ಪಬ್ಬಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ; ಮಹಡಿಯಿಂದ ಬಿದ್ದು ಯುವಕ ಸಾವು! – Kannada News | Mysuru Pub Brawl: Software Engineer Nishanth Dies After Fall at Purple Haze
ಮೈಸೂರು, ಏಪ್ರಿಲ್ 19: ಜಿಲ್ಲೆಯ ಪಬ್ ಒಂದರಲ್ಲಿ ನಡೆದ ಗಲಾಟೆ ಒಬ್ಬನ ಸಾವಿನಲ್ಲಿ ಅಂತ್ಯಗೊಂಡಿದೆ. ಮೈಸೂರು (Mysuru) ನಗರದ ವಿಜಯನಗರ ಎರಡನೇ ಹಂತದಲ್ಲಿರುವ ಪರ್ಪಲ್ ಹೆಜ್ ರೆಸ್ಟೋರೆಂಟ್ನಲ್ಲಿ ತಡರಾತ್ರಿ ಈ ಘಟನೆ ಸಂಭವಿಸಿದೆ. ಗಲಾಟೆಯಲ್ಲಿ ಗೋಕುಲಂ ನಿವಾಸಿ 32 ವರ್ಷದ ನಿಶಾಂತ್ ಮೃತಪಟ್ಟಿದ್ದು, ಆತ ಬೆಂಗಳೂರಿನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಎಂಬುದು ತಿಳಿದುಬಂದಿದೆ. ಪಾರ್ಟಿ ಮುಗಿಸಿ ಹೊರಬರುವ ವೇಳೆ ಘಟನೆ ನಿಶಾಂತ್ ತನ್ನ ಸ್ನೇಹಿತರಾದ ಸಂದೀಪ್ ಮತ್ತು ದೀಕ್ಷಿತ್ ಜೊತೆ ಪಬ್ನಲ್ಲಿ ಪಾರ್ಟಿ ಮುಗಿಸಿ…