All posts by nagaraj11081993

ಕೃಷಿಹೊಂಡದಲ್ಲಿ ಯುವಕರ ಶವ ಪತ್ತೆ: ಈಜಲು ಹೋಗಿ ಇಬ್ಬರು ಕಾರ್ಮಿಕರ ದುರಂತ ಅಂತ್ಯ? – Kannada News | Chikkamagaluru Tragedy: Two Labourers’ Bodies Found in Farm Pond at Bannuru

ಯುವಕರಿಬ್ಬರ ದಾರುಣ ಅಂತ್ಯImage Credit source: Tv9 Kannada

ಚಿಕ್ಕಮಗಳೂರು, ಏಪ್ರಿಲ್​​ 19: ತೀವ್ರ ಬಿಸಿಲಿನ ಪರಿಣಾಮ ಕೂಲ್​​ ಆಗೋಣ ಎಂದು ಸಿಕ್ಕ ಸಿಕ್ಕಲ್ಲಿ ಈಜಲು ಹೋಗಿ ಪ್ರಾಣ ಕಳೆದುಕೊಳ್ಳುತ್ತಿರುವವರ ಸಂಖ್ಯೆ ರಾಜ್ಯದಲ್ಲಿ ಹೆಚ್ಚುತ್ತಲೇ ಇದೆ. ಈಜಲು ಹೋಗಿ ಭದ್ರಾ ಹಿನ್ನೀರಿನಲ್ಲಿ ನಿನ್ನೆಯಷ್ಟೇ ಯುವಕನೋರ್ವ ಮೃತಪಟ್ಟ ಘಟನೆ ಮಾಸುವ ಮುನ್ನವೇ ಕಾಫಿನಾಡು ಚಿಕ್ಕಮಗಳೂರಲ್ಲಿ (Chikkamagaluru) ಮತ್ತೊಂದು ಅವಘಡ ನಡೆದಿದೆ. ಚಿಕ್ಕಮಗಳೂರು ತಾಲೂಕಿನ ಬನ್ನೂರು ಗ್ರಾಮದ ಕೃಷಿಹೊಂದಲ್ಲಿ ಇಬ್ಬರು ಕಾರ್ಮಿಕರ ಮೃತದೇಹ ಪತ್ತೆಯಾಗಿದೆ. ರಮೇಶ್(27), ಮಹೇಶ್ (34) ಮೃತರಾಗಿದ್ದು, ಈಜಲು ತೆರಳಿ ಮುಳುಗಿ  ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಮೃತರು ಕೊಪ್ಪ ತಾಲೂಕಿನ ಜಯಪುರ ಗ್ರಾಮದವರಾಗಿದ್ದು, ಬನ್ನೂರಿನ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಕೃಷಿ ಹೊಂಡದ ಸಮೀಪ ಇವರ ಚಪ್ಪಲಿ ಪತ್ತೆಯಾಗಿದ್ದ ಹಿನ್ನೆಲೆ ನೀರಿನಲ್ಲಿ ಮುಳುಗಿರಬಹುದೆಂಬ ಶಂಕೆ ವ್ಯಕ್ತವಾಗಿತ್ತು. ಹೀಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಕೃಷಿ ಹೊಂಡದಲ್ಲಿ ಶೋಧ ಕಾರ್ಯ ನಡೆಸಿದ್ದರು. ಈ ವೇಳೆ ಕಾರ್ಮಿಕರು ಶವವಾಗಿ ಪತ್ತೆಯಾಗಿದ್ದು, ಮೃತದೇಹವನ್ನು ನೀರಿನಿಂದ ಹೊರತೆಗೆಯಲಾಗಿದೆ. ಅಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಕುರಿ ಮೈತೊಳೆಯಲು ಕೆರೆಗೆ ಹೋಗಿದ್ದ ಸಹೋದರರು ನೀರುಪಾಲು; ಬದುಕು ದುರಂತ ಅಂತ್ಯ

ಯುವಕನ ಶವ ಪತ್ತೆ

ನಿತಿನ್​​ ಮೃತದೇಹ ಪತ್ತೆ

ಮತ್ತೊಂದು ಕಡೆ ಎನ್​​.ಆರ್​​.ಪುರ ತಾಲೂಕಿನ ಹಂದೂರು ಬಳಿಯ ಸಿದ್ದರಾಮಯ್ಯ ಸೇತುವೆ ಬಳಿ ನಿನ್ನೆ ಸ್ನೇಹಿತರ ಜೊತೆ ಈಜಲು ತೆರಳಿ ಭದ್ರಾ ಹಿನ್ನೀರಿನಲ್ಲಿ  ನಾಪತ್ತೆಯಾಗಿದ್ದ ಯುವಕ ನಿತಿನ್‌(34) ಶವ ಪತ್ತೆಯಾಗಿದೆ. ಮೃತ ನಿತಿನ್​ ಶಿಗುವಾನೆ ಗ್ರಾಮದವರಾಗಿದ್ದು, ನಾಪತ್ತೆಯಾಗಿದ್ದ ನಿತಿನ್​​ಗಾಗಿ ಸತತ ಶೋಧ ಕಾರ್ಯಾಚರಣೆ ನಡೆಸಿದ್ದ ಅಗ್ನಿಶಾಮಕದಳದ ಸಿಬ್ಬಂದಿ ಇಂದು ಬೆಳಿಗ್ಗೆ ಮೃತದೇಹವನ್ನು ಪತ್ತೆ ಮಾಡಿದ್ದಾರೆ. ಎನ್​​.ಆರ್​​.ಪುರ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಜೈಲರ್ 2’ ಬಿಡುಗಡೆಗೂ ಮುನ್ನವೇ 160 ಕೋಟಿ ರೂಪಾಯಿ ಒಟಿಟಿ ಡೀಲ್? – Kannada News | Rajinikanth Jailer 2 OTT rights sold to record price Amazon Prime Video

ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲರ್’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಯಶಸ್ಸು ಕಂಡಿತ್ತು. ಈಗ ಅದರ ಮುಂದುವರಿದ ಭಾಗ ‘ಜೈಲರ್ 2’ (Jailer 2) ಮೇಲೆ ನಿರೀಕ್ಷೆ ಹೆಚ್ಚಿದೆ. ಚಿತ್ರೀಕರಣದ ಹಂತದಲ್ಲಿರುವ ಈ ಸಿನಿಮಾ ಬಿಡುಗಡೆಗೂ ಮುನ್ನವೇ ದಾಖಲೆಗಳ ಮೇಲೆ ದಾಖಲೆ ಬರೆಯಲು ಶುರು ಮಾಡಿದೆ. ನೆಲ್ಸನ್ ದಿಲೀಪ್ ಕುಮಾರ್ ಮತ್ತು ರಜನಿಕಾಂತ್ (Rajinikanth) ಕಾಂಬಿನೇಷನ್‌ನ ಈ ಸಿನಿಮಾ ಬಿಗ್ ಬಜೆಟ್​ನಲ್ಲಿ ತಯಾರಾಗುತ್ತಿದೆ. ಚಿತ್ರಮಂದಿರಕ್ಕೆ ಬರುವ ಮೊದಲೇ ಈ ಸಿನಿಮಾ ಡಿಜಿಟಲ್ ಲೋಕದಲ್ಲಿ ಇತಿಹಾಸ ನಿರ್ಮಿಸಿದೆ.

ವರದಿಗಳ ಪ್ರಕಾರ, ಅಮೆಜಾನ್ ಪ್ರೈಮ್ ವಿಡಿಯೋ ಸಂಸ್ಥೆಯು ‘ಜೈಲರ್ 2’ ಚಿತ್ರದ ಒಟಿಟಿ ಹಕ್ಕುಗಳನ್ನು ಬರೋಬ್ಬರಿ 160 ಕೋಟಿ ರೂಪಾಯಿ ಮೊತ್ತಕ್ಕೆ ಖರೀದಿಸಿದೆ ಎನ್ನಲಾಗಿದೆ. ಇದು ತಮಿಳು ಚಿತ್ರರಂಗದ ಇತಿಹಾಸದಲ್ಲೇ ಅತಿ ದೊಡ್ಡ ಒಟಿಟಿ ಡೀಲ್ ಆಗಿದೆ. ಈಗಲೂ ರಜನಿಕಾಂತ್ ಅವರ ಸಿನಿಮಾಗಳಿಗೆ ಎಷ್ಟು ಬೇಡಿಕೆ ಇದೆ ಎಂಬುದಕ್ಕೆ ಈ ಅಂಕಿಅಂಶಗಳೇ ಸಾಕ್ಷಿ ಆಗಿವೆ.

ಈ ಹಿಂದೆ ಕಮಲ್ ಹಾಸನ್ ಮತ್ತು ಮಣಿರತ್ನಂ ಅವರ ‘ಥಗ್ ಲೈಫ್’ ಸಿನಿಮಾ 150 ಕೋಟಿ ರೂಪಾಯಿಗೆ ಮಾರಾಟವಾಗಿ ದಾಖಲೆ ಬರೆದಿತ್ತು. ಈಗ ರಜನಿ ಆ ದಾಖಲೆಯನ್ನು ಅಳಿಸಿಹಾಕಿದ್ದಾರೆ. 160 ಕೋಟಿ ರೂಪಾಯಿ ಒಟಿಟಿ ಡೀಲ್ ಬಗ್ಗೆ ಚಿತ್ರತಂಡ ಇನ್ನೂ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಆದರೂ ಸುದ್ದಿ ಜೋರಾಗಿ ಕೇಳಿಬರುತ್ತಿದೆ.

‘ಜೈಲರ್’ ಮೊದಲ ಭಾಗದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರ ಎಂಟ್ರಿ ಥಿಯೇಟರ್‌ಗಳಲ್ಲಿ ಸಂಚಲನ ಮೂಡಿಸಿತ್ತು. ಸೀಕ್ವೆಲ್‌ನಲ್ಲಿಯೂ ಶಿವಣ್ಣ ಅವರ ಪಾತ್ರ ಇರಲಿದ್ದು, ಅಭಿಮಾನಿಗಳಿಗೆ ಇದು ದೊಡ್ಡ ಸಮಾಚಾರ. ಚಿತ್ರದ ತಾರಾಗಣದಲ್ಲಿ ದಕ್ಷಿಣ ಭಾರತದ ಘಟಾನುಘಟಿ ಕಲಾವಿದರಿದ್ದಾರೆ. ಮೋಹನ್ ಲಾಲ್, ವಿಜಯ್ ಸೇತುಪತಿ, ರಮ್ಯಾ ಕೃಷ್ಣನ್, ಯೋಗಿ ಬಾಬು ಮುಂತಾದವರು ಇದ್ದಾರೆ.

ಇದನ್ನೂ ಓದಿ: ‘ಜನ ನಾಯಗನ್’ ಬಳಿಕ ‘ಜೈಲರ್ 2’ ಸಿನಿಮಾಗೆ ಲೀಕ್ ಕಾಟ; ವಿಡಿಯೋ ವೈರಲ್

ಮೊದಲ ಭಾಗದ ಯಶಸ್ಸಿನಲ್ಲಿ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರ ಹಿನ್ನೆಲೆ ಸಂಗೀತ ಮತ್ತು ಹಾಡುಗಳ ಪಾತ್ರ ಬಹಳ ದೊಡ್ಡದಿತ್ತು. ‘ಜೈಲರ್ 2’ ಚಿತ್ರಕ್ಕೂ ಅವರೇ ಸಂಗೀತ ನೀಡುತ್ತಿದ್ದು, ಮತ್ತೊಮ್ಮೆ ಮಾಸ್ ಮ್ಯಾಜಿಕ್ ನಿರೀಕ್ಷಿಸಲಾಗಿದೆ. ಈ ಬಾರಿ ಸಿನಿಮಾದಲ್ಲಿ ಏನೆಲ್ಲ ವಿಶೇಷತೆ ಇರಲಿದೆ ಎಂಬುದನ್ನು ನೋಡಲು ಅಭಿಮಾನಿಗಳು ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಐಪಿಎಲ್​ನಲ್ಲಿ ‘ದುರಾದೃಷ್ಟ’ದ ದಾಖಲೆ ಬರೆದ ಇಶಾನ್ ಕಿಶನ್

Source link

ಸಚಿವ ಜಮೀರ್ ಮತ್ತೆ ಜೆಡಿಎಸ್​​​​ ಸೇರ್ತಾರೆ ಎನ್ನುವ ಚರ್ಚೆ ಬಗ್ಗೆ ಸ್ಪಷ್ಟನೆ ನೀಡಿದ ಕುಮಾರಸ್ವಾಮಿ – Kannada News | HD Kumaraswamy Clarify about Minister Zameer ahmed khan to Join JDS

ನವದೆಹಲಿ, (ಏಪ್ರಿಲ್ 19): ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ (Davanagere South By Election) ವಿಚಾರವಾಗಿ ಕಾಂಗ್ರೆಸ್​​​​ನಲ್ಲಿ ಒಳಬೇಗುದಿ ಸ್ಫೋಟಗೊಂಡಿದ್ದು, ಮುಸ್ಲಿಂ ನಾಯಕರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲಾಗಿದೆ. ಇದರೀಗ ಈ ಲಿಸ್ಟ್​ನಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ (Zameer ahmed khan) ಇದ್ದು, ಸಂಪುಟ ಪುನಾರಚನೆ ಸಂದರ್ಭದಲ್ಲಿ ಜಮೀರ್ ಅವರನ್ನ ಸಚಿವ ಸ್ಥಾನದಿಂದ ಕೈಬಿಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇದರ ಮಧ್ಯೆ ಇದೀಗ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಜೆಡಿಎಸ್‌ಗೆ ವಾಪಸ್‌ ತೆರಳುತ್ತಾರೆ ಎಂಬ ವದಂತಿ ಜೋರಾಗಿದೆ. ಇತ್ತೀಚೆಗೆ ಖಾಸಗಿ ಹೋಟೆಲ್​​ನಲ್ಲಿ ಜಮೀರ್ ಅಹ್ಮದ್ ಖಾನ್ ಹಾಗೂ ಕುಮಾರಸ್ವಾಮಿ ಭೇಟಿಯಾಗಿದ್ದು ರಹಸ್ಯ ಮಾತುಕತೆ ನಡೆಸಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ. ಹೀಗಾಗಿ ಜಮೀರ್ ಮುಂದಿನ ದಿನಗಳಲ್ಲಿ ಜೆಡಿಎಸ್ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ.

ಇನ್ನು ಇದಕ್ಕೆ ಮೊನ್ನೆ ಕುಮಾರಸ್ವಾಮಿ ಅವರೇ ಪ್ರತಿಕ್ರಿಯಿಸಿ, ಯಾರೂ ಸಂಪರ್ಕಿಸಿಲ್ಲ. ಸಂಪರ್ಕಿಸಿದರೆ ಪಕ್ಷದ ಹಿರಿಯರೊಂದಿಗೆ ಚರ್ಚಿಸುವೆ ಎಂಬ ಹೇಳಿಕೆ ರಾಜಕೀಯದಲ್ಲಿ ಕುತೂಹಲ ಹುಟ್ಟುಹಾಕಿತ್ತು. ಆದ್ರೆ, ಇದೀಗ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದು, ಹಿಂದೆ ಮಾಡಿದ ತಪ್ಪುಗಳನ್ನು ಮತ್ತೆ ಮಾಡಲ್ಲ. ಇಂತಹ ಸಂದರ್ಭಗಳನ್ನು ದುರ್ಬಳಕೆ ಮಾಡಿಕೊಳ್ಳುವುದಿಲ್ಲ. ಜೆಡಿಎಸ್ ಜೊತೆಗೆ ಯಾರೂ ಸಂಪರ್ಕ ಸಾಧಿಸಿಲ್ಲ ಎಂದಿದ್ದಾರೆ. ಹಿಂದೆ ಮಾಡಿದ ತಪ್ಪುಗಳನ್ನು ಮತ್ತೆ ಮಾಡಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ಅವರನ್ನ ಸೇರಿಸಿಕೊಳ್ಳುವುದಿಲ್ಲ ಎನ್ನುವ ಅರ್ಥದಲ್ಲಿ ಹೇಳಿದ್ದಾರೆ. ಈ ಮೂಲಕ ಎಲ್ಲಾ ಗೊಂದಲಗಳಿಗೆ, ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

RCB ತಂಡದ ಮುಂದಿನ ಮ್ಯಾಚ್ ಯಾವಾಗ? ಯಾರ ವಿರುದ್ಧ? ಇಲ್ಲಿದೆ ಡಿಟೇಲ್ಸ್ – Kannada News | IPL 2026: RCB Next Match Full Details

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವಿನ ಓಟಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಬ್ರೇಕ್ ಹಾಕಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 26ನೇ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಡಿಸಿ ಪಡೆ 6 ವಿಕೆಟ್​ಗಳ ಗೆಲುವು ದಾಖಲಿಸಿದೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 20 ಓವರ್​ಗಳಲ್ಲಿ 175 ರನ್​ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 19.5 ಓವರ್​ಗಳಲ್ಲಿ 179 ರನ್ ಬಾರಿಸಿ 6 ವಿಕೆಟ್​ಗಳ ಜಯ ಸಾಧಿಸಿದೆ.

ಈ ಸೋಲಿನ ಹೊರತಾಗಿಯೂ ಅಂಕ ಪಟ್ಟಿಯಲ್ಲಿ ಆರ್​ಸಿಬಿ ತಂಡದ ಸ್ಥಾನ ಬದಲಾಗಿಲ್ಲ. ಏಕೆಂದರೆ 6 ಮ್ಯಾಚ್​ಗಳಲ್ಲಿ 4 ಗೆಲುವು ದಾಖಲಿಸಿರುವ ರಾಯಲ್ ಪಡೆಯು ಉತ್ತಮ ನೆಟ್ ರನ್ ರೇಟ್ ಹೊಂದಿದ್ದು, ಈ ಮೂಲಕ ದ್ವಿತೀಯ ಸ್ಥಾನವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಇದಾಗ್ಯೂ ಆರ್​ಸಿಬಿ ತಂಡ ತನ್ನ ಮುಂದಿನ ಮ್ಯಾಚ್​ಗಳಲ್ಲಿ ಸೋತರೆ ಟಾಪ್-4 ರಿಂದ ಕೆಳಗಿಳಿಯಲಿದೆ. ಇಲ್ಲಿ ಆರ್​ಸಿಬಿ ತಂಡದ ಮುಂದಿನ ಎದುರಾಳಿ ಯಾರೆಂದು ನೋಡುವುದಾದರೆ…

ಟೈಟಾನ್ಸ್ ಪಡೆಯ ಸವಾಲು:

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಮುಂದಿನ ಪಂದ್ಯವನ್ನು ಏಪ್ರಿಲ್ 24, ಶುಕ್ರವಾರದಂದು ಗುಜರಾತ್ ಟೈಟನ್ಸ್ (GT) ವಿರುದ್ಧ ಆಡಲಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯವು ತವರಿನಲ್ಲಿ ಆರ್​ಸಿಬಿ ತಂಡದ ಕೊನೆಯ ಮ್ಯಾಚ್. ಹೀಗಾಗಿ ಈ ಪಂದ್ಯದ ಮೂಲಕ ಆರ್​ಸಿಬಿ ಮತ್ತೆ ಗೆಲುವಿನ ಲಯ ಕಂಡುಕೊಳ್ಳಬೇಕಿದೆ.

RCB ತಂಡದ ಮುಂಬರುವ ಪಂದ್ಯಗಳ ವೇಳಾಪಟ್ಟಿ:

ದಿನಾಂಕ ಎದುರಾಳಿ ತಂಡ ಸ್ಥಳ ಸಮಯ (IST)
ಏಪ್ರಿಲ್ 24  ಗುಜರಾತ್ ಟೈಟಾನ್ಸ್ ಬೆಂಗಳೂರು (ತವರು) ರಾತ್ರಿ 7:30
ಏಪ್ರಿಲ್ 27 ಡೆಲ್ಲಿ ಕ್ಯಾಪಿಟಲ್ಸ್ ದೆಹಲಿ ರಾತ್ರಿ 7:30
ಏಪ್ರಿಲ್ 30 ಗುಜರಾತ್ ಟೈಟಾನ್ಸ್ ಅಹಮದಾಬಾದ್ ರಾತ್ರಿ 7:30
ಮೇ 07 ಲಕ್ನೋ ಸೂಪರ್ ಜೈಂಟ್ಸ್ ಲಕ್ನೋ ರಾತ್ರಿ 7:30
ಮೇ 10 ಮುಂಬೈ ಇಂಡಿಯನ್ಸ್ ರಾಯ್‌ಪುರ (ತವರು) ರಾತ್ರಿ 7:30
ಮೇ 13 ಕೋಲ್ಕತ್ತಾ ನೈಟ್ ರೈಡರ್ಸ್ ರಾಯ್‌ಪುರ (ತವರು) ರಾತ್ರಿ 7:30
ಮೇ 17 ಪಂಜಾಬ್ ಕಿಂಗ್ಸ್ ಧರ್ಮಶಾಲಾ ಮಧ್ಯಾಹ್ನ 3:30
ಮೇ 22 ಸನ್‌ರೈಸರ್ಸ್ ಹೈದರಾಬಾದ್ ಹೈದರಾಬಾದ್ ರಾತ್ರಿ 7:30

ಇದನ್ನೂ ಓದಿ: IPL 2026: CSK ತಂಡಕ್ಕೆ ಮತ್ತೊಂದು ಆಘಾತ..!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಜೇಕಬ್ ಬೆಥೆಲ್, ಜೋಶ್ ಹೇಝಲ್​ವುಡ್, ಯಶ್ ದಯಾಲ್, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ಯಶ್ ದಯಾಳ್, ರಾಸಿಖ್ ಸಲಾಂ, ವೆಂಕಟೇಶ್ ಅಯ್ಯರ್, ಅಭಿನಂದನ್ ಸಿಂಗ್, ಸುಯಶ್ ಶರ್ಮಾ, ಜೇಕಬ್ ಡಫಿ, ಸಾತ್ವಿಕ್ ದೇಸ್ವಾಲ್, ಮಂಗೇಶ್ ಯಾದವ್, ಜೋರ್ಡನ್ ಕಾಕ್ಸ್, ವಿಕಿ ಓಸ್ತ್ವಾಲ್, ವಿಹಾನ್ ಮಲ್ಹೋತ್ರಾ, ಕಾನಿಷ್ಕ್ ಚೌಹಾನ್.

Source link

ಮೇ 5ರ ನಂತರ ಕರ್ನಾಟಕ ರಾಜಕೀಯದಲ್ಲಿ ಏನೇನಾಗುತ್ತೆ ನೀವೇ ನೋಡಿ: ಹೊಸ ಬಾಂಬ್ ಸಿಡಿಸಿದ ಕುಮಾರಸ್ವಾಮಿ – Kannada News | Some Political Developments In Karnataka after May 5th By Election Result Says HD Kuamraswamy

ನವದೆಹಲಿ, (ಏಪ್ರಿಲ್ 19): ಕರ್ನಾಟಕ ಕಾಂಗ್ರೆಸ್​​ನಲ್ಲಿ ನಾಯಕತ್ವ ಬದಲಾವಣೆ ಹಾಗೂ ಸಚಿವ ಸಂಪುಟ ವಿಸ್ತರಣೆಯ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಇದರ ಮಧ್ಯೆ ದಾವಣಗೆರೆ ದಕ್ಷಿಣ ಬೈ ಎಲೆಕ್ಷನ್ ಕಾಂಗ್ರೆಸ್​​ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಹೌದು…ಟಿಕೆಟ್ ವಿಚಾರವಾಗಿ ಶುರುವಾದ ಅಸಮಧಾನ ಇದೀಗ ನಾಯಕರ ತಲೆದಂಡದವರೆಗೂ ಬಂದು ನಿಂತಿದೆ. ಅಷ್ಟೇ ಅಲ್ಲದೇ ದಾವಣಗೆರೆ ದಕ್ಷಿಣ ಉಪಚುನಾವಣೆ ಫಲಿತಾಂಶದ ಬಗ್ಗೆಯೂ ಕಾಂಗ್ರೆಸ್​​ನಲ್ಲಿ ಆತಂಕ ಮೂಡಿಸಿದೆ. ಇದರ ಮಧ್ಯೆ ಇದೀಗ ಕೇಂದ್ರ ಸಚಿವ ಎಚ್​​ಡಿ ಕುಮಾರಸ್ವಾಮಿ (HD Kuamraswamy) ಹೊಸ ಬಾಂಬ್ ಸಿಡಿಸಿದ್ದಾರೆ.

ನವದೆಹಲಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಕರ್ನಾಟದಲ್ಲಿ ಏನೇನೋ ರಾಜಕೀಯ ಬೆಳವಣಿಗೆಗಳು ಆಗುತ್ತಿವೆ. ಇನ್ನೂ ಮೇ5ರ ನಂತರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೀವೇ ನೋಡಿ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಇದು ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಯುರೋಪಿನಲ್ಲಿ ಎರಡು ತಿಂಗಳ ವಾಸ, ವಿದೇಶದಲ್ಲಿ ಕಲಿತ ಜೀವನ ಪಾಠ ಹಂಚಿಕೊಂಡ ಭಾರತೀಯ ಮಹಿಳೆ – Kannada News | Indian woman living in Europe says live for yourself

ನಮ್ಮ ಊರಲ್ಲಿ ಕಡಿಮೆ ಸಂಬಳ ಪಡೆದ್ರೂ ಸಿಗೋ ಖುಷಿ, ವಿದೇಶಕ್ಕೆ ಹೋಗಿ ಲಕ್ಷಾನುಗಟ್ಟಲೆ ದುಡಿದ್ರೂ ಸಿಗಲ್ಲ ಅನ್ನೋ ಅಭಿಪ್ರಾಯ ಅನೇಕರಲ್ಲಿದೆ. ಆದರೆ ಕೆಲವರಿಗೆ ಹೊರ ರಾಜ್ಯ, ಹೊರ ದೇಶ (foreign) ಅಂದ್ರೆ ಅದೇನೋ ವ್ಯಾಮೋಹ. ವಿದೇಶದಲ್ಲಿ ಜಾಬ್ ಸಿಕ್ಕರೆ ಲೈಫ್ ಸೆಟ್ಲ್ ಆದಂತೆ ಎನ್ನುವುದು ಕೆಲವರ ಭಾವನೆ. ಆದರೆ ಈ ಹೊರ ದೇಶದಲ್ಲಿ ಕೆಲಸ ಮಾಡುವ ಅನೇಕರು ಮಾಡುವ ತ್ಯಾಗಗಳು ಅಷ್ಟಿಷ್ಟಲ್ಲ. ಒಂದಷ್ಟು ಬದಲಾವಣೆಗಳೊಂದಿಗೆ ಬದುಕು ಕಟ್ಟಿಕೊಳ್ಳುತ್ತಾರೆ. ಭಾರತೀಯ ಮಹಿಳೆಯೊಬ್ಬರು ವಿದೇಶದಲ್ಲಿ ನೆಲೆಸಿದ್ದಾರೆ. ಭಾರತೀಯಳಾಗಿ ಯುರೋಪಿಯನ್‌ನಲ್ಲಿ (Europe)  ಎರಡು ತಿಂಗಳುಗಳ ಕಾಲ ನೆಲೆಸಿ, ನಾನು ಕಲಿತ ವಿಷಯಗಳನ್ನು ನನ್ನ ದೈನಂದಿನ ಜೀವನದಲ್ಲಿ ಹೇಗೆ ಅಳವಡಿಸಿಕೊಂಡೆ ಎಂದು ಹೇಳಿದ್ದಾರೆ. ಈ ಅನುಭವಗಳು ಹಾಗೂ ಬದಲಾವಣೆಗಳು ಬದುಕಿಗೆ ಎಷ್ಟು ಅನಿವಾರ್ಯ ಎನ್ನುವುದನ್ನು ಈ ವಿಡಿಯೋ ಸಾರಿ ಹೇಳುವಂತಿದೆ.

ವಿಶಾ ಖಂಡೇಲ್ವಾಲ್ (visha.khandelwal) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಕಳೆದ ಕೆಲವು ತಿಂಗಳುಗಳನ್ನು ಯುರೋಪಿಯನ್‌ನಲ್ಲಿ ಭಾರತೀಯ ಮಹಿಳೆ ಕಳೆದಿದ್ದು, ತಮ್ಮ ಅನುಭವಗಳನ್ನು ವಿವರಿಸಿದ್ದಾರೆ. ನಾನು ಕಲಿತ ವಿಷಯಗಳನ್ನು ನನ್ನ ದೈನಂದಿನ ಜೀವನದಲ್ಲಿ ಹೇಗೆ ಅನ್ವಯಿಸುತ್ತಿದ್ದೇನೆ. ಮೊದಲು, ಸಣ್ಣ ಮಾತುಕತೆಯಾಗಿದ್ದರೂ ಕ್ಯಾಬ್ ಚಾಲಕರು, ಮಾಣಿಗಳು, ಹಾದುಹೋಗುವ ಅಪರಿಚಿತರನ್ನು ಸ್ವಾಗತಿಸಲು ಕಲಿತೆ. ಈ ಎರಡು ತಿಂಗಳಲ್ಲಿ ನಾನು ಎಲ್ಲರನ್ನೂ ಸ್ವಾಗತಿಸುವ ಅಭ್ಯಾಸವನ್ನು ಬೆಳೆಸಿಕೊಂಡೆ ಎಂದು ಹೇಳಿದ್ದಾರೆ.

ವೈರಲ್‌ ವಿಡಿಯೋ ಇಲ್ಲಿದೆ

ಈ ನಡವಳಿಕೆಯು ಭಾರತದಲ್ಲಿ ಸರಾಗವಾಗಿರಲು ಸಾಧ್ಯವಿಲ್ಲ.. ಆದರೆ ಈ ಅಭ್ಯಾಸವು ಸಂವಹನದ ಮೇಲೆ ಪ್ರಭಾವ ಬೀರಿದೆ. ಆಟೋ ಚಾಲಕನಿಗೆ ಒಟಿಪಿ ಹೇಳುವುದು ತುಂಬಾ ಪ್ರಾಯೋಗಿಕವಾಗಿದೆ. ತದನಂತರದ ಈ ಸಂಭಾಷಣೆಗಳು ಪ್ರಯಾಣದ ನಡುವೆ ನಿಮ್ಮ ದೃಷ್ಟಿಕೋನವನ್ನು ಬದಲಾಯಿಸುತ್ತದೆ ಹಾಗೂ ಮನಸ್ಸು ತೆರೆದು ಕೊಳ್ಳುತ್ತದೆ ಎಂದಿದ್ದಾರೆ.

ನಾವು ಇಬ್ಬರು ಭಾರತೀಯ ಹುಡುಗಿಯರು ಸ್ವಿಸ್ ಹುಡುಗನೊಂದಿಗೆ ಪ್ರಯಾಣಿಸುತ್ತಿದ್ದೆವು. ಆ ಹುಡುಗನು ಬೆಳಿಗ್ಗೆ 8:30 ಕ್ಕೆ ನಮ್ಮನ್ನು ಭೇಟಿಯಾಗಬೇಕೆಂದು ಹೇಳಿದ. ನಾವು ಅವನಿಗೆ 8:45 ಕ್ಕೆ ಸಮಯಕ್ಕೆ ಬರಲು ಹೇಳಿದ್ದೆವು. ಆದರೆ ಆತನು 8:30 ಕ್ಕೆ ಬಂದು ನಮಗಾಗಿ ಕಾಯುತ್ತಿದ್ದನು ಎಂದು ಹೇಳಿದ್ದಾರೆ. ಈ  ಸಮಯ ಪಾಲನೆಯಂತಹ ಅಭ್ಯಾಸಗಳು ಮಾಯವಾಗಿವೆ. ಈಗ ನಾನು ಕ್ಯಾಬ್, ಆಟೋಗಾಗಿ ಕಾಯುತ್ತಿದ್ದೇನೆ. ಕೆಲವೊಮ್ಮೆ ಸಮಯಕ್ಕಿಂತ ಮೊದಲೇ ಬರುತ್ತೇನೆ. ತಡವಾಗಿ ಬಂದಿದ್ದಕ್ಕಾಗಿ ಕ್ಷಮೆಯಾಚಿಸಬೇಕಾಗಿಲ್ಲದ ಕಾರಣ ದೂರವಾಗುವ ಒತ್ತಡ ಮತ್ತು ಅಪರಾಧ ಪ್ರಜ್ಞೆ, ತುಂಬಾ ಕಡಿಮೆ ಎಂದಿದ್ದಾರೆ.

ಅಂತಿಮವಾಗಿ, ನಿಮಗಾಗಿ ಬದುಕುವುದು. ನಾನು 35 ರಿಂದ 40 ವರ್ಷ ವಯಸ್ಸಿನ ಮಹಿಳೆಯರೊಂದಿಗೆ ವಾಸದ ಸ್ಥಳಗಳನ್ನು ಹಂಚಿಕೊಂಡಿದ್ದೇನೆ, ಒಂಟಿಯಾಗಿ ಪ್ರಯಾಣಿಸುತ್ತಿದ್ದೇನೆ, ಪುಸ್ತಕ ಬರೆಯುತ್ತಿದ್ದೇನೆ. ಫಿಟ್ನೆಸ್ ಮೇಲೆ ಕೇಂದ್ರೀಕರಿಸುತ್ತಿದ್ದೇನೆ, ಸಂಪೂರ್ಣವಾಗಿ ತಲೆಕೆಡಿಸಿಕೊಳ್ಳಲಿಲ್ಲ ಎಂದು ವಿವರಿಸಿರುವುದನ್ನು ಕಾಣಬಹುದು.

ಇದನ್ನೂ ಓದಿ: ಜರ್ಮನ್‌ನಲ್ಲಿ ಡ್ರೀಮ್‌ ಜಾಬ್‌ ಗಿಟ್ಟಿಸಿಕೊಂಡ ಭಾರತೀಯ ಮಹಿಳೆ ಹೇಳಿದ್ದೇನು ನೋಡಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಸಮಯಪಾಲನೆ ವಿಚಾರ ತುಂಬಾ ಖುಷಿ ಕೊಟ್ಟಿತು ಎಂದಿದ್ದಾರೆ. ಇನ್ನೊಬ್ಬರು, ಈ ಮನಸ್ಥಿತಿಯ ಬದಲಾವಣೆ ನಿಧಾನವಾಗಿ ಆಗಬೇಕು ಎಂದು ಹೇಳಿದ್ದಾರೆ. ಮತ್ತೊಬ್ಬರು, ನಿಮಗಾಗಿ ಬದುಕುವುದು ಇಲ್ಲಿ ಕಠಿಣ ಪಾಠವಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಫಾರೆಕ್ಸ್ ರಿಸರ್ವ್ಸ್: ಮತ್ತೆ 700 ಬಿಲಿಯನ್ ಡಾಲರ್ ಮೈಲಿಗಲ್ಲು ಮುಟ್ಟಿದ ಭಾರತ – Kannada News | India’s forex reserves rise to 700 billion USD on April 10th

ಫಾರೆಕ್ಸ್ ರಿಸರ್ವ್ಸ್Image Credit source: Shutterstock

ನವದೆಹಲಿ, ಏಪ್ರಿಲ್ 19: ಭಾರತದ ಫಾರೆಕ್ಸ್ ರಿಸರ್ವ್ಸ್ (Forex reserves) ಏಪ್ರಿಲ್ 10ರಂದು ಅಂತ್ಯಗೊಂಡ ವಾರದಲ್ಲಿ 3.825 ಬಿಲಿಯನ್ ಡಾಲರ್​ನಷ್ಟು ಏರಿದೆ. ಹಿಂದಿನ ವಾರದಲ್ಲೂ 9.063 ಬಿಲಿಯನ್ ಡಾಲರ್​ನಷ್ಟು ರಿಸರ್ವ್ಸ್ ಹೆಚ್ಚಳ ಆಗಿತ್ತು. ಇದರೊಂದಿಗೆ ಭಾರತದ ವಿದೇಶೀ ವಿನಿಮಯ ಮೀಸಲು ನಿಧಿ 700.946 ಬಿಲಿಯನ್ ಡಾಲರ್​ಗೆ ಏರಿದೆ. ಆದರೆ, ಸಾರ್ವಕಾಲಿಕ ಗರಿಷ್ಠ ಫಾರೆಕ್ಸ್ ಮೀಸಲು ನಿಧಿಯ ಮಟ್ಟ ಮುಟ್ಟಲು ಇನ್ನೂ 28 ಬಿಲಿಯನ್ ಡಾಲರ್ ಬೇಕಾಗುತ್ತದೆ.

2026ರ ಫೆಬ್ರುವರಿ 27ರಂದು ಭಾರತದ ಫಾರೆಕ್ಸ್ ರಿಸರ್ವ್ಸ್ 728.494 ಬಿಲಿಯನ್ ಡಾಲರ್ ಆಗಿತ್ತು. ಆ ನಂತರದಲ್ಲಿ ಇರಾನ್ ಇತ್ಯಾದಿ ಕಡೆ ಜಾಗತಿಕ ರಾಜಕೀಯ ಸಂಕಷ್ಟಗಳ ಕಾರಣಗಳಿಗೆ ರುಪಾಯಿ ಮೇಲೆ ಒತ್ತಡ ಬಿದ್ದು, ಆರ್​ಬಿಐ ತನ್ನ ರಿಸರ್ವ್ಸ್​ನಲ್ಲಿದ್ದ ಒಂದಿಷ್ಟು ಡಾಲರ್​ಗಳನ್ನು ಮಾರುತ್ತಾ ಹೋಗಬೇಕಾಯಿತು. ಹೀಗಾಗಿ, ಫಾರೆಕ್ಸ್ ರಿಸರ್ವ್ಸ್ ಹಲವು ಬಿಲಿಯನ್ ಡಾಲರ್​ಗಳಷ್ಟು ಕಡಿಮೆಗೊಂಡಿತು.

ಇದನ್ನೂ ಓದಿ: ಅಕ್ಷಯ ತೃತೀಯ ಸ್ಪೆಷಲ್: ಒಡವೆ, ಡಿಜಿಟಲ್ ಗೋಲ್ಡ್, ಇಟಿಎಫ್- ಬಂಗಾರದ ಲಾಭ ಪಡೆಯಲು ಯಾವುದು ಬೆಸ್ಟ್?

ಫಾರೀನ್ ಕರೆನ್ಸಿ ಆಸ್ತಿಯಲ್ಲಿ ಗಣನೀಯ ಹೆಚ್ಚಳ

ಏಪ್ರಿಲ್ 10ರಂದು ಅಂತ್ಯಗೊಂಡ ವಾರದಲ್ಲಿ ಏರಿಕೆಯಾದ 3.285 ಬಿಲಿಯನ್ ಡಾಲರ್ ಫಾರೆಕ್ಸ್ ಮೀಸಲು ನಿಧಿಯಲ್ಲಿ ಬಹುಪಾಲು ಫಾರೀನ್ ಕರೆನ್ಸಿಗಳೇ ಇವೆ. ಬರೋಬ್ಬರಿ 3.127 ಬಿಲಿಯನ್ ಡಾಲರ್ ಮೊತ್ತದ ವಿದೇಶೀ ಕರೆನ್ಸಿ ಆಸ್ತಿಗಳನ್ನು ಆರ್​ಬಿಐ ಹೆಚ್ಚಿಸಿಕೊಂಡಿದೆ.

ಇನ್ನಿತರ ಆಸ್ತಿಗಳ ಪೈಕಿ ಗೋಲ್ಡ್ ರಿಸರ್ವ್ಸ್ 601 ಮಿಲಿಯನ್ ಡಾಲರ್​ನಷ್ಟು ಹೆಚ್ಚಿದೆ. ಎಸ್​ಡಿಆರ್​ಗಳು 56 ಮಿಲಿಯನ್ ಡಾಲರ್, ಹಾಗೂ ಭಾರತದ ಐಎಂಎಫ್ ಮೀಸಲು ಸ್ಥಾನ 56 ಮಿಲಿಯನ್ ಡಾಲರ್ ಏರಿಕೆ ಆಗಿದೆ.

ಇದನ್ನೂ ಓದಿ: ಕಳೆದ 5 ವರ್ಷದಿಂದ ಅಕ್ಷಯ ತೃತೀಯದಂದು ಚಿನ್ನ ಖರೀದಿಸುತ್ತಿದ್ದರೆ ಇವತ್ತಿನ ಮೌಲ್ಯವೆಷ್ಟಿರುತ್ತಿತ್ತು ಗೊತ್ತಾ?

ಏಪ್ರಿಲ್ 10ರಂದು ಭಾರತದ ಫಾರೆಕ್ಸ್ ರಿಸರ್ವ್ಸ್

ಒಟ್ಟು ಫಾರೆಕ್ಸ್ ರಿಸರ್ವ್ಸ್: 700.946 ಬಿಲಿಯನ್ ಡಾಲರ್

  • ಫಾರೀನ್ ಕರೆನ್ಸಿ ಅಸೆಟ್: 555.946 ಬಿಲಿಯನ್ ಡಾಲರ್
  • ಗೋಲ್ಡ್ ರಿಸರ್ವ್ಸ್: 121.343 ಬಿಲಿಯನ್ ಡಾಲರ್
  • ಎಸ್​ಡಿಆರ್: 18.763 ಬಿಲಿಯನ್ ಡಾಲರ್
  • ಐಎಂಎಫ್ ಮೀಸಲು: 4.857 ಬಿಲಿಯನ್ ಡಾಲರ್

ಅತಿಹೆಚ್ಚು ಫಾರೆಕ್ಸ್ ರಿಸರ್ವ್ಸ್ ಹೊಂದಿರುವ ದೇಶಗಳು

  • ಚೀನಾ: 3.643 ಟ್ರಿಲಿಯನ್ ಡಾಲರ್
  • ಜಪಾನ್: 1.294 ಟ್ರಿಲಿಯನ್ ಡಾಲರ್
  • ಸ್ವಿಟ್ಜರ್​ಲ್ಯಾಂಡ್: 1.077 ಟ್ರಿಲಿಯನ್ ಡಾಲರ್
  • ರಷ್ಯಾ: 755 ಬಿಲಿಯನ್ ಡಾಲರ್
  • ಭಾರತ: 700 ಬಿಲಿಯನ್ ಡಾಲರ್

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Gajakesari Rajayoga 2026: ಏ. 21 ‘ಗಜಕೇಸರಿ ರಾಜಯೋಗ’: ಈ 4 ರಾಶಿಗಳ ಭವಿಷ್ಯ ಬಂಗಾರದಂತೆ ಹೊಳೆಯಲಿದೆ! – Kannada News | Gajakesari Rajayoga 2026: April 21 brings immense luck to 4 zodiac signs!

ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಸಂಚಾರವು ವಿಶೇಷ ಮಹತ್ವವನ್ನು ಹೊಂದಿದೆ. ಅದರಲ್ಲೂ ಅತ್ಯಂತ ಶಕ್ತಿಶಾಲಿ ಮತ್ತು ಮಂಗಳಕರ ಎಂದು ಪರಿಗಣಿಸಲಾದ ‘ಗಜಕೇಸರಿ ರಾಜಯೋಗ’ ಏಪ್ರಿಲ್ 21 ರಂದು ರೂಪುಗೊಳ್ಳುತ್ತಿದೆ. ಗುರು ಮತ್ತು ಚಂದ್ರನ ಅಪರೂಪದ ಸಂಯೋಗದಿಂದ ಸೃಷ್ಟಿಯಾಗುವ ಈ ಯೋಗವು ಕೆಲವು ರಾಶಿಗಳ ಪಾಲಿಗೆ ಅದೃಷ್ಟದ ಬಾಗಿಲನ್ನು ತೆರೆಯಲಿದೆ.

ಗಜಕೇಸರಿ ರಾಜಯೋಗ ಎಂದರೇನು?

ಜಾತಕದಲ್ಲಿ ಗುರು ಮತ್ತು ಚಂದ್ರರು ಪರಸ್ಪರ ಕೇಂದ್ರ ಸ್ಥಾನದಲ್ಲಿದ್ದಾಗ ಅಥವಾ ಒಂದೇ ರಾಶಿಯಲ್ಲಿ ಸೇರಿದಾಗ ಈ ಯೋಗ ರೂಪುಗೊಳ್ಳುತ್ತದೆ. ಏಪ್ರಿಲ್ 21 ರಂದು ಚಂದ್ರನು ಮಿಥುನ ರಾಶಿಗೆ ಪ್ರವೇಶಿಸಲಿದ್ದು, ಅಲ್ಲಿ ಈಗಾಗಲೇ ನೆಲೆಸಿರುವ ಗುರುವಿನೊಂದಿಗೆ ಸೇರಿ ಈ ಅದ್ಭುತ ರಾಜಯೋಗವನ್ನು ಸೃಷ್ಟಿಸಲಿದ್ದಾನೆ.

ಈ ಯೋಗದಿಂದಾಗಿ ವಿಶೇಷ ಲಾಭ ಪಡೆಯಲಿರುವ ಆ 4 ರಾಶಿಗಳು ಇಲ್ಲಿವೆ:

ಮಿಥುನ ರಾಶಿ (Gemini):

ಮಿಥುನ ರಾಶಿಯಲ್ಲೇ ಈ ರಾಜಯೋಗ ರೂಪುಗೊಳ್ಳುತ್ತಿರುವುದರಿಂದ, ಈ ರಾಶಿಯವರಿಗೆ ಅತ್ಯಂತ ಹೆಚ್ಚಿನ ಲಾಭ ಸಿಗಲಿದೆ. ಮನಃಶಾಂತಿ: ಚಂದ್ರನ ಪ್ರಭಾವದಿಂದ ನಿಮ್ಮ ಮನಸ್ಸು ಶಾಂತವಾಗಿರುತ್ತದೆ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳಲು ಸುಲಭವಾಗುತ್ತದೆ. ಕುಟುಂಬದೊಂದಿಗೆ ಸುಂದರ ಕ್ಷಣಗಳನ್ನು ಕಳೆಯುತ್ತೀರಿ. ಕೈ ಹಾಕಿದ ಪ್ರತಿಯೊಂದು ಕೆಲಸದಲ್ಲೂ ಜಯ ನಿಮ್ಮದಾಗುತ್ತದೆ.

ಸಿಂಹ ರಾಶಿ (Leo):

ಸಿಂಹ ರಾಶಿಯವರ ಪಾಲಿಗೆ ಈ ಸಮಯವು ಆರ್ಥಿಕ ಸಮೃದ್ಧಿಯನ್ನು ಹೊತ್ತು ತರಲಿದೆ. ನಿಮ್ಮ ಆದಾಯದಲ್ಲಿ ಗಣನೀಯ ಏರಿಕೆ ಕಂಡುಬರಲಿದ್ದು, ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಷೇರು ಮಾರುಕಟ್ಟೆ ಅಥವಾ ಇನ್ಯಾವುದೇ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು ಇದು ಸಕಾಲ. ಹಳೆಯ ಸಾಲದ ಬಾಧೆಗಳಿಂದ ಮುಕ್ತಿ ಸಿಗಲಿದೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಕನ್ಯಾ ರಾಶಿ (Virgo):

ಕನ್ಯಾ ರಾಶಿಯವರಿಗೆ ಆರೋಗ್ಯ ಮತ್ತು ಐಶ್ವರ್ಯ ಎರಡೂ ಒದಗಿ ಬರಲಿವೆ. ಉದ್ಯೋಗದಲ್ಲಿರುವ ಅಡೆತಡೆಗಳು ನಿವಾರಣೆಯಾಗಿ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ. ಸಮಾಜದಲ್ಲಿ ನಿಮ್ಮ ಸ್ಥಾನಮಾನ ಹೆಚ್ಚಾಗಲಿದೆ. ಉದ್ಯಮಿಗಳಿಗೆ ಹೆಚ್ಚಿನ ಲಾಭ ದೊರೆಯುವ ಮುನ್ಸೂಚನೆ ಇದೆ.

ಕುಂಭ ರಾಶಿ (Aquarius):

ಕುಂಭ ರಾಶಿಯವರ ಬಹುದಿನಗಳ ಕನಸುಗಳು ನನಸಾಗುವ ಸಮಯವಿದು. ಹೊಸ ಮನೆ ಅಥವಾ ವಾಹನ ಖರೀದಿಸುವ ನಿಮ್ಮ ಹಂಬಲ ಈ ಸಮಯದಲ್ಲಿ ಈಡೇರುವ ಸಾಧ್ಯತೆ ಇದೆ. ಮಾನಸಿಕ ನೆಮ್ಮದಿಯ ಜೊತೆಗೆ ಕುಟುಂಬದಲ್ಲಿ ಸಂಭ್ರಮದ ವಾತಾವರಣ ನೆಲೆಸಲಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪಾಕಿಸ್ತಾನಿ ಹೆಣ್ಣುಮಕ್ಕಳು ಭಾರತೀಯ ಹೆಣ್ಣುಮಕ್ಕಳಿಗಿಂತ ಸುಂದರವಾಗಿದ್ದಾರೆ: ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ – Kannada News | Beauty Beyond Borders, Retired Judge Katju’s Bold Take on Pakistani vs Indian Beauty Sets the Internet Ablaze

ಕಾಟ್ಜು -ಸಾಂದರ್ಭಿಕ Image Credit source: Google Gemini

ನವದೆಹಲಿ, ಏಪ್ರಿಲ್ 19: ಸಾಮಾನ್ಯವಾಗಿ ನ್ಯಾಯಮೂರ್ತಿಗಳು ನಿವೃತ್ತಿ ಬಳಿಕ ಸಾರ್ವಜನಿಕ ಜೀವನದಿಂದ ದೂರವಿರುತ್ತಾರೆ. ಆದರೆ 2004 ರಿಂದ 2011 ರವರೆಗೆ ಸುಪ್ರೀಂ ಕೋರ್ಟ್‌ನಲ್ಲಿ ಸೇವೆ ಸಲ್ಲಿಸಿದ್ದ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಅವರ ಶೈಲಿಯೇ ಬೇರೆ. ಇತ್ತೀಚೆಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ತಮ್ಮ ವೈಯಕ್ತಿಕ ಅಭಿಪ್ರಾಯವೊಂದು ಸಾವಿರಾರು ಲೈಕ್ಸ್ ಮತ್ತು ಕಾಮೆಂಟ್‌ಗಳ ಮಳೆಯನ್ನು ಸುರಿಸಿದೆ.

ಕಾಟ್ಜು ಅವರು ಭಾರತೀಯ ಮಹಿಳೆಯರು ಪಾಕಿಸ್ತಾನಿ ಮಹಿಳೆಯರಿಗಿಂತ ಸುಂದರವಾಗಿದ್ದಾರೆ ಎಂಬ ಧಾಟಿಯಲ್ಲಿ ತಮಾಷೆಯಾಗಿ ಪೋಸ್ಟ್ ಮಾಡಿದ್ದರು. ಇದು ಕೇವಲ ಸೌಂದರ್ಯದ ಬಗೆಗಿನ ಅಭಿಪ್ರಾಯವಾಗಿರದೆ, ಅವರ ಎಂದಿನ ವ್ಯಂಗ್ಯಭರಿತ ಶೈಲಿಯಿಂದ ಕೂಡಿತ್ತು. ಕಾಟ್ಜು ಅವರ ಪೋಸ್ಟ್‌ಗೆ ಭಾರತೀಯರು ಅತ್ಯಂತ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.

ಸರ್, ಈ ಪೋಸ್ಟ್ ನೋಡಿದ ಮೇಲೆ ನಿಮ್ಮ ಹಳೆಯ ನ್ಯಾಯಾಂಗ ತೀರ್ಪುಗಳನ್ನೂ ನಾವು ಒಮ್ಮೆ ಮರುಪರಿಶೀಲಿಸಬೇಕಾಗುತ್ತದೆ ಎಂದು ಒಬ್ಬರು ತಮಾಷೆ ಮಾಡಿದ್ದಾರೆ. ನಿಮ್ಮೊಳಗಿನ ತುಂಟತನ ಇನ್ನು ಹೋಗಿಲ್ಲ ಎಂದು ಇನ್ನು ಕೆಲವರು ಕಾಲೆಳೆದಿದ್ದಾರೆ.

ಕಾಟ್ಜು ಅವರ ವಾದಕ್ಕೆ ಪಾಕಿಸ್ತಾನದ ನೆಟ್ಟಿಗರು ಸುಮ್ಮನೆ ಕುಳಿತುಕೊಳ್ಳಲಿಲ್ಲ. ಅವರು ತಮ್ಮ ದೇಶದ ಪುರುಷರ ಪರವಾಗಿ ಬ್ಯಾಟ್ ಬೀಸಿದರು. ನಮ್ಮ ದೇಶದ ಪುರುಷರು ಭಾರತೀಯರಿಗಿಂತ ಹೆಚ್ಚು ಹ್ಯಾಂಡ್ಸಮ್ ಆಗಿದ್ದಾರೆ ಎಂದು ಕೆಲವರು ಫೋಟೋಗಳನ್ನು ಹಂಚಿಕೊಂಡು ವಾದಕ್ಕಿಳಿದರೆ, ಸೌಂದರ್ಯ ಎಂಬುದು ನೋಡುವವರ ಕಣ್ಣಿನಲ್ಲಿರುತ್ತದೆ ಎಂದು ಇನ್ನು ಕೆಲವರು ಹೇಳಿದ್ದಾರೆ.

ಭಾರತ ಮತ್ತು ಪಾಕಿಸ್ತಾನದ ನಡುವೆ ರಾಜಕೀಯ ಮತ್ತು ಗಡಿ ಉದ್ವಿಗ್ನತೆ ಸದಾ ಇರುತ್ತದೆ. ಆದರೆ, ಕಾಟ್ಜು ಅವರ ಈ ಪೋಸ್ಟ್ ಚರ್ಚೆಯು ಯಾವುದೇ ದ್ವೇಷಕ್ಕೆ ಅವಕಾಶ ನೀಡದೆ, ಸಂಪೂರ್ಣವಾಗಿ ಲಘು ಹಾಸ್ಯದಿಂದ ಕೂಡಿತ್ತು. ಪ್ರಾದೇಶಿಕ ಹೆಮ್ಮೆ ಮತ್ತು ಸೌಂದರ್ಯದ ಕುರಿತಾದ ಈ ಚರ್ಚೆಯು ಎರಡೂ ಕಡೆಯ ಜನರನ್ನು ಸ್ವಲ್ಪ ಕಾಲ ನಗಿಸುವಂತೆ ಮಾಡಿತು. ಆದರೆ ಅವರ ಎಕ್ಸ್ ಖಾತೆಯಲ್ಲಿದ್ದ ಆ ಪೋಸ್ಟ್​ ಅನ್ನು ಡಿಲೀಟ್ ಮಾಡಲಾಗಿದ್ದು, ಜನರು ಸ್ಕ್ರೀನ್ ಶಾಟ್​​ಗಳನ್ನು ತೆಗೆದುಕೊಂಡು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link