‘ಕೆಡಿ’ಸಿನಿಮಾ ಏಪ್ರಿಲ್ 30ರಂದು ವಿಶ್ವಾದ್ಯಂತ ತೆರೆಗೆ ಬರಲು ರೆಡಿ ಇದೆ. ಹೀಗಿರುವಾಗಲೇ ಚಿತ್ರದ ಟ್ರೇಲರ್ ಏಪ್ರಿಲ್ 22ರಂದು ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಕಾಳಿ ಪಾತ್ರದಲ್ಲಿ ಧ್ರುವ ಸರ್ಜ ಮಿಂಚಿದ್ದಾರೆ. ಮತ್ತೊಮ್ಮೆ ರಗಡ್ ಪಾತ್ರದ ಮೂಲಕ ಅವರು ಬಂದಿದ್ದಾರೆ. ಪ್ರೇಮ್ ಅವರು ರಾ ಆಗಿ ಸಿನಿಮಾ ಮಾಡಿದ್ದಾರೆ. ಈಗ ‘ಕೆಡಿ’ ಸಿನಿಮಾದ ಟ್ರೇಲರ್ ಅಲ್ಲಿ ಬರುವ ಡೈಲಾಗ್ ಗಮನ ಸೆಳೆದಿದೆ. ಪುನೀತ್ ಅವರ ಸಿನಿಮಾ ಒಂದರ ಡೈಲಾಗ್ ಕೂಡ ಸೇಮ್ ಟು ಸೇಮ್ ಇತ್ತು ಎಂಬುದನ್ನು ಫ್ಯಾನ್ಸ್ ನೆನಪಿಸಿಕೊಂಡಿದ್ದಾರೆ.
ಪ್ರೇಮ್ ಸಿನಿಮಾ ಎಂದರೆ ಅಲ್ಲಿ ಒಮ್ಮೆಯಾದರೂ ಮಚ್ಚು ಝಳಪಲೇಬೇಕು. ‘ಜೋಗಿ’ ಸಿನಿಮಾದಲ್ಲಿ ಶಿವರಾಜ್ಕುಮಾರ್ ಕೈಗೆ ಮಚ್ಚು ಕೊಟ್ಟು ಚಿತ್ರ ಹಿಟ್ ಆಗುವಂತೆ ಮಾಡಿದರು. ಆ ಬಳಿಕ ಅವರ ಹಲವು ಸಿನಿಮಾಗಳಲ್ಲಿ ಮಚ್ಚಿನ ಬಳಕೆ ಆಗಿದೆ. ಈಗ ‘ಕೆಡಿ’ ಸಿನಿಮಾದಲ್ಲಿ ಮಚ್ಚಿನ ಬಳಕೆ ಸಾಕಷ್ಟಾಗಿದೆ. ಟ್ರೇಲರ್ ನೋಡಿದರೆ ಇದು ಗೊತ್ತಾಗುತ್ತದೆ. ಟ್ರೇಲರ್ ಉದ್ದಕ್ಕೂ ರಕ್ತ ಹರಿಯುತ್ತದೆ.
ಟ್ರೇಲರ್ ಕ್ಲೈಮ್ಯಾಕ್ಸ್ ಅಲ್ಲಿ ಧ್ರುವ ಸರ್ಜ ಮಚ್ಚನ್ನು ಹಿಡಿದಿರುತ್ತಾರೆ. ಅವರ ಹೆಗಲೇಮೆಲ ಓರ್ವ ವ್ಯಕ್ತಿಯನ್ನು ಮಲಗಿಸಿಕೊಂಡಿರುತ್ತಾರೆ. ಸುತ್ತಲೂ ಇರೋ ವಿಲನ್ಗಳಿಗೆ ಧ್ರುವ ಡೈಲಾಗ್ ಒಂದನ್ನು ಹೇಳುತ್ತಾರೆ. ‘ಮೊದಲನೆಬಾರಿ ಮಚ್ಚು ಹಿಡಿದಿದ್ದೇನೆ.ಅಪ್ಪಿತಪ್ಪಿ ಕೈಕಾಲು ಉಳಿದುಕೊಂಡರೆ ನಿಮ್ಮ ಹೆತ್ತ ತಾಯಿಗೆ ತಪ್ಪಾಯ್ತು ಎಂದು ಹೇಳಿಬಿಡಿ ಅಣ್ಣ’ ಎಂದು ಧ್ರುವ ಸರ್ಜಾ ಉತ್ತರ ಕರ್ನಾಟಕ ಸ್ಟೈಲ್ನಲ್ಲಿ ಹೇಳುತ್ತಾರೆ. ಈ ಡೈಲಾಗ್ ಪುನೀತ್ ಸಿನಿಮಾದಲ್ಲೂ ಇತ್ತು.
ಇದನ್ನೂ ಓದಿ: ‘ಕೆಡಿ’ ಸಿನಿಮಾ ಟ್ರೇಲರ್ ಬಿಡುಗಡೆ; ಧ್ರುವ ಸರ್ಜಾ, ಸಂಜಯ್ ದತ್ ಆ್ಯಕ್ಷನ್ ಅಬ್ಬರ
ಪುನೀತ್ ರಾಜ್ಕುಮಾರ್ ನಟನೆಯ ‘ರಾಜ್ ದಿ ಶೋ ಮ್ಯಾನ್’ ಸಿನಿಮಾದಲ್ಲೂ ಇದೇ ರೀತಿಯ ಸಂಭಾಷಣೆ ಬರುತ್ತದೆ. ‘ಅಣ್ಣ ಲೈಫ್ ಅಲ್ಲಿ ಇದೇ ಮೊದಲ ಬಾರಿ ಮಚ್ಚು ಹಿಡಿದಿದ್ದೇನೆ. ಅಪ್ಪಿ ತಪ್ಪಿ ಉಲ್ಟಾ ಬಿದ್ರೆ ಬೇಜಾರ್ ಮಾಡ್ಕಬೇಡಿ ಅಣ್ಣ’ ಎಂದು ಹೇಳುತ್ತಾರೆ ಪುನೀತ್. ‘ರಾಜ್ ದಿ ಶೋ ಮ್ಯಾನ್’ ಚಿತ್ರವನ್ನು ನಿರ್ದೇಶನ ಮಾಡಿದ್ದು ಜೋಗಿ ಪ್ರೇಮ್. ಈ ಕಾರಣದಿಂದಲೇ ಅವರು ‘ಕೆಡಿ’ ಸಿನಿಮಾದಲ್ಲಿ ಪುನೀತ್ ಅವರನ್ನು ನೆನಪಿಸಿಕೊಳ್ಳಲು ಈ ಡೈಲಾಗ್ ಇಟ್ಟಿರಬಹುದು ಎನ್ನಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
