ಬ್ಯಾಂಕ್ ಕ್ಯಾಶಿಯರ್ನಿಂದ ಅಸಭ್ಯ ವರ್ತನೆ: ಗ್ರಾಹಕರ ಎದುರೇ ಕ್ಲಾಸ್ ತೆಗೆದುಕೊಂಡ ಮಹಿಳಾ ಸಿಬ್ಬಂದಿ – Kannada News | Bank Cashier Misbehaves, Female Staff Member Reprimanded Publicly in Front of Customers
ಬ್ಯಾಂಕ್ ಸಿಬ್ಬಂದಿ ನಡುವೆ ಗಲಾಟೆ ಚಿಕ್ಕಮಗಳೂರು, ಏಪ್ರಿಲ್ 18: ಬ್ಯಾಂಕಿನ ಒಳಗೆ ಗ್ರಾಹಕರು ಇರುವುದನ್ನೂ ಲೆಕ್ಕಿಸದೆ ಬ್ಯಾಂಕ್ ಸಿಬ್ಬಂದಿಗಳಿಬ್ಬರು ಪರಸ್ಪರ ಕಿತ್ತಾಡಿಕೊಂಡಿರುವ ಅಹಿತಕರ ಘಟನೆ ಜಿಲ್ಲೆಯ ಎನ್.ಆರ್. ಪುರದ ಕೆನರಾ ಬ್ಯಾಂಕ್ (Canara Bank) ಶಾಖೆಯಲ್ಲಿ ನಡೆದಿದೆ. ಮಹಿಳಾ ಸಿಬ್ಬಂದಿಯೊಬ್ಬರು ಕ್ಯಾಶಿಯರ್‌ನ ಕೊರಳಪಟ್ಟಿ ಹಿಡಿದು ತರಾಟೆಗೆ ತೆಗೆದುಕೊಂಡಿರುವ ವಿಡಿಯೋವೊಂದು ಇದೀಗ ಭಾರೀ ವೈರಲ್ ಆಗಿದ್ದು, ಅಸಭ್ಯ ವರ್ತನೆ ಆರೋಪ ಕೇಳಿಬಂದಿದೆ. ನಡೆದಿದ್ದೇನು? ಎನ್.ಆರ್. ಪುರ ಕೆನರಾ ಬ್ಯಾಂಕ್ ಶಾಖೆಯ ಸಿಬ್ಬಂದಿ ದೀಪಾ ಹಾಗೂ ಆಂಧ್ರ ಮೂಲದ ಕ್ಯಾಶಿಯರ್…