All posts by nagaraj11081993

Viral Video: ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಸಾಕು ನಾಯಿಯನ್ನು ಕಾರಿನಿಂದ ಹೊರಗೆಸೆದ ಚಾಲಕ – Kannada News | Washington: Cruelty Caught in Motion, Dog Hurled From Car During Police Chase

ವಾಷಿಂಗ್ಟನ್, ಜನವರಿ 14: ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಕಾರು ಚಾಲಕ(Driver)ನೊಬ್ಬ ವೇಗವಾಗಿ ಚಲಿಸುತ್ತಿದ್ದ ಕಾರಿನಿಂದ ಸಾಕು ನಾಯಿಯನ್ನು ಹೊರಗೆಸೆದಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ವಾಷಿಂಗ್ಟನ್‌ನ ಪಿಯರ್ಸ್ ಕೌಂಟಿಯಲ್ಲಿ ನಡೆದಿದೆ. ಈ ಘಟನೆ ಜನವರಿ 6ರಂದು ನಡೆದಿದೆ. ರಾತ್ರಿಹೊತ್ತು ಎಂದಿನಂತೆ ಸಾಮಾನ್ಯವಾಗಿ ಸಂಚಾರ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು.

ಆಗ ವೇಗವಾಗಿ ಕಾರೊಂದು ಬಂದಿತ್ತು, ಪೊಲೀಸರು ಕೈ ಅಡ್ಡ ಮಾಡಿದರೂ ಕಾರು ನಿಲ್ಲಲೇ ಇಲ್ಲ, ಪೊಲೀಸರಿಗೆ ಅನುಮಾನ ಮೂಡಿ ಆತನನ್ನು ಚೇಸ್ ಮಾಡಿದ್ದಾರೆ. ಆಗ ವೇಗವಾಗಿ ಚಲಿಸುತ್ತಿದ್ದ ಕಾರಿನಿಂದ ಸಾಕು ನಾಯಿಯನ್ನು ಚಾಲಕ ಕೆಳಗೆ ಎಸೆದಿದ್ದಾನೆ. ಆತ ಮದ್ಯಪಾನ ಮಾಡಿದ್ದ ಎನ್ನಲಾಗಿದೆ.
ಪಿಯರ್ಸ್ ಕೌಂಟಿ ಶೆರಿಫ್ ಕಚೇರಿ (PCSO) ಪ್ರಕಾರ, ನೋಂದಣಿ ಅವಧಿ ಮುಗಿದ ಕಾರಣ ರಾತ್ರಿ 12.45ರ ಸುಮಾರಿಗೆ ವಾಹನವನ್ನು ನಿಲ್ಲಿಸಲು ಪ್ರಯತ್ನಿಸಿದರು, ಆದರೆ ಚಾಲಕ ನಿಲ್ಲಲು ಸಿದ್ಧನಿರಲಿಲ್ಲ.

ಮತ್ತಷ್ಟು ಓದಿ: Video: ಅಪಹರಣಕಾರರಿಗೆ ಸಿಗುವ ಮುನ್ನವೇ ಸಮಯಪ್ರಜ್ಞೆಯಿಂದ ಮಗಳ ಕಾಪಾಡಿದ ತಾಯಿ

ಚಾಲಕ ವೇಗವನ್ನು ಹೆಚ್ಚಿಸಿ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಅಧಿಕಾರಿಗಳು ಆತನನ್ನು ಬೆನ್ನಟ್ಟಲು ಮುಂದಾದರು. ವಾಹನವು ವೇಗವನ್ನು ಕಡಿಮೆ ಮಾಡಲು ವಿಫಲವಾಗಿ, ಡಿವೈಡರ್​ಗೆ ಗುದ್ದಿದೆ, ಕಾರಿನ ಗಾಜು ಪುಡಿ ಪುಡಿಯಾಗುವಷ್ಟು ತೀವ್ರವಾಗಿತ್ತು ಈ ಅಪಘಾತ.ನಾಯಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದೆ.

ವಿಡಿಯೋ

ಕಾರಿನೊಳಗೆ ಮತ್ತೊಂದು ನಾಯಿಯು ಕೂಡ ಇತ್ತು, ಆದರೆ ಅಪಘಾತದಲ್ಲಿ ಅದಕ್ಕೇನು ತೊಂದರೆಯಾಗಿಲ್ಲ.ದೊಡ್ಡ ನಾಯಿಯನ್ನು ಅಂತಿಮವಾಗಿ ಅದರ ಮಾಲೀಕರೊಟ್ಟಿಗೆ ಸೇರಿಸಲಾಯಿತು. 39 ವರ್ಷದ ವ್ಯಕ್ತಿಯೊಬ್ಬರು ಚಾಲನೆ ಮಾಡುತ್ತಿದ್ದರು ಮತ್ತು 28 ವರ್ಷದ ಮಹಿಳೆಯೊಬ್ಬರು ಪ್ರಯಾಣಿಕರ ಸೀಟಿನಲ್ಲಿ ಇದ್ದರು. ಪರವಾನಗಿ ಇಲ್ಲದೆ ವಾಹನ ಚಾಲನ, ಡ್ರಂಕ್ ಆ್ಯಂಡ್ ಡ್ರೈವ್, ಅಪಾಯಕಾರಿ ಚಾಲನೆ ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ. ಪ್ರಾಣಿ ಹಿಂಸೆ ಆರೋಪವನ್ನು ಎದುರಿಸುತ್ತಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಶಿವಮೊಗ್ಗ: ತೀರ್ಥಹಳ್ಳಿ ಬಳಿ ಕೆಎಸ್‌ಆರ್‌ಟಿಸಿ ಬಸ್, ಸ್ವಿಫ್ಟ್ ಕಾರು ಮುಖಾಮುಖಿ ಡಿಕ್ಕಿ, ಮೂವರು ಸ್ಥಳದಲ್ಲೇ ಸಾವು – Kannada News | Three Members of Same Family from Sringeri Killed in Horrific Road Accident Near Thirthahalli, Shivamogga

ಶಿವಮೊಗ್ಗ, ಜನವರಿ 14: ಶಿವಮೊಗ್ಗ (Shivamogga) ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಭಾರತೀಪುರ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ (Accident) ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್ ಮತ್ತು ಸ್ವಿಫ್ಟ್ ಕಾರು ಮುಖಾಮುಖಿ ಡಿಕ್ಕಿಯಾಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಮಕ್ಕಳು ಸೇರಿದಂತೆ ಮೂವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಮೃತರನ್ನು ರಿಹಾನ್ (15), ರಾಹಿಲ್ (9) ಮತ್ತು ಫಾತಿಮಾ (76) ಎಂದು ಗುರುತಿಸಲಾಗಿದೆ. ಇವರು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಮೂಲದ ನಿವಾಸಿಗಳು ಎಂದು ತಿಳಿದುಬಂದಿದೆ.

ಅಪಘಾತದಲ್ಲಿ ಕಾರು ಚಾಲಕ ಸೇರಿದಂತೆ ಇನ್ನೂ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮಾಹಿತಿ ಪ್ರಕಾರ, ಕಾರಿನಲ್ಲಿ ಒಂದೇ ಕುಟುಂಬದ ಆರು ಮಂದಿ ಪ್ರಯಾಣಿಸುತ್ತಿದ್ದರು. ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ನಡೆದ ಮದುವೆ ಸಮಾರಂಭಕ್ಕೆ ತೆರಳಿ, ಮದುವೆ ಮುಗಿಸಿಕೊಂಡು ಶೃಂಗೇರಿಗೆ ವಾಪಸ್ಸಾಗುವ ವೇಳೆ ಈ ದುರ್ಘಟನೆ ಸಂಭವಿಸಿದೆ.

ಅಪಘಾತದ ತೀವ್ರತೆಯಿಂದ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸ್ಥಳದಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತು. ವಿಷಯ ತಿಳಿದ ತಕ್ಷಣ ತೀರ್ಥಹಳ್ಳಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಅಪಘಾತದ ಕಾರಣಗಳ ಕುರಿತು ತನಿಖೆ ಮುಂದುವರಿದಿದೆ.

(ಮಾಹಿತಿ ಅಪ್​ಡೇಟ್ ಆಗಲಿದೆ)

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟೀಕೆ ತಾಳಲಾರದೆ ಇನ್​​ಸ್ಟಾ ಡಿಲೀಟ್ ಮಾಡಿದ ‘ಟಾಕ್ಸಿಕ್’ ಟೀಸರ್ ನಟಿ? – Kannada News | Beatriz taufenbach Deletes Instagram Over Hate Messages Over Toxic Teaser Controversy

‘ಟಾಕ್ಸಿಕ್’ ಸಿನಿಮಾದ ಟೀಸರ್​ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಟೀಸರ್​​ನಲ್ಲಿ ಓರ್ವ ನಟಿ ಬರುತ್ತಾರೆ. ಅವರು ಕಾರಿನಲ್ಲಿ ಬೋಲ್ಡ್​ ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಆ ನಟಿಯ ಹೆಸರು ನಟೇಲಿ ಬರ್ನ್ ಎನ್ನಲಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ್ದ ನಿರ್ದೇಶಕಿ ಗೀತು ಮೋಹನ್​​ದಾಸ್ ಅವರು, ಕಾರಿನಲ್ಲಿದ್ದ ನಟಿ ಬಿಯಾತ್ರೀಜ್ ಟಾಫೆಬಾಕ್ ಎಂದು ಸ್ಪಷ್ಟನೆ ನೀಡಿದ್ದರು. ಆ ಬಳಿಕ ಬಿಯಾತ್ರೀಜ್ ಟಾಫೆಬಾಕ್​​ಗೆ ಹೇಟ್​ ಮೆಸೇಜ್​​ಗಳು ತಲುಪಿದ್ದವು. ಇದರಿಂದ ಬೇಸರ ಗೊಂಡಿರೋ ಬಿಯಾತ್ರೀಜ್ ಟಾಫೆಬಾಕ್ ಇನ್​​​ಸ್ಟಾ ಖಾತೆಯನ್ನು ತಾತ್ಕಾಲಿಕವಾಗಿ ಡಿಲೀಟ್ ಮಾಡಿದ್ದಾರೆ.

ನಟೇಲಿ ಬರ್ನ್ ಮೂಲತಃ ಉಕ್ರೇನ್​ನವರು. ಆದರೆ, ಅವರು ಹಾಲಿವುಡ್​ನ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ನಿರ್ಮಾಪಕಿ ಕೂಡ ಹೌದು. ‘ಟಾಕ್ಸಿಕ್’ ಸಿನಿಮಾದಲ್ಲಿ ಇವರು ನಟಿಸಿದ್ದಾರೆ ಎನ್ನಲಾಗಿತ್ತು. ಆದರೆ, ಕಾರಿನ ದೃಶ್ಯದಲ್ಲಿ ಇದ್ದವರು ಇವರಲ್ಲ ಎಂಬ ಸ್ಪಷ್ಟನೆ ಸಿಕ್ಕಿತು. ಆ ಬಳಿಕ ಬಿಯಾತ್ರೀಜ್ ಟಾಫೆಬಾಕ್ ಅವರಿಗೆ ಸಾಕಷ್ಟು ಸಂದೇಶಗಳು ಹೋಗಿವೆ. ರಿಕ್ವೆಸ್ಟ್​​ಗಳು ಕೂಡ ದೊಡ್ಡ ಮಟ್ಟದಲ್ಲೇ ತಲುಪಿದೆ.

ಈ ವಿಷಯಗಳಿಂದ ಬಿಯಾತ್ರೀಜ್ ಟಾಫೆಬಾಕ್ ಬೇಸರಗೊಂಡರೇ ಎನ್ನುವ ಪ್ರಶ್ನೆ ಮೂಡಿದೆ. ಹಾಲಿವುಡ್ ಸಿನಿಮಾಗಳಲ್ಲಿ ಬೋಲ್ಡ್ ದೃಶ್ಯ ಮಾಡಿದರೆ ಯಾರೂ ಅದನ್ನು ಟೀಕಿಸೋದಿಲ್ಲ. ಆದರೆ, ಕನ್ನಡ ಸಿನಿಮಾಗಳಲ್ಲಿ ಈ ರೀತಿಯ ದೃಶ್ಯ ಕಂಡಾಗ ಕೆಲವರಿಗೆ ಅದನ್ನು ಅರಗಿಸಿಕೊಳ್ಳೋಕೆ ಸಾಧ್ಯವಾಗಿಲ್ಲ. ಹೀಗಾಗಿ, ಟೀಸರ್​​ನ ಹಾಗೂ ಟೀಸರ್​​​ನಲ್ಲಿ ನಟಿಸಿದ ಕಲಾವಿದರನ್ನು ಟೀಕಿಸಲಾಗುತ್ತಿದೆ. ಬಿಯಾತ್ರೀಜ್ ಟಾಫೆಬಾಕ್ ಅವರನ್ನು ಕೂಡ ಟೀಕಿಸಲಾಯಿತು. ಈ ಬೆಳವಣಿಗೆ ಬಿಯಾತ್ರೀಜ್ ಟಾಫೆಬಾಕ್ ಬೇಸರ ತಂದಿರಬಹುದು. ಇದರಿಂದ ಅವರು ತಾತ್ಕಾಲಿಕವಾಗಿ ಖಾತೆಯನ್ನು ಡಿಆ್ಯಕ್ಟೀವೇಟ್ ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ‘ಅದಕ್ಕೂ ನಮಗೂ ಸಂಬಂಧವಿಲ್ಲ’; ‘ಟಾಕ್ಸಿಕ್’ ಟೀಸರ್ ದೂರಿಗೆ ಸೆನ್ಸಾರ್ ಮಂಡಳಿಯ ಪ್ರತಿಕ್ರಿಯೆ

‘ಟಾಕ್ಸಿಕ್’ ಸಿನಿಮಾದ ನಿರ್ದೇಶಕಿ ಗೀತು ಮೋಹನ್​​ದಾಸ್, ‘ಟಾಕ್ಸಿಕ್’ ಸಿನಿಮಾ ಟೀಸರ್​​ನಲ್ಲಿ ಇದ್ದ ನಟಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪರಿಚಯಿಸಿದ್ದರು. ಟೀಸರ್​​ನಲ್ಲಿರುವುದು ನಟೇಲಿ ಬರ್ನ್ ಅಲ್ಲ ಬದಲಿಗೆ ನಟಿ ಬಿಯಾತ್ರೀಜ್ ಟಾಫೆಬಾಕ್ ಎಂದು ಹೇಳಿದ್ದರು. ನಟಿಯ ಚಿತ್ರ ಹಂಚಿಕೊಂಡಿರುವ ಗೀತು ಮೋಹನ್​​ದಾಸ್, ‘ಈಕೆಯೇ ನನ್ನ ಸಿಮೆಟ್ರಿ (ಸ್ಮಶಾನದ) ಹುಡುಗಿ’ ಎಂದಿದ್ದರು. ಬಿಯಾತ್ರೀಜ್ ಟಾಫೆಬಾಕ್ ಇನ್​​ಸ್ಟಾಗ್ರಾಂ ಖಾತೆಯನ್ನು ಪ್ರೈವೇಟ್ ಆಗಿ ಇಡಲಾಗಿತ್ತು. ಈಗ ಅದು ಡಿಲೀಟ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 8:14 am, Wed, 14 January 26

Source link

ಸಚಿನ್​ರ ಸಾರ್ವಕಾಲಿಕ ದಾಖಲೆ ಮುರಿಯಲು ವಿರಾಟ್ ಕೊಹ್ಲಿ ಇನ್ನೆಷ್ಟು ರನ್​​ಗಳಿಸಬೇಕು? – Kannada News | How many runs does Virat Kohli need to break Sachin’s record

ದಾಖಲೆಗಳ ಸರದಾರ ವಿರಾಟ್ ಕೊಹ್ಲಿ (Virat Kohli) ಹೆಸರಿಗೆ ಮತ್ತೊಂದು ದಾಖಲೆ ಸೇರ್ಪಡೆಯಾಗಿದೆ. ಈ ದಾಖಲೆಯೊಂದಿಗೆ ಕಿಂಗ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​​ನ ರನ್ ಸರದಾರರ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿದ್ದಾರೆ. ಅದು ಕೂಡ ಶ್ರೀಲಂಕಾದ ಕುಮಾರ ಸಂಗಾಕ್ಕರ ಅವರನ್ನು ಹಿಂದಿಕ್ಕುವ ಮೂಲಕ.

Source link

Video: ರಾತ್ರೋ ರಾತ್ರಿ ಮಹಿಳೆಯ ಮನೆಯ ಮೇಲೆ ದುಷ್ಕರ್ಮಿಗಳಿಂದ ಕಲ್ಲು ತೂರಾಟ, ಗುಂಡಿನ ದಾಳಿ – Kannada News | Gunshots and Chaos Outside Woman’s Home in Jabalpur

ಜಬಲ್ಪುರ, ಜನವರಿ 14: ಯಾವುದೋ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ರಾತ್ರೋರಾತ್ರಿ ಮಹಿಳೆಯ ಮನೆಯ ಮೇಲೆ ದಾಳಿ ನಡೆಸಿದ್ದಾರೆ. ಕಲ್ಲು ತೂರಾಟ ನಡೆಸಿದ್ದಷ್ಟೇ ಅಲ್ಲದೆ, ಮನೆಯ ಮೇಲೆ ಮನ ಬಂದಂತೆ ಗುಂಡು ಹಾರಿಸಿದ್ದಾರೆ.ಎದುರು ನಿಲ್ಲಿಸಿದ್ದ ವಾಹನಗಳನ್ನು ಧ್ವಂಸಗೊಳಿಸಿರುವ ವಿಡಿಯೋ ವೈರಲ್ ಆಗಿದೆ. ದುಷ್ಕರ್ಮಿಗಳು ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ, ನಂತರ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ವಿಷಯದಲ್ಲಿ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಗಾಯಗೊಂಡ ಮಹಿಳೆಯನ್ನು ರೇಖಾ ಎಂದು ಗುರುತಿಸಲಾಗಿದೆ. ಈ ಘಟನೆ ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

WPLನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಹರ್ಮನ್​ಪ್ರೀತ್ ಕೌರ್ – Kannada News | Harmanpreet Kaur Reaches Huge Milestone in WPL

ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕಿ ಹರ್ಮನ್​ಪ್ರೀತ್ ಕೌರ್ ಹೊಸ ಇತಿಹಾಸ ಬರೆದಿದ್ದಾರೆ. ಅದು ಸಹ ಭರ್ಜರಿ ಅರ್ಧಶತಕ ಸಿಡಿಸುವ ಮೂಲಕ ಎಂಬುದು ವಿಶೇಷ. ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹರ್ಮನ್​ಪ್ರೀತ್ ಕೌರ್ 43 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 7 ಫೋರ್ ಗಳೊಂದಿಗೆ ಅಜೇಯ 71 ರನ್ ಬಾರಿಸಿದ್ದರು. ಈ ಅರ್ಧಶತಕದೊಂದಿಗೆ ಹರ್ಮನ್ ಭರ್ಜರಿ ದಾಖಲೆಯೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ.

ಅಂದರೆ ವುಮೆನ್ಸ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಅತ್ಯಧಿಕ ಅರ್ಧಶತಕ ಸಿಡಿಸಿದ ದಾಖಲೆ ಇದೀಗ ಹರ್ಮನ್​ಪ್ರೀತ್ ಕೌರ್ ಹೆಸರಿಗೆ ಸೇರ್ಪಡೆಯಾಗಿದೆ. ಇದಕ್ಕೂ ಮುನ್ನ ಈ ದಾಖಲೆ ನ್ಯಾಟ್ ಸೀವರ್ ಬ್ರಂಟ್ ಹೆಸರಿನಲ್ಲಿತ್ತು.

ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿಯುತ್ತಿರುವ ಇಂಗ್ಲೆಂಡ್ ಆಟಗಾರ್ತಿ ನ್ಯಾಟ್ ಸೀವರ್ ಬ್ರಂಟ್ ಈವರೆಗೆ 31 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 9 ಅರ್ಧಶತಕ ಬಾರಿಸಿ ವುಮೆನ್ಸ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಅತ್ಯಧಿಕ ಹಾಫ್ ಸೆಂಚುರಿ ಸಿಡಿಸಿದ ಬ್ಯಾಟರ್ ಎನಿಸಿಕೊಂಡಿದ್ದರು.

ಇದೀಗ ಈ ದಾಖಲೆಯನ್ನು ಹರ್ಮನ್​ಪ್ರೀತ್ ಕೌರ್ ಅಳಿಸಿ ಹಾಕಿದ್ದಾರೆ. ಮುಂಬೈ ಇಂಡಿಯನ್ಸ್ ಪರ 31 ಪಂದ್ಯಗಳನ್ನಾಡಿರುವ ಹರ್ಮನ್ ಒಟ್ಟು 10 ಅರ್ಧಶತಕ ಬಾರಿಸಿ WPL ನಲ್ಲಿ ಅತೀ ಹೆಚ್ಚು ಹಾಫ್ ಸೆಂಚುರಿ ಸಿಡಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಹಾಗೆಯೇ ಈ ಅರ್ಧಶತಕದೊಂದಿಗೆ ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ 1000+ ರನ್ ಕಲೆಹಾಕಿದ ಮೊದಲ ಭಾರತೀಯ ಬ್ಯಾಟರ್ ಹಾಗೂ 2ನೇ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ನ್ಯಾಟ್ ಸೀವರ್ ಬ್ರಂಟ್ (1101). ಇದೀಗ 1016 ರನ್ ಗಳೊಂದಿಗೆ ಹರ್ಮನ್​ಪ್ರೀತ್ ಕೌರ್ ಈ ಸಾಧನೆ ಮಾಡಿದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಗೆದ್ದು ಬೀಗಿದ ಮುಂಬೈ:

ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್​ನ 6ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಜೈಂಟ್ಸ್ ತಂಡವು 20 ಓವರ್​ಗಳಲ್ಲಿ 192 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ಪರ ಹರ್ಮನ್​ಪ್ರೀತ್ ಕೌರ್ (71) ಅಜೇಯ ಅರ್ಧಶತಕ ಬಾರಿಸಿದರು. ಈ ಅರ್ಧಶತಕದ ನೆರವಿನೊಂದಿಗೆ ಮುಂಬೈ ಇಂಡಿಯನ್ಸ್ ತಂಡವು 19.2 ಓವರ್​ಗಳಲ್ಲಿ 193 ರನ್​ಗಳಿಸಿ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

Source link

ಕರ್ನಾಟಕ ಹವಾಮಾನ ವರದಿ: ರಾಜ್ಯದಲ್ಲಿ ಒಣ ಹವೆ, ಬೆಂಗಳೂರಿಲ್ಲಿ ಮುಂದುವರೆದ ಚಳಿಯಬ್ಬರ – Kannada News | Bengaluru temperature: Dry Weather Persists in State, Misty weather in Bengaluru

ರಾಜ್ಯದಲ್ಲಿ ಒಣ ಹವೆ, ಬೆಂಗಳೂರಿಲ್ಲಿ ಮುಂದುವರೆದ ಚಳಿಯಬ್ಬರ

ಬೆಂಗಳೂರು, ಜನವರಿ 14: ಕರಾವಳಿ ಸೇರಿದಂತೆ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿಯೂ ತೀವ್ರ ಚಳಿಯ ಜೊತೆಗೆ ಒಣಹವೆಯಿರಲಿದೆ (Weather Forecast) ಎಂದು ಹವಾಮಾನ ಇಲಾಖೆ ಹೇಳಿದೆ. ಬೆಂಗಳೂರಿನಲ್ಲಿ ಶೀತದೊಂದಿಗೆ ಮಂಜು ಕವಿದ ವಾತಾವರಣ ಇರಲಿದ್ದು, ಬೆಚ್ಚಗಿನ ಉಡುಪು ಧರಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ವರ್ಷಾಂತ್ಯದ ವರೆಗೂ ರಾಜ್ಯದಲ್ಲಿ ಒಣ ಹವೆಯೇ ಇರಲಿದ್ದು, ಹೊಸ ವರ್ಷಕ್ಕೆ ವರುಣಾರ್ಭಟವಿರಬಹುದೆಂದು ಇಲಾಖೆ ತಿಳಿಸಿದೆ.

ಎಲ್ಲೆಲ್ಲಿ ಒಣಹವೆ?

ದಕ್ಷಿಣ ಒಳನಾಡಿನ ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬಳ್ಳಾರಿ, ಚಾಮರಾಜನಗರ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ ಮತ್ತು ಮೈಸೂರು ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಕೊಡಗು, ಹಾಸನ, ಶಿವಮೊಗ್ಗ ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.

ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ. ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರಿನಲ್ಲಿ ಮಂಜು

ಇಂದು ಎಂದಿನಂತೆ ಚಳಿಯ ಜೊತೆಗೆ ಮಂಜು ಮುಸುಕಿದ ವಾತಾವರಣವಿರುವುದರಿಂದ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಚ್ಚರಿಕೆಯಿಂದಿರುವಂತೆ ಸಲಹೆ ನೀಡಿರುವ ಹವಾಮಾನ ಇಲಾಖೆ, ಬೆಚ್ಚನೆಯ ಉಡುಪು ಧರಿಸುವುದರ ಜೊತೆಗೆ ಸಮತೋಲನ ಆಹಾರ ಸೇವನೆಗೆ ಒತ್ತು ನೀಡುವಂತೆ ಸಲಹೆ ನೀಡಿದೆ. ಇಂದು ಬೆಂಗಳೂರಿನ ತಾಪಮಾನ ಕನಿಷ್ಠ 15°C ಇದ್ದು, ಗರಿಷ್ಠ 28°C ಇರಲಿದೆ ಎಂದು ಇಲಾಖೆ ತಿಳಿಸಿದೆ. ಈ ರೀತಿಯ ತೀವ್ರ ಚಳಿಯಿಂದ ಜನರ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದು, ಬೆಚ್ಚಗಿನ ಹೊದಿಕೆ ಹೊತ್ತುಕೊಳ್ಳಬೇಕು ಹಾಗೂ ಬಿಸಿ ಆಹಾರ ಸೇವನೆ ಮಾಡಬೇಕೆಂದು ವೈದ್ಯರು ಸೂಚಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ಅದಕ್ಕೂ ನಮಗೂ ಸಂಬಂಧವಿಲ್ಲ’; ‘ಟಾಕ್ಸಿಕ್’ ಟೀಸರ್ ದೂರಿಗೆ ಸೆನ್ಸಾರ್ ಮಂಡಳಿಯ ಪ್ರತಿಕ್ರಿಯೆ – Kannada News | Toxic Teaser Controversy: Censor Board Denies Jurisdiction Over YouTube Content

ಯಶ್ ನಟನೆಯ ‘ಟಾಕ್ಸಿಕ್’ ಟೀಸರ್ (Toxic Teaser) ಸೃಷ್ಟಿಸಿದ ಹಲ್​​ಚಲ್ ಅಷ್ಟಿಷ್ಟಲ್ಲ. ಈ ಸಿನಿಮಾದ ಟೀಸರ್ ನೋಡಿದ ಅನೇಕರು ನಾನಾ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದರು. ಈ ಟೀಸರ್​​​ನಲ್ಲಿದ್ದ ಬೋಲ್ಡ್​ ದೃಶ್ಯಗಳ ಬಗ್ಗೆ ಕೆಲವರು ಅಪಸ್ವರ ತೆಗೆದಿದ್ದರು. ಈ ಸಂಬಂಧ ಸಾಮಾಜಿಕ ಕಾರ್ಯಕರ್ತರು ಹಾಗೂ ಮಹಿಳಾ ಕಮಿಷನ್ ಸೆನ್ಸಾರ್ ಮಂಡಳಿಗೆ ದೂರು ನೀಡಿತ್ತು. ಈ ಬಗ್ಗೆ ಕ್ರಮ ಕೈಗೊಳ್ಳಲು ಒತ್ತಾಯಿಸಲಾಗಿತ್ತು. ಆದರೆ, ಅದಕ್ಕೂ ನಮಗೂ ಸಂಬಂಧ ಇಲ್ಲ ಎಂದು ಸೆನ್ಸಾರ್ ಮಂಡಳಿ ಸ್ಪಷ್ಟವಾಗಿ ಹೇಳಿದೆ.

ಎನ್​ಡಿಟಿವಿ ಮಾಡಿದ ವರದಿ ಪ್ರಕಾರ, ಸೆನ್ಸಾರ್ ಮಂಡಳಿ ಈ ವಿಷಯದಲ್ಲಿ ಮಧ್ಯ ಬರಲು ಸಾಧ್ಯವಿಲ್ಲ ಎಂದು ಹೇಳಿದೆಯಂತೆ. ಏಕೆಂದರೆ ‘ಟಾಕ್ಸಿಕ್’ ಟೀಸರ್ ಯೂಟ್ಯೂಬ್ ಸೇರಿದಂತೆ ಇತರೆ ಸೋಶಿಯಲ್ ಮೀಡಿಯಾಗಳಲ್ಲಿ ಮಾತ್ರ ರಿಲೀಸ್ ಆಗಿದೆ. ಸೆನ್ಸಾರ್ ಮಂಡಳಿ ಥಿಯೇಟರ್​​ಗಳಲ್ಲಿ ರಿಲೀಸ್ ಆಗುವ ಸಿನಿಮಾ, ಟ್ರೇಲರ್ ಹಾಗೂ ಜಾಹೀರಾತುಗಳಿಗೆ ಮಾತ್ರ ಪ್ರಮಾಣಪತ್ರ ನೀಡುತ್ತವೆ. ಯೂಟ್ಯೂಬ್​ನಲ್ಲಿ ರಿಲೀಸ್ ಆಗುವ ವಿಷಯಗಳಿಗೆ ಅವರು ಮೂಗುತೂರಿಸಲು ಸಾಧ್ಯವಿಲ್ಲ.

‘ಟಾಕ್ಸಿಕ್ ಚಿತ್ರದ ಟೀಸರ್ ರಿಲೀಸ್ ಆಗಿದ್ದು ಯೂಟ್ಯೂಬ್​​ನಲ್ಲಿ. ಇದರಲ್ಲಿ ನಾವು ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಸದ್ಯದ ಮಟ್ಟಿಗೆ ಟಾಕ್ಸಿಕ್​​ಗೆ ಸಂಬಂಧಿಸಿದಂತೆ ಸೆನ್ಸಾರ್ ಮಾಡಲು ಯಾವುದೇ ಅರ್ಜಿ ಬಂದಿಲ್ಲ. ನಾವು ಈ ಚಿತ್ರದ ಯಾವುದೇ ಕಂಟೆಂಟ್​​ನ ಸೆನ್ಸಾರ್ ಮಾಡಿಲ್ಲ’ ಎಂದು ಸ್ಪಷ್ಟಮಾತುಗಳಲ್ಲಿ ಹೇಳಿದೆ. ಸೆನ್ಸಾರ್ ಮಂಡಳಿ ಕಾರ್ಯವೈಖರಿ ಗೊತ್ತಿದ್ದರೆ ಈ ರೀತಿಯ ದೂರು ಸೆನ್ಸಾರ್ ಮಂಡಳಿಗೆ ದಾಖಲಾಗುತ್ತಿರಲಿಲ್ಲವೇನೋ.

ಇದನ್ನೂ ಓದಿ: ‘ಟಾಕ್ಸಿಕ್’ ಟೀಸರ್​​ನಲ್ಲಿ ತಪ್ಪು: ವೀಕ್ಷಕರ ದಾರಿ ತಪ್ಪಿಸಲಾಗಿದೆಯೇ?

ಈ ಮೊದಲು ಕೂಡ ಯೂಟ್ಯೂಬ್​​ನಲ್ಲಿ ರಿಲೀಸ್ ಆದ ಅನೇಕ ಬೋಲ್ಡ್ ಕಂಟೆಂಟ್​​ಗಳ ಬಗ್ಗೆ ಪ್ರಶ್ನೆ ಎದುರಾಗಿತ್ತು. ಆದರೆ, ಈ ವಿಷಯದಲ್ಲಿ ಹಸ್ತಕ್ಷೇಪ ಸಾಧ್ಯವಿಲ್ಲ ಎಂದು ಸೆನ್ಸಾರ್ ಮಂಡಳಿ ನೇರವಾಗಿ ಹೇಳಿತ್ತು. ಒಂದೊಮ್ಮೆ ಇದೇ ರೀತಿಯ ಬೋಲ್ಡ್ ಕಂಟೆಂಟ್​​ಗಳು ಸಿನಿಮಾ ಸೆನ್ಸಾರ್ ಮಾಡುವಾಗ ಕಂಡರೆ ಸೆನ್ಸಾರ್ ಮಂಡಳಿ ಅದನ್ನು ಪ್ರಶ್ನೆ ಮಾಡಬಹುದು. ಎ ಸರ್ಟಿಫಿಕೇಟ್ ನೀಡಬಹುದು. ಈಗ ಟೀಸರ್ ಯೂಟ್ಯೂಬ್​​ನಲ್ಲಿ ಮಾತ್ರ ರಿಲೀಸ್ ಆಗಿರುವುದರಿಂದ ಚಿತ್ರಕ್ಕೆ ಯಾವುದೇ ಸಮಸ್ಯೆ ಇಲ್ಲ. ಈಗ ಸೆನ್ಸಾರ್ ಮಂಡಳಿಯ ಹೇಳಿಕೆಯು ‘ಟಾಕ್ಸಿಕ್’ ತಂಡಕ್ಕೆ ದೊಡ್ಡ ರಿಲೀಫ್ ನೀಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 7:27 am, Wed, 14 January 26

Source link

ಹೊಸ ತವರು ಮೈದಾನ: 2 ಸ್ಟೇಡಿಯಂಗಳಲ್ಲಿ ಕಣಕ್ಕಿಳಿಯಲಿದೆ RCB

Source link

16 ‘ಪ್ಯಾಸೆಂಜರ್ಸ್​​’ಗಳನ್ನು ಹೊತ್ತು ಹೊರಟಿದ್ದ PSLV-C62 ರಾಕೆಟ್​​ನಲ್ಲಿ ಬದುಕುಳಿದಿದ್ದು ‘KID’ ಮಾತ್ರ – Kannada News | PSLV C62 Rocket Failure: Spanish KID Capsule Defies Disaster, Transmits Data

ನವದೆಹಲಿ, ಜನವರಿ 14: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO)ಯ PSLV-C62 ಮಿಷನ್‌ನ ವೈಫಲ್ಯವು ಎಲ್ಲರಿಗೂ ಬೇಸರ ತಂದಿದೆ. 16 ಪ್ಯಾಸೆಂಜರ್ಸ್​ಗಳನ್ನು ಹೊತ್ತು ಹೊರಟಿದ್ದ ರಾಕೆಟ್​(Rocket)ನಲ್ಲಿ ಕೇವಲ ಕಿಡ್ ಮಾತ್ರ ಬದುಕುಳಿದಿದೆ. ಇಲ್ಲಿ ಪ್ಯಾಸೆಂಜರ್ಸ್​ ಎಂದರೆ 16 ಉಪಗ್ರಹಗಳು ಎಂದರ್ಥ. ಸ್ಪ್ಯಾನಿಷ್ ಸ್ಟಾರ್ಟ್ಅಪ್ ಆರ್ಬಿಟಲ್ ಪ್ಯಾರಡೈಮ್‌ನ “KID” ಕ್ಯಾಪ್ಸುಲ್ ದುರಂತದಿಂದ ಬದುಕುಳಿದಿದೆ.

ಈ ಫುಟ್‌ಬಾಲ್ ಗಾತ್ರದ ಕ್ಯಾಪ್ಸುಲ್ ದುರಂತದಿಂದ ಬದುಕುಳಿಯುವುದಲ್ಲದೆ, ಭೂಮಿಗೆ ಡೇಟಾವನ್ನು ಹಿಂತಿರುಗಿಸಿತು. ಕಾರ್ಯಾಚರಣೆಯ ಸಮಯದಲ್ಲಿ, ರಾಕೆಟ್‌ನ ಮೂರನೇ ಹಂತದಲ್ಲಿ ವೈಫಲ್ಯ ಎದುರಾಗಿತ್ತು. ಮುಖ್ಯ ಉಪಗ್ರಹವು ಬಾಹ್ಯಾಕಾಶವನ್ನು ತಲುಪುವುದನ್ನು ತಡೆಯಿತು.

ಆದಾಗ್ಯೂ, ಈ ಸಣ್ಣ, 25 ಕಿಲೋಗ್ರಾಂ ಕ್ಯಾಪ್ಸುಲ್ 28 ಗ್ರಾಂನ ಅಗಾಧ ಒತ್ತಡವನ್ನು ತಡೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ಇದು ತೀವ್ರವಾದ ಶಾಖದ ನಡುವೆ ಮೂರು ನಿಮಿಷಗಳ ಕಾಲ ನಿರಂತರ ಸಂಕೇತಗಳನ್ನು ಕಳುಹಿಸಿತು.

ಮತ್ತಷ್ಟು ಓದಿ: India’s Space Mission: ಕಕ್ಷೆಯಲ್ಲಿರುವ ಉಪಗ್ರಹಗಳಿಗೆ ಇಂಧನ ತುಂಬಿಸುವ ಸಾಮರ್ಥ್ಯವಿರುವ ಎರಡನೇ ದೇಶವಾಗುವತ್ತ ಭಾರತ ಧಾಪುಗಾಲು

ಜನವರಿ 12, 2026ರಂದು ಶ್ರೀಹರಿಕೋಟಾದಿಂದ ಇಸ್ರೋ PSLV-C62 ರಾಕೆಟ್ ಉಡಾವಣೆ ಮಾಡಿತ್ತು. ರಾಕೆಟ್‌ನ ಮೂರನೇ ಹಂತದಲ್ಲಿನ ದೋಷವು ಇಡೀ ಕಾರ್ಯಾಚರಣೆಯನ್ನೇ ತಲೆಕೆಳಗಾಗಿ ಮಾಡಿತ್ತು. ಈ ರಾಕೆಟ್16 ಉಪಗ್ರಹಗಳನ್ನು ಹೊತ್ತು ಹೊರಟಿತ್ತು.

ಮುಖ್ಯ ಉಪಗ್ರಹಗಳು ನಾಶವಾದರೂ ಸ್ಪ್ಯಾನಿಷ್ ಸ್ಟಾರ್ಟ್​ಅಪ್ ಆರ್ಬಿಟಲ್ ಪ್ಯಾರಡೈಮ್​ನ ‘KID’ ಕ್ಯಾಪ್ಸುಲ್​ನಿಂದ ಬೇರ್ಪಡುವಲ್ಲಿ ಯಶಸ್ವಿಯಾಯಿತು. ಅದರ ಮೂಲಮಾದರಿಯು ತೀವ್ರವಾದ ಶಾಖ ಮತ್ತು ಒತ್ತಡವನ್ನು ತಡೆದುಕೊಳ್ಳುತ್ತದೆ. ಕ್ಯಾಪ್ಸುಲ್ ಕಾರ್ಯನಿರ್ವಹಿಸುತ್ತಲೇ ಇತ್ತು ಮಾತ್ರವಲ್ಲದೆ ಮೂರು ನಿಮಿಷಗಳ ಕಾಲ ಟೆಲಿಮೆಟ್ರಿ ಡೇಟಾವನ್ನು ಕಳುಹಿಸಿತು. ವಿಜ್ಞಾನಿಗಳು ಈಗ ಕ್ಯಾಪ್ಸುಲ್‌ನ ಮಾರ್ಗವನ್ನು ಪುನರ್ನಿರ್ಮಿಸಲು ಈ ಡೇಟಾವನ್ನು ಬಳಸುತ್ತಿದ್ದಾರೆ.

ಇದನ್ನು ಫ್ರೆಂಚ್ ಕಂಪನಿ ರೈಡ್ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಉಪಗ್ರಹ ಸೇವೆ ಮತ್ತು ಲಾಜಿಸ್ಟಿಕ್ಸ್‌ನಲ್ಲಿ ಬಳಸಬಹುದಾದ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವುದು ಕಂಪನಿಯು ಗುರಿಯಾಗಿದೆ.
ಭವಿಷ್ಯದಲ್ಲಿ ಸುರಕ್ಷಿತ ಬಾಹ್ಯಾಕಾಶ ನೌಕೆಯನ್ನು ಅಭಿವೃದ್ಧಿಪಡಿಸುವಲ್ಲಿ ಈ ಡೇಟಾವು ಒಂದು ಮೈಲಿಗಲ್ಲು ಎಂದು ಸಾಬೀತುಪಡಿಸುತ್ತದೆ ಎಂದು ವಿಜ್ಞಾನಿಗಳ ನಂಬಿಕೆಯಾಗಿದೆ.

PSLV-C62 ಮಿಷನ್ 2026 ರ ಇಸ್ರೋದ ಮೊದಲ ಪ್ರಮುಖ ಮಿಷನ್ ಆಗಿತ್ತು. ಈ ರಾಕೆಟ್ ಡಿಆರ್​ಡಿಒದ  ಪ್ರಾಥಮಿಕ ಉಪಗ್ರಹ EOS-N1 (ಅನ್ವೇಷ) ಜೊತೆಗೆ ಭಾರತ ಮತ್ತು ವಿದೇಶಗಳಿಂದ ಬಂದ 15 ಇತರ ಸಣ್ಣ ಪೇಲೋಡ್‌ಗಳನ್ನು ಹೊತ್ತೊಯ್ದಿತು. ಮೂರನೇ ಹಂತದ (PS3) ಸಮಯದಲ್ಲಿ ಸಮಸ್ಯೆ ಎದುರಾಗಿತ್ತು ಎಂದು ಇಸ್ರೋ ಅಧ್ಯಕ್ಷ ವಿ. ನಾರಾಯಣನ್ ಹೇಳಿದ್ದಾರೆ. ಈ ತಾಂತ್ರಿಕ ದೋಷವು ರಾಕೆಟ್ ತನ್ನ ಉದ್ದೇಶಿತ ಕಕ್ಷೆಯನ್ನು ತಲುಪುವ ಕನಸನ್ನು ಭಗ್ನಗೊಳಿಸಿತ್ತು.

ಇಸ್ರೋ ಇನ್ನೂ ಔಪಚಾರಿಕವಾಗಿ ಇದನ್ನು ಸಂಪೂರ್ಣ ವೈಫಲ್ಯ ಎಂದು ಘೋಷಿಸದಿದ್ದರೂ, ಪ್ರಾಥಮಿಕ ಉಪಗ್ರಹಗಳ ನಷ್ಟವನ್ನು ದೃಢಪಡಿಸಲಾಗಿದೆ. ಈ ನಿರಾಶೆಯ ನಡುವೆ, ಸ್ಪ್ಯಾನಿಷ್ ಕ್ಯಾಪ್ಸುಲ್‌ನ ಯಶಸ್ಸು ವಿಜ್ಞಾನಿಗಳಿಗೆ ಸ್ವಲ್ಪ ಸಮಾಧಾನ ತಂದಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link