ಸೀನಿಯರ್ನನ್ನೇ ಕೊಂದ ಜೂನಿಯರ್: ಎಸ್ಎಸ್ಎಲ್ಸಿ ವಿದ್ಯಾರ್ಥಿ ಹತ್ಯೆಗೆ ಕಾರಣವೇನು? – Kannada News | Dharwad SP talks about 9th Class Student Murder 10th Standard student at Dharwad
ಧಾರವಾಡ, (ಜನವರಿ 15): ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ಅಪ್ರಾಪ್ತ ಬಾಲಕನನ್ನು ಕೊಲೆ ಮಾಡಲಾಗಿದೆ. ಧಾರವಾಡ (Dharwad) ಜಿಲ್ಲೆಯ ಕುಂದಗೋಳ ಪಟ್ಟಣದಲ್ಲಿ ನಿನ್ನೆ (ಜನವರಿ 14) ಸಂಜೆ ಈ ಘಟನೆ ನಡೆದಿದ್ದು, ಅಚ್ಚರಿ ಅಂದರೆ 9ನೇ ತರಗತಿ ವಿದ್ಯಾರ್ಥಿಯೇ ತನಗಿಂತ ಒಂದು ವರ್ಷ ಸಿನಿಯರ್ ಎಸ್ಎಸ್ಎಲ್ಸಿ ವಿದ್ಯಾರ್ಥಿಯನ್ನು ಕೊಲೆ ಮಾಡಿದ್ದಾನೆ. ನಿಂಗರಾಜ್ ಅವಾರಿ(16) ಕೊಲೆಯಾದ ಬಾಲಕ. ಇನ್ನು ಈ ಪ್ರಕರಣ ಸಂಬಂಧ ಧಾರವಾಡ ಎಸ್ಪಿ ಗುಂಜನ್ ಆರ್ಯ್ ಪ್ರತಿಕ್ರಿಯಿಸಿದ್ದು, ಕುಂದಗೋಳ ಪಟ್ಟಣದ ಸೊಸೈಟಿ ಜಾಗದಲ್ಲಿ ನಿನ್ನೆ ಸಂಜೆ…