Video: ಫ್ರಾನ್ಸ್ಗಿಂತ ಭಾರತ ಉತ್ತಮ; ವಿದೇಶಿ ಮಹಿಳೆ ನೀಡಿದ ಕಾರಣ ನೋಡಿ – Kannada News | These are the reasons a French woman gave why India is better than France
ಭಾರತ ಅಂದ್ರೆ ವಿದೇಶಿಗರಿಗೆ (foreigner) ಅದೇನೋ ಸೆಳೆತ. ಹೀಗಾಗಿ ವಿದೇಶಿಗರು ಆಗಾಗ ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ. ಇಲ್ಲಿನ ಪ್ರವಾಸಿ ತಾಣಗಳ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳುತ್ತಾರೆ. ಇಲ್ಲಿನ ವಿವಿಧ ಖಾದ್ಯಗಳ ರುಚಿಯನ್ನು ಸವಿಯುತ್ತಾರೆ. ಇನ್ನು ಕೆಲ ವಿದೇಶಿಗರು ಒಂದು ಹೆಜ್ಜೆ ಮುಂದೆ ಹೋಗಿ ಇಲ್ಲಿಯೇ ನೆಲೆಸುತ್ತಾರೆ. ಇದೀಗ ಭಾರತದಲ್ಲಿ ಫ್ರೆಂಚ್ ಮೂಲದ ಮಹಿಳೆಯೂ (France woman) ಭಾರತದಲ್ಲಿ ವಾಸಿಸುತ್ತಿದ್ದು, ಭಾರತ ನನಗೆ ಇಷ್ಟವಾಗಿದ್ದು ಯಾಕೆ ಎನ್ನುವುದನ್ನು ವಿವರಿಸಿದ್ದಾರೆ. ಫ್ರಾನ್ಸ್ಗಿಂತ ಭಾರತ ಉತ್ತಮ ಎನ್ನಲು ಐದು ಕಾರಣಗಳನ್ನು ನೀಡಿದ್ದಾರೆ. ವಿದೇಶಿ ಮಹಿಳೆ…