ಗೃಹ ಸಚಿವ ಪರಮೇಶ್ವರ್‌ಗೆ ‘500 ರೂ. ಬೆಟ್ಟಿಂಗ್’ ಸಂಕಷ್ಟ: ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಕೋರ್ಟ್ ಆದೇಶ! – Kannada News | Court Orders FIR Against Karnataka Home Minister Dr. G. Parameshwara for Rs 500 Bet
ಬೆಂಗಳೂರು, ಏ.21: ಗೃಹ ಇಲಾಖೆ ಎಂದರೆ ಅದೊಂದು ಶಿಸ್ತಿನ ಇಲಾಖೆ. ಬೆಟ್ಟಿಂಗ್ಗಳನ್ನು ತಡೆಯಬೇಕಿದ್ದ ಇಲಾಖೆಯ ಸಚಿವರೇ ಬೆಟ್ಟಿಂಗ್ ಮಾಡಿದ್ದಾರೆ ಎಂದರೆ ನಂಬಲು ಸಾಧ್ಯವಿಲ್ಲ. ಆದರೆ ನಂಬಲೇಬೇಕು. ಕಬಡ್ಡಿ ಪಂದ್ಯಾವಳಿಯೊಂದರಲ್ಲಿ ಕೇವಲ 500 ರೂಪಾಯಿ ಬೆಟ್ಟಿಂಗ್ ಕಟ್ಟಿದ್ದಾಗಿ ಹೇಳಿಕೆ ನೀಡಿದ್ದ ರಾಜ್ಯದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ವಿರುದ್ಧ ಇದೀಗ ಎಫ್‌ಐಆರ್ (FIR) ದಾಖಲಿಸಿ ತನಿಖೆ ನಡೆಸುವಂತೆ ನ್ಯಾಯಾಲಯ ಆದೇಶಿಸಿದೆ. ತಾನು ನೀಡಿದ ಹೇಳಿಕೆಯೇ ಈಗ ಅವರಿಗೆ ಸುತ್ತಿಕೊಂಡಿದೆ. ತುಮಕೂರಿನಲ್ಲಿ ನಡೆದ ಪದವಿ ಪೂರ್ವ ಕಾಲೇಜು…