ಹಲವು ಸರ್ಕಾರಿ ನೌಕರರಿಗೆ ಇನ್ನೂ ಆಗಿಲ್ಲ ಮಾರ್ಚ್ ಸಂಬಳ: ಗೃಹಲಕ್ಷ್ಮೀಗೆ ಬಳಕೆಯಾಯ್ತಾ ಹಣ? – Kannada News | March Salary Withheld for Karnataka Govt Staff: Financial Crisis or Glitch?
ಬೆಂಗಳೂರು, ಏಪ್ರಿಲ್ 19: ಸಾಮಾನ್ಯವಾಗಿ ತಿಂಗಳ ಮೊದಲವಾರವೇ ರಾಜ್ಯದ ಸರ್ಕಾರಿ ನೌಕರರಿಗೆ ಪಾವತಿಯಾಗುತ್ತಿದ್ದ ಹಿಂದಿನಿ ತಿಂಗಳ ಸಂಬಳ ಈ ಸಲ ಭಾರಿ ವಿಳಂಬವಾಗಿರೋದು ಆತಂಕಕ್ಕೆ ಕಾರಣವಾಗಿದೆ. ಏಪ್ರಿಲ್ 18 ಕಳೆದರೂ ಹಲವು ಇಲಾಖೆಗಳ ನೌಕರರಿಗೆ ಮಾರ್ಚ್ ಸಂಬಳ ಇನ್ನೂ ಕೈ ಸೇರಿಲ್ಲ. ಇದರಿಂದಾಗಿ ಆದಾಯ, ಶಿಕ್ಷಣ, ಪೊಲೀಸ್, ಪಶುಸಂಗೋಪನೆ, ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಸೇರಿದಂತೆ ಪ್ರಮುಖ ಇಲಾಖೆಗಳ ನೌಕರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲವರಿಗೆ ಏಪ್ರಿಲ್ 9–10ರಂದು ಸಂಬಳ ಬಂದಿದೆಯಾದರೂ, ಬಹಳಷ್ಟು ಮಂದಿ ಇನ್ನೂ ಕಾಯುತ್ತಿದ್ದಾರೆ ಎನ್ನಲಾಗಿದೆ….