ಐಪಿಎಲ್ 2026 ರ 31 ನೇ ಪಂದ್ಯದು ಸನ್‌ರೈಸರ್ಸ್ ಹೈದರಾಬಾದ್ ಮತ್ತು ದೆಹಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿವೆ. ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಂದ್ಯ ಆರಂಭವಾಗಿದೆ. ಎರಡೂ ತಂಡಗಳು ತಲಾ 6 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಸಮಬಲ ಸಾಧಿಸಿವೆ. ಆದರೆ, ಉತ್ತಮ ರನ್ ರೇಟ್ ನಿಂದಾಗಿ ಹೈದರಾಬಾದ್ ನಾಲ್ಕನೇ ಸ್ಥಾನದಲ್ಲಿದೆ. ದೆಹಲಿ ತಂಡವು ತಮ್ಮ ನಾಲ್ಕನೇ ಗೆಲುವನ್ನು ಎದುರು ನೋಡುತ್ತಿದೆ. ಹೈದರಾಬಾದ್ ತಂಡವು ತವರು ನೆಲದಲ್ಲಿ ಸತತ ಮೂರನೇ ಗೆಲುವಿನ ಗುರಿಯನ್ನು ಹೊಂದಿದೆ.
