ಹತ್ತು ಕೋಟಿ ರೂ ಹಣ ಸೇರಿಸಲು ಎಷ್ಟು ಸಮಯ ಮತ್ತು ಹೂಡಿಕೆ ಬೇಕು? ಇಲ್ಲಿದೆ ಡೀಟೇಲ್ಸ್ – Kannada News | To build Rs 10 crore corpus before retirement, know how much to invest and required timeframe
ನಿವೃತ್ತಿ ಎಂದರೆ ದುಡಿಮೆ ನಿಲ್ಲಿಸುವ ಸಮಯ. ಮನುಷ್ಯನ ದೈಹಿಕ ಬಲ ಮತ್ತು ಮನೋಬಲ ಇರುವವರೆಗೂ ದುಡಿಯುತ್ತಿರಬಹುದು. ನಿವೃತ್ತಿಯಷ್ಟರಲ್ಲಿ (retirement) ಮನುಷ್ಯನ ಆರ್ಥಿಕ ಭದ್ರತೆ (financial stability) ಉತ್ತಮವಾಗಿರುವುದು ಅಗತ್ಯ. ದುಡಿಮೆ ಇಲ್ಲದೆಯೇ ಬದುಕುವ ಹಣಕಾಸು ಬಲ ಇರಬೇಕು. ಆದರೆ, ಎಷ್ಟು ಹಣ ಬೇಕು ಎನ್ನುವುದು ಎಲ್ಲರಲ್ಲೂ ಇರುವ ಗೊಂದಲ. ಇವತ್ತಿನ ಬೆಲೆ ಮಟ್ಟಕ್ಕೆ ಈಗ ನಿವೃತ್ತರಾಗುವವರಿಗೆ ಕನಿಷ್ಠ ಒಂದು ಕೋಟಿಯಾದರೂ ಬೇಕು. ಈ ಒಂದು ಕೋಟಿ ರೂ ಮುಂದಿನ 30 ವರ್ಷದಲ್ಲಿ ಹೊಂದುವ ಮೌಲ್ಯ ಸುಮಾರು 8…