All posts by nagaraj11081993

ಬೆಂಗಳೂರಿನಲ್ಲಿ 410 ಕೋಟಿ ರೂಪಾಯಿ ಜಿಎಸ್‌ಟಿ ಹಗರಣ: ಜನರ ಆಧಾರ್, ಪಾನ್ ಕಾರ್ಡ್ ಬಳಸಿ 102 ಕೋಟಿ ತೆರಿಗೆ ಲೂಟಿ ಮಾಡಿದ ಕಿಲಾಡಿಗಳು! – Kannada News | Fake Invoice Scam: Rs 102.5 Cr GST Evasion Network Busted in Karnataka

ಬೆಂಗಳೂರು, ಏ,23:  ದೇಶಾದ್ಯಂತ ಸೈಬರ್​​ ಕ್ರೈಂ ಜಾಲಗಳು ಹೆಚ್ಚಾಗುತ್ತಿದೆ. ಸಾವಿರಾರೂ ಜನ ಕೋಟಿ ಕೋಟಿ ಹಣವನ್ನು ಕಳೆದುಕೊಂಡಿರುವ ಪ್ರಕರಣಗಳ ನಡುವೆ ಇದೀಗ ನಕಲಿ ಬಿಲ್‌ಗಳನ್ನು ಸೃಷ್ಟಿಸಿ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ತೆರಿಗೆ ವಂಚಿಸುತ್ತಿದ್ದ ಬೃಹತ್ ಜಾಲವೊಂದನ್ನು ವಾಣಿಜ್ಯ ತೆರಿಗೆ ಇಲಾಖೆಯ ಜಾರಿ ವಿಭಾಗದ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಸುಮಾರು 410 ಕೋಟಿ ರೂಪಾಯಿ ಮೊತ್ತದ ಈ ವ್ಯವಹಾರದಲ್ಲಿ 102.5 ಕೋಟಿ ರೂಪಾಯಿ ತೆರಿಗೆ ಹಣವನ್ನು ಲೂಟಿ ಮಾಡಿರುವ ಬೆಚ್ಚಿಬೀಳಿಸುವ ಮಾಹಿತಿ ಹೊರಬಂದಿದೆ.

ಈ ವಂಚನೆ ಜಾಲದ ಪ್ರಮುಖ ಸೂತ್ರಧಾರಿ (Kingpin), ಆಂಧ್ರಪ್ರದೇಶದ ಚಿತ್ತೂರು ಮೂಲದ ತೌಕೀರ್ ಅಲಿಯಾಸ್ ಮೊಹಮ್ಮದ್ (42) ಎಂಬಾತನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಈತನನ್ನು ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಈತನ ಸಹಚರ ಶೇಕ್ ಜಾಕೀರ್ ಹುಸೇನ್ ಅಲಿಯಾಸ್ ಬಾಷಾ ಎಂಬಾತ ವಿದೇಶಕ್ಕೆ ಪರಾರಿಯಾಗಿದ್ದು, ಆತನಿಗಾಗಿ ತೀವ್ರ ಹುಡುಕಾಟ ನಡೆಯುತ್ತಿದೆ.

ಅಮಾಯಕ ಜನರ ಪಾನ್ (PAN) ಮತ್ತು ಆಧಾರ್ ಕಾರ್ಡ್‌ಗಳನ್ನು ಅಕ್ರಮವಾಗಿ ಬಳಸಿ ಹಲವು ನಕಲಿ ಕಂಪನಿಗಳನ್ನು ನೋಂದಣಿ ಮಾಡಿಕೊಳ್ಳುತ್ತಿದ್ದರು. ಯಾವುದೇ ಸರಕು ಅಥವಾ ಸೇವೆಗಳನ್ನು ಸರಬರಾಜು ಮಾಡದೆಯೇ, ಕೇವಲ ಸಿಮೆಂಟ್, ಕಬ್ಬಿಣದ ಸರಳುಗಳ ಹೆಸರಿನಲ್ಲಿ ನಕಲಿ ಬಿಲ್‌ಗಳನ್ನು (Fake Invoices) ಸೃಷ್ಟಿಸಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ITC) ಪಡೆಯುತ್ತಿದ್ದರು. ಕರ್ನಾಟಕ ಮಾತ್ರವಲ್ಲದೆ ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲೂ ಈ ಜಾಲ ಹಬ್ಬಿತ್ತು. ನಕಲಿ ಐಟಿಸಿಯನ್ನು ವಿವಿಧ ಕಾಂಟ್ರಾಕ್ಟರ್‌ಗಳಿಗೆ ವರ್ಗಾಯಿಸಿ ತೆರಿಗೆ ವಂಚನೆಗೆ ಸಹಕರಿಸುತ್ತಿದ್ದರು.

ಇದನ್ನೂ ಓದಿ: ಕೋಲಾರ: ಪತ್ನಿಯ ಶೀಲ ಶಂಕಿಸಿ ಮಚ್ಚಿನಿಂದ ಕೊಚ್ಚಿ ಕೊಂದ ಪತಿ

ತೆರಿಗೆ ಇಲಾಖೆಯಿಂದ ನೋಂದಣಿ ಅಥವಾ ನೋಟಿಸ್ ಬರುತ್ತಿದ್ದಂತೆಯೇ ಜಿಎಸ್‌ಟಿ ನೋಂದಣಿ ರದ್ದು ಮಾಡಿ, ಮೊಬೈಲ್ ಸಂಖ್ಯೆಗಳನ್ನು ಬದಲಿಸಿ ಅಲ್ಲಿಂದ ಪರಾರಿಯಾಗುತ್ತಿದ್ದರು. ಈ ಕುರಿತು ಬೆಂಗಳೂರಿನ ಅಣ್ಣಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಾಣಿಜ್ಯ ತೆರಿಗೆ ಇಲಾಖೆಯ ಜಾರಿ ವಿಭಾಗದ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಸರ್ಕಾರಕ್ಕೆ ಬರಬೇಕಿದ್ದ 102.5 ಕೋಟಿ ರೂಪಾಯಿಗಳ ತೆರಿಗೆ ಹಣವನ್ನು ವಸೂಲಿ ಮಾಡಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಯಚೂರು: ಸ್ಟೀರಿಂಗ್ ಕಟ್ ಆಗಿ ಪಲ್ಟಿಯಾದ ಕೆಕೆಆರ್‌ಟಿಸಿ ಬಸ್, ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ದುರಂತ – Kannada News | Raichur Bus Accident: KKRTC Bus Overturns Near Lingsugur After Steering Failure; 40 Passengers Escape Unhurt

ರಾಯಚೂರು, ಏಪ್ರಿಲ್ 23: ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಸುಣಕಲ್ ಗ್ರಾಮದ ಬಳಿ ಚಲಿಸುತ್ತಿದ್ದ ಸಾರಿಗೆ ಬಸ್‌ನ ಸ್ಟೀರಿಂಗ್ ಕಟ್ ಆಗಿ ಪಲ್ಟಿಯಾದ ಘಟನೆ ನಡೆದಿದೆ. ಬಸ್‌ನಲ್ಲಿದ್ದ ಸುಮಾರು 40ಕ್ಕೂ ಹೆಚ್ಚು ಪ್ರಯಾಣಿಕರು ಚಾಲಕನ ಸಮಯಪ್ರಜ್ಞೆಯಿಂದಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಜಯಪುರ ಜಿಲ್ಲೆಯ ನಾಲತವಾಡದಿಂದ ಲಿಂಗಸಗೂರಿಗೆ ಬರುತ್ತಿದ್ದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ (KKRTC) ಸೇರಿದ ಬಸ್ ಸುಣಕಲ್ ಗ್ರಾಮದ ಬಳಿ ಬರುತ್ತಿದ್ದಂತೆ ತಾಂತ್ರಿಕ ದೋಷದಿಂದಾಗಿ ಏಕಾಏಕಿ ಸ್ಟೀರಿಂಗ್ ಕಟ್ ಆಗಿದೆ. ತಕ್ಷಣ ನಿಯಂತ್ರಣ ತಪ್ಪಿದ ಬಸ್ ರಸ್ತೆ ಪಕ್ಕದ ಹಳ್ಳಕ್ಕೆ ಉರುಳಿ ಬಿದ್ದಿದೆ.

ಸ್ಟೀರಿಂಗ್ ಕಟ್ ಆದ ಕ್ಷಣದಲ್ಲೇ ಚಾಲಕ ಬಸ್ಸನ್ನು ನಿಯಂತ್ರಿಸಲು ಹರಸಾಹಸ ಪಟ್ಟಿದ್ದು, ಇದರಿಂದಾಗಿ ದೊಡ್ಡ ಮಟ್ಟದ ಅನಾಹುತ ತಪ್ಪಿದೆ. ಬಸ್‌ನಲ್ಲಿದ್ದ 40 ಪ್ರಯಾಣಿಕರ ಪೈಕಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಲಿಂಗಸಗೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: CSK ಪರ ಆಸ್ಟ್ರೇಲಿಯನ್ ವೇಗಿ ಪಾದಾರ್ಪಣೆ..! – Kannada News | Aussie Pacer Spencer Johnson Set for CSK Debut at Wankhede

ಚೆನ್ನೈ ಸೂಪರ್ ಕಿಂಗ್ಸ್ ತಂಡ: ರುತುರಾಜ್ ಗಾಯಕ್‌ವಾಡ್ (ನಾಯಕ), ಎಂಎಸ್ ಧೋನಿ, ಸಂಜು ಸ್ಯಾಮ್ಸನ್, ಡೆವಾಲ್ಡ್ ಬ್ರೆವಿಸ್, ಉರ್ವಿಲ್ ಪಟೇಲ್, ಶಿವಂ ದುಬೆ, ಜೇಮಿ ಓವರ್‌ಟನ್, ರಾಮಕೃಷ್ಣ ಘೋಷ್, ನೂರ್ ಅಹ್ಮದ್, ಅನ್ಶುಲ್ ಕಂಬೋಜ್, ಗುರ್ಜಪ್ನೀತ್ ಸಿಂಗ್, ಶ್ರೇಯಸ್ ಗೋಪಾಲ್, ಮುಖೇಶ್ ಚೌಧರಿ, ಅಕೇಲ್ ಹೊಸೈನ್, ಪ್ರಶಾಂತ್ ವೀರ್, ಕಾರ್ತಿಕ್ ಶರ್ಮಾ, ಮ್ಯಾಥ್ಯೂ ಶಾರ್ಟ್, ಅಮನ್ ಖಾನ್, ಸರ್ಫರಾಝ್ ಖಾನ್, ಮ್ಯಾಟ್ ಹೆನ್ರಿ, ರಾಹುಲ್ ಚಹರ್, ಝಾಕ್ ಫೌಲ್ಕ್ಸ್, ಸ್ಪೆನ್ಸರ್ ಜಾನ್ಸನ್.

Source link

Balagraha Mantras: ಮಕ್ಕಳಿಗೆ ಬಾಲಗ್ರಹ ಮಂತ್ರಗಳನ್ನು ಹೇಳುವುದರ ಹಿಂದಿನ ರಹಸ್ಯವೇನು ಗೊತ್ತಾ?

ಒಂದು ವರ್ಷದಿಂದ ಹನ್ನೆರಡು ವರ್ಷದೊಳಗಿನ ಮಕ್ಕಳು ಕೆಲವೊಮ್ಮೆ ಹಠ ಮಾಡುವುದು, ಚೀರಾಡುವುದು, ಅಳುವುದು ಅಥವಾ ವಿಚಿತ್ರವಾಗಿ ವರ್ತಿಸುವುದು ಸಾಮಾನ್ಯ. ಇಂತಹ ಸಂದರ್ಭಗಳಲ್ಲಿ, ನಮ್ಮ ಪೂರ್ವಿಕರು, ಹಿಂದೂ ಸಂಸ್ಕೃತಿ ಮತ್ತು ಸನಾತನ ಪರಂಪರೆಯಲ್ಲಿ, ಮಂತ್ರದ ಶಕ್ತಿಯನ್ನು ಪಡೆದಿರುವ ಅನುಭವಿ ವ್ಯಕ್ತಿಗಳ ಮೂಲಕ ಮಕ್ಕಳಿಗೆ ಮಂತ್ರ ಹಾಕಿಸುವ ಪದ್ಧತಿ ಇತ್ತು. ಇದರ ಮಹತ್ವದ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಗುರೂಜಿಯವರು ಹೇಳುವಂತೆ, ಗ್ರಾಮೀಣ ಪ್ರದೇಶಗಳಲ್ಲಿ, ಸದಾ ದೈವಾಚಾರದಲ್ಲಿ ನಿರತರಾಗಿರುವ, ವಿಶೇಷ ಶಕ್ತಿ ಮತ್ತು ಸನ್ನಡತೆ ಹೊಂದಿರುವ ವ್ಯಕ್ತಿಗಳ ಬಾಯಿಂದ ಹೊರಡುವ ಮಂತ್ರಗಳು ಮಕ್ಕಳ ಮುಖದ ಹತ್ತಿರ ಪಠಿಸಲ್ಪಟ್ಟಾಗ, ಅವು ಜ್ವರ, ಭೀತಿ, ಮತ್ತು ಅಸಹಜ ನಡವಳಿಕೆಗಳನ್ನು ನಿವಾರಿಸುತ್ತವೆ ಎಂದು ನಂಬಲಾಗುತ್ತದೆ. ಈ ಮಂತ್ರಗಳ ಪ್ರಭಾವವು ಬಹಳ ಮಹತ್ವದ್ದಾಗಿದೆ, ಆದರೆ ಇದನ್ನು ಪ್ರಾಥಮಿಕ ಚಿಕಿತ್ಸೆ ಅಥವಾ ಫಸ್ಟ್ ಏಡ್ ಎಂದು ಪರಿಗಣಿಸಲಾಗುತ್ತದೆ. ಹಿರಿಯರು, ವಿದ್ವಾಂಸರು, ಮಹನೀಯರು ಅಥವಾ ದೈವಾಂಶ ಸಂಭೂತರ ಮೂಲಕ ಮಂತ್ರಗಳನ್ನು ಹಾಕಿಸಲಾಗುತ್ತದೆ. ಕೆಲವರು ಕುಂಕುಮ, ವಿಭೂತಿ, ಅಥವಾ ವಸ್ತ್ರದ ಮೂಲಕ ಮಂತ್ರಗಳನ್ನು ಪಠಿಸುತ್ತಾರೆ.

ಶಾಸ್ತ್ರಬದ್ಧವಾಗಿ, ಬಾಲಗ್ರಹಗಳು ಮಕ್ಕಳ ಮೇಲೆ ಪರಿಣಾಮ ಬೀರುತ್ತವೆ ಎಂದು ಹೇಳಲಾಗುತ್ತದೆ. ಪ್ರಕೃತಿ ಅಥವಾ ವಾತಾವರಣದ ಪ್ರಭಾವದಿಂದ, ಅಥವಾ ದೃಷ್ಟಿ ದೋಷದಿಂದ ಮಕ್ಕಳಿಗೆ ನಕಾರಾತ್ಮಕ ಶಕ್ತಿಗಳು ಪ್ರವೇಶಿಸುತ್ತವೆ ಎಂದು ನಂಬಲಾಗಿದೆ. ಪುಟ್ಟ ಮಕ್ಕಳು, ಪ್ರೌಢಾವಸ್ಥೆಗೆ ಬಂದವರಂತೆ ರಕ್ಷಾ ವಲಯ ಅಥವಾ ಪ್ರಭಾವಲಯ ಹೊಂದಿರುವುದಿಲ್ಲ. ಅವರಿಗೆ ಕೇವಲ ಭಗವಂತನ ರಕ್ಷಾ ವಲಯ ಮಾತ್ರ ಇರುತ್ತದೆ. ಆದರೆ, ಕೆಲವರ ವಾಕ್ಶಕ್ತಿಯ ಪ್ರಭಾವದಿಂದ ದೃಷ್ಟಿ ದೋಷವನ್ನು ನಿವಾರಿಸಬಹುದು.

ಮಕ್ಕಳು ಚೀರಾಡುವ ಅಥವಾ ಅಳುವ ಸಂದರ್ಭದಲ್ಲಿ, ಸೂರ್ಯೋದಯದ ಮುಹೂರ್ತ, ಅಭಿಜಿನ್ ಮುಹೂರ್ತ, ಅಥವಾ ಗೋದೂಳಿಯ ಮುಹೂರ್ತದಲ್ಲಿ, ಮಗುವನ್ನು ಪೂರ್ವಾಭಿಮುಖವಾಗಿ ಅಥವಾ ಉತ್ತರಾಭಿಮುಖವಾಗಿ ಕೂರಿಸಿ, ಪ್ರಶಾಂತ ವಾತಾವರಣದಲ್ಲಿ ವಾಕ್ಸಿದ್ದಿ ಪಡೆದ ವಿದ್ವಾಂಸರಿಂದ ಮಂತ್ರಗಳನ್ನು ಹಾಕಿಸಲಾಗುತ್ತದೆ. ನಂತರ, ವಿಭೂತಿಯನ್ನು ಹಣೆಗೆ ಹಚ್ಚುವುದು ಅಥವಾ ಮಗು ಮಲಗುವ ಸ್ಥಳದಲ್ಲಿ ಹಾಕುವುದು ರಕ್ಷಣೆಯನ್ನು ನೀಡುತ್ತದೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಮಂತ್ರಗಳ ಕಂಪನ ಮತ್ತು ಅವುಗಳ ಉಚ್ಚಾರಣೆಯು ಅತ್ಯಂತ ಶಕ್ತಿಯುತವಾಗಿದ್ದು, ತಕ್ಷಣವೇ ಮಗುವಿಗೆ ಚೈತನ್ಯವನ್ನು ತುಂಬಿ, ರಕ್ಷಾ ಕವಚವನ್ನು ನಿರ್ಮಿಸುತ್ತದೆ. ಇದನ್ನು ಯಾವುದೇ ಕಾರಣಕ್ಕೂ ಅಲ್ಲಗಳೆಯಲು ಸಾಧ್ಯವಿಲ್ಲ. ಭಯ, ಚೀರಾಟ, ಅಳುವುದು, ಅಥವಾ ಮಗುವಿನ ಚರ್ಮ ಕೆಂಪಾಗುವಂತಹ ಸಮಸ್ಯೆಗಳಿಗೆ ನರಸಿಂಹ ಮಂತ್ರ, ದೇವಿಯ ಮಂತ್ರ, ಹನುಮಂತನ ಮಂತ್ರ, ಬೀಜಾಕ್ಷರ ಮಂತ್ರಗಳು, ಶಿವನ ಮಂತ್ರ, ಮತ್ತು ಸುಬ್ರಹ್ಮಣ್ಯನ ಮಂತ್ರಗಳನ್ನು ಬಳಸಬಹುದು. ಈ ಮಂತ್ರಗಳ ಪ್ರಭಾವವು ಮಕ್ಕಳ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಮತ್ತು ಅವರಿಗೆ ರಕ್ಷಾ ಕವಚವನ್ನು ಒದಗಿಸುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೊಡಗು: ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಆರೋಪ, ಕುಟ್ಟ ಖಾಸಗಿ ಹೋಂಸ್ಟೇ ಪರವಾನಗಿ ರದ್ದು – Kannada News | Kodagu Tourism Dept Cancels License of Devi Homestay Following Physical Assault Case of US National in Kutta

ಮಡಿಕೇರಿ, ಏಪ್ರಿಲ್ 23: ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕುಟ್ಟ ಗ್ರಾಮದಲ್ಲಿ ಅಮೆರಿಕ ಮೂಲದ ಮಹಿಳೆಯ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪ್ರವಾಸೋದ್ಯಮ ಇಲಾಖೆ, ಆರೋಪಿತ ಹೋಂಸ್ಟೇಯ ಪರವಾನಗಿಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ. ಕಳೆದ ಕೆಲವು ದಿನಗಳ ಹಿಂದೆ ವಾಷಿಂಗ್ಟನ್ ಮೂಲದ ಮಹಿಳೆಯೊಬ್ಬರು ಪ್ರವಾಸಕ್ಕಾಗಿ ಕುಟ್ಟ ಗ್ರಾಮದ ‘ದೇವಿ ವಿಲ್ಲಾ’ ಹೋಂಸ್ಟೇಗೆ ಬಂದಿದ್ದರು. ಈ ವೇಳೆ ಹೋಂಸ್ಟೇಯ ಕುಕ್ ಆಗಿ ಕೆಲಸ ಮಾಡುತ್ತಿದ್ದ ಜಾರ್ಖಂಡ್ ಮೂಲದ ವೃಜೇಶ್ ಕುಮಾರ್ ಎಂಬಾತ ಮಹಿಳೆಯ ಪಾನೀಯಕ್ಕೆ ಮಾದಕ ದ್ರವ್ಯ ಬೆರೆಸಿ ದೌರ್ಜನ್ಯ ಎಸಗಿದ್ದ ಎನ್ನಲಾಗಿದೆ. ಘಟನೆ ನಡೆದ ಬಳಿಕ ಮಹಿಳೆ ಸಹಾಯಕ್ಕಾಗಿ ಯತ್ನಿಸಿದಾಗ, ಹೋಂಸ್ಟೇ ಮಾಲೀಕ ವಿಶಾಲ್ ಸುಮಾರು ಮೂರು ದಿನಗಳ ಕಾಲ ವೈಫೈ ಸಂಪರ್ಕ ಕಡಿತಗೊಳಿಸಿ, ಮಹಿಳೆಗೆ ಹೊರಗಿನ ಜಗತ್ತಿನೊಂದಿಗೆ ಸಂಪರ್ಕ ಸಾಧಿಸಲು ಬಿಡದೆ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿತ್ತು.

ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಈಗಾಗಲೇ ವೃಜೇಶ್ ಕುಮಾರ್ ಹಾಗೂ ಮಾಲೀಕ ವಿಶಾಲ್‌ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಘಟನೆಯ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಪ್ರವಾಸೋದ್ಯಮ ಇಲಾಖೆಯು, ಪ್ರವಾಸಿಗರ ಸುರಕ್ಷತೆಯಲ್ಲಿ ವಿಫಲವಾದ ಮತ್ತು ಅಕ್ರಮ ಎಸಗಿದ ಹಿನ್ನೆಲೆಯಲ್ಲಿ 2024ರ ಜನವರಿಯಲ್ಲಷ್ಟೇ ಪರವಾನಗಿ ಪಡೆದಿದ್ದ ಈ ಹೋಂಸ್ಟೇಯನ್ನು ಬಂದ್ ಮಾಡಿದೆ. ಜಿಲ್ಲೆಯ ಎಲ್ಲಾ ಹೋಂಸ್ಟೇಗಳು ಕಡ್ಡಾಯವಾಗಿ ಪ್ರವಾಸಿಗರ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು ಎಂದು ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ವಿವರಗಳಿಗೆ ಓದಿ: ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಆರೋಪ: ಪ್ರಕರಣ ಮುಚ್ಚಿ ಹಾಕಲು ನಡೆದಿತ್ತಾ ಸಂಚು?

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Vaibhav Sooryavanshi: ನಾ ಕಾರ್ಟೂನ್ ನೋಡಿಯೇ ಬ್ಯಾಟಿಂಗ್​ಗೆ ಬರೋದು..! – Kannada News | Vaibhav Sooryavanshi said, “I watch cartoons before every match”

ಕೇವಲ 15 ವರ್ಷ ವಯಸ್ಸಿನಲ್ಲೇ  ಕ್ರಿಕೆಟ್ ಮೈದಾನದಲ್ಲಿ ಧೂಳೆಬ್ಬಿಸುತ್ತಿರುವ ರಾಜಸ್ಥಾನ ರಾಯಲ್ಸ್ ತಂಡದ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ, ತಮ್ಮ ವಿಶಿಷ್ಟ ಹವ್ಯಾಸದಿಂದ ಸುದ್ದಿಯಲ್ಲಿದ್ದಾರೆ. ಸಾಮಾನ್ಯವಾಗಿ ಅಂತಾರಾಷ್ಟ್ರೀಯ ಮಟ್ಟದ ಪಂದ್ಯಗಳಿಗೂ ಮುನ್ನ ಆಟಗಾರರು ಅತಿಯಾದ ಒತ್ತಡದಲ್ಲಿರುತ್ತಾರೆ. ಆದರೆ ವೈಭವ್ ಮಾತ್ರ ಇದಕ್ಕೆ ವ್ಯತಿರಿಕ್ತ. ಇದಕ್ಕೆ ಸಾಕ್ಷಿ ಅವರು ನೀಡಿರುವ ಕಾರ್ಟೂನ್ ಹೇಳಿಕೆ..!

ಸ್ಟಾರ್ ಸ್ಪೋರ್ಟ್ಸ್‌ನೊಂದಿಗೆ ನಡೆದ ಪೋಸ್ಟ್ ಮ್ಯಾಚ್ ಸಂದರ್ಶನವೊಂದರಲ್ಲಿ ವೈಭವ್ ಅವರಿಗೆ “ಈ ವಯಸ್ಸಿನ ಮಕ್ಕಳು ಕಾರ್ಟೂನ್ ನೋಡುವಾಗ ನೀನು ಬೌಲರ್‌ಗಳ ಬೆವರಿಳಿಸುತ್ತಿದ್ದೀಯಾ, ನಿನ್ನ ಮನಸ್ಸಿನಲ್ಲಿ ಏನು ನಡೆಯುತ್ತಿರುತ್ತದೆ?” ಎಂದು ಕೇಳಲಾಗಿತ್ತು. ಅದಕ್ಕೆ ವೈಭವ್ ನೀಡಿದ ಮುಗ್ಧ ಉತ್ತರ ಇಲ್ಲಿದೆ:

“ಪಂದ್ಯಕ್ಕೂ ಮೊದಲು ನನ್ನ ತಲೆಯಲ್ಲಿ ಹೆಚ್ಚೇನೂ ಓಡುವುದಿಲ್ಲ. ನನಗೆ ಕಾರ್ಟೂನ್ ನೋಡುವ ಹವ್ಯಾಸವಿದೆ. ಹಾಗಾಗಿ ಇಂದಿಗೂ ನಾನು ಪಂದ್ಯ ಆರಂಭವಾಗುವ ಮೊದಲು ಕಾರ್ಟೂನ್ ನೋಡುತ್ತೇನೆ. ಇದರಿಂದ ಮನಸ್ಸು ಶಾಂತವಾಗಿರುತ್ತದೆ, ಆದರೆ ಪಂದ್ಯದ ಮೇಲೆ ನನ್ನ ಗಮನ ಪೂರ್ತಿ ಇರುತ್ತದೆ.” ಎಂದಿದ್ದಾರೆ. ಈ ಉತ್ತರವು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಇತ್ತ ಕಾರ್ಟೂನ್ ನೋಡುತ್ತಲೇ ಬೌಲರ್​ಗಳಿಗೆ ಬೆವರಿಳಿಸುತ್ತಿರುವ ವೈಭವ್ ಸೂರ್ಯವಂಶಿ ಇದೀಗ ಐಪಿಎಲ್ ಇತಿಹಾಸದಲ್ಲೇ ಅತೀ ವೇಗವಾಗಿ 500 ರನ್ ಕಲೆಹಾಕಿದ ದಾಖಲೆ ನಿರ್ಮಿಸಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ 8 ರನ್ ಬಾರಿಸುವುದರೊಂದಿಗೆ ವೈಭವ್ ಈ ದಾಖಲೆ ಬರೆದಿದ್ದಾರೆ.

ಇದಕ್ಕೂ ಮುನ್ನ ಈ ದಾಖಲೆ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್​ವೆಲ್ ಹೆಸರಿನಲ್ಲಿತ್ತು. ಮ್ಯಾಕ್ಸ್​ವೆಲ್ 260 ಎಸೆತಗಳ ಮೂಲಕ ಐಪಿಎಲ್​ನಲ್ಲಿ 500 ರನ್ ಪೂರೈಸಿದ್ದರು. ಇದೀಗ ಬಾಸ್ ಬೇಬಿ ಖ್ಯಾತಿಯ ವೈಭವ್ ಸೂರ್ಯವಂಶಿ ಕೇವಲ 227 ಎಸೆತಗಳಲ್ಲಿ 500 ರನ್ ಪೂರೈಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಇದಲ್ಲದೆ ಐಪಿಎಲ್​ನಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆ ಕೂಡ ವೈಭವ್ ಸೂರ್ಯವಂಶಿ ಹೆಸರಿನಲ್ಲಿದೆ. ಈ ಎಲ್ಲಾ ದಾಖಲೆಗಳ ಹಿಂದೆ ಕಾರ್ಟೂನ್ ನೋಡುವ ಹವ್ಯಾಸ ಇರುವುದು ಇದೀಗ ಬಹಿರಂಗವಾಗಿದೆ.

ಇದನ್ನೂ ಓದಿ: ಈಗಲೇ RCB ಆಟಗಾರನ ಆಯ್ಕೆ ಮಾಡಿ: CSKಗೆ ಐಡಿಯಾ ನೀಡಿದ ಅಶ್ವಿನ್

ಒಟ್ಟಿನಲ್ಲಿ 15ನೇ ವಯಸ್ಸಿನಲ್ಲೇ ಕ್ರಿಕೆಟ್ ಅಂಗಳದಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಾ ಸಾಗಿರುವ ವೈಭವ್ ಸೂರ್ಯವಂಶಿ ಶೀಘ್ರದಲ್ಲೇ ಟೀಮ್ ಇಂಡಿಯಾಗೆ ಆಯ್ಕೆಯಾಗುವ ಸಾಧ್ಯತೆಯಿದೆ. ಈ ಮೂಲಕ ಭಾರತದ ಪರ 15ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಪಂದ್ಯವಾಡಿದ ಹಿರಿಮೆಗೆ ಪಾತ್ರರಾಗಲಿದ್ದಾರಾ ಕಾದು ನೋಡಬೇಕಿದೆ.

Published On – 9:59 am, Thu, 23 April 26

Source link

ಸಾಮಾನ್ಯ ವ್ಯಕ್ತಿಯಂತೆ ಬಂದು ಮತ ಚಲಾಯಿಸಿದ ಸೂಪರ್ ಸ್ಟಾರ್ ರಜನಿಕಾಂತ್  – Kannada News | Rajinikanth Cast His vote at Stella Maris School in Chennai For Tamil Nadu Assembly Election 2026

ಇಂದು (ಏಪ್ರಿಲ್ 23) ತಮಿಳುನಾಡಿನ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಮಾತದಾನ ನಡೆಯುತ್ತಿದೆ. ರಜನಿಕಾಂತ್ ಅವರು ಬಂದು ತಮ್ಮ ಮತ ಚಲಾಯಿಸಿದರು. ಸಾಮಾನ್ಯರಂತೆ ಬಂದ ಅವರು ಚೆನ್ನೈನ ಸ್ಟೆಲ್ಲಾ ಮೇರಿ ಶಾಲೆಯಲ್ಲಿರುವ ಮತಗಟ್ಟೆಯಲ್ಲಿ ವೋಟ್ ಹಾಕಿದರು. ಆ ಬಳಿಕ ಅವರು ಮತ ಹಾಕಿದ ಬೆರಳನ್ನು ಜನರತ್ತ ತೋರಿಸಿದರು. ಆ ಸಂದರ್ಭದ ವಿಡಿಯೋ ಲಭ್ಯವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮೈಸೂರು: ಸಫಾರಿ ವೇಳೆ ರಸ್ತೆಗೆ ಬಂದ ಹುಲಿ ವಾಹನಗಳ ಮಧ್ಯೆಯೇ ರಸ್ತೆ ದಾಟಿದ ಅಪರೂಪದ ವಿಡಿಯೋ ಪ್ರವಾಸಿಗರ ಕ್ಯಾಮರಾದಲ್ಲಿ ಸೆರೆ – Kannada News | Mysore Safari Thrill: Tiger Spotted Walking Between Safari Vehicles in Karapura Jungle Lodge, Video goes viral

ಮೈಸೂರು, ಏಪ್ರಿಲ್ 23: ಮೈಸೂರಿನ ಕಾರಾಪುರ ಜಂಗಲ್ ರೆಸಾರ್ಟ್ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಹುಲಿಯ ದರ್ಶನವಾಗಿದೆ. ಸಫಾರಿ ವಾಹನಗಳು ರಸ್ತೆಯಲ್ಲಿದ್ದರೂ ಸಹ ಯಾವುದಕ್ಕೂ ಅಂಜದ ಹುಲಿ, ಅತ್ಯಂತ ಗಾಂಭಿರ್ಯದಿಂದ ರಸ್ತೆಯಲ್ಲೇ ನಡೆದು ಬಂದಿದೆ. ವಾಹನಗಳ ನಡುವೆಯೇ ರಸ್ತೆ ದಾಟಿ ನಂತರ ನಿಧಾನವಾಗಿ ಕಾಡಿನೊಳಗೆ ಮರೆಯಾಗಿದೆ. ಸಫಾರಿಗೆ ತೆರಳಿದ್ದ ಮೈಸೂರಿನ ನಿವಾಸಿ ಸೌಮ್ಯ ಪ್ರಕಾಶ್ ಎಂಬುವವರು ಈ ಸುಂದರ ದೃಶ್ಯವನ್ನು ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ಹುಲಿಯನ್ನು ಇಷ್ಟು ಹತ್ತಿರದಿಂದ ಕಂಡ ಪ್ರವಾಸಿಗರು ಪುಳಕಿತಗೊಂಡಿದ್ದಾರೆ. ಸದ್ಯ, ಸೌಮ್ಯ ಪ್ರಕಾಶ್ ಸೆರೆಹಿಡಿದಿರುವ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೋಲಾರ: ಪತ್ನಿಯ ಶೀಲ ಶಂಕಿಸಿ ಮಚ್ಚಿನಿಂದ ಕೊಚ್ಚಿ ಕೊಂದ ಪತಿ – Kannada News | KGF Murder: Husband Arrested for Wife’s Brutal Killing in Kolar

ಪತ್ನಿಯ ಶೀಲ ಶಂಕಿಸಿ ಮಚ್ಚಿನಿಂದ ಕೊಚ್ಚಿ ಕೊಂದ ಪತಿImage Credit source: Tv9 kannada

ಕೋಲಾರ, ಏ.23 : ರಾಜ್ಯದಲ್ಲಿ ಅಕ್ರಮ ಸಂಬಂಧಗಳ ಪ್ರಕರಣಗಳ ನಡುವೆ ಅನುಮಾನಕ್ಕೆ ಬಲಿಯಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಗಂಡನನ್ನು ಬಿಟ್ಟು ಇನ್ನೊಂದು ಹುಡುಗನ ಜತೆ ಅಥವಾ ಹುಡುಗಿಯ ಜತೆಗೆ ಹೋಗುವುದು. ಹೀಗೆ ಅನೇಕ ಪ್ರಕರಣಗಳು ಹೆಚ್ಚಾಗುತ್ತಿದೆ. ಇದರ ನಡುವೆ ಪತಿ-ಪತ್ನಿ ಮಧ್ಯೆ ಅನುಮಾನಕ್ಕೆ ಬಳಿಯಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ.  ನೆನ್ನೆಯಿಂದ (ಏ.22) ಈ ಅಕ್ರಮ ಸಂಬಂಧಗಳ ವರದಿಯೂ ಸುಮಾರು ಬೆಳಕಿಗೆ ಬಂದಿದೆ. ಇದೀಗ ಪತ್ನಿಯ ನಡತೆಯ ಮೇಲೆ ಸಂಶಯ ವ್ಯಕ್ತಪಡಿಸಿದ ಪತಿಯೊಬ್ಬ ಆಕೆಯನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕೆಜಿಎಫ್ ತಾಲೂಕಿನ ಚಿನ್ನದ ಗಣಿ ಗ್ರಾಮದ ಬಳಿ ನಡೆದಿದೆ.

ಮೃತರನ್ನು ಈಶ್ವರಮ್ಮ ಎಂದು ಗುರುತಿಸಲಾಗಿದ್ದು, ಆರೋಪಿ ಪತಿಯನ್ನು ಆಂಧ್ರಪ್ರದೇಶದ ಪೆದ್ದೂರು ಮೂಲದ ಗೋಪಿನಾಥ ಎಂದು ಗುರುತಿಸಲಾಗಿದೆ. ಈ ದಂಪತಿ ಇತ್ತೀಚೆಗೆ ಕೆಜಿಎಫ್ ತಾಲೂಕಿನ ಚಿನ್ನದ ಗಣಿ ಗ್ರಾಮದಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಭೇಟಿ ನೀಡಿದ್ದರು.

ಸಂಬಂಧಿಕರ ಭೇಟಿ ಮಾಡಿ ವಾಪಸ್ ಆಗುವ ಸಂದರ್ಭದಲ್ಲಿ ದಾರಿಯುದ್ದಕ್ಕೂ ದಂಪತಿಗಳು ಜಗಳ ಮಾಡಿಕೊಂಡೆ ಬಂದಿದ್ದಾರೆ ಎಂದು ಹೇಳಲಾಗಿದೆ. ಇದರ ನಡುವೆ ಪತ್ನಿಯ ಶೀಲದ ಮೇಲೆ ಮೊದಲೇ ಶಂಕೆ ಹೊಂದಿದ್ದ ಗೋಪಿನಾಥ, ಮಾತಿಗೆ ಮಾತು ಬೆಳೆದು ಆಕ್ರೋಶಗೊಂಡಿದ್ದಾನೆ. ತನ್ನೊಂದಿಗೆ ತಂದಿದ್ದ ಮಚ್ಚಿನಿಂದ ಈಶ್ವರಮ್ಮ ಅವರ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ತೀವ್ರ ರಕ್ತಸ್ರಾವದಿಂದಾಗಿ ಈಶ್ವರಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಯುವಕರಲ್ಲಿ ಹೆಚ್ಚುತ್ತಿದೆ ಬಾಯಿ ಕ್ಯಾನ್ಸರ್: ಲಕ್ಷಣಗಳಿದ್ದರೆ ನಿರ್ಲಕ್ಷಿಸಬೇಡಿ, ತಜ್ಞರ ಎಚ್ಚರಿಕೆ

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಊರಿಗಾಂ ಪೊಲೀಸ್ ಠಾಣೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಕೃತ್ಯ ಎಸಗಿದ ಬಳಿಕ ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪಿ ಗೋಪಿನಾಥನನ್ನು ಪೊಲೀಸರು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಊರಿಗಾಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಈ ಬಾರಿಯ ಸೋಲಿಗೆ ರಿಷಭ್ ಪಂತ್ ನೀಡಿದ ಕಾರಣವೇನು ಗೊತ್ತಾ? – Kannada News | Rishabh pant post match interview after lsg vs rr match

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್​-19 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದ ಕಳಪೆ ಪ್ರದರ್ಶನ ಮುಂದುವರೆದಿದೆ. ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 32ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ 40 ರನ್​ಗಳಿಂದ ಸೋಲನುಭವಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ 20 ಓವರ್​ಗಳಲ್ಲಿ 159 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ ತಂಡ 18 ಓವರ್​ಗಳಲ್ಲಿ 119 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಎಲ್​ಎಸ್​ಜಿ ಪಡೆ 40 ರನ್​ಗಳಿಂದ ಸೋಲೊಪ್ಪಿಕೊಂಡಿದೆ.

ಈ ಸೋಲಿನ ಬಳಿಕ ಮಾತನಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ರಿಷಭ್ ಪಂತ್, ತಂಡದ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ನಮ್ಮ ಬ್ಯಾಟಿಂಗ್ ವಿಭಾಗವು ಸತತವಾಗಿ ಕೈಕೊಡುತ್ತಿದೆ. ಈ ಸೋಲನ್ನು ವಿವರಿಸುವುದು ಕಷ್ಟ. ತಂಡವಾಗಿ ನಮಗೆ ಇದು ನಿರಾಸೆ ತಂದಿದೆ. ಮೈದಾನದಲ್ಲಿ ಚೆಂಡು ಸ್ವಿಂಗ್ ಆಗುತ್ತಿದ್ದಾಗ ನಾವು ಸ್ವಲ್ಪ ಸಮಯ ತೆಗೆದುಕೊಂಡು ಆಡಬೇಕಿತ್ತು. ನಾನೂ ಸೇರಿದಂತೆ ಬ್ಯಾಟರ್‌ಗಳು ಇನ್ನಿಂಗ್ಸ್ ಅನ್ನು ಆಳವಾಗಿ ಕೊಂಡೊಯ್ಯುವಲ್ಲಿ ವಿಫಲರಾದೆವು” ಎಂದು ಪಂತ್ ಒಪ್ಪಿಕೊಂಡಿದ್ದಾರೆ.

ಬ್ಯಾಟಿಂಗ್ ಬಗ್ಗೆ ಅಸಮಾಧಾನವಿದ್ದರೂ, ಬೌಲರ್‌ಗಳ ಶ್ರಮವನ್ನು ರಿಷಭ್ ಪಂತ್ ಶ್ಲಾಘಿಸಿದ್ದಾರೆ. “ನಮ್ಮ ಬೌಲರ್‌ಗಳು ಅದ್ಭುತವಾಗಿ ಕೆಲಸ ಮಾಡಿದರು. ರಾಜಸ್ಥಾನದಂತಹ ಬಲಿಷ್ಠ ತಂಡವನ್ನು 159 ರನ್‌ಗಳಿಗೆ ಕಟ್ಟಿಹಾಕಿದ್ದು ಸಣ್ಣ ವಿಷಯವಲ್ಲ. ಆದರೆ ಬೌಲರ್‌ಗಳ ಈ ಪರಿಶ್ರಮಕ್ಕೆ ಬ್ಯಾಟರ್‌ಗಳು ಬೆಂಬಲ ನೀಡಬೇಕಿತ್ತು. ಆದರೆ ನಮ್ಮ ಬ್ಯಾಟರ್​ಗಳಿಗೆ ಅದು ಸಾಧ್ಯವಾಗಿಲ್ಲ” ಎಂದು ನಿರಾಸೆ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಸತತ ಸೋಲುಗಳಿಂದ ಕಂಗೆಟ್ಟಿರುವ ಲಕ್ನೋ ಸೂಪರ್ ತಂಡಕ್ಕೆ ಆತ್ಮವಿಶ್ವಾಸ ತುಂಬಲು ಪ್ರಯತ್ನಿಸಿದ ರಿಷಭ್ ಪಂತ್ “ನಾವು ಸೋಲಿಗೆ ಕಾರಣಗಳನ್ನು ಹೊರಗೆ ಹುಡುಕುವ ಬದಲು, ನಮ್ಮ ಒಳಗಡೆಯೇ ಹುಡುಕಬೇಕಿದೆ. ನಮ್ಮಲ್ಲಿ ಸಾಮರ್ಥ್ಯವಿದೆ, ಅದನ್ನು ಪ್ರದರ್ಶಿಸುವ ಅಗತ್ಯವಿದೆ. ತಲೆ ಎತ್ತಿ ನಿಂತು ಮುನ್ನುಗ್ಗೋಣ, ನಾವು ಖಂಡಿತವಾಗಿಯೂ ಲಯಕ್ಕೆ ಮರಳುತ್ತೇವೆ ಎಂಬ ನಂಬಿಕೆ ನನಗಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಈಗಲೇ RCB ಆಟಗಾರನ ಆಯ್ಕೆ ಮಾಡಿ: CSKಗೆ ಐಡಿಯಾ ನೀಡಿದ ಅಶ್ವಿನ್

ಒಟ್ಟಿನಲ್ಲಿ ಕಳಪೆ ಬ್ಯಾಟಿಂಗ್​ನಿಂದಾಗಿ ಲಕ್ನೋ ಸೂಪರ್ ಜೈಂಟ್ಸ್ ಮತ್ತೊಮ್ಮೆ ಸೋಲನುಭವಿಸಿದೆ. ಈ ಸೋಲಿಗೆ ಬ್ಯಾಟರ್​ಗಳೇ ಕಾರಣ. ಹೀಗಾಗಿ ಈ ಸಮಸ್ಯೆಯನ್ನು ನಾವು ಶೀಘ್ರದಲ್ಲೇ ಬಗೆಹರಿಸಿಕೊಳ್ಳಬೇಕಿದೆ. ಈ ಮೂಲಕ ದ್ವಿತೀಯಾರ್ಧದಲ್ಲಿ ಕಂಬ್ಯಾಕ್ ಮಾಡಬೇಕು, ಕಂಬ್ಯಾಕ್ ಮಾಡುವ ವಿಶ್ವಾಸವಿದೆ ಎಂದು ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ರಿಷಭ್ ಪಂತ್ ಹೇಳಿದ್ದಾರೆ.

Source link