All posts by nagaraj11081993

ರಜನೀಕಾಂತ್ ಮತ್ತು ಗಿಲ್ಲಿ: ಒಂದು ಬಿರಿಯಾನಿಯ ಕತೆ – Kannada News | The connection between Gilli Biriyani and Rajinikanth here is the story

ಬಿಗ್​​ಬಾಸ್ (Bigg Boss) ಫಿನಾಲೆ ಹತ್ತಿರದಲ್ಲಿದೆ. ಮನೆಯಲ್ಲಿ ಆರು ಮಂದಿ ಸ್ಪರ್ಧಿಗಳಿದ್ದು, ಗಿಲ್ಲಿ ಗೆಲ್ಲುವ ಫೇವರೇಟ್ ಎನಿಸಿಕೊಂಡಿದ್ದಾರೆ. ಹೊರಗೆ ಗಿಲ್ಲಿಗೆ ದೊಡ್ಡ ಅಭಿಮಾನಿ ವರ್ಗವೇ ಸೃಷ್ಟಿಯಾಗಿದೆ. ಗಿಲ್ಲಿ ಕುರಿತು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಮೀಮ್​​ಗಳು, ಹಾಡುಗಳು ಸಹ ಹರಿದಾಡುತ್ತಿವೆ. ಗಿಲ್ಲಿ ಹೆಸರಲ್ಲಿ ಆಟೋ ಸೇವೆಯನ್ನು ಉಚಿತವಾಗಿ ಕೊಡುವುದಾಗಿ ಕೆಲ ಆಟೋ ಡ್ರೈವರ್​ಗಳು ಘೋಷಣೆ ಮಾಡಿದ್ದಾರೆ. ಒಟ್ಟಾರೆ ಗಿಲ್ಲಿ ಕ್ರೇಜ್ ಜೋರಾಗಿದೆ. ಅಂದಹಾಗೆ ಗಿಲ್ಲಿ ಹೆಸರಲ್ಲಿ ಬಿರಿಯಾನಿ ಸಹ ಇದೆಯೆಂಬುದು ನಿಮಗೆ ಗೊತ್ತೆ? ಆದರೆ ಈ ‘ಗಿಲ್ಲಿ ಬಿರಿಯಾನಿ’ ಸಿಗುವುದು ಬೆಂಗಳೂರಲ್ಲಿ ಅಲ್ಲ ಬದಲಿಗೆ ಚೆನ್ನೈನಲ್ಲಿ. ಆದರೆ ಬಿಗ್​​ಬಾಸ್ ಗಿಲ್ಲಿಗೂ, ಚೆನ್ನೈನ ಗಿಲ್ಲಿ ಬಿರಿಯಾನಿಗೂ ಸಂಬಂಧವಿಲ್ಲ, ಆದರೆ ಆ ಬಿರಿಯಾನಿ ಜೊತೆಗೆ ಸೂಪರ್ ಸ್ಟಾರ್ ರಜನೀಕಾಂತ್​​ಗೆ ನೇರ ಸಂಬಂಧ ಇದೆ. ಏನಿದು ಗಿಲ್ಲಿ ಬಿರಿಯಾನಿ, ಆ ಬಿರಿಯಾನಿಗೆ ಗಿಲ್ಲಿ ಎಂದೇಕೆ ಹೆಸರು ಕೊಟ್ಟರು? ಮಾಹಿತಿ ಇಲ್ಲಿದೆ ಓದಿ…

ಗಿಲ್ಲಿ ಬಿರಿಯಾನಿ ಎಂಬುದು ಚೆನ್ನೈನಲ್ಲಿ ಮಾತ್ರವೇ ಸಿಗುವ ವಿಭಿನ್ನ ಬಗೆಯ ಬಿರಿಯಾನಿ. ಚೆನ್ನೈನ ತಾಜ್ ಕೋರಮಂಡಲ್​​ನಲ್ಲಿ ಈ ಗಿಲ್ಲಿ ಬಿರಿಯಾನಿ ಸರ್ವ್ ಮಾಡಲಾಗುತ್ತದೆ. ಇತರೆ ಬಿರಿಯಾನಿ ರೀತಿ ಈ ಬಿರಿಯಾನಿ ಉದುರುರಾಗಿ ಅಥವಾ ಡ್ರೈ ಆಗಿ ಇರುವುದಿಲ್ಲ ಬದಲಿಗೆ ಬಿಸಿ ಬೇಳೆ ಬಾತ್ ರೀತಿ ಇರುತ್ತದೆ ಆದರೆ ಬಿರಿಯಾನಿ ರೀತಿಯ ರುಚಿಯೇ ಇದರಲ್ಲಿ ಇರುತ್ತದೆ. ತಾಜ್ ಕೋರಮಂಡಲ್​​​ನಲ್ಲಿ ಈ ಬಿರಿಯಾನಿಯನ್ನು 1990ರ ದಶಕದಲ್ಲಿ ಮೊದಲ ಬಾರಿಗೆ ಅನ್ವೇಷಿಸಲಾಯ್ತು. ಈ ಅನ್ವೇಷಣೆಗೆ ಕಾರಣವಾಗಿದ್ದು ಸೂಪರ್ ಸ್ಟಾರ್ ರಜನೀಕಾಂತ್.

ತಾಜ್​​ನಲ್ಲಿ ಆಗ ಶೆಫ್ ಆಗಿದ್ದ ರಾಮ್ ಮೋಹನ್ ಎಂಬುವರು ರಜನೀಕಾಂತ್ ಅವರಿಗಾಗಿ ಈ ಗಿಲ್ಲಿ ಬಿರಿಯಾನಿಯನ್ನು ಮಾಡಿದ್ದರು. ಅವರೇ ಹೇಳಿಕೊಂಡಿರುವಂತೆ ರಜನೀಕಾಂತ್ ಅವರು ಆಗ ತಾಜ್ ಕೋರಮಂಡಲ್​​ಗೆ ಬಹಳ ಬರುತ್ತಿದ್ದರಂತೆ. ವಿಶೇಷವಾಗಿ ಅವರ ರಾತ್ರಿ ಊಟ ಅಲ್ಲೇ ಆಗುತ್ತಿತ್ತಂತೆ. ರಜನೀಕಾಂತ್ ಅಲ್ಲಿಗೆ ಹೋದಾಗೆಲ್ಲ ಸಾಮಾನ್ಯವಾಗಿ ಪೂರಿ ಮತ್ತು ಅದರ ಜೊತೆಗೆ ಚಿಕನ್ ಅಥವಾ ಮಟನ್ ಗ್ರೇವಿ ತಿನ್ನುತ್ತಿದ್ದರಂತೆ. ಆದರೆ ಒಂದು ದಿನ ರಾತ್ರಿ ಸುಮಾರು ಒಂದು ಗಂಟೆ ವೇಳೆಗೆ ಬಂದ ರಜನೀಕಾಂತ್, ‘ನನಗೆ ಬಿರಿಯಾನಿ ತಿನ್ನುವ ಮನಸ್ಸಾಗಿದೆ’ ಎಂದು ಶೆಫ್ ರಾಮ್ ಮೋಹನ್ ಬಳಿ ಹೇಳಿದ್ದಾರೆ. ಆದರೆ ಬಿರಿಯಾನಿ ಹೆವಿ ಆಗಿರುವುದು ಬೇಡ, ತಡರಾತ್ರಿ ತಿನ್ನುತ್ತಿರುವ ಕಾರಣ ಸುಲಭವಾಗಿ ಜೀರ್ಣವಾಗುವಂಥಹ ಬಿರಿಯಾನಿ ಮಾಡಿಕೊಂಡು ಬಾ’ ಎಂದರಂತೆ.

ಇದನ್ನೂ ಓದಿ:ಬಿಗ್​​ಬಾಸ್ ಮನೆಯಲ್ಲಿ ಗಿಲ್ಲಿಗೆ ಹೊಡೆಯಲು ಯತ್ನಿಸಿದ್ದ ಡಾಗ್ ಸತೀಶ್?

ಶೆಫ್ ರಾಮ್ ಮೋಹನ್​​ಗೆ ಇದು ಸವಾಲಾಗಿ ಪರಿಣಮಿಸಿದೆ. ಬಿರಿಯಾನಿ ಉದುರಾಗಿ ಇರುವುದರಿಂದ ಅದು ಸುಲಭವಾಗಿ ಜೀರ್ಣವಾಗುವುದಿಲ್ಲ ಎಂದು ಅರಿತಿದ್ದ ಶೆಫ್, ಬಿರಿಯಾನಿಗೆ ತೆಳುವಾದ, ಹೆಚ್ಚು ಖಾರವಿಲ್ಲದ ಮಟನ್ ಗ್ರೇವಿಯನ್ನು ಬೆರೆಸಿ ಅದನ್ನು ಸ್ಟೀಂ ಮಾಡಿದರಂತೆ. ಅದನ್ನು ರಜನೀಕಾಂತ್ ಅವರಿಗೆ ಸರ್ವ್ ಮಾಡಿದ್ದಾರೆ. ರಜನೀಕಾಂತ್​​ಗೆ ಅದು ಬಹಳ ಹಿಡಿಸಿದೆ. ಬಳಿಕ ರಜನೀಕಾಂತ್ ಅವರು ಬಂದಾಗೆಲ್ಲ ಅದೇ ಬಿರಿಯಾನಿ ಕೇಳುತ್ತಿದ್ದರಂತೆ. ಆ ಬಳಿಕ ಅವರ ಗೆಳೆಯರೂ ಕೆಲವರಿಗೆ ಅದು ಹಿಡಿಸಿ ಬಳಿಕ ಅದನ್ನು ತಾಜ್​ನವರು ಮೆನ್ಯುಗೆ ಸೇರಿಸಿದ್ದಾರೆ.

ಅಂದಹಾಗೆ ಆ ಬಿರಿಯಾನಿಗೆ ಗಿಲ್ಲಿ ಹೆಸರು ಬಂದಿದ್ದು ತುಸು ವಿಚಿತ್ರ. ಬಿರಿಯಾನಿಗೆ ಗ್ರೇವಿ ಬೆರೆಸುವ ಕಾರಣ ಅದನ್ನು ‘ಗೀಲಾ ಬಿರಿಯಾನಿ’ ಎಂದು ಕೆಲವರು ಕರೆದರಂತೆ. ಗೀಲಾ ಎಂದರೆ ಹಿಂದಿಯಲ್ಲಿ ಒದ್ದೆ ಎಂದರ್ಥ. ಆದರೆ ಬಳಿಕ ಗೀಲಾ ಎಂಬುದು ಗಿಲ್ಲಿ ಆಗಿ, ‘ಗಿಲ್ಲಿ ಬಿರಿಯಾನಿ’ ಆಗಿದೆ. 30 ವರ್ಷಗಳ ಈಗಲೂ ತಾಜ್ ಕೋರಮಂಡಲ್​​ನಲ್ಲಿ ಗಿಲ್ಲಿ ಬಿರಿಯಾನಿ ಸರ್ವ್ ಆಗುತ್ತದೆ. ಈಗ ಒಂದು ಪ್ಲೇಟ್ ಗಿಲ್ಲಿ ಬಿರಿಯಾನಿಯ ಬೆಲೆ 1300 ರೂಪಾಯಿಗಳು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Gold Rate Today Bangalore: ಚಿನ್ನದ ಬೆಲೆ ಇಳಿಕೆ; ಬೆಳ್ಳಿ ಹೊಸ ದಾಖಲೆ – Kannada News | Gold Price Today on 15th January 2026, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಜನವರಿ 15: ಚಿನ್ನದ ಬೆಲೆ ಗುರುವಾರ ತುಸು ಇಳಿಕೆಗೊಂಡಿದೆ. ಆದರೆ, ಬೆಳ್ಳಿ ಬೆಲೆಯ ನಾಗಾಲೋಟ ಮುಂದುವರಿದಿದೆ. ಇದರ ಬೆಲೆ ಇಂದು ಗ್ರಾಮ್​ಗೆ 3ರಿಂದ 5 ರೂವರೆಗೆ ಏರಿಕೆ ಆಗಿದೆ. ಬೆಂಗಳೂರಿನಲ್ಲಿ 100 ಗ್ರಾಮ್ ಬೆಳ್ಳಿ ಬೆಲೆ 29,500 ರೂ ಮುಟ್ಟಿದೆ. ಕೆಲ ನಗರಗಳಲ್ಲಿ ಇದರ ಬೆಲೆ 31,000 ರೂಗೆ ಏರಿ ಹೋಗಿದೆ. ಚಿನ್ನದ ಬೆಲೆ (Gold Rates) ಭಾರತದಲ್ಲಿ ಗ್ರಾಮ್​ಗೆ ಸುಮಾರು 40 ರೂನಷ್ಟು ಕಡಿಮೆ ಆಗಿದೆ. ವಿದೇಶಗಳಲ್ಲಿ ಮಿಶ್ರ ಫಲ ನೀಡಿದ್ದ ಏರಿಳಿತಗಳು ದಾಖಲಾಗಿವೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,31,250 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,43,180 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 29,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,31,250 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 29,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 31,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜನವರಿ 15ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,318 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,125 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,739 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 295 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,318 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,125 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 295 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,125 ರೂ
  • ಚೆನ್ನೈ: 13,290 ರೂ
  • ಮುಂಬೈ: 13,125 ರೂ
  • ದೆಹಲಿ: 13,140 ರೂ
  • ಕೋಲ್ಕತಾ: 13,125 ರೂ
  • ಕೇರಳ: 13,125 ರೂ
  • ಅಹ್ಮದಾಬಾದ್: 13,130 ರೂ
  • ಜೈಪುರ್: 13,140 ರೂ
  • ಲಕ್ನೋ: 13,140 ರೂ
  • ಭುವನೇಶ್ವರ್: 13,125 ರೂ

ಇದನ್ನೂ ಓದಿ: ರಫ್ತು ಸಜ್ಜಿತ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ ನಂ. 1; ಕರ್ನಾಟಕದ ಸ್ಥಾನವೆಷ್ಟು?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 583 ರಿಂಗಿಟ್ (13,001 ರುಪಾಯಿ)
  • ದುಬೈ: 517 ಡಿರಾಮ್ (12,710 ರುಪಾಯಿ)
  • ಅಮೆರಿಕ: 143.50 ಡಾಲರ್ (12,958 ರುಪಾಯಿ)
  • ಸಿಂಗಾಪುರ: 184.90 ಸಿಂಗಾಪುರ್ ಡಾಲರ್ (12,960 ರುಪಾಯಿ)
  • ಕತಾರ್: 512 ಕತಾರಿ ರಿಯಾಲ್ (12,683 ರೂ)
  • ಸೌದಿ ಅರೇಬಿಯಾ: 522 ಸೌದಿ ರಿಯಾಲ್ (12,568 ರುಪಾಯಿ)
  • ಓಮನ್: 54.85 ಒಮಾನಿ ರಿಯಾಲ್ (12,873 ರುಪಾಯಿ)
  • ಕುವೇತ್: 41.91 ಕುವೇತಿ ದಿನಾರ್ (12,375 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 295 ರೂ
  • ಚೆನ್ನೈ: 310 ರೂ
  • ಮುಂಬೈ: 295 ರೂ
  • ದೆಹಲಿ: 295 ರೂ
  • ಕೋಲ್ಕತಾ: 295 ರೂ
  • ಕೇರಳ: 310 ರೂ
  • ಅಹ್ಮದಾಬಾದ್: 295 ರೂ
  • ಜೈಪುರ್: 295 ರೂ
  • ಲಕ್ನೋ: 295 ರೂ
  • ಭುವನೇಶ್ವರ್: 310 ರೂ
  • ಪುಣೆ: 295

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Indian Army Day 2026: ಭಾರತೀಯ ಸೇನೆಯ ಅದಮ್ಯ ಧೈರ್ಯ, ನಿಸ್ವಾರ್ಥ ಸೇವೆಯನ್ನು ಸ್ಮರಿಸುವ ದಿನವಿದು – Kannada News | Indian Army Day 2026: Why is Indian Army Day celebrated? Here is the information

ನಾವು ದೇಶದೊಳಗೆ ಸುರಕ್ಷಿತವಾಗಿ, ಭಯಮುಕ್ತವಾಗಿ ವಾಸಿಸುತ್ತಿದ್ದೇವೆ ಎಂದರೆ ಅದಕ್ಕೆ ಮುಖ್ಯ ಕಾರಣ ವೀರ ಯೋಧರು (Soldiers). ಎಂತಹ ಅಪಾಯ ಎದುರಾದರೂ ಸಹ, ಅತ್ಯಂತ ಕಠಿಣ ಸಂದರ್ಭಗಳಲ್ಲಿಯೂ ಹೆಮ್ಮೆಯ ಸೈನಿಕರು ತಮ್ಮ ಕರ್ತವ್ಯದಿಂದ ಹಿಂದೆ ಸರಿಯುವುದಿಲ್ಲ. ಒಟ್ಟಾರೆಯಾಗಿ ಯೋಧರು ಮತ್ತು ಭಾರತೀಯ ಸೇನೆಯನ್ನು ದೇಶದ ಭದ್ರತೆಯ ಬೆನ್ನೆಲುಬು ಅಂತಾನೇ ಹೇಳಬಹುದು. ಭಾರತೀಯ ಸೇನೆಯ ಈ ಅದಮ್ಯ ಧೈರ್ಯ, ತ್ಯಾಗ ಮತ್ತು ನಿಸ್ವಾರ್ಥ ಸೇವೆಯನ್ನು ಗೌರವಿಸಲು ಹಾಗೂ ಹುತಾತ್ಮ ಯೋಧರನ್ನು ಸ್ಮರಿಸಲು ಪ್ರತಿವರ್ಷ ಜನವರಿ 15 ರಂದು ಭಾರತೀಯ ಸೇನಾ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿಯೋಣ ಬನ್ನಿ.

ಭಾರತೀಯ ಸೇನಾ ದಿನದ ಇತಿಹಾಸವೇನು?

ಬ್ರಿಟೀಷ್ ಆಳ್ವಿಕೆಯ ಕಾಲದಲ್ಲಿ 1895 ಏಪ್ರಿಲ್ 01 ರಂದು ಭಾರತೀಯ ಸೇನೆಯನ್ನು ಸ್ಥಾಪಿಸಲಾಯಿತು. ಆ ಸಮಯದಲ್ಲಿ ಈ ಸೇನೆಯನ್ನು ಬ್ರಿಟೀಷ್ ಭಾರತೀಯ ಸೇನೆ ಎಂದು ಕರೆಯಲಾಗುತ್ತಿತ್ತು. ಆ ಸಮಯದಲ್ಲಿ ಸೇನಾ ಕಮಾಂಡರ್ಗಳು ಬ್ರಿಟೀಷರೇ ಆಗಿದ್ದರು. ಬಳಿಕ ಭಾರತ ಸ್ವಾತಂತ್ರ್ಯ ಪಡೆದ ಎರಡು ವರ್ಷಗಳ ನಂತರ ಜನವರಿ 15, 1949 ರಲ್ಲಿ ಬ್ರಿಟೀಷ್ ಕಮಾಂಡರ್ ಇನ್ ಚೀಫ್, ಜನರಲ್ ಫ್ರಾನ್ಸಿಸ್ ಬುಚರ್ ಅವರು ಕೆ.ಎಂ ಕಾರ್ಯಪ್ಪ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಈ ಮೂಲಕ ಲೆಫ್ಟಿನೆಂಟ್ ಜನರಲ್ ಕೆ.ಎಂ ಕಾರ್ಯಪ್ಪ ಸ್ವತಂತ್ರ ಭಾರತದ ಮೊದಲ ಕಮಾಂಡರ್ ಇನ್ ಚೀಫ್ ಆಗಿ ಅಧಿಕಾರ ವಹಿಸಿಕೊಂಡರು. ಈ ವಿಶೇಷ ದಿನದ ನೆನಪಿಗಾಗಿ ಹಾಗೂ ಭಾರತೀಯ ಸೇನೆಯ ಸೈನಿಕರ ಗೌರವಾರ್ಥವಾಗಿ ಪ್ರತಿವರ್ಷ ಜನವರಿ 15 ರಂದು ಭಾರತೀಯ ಸೇನಾ ದಿನವನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ: ಸ್ವಾಮಿ ವಿವೇಕಾನಂದರ ಜನ್ಮ ಜಯಂತಿಯಂದೇ ಯುವ ದಿನವನ್ನು ಆಚರಿಸುವುದೇಕೆ ಗೊತ್ತಾ?

ಭಾರತೀಯ ಸೇನಾ ದಿನದ ಮಹತ್ವವೇನು?

  • ಸ್ವತಂತ್ರ ಭಾರತದ ಘನತೆ ಗೌರವ ಹಾಗೂ ಸರಕ್ಷತೆಗಾಗಿ ತಮ್ಮನ್ನು ತಾವು ದೇಶ ಸೇವೆಗಾಗಿ ಸಮರ್ಪಿಸಿಕೊಂಡಿರುವ ಭಾರತೀಯ ಯೋಧರನ್ನು ಗೌರವಿಸುವ ಜೊತೆಯಲ್ಲಿ ದೇಶಕ್ಕಾಗಿ ಹುತಾತ್ಮರಾದ ಯೋಧರನ್ನು ಸ್ಮರಿಸಲು ಉದ್ದೇಶದಿಂದ ಪ್ರತಿವರ್ಷ ಜನವರಿ 15 ರಂದು ಕಮಾಂಡ್ ಹೆಡ್ಕ್ವಾರ್ಟರ್ಗಳು ಮತ್ತು ನವ ದೆಹಲಿಯ ಪ್ರಧಾನ ಸೇನಾ ಕಛೇರಿಯಲ್ಲಿ ಭಾರತೀಯ ಸೇನಾ ದಿನಾಚರಣೆಯನ್ನು ಆಚರಿಸಲಾಗುತ್ತದೆ.
  • ಭಾರತೀಯ ಸೇನಾ ದಿನವು ಕೇವಲ ಆಚರಣೆಯಲ್ಲ, ದೇಶಭಕ್ತಿ ಮತ್ತು ರಾಷ್ಟ್ರೀಯ ಏಕತೆಯ ಸಂಕೇತವೂ ಆಗಿದೆ. ಈ ದಿನದಂದು ಸೇನೆಯ ಶಕ್ತಿ, ಕಾರ್ಯತಂತ್ರ ಮತ್ತು ಶಿಸ್ತನ್ನು ಪ್ರದರ್ಶಿಸಲಾಗುತ್ತದೆ.
  • ಈ ದಿನ ಸೇನಾ ಕಛೇರಿಗಳಲ್ಲಿ ಪರೇಡ್, ಫ್ಲೈ ಪಾಸ್ಟ್, ಸೇರಿದಂತೆ ವಿವಿಧ ಸಾಹಿಸಿ ಚಟುವಟಿಕೆಗಳ ಪ್ರದರ್ಶನವನ್ನು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಮುಖ್ಯವಾಗಿ ಈ ದಿನ ಕೆಚ್ಚೆದೆಯ ಸೈನಿಕರಿಗೆ ಪ್ರಶಸ್ತಿ ಪ್ರದಾನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
  • ಈ ದಿನ ದೇಶ ಕಾಯುವ ಸೈನಿಕರಿಗೆ ಗೌರವ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸಲು ನಮಗೆ ಒಂದು ಅವಕಾಶವಾಗಿದ್ದು, ಇದು ನಮ್ಮ ದೇಶಭಕ್ತಿ, ಏಕತೆ ಮತ್ತು ಜವಾಬ್ದಾರಿಯ ಪ್ರಜ್ಞೆಯನ್ನು ಬಲಪಡಿಸಲು ನಮಗೆ ಸ್ಫೂರ್ತಿ ನೀಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:14 am, Thu, 15 January 26

Source link

ಗೋಶಾಲೆಗಾಗಿ ಲಕ್ಷಾಂತರ ಹಣ ದೇಣಿಗೆ ನೀಡಿದ ನಟ – Kannada News | Sonu Sood donates 22 lakh rs to cow shelter in Gujarat

ಸೋನು ಸೂದ್ (Sonu Sood), ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿರುವುದು ವಿಲನ್ ಪಾತ್ರದಲ್ಲಿ ಆದರೆ ನಿಜ ಜೀವನದಲ್ಲಿ ಅಪ್ಪಟ ಹೀರೋ. ಸೋನು ಸೂದ್ ಅವರು ಕೋವಿಡ್ ಸಮಯದಲ್ಲಿ ಮಾಡಿದ ಸೇವೆ ಲಕ್ಷಾಂತರ ಜನರಿಗೆ ಸಹಾಯ ಆಗಿತ್ತು. ಆಗ ಅವರನ್ನು ‘ಮಸೀಹ’ (ದೇವರು) ಎಂದು ಕರೆದಿದ್ದರು ದೇಶದ ಜನ. ಕೋವಿಡ್ ಬಳಿಕವೂ ಸೋನು ಸೂದ್ ತಮ್ಮ ಸಮಾಜ ಸೇವೆಯನ್ನು ಮುಂದುವರೆಸಿದ್ದು, ನಾನಾ ರೀತಿಯ ಜನರಿಗೆ ಸಹಾಯ ಮಾಡುತ್ತಲೇ ಬಂದಿದ್ದಾರೆ. ಇದೀಗ ಸೋನು ಸೂದ್ ಅವರು ಗೋಸೇವೆಗೂ ಇಳಿದಿದ್ದು, ಗೋಶಾಲೆಗೆ ಲಕ್ಷಾಂತರ ರೂಪಾಯಿ ದೇಣಿಗೆ ನೀಡಿದ್ದಾರೆ.

ಸೋನು ಸೂದ್ ಅವರು ಗುಜರಾತ್​​ನ ಗೋಶಾಲೆಯೊಂದಕ್ಕೆ ಬರೋಬ್ಬರಿ 22 ಲಕ್ಷ ರೂಪಾಯಿ ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ. ಗುಜರಾತಿನ ವಾರಾಹಿಯ ಗೋಶಾಲೆಯೊಂದಕ್ಕೆ ಭೇಟಿ ನೀಡಿದ್ದ ನಟ ಸೋನು ಸೂದ್, 7000 ಗೋವುಗಳಿರುವ ಆ ಗೋಶಾಲೆಗೆ ಬರೋಬ್ಬರಿ 22 ಲಕ್ಷ ರೂಪಾಯಿ ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ. ಈ ಗೋಶಾಲೆಯು ಗೋವುಗಳಿಗೆ ಆಶ್ರಯ, ಶುಶ್ರೂಶೆ ನೀಡುವ ಜೊತೆಗೆ ಆರೈಕೆ ಸಹ ಮಾಡುತ್ತದೆ. ವಿಶೇಷವಾಗಿ ಅನಾಥ ಗೋವುಗಳು, ಗಾಯಗೊಂಡ ಗೋವುಗಳು, ಅಂಗವಿಕಲ ಗೋವುಗಳು, ಮುದಿ ಗೋವುಗಳನ್ನು ಹುಡುಕಿ ಅವುಗಳ ರಕ್ಷಣೆ ಮಾಡುವ ಕಾರ್ಯವನ್ನು ಈ ಗೋಶಾಲೆ ಮಾಡುತ್ತಿದೆ.

ನನಗೆ ಇಲ್ಲಿ ಸಿಕ್ಕ ಪ್ರೀತಿ ನನಗೆ ತುಂಬಾ ಸಂತೋಷ ಮತ್ತು ಹೆಮ್ಮೆ ತಂದಿತು. ನಾನು ಇಲ್ಲಿಗೆ ಬರುತ್ತಲೇ ಇರುತ್ತೇನೆ. ಇಲ್ಲಿ ಗೋರಕ್ಷಣೆಯನ್ನು ಅದ್ಭುತ ರೀತಿಯಲ್ಲಿ ಮಾಡುವ ವಿಧಾನವನ್ನು ಭಾರತದಾದ್ಯಂತ ಜಾರಿಗೆ ತರಬೇಕು. ಗೋವುಗಳು ನಮ್ಮಿಂದ ಏನನ್ನೂ ಕೇಳುವುದಿಲ್ಲ, ಕೇವಲ ಕಾಳಜಿಯನ್ನು ಮಾತ್ರ ಕೇಳುತ್ತವೆ. ನಮ್ಮ ಹಸುಗಳು ಮತ್ತು ಗೋ ಆಶ್ರಯತಾಣಗಳ ಜೊತೆಗೆ ನಿಲ್ಲೋಣ ಎಂದಿದ್ದಾರೆ ನಟ ಸೋನು ಸೂದ್.

ಇದನ್ನೂ ಓದಿ:ಸೋನು ಸೂದ್ ಜನ್ಮದಿನ; ನಟನೆ ಕಡಿಮೆ ಮಾಡಿದರೂ ತಗ್ಗಿಲ್ಲ ನಟನ ಆಸ್ತಿ

ಸೋನು ಸೂದ್ ಅವರು ಹಲವು ವರ್ಷಗಳಿಂದಲೂ ಈ ರೀತಿಯ ಸಾಮಾಜಿಕ ಸೇವೆಗಳನ್ನು ಮಾಡುತ್ತಲೇ ಬರುತ್ತಿದ್ದಾರೆ. ಕೋವಿಡ್ ಸಮಯದಲ್ಲಿ ಅವರು ಮಾಡಿದ ಸೇವೆಯನ್ನು ರಾಜ್ಯಪಾಲರೇ ಗುರುತಿಸಿ ಬೆನ್ನುತಟ್ಟಿದ್ದರು. ಕೋವಿಡ್ ಲಾಕ್​​ಡೌನ್​​ ಇಂದಾಗಿ ಬೇರೆ ಬೇರೆ ರಾಜ್ಯಗಳಲ್ಲಿ ಸಿಕ್ಕಿಹಾಕಿಕೊಂಡಿದ್ದ ಜನರನ್ನು ತಮ್ಮ ಮನೆಗಳಿಗೆ ತಲುಪಲು ಸೋನು ಸೂದ್ ಸಹಾಯ ಮಾಡಿದ್ದರು. ಮಾತ್ರವಲ್ಲದೆ ಆಕ್ಸಿಜನ್ ಸಪ್ಲೈ, ತ್ವರಿತ ಆಸ್ಪತ್ರೆ ನಿರ್ಮಾಣಕ್ಕೆ ದೇಣಿಗೆ, ಕಾರ್ಮಿಕರುಗಳಿಗೆ ಊಟದ ವ್ಯವಸ್ಥೆ ಇನ್ನೂ ಅನೇಕ ರೀತಿಯ ಸಹಾಯವನ್ನು ಸೋನು ಸೂದ್ ಆಗ ಮಾಡಿದ್ದರು.

ಕೋವಿಡ್ ಬಳಿಕವೂ ತಮ್ಮ ಸೇವೆ ಮುಂದುವರೆಸಿದ ಸೋನು ಸೂದ್, ಬಡವರ ಮಕ್ಕಳ ಶಿಕ್ಷಣಕ್ಕೆ, ಮದುವೆಗೆ, ಆರೋಗ್ಯಕ್ಕೆ ಹೀಗೆ ಹಲವಾರು ರೀತಿಯಲ್ಲಿ ಸೇವೆಯನ್ನು ಮುಂದುವರೆಸುತ್ತಲೇ ಇದ್ದಾರೆ. ಸೋನು ಸೂದ್ ಅವರೇ ಒಮ್ಮೆ ಹೇಳಿದ್ದಂತೆ ಪ್ರತಿ ದಿನವೂ ಅವರಿಗೆ ಸಾವಿರಾರು ಕೋರಿಕೆ ಪತ್ರಗಳು, ಸಂದೇಶಗಳು ಬರುತ್ತವೆಯಂತೆ. ಇದೀಗ ಸೋನು ಸೂದ್ ಅವರು ಬಾಲಿವುಡ್ ಸೇರಿದಂತೆ ದಕ್ಷಿಣದ ಕೆಲ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Video: ಗೋ ಸೇವೆ ಮಾಡುವ ಮೂಲಕ ಸಂಕ್ರಾಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದ ಪ್ರಧಾನಿ ಮೋದಿ – Kannada News | PM Modi Celebrates Makar Sankranti by Feeding Cattle, Shares Videos

ನವದೆಹಲಿ, ಜನವರಿ 15: ಪ್ರಧಾನಿ ನರೇಂದ್ರ ಮೋದಿ ಗೋ ಸೇವೆ ಮಾಡುವ ಮೂಲಕ ಸಂಕ್ರಾಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ತಮ್ಮ ನಿವಾಸದಲ್ಲಿ ಗೋವುಗಳಿಗೆ ಮೇವು ನೀಡಿ ಅವುಗಳ ಜತೆ ಸ್ವಲ್ಪ ಸಮಯ ಕಳೆದಿದ್ದಾರೆ. ಪ್ರಧಾನಿ ಮೋದಿ ಭಾರತೀಯ ಸಂಪ್ರದಾಯ ಮತ್ತು ಸಾಂಸ್ಕೃತಿಕ ಮೌಲ್ಯಗಳ ಮೇಲಿನ ಗೌರವವನ್ನು ಪ್ರತಿಬಿಂಬಿಸುವ ಒಂದು ಸೂಚಕವಾಗಿ ಗೋಸೇವೆಯನ್ನು ಮಾಡಿದ್ದಾರೆ. ಇದಕ್ಕೂ ಮೊದಲು ಅವರು ಜನವರಿ 14 ರಂದು ಕೇಂದ್ರ ಸಚಿವ ಎಲ್ ಮುರುಗನ್ ನಿವಾಸದಲ್ಲಿ ಪೊಂಗಲ್ ಹಬ್ಬದ ಸಂದರ್ಭದಲ್ಲಿ ಗೋ ಸೇವೆ ಮಾಡಿದ್ದರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Makar Sankranti 2026: ಮಕರ ಸಂಕ್ರಾಂತಿ ಆಚರಣೆಯ ಮಹತ್ವವನ್ನು ಇಲ್ಲಿ ತಿಳಿಯಿರಿ – Kannada News | Makar Sankranti 2026: Clarifying the Date and Auspicious Celebrations

ಮಕರ ಸಂಕ್ರಾಂತಿಯಂದು ಎಳ್ಳು-ಬೆಲ್ಲವನ್ನು ಹಂಚುವುದು, ತಿನ್ನುವುದು ಮತ್ತು ಮಕ್ಕಳಿಗೆ ಆರತಿ ಮಾಡುವುದು ಪ್ರಮುಖ ಪದ್ಧತಿಗಳು. ಮನೆಯ ಮುಂದೆ ವಿಧವಿಧವಾದ ರಂಗೋಲಿಗಳನ್ನು ಹಾಕಿ ಮನೆಯನ್ನು ಶುಚಿಗೊಳಿಸಲಾಗುತ್ತದೆ. ಸಂಕ್ರಾಂತಿಯ ಹಿಂದಿನ ದಿನ, ಅಂದರೆ ಜನವರಿ 14 ರಂದು ಭೋಗಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನ ಬಳಕೆಗೆ ಬಾರದ ವಸ್ತುಗಳನ್ನು ಸುಟ್ಟುಹಾಕಲಾಗುತ್ತದೆ. ಹಳ್ಳಿಗಳಲ್ಲಿ ಕಿಚ್ಚು ಹಾಯಿಸುವುದು ಪದ್ಧತಿಯಿದ್ದು, ಹಸುಗಳನ್ನು ಬೆಂಕಿಯ ಮೇಲೆ ಹಾಯಿಸುತ್ತಾರೆ. ಈ ಆಚರಣೆಗಳಿಗೆ ವೈಜ್ಞಾನಿಕ ಮತ್ತು ಧಾರ್ಮಿಕ ಕಾರಣಗಳಿವೆ. ಮಕ್ಕಳ ತಲೆಯ ಮೇಲೆ ಎಳ್ಳು-ಬೆಲ್ಲ, ಹಣ, ಎಳಚಿಕಾಯಿಗಳು ಮತ್ತು ಹಣ್ಣುಗಳನ್ನು ಹಾಕಿ ಆಶೀರ್ವದಿಸುವ ಪದ್ಧತಿಯೂ ಇದೆ. ಈ ಹಬ್ಬವನ್ನು ಆಂಧ್ರ, ತಮಿಳುನಾಡು, ಕೇರಳ, ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತದೆ.

ಜನವರಿ 15 ರಂದು ಆಚರಣೆಗೆ ಕಾರಣ:

ಜನವರಿ 14, 2026 ರ ಬುಧವಾರ ಮಧ್ಯಾಹ್ನ 3 ಗಂಟೆ 30 ನಿಮಿಷಕ್ಕೆ ಉತ್ತರಾಷಾಢ ನಕ್ಷತ್ರದ ಎರಡನೇ ಪಾದದಲ್ಲಿ ಸೂರ್ಯ ಭಗವಾನರು ಮಕರ ರಾಶಿಗೆ ಸಂಚಾರ ಪ್ರಾರಂಭಿಸುತ್ತಾರೆ. ಸೂರ್ಯೋದಯದ ಸಮಯದಲ್ಲಿ ಈ ಪ್ರಕ್ರಿಯೆ ನಡೆಯದ ಕಾರಣ, ಮಾರನೇ ದಿನ, ಅಂದರೆ ಜನವರಿ 15 ರಂದು ಸಂಕ್ರಾಂತಿ ಆಚರಣೆ ಬಹಳ ಸೂಕ್ತವಾಗಿದೆ.

ಸೂರ್ಯ ಸಿದ್ಧಾಂತದ ಪ್ರಕಾರ, ಸೂರ್ಯ ಭಗವಾನರು ಧನುರ್ ರಾಶಿಯಿಂದ ಮಕರ ರಾಶಿಗೆ ಪ್ರಯಾಣ ಬೆಳೆಸುತ್ತಾರೆ. ಮಕರದಿಂದ ಕರ್ಕಾಟಕದವರೆಗಿನ ಅವಧಿಯನ್ನು ಉತ್ತರಾಯಣ ಪುಣ್ಯಕಾಲ ಎಂದು ಕರೆಯಲಾಗುತ್ತದೆ. 2026 ರ ಜನವರಿ 15, ಗುರುವಾರದಂದು ವಿಶ್ವಾ ವಸುನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ, ದ್ವಾದಶಿ, ಜೇಷ್ಠಾ ನಕ್ಷತ್ರ, ವೃದ್ಧಿ ಯೋಗ, ತೈತಿಲ ಕರಣ ಇರುತ್ತದೆ. ಈ ದಿನದಂದು ಆಚರಣೆ ಮಾಡುವುದು ಸೂಕ್ತ ಎಂದು ಪಂಚಾಂಗಗಳು ಹೇಳುತ್ತವೆ.

ಇದನ್ನೂ ಓದಿ: ಮೃತ ವ್ಯಕ್ತಿ ನಿಮ್ಮ ಶತ್ರುವೇ ಆಗಿದ್ದರೂ ಅವರ ಬಗ್ಗೆ ಯಾಕೆ ಕೆಟ್ಟದಾಗಿ ಮಾತನಾಡಬಾರದು?

ಈ ಬಾರಿಯ ಸಂಕ್ರಾಂತಿಯ ವಿಶೇಷ:

ಈ ಬಾರಿ ಸಂಕ್ರಾಂತಿಯ ಕುಮಾರಿ ಹೆಸರು ಮಂದಾಕಿನಿ. ಆಕೆ ಚಂದನ ಲೇಪಿತಳಾಗಿ, ಹಸಿರು ವಸ್ತ್ರ ಧರಿಸಿ, ಬೆಳ್ಳಿಯ ಆಭರಣ, ಮುತ್ತುಗಳಿಂದ ಅಲಂಕೃತಳಾಗಿ, ಬಕುಲ ಪುಷ್ಪ ಹಿಡಿದು, ತಾಮ್ರದ ಪಾತ್ರೆಯಲ್ಲಿ ಭಿಕ್ಷೆ ಬೇಡುತ್ತಾ, ಖಡ್ಗ ಹಿಡಿದು, ಹಂದಿಯ ವಾಹನದ ಮೇಲೆ (ಉಪವಾಹನ ಎತ್ತು) ಪ್ರಯಾಣಿಸುತ್ತಾಳೆ. ಹಂದಿ ಮತ್ತು ಎತ್ತು ಸಾತ್ವಿಕತೆಯನ್ನು ಸೂಚಿಸುತ್ತವೆ. ನೈರುತ್ಯ ದಿಕ್ಕಿನಿಂದ ಉತ್ತರಕ್ಕೆ ಪ್ರಯಾಣ ಬೆಳೆಸುವ ಸಂಕ್ರಾಂತಿ ಪುರುಷ ದೇಶದಲ್ಲಿ ಹಲವು ಬದಲಾವಣೆಗಳನ್ನು ತರಬಹುದು.

ಸಂಕ್ರಾಂತಿ ಸುಗ್ಗಿಯ ಕಾಲವಾಗಿದ್ದು, ಎಳ್ಳು-ಬೆಲ್ಲದ ಮೂಲಕ ಸಂಬಂಧಗಳನ್ನು ಬೆಸೆಯುವ, ಸಿಹಿ ತಿಂಡಿಗಳನ್ನು ಸವಿಯುವ ಮತ್ತು ಜಡತ್ವವನ್ನು ಹೋಗಲಾಡಿಸುವ ಕಾಲವಾಗಿದೆ. ಈ ವಿಶೇಷ ಹಬ್ಬದ ಶುಭಾಶಯಗಳನ್ನು ಕೋರುತ್ತಾ, ಜನವರಿ 15, 2026 ರಂದೇ ಸಂಕ್ರಾಂತಿಯನ್ನು ಆಚರಿಸುವುದು ಸೂಕ್ತ ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಗ್​​ಬಾಸ್ ಮನೆಗೆ ಸಂಕ್ರಾಂತಿ ಅತಿಥಿಗಳು: ಪುಟ್ಟಿ ಹಾಡಿಗೆ ತಲೆದೂಗಿದ ಸ್ಪರ್ಧಿಗಳು – Kannada News | Bigg Boss Kannada 12: Putti serial actors visit Bigg Boss Kannada house

ಬಿಗ್​​ಬಾಸ್ ಕನ್ನಡ ಸೀಸನ್ 12ರ (Bigg Boss Kannada) ಫಿನಾಲೆ ವಾರ ಚಾಲ್ತಿಯಲ್ಲಿದೆ. ನಿನ್ನೆಯಷ್ಟೆ (ಜನವರಿ 14) ಮಿಡ್ ವೀಕ್ ಎಲಿಮಿನೇಷನ್​​ನಲ್ಲಿ ಧ್ರುವಂತ್ ಎಲಿಮಿನೇಟ್ ಆಗಿದ್ದಾರೆ. ಸದ್ಯಕ್ಕೆ ಅಶ್ವಿನಿ, ಕಾವ್ಯಾ, ರಘು, ಧನುಶ್, ಗಿಲ್ಲಿ ಮತ್ತು ರಕ್ಷಿತಾ ಮಾತ್ರ ಮನೆಯಲ್ಲಿದ್ದಾರೆ. ಸಂಕ್ರಾಂತಿ ಹಬ್ಬವನ್ನು ಬಿಗ್​​ಬಾಸ್ ಮನೆಯಲ್ಲಿ ಆಚರಣೆ ಮಾಡಲಾಗಿದ್ದು, ಅಶ್ವಿನಿ ಅವರು ಪೂಜೆ ಮಾಡಿದ್ದಾರೆ. ಸಂಕ್ರಾಂತಿ ಹಬ್ಬಕ್ಕೆ ಬಿಗ್​​ಬಾಸ್ ಮನೆಗೆ ಕೆಲ ಅತಿಥಿಗಳು ಸಹ ಬಂದಿದ್ದಾರೆ. ಪುಟ್ಟಿ ಧಾರಾವಾಹಿಯ ಪುಟ್ಟಿ ಮತ್ತು ಅವರ ತಾಯಿ ಪಾತ್ರಧಾರಿಗಳು ಬಿಗ್​​ಬಾಸ್ ಮನೆಗೆ ಬಂದಿದ್ದಾರೆ. ಪುಟ್ಟಿ ಬಿಗ್​​ಬಾಸ್ ಮನೆಯಲ್ಲಿ ಹಾಡು ಹಾಡಿದ್ದು, ಹಾಡು ಎಲ್ಲರನ್ನೂ ಭಾವುಕಗೊಳಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

Video: ಬಾವಿ ಕಟ್ಟೆ ಹತ್ತಿ ಎರಡೂ ಕೈಗಳಲ್ಲೂ ಮಕ್ಕಳನ್ನು ಹಿಡಿದು ಮಹಿಳೆಯ ಡ್ಯಾನ್ಸ್​ – Kannada News | Chasing Likes and Views, Woman Risks Children’s Lives Internet Outrage Follows

ಛೇ ಇದೇನಿದು ಹುಚ್ಚಾಟ, ರೀಲ್ಸ್​ ಹುಚ್ಚಿಗಾಗಿ ಮಹಿಳೆ ತನ್ನ ಮಕ್ಕಳನ್ನೇ ಕಳೆದುಕೊಳ್ಳಬಹುದಿತ್ತು, ಲೈಕ್ಸ್​, ಕಮೆಂಟ್​ಗಾಗಿ ಜೀವವನ್ನೇ ಪಣಕ್ಕಿಟ್ಟು ಅಪಾಯಕಾರಿ ಸಾಹಸ ಮಾಡುವುದು ಎಷ್ಟು ಸರಿ. ರೀಲ್ಸ್​ಗಾಗಿ ಮಹಿಳೆ ಬಾವಿಯ ಮೇಲೆ ಮಕ್ಕಳನ್ನು ನಿಲ್ಲಿಸಿಕೊಂಡು ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಸೀರೆ ಉಟ್ಟ ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳೊಂದಿಗೆ ಬಾವಿಯ ಅಂಚಿನಲ್ಲಿ ನಿಂತಿರುವುದನ್ನು ನೀವು ನೋಡಬಹುದು. ಭೋಜ್‌ಪುರಿ ಹಾಡು ಪ್ಲೇ ಆಗುತ್ತಿದ್ದಂತೆ, ಅವರು ನೃತ್ಯ ಮಾಡಲು ಪ್ರಾರಂಭಿಸುತ್ತಾರೆ. ಮಕ್ಕಳ ಕೈಗಳನ್ನು ಬಿಡದಿರುವುದು ಆ ಮಕ್ಕಳ ಅದೃಷ್ಟವೇ ಸರಿ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

Source link

ರಾಮನಗರ: ಪ್ರೀತಿ ಹೆಸರಲ್ಲಿ ದೈಹಿಕ ಸಂಪರ್ಕ ಸಾಧಿಸಿ ವಂಚನೆ, ಪೊಲೀಸ್ ಠಾಣೆ ಬಳಿಯೇ ಆತ್ಮಹತ್ಯೆಗೆ ಯತ್ನಿಸಿದ ಯುವತಿ – Kannada News | Love Fraud Case in Ramanagara: Woman Attempts self harm Near Police Station After Betrayal Allegations

ಪ್ರೀತಿ ಹೆಸರಲ್ಲಿ ದೈಹಿಕ ಸಂಪರ್ಕ ಸಾಧಿಸಿ ವಂಚನೆ, ಆತ್ಮಹತ್ಯೆಗೆ ಯತ್ನಿಸಿದ ಯುವತಿ

ರಾಮನಗರ, ಜನವರಿ 15: ರಾಮನಗರದಲ್ಲಿ (Ramanagara) ಪ್ರೇಮ ವೈಫಲ್ಯದಿಂದ ಮನನೊಂದು ಯುವತಿಯೊಬ್ಬಳು ಡೆತ್ ನೋಟ್ ಬರೆದು ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ರಾಮನಗರ ಮಹಿಳಾ ಪೊಲೀಸ್ ಠಾಣೆ ಸಮೀಪವೇ ಈ ಘಟನೆ ನಡೆದಿದ್ದು, ಸಮಯಕ್ಕೆ ಸರಿಯಾಗಿ ಗಮನಿಸಿದ ಪೊಲೀಸರು ಯುವತಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಪ್ರಾಣಾಪಾಯದಿಂದ ರಕ್ಷಿಸಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ ಯುವತಿ ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ ತಾಲ್ಲೂಕಿನ ಗಟ್ಟಿಗುಂದ ಗ್ರಾಮದ ನಿವಾಸಿಯಾಗಿದ್ದಾರೆ. ಆಕೆ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ಒಂದೂವರೆ ವರ್ಷಗಳಿಂದ ಕನಕಪುರ ತಾಲ್ಲೂಕಿನ ತೆರಿಗೆದೊಡ್ಡಿ ಗ್ರಾಮದ ಅರುಣ್ ನಾಯ್ಕ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದರು.

ಪ್ರೀತಿಯ ಹೆಸರಿನಲ್ಲಿ ಅರುಣ್ ನಾಯ್ಕ್ ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ. ಇದೀಗ ವಿವಾಹವಾಗಲು ನಿರಾಕರಿಸುತ್ತಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈ ವಿಚಾರವಾಗಿ ಕಳೆದ ಎರಡು ತಿಂಗಳಿಂದ ಇಬ್ಬರ ನಡುವೆ ರಾಜಿ ಸಂಧಾನಕ್ಕೂ ಪ್ರಯತ್ನ ನಡೆದಿದ್ದರೂ, ಪ್ರೇಮಿ ಸ್ಪಂದಿಸದ ಹಿನ್ನೆಲೆಯಲ್ಲಿ ಯುವತಿ ತೀವ್ರವಾಗಿ ಮನನೊಂದಿದ್ದಾರೆ ಎನ್ನಲಾಗಿದೆ.

ಇದೇ ಕಾರಣದಿಂದ ಬೆಂಗಳೂರಿನಿಂದ ರಾಮನಗರಕ್ಕೆ ಬಂದ ಯುವತಿ ಡೆತ್ ನೋಟ್ ಬರೆದು ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅಸ್ವಸ್ಥಗೊಂಡ ಅವರನ್ನು ಪೊಲೀಸರು ತಕ್ಷಣ ರಾಮನಗರ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಚಿಕಿತ್ಸೆ ಮುಂದುವರಿದಿದೆ.

ಕುಡಿಯುವ ನೀರು ಕೇಳುವ ನೆಪದಲ್ಲಿ ಸರಗಳ್ಳತನ, ಮೂವರು ಆರೋಪಿಗಳ ಬಂಧನ

ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕುಡಿಯುವ ನೀರು ಕೇಳುವ ನೆಪದಲ್ಲಿ ಸರಗಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಒಟ್ಟು 59 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರು ಎರಡು ಸರಗಳ್ಳತನ ಪ್ರಕರಣಗಳಲ್ಲಿ ಶಾಮೀಲಾಗಿದ್ದು ತನಿಖೆಯಿಂದ ಬೆಳಕಿಗೆ ಬಂದಿವೆ. ಮನೆಗಳಿಗೆ ನೀರು ಕೇಳುವ ನೆಪದಲ್ಲಿ ಪ್ರವೇಶಿಸಿ, ಅವಕಾಶ ಕಂಡು ಚಿನ್ನಾಭರಣಗಳನ್ನು ಕಳ್ಳತನ ಮಾಡುತ್ತಿದ್ದುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಐದು ವರ್ಷದ ಬಾಲಕಿಯನ್ನು ಬೆದರಿಸಿ 55 ವರ್ಷದ ವ್ಯಕ್ತಿಯಿಂದ 5 ದಿನಗಳ ಕಾಲ ಅತ್ಯಾಚಾರ

ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಈ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಾನಾ… ಹೌದು ನೀನೇ… ಅರ್ಧಶತಕ ಪೂರೈಸಲು ಬಿಡದ ಅಭಿಷೇಕ್ ನಾಯರ್!

ವುಮೆನ್ಸ್ ಪ್ರೀಮಿಯರ್ ಲೀಗ್​ನ 7ನೇ ಪಂದ್ಯದಲ್ಲೂ ರಿಟೈರ್ಡ್ ಔಟ್ ಸದ್ದು ಮಾಡಿದೆ. ಈ ಬಾರಿ ಅರ್ಧದಲ್ಲೇ ಬ್ಯಾಟಿಂಗ್ ನಿಲ್ಲಿಸಿ ಮರಳಿದ್ದು ಹರ್ಲೀನ್ ಡಿಯೋಲ್. ಮುಂಬೈನ ಡಿವೈ ಪಾಟೀಲ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಯುಪಿ ವಾರಿಯರ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿದ್ದವು.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಯುಪಿ ವಾರಿಯರ್ಸ್ ಪರ ಹರ್ಲೀನ್ ಡಿಯೋಲ್ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು. ಅಲ್ಲದೆ 36 ಎಸೆತಗಳನ್ನು ಎದುರಿಸಿದ ಹರ್ಲೀನ್ 7 ಫೋರ್​ಗಳೊಂದಿಗೆ 47 ರನ್​ ಕಲೆಹಾಕಿದ್ದರು.

ಆದರೆ ಅರ್ಧಶತಕದ ಹೊಸ್ತಿಲಲ್ಲಿದ್ದ ಹರ್ಲೀನ್ ಡಿಯೋಲ್ ಅವರನ್ನು ಯಪಿ ವಾರಿಯರ್ಸ್ ತಂಡದ ಕೋಚ್ ಅಭಿಷೇಕ್ ನಾಯರ್ ವಾಪಸ್ ಕರೆದಿದ್ದಾರೆ. 17ನೇ ಓವರ್​ ಮುಕ್ತಾಯದ ಬೆನ್ನಲ್ಲೇ ಹರ್ಲೀನ್ ಅವರನ್ನು ಬ್ಯಾಟಿಂಗ್ ನಿಲ್ಲಿಸಿ ಹಿಂತಿರುಗುವಂತೆ ಸೂಚಿಸಿದರು.

ಈ ವೇಳೆ ಗೊಂದಲಕ್ಕೊಳಗಾದ ಹರ್ಲೀನ್ ಡಿಯೋಲ್ ನಾನಾ ಎಂದು ಕೋಚ್​ ಅನ್ನು ಪ್ರಶ್ನಿಸಿದರು. ಹೌದು, ನೀನೇ ಎನ್ನುವ ಸೂಚನೆ ಸಿಕ್ಕ ಬೆನ್ನಲ್ಲೇ ಹರ್ಲೀನ್ ಡಿಯೋಲ್ ಬ್ಯಾಟಿಂಗ್ ನಿಲ್ಲಿಸಿ ವಾಪಸ್ ಬಂದಿದ್ದಾರೆ.

ಹರ್ಲೀನ್ ಡಿಯೋಲ್ ವಾಪಸ್ ಬಂದ ಬಳಿಕ ಕೊನೆಯ 3 ಓವರ್​ಗಳಲ್ಲಿ ಯುಪಿ ವಾರಿಯರ್ಸ್ ತಂಡ ಕಲೆಹಾಕಿದ್ದು ಕೇವಲ 13 ರನ್​ಗಳು ಮಾತ್ರ. ಹೀಗಾಗಿಯೇ ಇದೀಗ ಕೋಚ್ ಅಭಿಷೇಕ್ ನಾಯರ್ ಅವರ ನಡೆಯ ಬಗ್ಗೆ ಪ್ರಶ್ನೆಗಳೆದ್ದಿವೆ.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಯುಪಿ ವಾರಿಯರ್ಸ್ ತಂಡವು 20 ಓವರ್​ಗಳಲ್ಲಿ ಕಲೆಹಾಕಿದ್ದು 154 ರನ್​ಗಳು ಮಾತ್ರ. ಈ ಗುರಿಯನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್​ಗಳಲ್ಲಿ ಚೇಸ್ ಮಾಡುವ ಮೂಲಕ 7 ವಿಕೆಟ್​ಗಳ ಜಯ ಸಾಧಿಸಿದೆ.

 

 

Source link