All posts by nagaraj11081993

ಪ್ರೆಗ್ನೆನ್ಸಿಯಲ್ಲಿರುವಾಗಲೇ ದೊಡ್ಡ ರಿಸ್ಕ್ ತೆಗೆದುಕೊಂಡ ದೀಪಿಕಾ ಪಡುಕೋಣೆ – Kannada News | Deepika Padukone Pregnant: Shoots ‘Raaka’ Action Scenes, Team Ensures Safety with Doctors

ನಟಿ ದೀಪಿಕಾ ಪಡುಕೋಣೆ (Deepika) ಅವರು ಈ ಮೊದಲು ದುವಾ ಹೆಸರಿನ ಹೆಣ್ಣು ಮಗುವಿಗೆ ಜನ್ಮನೀಡಿದ್ದರು. ಈಗ ಎರಡನೇ ಮಗು ಆಗಮನದ ಬಗ್ಗೆ ಘೋಷಣೆ ಮಾಡಿದ್ದಾರೆ. ದೀಪಿಕಾ ಪ್ರೆಗ್ನೆಂಟ್ ವಿಷಯ ಘೋಷಣೆ ಮಾಡಿರೋ ವಿಷಯ ಕೇಳಿ ಅನೇಕರು ಖುಷಿ ಆಗಿದ್ದಾರೆ. ಆದರೆ, ಅಲ್ಲು ಅರ್ಜುನ್ ಹಾಗೂ ಅಟ್ಲೀ ಅಭಿಮಾನಿಗಳಿಗೆ ಈ ಬಗ್ಗೆ ಚಿಂತೆ ಶುರುವಾಗಿದೆ. ‘ರಾಕ’ ಸಿನಿಮಾದ ಶೂಟಿಂಗ್ ವಿಳಂಬ ಆಗುತ್ತದೆಯೇ ಎನ್ನುವ ಪ್ರಶ್ನೆಮೂಡಿದೆ. ಆದರೆ, ಹಾಗಾಗುತ್ತಿಲ್ಲ. ಪ್ರೆಗ್ನೆನ್ಸಿ ಮಧ್ಯೆಯೂ ದೀಪಿಕಾ ದೊಡ್ಡ ರಿಸ್ಕ್ ತೆಗೆದುಕೊಳ್ಳುತ್ತಿದ್ದಾರೆ.

‘ರಾಕಾ’ ಸಿನಿಮಾ ಬಹುನೀರಿಕ್ಷಿತ ಚಿತ್ರಗಳಲ್ಲಿ ಒಂದು. ಈ ಸಿನಿಮಾಗೆ ಅಟ್ಲಿ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಅಲ್ಲು ಅರ್ಜುನ್ ಅವರು ಭಿನ್ನ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚಿದೆ. ಈ ಚಿತ್ರಕ್ಕೆ ದೀಪಿಕಾ ನಾಯಕಿ. ಇತ್ತೀಚೆಗೆ ‘ರಾಕಾ’ ಸಿನಿಮಾ ಶೂಟಿಂಗ್ ಆರಂಭ ಆಗಿದೆ. ಈ ಸಮಯದಲ್ಲೇ ದೀಪಿಕಾ ಪ್ರೆಗ್ನೆಂಟ್ ಎನ್ನುವ ವಿಷಯ ರಿವೀಲ್ ಆಗಿದೆ.

ಇದನ್ನೂ ಓದಿ: ದೀಪಿಕಾ-ರಣವೀರ್ ಮಧ್ಯೆ ಯಾವುದೂ ಸರಿ ಇಲ್ಲ ಎಂದವರಿಗೆಲ್ಲ ಬಿತ್ತು ಬಲವಾದ ಏಟು

ಈ ತಿಂಗಳ ಆರಂಭದಲ್ಲಿ ಅರ್ಜುನ್ ಅವರ ಹುಟ್ಟುಹಬ್ಬದಂದು ಚಿತ್ರದ ಶೀರ್ಷಿಕೆ ಮತ್ತು ಫಸ್ಟ್ ಲುಕ್ ರಿವೀಲ್ ಆಗಿದೆ. ದೀಪಿಕಾ ಲುಕ್ ಹೇಗಿರಲಿದೆ ಎಂಬ ಕುತೂಹಲವೂ ಇದೆ. ವಿಶೇಷ ಎಂದರೆ, ‘ತಮ್ಮ ಗರ್ಭಾವಸ್ಥೆಯಲ್ಲಿಯೇ ದೀಪಿಕಾ ಪಡುಕೋಣೆ ರಾಕಾ ಚಿತ್ರಕ್ಕಾಗಿ ತೀವ್ರವಾದ ಆ್ಯಕ್ಷನ್ ಸನ್ನಿವೇಶಗಳನ್ನು ಚಿತ್ರೀಕರಿಸುತ್ತಿದ್ದಾರೆ ಎಂಬುದು ವಿಶೇಷ.

ಶೂಟಿಂಗ್ ವೇಳೆ ತಂಡದವರು ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದಾರಂತೆ. ವೈದ್ಯರನ್ನು ಕೂಡ ಸೆಟ್​​ನಲ್ಲೇ ಇರಿಸಲಾಗಿದ್ದು, ಅವರನ್ನು ಕನ್ಸಲ್ಟ್ ಮಾಡಿಯೇ ಮುಂದುವರಿಯಲಾಗುತ್ತಿದೆ. ಇನ್ನೂ ಕೆಲವು ತಿಂಗಳು ಶೂಟ್​​ನಲ್ಲಿ ಬ್ಯುಸಿ ಇರಲಿದ್ದಾರೆ. ಶಾರುಖ್ ನಟನೆಯ ‘ಕಿಂಗ್’ ಚಿತ್ರವನ್ನು ಕೂಡ ಅವರು ಮಾಡಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IPL 2026: ನಿನ್ನ ಮುಖ ತೋರಿಸಬೇಡ… ಕಾರಣವೇನು? – Kannada News | PBKS vs LSG Viral Moment: Shreyas Iyer hiding the face of Shashank Singh

ಐಪಿಎಲ್​ನ 29ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಭರ್ಜರಿ ಜಯ ಸಾಧಿಸಿದರೂ, ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಚರ್ಚೆಯಾಗುತ್ತಿರುವುದು ಪಂದ್ಯದ ನಂತರ ನಡೆದ ಒಂದು ತಮಾಷೆಯ ಘಟನೆ. ಪಂಜಾಬ್ ಕಿಂಗ್ಸ್​ ತಂಡದ ನಾಯಕ ಶ್ರೇಯಸ್ ಅಯ್ಯರ್ ತನ್ನ ಸಹ ಆಟಗಾರ ಶಶಾಂಕ್ ಸಿಂಗ್ ಅವರ ಮುಖವನ್ನು ಕ್ಯಾಮೆರಾ ಮತ್ತು ಕೋಚ್‌ನಿಂದ ಮರೆಮಾಚಲು ಪ್ರಯತ್ನಿಸಿದ ವಿಡಿಯೋ ಈಗ ವೈರಲ್ ಆಗಿದೆ.

ಕಾರಣವೇನು?

ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ದೊಡ್ಡ ಮೊತ್ತ ಪೇರಿಸಿದರೂ, ಫೀಲ್ಡಿಂಗ್ ವಿಷಯದಲ್ಲಿ ಶಶಾಂಕ್ ಸಿಂಗ್ ಅವರಿಗೆ ಇದು ಕೆಟ್ಟ ದಿನವಾಗಿತ್ತು. ಪಂದ್ಯದ ವಿವಿಧ ಹಂತಗಳಲ್ಲಿ ಶಶಾಂಕ್ ಬರೊಬ್ಬರಿ ಮೂರು ಕ್ಯಾಚ್‌ಗಳನ್ನು ಕೈಚೆಲ್ಲಿದ್ದರು. ಅದರಲ್ಲೂ ಬೌಂಡರಿ ಲೈನ್‌ ಬಳಿ ಅವರು ಬಿಟ್ಟ ಕ್ಯಾಚ್ ಸಿಕ್ಸರ್ ಆಗಿ ಪರಿವರ್ತಿತವಾಗಿತ್ತು. ಈ ತಪ್ಪುಗಳಿಂದಾಗಿ ಡಗೌಟ್‌ನಲ್ಲಿದ್ದ ಕೋಚ್ ರಿಕಿ ಪಾಂಟಿಂಗ್ ಕೂಡ ಒಂದು ಕ್ಷಣ ಅಸಮಾಧಾನಗೊಂಡಿದ್ದು ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ಅಯ್ಯರ್ ಅವರ ಚೇಷ್ಟೆ

ಪಂದ್ಯ ಮುಗಿದ ನಂತರ ಆಟಗಾರರು ಪರಸ್ಪರ ಹಸ್ತಲಾಘವ ಮಾಡುವ ಸಮಯದಲ್ಲಿ, ಶ್ರೇಯಸ್ ಅಯ್ಯರ್ ಅವರು ಶಶಾಂಕ್ ಬಳಿ ಬಂದು, “ಇಷ್ಟು ಕ್ಯಾಚ್ ಬಿಟ್ಟ ಮೇಲೆ ಕೋಚ್​ಗೆ ನಿನ್ನ ಮುಖ ತೋರಿಸಬೇಡ” ಎಂಬಂತೆ ತಮಾಷೆಯಾಗಿ ಅವರ ಮುಖದ ಮೇಲೆ ಕ್ಯಾಪ್ ಎಳೆದು ಮುಚ್ಚಿದರು. ಶಶಾಂಕ್ ಕೂಡ ಈ ಚೇಷ್ಟೆಯನ್ನು ನಗುನಗುತ್ತಲೇ ಸ್ವೀಕರಿಸಿದರು.

ಅತ್ತ ಪಂಜಾಬ್ ಕಿಂಗ್ಸ್ ತಂಡದ ಕೋಚ್ ರಿಕಿ ಪಾಂಟಿಂಗ್ ಕೂಡ ಶಶಾಂಕ್ ಸಿಂಗ್ ವಿರುದ್ಧ ಮೈದಾನದಲ್ಲಿ ಯಾವುದೇ ಅಸಮಾಧನ ಹೊರಹಾಕದೇ ಬೆನ್ನು ತಟ್ಟಿದರು. ಇದೀಗ ಶ್ರೇಯಸ್ ಅಯ್ಯರ್ ಅವರ ಚೇಷ್ಟೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್​ 20 ಓವರ್​ಗಳಲ್ಲಿ 254 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಎಲ್​ಎಸ್​ಜಿ 200 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಪಂಜಾಬ್ ಕಿಂಗ್ಸ್ 54 ರನ್​ಗಳ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಪಂಜಾಬ್ ಕಿಂಗ್ಸ್ ತಂಡವು ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

 

Source link

ಹಾಲಿವುಡ್ ಮಂದಿಯ ಎದುರು ಹೇಗೆ ಮಾತಾಡಿದ್ರು ನೋಡಿ ಯಶ್

ರಾಕಿಂಗ್ ಸ್ಟಾರ್ ಯಶ್ ಅವರು ಹಾಲಿವುಡ್ ವೇದಿಕೆಗಳಲ್ಲಿ ‘ಟಾಕ್ಸಿಕ್’ ಹಾಗೂ ರಾಮಾಯಣ ಚಿತ್ರಗಳನ್ನು ಪ್ರಚಾರ ಮಾಡುತ್ತಿದ್ದಾರೆ. ಇದು ನಿಜಕ್ಕೂ ಹೆಮ್ಮೆಯ ವಿಷಯ. ಯಶ್ ಅವರ ಹೊಸ ಹೊಸ ವಿಡಿಯೋಗಳು ವೈರಲ್ ಆಗುತ್ತಿವೆ. ಈಗ ಅವರ ಹೊಸ ವಿಡಿಯೋ ಗಮನ ಸೆಳೆದಿದೆ. ಈ ವಿಡಿಯೋದಲ್ಲಿ ಅವರು ಅದ್ಭುತವಾಗಿ ಹಾಗೂ ನಿರರ್ಗಳವಾಗಿ ಇಂಗ್ಲಿಷ್ ಮಾತನಾಡಿದ್ದಾರೆ. ಇಂಗ್ಲಿಷ್ ವರದಿಗಾರರು ಅದನ್ನು ಭಕ್ತಿಯಿಂದ ಕೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

11 ಅಂಕಗಳು… ಐಪಿಎಲ್​ನಲ್ಲಿ ಹೊಸ ಚರಿತ್ರೆ ಬರೆದ ಪಂಜಾಬ್ ಕಿಂಗ್ಸ್

Source link

2ನೇ ಮದುವೆ ತಯಾರಿಯಲ್ಲಿದ್ದ ವೈದ್ಯನ ಭೀಕರ ಕೊಲೆ: ವಿವಾಹದ ಸಂಭ್ರಮದಲ್ಲಿದ್ದ ಮನೆಯಲ್ಲೀಗ ಸೂತಕ! – Kannada News | Brutal Murder in Sirsi: Doctor preparing for 2nd wedding found dead

ಶಿರಸಿ, ಏಪ್ರಿಲ್​ 20: 2ನೇ ಮದುವೆಗೆ ತಯಾರಿ ನಡೆಸಿದ್ದ ವೈದ್ಯನೋರ್ವನನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಶಿರಸಿಯ ನ್ಯೂ KHB ಕಾಲೋನಿಯಲ್ಲಿ ನಡೆದಿದೆ. ವೈದ್ಯ ರಮೇಶ್ ಕಲಗುಟಕರ(51) ಕೊಲೆಯಾದ ವ್ಯಕ್ತಿಯಾಗಿದ್ದು, ಮನೆಗೆ ನುಗ್ಗಿರುವ ಆರೋಪಿಗಳು ಹತ್ಯೆಗೈದು ಎಸ್ಕೇಪ್​​ ಆಗಿದ್ದಾರೆ. ಪತ್ನಿಯ ಸಾವಿನಿಂದ ತೀವ್ರವಾಗಿ ನೊಂದಿದ್ದ ಇವರು ಮತ್ತೊಂದು ಮದುವೆಗೆ ಸಿದ್ಧತೆ ನಡೆಸಿದ್ದರು. ಅದರಂತೆ 45 ವರ್ಷದ ಅನ್ನಪೂರ್ಣ ಎಂಬ ಮಹಿಳೆಯ ಜೊತೆ ವಿವಾಹಕ್ಕೆ ಶಿರಸಿ ತಾಲೂಕಿನ ಮಂಜಗುಣಿಯ ವೆಂಕಟರಮಣ ದೇವಸ್ಥಾನದಲ್ಲಿ ಎಲ್ಲ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಅಷ್ಟರೊಳಗೆ ಈ ದುರ್ಘಟನೆ ನಡೆದಿದೆ.

ಕೊಲೆಯಾಗಿರುವ ವೈದ್ಯ ರಮೇಶ್​​ ಅವರ ಪತ್ನಿ ಕಳೆದ 8 ತಿಂಗಳ ಹಿಂದೆ ಮೃತಪಟ್ಟಿದ್ದರು. ಈ ದಂಪತಿಗೆ ಎರಡು ಮಕ್ಕಳಿದ್ದು, ಓರ್ವ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರೆ ಮತ್ತೊಬ್ಬ ಪಶ್ಚಿಮ ಬಂಗಾಳದಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿದ್ದಾನೆ. ಹೀಗಾಗಿ ಶಿರಸಿಯ ನಿವಾಸದಲ್ಲಿ ರಮೇಶ್ ಒಬ್ಬರೇ ವಾಸಿಸುತ್ತಿದ್ದರು. ಶಿರಸಿ ನಗರದಲ್ಲಿ ಪ್ರಸಿದ್ಧ ಆಯುರ್ವೇದ ವೈದ್ಯರಾಗಿದ್ದ ಇವರು ಉತ್ತಮ ಜೀವನ‌ ಸಾಗಿಸುತ್ತಿದ್ದರು. ಮದುವೆಯ ಹಿನ್ನೆಲೆ ತನ್ನ ಮೊದಲ ಪತ್ನಿಯ ಎಲ್ಲ ಒಡವೆಗಳನ್ನ, ಎರಡನೇ ಪತ್ನಿಗೆ ಕೊಡಲೆಂದು ಬ್ಯಾಂಕಿನಿಂದ ತಂದು ಮನೆಯಲ್ಲಿಟ್ಟಿದ್ದರು ಎಂಬ ವಿಚಾರವೂ ಘಟನೆ ಬಳಿಕ ಗೊತ್ತಾಗಿದೆ.

ಇದನ್ನೂ ಓದಿ: ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಪರಲೋಕಕ್ಕೆ ಕಳುಹಿಸಿದ ಪತ್ನಿ!; ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಕೊಲೆ?

ಇನ್ನು ತಮ್ಮ ಎರಡನೇ ಮದುವೆಗೆಂದು ರಮೇಶ್​​ ತಮ್ಮ ಹಲವು ಸಂಬಂಧಿಕರಿಗೆ ಆಹ್ವಾನ ನೀಡಿದ್ದರು. ಹೀಗಾಗಿ ಮನೆ ಬಳಿ ಬಂದ ನೆಂಟರಿಷ್ಟರು ಎಷ್ಟೇ ಬಾಗಿಲು ತಟ್ಟಿದರೂ ರಮೇಶ್​​ ಡೋರ್​​ ಓಪನ್ ಮಾಡಿರಲಿಲ್ಲ.  ಹೀಗಾಗಿ ಅನುಮಾನಗೊಂಡು ಬಾಗಿಲು ಒಡೆದು ಮನೆಯೊಳಗೆ ಪ್ರವೇಶಿಸಿದಾಗ ಕೊಲೆ ನಡೆದಿರೋದು ಗೊತ್ತಾಗಿದೆ. ತಲೆಗೆ ತೀವ್ರ ಗಾಯವಾಗಿರುವ ಸ್ಥಿತಿಯಲ್ಲಿ ಬೆಡ್​​ ಮೇಲೆ ರಮೇಶ್​​ ಕಂಡುಬಂದಿದ್ದಾರೆ. ಆರೋಪಿ ಅಕ್ಕಪಕ್ಕದ ಮನೆಯ ಯಾರಿಗೂ ಅನುಮಾನ ಬಾರದಂತೆ ಎಸ್ಕೇಪ್​​ ಆಗಿದ್ದಾನೆ ಎನ್ನಲಾಗಿದ್ದು, ಶಿರಸಿ ಮಾರುಕಟ್ಟೆ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಎಸ್ಪಿ ದೀಪನ್, ಸಿಪಿಐ ಶಶಿಕಾಂತ ವರ್ಮಾ ಸೇರಿದಂತೆ ಪೊಲೀಸರ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿ ಕೊಲೆ ಬಳಿಕ ಚಿನ್ನಾಭಾರಣ ದೋಚಿದ್ದಾನಾ? ಇಲ್ಲವಾ? ಎಂಬ ಬಗ್ಗೆ ಇನ್ನಷ್ಟೇ ಸ್ಪಷ್ಟ ಮಾಹಿತಿ ಸಿಗಬೇಕಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Bengaluru Air Quality: ಬೆಳಗಾವಿ, ಹುಬ್ಬಳ್ಳಿ ಸೇರಿ ಹಲವೆಡೆ ವಾಯುಗುಣಮಟ್ಟದಲ್ಲಿ ಸುಧಾರಣೆ! – Kannada News | Bangalore Air Pollution Crisis: Belagavi Air Quality is getting better

ಬೆಳಗಾವಿ, ಹುಬ್ಬಳ್ಳಿ ಸೇರಿ ಹಲವೆಡೆ ವಾಯುಗುಣಮಟ್ಟದಲ್ಲಿ ಸುಧಾರಣೆ!

ಬೆಂಗಳೂರು, ಏಪ್ರಿಲ್ 20: ರಾಜ್ಯದ ಏರ್ ಕ್ವಾಲಿಟಿಯಲ್ಲಿ (Bengaluru Air Quality)  ಕಳೆದ ಕೆಲ ದಿನಗಳಿಂದ ಸುಧಾರಣೆ ಕಂಡು ಬಂದಿದೆ. ದೇಶದ ಉಳಿದ ಯಾವುದೇ ಮೆಟ್ರೋ ಸಿಟಿಗಳಿಗೆ ಹೋಲಿಸಿದರೂ ಬೆಂಗಳೂರಿನ ವಾಯು ಗುಣಮಟ್ಟ ಉತ್ತಮವಾದದ್ದಾಗಿದೆ. ಇಷ್ಟು ದಿನ ಉಸಿರಾಟಕ್ಕೂ ಮಾರಕವಾಗಿದ್ದ ಗಾಳಿಯು ಇಂದು ಒಳ್ಳೆಯ ಗುಣಮಟ್ಟದಲ್ಲಿರುವುದು ಸ್ವಲ್ಪಮಟ್ಟಿಗೆ ಆತಂಕವನ್ನು ಕಡಿಮೆಯಾಗಿಸಿದೆ. ಆದರೂ ಬೆಂಗಳೂರಿನ ವಾಯು ಗುಣಮಟ್ಟ ಅನಾರೋಗ್ಯಕರ ಮಟ್ಟದಲ್ಲಿಯೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.

ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ಇಂದು ಹಲವೆಡೆ ವಾಯು ಗುಣಮಟ್ಟ ಸುಧಾರಿಸಿದೆ. ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು 127ಕ್ಕೆ ತಲುಪಿದೆ. ಕಲಬುರ್ಗಿ ಮತ್ತು ಉಡುಪಿಯ AQI 100ಕ್ಕಿಂತ ಕಡಿಮೆಯಿದ್ದು, ಇಷ್ಟು ದಿನ ಮಾರಕವಾಗಿದ್ದ ಗಾಳಿ ಇಂದು ಉಸಿರಾಟಕ್ಕೆ ಯೋಗ್ಯವಾಗಿದೆ. ಬೆಂಗಳೂರಿನ AQI ಇನ್ನೂ ಆರೋಗ್ಯಕ್ಕೆ ಮಾರಕವಾಗಿಯೇ ಇದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು – 127
  • ಮಂಗಳೂರು-130
  • ಮೈಸೂರು –90
  • ಬೆಳಗಾವಿ – 67
  • ಕಲಬುರ್ಗಿ-119
  • ಶಿವಮೊಗ್ಗ –119
  • ಬಳ್ಳಾರಿ – 143
  • ಹುಬ್ಬಳ್ಳಿ- 80
  • ಉಡುಪಿ –119
  • ವಿಜಯಪುರ – 106

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಮೆರಿಕದ ಲೂಸಿಯಾನದಲ್ಲಿ ಗುಂಡಿನ ದಾಳಿ, 8 ಮಕ್ಕಳು ಸಾವು – Kannada News | Louisiana Tragedy: Young Lives Lost in Devastating Shooting

ವಾಷಿಂಗ್ಟನ್, ಏಪ್ರಿಲ್ 20: ಅಮೆರಿಕದ ಲೂಸಿಯಾನಾದಲ್ಲಿ ನಡೆದ ಗುಂಡಿನ ದಾಳಿಯಲ್ಲಿ 8 ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. ಮೃತರ ವಯಸ್ಸು ಕೇವಲ 1 ರಿಂದ 14 ವರ್ಷ.  ಒಟ್ಟು 10 ಜನರಿಗೆ ಗುಂಡು ಹಾರಿಸಲಾಗಿದ್ದು, ಅವರಲ್ಲಿ ಎಂಟು ಮಂದಿ ಮೃತಪಟ್ಟಿದ್ದಾರೆ. ಶಂಕಿತ ಶೂಟರ್​ನನ್ನು ಪತ್ತೆ ಹಚ್ಚಿ ಪೊಲೀಸರು ಆತನನ್ನು ಕೊಂದಿದ್ದಾರೆ.ಕಾರ್ಯಾಚರಣೆಯ ಸಮಯದಲ್ಲಿ ಯಾವುದೇ ಪೊಲೀಸ್ ಅಧಿಕಾರಿಗಳು ಗಾಯಗೊಂಡಿಲ್ಲ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಗುಂಡಿನ ದಾಳಿಗೆ ಕಾರಣವೇನು ಎಂಬುದನ್ನು ಅಧಿಕಾರಿಗಳು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದಾರೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ದುಡ್ಡು ಮಾಡಲು ಅಶ್ಲೀಲ ಫೋಟೋ ಹಂಚಿಕೊಂಡ ನಟಿ? ಅಸಲಿಯತ್ತು ಬೇರೆಯೇ ಇದೆ – Kannada News | Ananya Nagalla Instagram Subscription Controversy: Actress Clarifies Devotional Content

ಅನನ್ಯ ನಾಗಲ್ಲ ಚಿತ್ರರಂಗದಲ್ಲಿ ಈಗತಾನೇ ಹೆಸರು ಮಾಡುತ್ತಿದ್ದಾರೆ. ತೆಲುಗಿನಲ್ಲಿ ಆ್ಯಕ್ಟೀವ್ ಆಗಿರೋ ಅವರು ‘ಮಲ್ಲೇಶಂ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದರು. ‘ವಕೀಲ್ ಸಾಬ್’ ಚಿತ್ರದ ಮೂಲಕ ಹೆಸರನ್ನು ಗಳಿಸಿದರು. ಈಗ ಅವರು ವಿವಿಧ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಆದಾಗ್ಯೂ, ಪ್ರಸ್ತುತ ಈ ನಟಿ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯ ವಿಷಯವಾಗಿದ್ದಾರೆ. ಅವರು ಒಂದು ವಿವಾದಕ್ಕೆ ಸ್ಪಷ್ಟನೆ ನೀಡಿದ್ದಾರೆ.

ಅನನ್ಯ ಅವರು ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ‘ಚಂದಾದಾರಿಕೆ’ ಆಯ್ಕೆಯನ್ನು ಪ್ರಾರಂಭಿಸಿದರು. ಇದನ್ನು ತಪ್ಪಾಗಿ ಅರ್ಥೈಸಿಕೊಂಡು ಕೆಲವರು ಟೀಕಿಸಿದರು. ಅವರು ಈ ವಿಷಯದ ಬಗ್ಗೆ ಗಂಭೀರವಾಗಿ ತಿರುಗೇಟು ನೀಡಿದ್ದಾರೆ.ಈ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.

ಅನನ್ಯಾ ಅವರು ಚಂದಾದಾರಿಕೆ ಹೆಸರಲ್ಲಿ ‘ವಯಸ್ಕ’ ಅಥವಾ ‘ಅಶ್ಲೀಲ’ ವಿಷಯವನ್ನು ಪೋಸ್ಟ್ ಮಾಡುತ್ತಿದ್ದಾರೆ ಎಂದು ಕೆಲವರು ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿಗಳನ್ನು ಹರಡಲು ಆರಂಭ ಆಗಿದೆ. ಅನನ್ಯಾ ನಾಗಲ್ಲ ಈ ಆರೋಪಗಳನ್ನು ಬಲವಾಗಿ ನಿರಾಕರಿಸಿದ್ದಾರೆ. ಚಂದಾದಾರಿಕೆ ಯೋಜನೆಯಲ್ಲಿ ಅವರು ಪೋಸ್ಟ್ ಮಾಡುತ್ತಿರುವುದು ಕೇವಲ ಭಕ್ತಿ ವಿಷಯ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

‘ನನ್ನ ವೈಯಕ್ತಿಕ ಜೀವನದ ವಿವರಗಳ ಜೊತೆಗೆ, ನಾನು ಅಲ್ಲಿ ನನ್ನ ನೆಚ್ಚಿನ ಆಧ್ಯಾತ್ಮಿಕ ವಿಷಯಗಳು ಮತ್ತು ದೇವಾಲಯ ಭೇಟಿ ವೀಡಿಯೊಗಳನ್ನು ಹಂಚಿಕೊಳ್ಳುತ್ತಿದ್ದೇನೆ. ಅದರಲ್ಲಿ ಯಾವುದೇ ಅಶ್ಲೀಲತೆ ಇಲ್ಲ. ಭಕ್ತಿ ವಿಷಯ ಮಾತ್ರ ಇದೆ’ ಎಂದು ಅವರು ಹೇಳಿದರು.

ಅಂತಹ ವಿಷಯಕ್ಕೆ ಏಕೆ ಹಣ ಪಾವತಿಸಬೇಕು ಎಂದು ಪ್ರಶ್ನಿಸಿದವರಿಗೆ ಪ್ರತಿಕ್ರಿಯಿಸಿದ ಅವರು, ‘ಇದು ಇನ್ಸ್​​ಟಾ ಒದಗಿಸಿರೋ ವೇದಿಕೆ. ಸುಳ್ಳು ಪ್ರಚಾರವನ್ನು ಹರಡುವ ಮೊದಲು ಜನರು ಸತ್ಯಗಳನ್ನು ತಿಳಿದುಕೊಳ್ಳಬೇಕು’ ಎಂದು ಅವರು ಸಲಹೆ ನೀಡಿದರು.

ಇದನ್ನೂ ಓದಿ: ಆರ್​​ಸಿಬಿ ಹೆಸರು ಬದಲಾವಣೆ ವಿಷಯ; ಅಭಿಮಾನಿಗಳಿಗೆ ಗುಡ್​ನ್ಯೂಸ್ ಕೊಟ್ಟ ಅನನ್ಯಾ ಬಿರ್ಲಾ

ಅನೇಕ ನಟಿಯರು ಸಬ್​​ಸ್ಕ್ರಿಪ್ಶನ್ ಆಯ್ಕೆ ಮೂಲಕ ಹಾಟ್ ಫೋಟೋಗಳನ್ನು ಹಂಚಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಅವರಿಗೆ ಹಣ ಆಗುತ್ತಿದೆ.  ಅನನ್ಯಾ ಕೂಡ ಹೀಗೆಯೇ ಮಾಡಿರಬಹುದು ಎಂದು ಕೆಲವರು ಭಾವಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕರ್ನಾಟಕ ಹವಾಮಾನ ವರದಿ: ಇಂದು ಹೀಟ್ ವೇವ್ ಜೊತೆಗೆ ಕರಾವಳಿಯಲ್ಲಿ ವರುಣಾರ್ಭಟ! – Kannada News | Karnataka Weather Forecast: Heat wave alert in coastal area, Thunderstorm in south Karnataka

ಇಂದು ಹೀಟ್ ವೇವ್ ಜೊತೆಗೆ ಕರಾವಳಿಯಲ್ಲಿ ವರುಣಾರ್ಭಟ!
Image Credit source: google Gemini

ಬೆಂಗಳೂರು, ಏಪ್ರಿಲ್ 20: ಬೆಂಗಳೂರು ಸೇರಿದಂತೆ ಹಲವೆಡೆ ತಾಪಮಾನ (Karnataka Weather) ಹೆಚ್ಚಾಗಿದ್ದು, ಮುಂದಿನ 2 ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದೆಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಈಗಾಗಲೇ ಕರಾವಳಿ ಹಾಗೂ ಕಲ್ಯಾಣ ಕರ್ನಾಟಕವು ಬಿಸಿಲಿನ ಬೇಗೆ ತತ್ತರಿಸಿದ್ದು, ಮುಂಬರುವ ದಿನಗಳಲ್ಲಿ ಈ ಭಾಗಗಳ ತಾಪಮಾನ 45 ಡಿಗ್ರಿ ಸೆಲ್ಸಿಯಸ್​ಗೆ ಏರುವ ಸಾಧ್ಯತೆಯಿದೆ. ಹೀಗಾಗಿ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಅನಗತ್ಯವಾಗಿ ಹೊರಗೆ ಬರಬೇಡಿ, ಹೆಚ್ಚು ನೀರು ಸೇವಿಸಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಹೀಟ್ ವೇವ್ ಜೊತೆಗೆ ಗುಡುಗು ಸಹಿತ ಮಳೆ

ಕರಾವಳಿಯ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇಂದೂ ಉಷ್ಣ ಅಲೆ ಇರಲಿದ್ದು, ಹೀಟ್ ವೇವ್ ಅಲರ್ಟ್​ ನೀಡಲಾಗಿದ್ದು, ಜೊತೆಗೆ ಗುಡುಗು ಸಹಿತ ಮಳೆಯೂ ಆಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಕಲಬುರ್ಗಿ ಮತ್ತು ವಿಜಯಪುರದಲ್ಲಿ ಗುಡುಗು ಸಹಿತ ಮಳೆಯಾಗಲಿದ್ದು, ಉಳಿದೆಡೆ ಒಣ ಹವೆಯಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿಯೂ ಗುಡುಗು, ಸಿಡಿಲು ಸಹಿತ ಮಳೆಯಾಗಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.

ಉಷ್ಣಾಘಾತದಿಂದ ರಕ್ಷಣೆ ಹೇಗೆ?

ಮುಂಬರುವ ದಿನಗಳಲ್ಲಿ ರಾಜ್ಯದೆಲ್ಲೆಡೆ ತಾಪಮಾನ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕಾ ಕ್ರಮ ವಹಿಸುವಂತೆ ಹವಾಮಾನ ಇಲಾಖೆ ಸೂಚಿಸಿದೆ. ಅವಶ್ಯಕತೆ ಇಲ್ಲದೆ ಮನೆಯಿಂದ ಹೊರಬರುವುದನ್ನು ತಪ್ಪಿಸುಂತೆ ಹೇಳಲಾಗಿದೆ. ಬೇಸಿಗೆ ರಜೆಯಲ್ಲಿ ಮಕ್ಕಳು ಬಿಸಿಲಲ್ಲಿ ಆಟವಾಡುವುದನ್ನು ಆದಷ್ಟು ನಿಯಂತ್ರಿಸುವಂತೆ ಸೂಚಿಸಲಾಗಿದೆ.

ಉಷ್ಣ ಅಲೆ ಹಾಗೂ ಉಷ್ಣಾಘಾತದಿಂದ (ಹೀಟ್ ಸ್ಟ್ರೋಕ್) ರಕ್ಷಿಸಿಕೊಳ್ಳಲು ಆರೋಗ್ಯ ಇಲಾಖೆ ಕೆಲವು ಸಲಹೆ ಸೂಚನೆಗಳನ್ನು ನೀಡಿದೆ. ಮಧ್ಯಾಹ್ನ 12 ರಿಂದ 4 ಗಂಟೆಯವರೆಗೆ ಸೂರ್ಯನ ಬೆಳಕಿಗೆ ನೇರ ಮೈಯೊಡ್ಡುವುದನ್ನು ಆದಷ್ಟು ತಪ್ಪಿಸಿ. ನಿಯಮಿತವಾಗಿ ನೀರು ಕುಡಿಯಿರಿ. ಎಳನೀರು, ಮಜ್ಜಿಗೆ ಅಥವಾ ಮನೆಯಲ್ಲಿ ತಯಾರಿಸಿದ ಹಣ್ಣಿನ ರಸಗಳನ್ನು ಸೇವಿಸಿ. ತಿಳಿ ಬಣ್ಣದ, ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸಿ. ಹೊರಗೆ ಹೋಗುವಾಗ ಛತ್ರಿ ಅಥವಾ ಟೋಪಿಯನ್ನು ಬಳಸಿ. ಕೆಫೀನ್ (ಕಾಫಿ/ಟೀ) ಮತ್ತು ಹೆಚ್ಚಿನ ಸಕ್ಕರೆಯುಕ್ತ ಪಾನೀಯಗಳ ಸೇವನೆ ಕಡಿಮೆ ಮಾಡಿ, ಇವು ದೇಹವನ್ನು ನಿರ್ಜಲೀಕರಣಗೊಳಿಸುತ್ತವೆ.

ಇದನ್ನೂ ಓದಿ ರಾಜ್ಯದಲ್ಲಿ ಬಿಸಿಲ ಬೇಗೆಯ ಜೊತೆಗೆ ವರುಣಾರ್ಭಟ! ಉತ್ತರ ಕರ್ನಾಟಕದಲ್ಲಿ ಆಲಿಕಲ್ಲು ಮಳೆಯ ಸಾಧ್ಯತೆ

ಇನ್ನೂ 5 ದಿನ ಇದೇ ವಾತಾವರಣ

ಏಪ್ರಿಲ್ 22 ರವರೆಗೆ ಕರ್ನಾಟಕದ ಉತ್ತರ ಒಳನಾಡಿನ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯಾಗಲಿದ್ದು, ಗಂಟೆಗೆ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಅಂತೆಯೇ ದಕ್ಷಿಣ ಒಳನಾಡಿನಲ್ಲಿಯೂ ಗುಡುಗು ಸಹಿತ ಮಳೆಯೊಂದಿಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಂದಿನ 5 ದಿನಗಳವರೆಗೆ ಕರಾವಳಿ ಪ್ರದೇಶಗಳಲ್ಲಿ ಉಷ್ಣ ಅಲೆ ಇರಲಿದ್ದು, ಮುನ್ನೆಚ್ಚರಿಕಾ ಕ್ರಮವಹಿಸುವಂತೆ ಇಲಾಖೆ ತಿಳಿಸಿದೆ. ಜೊತೆಗೆ ಏಪ್ರಿಲ್ 21ರ ವರೆಗೆ ಉತ್ತರ ಒಳನಾಡಿನಲ್ಲಿ ಆಲಿಕಲ್ಲು ಮಳೆಯಾಗುವ ಸಂಭವವಿದೆ ಎಂದು ಹೇಳಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:46 am, Mon, 20 April 26

Source link

ಎರಡು ವರ್ಷಕ್ಕೊಂದು ಅನಿಮೇಟೆಡ್ ಸಿನಿಮಾ; 10 ವರ್ಷದ ಪ್ಲ್ಯಾನ್ ರೆಡಿ ಮಾಡಿದ ಹೊಂಬಾಳೆ – Kannada News | Hombale Films’ Mahavatara Universe: Parashurama and 10 Year Animated Dashavatara Plan

ಕಳೆದ ವರ್ಷ, ‘ಮಹಾವತಾರ ನರಸಿಂಹ’ ಚಿತ್ರವು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿ ಬಾಕ್ಸ್ ಆಫೀಸ್‌ನಲ್ಲಿ ಸಂಚಲನ ಮೂಡಿಸಿತು. ಈ ಅನಿಮೇಟೆಡ್ ಚಿತ್ರದೊಂದಿಗೆ ಹೊಂಬಾಳೆ ಚಿತ್ರಮಂದಿರಗಳಲ್ಲಿ ಹೊಸ ಅಲೆ ಸೃಷ್ಟಿಸಿತು. ಈಗ, ‘ಮಹಾವತಾರ ಸಿನಿಮ್ಯಾಟಿಕ್ ಯೂನಿವರ್ಸ್’ ನ ಭಾಗವಾಗಿ ಮತ್ತೊಂದು ಅದ್ಭುತ ಪ್ರಾಜೆಕ್ಟ್ ಘೋಷಿಸಲಾಗಿದೆ.
ಮೊದಲೇ ಹೇಳಿದಂತೆ ಭಗವಾನ್ ವಿಷ್ಣುವಿನ ಹತ್ತು ಅವತಾರಗಳನ್ನು ತರಲಾಗುತ್ತಿದೆಯಂತೆ. ‘ಮಹಾವತಾರ: ಪರಶುರಾಮ’ ಚಿತ್ರವನ್ನು ಪ್ರೇಕ್ಷಕರ ಎದುರು ತರಲಾಗುತ್ತಿದೆ. ವಿಷ್ಣುವಿನ ಅತ್ಯಂತ ಉಗ್ರ ರೂಪವೆಂದು ಪರಿಗಣಿಸಲಾದ ಪರಶುರಾಮನ ಕಥೆಯನ್ನು ನಿರ್ಮಿಸಲಾಗುತ್ತಿದೆ ಎಂದು ತಿಳಿಸಲಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಪೋಸ್ಟರ್‌ನಲ್ಲಿ, ಪರಶುರಾಮನು ತನ್ನ ಮುಖ್ಯ ಆಯುಧವಾದ ಪರಶು (ಕೊಡಲಿ) ಹಿಡಿದುಕೊಂಡು ನಡೆಯುತ್ತಿರುವುದನ್ನು ತೋರಿಸಲಾಗಿದೆ.

ಆದರೆ, ಕೇವಲ ಪಾದಗಳನ್ನು ತೋರಿಸುವ ಮೂಲಕ, ನಿರ್ಮಾಪಕರು ಚಿತ್ರದ ಬಗ್ಗೆ ಆಸಕ್ತಿಯನ್ನು ಹೆಚ್ಚಿಸಿದ್ದಾರೆ. ‘ಧರ್ಮವನ್ನು ಸೋಲಿಸಿ ಅನ್ಯಾಯ ಹೆಚ್ಚಾದಾಗ, ಪರಶುರಾಮ ಬರುತ್ತಾನೆ’ ಎಂಬ ಅರ್ಥವಿರುವ ಶೀರ್ಷಿಕೆಯು ಚಿತ್ರದ ಮೇಲಿನ ನಿರೀಕ್ಷೆಗಳನ್ನು ಹೆಚ್ಚಿಸಿದೆ. ಪರಶುರಾಮನ ಕೋಪ ಮತ್ತು ಅವನ ಉಗ್ರ ನೋಟವನ್ನು ಅನಿಮೇಷನ್ ತಂತ್ರಜ್ಞಾನದೊಂದಿಗೆ ಅತ್ಯಂತ ಭವ್ಯವಾದ ರೀತಿಯಲ್ಲಿ ಬೆಳ್ಳಿ ಪರದೆಯ ಮೇಲೆ ತೋರಿಸಲಾಗುವುದು ಎಂದು ತೋರುತ್ತದೆ.

‘ಮಹಾವತಾರ ನರಸಿಂಹ’ ಚಿತ್ರವನ್ನು ಕೇವಲ 6 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾಗಿದ್ದು, 120 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಈ ಯಶಸ್ಸಿನಿಂದ ಉತ್ಸುಕರಾಗಿರುವ ಹೊಂಬಾಳೆ ಫಿಲ್ಮ್ಸ್, ಕ್ಲೀಮ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಈ ಬೃಹತ್ ಸರಣಿಯನ್ನು ಯೋಜಿಸಿದೆ. ಇದನ್ನು ಶಿಲ್ಪಾ ಧವನ್, ಕುಶಾಲ್ ದೇಸಾಯಿ ಮತ್ತು ಚೈತನ್ಯ ದೇಸಾಯಿ ಪ್ರಸ್ತುತಪಡಿಸಿದ್ದಾರೆ. ಅಶ್ವಿನ್ ಕುಮಾರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ವಿಶ್ವದ ಭಾಗವಾಗಿ ಮುಂಬರುವ ಚಿತ್ರಗಳ ವಿವರಗಳನ್ನು ಸಹ ತಯಾರಕರು ಘೋಷಿಸಿದ್ದಾರೆ ಎಂದು ತಿಳಿದಿದೆ.

ಮಹಾವತಾರ: ಪರಶುರಾಮ್ (ಡಿಸೆಂಬರ್ 2027)

ಮಹಾವತಾರ: ರಘುನಂದನ್ (2029)

ಮಹಾವತಾರ: ದ್ವಾರಕಾದೀಶ (2031)

ಮಹಾವತಾರ: ಗೋಕುಲಾನಂದ (2033)

ಮಹಾವತಾರ: ಕಲ್ಕಿ (ಭಾಗ 1 & 2 – 2035, 2037)

ಅನಿಮೇಷನ್ ಕ್ಷೇತ್ರದಲ್ಲಿ ಭಾರತೀಯ ಪುರಾಣಗಳನ್ನು ಅಂತರರಾಷ್ಟ್ರೀಯ ಗುಣಮಟ್ಟಕ್ಕೆ ತರುವ ಗುರಿಯನ್ನು ತಂಡ ಹೊಂದಿದೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲರನ್ನೂ ಆಕರ್ಷಿಸುವಂತೆ ವಿನ್ಯಾಸಗೊಳಿಸಲಾದ ಈ ಚಿತ್ರವು ಡಿಸೆಂಬರ್ 2027 ರಲ್ಲಿ ತೆರೆಗೆ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link