All posts by nagaraj11081993

‘ಕೆಡಿ’ ಟ್ರೇಲರ್​​ನಲ್ಲಿ ಪುನೀತ್ ರಾಜ್​​ಕುಮಾರ್ ಚಿತ್ರದ ಡೈಲಾಗ್; ಅಪ್ಪುಗೆ ಪ್ರೇಮ್ ಗೌರವ – Kannada News | KD Trailer: Dhruva Sarja’s Dialogue Echoes Puneeth Rajkumar, Prem’s Tribute Revealed

‘ಕೆಡಿ’ಸಿನಿಮಾ ಏಪ್ರಿಲ್ 30ರಂದು ವಿಶ್ವಾದ್ಯಂತ ತೆರೆಗೆ ಬರಲು ರೆಡಿ ಇದೆ. ಹೀಗಿರುವಾಗಲೇ ಚಿತ್ರದ ಟ್ರೇಲರ್ ಏಪ್ರಿಲ್ 22ರಂದು ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಕಾಳಿ ಪಾತ್ರದಲ್ಲಿ ಧ್ರುವ ಸರ್ಜ ಮಿಂಚಿದ್ದಾರೆ. ಮತ್ತೊಮ್ಮೆ ರಗಡ್ ಪಾತ್ರದ ಮೂಲಕ ಅವರು ಬಂದಿದ್ದಾರೆ. ಪ್ರೇಮ್ ಅವರು ರಾ ಆಗಿ ಸಿನಿಮಾ ಮಾಡಿದ್ದಾರೆ. ಈಗ ‘ಕೆಡಿ’ ಸಿನಿಮಾದ ಟ್ರೇಲರ್ ಅಲ್ಲಿ ಬರುವ ಡೈಲಾಗ್ ಗಮನ ಸೆಳೆದಿದೆ. ಪುನೀತ್ ಅವರ ಸಿನಿಮಾ ಒಂದರ ಡೈಲಾಗ್ ಕೂಡ ಸೇಮ್ ಟು ಸೇಮ್ ಇತ್ತು ಎಂಬುದನ್ನು ಫ್ಯಾನ್ಸ್ ನೆನಪಿಸಿಕೊಂಡಿದ್ದಾರೆ.

ಪ್ರೇಮ್ ಸಿನಿಮಾ ಎಂದರೆ ಅಲ್ಲಿ ಒಮ್ಮೆಯಾದರೂ ಮಚ್ಚು ಝಳಪಲೇಬೇಕು. ‘ಜೋಗಿ’ ಸಿನಿಮಾದಲ್ಲಿ ಶಿವರಾಜ್​​ಕುಮಾರ್ ಕೈಗೆ ಮಚ್ಚು ಕೊಟ್ಟು ಚಿತ್ರ ಹಿಟ್ ಆಗುವಂತೆ ಮಾಡಿದರು. ಆ ಬಳಿಕ ಅವರ ಹಲವು ಸಿನಿಮಾಗಳಲ್ಲಿ ಮಚ್ಚಿನ ಬಳಕೆ ಆಗಿದೆ. ಈಗ ‘ಕೆಡಿ’ ಸಿನಿಮಾದಲ್ಲಿ ಮಚ್ಚಿನ ಬಳಕೆ ಸಾಕಷ್ಟಾಗಿದೆ. ಟ್ರೇಲರ್ ನೋಡಿದರೆ ಇದು ಗೊತ್ತಾಗುತ್ತದೆ. ಟ್ರೇಲರ್ ಉದ್ದಕ್ಕೂ ರಕ್ತ ಹರಿಯುತ್ತದೆ.

ಟ್ರೇಲರ್ ಕ್ಲೈಮ್ಯಾಕ್ಸ್​ ಅಲ್ಲಿ ಧ್ರುವ ಸರ್ಜ ಮಚ್ಚನ್ನು ಹಿಡಿದಿರುತ್ತಾರೆ. ಅವರ ಹೆಗಲೇಮೆಲ ಓರ್ವ ವ್ಯಕ್ತಿಯನ್ನು ಮಲಗಿಸಿಕೊಂಡಿರುತ್ತಾರೆ. ಸುತ್ತಲೂ ಇರೋ ವಿಲನ್​​ಗಳಿಗೆ ಧ್ರುವ ಡೈಲಾಗ್ ಒಂದನ್ನು ಹೇಳುತ್ತಾರೆ. ‘ಮೊದಲನೆಬಾರಿ ಮಚ್ಚು ಹಿಡಿದಿದ್ದೇನೆ.ಅಪ್ಪಿತಪ್ಪಿ ಕೈಕಾಲು ಉಳಿದುಕೊಂಡರೆ ನಿಮ್ಮ ಹೆತ್ತ ತಾಯಿಗೆ ತಪ್ಪಾಯ್ತು ಎಂದು ಹೇಳಿಬಿಡಿ ಅಣ್ಣ’ ಎಂದು ಧ್ರುವ ಸರ್ಜಾ ಉತ್ತರ ಕರ್ನಾಟಕ ಸ್ಟೈಲ್​​ನಲ್ಲಿ ಹೇಳುತ್ತಾರೆ. ಈ ಡೈಲಾಗ್ ಪುನೀತ್ ಸಿನಿಮಾದಲ್ಲೂ ಇತ್ತು.

ಇದನ್ನೂ ಓದಿ:  ‘ಕೆಡಿ’ ಸಿನಿಮಾ ಟ್ರೇಲರ್ ಬಿಡುಗಡೆ; ಧ್ರುವ ಸರ್ಜಾ, ಸಂಜಯ್ ದತ್ ಆ್ಯಕ್ಷನ್ ಅಬ್ಬರ

ಪುನೀತ್ ರಾಜ್​​ಕುಮಾರ್ ನಟನೆಯ ‘ರಾಜ್ ದಿ ಶೋ ಮ್ಯಾನ್’ ಸಿನಿಮಾದಲ್ಲೂ ಇದೇ ರೀತಿಯ ಸಂಭಾಷಣೆ ಬರುತ್ತದೆ. ‘ಅಣ್ಣ ಲೈಫ್ ಅಲ್ಲಿ ಇದೇ ಮೊದಲ ಬಾರಿ ಮಚ್ಚು ಹಿಡಿದಿದ್ದೇನೆ. ಅಪ್ಪಿ ತಪ್ಪಿ ಉಲ್ಟಾ ಬಿದ್ರೆ ಬೇಜಾರ್ ಮಾಡ್ಕಬೇಡಿ ಅಣ್ಣ’ ಎಂದು ಹೇಳುತ್ತಾರೆ ಪುನೀತ್. ‘ರಾಜ್ ದಿ ಶೋ ಮ್ಯಾನ್’ ಚಿತ್ರವನ್ನು ನಿರ್ದೇಶನ ಮಾಡಿದ್ದು ಜೋಗಿ ಪ್ರೇಮ್. ಈ ಕಾರಣದಿಂದಲೇ ಅವರು ‘ಕೆಡಿ’ ಸಿನಿಮಾದಲ್ಲಿ ಪುನೀತ್ ಅವರನ್ನು ನೆನಪಿಸಿಕೊಳ್ಳಲು ಈ ಡೈಲಾಗ್ ಇಟ್ಟಿರಬಹುದು ಎನ್ನಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Karnataka SSLC 10th Result 2026 LIVE: ಕರ್ನಾಟಕ SSLC ಫಲಿತಾಂಶಕ್ಕೆ ಕ್ಷಣಗಣನೆ – Kannada News | KSEAB Karnataka SSLC 10th Result 2026 Live updates

ಬೆಂಗಳೂರು, ಏ,23 : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (KSEAB) ನಡೆಸಿದ 2026ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ  ಫಲಿತಾಂಶ ಪ್ರಕಟಣೆಗೆ ಕ್ಷಣಗಣನೆ ಆರಂಭವಾಗಿದೆ. ರಾಜ್ಯಾದ್ಯಂತ ಸುಮಾರು 9 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಫಲಿತಾಂಶಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ರಾಜ್ಯದ ವಿವಿಧ ಕೇಂದ್ರಗಳಲ್ಲಿ ನಡೆದಿದ್ದ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆಯು ಈಗಾಗಲೇ ಯಶಸ್ವಿಯಾಗಿ ಪೂರ್ಣಗೊಂಡಿದೆ. ಪತ್ರಿಕಾಗೋಷ್ಠಿಯಲ್ಲಿ ಫಲಿತಾಂಶದ ಅಧಿಕೃತ ಘೋಷಣೆ ಹೊರಬೀಳಲಿದೆ.ಈ ವರ್ಷ ಪರೀಕ್ಷೆಗಾಗಿ 9 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು, ಅವರಲ್ಲಿ ಸುಮಾರು 8 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ರಾಜ್ಯಾದ್ಯಂತ ಪರೀಕ್ಷೆಗೆ ಹಾಜರಾಗಿದ್ದಾರೆ. ಪತ್ರಿಕಾಗೋಷ್ಠಿ ಮುಗಿದ ಬಳಿಕ ಆನ್‌ಲೈನ್‌ನಲ್ಲಿ ವಿದ್ಯಾರ್ಥಿಗಳು ತಮ್ಮ ಅಂಕಗಳನ್ನು ವೀಕ್ಷಿಸಬಹುದು.

Source link

ಹಾರ್ಮುಜ್ ಜಲಸಂಧಿಯಲ್ಲಿ ಮೂರು ಹಡಗುಗಳ ಮೇಲೆ ಇರಾನ್ ಗುಂಡಿನ ದಾಳಿ – Kannada News | Hormuz Flashpoint: Iran Fires on Ships as Talks Stall

ಟೆಹ್ರಾನ್, ಏಪ್ರಿಲ್ 23: ಹಾರ್ಮುಜ್ ಜಲಸಂಧಿ(Hormuz Strait) ಮತ್ತೊಮ್ಮೆ ಜಾಗತಿಕ ಸಂಘರ್ಷದ ಕೇಂದ್ರಬಿಂದುವಾಗಿ ಮಾರ್ಪಟ್ಟಿದೆ. ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆಯ ನಡುವೆ, ಸಮುದ್ರ ಮಾರ್ಗದಲ್ಲಿ ಸಂಚರಿಸುತ್ತಿದ್ದ ಮೂರು ಹಡಗುಗಳ ಮೇಲೆ ನಡೆದ ದಾಳಿ ಇಡೀ ಜಗತ್ತನ್ನು ಆತಂಕಕ್ಕೆ ತಳ್ಳಿದೆ. ಪಶ್ಚಿಮ ಏಷ್ಯಾದ ಅತ್ಯಂತ ನಿರ್ಣಾಯಕ ಸಮುದ್ರ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ ಯುದ್ಧದ ಕಾರ್ಮೋಡಗಳು ಮತ್ತಷ್ಟು ದಟ್ಟವಾಗಿವೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನ ಗನ್‌ಬೋಟ್‌ಗಳು ಮೂರು ಪ್ರತ್ಯೇಕ ವ್ಯಾಪಾರಿ ಹಡಗುಗಳ ಮೇಲೆ ಗುಂಡಿನ ದಾಳಿ ನಡೆಸುವ ಮೂಲಕ ಅಂತಾರಾಷ್ಟ್ರೀಯ ಸಮುದ್ರ ಭದ್ರತೆಗೆ ಸವಾಲು ಹಾಕಿವೆ.

ಒಮಾನ್‌ನ ಈಶಾನ್ಯಕ್ಕೆ ಸಂಚರಿಸುತ್ತಿದ್ದ ಲೈಬೀರಿಯನ್ ಧ್ವಜವನ್ನು ಹೊಂದಿರುವ ಹಡಗು ಈ ದಾಳಿಗೆ ಗುರಿಯಾಗಿದೆ. ಹಡಗಿನ ಕ್ಯಾಪ್ಟನ್ ನೀಡಿರುವ ಮಾಹಿತಿ ಪ್ರಕಾರ, ಐಆರ್‌ಜಿಸಿಯ ಗನ್‌ಬೋಟ್ ಅತಿ ವೇಗವಾಗಿ ಹಡಗಿನ ಸಮೀಪಕ್ಕೆ ಬಂದಿತ್ತು. ಅಷ್ಟರಲ್ಲಿ ಗನ್‌ಬೋಟ್‌ನಲ್ಲಿದ್ದ ಮೂವರು ವ್ಯಕ್ತಿಗಳು ಹಡಗಿನ ಸೇತುವೆಯ (Bridge) ಭಾಗವನ್ನು ಗುರಿಯಾಗಿಸಿಕೊಂಡು ಮನಬಂದಂತೆ ಗುಂಡು ಹಾರಿಸಿದರು. ದಾಳಿಯ ಬೆನ್ನಲ್ಲೇ ಒಂದು ಹಡಗಿನಲ್ಲಿ ಸಣ್ಣ ಪ್ರಮಾಣದ ಬೆಂಕಿ ಕಾಣಿಸಿಕೊಂಡಿತ್ತು.

ಗುಂಡಿನ ದಾಳಿ ನಡೆದರೂ ಮತ್ತು ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡರೂ, ಮೂರೂ ಹಡಗುಗಳಲ್ಲಿರುವ ಸಿಬ್ಬಂದಿ ವರ್ಗಕ್ಕೆ ಯಾವುದೇ ಅಪಾಯ ಸಂಭವಿಸಿಲ್ಲ. ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಮತ್ತು ಹಡಗುಗಳಿಗೆ ಯಾವುದೇ ಗಮನಾರ್ಹ ಹಾನಿಯಾಗಿಲ್ಲ ಎಂದು ಯುನೈಟೆಡ್ ಕಿಂಗ್‌ಡಮ್ ಮ್ಯಾರಿಟೈಮ್ ಟ್ರೇಡ್ ಆಪರೇಷನ್ಸ್ (UKMTO) ದೃಢಪಡಿಸಿದೆ.

ಮತ್ತಷ್ಟು ಓದಿ: ಎಲ್ಲ ದೇಶಗಳ ಕಮರ್ಷಿಯಲ್ ಹಡಗಿಗೂ ಹಾರ್ಮುಜ್ ಜಲಸಂಧಿ ತೆರೆದಿದೆ; ಇರಾನ್ ಮಹತ್ವದ ಘೋಷಣೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕದನ ವಿರಾಮವನ್ನು ವಿಸ್ತರಿಸುವುದಾಗಿ ಘೋಷಿಸಿದ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿರುವುದು ರಾಜತಾಂತ್ರಿಕ ವಲಯದಲ್ಲಿ ಆಶ್ಚರ್ಯ ಮೂಡಿಸಿದೆ. ಟ್ರಂಪ್ ಅವರು ಇರಾನ್ ಮೇಲೆ ಆರ್ಥಿಕ ದಿಗ್ಬಂಧನ ಹೇರಿದ್ದರೂ, ಮಾನವೀಯ ನೆಲೆಯಲ್ಲಿ ದಾಳಿಯನ್ನು ತಡೆಹಿಡಿದಿದ್ದರು. ಆದರೆ, ಇರಾನ್‌ನ ಈ ಉದ್ಧಟತನವು ಟ್ರಂಪ್ ಅವರ ಮುಂದಿನ ನಿರ್ಧಾರದ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ.

ಹಾರ್ಮುಜ್ ಜಲಸಂಧಿಯು ವಿಶ್ವದ ಒಟ್ಟು ತೈಲ ವ್ಯಾಪಾರದ ಬಹುಪಾಲು ಪಾಲನ್ನು ನಿರ್ವಹಿಸುತ್ತದೆ. ಈ ಮಾರ್ಗದಲ್ಲಿ ಹಡಗುಗಳ ಮೇಲೆ ದಾಳಿ ನಡೆಯುತ್ತಿರುವುದು ತೈಲ ಬೆಲೆ ಏರಿಕೆಗೆ ಮತ್ತು ಜಾಗತಿಕ ಸರಬರಾಜು ಸರಪಳಿಯ ಮೇಲೆ ಪರಿಣಾಮ ಬೀರಬಹುದು ಎಂದು ಆರ್ಥಿಕ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬೆಂಗಳೂರಿನ ಯುವಕರಲ್ಲಿ ಹೆಚ್ಚುತ್ತಿದೆ ಬಾಯಿ ಕ್ಯಾನ್ಸರ್: ಲಕ್ಷಣಗಳಿದ್ದರೆ ನಿರ್ಲಕ್ಷಿಸಬೇಡಿ, ತಜ್ಞರ ಎಚ್ಚರಿಕೆ – Kannada News | Bengaluru Health Alert: Doctors Warn of Rising Oral Cancer Cases Among Youth; Symptoms Often Overlooked

ಬೆಂಗಳೂರು, ಏಪ್ರಿಲ್ 23: ಸಾಮಾನ್ಯವಾಗಿ ಬಾಯಿ ಕ್ಯಾನ್ಸರ್ (Oral Cancer) ವಯಸ್ಸಾದವರಲ್ಲಿ ಕಾಣಿಸಿಕೊಳ್ಳುತ್ತದೆ ಎಂಬ ಭಾವನೆ ಇತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನ (Bengaluru) 30 ಮತ್ತು 40ರ ವಯೋಮಾನದ ಯುವಜನತೆಯಲ್ಲಿ ಇದರ ಲಕ್ಷಣಗಳು ಹೆಚ್ಚಾಗಿ ಪತ್ತೆಯಾಗುತ್ತಿವೆ ಎಂದು ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ. ಬಾಯಿ ಕ್ಯಾನ್ಸರ್​​ಗೆ ತಂಬಾಕು ಸೇವನೆ ಇಂದಿಗೂ ಪ್ರಮುಖ ಕಾರಣವಾಗಿದ್ದರೂ, ಲಕ್ಷಣಗಳನ್ನು ಆರಂಭದಲ್ಲಿಯೇ ಪತ್ತೆಹಚ್ಚುವಲ್ಲಿ ವಿಳಂಬವಾಗುತ್ತಿರುವುದು ಈ ಅಪಾಯವನ್ನು ಹೆಚ್ಚಿಸಿದೆ ಎಂದು ಮೆಡಿಕಲ್ ಆಂಕಾಲಜಿಸ್ಟ್ ಡಾ. ರಾಜೀವ್ ವಿಜಯಕುಮಾರ್ ಹೇಳಿರುವುದಾಗಿ ಡೆಕ್ಕನ್ ಹೆರಾಲ್ಡ್ ವರದಿ ತಿಳಿಸಿದೆ.

ಯುವಕರಲ್ಲಿ ಬಾಯಿ ಕ್ಯಾನ್ಸರ್ ಹೆಚ್ಚಳಕ್ಕೆ ಕಾರಣಗಳೇನು?

ತಂಬಾಕು ಮಾತ್ರವಲ್ಲದೆ ಹೈ ಪ್ರೊಸೆಸ್ಡ್ ಆಹಾರಗಳ ಸೇವನೆ, ಮೈಕ್ರೋ ನ್ಯೂಟ್ರಿಯೆಂಟ್ಸ್ ಕೊರತೆ, ಅತಿಯಾದ ಮಾನಸಿಕ ಒತ್ತಡ ಹಾಗೂ HPV ಸೋಂಕು ಕೂಡ ಯುವಜನತೆಯಲ್ಲಿ ಕ್ಯಾನ್ಸರ್ ಹೆಚ್ಚಲು ಕಾರಣವಾಗುತ್ತಿವೆ. ಯುವಕರಲ್ಲಿ ಕ್ಯಾನ್ಸರ್ ಇರಲಾರದು ಎಂಬ ಕನಿಷ್ಠ ಅನುಮಾನವೂ ಇಲ್ಲದಿರುವುದು ರೋಗನಿರ್ಣಯ ವಿಳಂಬಕ್ಕೆ ಕಾರಣವಾಗುತ್ತಿದೆ ಎಂದು ಹೆಡ್ ಅಂಡ್ ನೆಕ್ ಸರ್ಜರಿ ತಜ್ಞ ಡಾ. ನಾರಾಯಣ ಸುಬ್ರಮಣಿಯಂ ಅಭಿಪ್ರಾಯಪಟ್ಟಿರುವುದನ್ನು ವರದಿ ಉಲ್ಲೇಖಿಸಿದೆ.

ಬಾಯಿ ಕ್ಯಾನ್ಸರ್ ಲಕ್ಷಣಗಳೇನು? ಈ ಲಕ್ಷಣಗಳ ಬಗ್ಗೆ ಇರಲಿ ಎಚ್ಚರ

ಬಾಯಿ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳು ನೋವು ರಹಿತವಾಗಿರುತ್ತವೆ. ಹೀಗಾಗಿ ಜನರು ಇದನ್ನು ಸಾಮಾನ್ಯವೆಂದು ನಿರ್ಲಕ್ಷಿಸುತ್ತಾರೆ. ಆದರೆ, ಈ ಕೆಳಗಿನ ಲಕ್ಷಣಗಳು ಕಂಡುಬಂದರೆ ಎಚ್ಚರಿಕೆ ವಹಿಸಬೇಕಂದು ವೈದ್ಯರು ತಿಳಿಸಿದ್ದಾರೆ.

  • ಕೆನ್ನೆಯ ಒಳಭಾಗದಲ್ಲಿ ಬಿಳಿ ಅಥವಾ ಕೆಂಪು ಮಚ್ಚೆಗಳು ಕಾಣಿಸಿಕೊಳ್ಳುವುದು.
  • ಹಲ್ಲುಗಳು ಸಡಿಲಗೊಳ್ಳುವುದು.
  • ಬಾಯಿ ಹುಣ್ಣು ಅಥವಾ ಹಲ್ಲು ನೋವು ದೀರ್ಘಕಾಲ ಗುಣವಾಗದೆ ಇರುವುದು.

ಶೇ 50-65 ರಷ್ಟು ಪ್ರಕರಣಗಳಲ್ಲಿ ಆರಂಭದಲ್ಲಿ ನೋವು ಇಲ್ಲದಿರುವ ಕಾರಣಕ್ಕೆ ರೋಗ ಉಲ್ಬಣಗೊಂಡ ಹಂತದಲ್ಲಿ ಆಸ್ಪತ್ರೆಗೆ ಬರುತ್ತಾರೆ ಎಂದು ರೇಡಿಯೇಶನ್ ಆಂಕಾಲಜಿ ತಜ್ಞೆ ಡಾ. ಲಿಥಿಕಾ ಲಾವಣ್ಯ ವಿವರಿಸಿದ್ದಾರೆ.

ದಂತ ಸಮಸ್ಯೆ ಎಂದು ನಿರ್ಲಕ್ಷಿಸಬೇಡಿ

ಬಹಳಷ್ಟು ಮಂದಿ ಬಾಯಿ ಹುಣ್ಣು ಅಥವಾ ಒಸಡುಗಳಲ್ಲಿ ರಕ್ತ ಬರುವುದನ್ನು ಸಾಮಾನ್ಯ ದಂತ ಸಮಸ್ಯೆ ಎಂದು ಭಾವಿಸಿ ಡೆಂಟಿಸ್ಟ್‌ಗಳ ಬಳಿ ಹೋಗುತ್ತಾರೆ. ಪದೇ ಪದೇ ಚಿಕಿತ್ಸೆ ಪಡೆದರೂ ಗುಣವಾಗದಿದ್ದಾಗ ಆಂಕಾಲಾಜಿಸ್ಟ್‌ಗಳ ಬಳಿ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ ಎಂದು ಡಾ. ಸಾಕ್ಷಿ ಹಿಂದೂಜಾ ಸಲಹೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಈಗಲೇ RCB ಆಟಗಾರನ ಆಯ್ಕೆ ಮಾಡಿ: CSKಗೆ ಐಡಿಯಾ ನೀಡಿದ ಅಶ್ವಿನ್ – Kannada News | Ashwin Urges CSK to Loan RCB’s Vihaan Malhotra as Mhatre Replacement

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್-19 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಸತತ ಸೋಲುಗಳಿಂದ ಕಂಗೆಟ್ಟಿದೆ. ಈ ಸೋಲುಗಳ ನಡುವೆ ಆಟಗಾರರ ಗಾಯದ ಸಮಸ್ಯೆ ಸಿಎಸ್​ಕೆ ಫ್ರಾಂಚೈಸಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅದರಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿದ್ದ ಸ್ಫೋಟಕ ದಾಂಡಿಗ ಆಯುಷ್ ಮ್ಹಾತ್ರೆ ಗಾಯಗೊಂಡು ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಇತ್ತ ಸತತ ಸೋಲು ಮತ್ತು ಪ್ರಮುಖ ಆಟಗಾರರ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಕ್ಕೆ ಅನುಭವಿ ಆಟಗಾರ ರವಿಚಂದ್ರನ್ ಅಶ್ವಿನ್ ಒಂದು ಮಹತ್ವದ ಸಲಹೆ ನೀಡಿದ್ದಾರೆ. ಅದು ಸಹ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಯುವ ಪ್ರತಿಭೆಯೊಬ್ಬರನ್ನು ‘ಲೋನ್’ (Loan) ಆಧಾರದ ಮೇಲೆ ಪಡೆಯಲು..!

ಇತ್ತೀಚೆಗೆ ನಡೆದ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 18 ವರ್ಷದ ಆಯುಷ್ ಮ್ಹಾತ್ರೆ ಎಡಗಾಲಿನ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಈ ಸಮಸ್ಯೆಯಿಂದ ಚೇತರಿಸಿಕೊಳ್ಳಲು 6 ರಿಂದ 12 ವಾರಗಳ ಕಾಲಾವಕಾಶ ಬೇಕಾಗಿರುವುದರಿಂದ ಅವರು ಈ ಬಾರಿಯ ಐಪಿಎಲ್‌ನಿಂದ ಅಧಿಕೃತವಾಗಿ ಹೊರಬಿದ್ದಿದ್ದಾರೆ. ಇದು ಸಿಎಸ್‌ಕೆಗೆ ಭಾರಿ ಹೊಡೆತ ನೀಡಿದೆ.

ಅಶ್ವಿನ್ ಐಡಿಯಾ!

ಆಯುಷ್ ಮ್ಹಾತ್ರೆ ಹೊರಬಿದ್ದ ಬೆನ್ನಲ್ಲೇ ರವಿಚಂದ್ರನ್ ಅಶ್ವಿನ್ ಸಿಎಸ್​ಕೆ ತಂಡಕ್ಕೆ ಸೂಪರ್ ಐಡಿಯಾ ನೀಡಿದ್ದಾರೆ. ಸಿಎಸ್​ಕೆ ಫ್ರಾಂಚೈಸಿಯು ಆರ್‌ಸಿಬಿ ತಂಡದ ಯುವ ಆಟಗಾರ ವಿಹಾನ್ ಮಲ್ಹೋತ್ರಾ ಅವರನ್ನು ಮಿಡ್-ಸೀಸನ್ ಲೋನ್ ಮೂಲಕ ತಂಡಕ್ಕೆ ಸೇರಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ವಿಹಾನ್ ಅತ್ಯಂತ ಪ್ರತಿಭಾವಂತ ಆಟಗಾರನಾಗಿದ್ದು, ಆರ್‌ಸಿಬಿ ಪರ ಈವರೆಗೆ ಒಂದು ಪಂದ್ಯವನ್ನೂ ಆಡಿಲ್ಲ. ಅವರು ಸಿಎಸ್‌ಕೆಗೆ ಉತ್ತಮ ಆಯ್ಕೆಯಾಗಬಲ್ಲರು. ಹೀಗಾಗಿ ಸಿಎಸ್​ಕೆ ಫ್ರಾಂಚೈಸಿ ಆರ್​ಸಿಬಿ ಜೊತೆ ಮಾತುಕತೆ ನಡೆಸಿ ಅವರನ್ನು ಲೋನ್ ಮೂಲಕ ಪಡೆಯುವುದು ಉತ್ತಮ ಎಂದಿದ್ದಾರೆ.

ವಿಹಾನ್ ಮಲ್ಹೋತ್ರಾ ಯಾರು?

ವಿಹಾನ್ ಮಲ್ಹೋತ್ರಾ 19 ವರ್ಷದ ಪ್ರತಿಭಾನ್ವಿತ ಬ್ಯಾಟರ್. 2026ರ ಹರಾಜಿನಲ್ಲಿ ಆರ್‌ಸಿಬಿ ಇವರನ್ನು 30 ಲಕ್ಷ ರೂ.ಗೆ ಖರೀದಿಸಿದೆ. ಇದಾಗ್ಯೂ ಅವರು ಆರ್​ಸಿಬಿ ಪರ ಇನ್ನೂ ಕೂಡ ಪಾದಾರ್ಪಣೆ ಮಾಡಿಲ್ಲ.

ಇತ್ತ ಆರ್​ಸಿಬಿ ಪರ ಈವರೆಗೆ ಯಾವುದೇ ಪಂದ್ಯವಾಡದಿರುವ ಕಾರಣ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ವಿಹಾನ್ ಅವರನ್ನು ಲೋನ್ ಮೂಲಕ ಪಡೆದುಕೊಳ್ಳುವುದು ಉತ್ತಮ. ಈ ಮೂಲಕ ಆಯುಷ್ ಮ್ಹಾತ್ರೆ ಅವರ ಬದಲಿಯಾಗಿ ಬಳಸಿಕೊಳ್ಳಬೇಕೆಂದು ರವಿಚಂದ್ರನ್ ಅಶ್ವಿನ್ ಹೇಳಿದ್ದಾರೆ.

ಒಂದು ವೇಳೆ  ಆರ್‌ಸಿಬಿ ಒಪ್ಪದಿದ್ದರೆ, ಭಾರತದ ಅಂಡರ್-19 ವಿಕೆಟ್ ಕೀಪರ್ ಬ್ಯಾಟರ್ ಅಭಿಜ್ಞಾನ್ ಕುಂಡು ಅವರನ್ನು ಭವಿಷ್ಯದ ದೃಷ್ಟಿಯಿಂದ ತಂಡಕ್ಕೆ ಸೇರಿಸಿಕೊಳ್ಳಲು ಅಶ್ವಿನ್ ಸೂಚಿಸಿದ್ದಾರೆ.

ಆರ್‌ಸಿಬಿ ಯಾಕೆ ಲೋನ್ ನೀಡಬೇಕು?

ಅಶ್ವಿನ್ ಪ್ರಕಾರ, ಪ್ರಸ್ತುತ ಆರ್‌ಸಿಬಿ ತಂಡವು ಅಂಕಪಟ್ಟಿಯಲ್ಲಿ ಭದ್ರವಾದ ಸ್ಥಾನದಲ್ಲಿದೆ. ಆದರೆ ಸಿಎಸ್‌ಕೆ ಕೆಳಮಟ್ಟದಲ್ಲಿದೆ. ಆರ್‌ಸಿಬಿಯಲ್ಲಿ ಅವಕಾಶ ಸಿಗದ ಆಟಗಾರನಿಗೆ ಸಿಎಸ್‌ಕೆ ಪರ ಆಡಲು ಅವಕಾಶ ನೀಡುವ ಮೂಲಕ ಆರ್‌ಸಿಬಿ ಹಣವನ್ನೂ ಗಳಿಸಬಹುದು ಮತ್ತು ಆಟಗಾರನಿಗೆ ಅನುಭವವೂ ಸಿಗುತ್ತದೆ ಎಂಬುದು ಅಶ್ವಿನ್ ವಾದ.

ಐಪಿಎಲ್ ಲೋನ್ ನಿಯಮವೇನು?

ಐಪಿಎಲ್‌ನಲ್ಲಿ ಆಟಗಾರರ ‘ಮಿಡ್-ಸೀಸನ್ ಲೋನ್’ ನಿಯಮವು ತಂಡಗಳು ತಮ್ಮಲ್ಲಿರುವ ಆಟಗಾರರನ್ನು ತಾತ್ಕಾಲಿಕವಾಗಿ ಬೇರೆ ತಂಡಗಳಿಗೆ ನೀಡಲು ಅವಕಾಶ ಮಾಡಿಕೊಡುತ್ತದೆ. ಈ ನಿಯಮದ ಪ್ರಮುಖ ಅಂಶಗಳು ಈ ಕೆಳಗಿನಂತಿವೆ…

  • ಪಂದ್ಯಗಳ ಮಿತಿ ನಿಯಮ: ಆವೃತ್ತಿಯ ಅರ್ಧಭಾಗದವರೆಗೆ ಕೇವಲ 2 ಅಥವಾ ಅದಕ್ಕಿಂತ ಕಡಿಮೆ ಪಂದ್ಯಗಳಲ್ಲಿ (ಪ್ಲೇಯಿಂಗ್ ಇಲೆವೆನ್ ಅಥವಾ ಕನ್ಶನ್ ಸಬ್ಸ್ಟಿಟ್ಯೂಟ್ ಆಗಿ) ಭಾಗವಹಿಸಿದ ಆಟಗಾರರು ಮಾತ್ರ ಲೋನ್ ಪಡೆಯಲು ಅರ್ಹರು.
  • ಆಯ್ಕೆಯ ನಿಯಮ: ಈ ನಿಯಮವು ಭಾರತೀಯ ಮತ್ತು ವಿದೇಶಿ, ಇಬ್ಬರೂ ಕ್ಯಾಪ್ಡ್  ಮತ್ತು ಅನ್‌ಕ್ಯಾಪ್ಡ್ ಆಟಗಾರರಿಗೆ ಅನ್ವಯಿಸುತ್ತದೆ.
  • ಒಂದು ಬಾರಿ ಅವಕಾಶ: ಒಬ್ಬ ಆಟಗಾರನನ್ನು ಒಂದು ಸೀಸನ್‌ನಲ್ಲಿ ಕೇವಲ ಒಮ್ಮೆ ಮಾತ್ರ ಲೋನ್ ಮೇಲೆ ನೀಡಲು ಅವಕಾಶವಿದೆ.
  • ಆಟಗಾರ ಆಯ್ಕೆಯ ಸಮಯ: ಸಾಮಾನ್ಯವಾಗಿ ಲೋನ್ ವಿಂಡೋ ಸೀಸನ್‌ನ 7ನೇ ಪಂದ್ಯದಿಂದ 34ನೇ ಪಂದ್ಯದವರೆಗೆ ತೆರೆದಿರುತ್ತದೆ.
  • ಮೂಲ ತಂಡದ ವಿರುದ್ಧ ಆಡುವಂತಿಲ್ಲ: ಲೋನ್ ಪಡೆದ ಆಟಗಾರನು ತನ್ನನ್ನು ಲೋನ್ ನೀಡಿದ ಮೂಲ ತಂಡದ ವಿರುದ್ಧದ ಪಂದ್ಯದಲ್ಲಿ ಆಡುವಂತಿಲ್ಲ.
  • ಸಹಮತಿ: ಲೋನ್ ಪ್ರಕ್ರಿಯೆಗೆ ಆಟಗಾರನ ಒಪ್ಪಿಗೆಯೂ ಅನಿವಾರ್ಯವಾಗಿರುತ್ತದೆ.
  • ಸಂಭಾವನೆ: ಆಟಗಾರನ ಮೂಲ ಹರಾಜು ಮೊತ್ತವನ್ನು ಅವರ ಮೂಲ ಫ್ರಾಂಚೈಸಿ ಪಾವತಿಸುತ್ತದೆ. ಆದರೆ, ಲೋನ್ ಅವಧಿಯಲ್ಲಿ ಅವರು ಆಡುವ ಪಂದ್ಯಗಳ ಫೀಸ್ ಅನ್ನು ಅವರನ್ನು ಪಡೆದ ಹೊಸ ತಂಡವು ಪಾವತಿಸಬೇಕಾಗುತ್ತದೆ.
  • ಲೋನ್ ಫೀಸ್: ಎರಡು ತಂಡಗಳು ಪರಸ್ಪರ ಒಪ್ಪಂದದ ಮೇರೆಗೆ ಹೆಚ್ಚುವರಿ ‘ಲೋನ್ ಫೀಸ್’ ಅನ್ನು ನಿಗದಿಪಡಿಸಬಹುದು. ಇದು ಐಪಿಎಲ್ ಸ್ಯಾಲರಿ ಕ್ಯಾಪ್ ವ್ಯಾಪ್ತಿಗೆ ಬರುವುದಿಲ್ಲ.
  • ಲೋನ್ ಅವಧಿ: ಲೋನ್ ಪಡೆದ ಆಟಗಾರನು ಆ ಸೀಸನ್‌ನ ಅಂತ್ಯದವರೆಗೆ ಹೊಸ ತಂಡದಲ್ಲೇ ಇರುತ್ತಾರೆ. ಸೀಸನ್ ಮುಗಿದ ನಂತರ ಅವರು ಮತ್ತೆ ತಮ್ಮ ಮೂಲ ತಂಡಕ್ಕೆ  ಮರಳಬೇಕು. ಅಂದರೆ ಆರ್​ಸಿಬಿ ಆಟಗಾರ ಸಿಎಸ್​ಕೆಗೆ ಹೋದರೆ, ಮುಂದಿನ ಸೀಸನ್​ನಲ್ಲಿ ಮತ್ತೆ ಆರ್​ಸಿಬಿ ತಂಡಕ್ಕೆ ಮರಳಬೇಕು.

ಇದನ್ನೂ ಓದಿ: ಕೇವಲ 227 ಎಸೆತಗಳು… ವೈಭವ್ ಆರ್ಭಟಕ್ಕೆ ಐಪಿಎಲ್ ದಾಖಲೆ ಉಡೀಸ್

ಆಯುಷ್ ಮ್ಹಾತ್ರೆ ಅವರ ಗಾಯದ ಸಮಸ್ಯೆಯ ಹಿನ್ನೆಲೆಯಲ್ಲಿ ಈ ನಿಯಮವನ್ನು ಬಳಸಿಕೊಂಡು ಆರ್‌ಸಿಬಿಯ ವಿಹಾನ್ ಮಲ್ಹೋತ್ರಾ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ತಮ್ಮ ತಂಡಕ್ಕೆ ಆಯ್ಕೆ ಮಾಡುವಂತೆ ರವಿಚಂದ್ರನ್ ಅಶ್ವಿನ್ ಸಲಹೆ ನೀಡಿದ್ದಾರೆ. ಈ ಐಡಿಯಾ ಬಳಸಿಕೊಂಡು ಸಿಎಸ್​ಕೆ ಆರ್​ಸಿಬಿ ಆಟಗಾರನನ್ನು ತಂಡಕ್ಕೆ ಆಯ್ಕೆ ಮಾಡಲಿದೆಯಾ ಕಾದು ನೋಡಬೇಕಿದೆ.

Published On – 8:31 am, Thu, 23 April 26

Source link

‘ರಕ್ಷಿತಾ ರೀತಿ ನಾನು ಪ್ರೇಮ್ ಜೊತೆ ಸಂಸಾರ ಮಾಡ್ತಿದೀನಿ’; ಅರ್ಜುನ್ ಜನ್ಯ – Kannada News | I’m Living with Prem Like Rakshitha Arjun Janya’s Hilarious Statement Viral

‘ಕೆಡಿ’ ಸಿನಿಮಾ ಏಪ್ರಿಲ್ 30ರಂದು ರಿಲೀಸ್ ಆಗುತ್ತಿದೆ. ಈ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಈ ಈವೆಂಟ್​​ನಲ್ಲಿ ಮಾತನಾಡಿದ ಅರ್ಜುನ್ ಜನ್ಯ ಅವರು, ‘ರಕ್ಷಿತಾ ರೀತಿ ನಾನು ಪ್ರೇಮ್ ಜೊತೆ ಸಂಸಾರ ಮಾಡುತ್ತಿದ್ದೇನೆ’ ಎಂದಿದ್ದಾರೆ. ಅಂದರೆ ಕಳೆದ ಕೆಲ ದಿನಗಳಿಂದ ಇಬ್ಬರೂ ಸಿನಿಮಾ ಕೆಲಸಗಳನ್ನು ಮಾಡುತ್ತಿದ್ದಾರೆ. ಹೀಗಾಗಿ, ಈ ಮಾತನ್ನು ಹೇಳಿದ್ದಾರೆ. ಪ್ರೇಮ್ ಹಾಗೂ ಅರ್ಜುನ್ ಜನ್ಯ ಅವರಿಗೆ ನಿತ್ಯ 2-3 ಗಂಟೆ ಮಾತ್ರ ಮಲಗೋಕೆ ಸಮಯ ಸಿಗುತ್ತಿದೆಯಂತೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

ಶಾಸಕರ ಕಚೇರಿಗೇ ವಿದ್ಯುತ್ ಸಂಪರ್ಕ ಕಟ್! ಲಕ್ಷಾಂತರ ರೂ. ಬಿಲ್ ಬಾಕಿ ಉಳಿಸಿಕೊಂಡಿದ್ದಕ್ಕೆ ಹೆಸ್ಕಾಂ ಶಾಕ್ – Kannada News | Vijayapura HESCOM Cuts Power to PWD Building Housing Nagathan MLA Office Over Pending Bill of 1.47 Lakhs

ವಿಜಯಪುರ, ಏಪ್ರಿಲ್ 23: ಸರ್ಕಾರದ ನಿಯಮಗಳು ಎಲ್ಲರಿಗೂ ಒಂದೇ ಎಂಬುದನ್ನು ವಿಜಯಪುರದ ಹೆಸ್ಕಾಂ (HESCOM) ಸಿಬ್ಬಂದಿ ಸಾಬೀತುಪಡಿಸಿದ್ದಾರೆ. ಲಕ್ಷಾಂತರ ರೂಪಾಯಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆಗೆ (PWD) ಸೇರಿದ ಕಟ್ಟಡದ ವಿದ್ಯುತ್ ಸಂಪರ್ಕವನ್ನು ಕಟ್ ಮಾಡಲಾಗಿದೆ. ವಿಶೇಷವೆಂದರೆ, ಇದೇ ಕಟ್ಟಡದಲ್ಲಿ ನಾಗಠಾಣ ಶಾಸಕ ವಿಠಲ ಕಟಕದೊಂಡ ಅವರ ಕಚೇರಿಯೂ ಕಾರ್ಯನಿರ್ವಹಿಸುತ್ತಿದೆ.

ಹಿಂದೆ ಪ್ರವಾಸಿ ಮಂದಿರವಾಗಿದ್ದ ಈ ಕಟ್ಟಡವನ್ನು ಪ್ರಸ್ತುತ ಶಾಸಕರ ಕಚೇರಿಯಾಗಿ ಬಳಸಲಾಗುತ್ತಿದೆ. ಆದರೆ, ಕಳೆದ ಒಂದು ವರ್ಷದಿಂದ ಈ ಕಟ್ಟಡದ ವಿದ್ಯುತ್ ಬಿಲ್ ಅನ್ನು ಪಿಡಬ್ಲ್ಯೂಡಿ ಇಲಾಖೆ ಅಧಿಕಾರಿಗಳು ಪಾವತಿಸಿಲ್ಲ. ಒಟ್ಟು 1.47 ಲಕ್ಷ ರೂಪಾಯಿ ಬಾಕಿ ಉಳಿದಿರುವ ಕಾರಣ, ಹೆಸ್ಕಾಂ ಸಿಬ್ಬಂದಿ ಸಂಪರ್ಕ ಕಡಿತಗೊಳಿಸಿದ್ದಾರೆ.

ವಿದ್ಯುತ್ ಸಂಪರ್ಕ ಕಟ್ ಆದ ಪರಿಣಾಮ ಶಾಸಕರ ಕಚೇರಿಯ ಕೆಲಸ ಕಾರ್ಯಗಳಿಗೆ ಭಾರೀ ತೊಂದರೆಯಾಗಿದೆ. ಕಚೇರಿಗೆ ಬರುವ ಸಾರ್ವಜನಿಕರ ಕೆಲಸಗಳು ವಿಳಂಬವಾಗುತ್ತಿದ್ದು, ಶಾಸಕರ ಕಚೇರಿ ಸಿಬ್ಬಂದಿ ಕತ್ತಲಲ್ಲೇ ಕೆಲಸ ಮಾಡುವಂತಾಗಿದೆ. ಸರ್ಕಾರಿ ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದಾಗಿ ಜನಪ್ರತಿನಿಧಿಗಳ ಕಚೇರಿಗೇ ಕತ್ತಲು ಆವರಿಸುವಂತಾಗಿರುವುದು ಈಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಣ ಇಲ್ಲ ಎಂದು ಬಿಟ್ಟು ಹೋದ ಪತ್ನಿ; ಈಗ ಮನೋಜ್​ ಬಾಜ್​​ಪಾಯಿ ಸ್ಟಾರ್ ಹೀರೋ – Kannada News | Manoj Bajpayee’s Love Story: From Struggles to Stardom and Shabana Raza’s Role in His Life

ಮನೋಜ್ ಬಾಜ್​​ಪಾಯಿ ಅವರು ಹಲವು ವರ್ಷ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದರು. ಅವರಿಗೆ ‘ಫ್ಯಾಮಿಲಿ ಮ್ಯಾನ್’ ಸರಣಿ ತುಂಬಾನೇ ಜನಪ್ರಿಯತೆ ತಂದುಕೊಟ್ಟಿತು. ‘ಫ್ಯಾಮಿಲಿ ಮ್ಯಾನ್ 3’ ರಿಲೀಸ್ ಆಗಿ ಗಮನ ಸೆಳೆದಿದೆ. ಇದರ ಮುಂದಿನ ಭಾಗಕ್ಕಾಗಿ ಎಲ್ಲರೂ ಕಾದಿದ್ದಾರೆ. ಅವರಿಗೆ ಇಂದು (ಏಪ್ರಿಲ್ 23) ಜನ್ಮದಿನ. ಈ ವೇಳೆ ಅವರ ಜೀವನದ ಬಗ್ಗೆ ನೋಡೋಣ.

ಮನೋಜ್ ತಮ್ಮ ವೃತ್ತಿ ಜೀವನದ ಆರಂಭದಲ್ಲೇ ಮದುವೆ ಆದರು. ಆದರೆ, ಈ ಮದುವೆ ಹೆಚ್ಚು ದಿನ ಉಳಿಯಲೇ ಇಲ್ಲ. ಏಕೆಂದರೆ ಮನೋಜ್ ಅವರು ಚಿತ್ರರಂಗದಲ್ಲಿ ಆಗ ಸಾಕಷ್ಟು ಒದ್ದಾಡುತ್ತಿದ್ದರು. ಈ ಒದ್ದಾಟದಿಂದ ಅವರಿಗೆ ಹಣ ಬರುತ್ತಾ ಇರಲಿಲ್ಲ. ಹೀಗಾಗಿ, ಮನೋಜ್ ಅವರನ್ನು ಬಿಟ್ಟು ಹೋಗುವ ನಿರ್ಧಾರ ಮಾಡಿದರು. ಅವರ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿ ಲಭ್ಯವಿಲ್ಲ.

ನಂತರ ಮನೋಜ್ ಅವರು ನಂತರ ಶಬಾನಾ ರಾಜಾ ಅವರನ್ನು ವಿವಾಹ ಆದರು. ಅವರು ತಮ್ಮ ಹೆಸರಿನ ಜೊತೆಗೆ ನೇಹಾ ಎಂದು ಸೇರಿಸಿಕೊಂಡಿದ್ದಾರೆ. ಶಬಾನಾ 1998ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ. ಅವರು ಬಾಬಿ ಡಿಯೋಲ್ ಎದುರು ನಟಿಸಿದರು. ವಿಧು ವಿನೋದ್ ಚೋಪ್ರಾ ಅವರು ಶಬಾನಾಗೆ ನೇಹಾ ಎಂಬ ಹೆಸರನ್ನು ನೀಡಿದರು ಅವರು ಅಜಯ್ ದೇವಗನ್ ಅವರೊಂದಿಗೆ “ಹೋಗಿ ಪ್ಯಾರ್ ಕಿ ಜೀತ್” ನಲ್ಲಿಯೂ ಕಾಣಿಸಿಕೊಂಡರು.

ಶಬಾನಾ ತಮ್ಮ ಮೊದಲ ಚಿತ್ರದ ನಂತರ ಮನೋಜ್ ಬಾಜಪೇಯಿ ಅವರನ್ನು ಭೇಟಿಯಾದರು. ಅವರು ‘ಸತ್ಯ’ ಚಿತ್ರದ ವೇಳೆ ಪರಸ್ಪರ ಭೇಟಿಯಾದರು. ಅವರು ಪರಸ್ಪರ ಪ್ರೀತಿಯಲ್ಲಿ ಸಿಲುಕಿದರು. ಎಂಟು ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ, ಅವರು ತಮ್ಮ ಸಂಬಂಧವನ್ನು ಮುಂದುವರಿಸಲು ನಿರ್ಧರಿಸಿದರು ಮತ್ತು 2006 ರಲ್ಲಿ ವಿವಾಹವಾದರು.

ಮನೋಜ್ ಬಾಜಪೇಯಿ ಮತ್ತು ಶಬಾನಾ ಬೇರೆ ಬೇರೆ ಧರ್ಮಗಳಿಗೆ ಸೇರಿದವರು, ಆದರೆ ಅವರ ಪ್ರೀತಿಗೆ ಯಾವುದೇ ಅಡ್ಡಿಯಾಗಲಿಲ್ಲ. ಅವರಿಗೆ ಈಗ ಅವಾ ನೈಲಾ ಬಾಜಪೇಯಿ ಎಂಬ ಮಗಳಿದ್ದಾಳೆ. ಶಬಾನಾ ಮದುವೆಯ ನಂತರ ಚಲನಚಿತ್ರಗಳಿಂದ ವಿರಾಮ ತೆಗೆದುಕೊಂಡು ಈಗ ಚಲನಚಿತ್ರ ನಿರ್ಮಾಪಕಿಯಾಗಿರುವುದು ಗಮನಿಸಬೇಕಾದ ಸಂಗತಿ.

ಇದನ್ನೂ ಓದಿ: ದುಬಾರಿ ವಸ್ತು ಖರೀದಿಸೋಕೆ ಇಷ್ಟಪಡಲ್ಲ ಮನೋಜ್ ಬಾಜ್​ಪಾಯಿ; ಹಣ ಸುರಿಯೋದೆಲ್ಲಿ?

ಶಬಾನಾ ಬಾಜ್‌ಪೇಯಿ 2018 ರ “ಮಿಸ್ಸಿಂಗ್” ಚಿತ್ರವನ್ನು ನಿರ್ಮಿಸಿದ್ದಾರೆ. ಅವರು ತಮ್ಮ ಪತಿಯ “ಭೈಯಾ ಜಿ” ಚಿತ್ರವನ್ನು ಸಹ ನಿರ್ಮಿಸಿದ್ದಾರೆ. ಅವರು ತಮ್ಮ ಪತಿ ಮನೋಜ್ ಬಾಜ್‌ಪೇಯಿ ಅವರೊಂದಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಆಗಾಗ್ಗೆ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಅವರು ಸುಂದರಿ ಮಾತ್ರವಲ್ಲ, ಗ್ಲಾಮರ್‌ನಲ್ಲಿಯೂ ಸಹ ಸರಿಸಾಟಿಯಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮದುವೆ ಮನೆಯಲ್ಲಿ ಅತಿಥಿಗಳ ಮೇಲೆ ಬೀದಿ ನಾಯಿ ದಾಳಿ, 60ಕ್ಕೂ ಹೆಚ್ಚು ಮಂದಿಗೆ ಗಾಯ – Kannada News | Street Dog Attack at Badaun Wedding Injures more than 60 Guests in UP Chaos

ಸಾಂದರ್ಭಿಕ ಚಿತ್ರ Image Credit source: Free Press Journal

ಲಕ್ನೋ, ಏಪ್ರಿಲ್ 23: ಮದುವೆ(Marriage) ಎಲ್ಲವೂ ಸುಸೂತ್ರವಾಗಿ ನೆರವೇರಿತ್ತು, ವಧುವನ್ನು ಬೀಳ್ಕೊಡುವ ಭಾವುಕ ಕ್ಷಣ ಅದು. ಆ ಸಮಯದಲ್ಲಿ ಬೀದಿ ನಾಯಿ ಮಂಟಪಕ್ಕೆ ನುಗ್ಗಿ ಅತಿಥಿಗಳ ಮೇಲೆ ದಾಳಿ ನಡೆಸಿರುವ ಘಟನೆ ಉತ್ತರ ಪ್ರದೇಶದ ಬುಡೌನ್​ನಲ್ಲಿ ನಡೆದಿದೆ. 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಸಭಾಂಗಣದಲ್ಲಿ ಕಾಲ್ತುಳಿತದಂತಹ ಸನ್ನಿವೇಶ
ಬಿಸೌಲಿ ಪೊಲೀಸ್ ಠಾಣೆ ವ್ಯಾಪ್ತಿಯ ಬಿಲ್ಸಿ ರಸ್ತೆಯಲ್ಲಿರುವ ಅಭಿನಂದನ್ ಬ್ಯಾಂಕ್ವೆಟ್ ಹಾಲ್‌ನಲ್ಲಿ ಸೋಮವಾರ ಈ ಘಟನೆ ಜರುಗಿದೆ. ನಾಯಿ ಆವರಣಕ್ಕೆ ನುಗ್ಗಿ ಸಿಕ್ಕಸಿಕ್ಕವರ ಮೇಲೆ ಮನಬಂದಂತೆ ದಾಳಿ ಮಾಡಲಾರಂಭಿಸಿತು. ಇದರಿಂದ ಭಯಭೀತರಾದ ಮಹಿಳೆಯರು ಮತ್ತು ಮಕ್ಕಳು ಸುರಕ್ಷತೆಗಾಗಿ ಓಡಲಾರಂಭಿಸಿದರು. ಈ ಅವಸರದಲ್ಲಿ ಕೆಲವರು ಬಿದ್ದು ಗಾಯಗೊಂಡರೆ, ಇನ್ನು ಕೆಲವರು ಕಾಲ್ತುಳಿತದಂತಹ ಪರಿಸ್ಥಿತಿಗೆ ಸಿಲುಕಿದರು.

ಸಭಾಂಗಣದ ಒಳಗೆ ತನ್ನ ಅಟ್ಟಹಾಸ ಮೆರೆದ ನಾಯಿ, ನಂತರ ರಸ್ತೆಗೆ ಜಿಗಿದು ದಾರಿಹೋಕರು ಮತ್ತು ಅಂಗಡಿಯವರ ಮೇಲೂ ದಾಳಿ ನಡೆಸಿತು. ಅಷ್ಟಕ್ಕೇ ನಿಲ್ಲದೆ ಸಮೀಪದ ಹಳ್ಳಿಗೆ ಓಡಿಹೋಗಿ ಅಲ್ಲಿನ ದನಕರುಗಳನ್ನೂ ಕಚ್ಚಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. 9 ವರ್ಷದ ಮಗುವಿನಿಂದ ಹಿಡಿದು 66 ವರ್ಷದ ವೃದ್ಧರವರೆಗೆ ಈ ದಾಳಿಗೆ ತುತ್ತಾಗಿದ್ದಾರೆ.

ಚಿಕಿತ್ಸೆಗಾಗಿ ಆಸ್ಪತ್ರೆಗೆ ಮುಗಿಬಿದ್ದ ಜನ
ಗಾಯಗೊಂಡವರನ್ನು ತಕ್ಷಣ ಬಿಸೌಲಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ (CHC) ಕರೆದೊಯ್ಯಲಾಯಿತು. ಸಿಎಚ್‌ಸಿ ವೈದ್ಯಾಧಿಕಾರಿ ಅರವಿಂದ್ ವರ್ಮಾ ಅವರ ಪ್ರಕಾರ, ಅಂದು ಸುಮಾರು 109 ಜನರು ರೇಬೀಸ್ ವಿರೋಧಿ ಚುಚ್ಚುಮದ್ದಿಗಾಗಿ ನೋಂದಾಯಿಸಿಕೊಂಡಿದ್ದು, ಅವರಲ್ಲಿ 60ಕ್ಕೂ ಹೆಚ್ಚು ಜನರು ಮದುವೆಗೆ ಬಂದ ಅತಿಥಿಗಳಾಗಿದ್ದಾರೆ, ಗಾಯಾಳುಗಳಿಗೆ ಚಿಕಿತ್ಸೆ ನೀಡಿ ಈಗ ಬಿಡುಗಡೆ ಮಾಡಲಾಗಿದೆ. ಈ ಘಟನೆಯು ಸ್ಥಳೀಯರಲ್ಲಿ ತೀವ್ರ ಕೋಪಕ್ಕೆ ಕಾರಣವಾಗಿದೆ.

ಮತ್ತಷ್ಟು ಓದಿ: 2ನೇ ಮದುವೆ ತಯಾರಿಯಲ್ಲಿದ್ದ ವೈದ್ಯನ ಭೀಕರ ಕೊಲೆ: ವಿವಾಹದ ಸಂಭ್ರಮದಲ್ಲಿದ್ದ ಮನೆಯಲ್ಲೀಗ ಸೂತಕ!

ಬೀದಿ ನಾಯಿಗಳ ನಿರ್ವಹಣೆಗೆ ಪುರಸಭೆ ಬಜೆಟ್‌ನಲ್ಲಿ ಹಣ ಖರ್ಚು ಮಾಡುತ್ತಿದ್ದರೂ, ಇಂತಹ ಅಪಾಯಕಾರಿ ನಾಯಿಗಳು ಮುಕ್ತವಾಗಿ ತಿರುಗಾಡುತ್ತಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿ ಎಂದು ಜನರು ಕಿಡಿಕಾರಿದ್ದಾರೆ.

ವಿಷಯ ತಿಳಿದ ತಕ್ಷಣ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅರುಣ್ ಕುಮಾರ್ ಅವರು ಪ್ರತಿಕ್ರಿಯಿಸಿದ್ದು, ಬಿಸೌಲಿ ಪುರಸಭೆಯ ಕಾರ್ಯನಿರ್ವಾಹಕ ಅಧಿಕಾರಿಗೆ ಕೂಡಲೇ ಸಮಸ್ಯೆಯನ್ನು ಪರಿಹರಿಸಲು ಮತ್ತು ದಾಳಿ ಮಾಡಿದ ನಾಯಿಯನ್ನು ಪತ್ತೆ ಹಚ್ಚಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಮದುವೆಯಂತಹ ಮಂಗಳಕರ ಸಮಾರಂಭಗಳು ಇಂತಹ ಅನಿರೀಕ್ಷಿತ ಘಟನೆಗಳಿಂದ ಕಹಿ ನೆನಪಾಗಿ ಉಳಿಯುವುದು ದುರದೃಷ್ಟಕರ. ನಗರ ಪ್ರದೇಶಗಳಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚುತ್ತಿರುವುದು ಮತ್ತು ಅವುಗಳಿಗೆ ಲಸಿಕೆ ಹಾಕದಿರುವುದು ಇಂತಹ ಘಟನೆಗಳಿಗೆ ಕಾರಣವಾಗುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ರಣ ಬಿಸಿಲಿಗೆ ಬಲಿಯಾದ ಕಾಡಾನೆ: 17 ಗಂಟೆಗಳ ಹೋರಾಟದ ಬಳಿಕವೂ ಚಿಕಿತ್ಸೆ ಫಲಿಸದೆ ಹೆಣ್ಣಾನೆ ಸಾವು! – Kannada News | Karnataka Heatwave: Chamarajanagar Elephant Dies After Getting Stuck in Mud Seeking Water

ಚಾಮರಾಜನಗರ, ಏ. 23: ರಾಜ್ಯದಲ್ಲಿ ಬಿಸಿಲಿನ ಪರಿಣಾಮ ಹೆಚ್ಚಾಗುತ್ತಿದೆ. ಈ ಬಿಸಿಯನ್ನು ಮನುಷ್ಯರಿಗೂ ತಡೆಯಲಾಗುತ್ತಿಲ್ಲ. ಇನ್ನು ಪಾಪ ಮೂಕ ಪ್ರಾಣಿಗಳಿಗೆ ತಡೆದುಕೊಳ್ಳಲು ಹೇಗೆ ಸಾಧ್ಯ. ಪ್ರಾಣಿಗಳಿಗೆ ಮನುಷ್ಯರಿಗಿಂತ ಬಾಯರಿಕೆ ಹೆಚ್ಚು. ಹಾಗಾಗಿ ದೊಡ್ಡ ನದಿ, ಕರೆಗಳನ್ನು ಅರಸಿಕೊಂಡು ಬರುತ್ತದೆ. ಅದರಲ್ಲೂ ದೈತ್ಯ ಗಾತ್ರದ ಪ್ರಾಣಿಯಾಗಿರುವ ಆನೆಗಳಿಗೆ ನೀರು ಹೆಚ್ಚುಬೇಕು. ಇದೀಗ ಇಲ್ಲೊಂದು ಆನೆ ನೀರು ಕಡಿಯಲು ಬಂದು ಪ್ರಾಣ ಕಳೆದುಕೊಂಡಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ನೀರು ಅರಸಿ ಬಂದು ಉಡುತೊರೆ ಹಳ್ಳದ ಕೆಸರಿನಲ್ಲಿ ಮೂರು ಕಾಡಾನೆಗಳು ಸಿಲುಕಿಕೊಂಡಿತ್ತು. ಇದರ ಪೈಕಿ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಒಂದು ಹೆಣ್ಣಾನೆ ಚಿಕಿತ್ಸೆ ಫಲಿಸದೆ ನಿನ್ನೆ ತಡರಾತ್ರಿ ಸಾವನ್ನಪ್ಪಿದೆ. ಕಳೆದ ಎರಡು ದಿನಗಳ ಹಿಂದೆ, ತೀವ್ರ ಬಿಸಿಲಿನಿಂದ ಬಸವಳಿದಿದ್ದ ಐದು ಆನೆಗಳ ಹಿಂಡು ನೀರು ಕುಡಿಯಲು ಮಲೆ ಮಹದೇಶ್ವರ ವನ್ಯಜೀವಿಧಾಮದ ವ್ಯಾಪ್ತಿಯ ಉಡುತೊರೆ ಹಳ್ಳದ ಹಿನ್ನೀರಿಗೆ ಬಂದಿದ್ದವು. ಈ ವೇಳೆ ಮೂರು ಆನೆಗಳು ಕೆಸರಿನಲ್ಲಿ ಹೂತು ಹೋಗಿದ್ದವು. ಇದನ್ನು ಗಮನಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಕೂಡಲೇ ಅದರ ರಕ್ಷಣೆಗೆ ಧಾವಿಸಿದ್ದಾರೆ. ಅರಣ್ಯ ಇಲಾಖೆ, ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ಜಂಟಿಯಾಗಿ ಸುಮಾರು 17 ಗಂಟೆಗಳ ಕಾಲ ಸಾಹಸಮಯ ಕಾರ್ಯಾಚರಣೆ ನಡೆಸಿದರು. ಈ ವೇಳೆ ಎರಡು ಆನೆಗಳು ಸುರಕ್ಷಿತವಾಗಿ ಕೆಸರಿನಿಂದ ಹೊರಬಂದು ಕಾಡಿನತ್ತ ಕಳುಹಿಸಲಾಗಿದೆ. ಆದರೆ, ಸುಮಾರು 25 ವರ್ಷ ಪ್ರಾಯದ ಹೆಣ್ಣಾನೆಯೊಂದು ತೀವ್ರ ಅಶಕ್ತತೆಯಿಂದಾಗಿ ಎದ್ದು ನಿಲ್ಲಲು ಸಾಧ್ಯವಾಗದೆ ಅಲ್ಲಿಯೇ ಉಳಿದುಕೊಂಡಿತ್ತು. ಅಸ್ವಸ್ಥಗೊಂಡಿದ್ದ ಆನೆಗೆ ನಾಗರಹೊಳೆ ಮತ್ತು ಮಲೆ ಮಹದೇಶ್ವರ ವನ್ಯಧಾಮದ ಪಶುವೈದ್ಯರು ಸ್ಥಳದಲ್ಲೇ ಗ್ಲೂಕೋಸ್ ಮತ್ತು ತುರ್ತು ಚಿಕಿತ್ಸೆ ನೀಡಿದ್ದರು. ಜೆಸಿಬಿ ಮತ್ತು ಕ್ರೇನ್‌ಗಳ ಸಹಾಯದಿಂದ ಆನೆಯನ್ನು ಎಬ್ಬಿಸುವ ಪ್ರಯತ್ನ ಮಾಡಿದರೂ ಅದು ಯಶಸ್ವಿಯಾಗಲಿಲ್ಲ. ನಿರ್ಜಲೀಕರಣ (Dehydration) ಮತ್ತು ಬಿಸಿಲಿನ ತಾಪದಿಂದ ತೀವ್ರವಾಗಿ ಬಳಲಿದ್ದ ಆನೆ, ನಿನ್ನೆ ತಡರಾತ್ರಿ ಕೊನೆಯುಸಿರೆಳೆದಿದೆ ಎಂದು ಅರಣ್ಯ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link