ಕೃತಕ ಬಣ್ಣಗಳಿರುವ ಆಹಾರಕ್ಕಿಂತ ಈ ಫುಡ್ ಸೇವನೆ ಮಾಡುವುದು ಬೆಸ್ಟ್ ಅಂತಾರೆ ಡಾ. ಸಂಧ್ಯಾ ಸಿಂಗ್ – Kannada News | Experts Say Eat These Natural Foods Instead of Artificial Colors
ಕೃತಕ ಬಣ್ಣಗಳು (Artificial Colors) ನಮ್ಮ ದೈನಂದಿನ ಆಹಾರದ ಅವಿಭಾಜ್ಯ ಅಂಗವಾಗಿಬಿಟ್ಟಿವೆ. ಹೊಳೆಯುವ ಬಣ್ಣಗಳಿರುವ ಕ್ಯಾಂಡಿಗಳು, ವಿವಿಧ ಬಣ್ಣದ ಪಾನೀಯಗಳು ಮಾತ್ರವಲ್ಲದೆ, ರೆಸ್ಟೋರೆಂಟ್ ಗಳಲ್ಲಿ ನೀಡಲಾಗುವ ಸಾಮಾನ್ಯ ಆಹಾರದಲ್ಲೂ ಬಣ್ಣಗಳನ್ನು ಬಳಸಲಾಗುತ್ತಿದೆ. ಇವು ಆಹಾರವನ್ನು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ, ಆದರೆ ಯಾವುದೇ ಪೌಷ್ಟಿಕ ಮೌಲ್ಯವನ್ನು ನೀಡುವುದಿಲ್ಲ. ಇಂತಹ ಆಹಾರವನ್ನು ನಿರಂತರವಾಗಿ ಸೇವಿಸುವುದರಿಂದ ದೀರ್ಘಕಾಲದಲ್ಲಿ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಈ ಕುರಿತು, ಬೆಂಗಳೂರು ಅಪೋಲೋ ಆಸ್ಪತ್ರೆಯ ಎಚ್‌ಒಡಿ ಮತ್ತು ಮುಖ್ಯ ಕ್ಲಿನಿಕಲ್ ಡಯೆಟೀಶಿಯನ್ ಡಾ. ಸಂಧ್ಯಾ ಸಿಂಗ್ (Dr.Sandhya…