ್ ವಿರುದ್ಧದ ಪ್ರಕರಣಗಳು ಇನ್ನೂ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿವೆ. ಇಂತಹ ಸಮಯದಲ್ಲಿ ಈ ಸರಣಿ ಬಿಡುಗಡೆ ಮಾಡುವುದು ಸರಿಯಲ್ಲ ಮತ್ತು ಇದು ನ್ಯಾಯಾಂಗ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರಬಹುದು ಎಂಬ ಆತಂಕವನ್ನು ಅವರ ಕುಟುಂಬ ಸದಸ್ಯರು ವ್ಯಕ್ತಪಡಿಸಿದ್ದರು, ಪಂಜಾಬ್ ಪೊಲೀಸರು ಕೂಡ ಈ ಸಾಕ್ಷ್ಯಚಿತ್ರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ. ಈ ಸರಣಿಯು ಸಮಾಜದಲ್ಲಿ ಅಪರಾಧಗಳನ್ನು ವೈಭವೀಕರಿಸಬಹುದು ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಬಹುದು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಪತ್ರ ಬರೆದು ಇದನ್ನು ನಿರ್ಬಂಧಿಸುವಂತೆ ಕೋರಿತ್ತು.

ಅದರಂತೆ, ‘ಲಾರೆನ್ಸ್ ಆಫ್ ಬಿಷ್ಣೋಯಿ’ ಸಾಕ್ಷ್ಯ ಚಿತ್ರ ನಿಷೇಧಕ್ಕೆ ಒತ್ತಾಯಿಸಿ ಹಾಕಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆಯು ಈ ಡಾಕ್ಯುಸರಣಿಯನ್ನು ನಿಷೇಧ ಮಾಡುವುದಾಗಿ ಹರಯಾಣ ಹೈಕೋರ್ಟ್ ಗೆ ಮಾಹಿತಿ ನೀಡಿದೆ. ‘ಲಾರೆನ್ಸ್ ಆಫ್ ಬಿಷ್ಣೋಯಿ’ ಡಾಕ್ಯು ಸೀರೀಸ್ ಏಪ್ರಿಲ್ 27ರಂದು ಬಿಡುಗಡೆ ಆಗಬೇಕಿತ್ತು. ಈಗಾಗಲೇ ಬಿಡುಗಡೆ ಆಗಿರುವ ಟ್ರೈಲರ್​​ನಲ್ಲಿ ತೋರಿಸಿರುವಂತೆ ಕೆಲವು ಪೊಲೀಸ್ ಅಧಿಕಾರಿಗಳು, ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು ಪಂಜಾಬ್​ನ ಭೂತಕ ಗ್ಯಾಂಗ್​​ಗಳು ಹಾಗೂ ಲಾರೆನ್ಸ್ ಬಿಷ್ಣೋಯಿ ಬಗ್ಗೆ ಮಾತನಾಡಿದ್ದಾರೆ. ಬಿಷ್ಣೋಯಿಯನ್ನು ಅದ್ಧೂರಿ ಹಿನ್ನೆಲೆ ಸಂಗೀತದೊಂದಿಗೆ ‘ಹೀರೋ’ ರೀತಿ ತೋರಿಸಿರುವ ದೃಶ್ಯಗಳು ಸಹ ಟ್ರೈಲರ್​​ನಲ್ಲಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕ್ಯಾನ್ಸರ್ ಸಂಬಂಧಿತ ಚಿಕಿತ್ಸೆಗೆ ದಾಖಲಾಗಿದ್ದ ವೃದ್ಧೆ ಸಾವು! ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣ ಎಂದು ಆರೋಪ – Kannada News | Ballari Hospital Negligence: Elderly Cancer Patient Dies Post Surgery, Family alleges

ಕ್ಯಾನ್ಸರ್ ಸಂಬಂಧಿತ ಚಿಕಿತ್ಸೆಗೆ ದಾಖಲಾಗಿದ್ದ ವೃದ್ಧೆ ಸಾವು!

ಬಳ್ಳಾರಿ, ಏಪ್ರಿಲ್ 24: ಜಿಲ್ಲೆಯ ಬಿಎಂಇಆರ್‌ಸಿ ಆಸ್ಪತ್ರೆಯಲ್ಲಿ ಕ್ಯಾನ್ಸರ್ (Cancer) ಚಿಕಿತ್ಸೆಗೆ ದಾಖಲಾಗಿದ್ದ ವೃದ್ಧೆ ಸಾವನ್ನಪ್ಪಿದ ಘಟನೆ ವಿವಾದಕ್ಕೆ ಕಾರಣವಾಗಿದ್ದು, ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯವೇ ಸಾವಿಗೆ ಕಾರಣವೆಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಆಪರೇಷನ್ ನಂತರ ಸೂಕ್ತ ಔಷಧಿ, ಇಂಜೆಕ್ಷನ್ ನೀಡದ ಕಾರಣದಿಂದ ವೈದ್ಧೆ ಸಾವನ್ನಪ್ಪಿದ್ದಾರೆ ಎಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ.

ಸಮಯಕ್ಕೆ ಚಿಕಿತ್ಸೆ ಸಿಕ್ಕಿದ್ದರೆ ಅಕ್ಕಮ್ಮ ಬದುಕುತ್ತಿದ್ದರು ಎಂದು ಕುಟುಂಬಸ್ಥರ ಅಳಲು

ಬಾಯಿಯ ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿದ್ದ ಅಕ್ಕಮ್ಮ (70) ಎಂಬುವವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಏಪ್ರಿಲ್ 17ರಂದು ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಆಪರೇಷನ್ ಯಶಸ್ವಿಯಾಗಿ ನಡೆದಿತ್ತು ಎಂದು ವೈದ್ಯರು ತಿಳಿಸಿದ್ದರು. ಶಸ್ತ್ರಚಿಕಿತ್ಸೆಯ ನಂತರವೂ ವೈದ್ಯರು ಸರಿಯಾಗಿಯೇ ನೋಡಿಕೊಂಡಿದ್ದರು ಎನ್ನಲಾಗಿದೆ.

ಆದರೆ ಆಪರೇಷನ್ ಬಳಿಕ ಆಸ್ಪತ್ರೆ ಸಿಬ್ಬಂದಿ ಅಗತ್ಯವಿರುವ ಸಮಯಕ್ಕೆ ಇಂಜೆಕ್ಷನ್, ಔಷಧಿ ಹಾಗೂ ಇತರೆ ಚಿಕಿತ್ಸೆ ನೀಡಲಿಲ್ಲ ಎಂಬ ಆರೋಪ ಕೇಳಿಬಂದಿದೆ. ವೈದ್ಯರು ಸೂಚನೆ ನೀಡಿದ್ದರೂ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದು, ಸಮಯಕ್ಕೆ ಚಿಕಿತ್ಸೆ ಸಿಕ್ಕಿದ್ದರೆ ಅಕ್ಕಮ್ಮ ಬದುಕುತ್ತಿದ್ದರು ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.

ಖಾಸಗಿ ಮೆಡಿಸಿನ್​ಗೆ ಸಾವಿರಾರು ರೂ. ಖರ್ಚು!

ಆಸ್ಪತ್ರೆಯಲ್ಲಿ ಔಷಧ ಲಭ್ಯವಿಲ್ಲವೆಂದು ಹೇಳಿ ಖಾಸಗಿ ಮೆಡಿಸಿನ್ ಖರೀದಿಸಲು ಹೇಳಲಾಗಿದ್ದು, ಸುಮಾರು 40 ಸಾವಿರ ರೂ. ಖರ್ಚು ಮಾಡಿಸಿದ್ದಾರೆ ಎಂಬ ಆರೋಪವೂ ಇದೆ. ಜೊತೆಗೆ, ಖಾಸಗಿ ಪ್ರಯೋಗಾಲಯದಲ್ಲಿ ರಕ್ತ ಪರೀಕ್ಷೆ ಮಾಡಿಸಲು ಒತ್ತಾಯಿಸಲಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ, ಅಕ್ಕಮ್ಮ ಸಾವಿಗೆ ಕಾರಣವಾದ ಸಿಬ್ಬಂದಿ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಮರಳಿ ಬಾಲ್ಯವನ್ನು ನೆನಪಿಸುವಂತಿದೆ ಈ ದೃಶ್ಯ; ಪಾಠದ ನಡುವೆ ತಿಂಡಿ ತಿಂದ ಪುಟಾಣಿ – Kannada News | A little boy who stole and ate a snack between lessons

ಪುಟ್ಟ ಮಕ್ಕಳು (little kids) ಕ್ಲಾಸ್ ರೂಮ್ ನಲ್ಲಿ ಶಿಕ್ಷಕರಿಗೆ ತಿಳಿಯದಂತೆ ಚಾಕಲೇಟ್ ತಿನ್ನೋದು, ಟಿಫನ್ ಬಾಕ್ಸ್ ತೆರೆದು ತಿಂಡಿ ತಿನ್ನೋದು ಹೀಗೆ ಇನ್ನಿತ್ತರ ಚಟುವಟಿಕೆಯಲ್ಲಿ ತೊಡಗಿ ಸಿಕ್ಕಿ ಬೀಳುತ್ತಾರೆ. ನೀವು ಕೂಡ ಶಿಕ್ಷಕರಿಗೆ ಚಳ್ಳೆ ಹಣ್ಣು ತಿನ್ನಿಸಿರಬಹುದು. ಕೆಲವೊಮ್ಮೆ ಟೀಚರ್ ಕೈಯಲ್ಲಿ ಸಿಕ್ಕಿ ಬಿದ್ದು ನೆಪಗಳನ್ನು ಹೇಳಿದ್ದೀರಬಹುದು. ಈ ಪುಟಾಣಿಯದ್ದು ಅದೇ ಕಥೆ. ಪುಟಾಣಿಯು ಶಿಕ್ಷಕರನ್ನು ಯಾಮಾರಿಸುವ ವಿಡಿಯೋ ವೈರಲ್ ಆಗಿದೆ. ಟೀಚರ್ ಹೋಮ್ ವರ್ಕ್ ಮಾಡೋದಕ್ಕೆ ಹೇಳಿದ್ರೆ ಈ ಪುಟ್ಟ ಹುಡುಗ ಟಿಫನ್ ಬಾಕ್ಸ್ ತೆರೆದು ಮೆಲ್ಲನೆ ತಿಂಡಿ ತಿನ್ನುತ್ತಿದ್ದಾನೆ. ಈ ವಿಡಿಯೋ ನೋಡಿದ ನೆಟ್ಟಿಗರು ತಮ್ಮ ಬಾಲ್ಯವನ್ನು ನೆನಪಿಸಿಕೊಂಡಿದ್ದಾರೆ.

ನಾಝಿಯಾ ಆಮೀರ್‌ (Nazia Aamir) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲೂ ಕ್ಲಾಸ್ ರೂಮ್ ದೃಶ್ಯವನ್ನು ನೋಡಬಹುದು. ಸಹಪಾಠಿಗಳು ಬರೆಯುವುದರಲ್ಲಿ ಬ್ಯುಸಿಯಾದ್ರೆ, ಈ ಪುಟ್ಟ ಹುಡುಗನು ಟೀಚರ್‌ಗೆ ತಿಳಿಯದಂತೆ ಮೆಲ್ಲನೆ ಟಿಫಿನ್ ಬಾಕ್ಸ್ ತೆರೆದು ತಿಂಡಿ ತಿನ್ನುತ್ತಿದ್ದಾನೆ. ತದನಂತರದಲ್ಲಿ ಏನು ಅರಿಯದಂತೆ ಬರೆಯಲು ಶುರು ಮಾಡಿದ್ದಾನೆ. ಈ ಪುಟ್ಟ ಹುಡುಗನ ಕಳ್ಳಾಟವನ್ನು ಶಿಕ್ಷಕರೊಬ್ಬರು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಮಾಲ್‌ನಲ್ಲಿದ್ದ ಗೊಂಬೆಗಳ ಪಾದ ಮುಟ್ಟಿ ನಮಸ್ಕರಿಸಿದ ಪುಟಾಣಿ

ಈ ವಿಡಿಯೋ ಆರು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಬಾಲ್ಯದಲ್ಲಿ ನಾನು ಹೀಗೆ ಮಾಡಿದ್ದೆ ಎಂದು ಹೇಳಿದರೆ, ಇನ್ನೊಬ್ಬರು ತುಂಬಾ ಮುದ್ದಾದ ವಿಡಿಯೋ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಖಂಡಿತವಾಗಿ ಇದು ನಾನೇ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Vastu Mirrors: ಮನೆಯ ಈ ಭಾಗಗಳಲ್ಲಿ ತಪ್ಪಿಯೂ ಕನ್ನಡಿ ಇಡಬೇಡಿ; ವಾಸ್ತು ತಜ್ಞರ ಸಲಹೆ ಇಲ್ಲಿದೆ – Kannada News | Vastu Mirrors: Avoid These Key Placement Mistakes for Positive Home Energy

ಮನೆಯಲ್ಲಿರುವ ಪ್ರತಿಯೊಂದು ವಸ್ತುವೂ ತನ್ನದೇ ಆದ ಶಕ್ತಿಯನ್ನು ಹೊಂದಿರುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಇದರಲ್ಲಿ ಕನ್ನಡಿ ಅತ್ಯಂತ ಮುಖ್ಯವಾದುದು. ಸರಿಯಾದ ದಿಕ್ಕಿನಲ್ಲಿರುವ ಕನ್ನಡಿ ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸಿದರೆ, ತಪ್ಪು ಸ್ಥಳದಲ್ಲಿರುವ ಕನ್ನಡಿ ನಕಾರಾತ್ಮಕತೆಯನ್ನು ಆಹ್ವಾನಿಸುತ್ತದೆ. ಕನ್ನಡಿಗೆ ಸಂಬಂಧಿಸಿದಂತೆ ನೀವು ಮಾಡಬಾರದ ಕೆಲವು ಪ್ರಮುಖ ತಪ್ಪುಗಳು ಇಲ್ಲಿವೆ.

ಹಾಸಿಗೆಯ ಮುಂದೆ ಕನ್ನಡಿ:

ವಾಸ್ತು ಶಾಸ್ತ್ರದ ಪ್ರಕಾರ, ಮಲಗುವ ಕೋಣೆಯಲ್ಲಿ ಹಾಸಿಗೆಗೆ ನೇರವಾಗಿ ಎದುರಾಗಿ ಕನ್ನಡಿಯನ್ನು ಇಡಬಾರದು. ಮಲಗಿರುವಾಗ ನಿಮ್ಮ ಪ್ರತಿಬಿಂಬ ಕನ್ನಡಿಯಲ್ಲಿ ಕಂಡರೆ ಅದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಇದು ಮಾನಸಿಕ ಆತಂಕ ಮತ್ತು ದೈಹಿಕ ಅಸ್ವಸ್ಥತೆಗೆ ಕಾರಣವಾಗುತ್ತದೆ ಎಂದು ನಂಬಲಾಗಿದೆ.

ಒಡೆದ ಕನ್ನಡಿ ನಕಾರಾತ್ಮಕತೆಯ ಸಂಕೇತ:

ಮನೆಯಲ್ಲಿ ಒಡೆದ ಅಥವಾ ಬಿರುಕು ಬಿಟ್ಟ ಕನ್ನಡಿಯನ್ನು ಇಡುವುದು ಅತ್ಯಂತ ಅಶುಭ. ಇದು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಕುಟುಂಬದ ಸದಸ್ಯರ ನಡುವೆ ಮನಸ್ತಾಪ ಉಂಟುಮಾಡುತ್ತದೆ. ಅಂತಹ ಕನ್ನಡಿ ಕಂಡುಬಂದ ತಕ್ಷಣ ಅದನ್ನು ಮನೆಯಿಂದ ಹೊರಹಾಕುವುದು ಶ್ರೇಯಸ್ಕರ.

ಅಡುಗೆಮನೆಯಲ್ಲಿ ಕನ್ನಡಿ ಇಡಬೇಡಿ:

ಅಡುಗೆಮನೆಯು ಮನೆಯ ಶಕ್ತಿಯ ಕೇಂದ್ರಬಿಂದು. ವಾಸ್ತು ಪ್ರಕಾರ, ಅಡುಗೆಮನೆಯಲ್ಲಿ ಕನ್ನಡಿಗಳನ್ನು ಇಡುವುದರಿಂದ ಮನೆಯ ಶಾಂತಿಗೆ ಭಂಗ ಬರಬಹುದು. ಇದು ಅನಗತ್ಯ ಕಲಹ ಮತ್ತು ಮನೆಯ ಒಟ್ಟಾರೆ ವಾತಾವರಣದಲ್ಲಿ ಅಪಶ್ರುತಿಯನ್ನು ಸೃಷ್ಟಿಸುತ್ತದೆ.

ಮುಖ್ಯ ಬಾಗಿಲಿನ ಮೇಲೆ ಕನ್ನಡಿ:

ಅಲಂಕಾರಕ್ಕಾಗಿ ಅನೇಕರು ಮುಖ್ಯ ಬಾಗಿಲಿನ ಮೇಲೆ ಕನ್ನಡಿ ಹಾಕುತ್ತಾರೆ. ಆದರೆ, ಇದು ಮನೆಗೆ ಪ್ರವೇಶಿಸುವ ಸಕಾರಾತ್ಮಕ ಶಕ್ತಿಯನ್ನು ಮರಳಿ ಪ್ರತಿಫಲಿಸುತ್ತದೆ (Reflect). ಇದರಿಂದ ಮನೆಗೆ ಬರಬೇಕಾದ ಅದೃಷ್ಟ ಹೊರಹೋಗಬಹುದು. ಹಾಗಾಗಿ, ಬಾಗಿಲಿಗೆ ನೇರವಾಗಿ ಎದುರಾಗಿ ಅಥವಾ ಬಾಗಿಲಿನ ಮೇಲೆ ಕನ್ನಡಿ ಇಡಬೇಡಿ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಅತಿಯಾದ ಕನ್ನಡಿಗಳ ಬಳಕೆ ಬೇಡ:

ಮನೆ ಸುಂದರವಾಗಿ ಕಾಣಲಿ ಎಂದು ಎಲ್ಲೆಂದರಲ್ಲಿ ಕನ್ನಡಿಗಳನ್ನು ಅಳವಡಿಸಬೇಡಿ. ಅತಿಯಾದ ಕನ್ನಡಿಗಳು ಶಕ್ತಿಯ ಸಮತೋಲನವನ್ನು ತಪ್ಪಿಸುತ್ತವೆ ಮತ್ತು ಅಸ್ತವ್ಯಸ್ತ ವಾತಾವರಣವನ್ನು ಸೃಷ್ಟಿಸುತ್ತವೆ. ಅಗತ್ಯವಿರುವ ಕಡೆ ಮಾತ್ರ ಯೋಜಿತವಾಗಿ ಕನ್ನಡಿಯನ್ನು ಅಳವಡಿಸಿ.

ಸ್ವಚ್ಛತೆಯೇ ಸಮೃದ್ಧಿ:

ಸ್ಥಳದ ಜೊತೆಗೆ ಕನ್ನಡಿಯ ಸ್ವಚ್ಛತೆಯೂ ಅತಿ ಮುಖ್ಯ. ಧೂಳು ಹಿಡಿದ ಅಥವಾ ಕೊಳಕು ಕನ್ನಡಿಗಳು ಬಡತನಕ್ಕೆ ದಾರಿಯಾಗಬಹುದು ಮತ್ತು ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತವೆ. ಸದಾ ಕನ್ನಡಿಯನ್ನು ಶುಭ್ರವಾಗಿಟ್ಟುಕೊಳ್ಳುವುದರಿಂದ ಮನೆಯಲ್ಲಿ ಸಕಾರಾತ್ಮಕತೆ ತುಂಬಿರುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 1:19 pm, Fri, 24 April 26

Source link

ಮೊಬೈಲ್ ಕೊಡದಿದ್ದಕ್ಕೆ ಹುಬ್ಬಳ್ಳಿಯಲ್ಲಿ 14 ವರ್ಷದ ಬಾಲಕ ಆತ್ಮಹತ್ಯೆ: ಪೊಲೀಸ್ ಕಮಿಷನರ್ ಹೇಳಿದ್ದೇನು ನೋಡಿ – Kannada News | Hubballi Tragedy: 14 Year Old Boy ends life After Mother Takes Away Mobile Phone; Police Chief Issues Advisory

ಮೊಬೈಲ್ ಕೊಡದಿದ್ದಕ್ಕೆ ಹುಬ್ಬಳ್ಳಿಯಲ್ಲಿ 14 ವರ್ಷದ ಬಾಲಕ ಆತ್ಮಹತ್ಯೆImage Credit source: tv9

ಹುಬ್ಬಳ್ಳಿ, ಏಪ್ರಿಲ್ 24: ಮೊಬೈಲ್ ಗೇಮ್‌ಗೆ (Mobile Game) ದಾಸನಾಗಿದ್ದ ಬಾಲಕನೊಬ್ಬ ತಾಯಿ ಫೋನ್ ಕಿತ್ತುಕೊಂಡಿದ್ದಕ್ಕೆ ಮನನೊಂದು ನೇಣಿಗೆ ಶರಣಾಗಿರುವ ದಾರುಣ ಘಟನೆ ಹುಬ್ಬಳ್ಳಿಯ ಉದಯನಗರದಲ್ಲಿ ನಡೆದಿದೆ. 14 ವರ್ಷದ ಸಮರ್ಥ್ ಆತ್ಮಹತ್ಯೆ ಮಾಡಿಕೊಂಡ ಬಾಲಕ. ಉದಯನಗರದ ನಿವಾಸಿಯಾದ ಸಮರ್ಥ್ ಕಳೆದ ಕೆಲವು ದಿನಗಳಿಂದ ‘ಫ್ರೀಫೈರ್’ (Free Fire) ನಂತಹ ಆನ್‌ಲೈನ್ ಗೇಮ್‌ಗಳಿಗೆ ವಿಪರೀತ ಅಡಿಕ್ಟ್ ಆಗಿದ್ದ. ಗುರುವಾರ ರಾತ್ರಿ ಸತತವಾಗಿ ಗೇಮ್ ಆಡುತ್ತಿದ್ದ ಮಗನಿಗೆ ತಾಯಿ ಬುದ್ಧಿವಾದ ಹೇಳಿದ್ದಾರೆ. ‘ಮೊಬೈಲ್ ಸಾಕು ಮಾಡು, ಓದಿಕೊಳ್ಳುವ ಕಡೆ ಗಮನ ಕೊಡು’ ಎಂದು ಹೇಳಿ ಆತನ ಕೈಲಿದ್ದ ಮೊಬೈಲ್ ಕಿತ್ತುಕೊಂಡಿದ್ದಾರೆ. ಇದರಿಂದ ತೀವ್ರವಾಗಿ ನೊಂದ ಸಮರ್ಥ್, ತಕ್ಷಣ ತನ್ನ ಕೋಣೆಗೆ ಹೋಗಿ ಒಳಗಿನಿಂದ ಬಾಗಿಲು ಹಾಕಿಕೊಂಡಿದ್ದಾನೆ.

ಸುಮಾರು 15-20 ನಿಮಿಷಗಳಾದರೂ ಬಾಲಕ ಹೊರಬಾರದಿದ್ದಾಗ ಆತಂಕಗೊಂಡ ತಂದೆ, ಕಿಟಕಿಯಿಂದ ಇಣುಕಿ ನೋಡಿದ್ದಾರೆ. ಈ ವೇಳೆ ಮಗ ಸೀರೆಯಿಂದ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ತಕ್ಷಣ ಬಾಗಿಲು ಮುರಿದು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲಾಗಲೇ ಆತ ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದ್ದಾರೆ. ಈ ಸಂಬಂಧ ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೋಷಕರಿಗೆ ಪೊಲೀಸ್ ಕಮಿಷನರ್ ಶಶಿಕುಮಾರ್ ಕಿವಿಮಾತು


ಘಟನೆ ಕುರಿತು ಪ್ರತಿಕ್ರಿಯಿಸಿರುವ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಇದು ಅತ್ಯಂತ ದುರದೃಷ್ಟಕರ ಘಟನೆ. ಮಕ್ಕಳಿಗೆ ಮೊಬೈಲ್ ನೀಡುವ ಮುನ್ನ ಪೋಷಕರು ಹೆಚ್ಚಿನ ಜಾಗರೂಕತೆ ವಹಿಸಬೇಕು. ಮಕ್ಕಳು ಮೊಬೈಲ್ ಅಡಿಕ್ಷನ್‌ಗೆ ಒಳಗಾದಾಗ ಪೋಷಕರನ್ನೇ ಬ್ಲ್ಯಾಕ್‌ಮೇಲ್ ಮಾಡುವ ಹಂತಕ್ಕೆ ತಲುಪುತ್ತಾರೆ. ಒಂದು ವೇಳೆ ಮಕ್ಕಳು ಮೊಬೈಲ್‌ಗೆ ಹೆಚ್ಚು ಅಡಿಕ್ಟ್ ಆಗಿದ್ದರೆ, ಏಕಾಏಕಿ ಮೊಬೈಲ್‌ನಿಂದ ದೂರವಿಡಲು ಪ್ರಯತ್ನಿಸಬಾರದು. ಬದಲಾಗಿ, ಅವರ ಶಿಕ್ಷಕರು ಅಥವಾ ಮಕ್ಕಳ ತಜ್ಞರ ಜೊತೆ ಸಮಾಲೋಚಿಸಿ, ನಿಧಾನವಾಗಿ ಈ ವ್ಯಸನದಿಂದ ಹೊರಬರುವಂತೆ ಮಾಡಬೇಕು.ಎಂದು ಕಿವಿಮಾತು ಹೇಳಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ

ಮೊಬೈಲ್ ಅಡಿಕ್ಷನ್ ಎಂದಿಗೂ ಒಳ್ಳೆಯದಲ್ಲ. ಮೊಬೈಲ್‌ನಲ್ಲಿ ಗೇಮ್ ಆಡಿ ಜೀವನದಲ್ಲಿ ಯಾರೂ ಯಶಸ್ವಿಯಾದ ಉದಾಹರಣೆಗಳಿಲ್ಲ. ಮೊಬೈಲ್ ಅನ್ನು ರಚನಾತ್ಮಕ ಉದ್ದೇಶಗಳಿಗಾಗಿ ಬಳಸಬಹುದು. ಗ್ರಾಮರ್, ಭಾಷೆ, ಹೊಸ ಕೌಶಲ್ಯಗಳನ್ನು ಕಲಿಯಲು ಮತ್ತು YouTube ನಲ್ಲಿ ಲಭ್ಯವಿರುವ ಕೋರ್ಸ್‌ಗಳ ಮೂಲಕ ಮುಂದಿನ ವರ್ಷದ ವಿಷಯಗಳನ್ನು ಸಿದ್ಧಪಡಿಸಲು ಮೊಬೈಲ್ ಉಪಯುಕ್ತವಾಗಿದೆ ಎಂದು ಶಶಿಕುಮಾರ್ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರೈಲಿನ ಮೇಲೆ ಹತ್ತಿ ಹೈವೋಲ್ಟೇಜ್ ತಂತಿ ಸ್ಪರ್ಶಿಸಿ ಒಂದೇ ಕ್ಷಣದಲ್ಲಿ ಸುಟ್ಟು ಕರಕಲಾದ ವ್ಯಕ್ತಿ – Kannada News | Fatal Misstep: Youth Dies After Contact with Overhead Rail Wire in Darbhanga

ದರ್ಭಂಗ, ಏಪ್ರಿಲ್ 24: ಕೇವಲ ಒಂದು ಕ್ಷಣದ ಅಜಾಗರೂಕತೆ ಅಥವಾ ದುಸ್ಸಾಹಸ ಹೇಗೆ ಪ್ರಾಣಕ್ಕೆ ಕುತ್ತು ತರುತ್ತದೆ ಎಂಬುದಕ್ಕೆ ಈ ವೈರಲ್ ವಿಡಿಯೋ ಸಾಕ್ಷಿಯಾಗಿದೆ. ಬಿಹಾರದ ದರ್ಭಂಗದಲ್ಲಿ ವ್ಯಕ್ತಿಯೊಬ್ಬ ರೈಲಿನ ಮೇಲೇರಿ ನಡೆಯುವ ಸಾಹಸ ಮಾಡಲು ಹೋಗಿ ವಿದ್ಯುತ್ ತಂತಿ ಸ್ಪರ್ಶಿಸಿ ಪ್ರಾಣಬಿಟ್ಟಿದ್ದಾರೆ. ಸರಕು ರೈಲು ನಿಧಾನವಾಗಿ ಚಲಿಸುತ್ತಿದ್ದಾಗ ಯುವಕ ಬೋಗಿಯ ಮೇಲೆ ಹತ್ತಿದ್ದಾನೆ. ಇದನ್ನು ಗಮನಿಸಿದ ನಿಲ್ದಾಣದಲ್ಲಿದ್ದ ಜನರು ಮತ್ತು ಪ್ರಯಾಣಿಕರು, ಕೆಳಗಿಳಿಯಪ್ಪಾ, ಅಪಾಯವಿದೆ ಎಂದು ಪದೇ ಪದೇ ಕಿರುಚುತ್ತಾ ಎಚ್ಚರಿಕೆ ನೀಡಿದ್ದಾರೆ. ಆದರೆ, ಯಾವುದನ್ನೂ ಲೆಕ್ಕಿಸದ ಯುವಕ ಬೋಗಿಯ ಮೇಲೆ ನಡೆಯುತ್ತಾ ಮುಂದೆ ಸಾಗಿದ್ದಾನೆ.

ಯುವಕ ಬೋಗಿಯ ಮೇಲ್ಭಾಗದಲ್ಲಿ ನಿಂತು ತನ್ನ ಕೈಯನ್ನು ಅಪಾಯಕಾರಿಯಾಗಿ ಓವರ್‌ಹೆಡ್ ವಿದ್ಯುತ್ ಮಾರ್ಗದ (High-Voltage Line) ಹತ್ತಿರ ಕೊಂಡೊಯ್ದಿದ್ದಾನೆ. ಕೈ ತಂತಿಗೆ ತಗುಲಿದ ತಕ್ಷಣವೇ ದೊಡ್ಡ ಮಟ್ಟದ ಸ್ಫೋಟದಂತಹ ಶಬ್ದದೊಂದಿಗೆ ಬೆಂಕಿ ಕಾಣಿಸಿಕೊಂಡಿತ್ತು.
ವಿದ್ಯುತ್ ಆಘಾತದ ತೀವ್ರತೆಗೆ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ರೈಲ್ವೆ ಅಧಿಕಾರಿಗಳು ದೃಢಪಡಿಸಿದ್ದಾರೆ. ಮೃತ ಯುವಕನ ಗುರುತು ಇನ್ನೂ ಪತ್ತೆಯಾಗಿಲ್ಲ. ಈತ ಮಾನಸಿಕವಾಗಿ ಅಸ್ಥಿರವಾಗಿದ್ದನೇ ಅಥವಾ ಆತ್ಮಹತ್ಯೆಗೆ ಯತ್ನಿಸಿದ್ದನೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯಕ್ಕೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬಿಜೆಪಿ ಮಾಜಿ ಮುಖಂಡನ ಪುತ್ರನಿಂದ ಯುವತಿಗೆ ದೋಖಾ ಕೇಸ್​: ಹೈಕೋರ್ಟ್​​ನಿಂದ ಮಹತ್ವದ ಆದೇಶ – Kannada News | BJP Ex Leader’s Son Cheating Case: High Court Orders 75K Monthly Payment for Child and Mother

ಬೆಂಗಳೂರು, ಏಪ್ರಿಲ್​​ 24: ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ ಪರಿಣಾಮ ಆಕೆ ಮಗುವಿಗೆ ಜನ್ಮ ನೀಡಿದ ಬಳಿಕ ವಂಚಿಸಿದ್ದ ಪುತ್ತೂರಿನ ಬಿಜೆಪಿ ಮಾಜಿ ಮುಖಂಡ ಜಗನ್ನಿವಾಸ್ ರಾವ್ ಪುತ್ರ ಕೃಷ್ಣ ಜೆ. ರಾವ್ ಮೇಲಿನ ಪ್ರಕರಣ ಸಂಬಂಧ ಹೈಕೋರ್ಟ್​​ ಮಹತ್ವದ ಆದೇಶ ನೀಡಿದೆ. ಪ್ರಕರಣ ರದ್ದು ಕೋರಿ ಕೃಷ್ಣ ಜೆ.ರಾವ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಷರತ್ತಿನ ಮೇರೆಗೆ ಕೃಷ್ಣ ಜೆ.ರಾವ್ ವಿರುದ್ಧದ ಪ್ರಕರಣಕ್ಕೆ ಮಧ್ಯಂತರ ತಡೆ ನೀಡಿದೆ.

ಮಾಸಿಕ 75 ಸಾವಿರ ರೂ. ಪಾವತಿಸಲು ಆದೇಶ

ಆರೋಪಿಯ ದೈಹಿಕ ಸಂಪರ್ಕದಿಂದ ಯುವತಿಗೆ ಮಗುವಾಗಿದೆ. 10 ತಿಂಗಳ ಮಗು, ತಾಯಿಯನ್ನು ಅನಾಥವನ್ನಾಗಿಸುವುದು ಬೇಡ. ಹೀಗಾಗಿ ಮುಂದಿನ ಆದೇಶದವರೆಗೂ ಮಗು ಹಾಗೂ ತಾಯಿಗೆ ಮಾಸಿಕ 75 ಸಾವಿರ ರೂಪಾಯಿ ಪಾವತಿಸುವಂತೆ ಅರ್ಜಿದಾರ ಕೃಷ್ಣ ಜೆ. ರಾವ್​ಗೆ ಹೈಕೋರ್ಟ್ ಸೂಚನೆ ನೀಡಿದೆ. ಜೊತೆಗೆ ಸಂತ್ರಸ್ತೆ ಹಾಗೂ ಸಂಬಂಧಿಕರು ಮಾಧ್ಯಮಗಳಿಗೆ ಹೇಳಿಕೆ ನೀಡದಂತೆ ತಿಳಿಸಿದೆ.

ಇದನ್ನೂ ಓದಿ: ಬಿಜೆಪಿ ನಾಯಕನ ಪುತ್ರನಿಂದ ಯುವತಿಗೆ ದೋಖಾ; ಆರೋಪಿಯಿಂದಲೇ ಮಗುವಾಗಿರುವುದರಿಂದ ಮದ್ವೆಯಾಗುವುದೇ ಉತ್ತಮ ಎಂದ ಕೋರ್ಟ್

ಪ್ರಕರಣ ರದ್ದು ಕೋರಿ ಅರ್ಜಿ ಸಲ್ಲಿಸಿದ ಕೃಷ್ಣ ಜೆ.ರಾವ್ ಪರ ವಾದ ಮಂಡಿಸಿದ್ದ ವಕೀಲ ಪಿ.ಪಿ.ಹೆಗ್ಡೆ, 7 ವರ್ಷಗಳ ಪ್ರೀತಿ ಇತ್ತು, ಕ್ರಿಮಿನಲ್ ಕೇಸ್ ನಿಂದಾಗಿ ರಾಜಿಯಾಗಿಲ್ಲ. ರಾಜಕೀಯ ವಿರೋಧಿಗಳು ಆರೋಪಿ ತಂದೆಯ ತೇಜೋವಧೆ ಮಾಡಿದ್ದಾರೆ. ಕ್ರಿಮಿನಲ್ ಕೇಸ್ ನಲ್ಲೂ ಆರೋಪಿಗಳನ್ನಾಗಿಸಿದ್ದಾರೆಂದು ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಕೋರ್ಟ್, ಯುವತಿಗೆ ಆರೋಪಿಯಿಂದಲೇ ಮಗುವಾಗಿರುವುದರಿಂದ ಮದುವೆಯಾಗುವುದೇ ಉತ್ತಮ. ಯುವತಿ, ಮಗುವನ್ನು ಅನಾಥವನ್ನಾಗಿಸುವುದು ಸರಿಯಲ್ಲ. ತಂದೆಯಾಗಿರುವುದರಿಂದ ಮಗುವಿನ ಆರೈಕೆ ಮಾಡುವುದು ಆರೋಪಿ ಕರ್ತವ್ಯ ಎಂದು ಅಭಿಪ್ರಾಯಪಟ್ಟಿತ್ತು. ಅಲ್ಲದೇ ಯುವತಿಗೆ ಮಾಸಿಕ 10 ಸಾವಿರ ಜೀವನಾಂಶ ನೀಡಲು ಸಿದ್ದರಿದ್ದಾರಾ ಎಂದು ಆರೋಪಿ ಪರ ವಕೀಲರಿಗೆ ಪ್ರಶ್ನಿಸಿದ್ದ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಪೀಠ, ಇದಕ್ಕೆ ಅಭಿಪ್ರಾಯ ತಿಳಿಸುವಂತೆ ಸೂಚಿಸಿ ವಿಚಾರಣೆಯನ್ನು ಏಪ್ರಿಲ್ 24ಕ್ಕೆ ಅಂದರೆ ಇಂದಿಗೆ ಮುಂದೂಡಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 1:00 pm, Fri, 24 April 26

Source link

ದಾವಣಗೆರೆ ಉಪಚುನಾವಣೆ ಅಭ್ಯರ್ಥಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ; ಮನೆಗೆ ನುಗ್ಗಿ ಅಟ್ಯಾಕ್ ಮಾಡಿದ ಗ್ಯಾಂಗ್! – Kannada News | Shahbaz Khan Attacked in Bengaluru After Davangere By Election Return

ದಾವಣಗೆರೆ ಉಪಚುನಾವಣೆ ಅಭ್ಯರ್ಥಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ

ಬೆಂಗಳೂರು, ಏಪ್ರಿಲ್ 24: ದಾವಣಗೆರೆ ಉಪಚುನಾವಣೆಯ (Byelection) ಅಭ್ಯರ್ಥಿ,‘ಯಂಗ್ ಸ್ಟಾರ್ ಎಂಪೋರಿಯಂ’ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಶಹಬಾಜ್ ಖಾನ್​ಗೆ ಈ ಹಿಂದೆ ಹಲ್ಲೆ ನಡೆಸಿ, ಕಸದ ಬುಟ್ಟಿಗೆ ಹಾಕುತ್ತೇವೆ ಎಂದು ಬೆದರಿಕೆಯೊಂದು ಬಂದಿತ್ತು. ಅದರಂತೆಯೇ ನಗರದ ಸುದ್ದುಗುಂಟೆ ಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅವರ ಮೇಲೆ ದಾಳಿ ನಡೆಸಿದ ಘಟನೆ ನಡೆದಿದ್ದು, ಸುದ್ದುಗುಂಟೆ ಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

ಪಕ್ಷದಿಂದ ವಜಾಗೊಳಿಸಿದ್ದಕ್ಕೆ ಗ್ಯಾಂಗ್ ಕಟ್ಟಿಕೊಂಡು ಬಂದ ಮಹಿಳೆ

ಶಹಬಾಜ್ ಖಾನ್ ದಾವಣಗೆರೆ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಇತ್ತೀಚೆಗೆ ಬೆಂಗಳೂರಿಗೆ ವಾಪಸ್ ಆಗಿದ್ದರು. ಈ ಮಧ್ಯೆ ಮುಹಮ್ಮದ್ ವಸೀಂ ಎಂಬಾತ ಶಹಬಾಜ್ ಖಾನ್ ವಿರುದ್ಧ ವೀಡಿಯೋ ಮಾಡಿ ಅವಹೇಳನಕಾರಿ ಮಾತುಗಳನ್ನಾಡಿದ್ದನು. ಈ ಕುರಿತು ದಾವಣಗೆರೆ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು.

ಇದಾದ ನಂತರ ಅದೇ ಪಕ್ಷದ ಹಸೀನಾ ಬಾನು ಕೂಡ ವೀಡಿಯೋ ಮಾಡಿ ಶಹಬಾಜ್ ಖಾನ್ಗೆ ಬೆದರಿಕೆ ಹಾಕಿದ್ದಾಳೆ ಎನ್ನಲಾಗಿದೆ. ಇದರಿಂದ ಕೋಪಗೊಂಡ ಶಹಬಾಜ್ ಖಾನ್ ಹಸೀನಾ ಬಾನುವನ್ನು ಪಕ್ಷದಿಂದ ವಜಾಗೊಳಿಸಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಹಸೀನಾ ಬಾನು, ಝೈದ್, ನಿಲೂಫರ್, ಮುಹಮ್ಮದ್ ವಸೀಂ ಸೇರಿದಂತೆ 5-6 ಜನ ಶಹಬಾಜ್ ಖಾನ್ ನಿವಾಸಕ್ಕೆ ನುಗ್ಗಿ, ಮುಂಚಿತವಾಗಿ ವೀಡಿಯೋದಲ್ಲಿ ಹಾಕಿದ ಬೆದರಿಕೆಯಂತೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಘಟನೆಯ ನಂತರ ಗಾಯಗೊಂಡ ಶಹಬಾಜ್ ಖಾನ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಸುದ್ದುಗುಂಟೆ ಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕಾಗಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:52 pm, Fri, 24 April 26

Source link

BPCL Recruitment 2026: ಭಾರತ್ ಪೆಟ್ರೋಲಿಯಂನಲ್ಲಿ 250 ಹುದ್ದೆಗಳಿಗೆ ಅರ್ಜಿ ಆಹ್ವಾನ; 1.40 ಲಕ್ಷ ರೂ. ವರೆಗೆ ವೇತನ! – Kannada News | BPCL Recruitment 2026: Apply Online for 250 Junior Executive and Other Vacancies!

ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್

ದೇಶದ ಪ್ರಮುಖ ತೈಲ ಸಂಸ್ಥೆಯಾದ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL), ದೇಶಾದ್ಯಂತ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ 250 ಜೂನಿಯರ್ ಎಕ್ಸಿಕ್ಯೂಟಿವ್ ಮತ್ತು ಇತರ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಹುದ್ದೆಗಳ ವಿವರ (Vacancy Details):

ಒಟ್ಟು 250 ಹುದ್ದೆಗಳನ್ನು ಈ ಕೆಳಗಿನಂತೆ ವಿಂಗಡಿಸಲಾಗಿದೆ:

  • ಜೂನಿಯರ್ ಎಕ್ಸಿಕ್ಯುಟಿವ್ (ಎಂಜಿನಿಯರಿಂಗ್): 175
  • ಅಸೋಸಿಯೇಟ್ ಎಕ್ಸಿಕ್ಯೂಟಿವ್ (ಕ್ವಾಲಿಟಿ ಅಶ್ಯೂರೆನ್ಸ್): 30
  • ಜೂನಿಯರ್ ಎಕ್ಸಿಕ್ಯುಟಿವ್ (ಅಕೌಂಟ್ಸ್): 25
  • ಜೂನಿಯರ್ ಎಕ್ಸಿಕ್ಯೂಟಿವ್ (ವೇಸೈಡ್ ಸೌಕರ್ಯಗಳು): 10
  • ಕಾರ್ಯದರ್ಶಿ (Secretary): 08
  • ಅಸೋಸಿಯೇಟ್ ಎಕ್ಸಿಕ್ಯೂಟಿವ್ (ಅಧಿಕೃತ ಭಾಷೆ): 02

ಶೈಕ್ಷಣಿಕ ಅರ್ಹತೆ ಮತ್ತು ಅನುಭವ:

ಅಭ್ಯರ್ಥಿಗಳು ಹುದ್ದೆಗೆ ಸಂಬಂಧಿಸಿದಂತೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕೆಳಗಿನ ವಿದ್ಯಾರ್ಹತೆ ಹೊಂದಿರಬೇಕು:

  • ಡಿಪ್ಲೊಮಾ, ಬಿ.ಇ/ಬಿ.ಟೆಕ್ (ಎಂಜಿನಿಯರಿಂಗ್ ವಿಭಾಗಗಳಿಗೆ)
  • ಸಿಎ (CA) / ಸಿಎಂಎ (CMA) (ಅಕೌಂಟ್ಸ್ ವಿಭಾಗಕ್ಕೆ)
  • ಎಂ.ಎ / ಎಂ.ಎಸ್ಸಿ (ಇತರ ವಿಭಾಗಗಳಿಗೆ)

ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ತಿಳಿಸಿರುವಂತೆ ಆಯಾ ಕ್ಷೇತ್ರದಲ್ಲಿ ಕೆಲಸದ ಅನುಭವವನ್ನು ಹೊಂದಿರಬೇಕು.

ವಯೋಮಿತಿ ಮತ್ತು ವೇತನ:

  • ವಯೋಮಿತಿ: ಏಪ್ರಿಲ್ 1, 2026 ಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಗಳ ವಯಸ್ಸು 30 ರಿಂದ 35 ವರ್ಷಗಳ ಒಳಗಿರಬೇಕು (ಮೀಸಲಾತಿ ಅನ್ವಯ ಸಡಿಲಿಕೆ ಇರಲಿದೆ).
  • ವೇತನ ಶ್ರೇಣಿ: ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಯ ಆಧಾರದ ಮೇಲೆ ತಿಂಗಳಿಗೆ 30,000 ರಿಂದ 1,40,000ರೂ. ವರೆಗೆ ಆಕರ್ಷಕ ವೇತನ ನೀಡಲಾಗುತ್ತದೆ.

ಅರ್ಜಿ ಶುಲ್ಕ:

  • ಸಾಮಾನ್ಯ/OBC/EWS ಅಭ್ಯರ್ಥಿಗಳು: 1180ರೂ.
  • SC/ST/PwBD ಅಭ್ಯರ್ಥಿಗಳು: ಯಾವುದೇ ಶುಲ್ಕವಿಲ್ಲ.

ಇದನ್ನೂ ಓದಿ: ಕೆಲಸಕ್ಕೆ ಸೇರಿದ ಮೊದಲ ದಿನವೇ ವೈದ್ಯೆ ರಾಜೀನಾಮೆ; ವೈದ್ಯಕೀಯ ಲೋಕದ ಕರಾಳ ಮುಖ ಅನಾವರಣ!

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳನ್ನು ಮೂರು ಹಂತಗಳಲ್ಲಿ ಆಯ್ಕೆ ಮಾಡಲಾಗುತ್ತದೆ:

  • ಲಿಖಿತ ಪರೀಕ್ಷೆ (Written Test)
  • ಗುಂಪು ಚರ್ಚೆ (Group Discussion)
  • ವೈಯಕ್ತಿಕ ಸಂದರ್ಶನ (Personal Interview)

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮೇ 17, 2026

ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತರು ಬಿಪಿಸಿಎಲ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ಅಧಿಸೂಚನೆಯನ್ನು ಪೂರ್ಣವಾಗಿ ಓದಿಕೊಳ್ಳಲು ಸೂಚಿಸಲಾಗಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರವಿ ಕಿಶನ್ ಡೈರೆಕ್ಷನ್: “ಮಹಾರಾಜ್ ಜಿ, ಸ್ವಲ್ಪ ಈ ಕಡೆ ನೋಡಿ ಸಿಂಹದ ಮುಖ ಮತ್ತು ನೀವು ಮಾತ್ರ ಫ್ರೇಮ್‌ನಲ್ಲಿ ಇರಲಿ” – Kannada News | CM Yogi Adityanath’s Hilarious Photo Moment: Ravi Kishan’s Film Direction Goes Viral

ಲಕ್ನೋ, ಏ.24 : ರಾಜಕೀಯದ ಗಂಭೀರ ಚರ್ಚೆಗಳ ನಡುವೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಗೋರಖ್‌ಪುರ ಸಂಸದ ಹಾಗೂ ನಟ ರವಿ ಕಿಶನ್ ಅವರ ಅಪರೂಪದ ಮೋಜಿನ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ, ಹಳೆಯ ಟೈರ್‌ಗಳಿಂದ ನಿರ್ಮಿಸಲಾದ ಬೃಹತ್ ಸಿಂಹದ ಪ್ರತಿಮೆಯ ಮುಂದೆ ಸಿಎಂ ಯೋಗಿ ಆದಿತ್ಯನಾಥ್ ಅವರು ಫೋಟೋಗೆ ಪೋಸ್ ನೀಡುತ್ತಿದ್ದರು. ಈ ವೇಳೆ ಪಕ್ಕದಲ್ಲೇ ಇದ್ದ ಖ್ಯಾತ ನಟ ರವಿ ಕಿಶನ್ ಅವರಲ್ಲಿದ್ದ ‘ಸಿನಿಮಾ ಕಲಾವಿದ’ ಹೊರಬಂದಿದ್ದಾನೆ. ತಮ್ಮದೇ ಶೈಲಿಯಲ್ಲಿ ಸಿಎಂ ಅವರಿಗೆ ಫೋಟೋಗೆ ಹೇಗೆ ಪೋಸ್ ನೀಡಬೇಕು ಎಂದು ನಿರ್ದೇಶನ (Direction) ನೀಡಲು ಆರಂಭಿಸಿದರು. “ಮಹಾರಾಜ್ ಜಿ, ಸ್ವಲ್ಪ ಈ ಕಡೆ ನೋಡಿ… ಲೋ ಆಂಗಲ್ (Low Angle)… ಕೇವಲ ಸಿಂಹದ ಮುಖ ಮತ್ತು ನೀವು ಮಾತ್ರ ಫ್ರೇಮ್‌ನಲ್ಲಿ ಇರಲಿ” ಎಂದು ರವಿ ಕಿಶನ್ ಉತ್ಸಾಹದಿಂದ ಹೇಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ರವಿ ಕಿಶನ್ ಅವರ ಈ ಸಿನಿಮಾ ಸ್ಟೈಲ್ ಡೈರೆಕ್ಷನ್ ಕಂಡು ಸಿಎಂ ಯೋಗಿ ಆದಿತ್ಯನಾಥ್ ಅವರು ಕೂಡ ಮುಗುಳ್ನಕ್ಕಿದ್ದಾರೆ. ಅಲ್ಲಿದ್ದ ಇತರ ಅಧಿಕಾರಿಗಳು ಮತ್ತು ಸಾರ್ವಜನಿಕರು “ರವಿ ಕಿಶನ್ ಅವರು ಶೂಟಿಂಗ್ ಮೋಡ್‌ಗೆ ಬಂದಿದ್ದಾರೆ” ಎಂದು ತಮಾಷೆ ಮಾಡುತ್ತಿರುವುದು ಕೇಳಿಬಂದಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link