All posts by nagaraj11081993

Chanakya Niti: ಈ ಅಭ್ಯಾಸಗಳು ನಿಮ್ಮಲ್ಲಿದ್ದರೆ ಜೀವನದಲ್ಲಿ ಸೋಲು ಕಟ್ಟಿಟ್ಟ ಬುತ್ತಿ ಎಂದಿದ್ದಾರೆ ಚಾಣಕ್ಯ – Kannada News | Chanakya Niti: If you have these habits, you will never be successful in life

ಜೀವನದಲ್ಲಿ ಮುಂದುವರೆಯಬೇಕು, ಯಶಸ್ಸನ್ನು (success) ಗಳಿಸಬೇಕು ಎಂದು ಪ್ರತಿಯೊಬ್ಬರೂ ಬಯಸುತ್ತಾರೆ. ಆದರೆ ಈ ಕೆಲವೊಂದು ಅಭ್ಯಾಸಗಳನ್ನು ಹೊಂದಿರುವವರು ಖಂಡಿತವಾಗಿಯೂ ಜೀವನದಲ್ಲಿ ಜಯಿಸುವುದಿಲ್ಲ, ಅವರಿಗೆ ಸೋಲು ಖಚಿತ ಎಂದು ಆಚಾರ್ಯ ಚಾಣಕ್ಯರು ಎಚ್ಚರಿಸಿದ್ದಾರೆ. ನಿಮ್ಮಲೂ ಕೂಡ ಈ ಅಭ್ಯಾಸಗಳಿರಬಹುದು, ಆ ತಪ್ಪು ಅಭ್ಯಾಸಗಳನ್ನು ಸರಿಪಡಿಸಿದರೆ ಖಂಡಿತವಾಗಿಯೂ ನೀವು ಸಹ ಜೀವನದಲ್ಲಿ ಮುಂದುವರೆಯಬಹುದು. ಹಾಗಿದ್ರೆ ಯಶಸ್ಸಿಗೆ ಅಡ್ಡಿಪಡಿಸುವ, ಸೋಲುಣಿಸುವ ಆ ಅಭ್ಯಾಸಗಳು ಯಾವುವು  ಎಂಬುದನ್ನು ನೋಡೋಣ ಬನ್ನಿ.

ಈ ಅಭ್ಯಾಸಗಳಿದ್ದರೆ ಜೀವನದಲ್ಲಿ ಯಶಸ್ಸು ಸಿಗಲಾರದು:

ಸಮಯವನ್ನು ವ್ಯರ್ಥ ಮಾಡುವುದು: ಸಮಯಕ್ಕಿಂತ ಅಮೂಲ್ಯವಾದದ್ದು ಯಾವುದೂ ಇಲ್ಲ ಎಂದು ಚಾಣಕ್ಯರು ಹೇಳುತ್ತಾರೆ. ಸಮಯಕ್ಕೆ ಸರಿಯಾಗಿ ಕೆಲಸವನ್ನು ಮಾಡದೆ ಅದನ್ನು ನಾಳೆಗೆ ಮುಂದೂಡುವ ಅಭ್ಯಾಸವನ್ನು ಬೆಳೆಸಿಕೊಂಡಿರುವ ವ್ಯಕ್ತಿಯು ಕ್ರಮೇಣ ತನ್ನ ಗುರಿಗಳನ್ನು ಮರೆತುಬಿಡುತ್ತಾನೆ. ಇಂದಿನ ಕೆಲಸಗಳನ್ನು ನಾಳೆಗೆ ಮುಂದೂಡುವುದರಿಂದ ಉತ್ಪಾದಕತೆ ಕಡಿಮೆಯಾಗುವುದಲ್ಲದೆ ಯಶಸ್ಸಿನ ಹಾದಿಯೂ ಜಟಿಲವಾಗುತ್ತದೆ. ಆದ್ದರಿಂದ, ಎಲ್ಲಾ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವುದು ಮತ್ತು ಸಮಯದ ಮೌಲ್ಯವನ್ನು ಕಲಿಯುವುದು ಬಹಳ ಮುಖ್ಯ.

ಸಂಬಂಧಗಳನ್ನು ನಿರ್ಲಕ್ಷಿಸುವುದು: ಕುಟುಂಬ ಮತ್ತು ಸ್ನೇಹಿತರು ಜೀವನದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ. ಹಾಗಾಗಿ ಸಂಬಂದವು ಜೀವನದಲ್ಲಿ ತುಂಬಾನೇ ಮುಖ್ಯ.  ಚಾಣಕ್ಯ ನೀತಿಯ ಪ್ರಕಾರ, ಯಾರೂ ಒಬ್ಬಂಟಿಯಾಗಿ ಸಂತೋಷವಾಗಿರಲು ಸಾಧ್ಯವಿಲ್ಲ. ನಿಮ್ಮ ನಿಕಟ ಸಂಬಂಧಗಳಿಗೆ ನೀವು ಸಮಯ ನೀಡದಿದ್ದರೆ, ಕಷ್ಟದ ಸಮಯದಲ್ಲಿ ನೀವು ಒಂಟಿಯಾಗಿರುತ್ತೀರಿ. ಆದ್ದರಿಂದ, ನಿಮ್ಮ ಪ್ರೀತಿಪಾತ್ರರ ಜೊತೆ ಸಮಯ ಕಳೆಯುವುದು ಮತ್ತು ಬಲವಾದ ಸಂಬಂಧಗಳನ್ನು ಕಾಪಾಡಿಕೊಳ್ಳುವುದು ಮುಖ್ಯ.

ಇದನ್ನೂ ಓದಿ: ಮಹಿಳೆಯರು ರೀತಿಯ ಜನರಿಂದ ಸಾಧ್ಯವಾದಷ್ಟು ದೂರವಿರಬೇಕು ಎನ್ನುತ್ತಾರೆ ಚಾಣಕ್ಯ

ಕಲಿಕೆಯನ್ನು ನಿಲ್ಲಿಸುವುದು: ಒಬ್ಬ ವ್ಯಕ್ತಿಯು ಕಲಿಯುವುದನ್ನು ನಿಲ್ಲಿಸಿದ ದಿನ ಅವನ ಪ್ರಗತಿ ನಿಲ್ಲುತ್ತದೆ ಎಂದು ಚಾಣಕ್ಯ ಹೇಳುತ್ತಾರೆ. ಯಾವುದೇ ಕಠಿಣ ಪರಿಸ್ಥಿತಿಯನ್ನು ನಿವಾರಿಸಲು ನಿಮಗೆ ಸಹಾಯ ಮಾಡುವ ಏಕೈಕ ಶಕ್ತಿ ಜ್ಞಾನ. ಜೀವನದಲ್ಲಿ ಯಾವಾಗಲೂ ಹೊಸ ವಿಷಯಗಳನ್ನು ಕಲಿಯುವ ಬಯಕೆಯನ್ನು ಕಾಪಾಡಿಕೊಳ್ಳಿ ಮತ್ತು ಇತರರ ಅನುಭವಗಳಿಂದ ಕಲಿಯಲು ಪ್ರಯತ್ನಿಸಿ. ಆಗ ಮಾತ್ರ ಯಶಸ್ಸಿನ ಹಾದಿಯನ್ನು ತಲುಪಲು ಸಾಧ್ಯ, ಇಲ್ಲದಿದ್ದರೆ ಸೋಲು ಕಟ್ಟಿಟ್ಟ ಬುತ್ತಿ.

ಆರೋಗ್ಯವನ್ನು ಕಡೆಗಣಿಸುವುದು:  ಯಶಸ್ಸು ಮತ್ತು ಶ್ರೀಮಂತಿಕೆ ಗಳಿಸುವ ಧಾವಂತದಲ್ಲಿ ಅನೇಕ ಜನರು ಹೆಚ್ಚಾಗಿ ತಮ್ಮ ಆರೋಗ್ಯವನ್ನು ನಿರ್ಲಕ್ಷಿಸುತ್ತಾರೆ. ಚಾಣಕ್ಯರ ಪ್ರಕಾರ, ಇದು ಜೀವನಕ್ಕೆ ಅಡ್ಡಿಯಾಗುವ ಗಂಭೀರ ತಪ್ಪು. ನಿಮ್ಮ ಆರೋಗ್ಯ ಕೆಟ್ಟದಾಗಿದ್ದರೆ, ನಿಮ್ಮ ಸಾಧನೆಗಳನ್ನು ಆನಂದಿಸಲು ಅಥವಾ ಜೀವನದಲ್ಲಿ ಮುಂದುವರಿಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ, ಕೆಲಸದ ಜೊತೆಗೆ, ನೀವು ನಿಮ್ಮ ಆರೋಗ್ಯದ ಬಗ್ಗೆಯೂ ಸಂಪೂರ್ಣ ಕಾಳಜಿ ವಹಿಸಬೇಕು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮನೆ, ಸ್ಪಾಗಳಲ್ಲಿ ವೇಶ್ಯಾವಾಟಿಕೆ: ನಾಲ್ವರು ಆರೋಪಿಗಳ ಬಂಧನ, 6 ಮಹಿಳೆಯರ ರಕ್ಷಣೆ – Kannada News | Bengaluru Prostitution Ring Busted: 4 Arrested, 6 Women Rescued from Spas and Homes

ಬೆಂಗಳೂರು, ಏಪ್ರಿಲ್​​ 21: ನಗರದ ವಿವಿಧೆಡೆ ಸ್ಪಾ ಮತ್ತು ಮನೆಗಳಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಖತರ್ನಾಕ್​​ ಜಾಲವನ್ನು ಪೊಲೀಸರು ಭೇದಿಸಿದ್ದು, ಮೂವರು ಮಹಿಳೆಯರು ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ, ಮಾರತಹಳ್ಳಿ, ಸುಂಕದಕಟ್ಟೆ ಸಮೀಪದ ಸ್ಪಾಗಳು ಹಾಗೂ ಮಂಜುನಾಥನಗರದ ಮನೆಯಲ್ಲಿ ಮಹಿಳೆಯರನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ದೂಡಲಾಗುತ್ತಿತ್ತು. ಈ ಬಗ್ಗೆ ಸಿಕ್ಕ ಮಾಹಿತಿಯ ಆಧಾರದಲ್ಲಿ ಲೆ ಸೆಂಟ್ರಲ್ ಕ್ರೈಮ್ ಬ್ರಾಂಚ್ (CCB) ಮಹಿಳಾ ರಕ್ಷಣಾ ಘಟಕದ ಪೊಲೀಸರು ದಾಳಿ ನಡೆಸಿದ್ದರು.

ಬಲವಂತವಾಗಿ ಅಥವಾ ಆಮಿಷಕ್ಕೆ ಒಳಪಡಿಸಿ ಆರೋಪಿಗಳು ಮಹಿಳೆಯರನ್ನು ವೇಶ್ಯಾಪಾಟಿಕೆಗೆ ತಳ್ಳಿದ್ದು, 6 ಮಂದಿಯನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಫೋನ್ ಮೂಲಕ ಗ್ರಾಹಕರನ್ನು ಸಂಪರ್ಕಿಸಿ ಸ್ಪಾಗಳು ಮತ್ತು ಮನೆಯಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಬಗ್ಗೆ ವಿಚಾರಣೆ ವೇಳೆ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಈ ಸಂಬಂಧ HAL, ಬ್ಯಾಡರಹಳ್ಳಿ ಮತ್ತು ಬಾಗಲಗುಂಟೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಕುರಿತ ತನಿಖೆ ಮುಂದುವರಿದಿದೆ.

ಇದನ್ನೂ ಓದಿ: ‘ಫಾರಿನ್ ಸ್ಟೈಲ್’ ಪ್ರಪೋಸ್ ಮಾಡ್ತೀನಿ ಅಂತ ಕೈ-ಕಾಲು ಕಟ್ಟಿ ಪ್ರಿಯಕರನಿಗೆ ಬೆಂಕಿ ಹಚ್ಚಿದ ಪ್ರಿಯತಮೆ! ಕಣ್ಣೆದುರೇ ಸುಟ್ಟು ಕರಕಲಾದ ಯುವಕ

ಸುಲಿಗೆ ಮಾಡಿದ್ದ ಆರೋಪಿಗಳ ಬಂಧನ

ವಾಕಿಂಗ್ ಮಾಡುತ್ತಿದ್ದ ವ್ಯಕ್ತಿಯನ್ನ ಸುಲಿಗೆ ಮಾಡಿದ್ದ ಘಟನೆ ಸಂಬಂಧ ಬೆಂಗಳೂರಿನ ಹೆಣ್ಣೂರು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಸ್ಯಾಮ್ಸನ್ ಸಾಲ್ಮನ್ (19) ಹಾಗೂ ಜಯಶೀಲನ್ ಡೇವಿಡ್ ಬಂಧಿತ ಆರೋಪಿಗಳು. ವಾಕಿಂಗ್​​ ಮಾಡುತ್ತಿದ್ದ ಶಾಸ್ತ್ರಿ ಎಂಬವರಿಂದ ಆರೋಪಿಗಳು ಚಿನ್ನದ ಸರ ಸುಲಿಗೆ ಮಾಡಿದ್ದರು. ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯ ಟೀಚರ್ಸ್ ಲೇಔಟ್​​ನಲ್ಲಿ ಘಟನೆ ನಡೆದಿತ್ತು. ಬಂಧಿತರು ಡಿಜೆ ಹಳ್ಳಿ ನಿವಾಸಿಗಳಾಗಿದ್ದು, ಈ ಹಿಂದೆಯೂ ಇವರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂಬುದು ಗೊತ್ತಾಗಿದೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದ್ದು, 38 ಗ್ರಾಂನ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ವಶಕ್ಕೆ ಪಡೆಯಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Video: ಬಿಸಿಲಿನಿಂದ ಪಾರಾಗಲು ಹೊಸ ಮಾರ್ಗ ಕಂಡುಕೊಂಡ ಬೆಂಗಳೂರಿನ ಯುವತಿ – Kannada News | Bengaluru: A young woman from Bengaluru has a new plan to escape the scorching sun.

ಬೆಂಗಳೂರು, ಏಪ್ರಿಲ್ 21: ಬಿಸಿಲೋ ಬಿಸಿಲು, ಹೊರಗಡೆ ಕಾಲಿಡಂಗಿಲ್ಲ. ಹೌದು, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ (Bengaluru) ಬೇಸಿಗೆಯ ತಾಪ ದಿನದಿಂದ ದಿನಕ್ಕೆ ಏರುತ್ತಿದೆ. ಮಾಯಾನಗರಿಯ ಜನರು ಬಿಸಿಲಿಗೆ ಹೈರಾಣಾಗಿದ್ದಾರೆ. ಆದರೆ ಇದೀಗ ಬೆಂಗಳೂರಿನ ಯುವತಿ ರಣ ಬಿಸಿಲಿನಿಂದ ಪಾರಾಗಲು ಹೊಸ ಮಾರ್ಗ ಕಂಡುಕೊಂಡಿದ್ದಾಳೆ. ಮನೆಯಲ್ಲಿ ಫ್ಯಾನ್ ಇದ್ರೂ ಬಿಸಿಲಿನ ಝಳ ತಾಳಲಾರದೇ ತಮ್ಮ ಮನೆಯ ಸಮೀಪವೇ ಇರುವ ಹೋಟೆಲ್‌ವೊಂದರಲ್ಲಿ ರೂಮ್ ಬುಕ್ ಮಾಡಿದ್ದಾಳೆ. ಈ ಕುರಿತಾದ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಬೆಂಗಳೂರಿನ ನಿವಾಸಿ ಪ್ರಿಯಾ ಪಾಲ್ (Priya Paal) ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬಿಸಿಲಿನಿಂದ ಪಾರಾಗಲು ಕಂಡುಕೊಂಡ ಹೊಸ ಉಪಾಯದ ಬಗ್ಗೆ ಹೇಳಿದ್ದಾಳೆ. ತಮ್ಮ ಮನೆಯ ಸಮೀಪದಲ್ಲೇ ಇರುವ ಹೋಟೆಲ್‌ನಲ್ಲಿ ರೂಮ್ ಬುಕ್ ಮಾಡಿದ್ದು, ಎಸಿ ರೂಮಿನಲ್ಲಿ ಕುಳಿತುಕೊಂಡಿರುವ ವಿಡಿಯೋ ಇದಾಗಿದೆ.

ವೈರಲ್ ವಿಡಿಯೋ ಇಲ್ಲಿದೆ

ಎಸಿ ಇಲ್ಲದ ಇನ್ನು ಸಾಧ್ಯವಿಲ್ಲ ಎಂದು ಪ್ರಿಯಾ ಹೇಳಿದ್ದಾರೆ. ಹೋಟೆಲ್ ಬುಕ್ ಮಾಡಿದ್ದು ತನ್ನ ಮೊದಲ ಆಯ್ಕೆಯಾಗಿರಲಿಲ್ಲ. ಮಳೆ ಬಂದು ವಾತಾವರಣ ತಂಪಾಗಬಹುದು ಎನ್ನುವ ಭರವಸೆ ಇತ್ತು. ಆದರೆ ಮಳೆ ಬರಲಿಲ್ಲ. ಎಸಿ ಖರೀದಿಸಲು ಹೋದಾಗ ಅಂಗಡಿಗಳಲ್ಲಿ ಸ್ಟಾಕ್ ಖಾಲಿಯಾಗಿದ್ದು, ಡೆಲಿವರಿ ಹೆಚ್ಚಿನ ದಿನಗಳು ತೆಗೆದುಕೊಳ್ಳುತ್ತದೆ ಎನ್ನುವಂತಾಯಿತ್ತಂತೆ. ಹೋಟೆಲ್ ರೂಮ್ ಬುಕ್ ಮಾಡುವ ಆಯ್ಕೆಯತ್ತ ಮುಂದಾದೆ ಎಂದು ಹೇಳಿರುವುದನ್ನು ಕಾಣಬಹುದು. ಯುವತಿಯೂ ಹೋಟೆಲ್ ರೂಮ್ ಬುಕ್ ಮಾಡಿ ಭಾನುವಾರ ಎಸಿ ರೂಮಿನಲ್ಲಿ ನೆಟ್‌ಫ್ಲಿಕ್ಸ್ ನೋಡುತ್ತಾ ಕಳೆದಿರುವುದನ್ನು ನೋಡಬಹುದು.

ಇದನ್ನೂ ಓದಿ: ಮನೆಯೊಳಗೆ ಇಟ್ಟರೂ ಬಿಸಿಲಿನ ಶಾಖಕ್ಕೆ ಕರಗಿದ ಕ್ರಯಾನ್ಸ್; ಬೆಂಗಳೂರಿನ ಮಹಿಳೆ ಹೇಳಿದ್ದೇನು?

ಈ ವಿಡಿಯೋ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಒಳ್ಳೆಯ ಐಡಿಯಾ ಎಂದರೆ, ಮತ್ತೊಬ್ಬರು, ನಿಮ್ಮ ಆಲೋಚನೆಗೆ ನನ್ನದೊಂದು ಸಲಾಂ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಇದು ಮಾಡ್ರನ್ ಪ್ರಾಬ್ಲಮ್, ಮಾಡ್ರನ್ ಜನರೇಷನ್ ಕಂಡುಕೊಂಡ ಮಾರ್ಗ ಇದು ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಎಂಗೆ ಕಾಂಪ್ರಾಮೈಸ್ ಪಾಲಿಟಿಕ್ಸ್ ಅನಿವಾರ್ಯ: ಸತೀಶ್ ಜಾರಕಿಹೊಳಿ ಶಾಕಿಂಗ್ ಹೇಳಿಕೆ – Kannada News | Compromise politics inevitable to CM Siddaramaiah Says Minister Satish Jarkiholi

ಮೈಸೂರು, (ಏಪ್ರಿಲ್ 21): ಕಾಂಗ್ರೆಸ್‌ನಲ್ಲಿ (Congress) ನಡೆಯುತ್ತಿರುವ ಬೆಳವಣಿಗೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ (Siddaramaiah) ಬಗ್ಗೆ ಆಪ್ತರಾದ ಸತೀಶ್ ಜಾರಕಿಹೊಳಿ (Satish jarkiholi) ಹಾಗೂ ಕೆಎನ್ ರಾಜಣ್ಣ ನೀಡುತ್ತಿರುವ ಹೇಳಿಕೆಗಳು ಸಂಚಲನ ಮೂಡಿಸಿವೆ. ಸಿದ್ದರಾಮಯ್ಯ ಅವರಿಂದ ಇಂಥಾ ಅಸಹಾಯಕತೆಯನ್ನ ನಿರೀಕ್ಷೆ ಮಾಡಿರಲಿಲ್ಲ. ಸಿಎಂ ತಟಸ್ಥ ಧೋರಣೆ ಯಾಕೆ ತಾಳಿದ್ದಾರೋ ಗೊತ್ತಿಲ್ಲ, ಧ್ವನಿ ಕುಗ್ಗಿದಾಗ ಅಸಹಾಯಕತೆ ಆಗುತ್ತದೆ ಎಂದು ಮೊನ್ನೆ ಅಷ್ಟೇ ರಾಜಣ್ಣ ಶಾಕಿಂಗ್ ಹೇಳಿಕೆ ನೀಡಿದ್ದರು. ಇದಾದ ಬೆನ್ನಲ್ಲೇ ಇಂದು (ಏಪ್ರಿಲ್ 21) ಸಿದ್ದರಾಮಯ್ಯ ಅವರ ಮೇಲೆ ಮಾಟ ಮಂತ್ರ ಆಗಿರಬಹುದು ಎಂದಿದ್ದಾರೆ. ಹೀಗೆ ಸಿದ್ದರಾಮಯ್ಯ ಮೌನದ ಬಗ್ಗೆ ನಾನಾ ಹೇಳಿಕೆ ನೀಡುತ್ತಿರುವ ಬೆನ್ನಲ್ಲೇ ಇತ್ತ ಸತೀಶ್ ಜಾರಿಹೊಳಿ ಸಹ ಸಿಎಂಗೆ ಈಗ ಕಾಂಪ್ರಾಮೈಸ್ ಪಾಲಿಟಿಕ್ಸ್ ಅನಿವಾರ್ಯವಾಗಿದೆ ಎಂದಿದ್ದಾರೆ.

ಮೈಸೂರಿನಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸತೀಶ್ ಜಾರಕಿಹೊಳಿ, ಸಿದ್ದರಾಮಯ್ಯ ಈಗ ಕಾಂಪ್ರಾಮೈಸ್ ಪಾಲಿಟಿಕ್ಸ್ ಮಾಡುತ್ತಿದ್ದಾರೆ. ಈಗ ಅವರಿಗೆ ಕಾಂಪ್ರಾಮೈಸ್ ಪಾಲಿಟಿಕ್ಸ್ ಅನಿವಾರ್ಯವಾಗಿದೆ. ಎಲ್ಲಾ ಸಮಯದಲ್ಲೂ ಒಂದೇ ರೀತಿ ರಾಜಕಾರಣ ಮಾಡಲಾಗಲ್ಲ. ಕಾಂಪ್ರಾಮೈಸ್ ಅನಿವಾರ್ಯ ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಾಜ್ಯ ರಾಜಕೀಯದಲ್ಲಿ ಸದ್ದು ಮಾಡಿದ ಮಾಟ, ಮಂತ್ರ: ಕೆಎನ್ ರಾಜಣ್ಣ ಸ್ಫೋಟಕ ಹೇಳಿಕೆ

Source link

ಇನ್ನೆಷ್ಟು ದಿನ ಜನರ ದಾರಿ ತಪ್ಪಿಸುತ್ತೀರಿ? ಖರ್ಗೆ ವಿರುದ್ಧ ಪ್ರಲ್ಹಾದ್ ಜೋಶಿ ವಾಗ್ದಾಳಿ – Kannada News | Mallikarjun Kharge must apologise to the Prime Minister and people of India Pralhad Joshi urges

ನವದೆಹಲಿ, ಏಪ್ರಿಲ್ 21: ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಶುರುವಾಗಿರುವುದರಿಂದ ಚೆನ್ನೈನಲ್ಲಿ ಇಂದು ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಸುದ್ದಿಗೋಷ್ಠಿ ನಡೆಸಿದ್ದರು. ಈ ವೇಳೆ ಮಾತನಾಡುವ ಭರದಲ್ಲಿ ಅವರು ಪ್ರಧಾನಿ ಮೋದಿಯವರನ್ನು ಭಯೋತ್ಪಾದಕ ಎಂದು ಕರೆದಿದ್ದರು. ಇದಾದ ಬಳಿಕ ತಮ್ಮ ಹೇಳಿಕೆಗೆ ಅವರು ಸ್ಪಷ್ಟನೆ ನೀಡಿದ್ದರೂ ಅದು ವಿವಾದ ಸೃಷ್ಟಿಸಿದೆ. ಮಲ್ಲಿಕಾರ್ಜುನ ಖರ್ಗೆಯವರ ವಿರುದ್ಧ ಕಿಡಿ ಕಾರಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಖರ್ಗೆಯವರು ಪ್ರಧಾನಿ ಮೋದಿಯವರ ಮತ್ತು ದೇಶದ ಕ್ಷಮೆ ಕೋರಬೇಕೆಂದು ಒತ್ತಾಯಿಸಿದ್ದಾರೆ.

“ಮಲ್ಲಿಕಾರ್ಜುನ ಖರ್ಗೆಯವರ ಮಾತಿನಲ್ಲಿ ಹತಾಶೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಮಲ್ಲಿಕಾರ್ಜುನ ಖರ್ಗೆ ಮತ್ತು ಕಾಂಗ್ರೆಸ್ ಪಕ್ಷ ಈಗಾಗಲೇ ಸೋಲನ್ನು ಒಪ್ಪಿಕೊಂಡಂತೆ ಕಾಣುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಇಂತಹ ಅಸಂಬದ್ಧ ಹೇಳಿಕೆಗಳನ್ನು ನೀಡುವ ಮೂಲಕ ಅವರು ಇನ್ನೂ ಎಷ್ಟು ದಿನ ಸಾರ್ವಜನಿಕರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಾರೆ? ಸಾಕಷ್ಟು ರಾಜಕೀಯ ಅನುಭವ ಹೊಂದಿರುವ ಮಲ್ಲಿಕಾರ್ಜುನ ಖರ್ಗೆ ವಿರೋಧ ಪಕ್ಷದ ಅಧ್ಯಕ್ಷರ ಪಾತ್ರವನ್ನು ಮರೆತು ಇಂತಹ ಕೀಳು ಮಟ್ಟಕ್ಕೆ ಇಳಿದಿರುವುದು ದುರಾದೃಷ್ಟ. ಇದಕ್ಕಾಗಿ ಅವರು ಪ್ರಧಾನಿ ಹಾಗೂ ಭಾರತದ ಜನತೆಯ ಕ್ಷಮೆಯಾಚಿಸಬೇಕು” ಎಂದು ಪ್ರಲ್ಹಾದ್ ಜೋಶಿ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿಗೆ ಭಯೋತ್ಪಾದಕ ಎಂದ ಮಲ್ಲಿಕಾರ್ಜುನ ಖರ್ಗೆ; ಕ್ಷಮೆಯಾಚನೆಗೆ ಬಿಜೆಪಿ ಒತ್ತಾಯ

ಬಿಜೆಪಿ ಹಿರಿಯ ನಾಯಕ ಅಮಿತ್ ಮಾಳವಿಯಾ ಕೂಡ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕಿಡಿ ಕಾರಿದ್ದು, “ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭಯೋತ್ಪಾದಕ ಎಂದು ಕರೆದು, ಎಐಎಡಿಎಂಕೆ ಅವರೊಂದಿಗೆ ಹೇಗೆ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಖರ್ಗೆ ಸಾರ್ವಜನಿಕ ಚರ್ಚೆಯನ್ನು ಇಷ್ಟೊಂದು ಕೆಳಮಟ್ಟಕ್ಕೆ ಎಳೆದಿರುವುದು ಇದೇ ಮೊದಲಲ್ಲ. ಆದರೆ ಈ ಹೇಳಿಕೆಯೊಂದಿಗೆ ಅವರು ತಮ್ಮನ್ನು ಮಾತ್ರ ಕುಗ್ಗಿಸಿಕೊಂಡಿಲ್ಲ, ಇಡೀ ಕಾಂಗ್ರೆಸ್‌ನ ಮನಸ್ಥಿತಿ ಇದೇ ಎಂಬುದನ್ನು ಬಹಿರಂಗಪಡಿಸಿದ್ದಾರೆ” ಎಂದು ಟೀಕಿಸಿದ್ದಾರೆ.

ವಿವಾದಕ್ಕೀಡಾದ ನಂತರ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದ ಮಲ್ಲಿಕಾರ್ಜುನ ಖರ್ಗೆ, “ಪ್ರಧಾನಿಯನ್ನು ಭಯೋತ್ಪಾದಕ ಎಂದು ಕರೆಯುವ ಉದ್ದೇಶ ನನಗಿಲ್ಲ. ನಾನು ಆ ಅರ್ಥದಲ್ಲಿ ಮಾತನಾಡಿದ್ದಲ್ಲ. ಅವರು ಜನರನ್ನು ಮತ್ತು ರಾಜಕೀಯ ಪಕ್ಷಗಳನ್ನು ಯಾವಾಗಲೂ ಭಯಭೀತಗೊಳಿಸುತ್ತಾರೆ ಎಂಬುದು ನನ್ನ ಮಾತಿನ ತಾತ್ಪರ್ಯವಾಗಿತ್ತು. ಪ್ರಧಾನಿ ಮೋದಿ ಜನರನ್ನು ಮತ್ತು ರಾಜಕೀಯ ಪಕ್ಷಗಳನ್ನು ಭಯಭೀತಗೊಳಿಸುತ್ತಿದ್ದಾರೆ. ಅವರು ಭಯೋತ್ಪಾದಕ ಎಂದು ನಾನು ಹೇಳಲಿಲ್ಲ. ಮೋದಿ ಯಾವಾಗಲೂ ಬೆದರಿಕೆ ಹಾಕುತ್ತಾರೆ. ಇಡಿ, ಐಟಿ ಮತ್ತು ಸಿಬಿಐನಂತಹ ಸಂಸ್ಥೆಗಳು ಅವರ ಕೈಯಲ್ಲಿವೆ. ಅವರು ಗಡಿನಿರ್ಣಯವನ್ನೂ ತಮ್ಮ ಕೈಗೆ ತೆಗೆದುಕೊಳ್ಳಲು ಬಯಸುತ್ತಾರೆ ಎಂದು ಹೇಳಿದೆನಷ್ಟೇ” ಎಂದು ಸ್ಪಷ್ಟನೆ ನೀಡಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

SRH vs DC Playing XI: ಟಾಸ್ ಗೆದ್ದ ಡೆಲ್ಲಿ; ಉಭಯ ತಂಡಗಳಲ್ಲೂ ಬದಲಾವಣೆ – Kannada News | SRH vs DC Playing XI Sunrisers Hyderabad vs Delhi Capitals Today IPL 2026 match Confirmed playing 11 details with name in Kannada

ಐಪಿಎಲ್ 2026 ರ 31 ನೇ ಪಂದ್ಯದು ಸನ್‌ರೈಸರ್ಸ್ ಹೈದರಾಬಾದ್ ಮತ್ತು ದೆಹಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿವೆ. ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯುತ್ತಿದೆ. ಕಳೆದ ಎರಡು ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಸನ್‌ರೈಸರ್ಸ್ ಹೈದರಾಬಾದ್ ತನ್ನ ತವರಿನ ಪರಿಸ್ಥಿತಿಯ ಲಾಭ ಪಡೆಯಲು ಪ್ರಯತ್ನಿಸಲಿದೆ. ಎರಡೂ ತಂಡಗಳು ಪ್ರಸ್ತುತ ತಲಾ ಆರು ಅಂಕಗಳನ್ನು ಹೊಂದಿವೆ, ಆದರೆ ಸನ್‌ರೈಸರ್ಸ್ ಹೈದರಾಬಾದ್ ಉತ್ತಮ ನೆಟ್ ರನ್ ರೇಟ್ ಹೊಂದಿದ್ದು, ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ. ಇತ್ತ ಡೆಲ್ಲಿ ತಂಡ ಕಳೆದ ಪಂದ್ಯದಲ್ಲಿ ಬಲಿಷ್ಠ ಆರ್​ಸಿಬಿಯನ್ನು ಸೋಲಿಸಿದ ಆತ್ಮವಿಶ್ವಾಸದಲ್ಲಿ ಬೀಗುತ್ತಿದೆ. ಹೀಗಾಗಿ ಈ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

ಟಾಸ್ ಗೆದ್ದ ಡೆಲ್ಲಿ

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಅಕ್ಷರ್ ಪಟೇಲ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಇದರೊಂದಿಗೆ ಎರಡು ತಂಡಗಳ ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದೆ. ಅದರಂತೆ ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತನ್ನ ಪ್ಲೇಯಿಂಗ್​ 11ನಲ್ಲಿ ಒಂದು ಬದಲಾವಣೆ ಮಾಡಿದೆ. ಅಕಿಬ್ ನಬಿ ಬದಲಿಗೆ ನಿತೀಶ್ ರಾಣಾ ಆಡಲಿದ್ದಾರೆ. ಹಾಗೆಯೇ ಸನ್‌ರೈಸರ್ಸ್ ಹೈದರಾಬಾದ್ ಕೂಡ ತಮ್ಮ ಆಡುವ XI ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ.

ಮುಖಾಮುಖಿ ದಾಖಲೆ

ಇಲ್ಲಿಯವರೆಗೆ, ಈ ಎರಡೂ ತಂಡಗಳ ನಡುವೆ 26 ಪಂದ್ಯಗಳು ನಡೆದಿವೆ. ಅವುಗಳಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ 13 ಪಂದ್ಯಗಳನ್ನು ಗೆದ್ದಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ 11 ಪಂದ್ಯಗಳನ್ನು ಗೆದ್ದಿದೆ. ಒಂದು ಪಂದ್ಯ ಟೈ ಆಗಿದ್ದರೆ, ಇನ್ನೊಂದು ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ. ಹೀಗಾಗಿ ಮುಖಾಮುಖಿಯಲ್ಲಿ ಉಭಯ ತಂಡಗಳು ಸಮಬಲದ ಹೋರಾಟ ನೀಡಿವೆ ಎನ್ನಬಹುದು.

ಉಭಯ ತಂಡಗಳ ಪ್ಲೇಯಿಂಗ್ 11

ಡೆಲ್ಲಿ ಕ್ಯಾಪಿಟಲ್ಸ್: ಪಾತುಮ್ ನಿಸ್ಸಾಂಕ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸಮೀರ್ ರಿಜ್ವಿ, ನಿತೀಶ್ ರಾಣಾ, ಟ್ರಿಸ್ಟಾನ್ ಸ್ಟಬ್ಸ್, ಅಕ್ಷರ್ ಪಟೇಲ್ (ವಿಕೆಟ್ ಕೀಪರ್), ಡೇವಿಡ್ ಮಿಲ್ಲರ್, ಕುಲ್ದೀಪ್ ಯಾದವ್, ಮುಖೇಶ್ ಕುಮಾರ್, ಟಿ.ನಟರಾಜನ್, ಲುಂಗಿ ಎನ್‌ಗಿಡಿ.

ಸನ್​ರೈಸರ್ಸ್​ ಹೈದರಾಬಾದ್: ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಇಶಾನ್ ಕಿಶನ್ (ನಾಯಕ), ಹೆನ್ರಿಚ್ ಕ್ಲಾಸೆನ್, ಸಲೀಲ್ ಅರೋರಾ (ವಿಕೆಟ್ ಕೀಪರ್), ಅನಿಕೇತ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ಶಿವಂಗ್ ಕುಮಾರ್, ಹರ್ಷ್ ದುಬೆ, ಸಾಕಿಬ್ ಹುಸೇನ್, ಇಶಾನ್ ಮಾಲಿಂಗ.

Source link

SRH vs DC IPL 2026 Live Score: ಟಾಸ್ ಗೆದ್ದ ಡೆಲ್ಲಿ ಬೌಲಿಂಗ್ ಆಯ್ಕೆ – Kannada News | Sunrisers Hyderabad vs Delhi Capitals IPL 2026 Live Cricket Score SRH vs DC Match on 21st April latest news in Kannada

ಐಪಿಎಲ್ 2026 ರ 31 ನೇ ಪಂದ್ಯದು ಸನ್‌ರೈಸರ್ಸ್ ಹೈದರಾಬಾದ್ ಮತ್ತು ದೆಹಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿವೆ. ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಂದ್ಯ ಆರಂಭವಾಗಿದೆ. ಎರಡೂ ತಂಡಗಳು ತಲಾ 6 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಸಮಬಲ ಸಾಧಿಸಿವೆ. ಆದರೆ, ಉತ್ತಮ ರನ್ ರೇಟ್ ನಿಂದಾಗಿ ಹೈದರಾಬಾದ್ ನಾಲ್ಕನೇ ಸ್ಥಾನದಲ್ಲಿದೆ. ದೆಹಲಿ ತಂಡವು ತಮ್ಮ ನಾಲ್ಕನೇ ಗೆಲುವನ್ನು ಎದುರು ನೋಡುತ್ತಿದೆ. ಹೈದರಾಬಾದ್ ತಂಡವು ತವರು ನೆಲದಲ್ಲಿ ಸತತ ಮೂರನೇ ಗೆಲುವಿನ ಗುರಿಯನ್ನು ಹೊಂದಿದೆ.

Source link

‘ಜೈಲರ್ 2’ ಸಿನಿಮಾ ಮುಗಿಸಿದ ರಜನೀಕಾಂತ್, ಮುಂದೇನು? – Kannada News | Rajinikanth completes Jailer 2 movie shooting

ವಯಸ್ಸು 75 ದಾಟಿದ್ದರೂ ಈಗಲೂ ಒಂದರ ಹಿಂದೊಂದು ನಟಿಸುತ್ತಿದ್ದಾರೆ ಸೂಪರ್ ಸ್ಟಾರ್ ರಜನೀಕಾಂತ್ (Rajinikanth). ಒಂದರ ಹಿಂದೊಂದು ಹಿಟ್ ಸಿನಿಮಾಗಳನ್ನು ನೀಡುತ್ತಿದ್ದಾರೆ. 2023 ರಲ್ಲಿ ಬಿಡುಗಡೆ ಆಗಿದ್ದ ರಜನೀಕಾಂತ್ ನಟನೆಯ ‘ಜೈಲರ್’ ಸಿನಿಮಾ ಭಾರಿ ದೊಡ್ಡ ಹಿಟ್ ಆಗಿತ್ತು. ಸಿನಿಮಾದ ಹಾಡುಗಳು ಸಹ ಬ್ಲಾಕ್ ಬಸ್ಟರ್ ಎನಿಸಿಕೊಂಡಿದ್ದವು. ಇದೀಗ ಅದೇ ನಿರ್ದೇಶಕನೊಟ್ಟಿಗೆ ‘ಜೈಲರ್ 2’ ಸಿನಿಮಾ ಆರಂಭಿಸಿದ್ದ ರಜನೀಕಾಂತ್ ಇದೀಗ ಸಿನಿಮಾದ ಶೂಟಿಂಗ್ ಮುಗಿಸಿದ್ದಾರೆ.

ಕಳೆದ ವರ್ಷ ಆರಂಭವಾಗಿದ್ದ ‘ಜೈಲರ್ 2’ ಸಿನಿಮಾದ ಶೂಟಿಂಗ್ ನಿನ್ನೆಯಷ್ಟೆ ಮುಗಿದಿದೆ. ರಜನೀಕಾಂತ್, ನಿರ್ದೇಶಕ ನೆಲ್ಸನ್ ಸೇರಿದಂತೆ ಇಡೀ ಚಿತ್ರತಂಡ ಕೇಕ್ ಕತ್ತರಿಸಿ ಶೂಟಿಂಗ್ ಮುಗಿದಿದ್ದನ್ನು ಸಂಭ್ರಮಿಸಿದ್ದಾರೆ. ಸಿನಿಮಾದ ಚಿತ್ರೀಕರಣ, ಕೇರಳ, ಹೈದರಾಬಾದ್, ಚೆನ್ನೈಗಳಲ್ಲಿ ನಡೆದಿದ್ದು, ಕರ್ನಾಟಕದಲ್ಲಿಯೂ ಕೆಲ ದೃಶ್ಯಗಳ ಚಿತ್ರೀಕರಣವನ್ನು ಮಾಡಲಾಗಿದೆ. ರಜನೀಕಾಂತ್ ಜೊತೆಗೆ ಹೊರಾಂಗಣ ಚಿತ್ರೀಕರಣ ಕಷ್ಟ ಎಂದು ಹಲವು ನಿರ್ದೇಶಕರುಗಳು ಸೆಟ್​​ಗಳಲ್ಲಿಯೇ ಚಿತ್ರೀಕರಿಸುತ್ತಾರೆ. ಆದರೆ ನೆಲ್ಸನ್, ‘ಜೈಲರ್ 2’ ಸಿನಿಮಾದ ಬಹುಭಾಗವನ್ನು ಹೊರಾಂಗಣದಲ್ಲಿಯೇ ಚಿತ್ರೀಕರಿಸಿದ್ದಾರೆ ಎನ್ನಲಾಗುತ್ತಿದೆ.

‘ಜೈಲರ್’ ಸಿನಿಮಾ ತನ್ನ ಅದ್ಧೂರಿ ಕ್ಯಾಮಿಯೋಗಳಿಂದ, ಅತಿಥಿ ಪಾತ್ರಗಳಿಂದ ಭಾರಿ ದೊಡ್ಡ ಹಿಟ್ ಆಗಿತ್ತು. ಶಿವರಾಜ್ ಕುಮಾರ್, ಮೋಹನ್​​ಲಾಲ್, ತಮನ್ನಾ ಇನ್ನೂ ಹಲವರು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಈಗ ‘ಜೈಲರ್ 2’ನಲ್ಲೂ ಸಹ ಹಲವು ಅತಿಥಿ ಪಾತ್ರಗಳು ಇದ್ದು, ಅವುಗಳಲ್ಲಿ ಖ್ಯಾತ ನಟರುಗಳು ನಟಿಸಿದ್ದಾರೆ ಎನ್ನಲಾಗುತ್ತಿದೆ. ಶಿವರಾಜ್ ಕುಮಾರ್, ಮೋಹನ್​​ಲಾಲ್ ಜೊತೆಗೆ ಬಾಲಿವುಡ್​​ನ ಶಾರುಖ್ ಖಾನ್ ಸಹ ನಟಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಅದಿನ್ನೂ ಖಾತ್ರಿ ಆಗಿಲ್ಲ. ತೆಲುಗಿನ ನಟ ಬಾಲಕೃಷ್ಣ ಸಹ ನಟಿಸಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ.

ಇದನ್ನೂ ಓದಿ:ರಜನೀಕಾಂತ್​​ಗೆ ಕೈಕೊಟ್ಟ ಶಾರುಖ್ ಖಾನ್, ‘ಜೈಲರ್ 2’ಗೆ ನೋ?

‘ಜೈಲರ್ 2’ ಸಿನಿಮಾನಲ್ಲಿ ರಜನೀಕಾಂತ್ ಜೊತೆಗೆ ರಮ್ಯಾಕೃಷ್ಣ, ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಇನ್ನೂ ಕೆಲವರಿದ್ದಾರೆ. ಸಿನಿಮಾಕ್ಕೆ ಸಂಗೀತ ನೀಡಿರುವುದು ಅನಿರುದ್ಧ್ ರವಿಚಂದ್ರನ್, ಸಿನಿಮಾಕ್ಕೆ ಸನ್ ನೆಟ್​​ವರ್ಕ್ಸ್​ನ ಕಲಾನಿಧಿ ಮಾರನ್ ಬಂಡವಾಳ ಹೂಡಿದ್ದಾರೆ. ಸಿನಿಮಾ ಆಗಸ್ಟ್ ತಿಂಗಳಲ್ಲಿ ಬಿಡಗುಡೆ ಆಗುವ ಸಾಧ್ಯತೆ ಇದೆ.

‘ಜೈಲರ್ 2’ ಸಿನಿಮಾದ ಚಿತ್ರೀಕರಣ ಮುಗಿಸಿರುವ ರಜನೀಕಾಂತ್ ಅವರು ಕಮಲ್ ಹಾಸನ್ ನಿರ್ಮಾಣ ಮಾಡುತ್ತಿರುವ ಹೊಸ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಆದರೆ ಆ ಸಿನಿಮಾದ ನಿರ್ದೇಶಕ ಇನ್ನೂ ಖಾತ್ರಿ ಆಗಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಅದಾದ ಬಳಿಕ ಕಮಲ್ ಮತ್ತು ರಜನೀಕಾಂತ್ ಒಟ್ಟಿಗೆ ಮತ್ತೊಂದು ಸಿನಿಮಾನಲ್ಲಿ ನಟಿಸಲಿದ್ದಾರಂತೆ. ಆ ಸಿನಿಮಾವನ್ನು ನೆಲ್ಸನ್ ಅವರೇ ನಿರ್ದೇಶನ ಮಾಡಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪಹಲ್ಗಾಮ್ ಕರಾಳ ನೆನಪಿಗೆ 1 ವರ್ಷ: ದಾಳಿಯಲ್ಲಿ ಪ್ರಾಣಬಿಟ್ಟ ಬೆಂಗಳೂರಿನ ಭರತ್ ತಂದೆಯ ನೋವಿನ ಮಾತು – Kannada News | 1 year for pahalgam terror attack: Bengaluru Bharath Bhushan Father Shares his grief

ಬೆಂಗಳೂರು, ಏಪ್ರಿಲ್ 21):  ಪುಲ್ವಾಮ ಮಾತ್ರವಲ್ಲ ಪಹಲ್ಗಾಮ್ ದಾಳಿ (pahalgam terror attack) ಭಾರತದ ಇತಿಹಾಸದಲ್ಲಿ ಅತ್ಯಂತ ಕರಾಳ ದಿನ. ಮಿನಿ ಸ್ವಿಟ್ಜರ್​ಲ್ಯಾಂಡ್​ ಎಂದೇ ಕರೆಯುವ ಜಮ್ಮು ಮತ್ತು ಕಾಶ್ಮೀರದ (Jammu And Kashmir) ಅನಂತನಾಗ್ ಜಿಲ್ಲೆಯ ಪಹಲ್ಗಾಮ್​​​ ದಾಳಿಗೆ ನಾಳೆಗೆ (ಏಪ್ರಿಲ್ 22) ಒಂದು ವರ್ಷ. ಕುಟುಂಬಸ್ಥರ ಜೊತೆ ಪ್ರಕೃತಿ ಸೌಂದರ್ಯದಲ್ಲಿ ಎಂಜಾಯ್ ಮಾಡುತ್ತಿದ್ದವರ ಮೇಲೆ ಭಯೋತ್ದಾದಕರು ಗುಂಡಿನ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಕರ್ನಾಟಕದ ಇಬ್ಬರು ಸೇರಿದಂತೆ 26 ಮಂದಿ ದುರ್ಮರಣಕ್ಕೀಡಾಗಿದ್ದರು. ಹೌದು… ಬೆಂಗಳೂರಿನಲ್ಲಿ ವಾಸವಿದ್ದ ಹಾವೇರಿಯ ಭರತ್ ಭೂಷಣ್, ಪಹಲ್ಗಾಮ್ ಗೆ ಪ್ರವಾಸಕ್ಕೆ ತೆರಳಿದ್ದಾಗ ಭಯೋತ್ಪಾದರಕ ನೀಚ ಕೃತ್ಯಕ್ಕೆ ಬಲಿಯಾಗಿದ್ದರು. ಭರತ್ ತನ್ನ ಮೂರು ವರ್ಷದ ಮಗನನ್ನ ಕೈಯಲ್ಲಿ ಹಿಡಿದುಕೊಂಡು ನಿಂತಿದ್ದ ವೇಳೆ ಮಗುವನ್ನ ಕೆಳಗೆ ಇಳಿಸಿದ ಉಗ್ರರು, ಪತ್ನಿ ಮುಂದೆಯೇ ಭರತ್ ತಲೆಗೆ ಗುಂಡು ಹಾರಿಸಿ ಹತ್ಯೆ ಗೈದಿದ್ದರು. 40 ವರ್ಷಗಳಿಂದ ಕುಟುಂಬದಲ್ಲಿದ್ದ ಭರತ್​​​​​​​​ ಭೂಷಣ್ ಈಗ ಒಂದು ವರ್ಷದಿಂದ ಇಲ್ಲ ಎನ್ನುವುದನ್ನು ಕಲ್ಪಿಸಿಕೊಳ್ಳಲು ಪೋಷಕರಿಗೆ ಸಾಧ್ಯವಾಗುತ್ತಿಲ್ಲ. ಈ ಸಂಬಂಧ ಟಿವಿ9 ಕನ್ನಡದ ಜೊತೆಗೆ ತಂದೆ ಚೆನ್ನವೀರಪ್ಪ ತಾಯಿ ಶೈಲಾ ಕುಮಾರಿ ನೋವು ಹಂಚಿಕೊಂಡಿದ್ದಾರೆ.

ಭರತ್ ಭೂಷಣ್ ಕುಟುಂಬ ಆರ್.ಆರ್ ನಗರ ವಿಧಾನಸಭಾ ಕ್ಷೇತದ ಮತ್ತಿಕೆರೆಯ ಗೋಕುಲದಲ್ಲಿ ವಾಸವಾಗಿದ್ದಾರೆ. ಭರತ್ ಭೂಷಣ್ ತಂದೆ- ಚೆನ್ನವೀರಪ್ಪ ಅವರಿಗೆ 76 ವರ್ಷ, ತಾಯಿ ಶೈಲಾ ಕುಮಾರಿ ಅವರಿಗೆ 70 ವರ್ಷ. ಈ ವಯಸ್ಸಿನಲ್ಲಿ ಮಗನನ್ನು ಕಳೆದುಕೊಂಡು ಇಬ್ಬರು ಹಿರಿಯ ಜೀವಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ನೋಡಿ: Pahelgam Terrorist Attack: ಶವಪೆಟ್ಟಿಗೆಯಲ್ಲಿ ಪತಿ ಭರತ್ ಭೂಷಣ್ ದೇಹ ನೋಡುತ್ತಲೇ ಕುಸಿದುಬಿದ್ದ ಪತ್ನಿ ಸುಜಾತಾ

ಇನ್ನೂ ಭರತ್ ಭೂಷಣ್ ತಂದೆ ಚೆನ್ನವೀರಪ್ಪ ಅವರಿಗೆ ಇಬ್ಬರು ಮಕ್ಕಳಿದ್ದು, ಭರತ್ ಭೂಷಣ್ ಎರಡನೇ ಪುತ್ರ. ಭರತ್ ಭೂಷಣ್ ಗೆ ಸದ್ಯ 41 ವರ್ಷ ವಯಸ್ಸಾಗಿತ್ತು.ಬಿಇ ಮೆಕಾನಿಕಲ್, ಎಂಬಿಎ ಪದವಿ ಪಡೆದಿದ್ದ, ಹೆಂಡತಿ ಡಾ. ಸುಜಾತಾ ಎಂಬಿಬಿಎಸ್. ಎಂಡಿ ಮಾಡಿದ್ದು, ಭರತ್ ಗೆ 3.5 ವರ್ಷದ ಅವೀಶ್ ಸೂರ್ಯಾಂಶ್ ಅನ್ನೋ ಮಗನಿದ್ದಾನೆ. ಈ ತಿಂಗಳು ಏಪ್ರಿಲ್ 11 ರಂದು ಭರತ್ ಭೂಷಣ್ ತೀರಿಕೊಂಡ ನಕ್ಷತ್ರದ ಪ್ರಕಾರ ಕುಟುಂಬಸ್ಥರು ವರ್ಷದ ತಿಥಿ ಕಾರ್ಯ ಮಾಡಿದ್ದಾರೆ. ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ, ಜಮ್ಮ- ಕಾಶ್ಮೀರ ಸರ್ಕಾರ ಮತ್ತು ಸಂಘ ಸಂಸ್ಥೆಗಳು ಸೇರಿ ಒಟ್ಟು- 35 ಲಕ್ಷದಷ್ಟು ಪರಿಹಾರ ನೀಡಿದ್ರಂತೆ.

ಒಟ್ಟಿನಲ್ಲಿ ಜಮ್ಮ-ಕಾಶ್ಮೀರದ ಪಹಲ್ಗಾಮ್ ದಾಳಿಗೆ ನಾಳೆಗೆ ಒಂದು ವರ್ಷವಾಗ್ತಿದ್ದು, ಉಗ್ರರ ದಾಳಿಗೆ ಬಲಿಯಾದ ಬೆಂಗಳೂರಿನ ಕನ್ನಡಿಗ ಭರತ್ ಭೂಷಣ್ ತಂದೆ-ತಾಯಿ ಭರತ್ ಇಲ್ಲದೆ ಕಣ್ಣೀರಲ್ಲಿ ಕೈತೊಳೆಯುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

CRPF Recruitment 2026: CRPF ನೇಮಕಾತಿ; 9,000ಕ್ಕೂ ಹೆಚ್ಚು ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ – Kannada News | CRPF Constable Recruitment 2026: 9175 Technical & Tradesman Vacancies – Apply Now!

ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನImage Credit source: gemini ai

ದೇಶದ ಪ್ರತಿಷ್ಠಿತ ಭದ್ರತಾ ಪಡೆಯಾದ ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಕಾನ್ಸ್‌ಟೇಬಲ್ (ತಾಂತ್ರಿಕ ಮತ್ತು ಟ್ರೇಡ್ಸ್‌ಮನ್) ಹುದ್ದೆಗಳ ಭರ್ತಿಗಾಗಿ ಬೃಹತ್ ನೇಮಕಾತಿ ಅಭಿಯಾನವನ್ನು ಕೈಗೊಂಡಿದೆ. ಒಟ್ಟು 9,175 ಖಾಲಿ ಹುದ್ದೆಗಳಿದ್ದು, ಇದರಲ್ಲಿ 9,096 ಹುದ್ದೆಗಳು ಪುರುಷರಿಗೆ ಹಾಗೂ 79 ಹುದ್ದೆಗಳು ಮಹಿಳಾ ಅಭ್ಯರ್ಥಿಗಳಿಗೆ ಮೀಸಲಾಗಿವೆ. ದೇಶಸೇವೆಯೊಂದಿಗೆ ಉತ್ತಮ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವವರಿಗೆ ಇದು ಸುಸಮಯ.

ಅರ್ಜಿ ಸಲ್ಲಿಕೆ ಮತ್ತು ಪ್ರಮುಖ ದಿನಾಂಕಗಳು:

ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಈಗಾಗಲೇ ಏಪ್ರಿಲ್ 20 ರಿಂದ ಪ್ರಾರಂಭವಾಗಿದೆ. ಆಸಕ್ತ ಅಭ್ಯರ್ಥಿಗಳು CRPF ನ ಅಧಿಕೃತ ವೆಬ್‌ಸೈಟ್ rect.crpf.gov.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಮೇ 19 ಕೊನೆಯ ದಿನಾಂಕವಾಗಿದೆ. ಕೊನೆಯ ಕ್ಷಣದ ಗಡಿಬಿಡಿಯನ್ನು ತಪ್ಪಿಸಲು ಅಭ್ಯರ್ಥಿಗಳು ಆದಷ್ಟು ಬೇಗ ಅರ್ಜಿ ಸಲ್ಲಿಸುವುದು ಸೂಕ್ತ.

ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ:

ವಿದ್ಯಾರ್ಹತೆ:

ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಕನಿಷ್ಠ 10 ನೇ ತರಗತಿ (SSLC) ಉತ್ತೀರ್ಣರಾಗಿರಬೇಕು. ಹುದ್ದೆಗಳಿಗೆ ಅನುಗುಣವಾಗಿ ಸಂಬಂಧಿತ ವ್ಯಾಪಾರದಲ್ಲಿ ಐಟಿಐ (ITI) ಪ್ರಮಾಣಪತ್ರ ಅಥವಾ ಕೌಶಲ್ಯದ ಅಗತ್ಯವಿರುತ್ತದೆ. ಚಾಲಕ (Driver) ಹುದ್ದೆಗೆ ಭಾರಿ ಮೋಟಾರ್ ವಾಹನ ಚಾಲನಾ ಪರವಾನಗಿ (HMV License) ಕಡ್ಡಾಯವಾಗಿದೆ. ಮೋಟಾರ್ ಮೆಕ್ಯಾನಿಕ್ ಹುದ್ದೆಗಳಿಗೆ ಐಟಿಐ ಜೊತೆಗೆ ಕೆಲಸದ ಅನುಭವದ ಅಗತ್ಯವಿದೆ.

ವಯೋಮಿತಿ:

ಚಾಲಕ ಹುದ್ದೆಗೆ 21 ರಿಂದ 27 ವರ್ಷಗಳ ವಯೋಮಿತಿ ನಿಗದಿಪಡಿಸಲಾಗಿದೆ. ಉಳಿದ ಟ್ರೇಡ್ಸ್‌ಮನ್ ಹುದ್ದೆಗಳಿಗೆ (ಟೈಲರ್, ಕುಕ್, ಬಾರ್ಬರ್, ಇತ್ಯಾದಿ) 18 ರಿಂದ 23 ವರ್ಷದೊಳಗಿರಬೇಕು. ಸರ್ಕಾರದ ನಿಯಮಗಳ ಪ್ರಕಾರ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

ಇದನ್ನೂ ಓದಿ: ಕೆಲಸಕ್ಕೆ ಸೇರಿದ ಮೊದಲ ದಿನವೇ ವೈದ್ಯೆ ರಾಜೀನಾಮೆ; ವೈದ್ಯಕೀಯ ಲೋಕದ ಕರಾಳ ಮುಖ ಅನಾವರಣ!

ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?

CRPF ಅಭ್ಯರ್ಥಿಗಳನ್ನು ವಿವಿಧ ಹಂತಗಳಲ್ಲಿ ಪರೀಕ್ಷಿಸಿ ಆಯ್ಕೆ ಮಾಡುತ್ತದೆ:

ಮೊದಲು ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆ ನಡೆಯುತ್ತದೆ. ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ದೈಹಿಕ ಗುಣಮಟ್ಟ ಮತ್ತು ದಕ್ಷತೆ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ನಂತರ ಆಯಾ ಕೆಲಸದ ಕುರಿತಾದ ಪ್ರಾಯೋಗಿಕ ಪರೀಕ್ಷೆ ನಡೆಯುತ್ತದೆ. ಅಂತಿಮವಾಗಿ ದಾಖಲೆಗಳ ಪರಿಶೀಲನೆ ಮತ್ತು ವೈದ್ಯಕೀಯ ತಪಾಸಣೆಯ ನಂತರ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.

ವೇತನ ಶ್ರೇಣಿ:

ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳು ಆಕರ್ಷಕ ವೇತನವನ್ನು ಪಡೆಯುತ್ತಾರೆ. ವೇತನ ಶ್ರೇಣಿ-3 ರ ಅಡಿಯಲ್ಲಿ ಮಾಸಿಕ 21,700 ರೂ. ನಿಂದ 69,100 ರೂ. ವರೆಗೆ ಸಂಬಳ ಮತ್ತು ಸರ್ಕಾರದ ಇತರ ಭತ್ಯೆಗಳು ಲಭ್ಯವಿರುತ್ತವೆ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link