ಬೆಂಗಳೂರಿನಲ್ಲಿ 410 ಕೋಟಿ ರೂಪಾಯಿ ಜಿಎಸ್‌ಟಿ ಹಗರಣ: ಜನರ ಆಧಾರ್, ಪಾನ್ ಕಾರ್ಡ್ ಬಳಸಿ 102 ಕೋಟಿ ತೆರಿಗೆ ಲೂಟಿ ಮಾಡಿದ ಕಿಲಾಡಿಗಳು! – Kannada News | Fake Invoice Scam: Rs 102.5 Cr GST Evasion Network Busted in Karnataka
ಬೆಂಗಳೂರು, ಏ,23: ದೇಶಾದ್ಯಂತ ಸೈಬರ್ ಕ್ರೈಂ ಜಾಲಗಳು ಹೆಚ್ಚಾಗುತ್ತಿದೆ. ಸಾವಿರಾರೂ ಜನ ಕೋಟಿ ಕೋಟಿ ಹಣವನ್ನು ಕಳೆದುಕೊಂಡಿರುವ ಪ್ರಕರಣಗಳ ನಡುವೆ ಇದೀಗ ನಕಲಿ ಬಿಲ್‌ಗಳನ್ನು ಸೃಷ್ಟಿಸಿ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ತೆರಿಗೆ ವಂಚಿಸುತ್ತಿದ್ದ ಬೃಹತ್ ಜಾಲವೊಂದನ್ನು ವಾಣಿಜ್ಯ ತೆರಿಗೆ ಇಲಾಖೆಯ ಜಾರಿ ವಿಭಾಗದ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಸುಮಾರು 410 ಕೋಟಿ ರೂಪಾಯಿ ಮೊತ್ತದ ಈ ವ್ಯವಹಾರದಲ್ಲಿ 102.5 ಕೋಟಿ ರೂಪಾಯಿ ತೆರಿಗೆ ಹಣವನ್ನು ಲೂಟಿ ಮಾಡಿರುವ ಬೆಚ್ಚಿಬೀಳಿಸುವ ಮಾಹಿತಿ ಹೊರಬಂದಿದೆ. ಈ ವಂಚನೆ ಜಾಲದ ಪ್ರಮುಖ ಸೂತ್ರಧಾರಿ…