All posts by nagaraj11081993

Bengaluru Air Quality: ಅಂತೂ ಇಂತೂ ಸುಧಾರಿಸಿತು ರಾಜ್ಯದ ಏರ್ ಕ್ವಾಲಿಟಿ! – Kannada News | Bangalore Air Pollution Crisis: State’s Air Quality is getting slightly better compared to last month

ಅಂತೂ ಇಂತೂ ಸುಧಾರಿಸಿತು ರಾಜ್ಯದ ಏರ್ ಕ್ವಾಲಿಟಿ!

ಬೆಂಗಳೂರು, ಜನವರಿ 11: ಕಳೆದ ತಿಂಗಳಿಗೆ ಹೋಲಿಸಿದರೆ ಇಂದು ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕ (Bengaluru Air Quality) ಮಧ್ಯಮ ಮಟ್ಟದಲ್ಲಿದ್ದು, ರಾಜ್ಯದ ವಿವಿಧೆಡೆ ಏರ್ ಕ್ವಾಲಿಟಿ ಸುಧಾರಿಸಿದಂತೆ ಕಾಣುತ್ತಿದೆ. ನಗರದಲ್ಲಿನ ವಾಹನಗಳ ಹೊಗೆ, ಧೂಳು ಮತ್ತು ನಿರ್ಮಾಣ ಚಟುವಟಿಕೆಗಳಿಂದ ವಾಯುಮಾಲಿನ್ಯ ಹೆಚ್ಚಾಗಿರುವುದು ಗಮನಕ್ಕೆ ಬರುತ್ತಿದೆ. ಇದರಿಂದ ಮಕ್ಕಳಿಗೆ, ಹಿರಿಯ ನಾಗರಿಕರಿಗೆ ಹಾಗೂ ಉಸಿರಾಟ ಸಮಸ್ಯೆ ಇರುವವರಿಗೆ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಹಂತ ಹಂತವಾಗಿ ಸುಧಾರಿಸುತ್ತಿದೆಯಾ ಏರ್ ಕ್ವಾಲಿಟಿ?

ಬೆಂಗಳೂರಿನ ಗಾಳಿಯ ಗುಣಮಟ್ಟ 147 ಇದ್ದು, ಡಿಸೆಂಬರ್ ತಿಂಗಳಿಗೆ ಹೋಲಿಸಿದರೆ ಸ್ವಲ್ಪ ಸುಧಾರಣೆ ಕಂಡಿದೆ. ಕಳೆದ ತಿಂಗಳಿನಲ್ಲಿ ಒಮ್ಮೆ 200ರ ಗಡಿ ದಾಟಿದ್ದ ಏರ್ ಕ್ವಾಲಿಟಿ, ನಗರವಾಸಿಗಳಲ್ಲಿ ಆತಂಕ ಮೂಡಿಸಿತ್ತು. ಸಿಲ್ಕ್ ಬೋರ್ಡ್​, ವೈಟ್​ಫೀಲ್ಡ್ ಸೇರಿದಂತೆ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ಹದಗೆಟ್ಟಿತ್ತು. ಇದೀಗ ವಾತಾವರಣ ಸಲ್ಪ ಸುಧಾರಣೆ ಕಂಡಿದ್ದರೂ, ಏರ್ ಕ್ವಾಲಿಟಿ ಅನಾರೋಗ್ಯಕಾರಿ ಹಂತದಲ್ಲೇ ಇದೆ. ಇದು ಹೀಗೆ ಮುಂದುವರೆದರೆ ಬೆಂಗಳೂರಿನ ಪರಿಸ್ಥಿತಿ ದೆಹಲಿಯಂತಾಗಬಹುದೆಂದು ತಜ್ಞರು ಎಚ್ಚರಿಸಿದ್ದಾರೆ.

ಇಂದು ಬೆಂಗಳೂರಿನ PM2.5 58 ಮತ್ತು PM10 77 ಇದೆ. PM10 ಎನ್ನುವುದು ನಮಗಿಂತ 7 ಪಟ್ಟು ತೆಳುವಾದ ಧೂಳಿನ ಕಣಗಳಾದರೆ, PM2.5 ಮಾನವನ ಕೂದಲಿನ ಶೇ. 3ರಷ್ಟು ಮಾತ್ರ ದಪ್ಪವಿರುವ ಅತಿ ಸೂಕ್ಷ್ಮ ಕಣಗಳು. ಈ ಕಣಗಳು ಉಸಿರಾಟದ ಮೂಲಕ ನೇರವಾಗಿ ಶ್ವಾಸಕೋಶದ ಒಳಗೆ ಹೋಗಿ ರಕ್ತವನ್ನು ಸೇರುತ್ತವೆ. ಇದರಿಂದ ಶ್ವಾಸಕೋಶದ ಕ್ಯಾನ್ಸರ್, ಅಸ್ತಮಾ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಿದೆ. ಆದರೆ ಬೆಂಗಳೂರಿನಲ್ಲಿಂದು ಈ ಸೂಕ್ಷ್ಮ ಕಣಗಳ ಪ್ರಮಾಣ ಕಡಿಮೆಯಿದ್ದು, ಉಸಿರಾಟಕ್ಕೆ ಯೋಗ್ಯವಲ್ಲದಿದ್ದರೂ ಮುಂಚಿನ ದಿನಗಳಷ್ಟು ಹಾನಿಕಾರಕವೇನಲ್ಲ.

ಸುರಕ್ಷತಾ ಕ್ರಮಗಳನ್ನು ಅನುಸರಿಸಿ

ಈ ಪರಿಸ್ಥಿತಿಯಲ್ಲಿ ಸುರಕ್ಷತೆ ಅತ್ಯಂತ ಮುಖ್ಯ. ಹೊರಗೆ ಹೋಗುವಾಗ ಮಾಸ್ಕ್ ಧರಿಸುವುದು ಉತ್ತಮ. ಸಾಧ್ಯವಾದರೆ ಬೆಳಿಗ್ಗೆ ಅಥವಾ ಸಂಜೆ ಪೀಕ್ ಟ್ರಾಫಿಕ್ ಸಮಯದಲ್ಲಿ ಹೊರಗೆ ಹೋಗುವುದನ್ನು ತಪ್ಪಿಸಬೇಕು. ಮನೆಯೊಳಗೆ ಗಿಡಗಳನ್ನು ಬೆಳೆಸುವುದು, ಸಾಕಷ್ಟು ನೀರು ಕುಡಿಯುವುದು ಮತ್ತು ಸ್ವಚ್ಛತೆ ಕಾಪಾಡುವುದು ಮಾಲಿನ್ಯದ ಪರಿಣಾಮವನ್ನು ಕಡಿಮೆ ಮಾಡಲು ಸಹಾಯಕವಾಗುತ್ತದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು –147
  • ಮಂಗಳೂರು-96
  • ಮೈಸೂರು – 77
  • ಬೆಳಗಾವಿ – 98
  • ಕಲಬುರ್ಗಿ-107
  • ಶಿವಮೊಗ್ಗ – 130
  • ಬಳ್ಳಾರಿ – 76
  • ಹುಬ್ಬಳ್ಳಿ- 77
  • ಉಡುಪಿ –91
  • ವಿಜಯಪುರ –64

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Video: ಇದು ಜೀಪೋ ಜೇನು ಗೂಡೋ, 16 ಆಸನಗಳ ಜೀಪಿನಲ್ಲಿ 60 ಮಂದಿಯ ಪ್ರಯಾಣ – Kannada News | Rajasthan: Viral Video Shows 60 Passengers Risking Their Lives By Travelling In 16 Seater Jeep

ಬನ್ಸ್ವಾರಾ, ಜನವರಿ 11: ಹದಿನಾರು ಆಸನಗಳಿರುವ ಜೀಪಿನಲ್ಲಿ ಬರೋಬ್ಬರಿ ಎಂದರೆ 20 ಮಂದಿ ಪ್ರಯಾಣಿಸಬಹುದು ಆದರೆ ಬರೋಬ್ಬರಿ 60 ಮಂದಿ ಪ್ರಯಾಣಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ರಾಜಸ್ಥಾನದ ಬನ್ಸ್ವಾರಾ ಜಿಲ್ಲೆಯ ಆನಂದಪುರಿಯಲ್ಲಿ ಈ ಆಘಾತಕಾರಿ ವಿಡಿಯೋ ಚಿತ್ರೀಕರಿಸಲಾಗಿದೆ. 16 ಆಸನಗಳ ಜೀಪಿನಲ್ಲಿ ಸುಮಾರು 60 ಪ್ರಯಾಣಿಕರು ತುಂಬಿ ತುಳುಕುತ್ತಿರುವುದನ್ನು ಕಾಣಬಹುದು. ವಾಹನದೊಳಗಿನ ಎಲ್ಲಾ ಆಸನಗಳು ಭರ್ತಿಯಾಗಿದ್ದವು, ಆದರೆ ಹಲವಾರು ಪ್ರಯಾಣಿಕರು ಹೊರಗೆ ಬಾನೆಟ್, ಛಾವಣಿ ಸಾಲನೆ ಚಾಲಕನ ಬಾಗಿಲಿನ ಮೇಲೂ ನೇತಾಡುತ್ತಿರುವುದನ್ನು ಕಾಣಬಹುದು. ಈ ಅಪಾಯಕಾರಿ ಪ್ರಯಾಣದಲ್ಲಿ ವೃದ್ಧರು, ಮಹಿಳೆಯರು ಮತ್ತು ಚಿಕ್ಕ ಮಕ್ಕಳು ಕೂಡಾ ಇರುವುದು ಆತಂಕ ಮೂಡಿಸಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕೊಡಗು ಜಿಲ್ಲೆಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಇಳಿಕೆ: ಕಾರಣ ಇಲ್ಲಿದೆ – Kannada News | Coorg Sees a Drop in Tourist Numbers from 20 Lakh to 18 Lakh in 2025

ಮಡಿಕೇರಿ, ಜನವರಿ 11: ಕರ್ನಾಟಕದ ಕಾಶ್ಮೀರ ಎಂದೇ ಕರೆಸಿಕೊಳ್ಳುವ ಕೊಡಗು ಪ್ರವಾಸಿಗರ ನೆಚ್ಚಿನ ತಾಣ. ಚಳಿಗಾಲ ಬಂತಂದ್ರೆ ಸಾಕು ರಾಜ್ಯದ ಮಾತ್ರವಲ್ಲದೆ ದೇಶ-ವಿದೇಶಗಳ ಪ್ರವಾಸಿಗರೂ ಇಲ್ಲಿಗೆ ಭೇಟಿ ನೀಡ್ತಾರೆ. ಪ್ರಕೃತಿ ಸೌಂದರ್ಯದ ಜೊತೆ ಇಲ್ಲಿನ ಚಳಿಯ ವಾತಾವರಣವನ್ನು ಎಂಜಾಯ್​​ ಮಾಡ್ತಾರೆ. ಸಾಲು ಸಾಲು ರಜೆಯ ಸಮಯದಲ್ಲಂತೂ ಜಿಲ್ಲೆಯಲ್ಲಿ ಜನ ಜಂಗುಳಿಯೇ ಕಾಣಸಿಗುತ್ತೆ. ಆದ್ರೆ 2025 ಕೊಡಗು ಜಿಲ್ಲೆಯ ಪ್ರವಾಸೋದ್ಯಮಕ್ಕೆ ಲಾಭಕ್ಕಿಂತ ನಷ್ಟವನ್ನೇ ಹೆಚ್ಚಾಗಿ ತಂದಿದೆಯಂತೆ.

ಬೆಟ್ಟಗುಡ್ಡಗಳು, ಪ್ರಕೃತಿ ಸೌಂದರ್ಯ, ನದಿ ತೊರೆಗಳು, ಕೂಲ್ ಕೂಲ್ ವಾತಾವರಣ ಕಾರಣಕ್ಕೆ ಫೇಮಸ್​​ ಆಗಿರೋ ಕೊಡಗಿಗೆ ಪ್ರತಿವರ್ಷ ಕನಿಷ್ಠ 20 ಲಕ್ಷ ಪ್ರವಾಸಿಗರು ಭೇಟಿ ನೀಡ್ತಾರೆ. ಆದ್ರೆ ಈ ಕಳೆದ 2-3 ವರ್ಷಗಳಿಂದ ಜಿಲ್ಲೆಯಲ್ಲಿ ಸೀಸನಲ್ ಟೂರಿಸಂ ಎನ್ನುವ ಕಲ್ಪನೆಯೇ ಮಾಯವಾಗಿದೆ. 2025ರಲ್ಲಿ ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಸುಮಾರು 2 ಲಕ್ಷ ಇಳಿಕೆಯಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಅಂಕಿ-ಅಂಶ ಮಾಹಿತಿ ನೀಡಿದ್ದು, ವಾರ್ಷಿಕವಾಗಿ ಪ್ರವಾಸಿಗರ ಸಂಖ್ಯೆ 18 ಲಕ್ಷವನ್ನು ದಾಟಿಲ್ಲ ಎನ್ನಲಾಗಿದೆ. ಮಡಿಕೇರಿಯಲ್ಲಿ ನಿರ್ಮಿಸಲಾಗಿರೋ ಕೂರ್ಗ್ ವಿಲೇಜ್, ನೆಹರು ಮಂಠಪದಂತಹ ತಾಣಗಳುಕೂಡ ಪ್ರವಾಸಿಗರ ಆಕರ್ಷಿಸುವಲ್ಲಿ ವಿಫಲವಾಗಿವೆ ಎನ್ನಾಗಿದೆ.

ಇದನ್ನೂ ಓದಿ: ಗ್ರಾಮ ಸಮಿತಿಯ ಮಾತು ಕೇಳದಿದ್ದಕ್ಕೆ ಎರಡು ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ?

ನಿರಂತರ ಸರ್ಕಾರಿ ರಜೆಗಳಿದ್ದಾಗ ಜಿಲ್ಲೆಯ ಹೋಮ್​ ಸ್ಟೇ, ರೆಸಾರ್ಟ್​ಗಳು ಬುಕಿಂಗ್ ಆಗಿರುತ್ತವೆ. ಆದ್ರೆ ಕಳೆದ ವರ್ಷ ಮೇ ತಿಂಗಳಲ್ಲಿ ಶುರುವಾಗಿದ್ದ ಮಳೆ ಬಹುತೇಕ ನವೆಂಬರ್ ಅಂತ್ಯದವರೆಗೂ ಸುರಿದಿದೆ. ಇದೂ ಕೂಡ ಪ್ರವಾಸಿಗರು ಜಿಲ್ಲೆಗೆ ಆಗಮಿಸಲು ಹಿಂದೇಟು ಹಾಕಲು ಪ್ರಮುಖ ಕಾರಣ ಎನ್ನಲಾಗುತ್ತಿದೆ. ಇದರ ಹಿಂದಿನ ವರ್ಷ ಸಂಭವಿಸಿದ ವಯನಾಡು ದುರಂತ ಕೂಡ ಕೊಡಗು ಜಿಲ್ಲೆಗೆ ಮಳೆಗಾಲದಲ್ಲಿ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯ ಮೇಲೆ ಪರಿಣಾಮ ಬೀರಿತ್ತು. ಹೀಗಾಗಿ 2026ರಲ್ಲಾದರೂ ಜಿಲ್ಲೆಯ ಪ್ರವಾಸೋದ್ಯಮ ತಮ್ಮ ಕೈಹಿಡಿಯಬಹುದು ಎಂದು ಇದೇ ಉದ್ಯಮವನ್ನು ನಂಬಿಕೊಂಡ ಸಾವಿರಾರು ಕುಟುಂಬಗಳು ಕನಸು ಕಂಡಿವೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

IND vs NZ: ಟೀಮ್ ಇಂಡಿಯಾದ ಮೂವರು ಆಟಗಾರರು ಅಲಭ್ಯ – Kannada News | IND vs NZ: who misses out from India’s ODI squad?

ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಏಕದಿನ ಸರಣಿಯು ಇಂದಿನಿಂದ ಶುರುವಾಗಲಿದೆ. ಮೂರು ಪಂದ್ಯಗಳ ಈ ಸರಣಿಯ ಮೊದಲ ಮ್ಯಾಚ್​​ನಲ್ಲಿ ರಾಜ್​ಕೋಟ್​​ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಮೂವರು ಆಟಗಾರರು ಕಾಣಿಸಿಕೊಳ್ಳುವುದಿಲ್ಲ.

ಅಂದರೆ ಸೌತ್ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಕಾಣಿಸಿಕೊಂಡಿದ್ದ ಮೂವರು ಆಟಗಾರರು ಈ ಬಾರಿ ತಂಡದಲ್ಲಿ ಸ್ಥಾನ ಪಡೆದಿಲ್ಲ. ಅದರಲ್ಲೂ ಕೊನೆಯ ಪಂದ್ಯದಲ್ಲಿ ಶತಕ ಸಿಡಿಸಿದ್ದ ಆಟಗಾರನನ್ನು 15 ಸದಸ್ಯರುಗಳ ತಂಡದಿಂದ ಕೈ ಬಿಡಲಾಗಿದೆ. ಅದರಂತೆ ನ್ಯೂಝಿಲೆಂಡ್ ವಿರುದ್ಧದ ಸರಣಿಗೆ ಅಲಭ್ಯರಾಗಿರುವ ಮೂವರು ಆಟಗಾರರ ಪಟ್ಟಿ ಈ ಕೆಳಗಿನಂತಿದೆ…

ಧ್ರುವ್ ಜುರೆಲ್: ಸೌತ್ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಎರಡನೇ ವಿಕೆಟ್ ಕೀಪರ್ ಆಗಿ ಧ್ರುವ್ ಜುರೆಲ್ ಕಾಣಿಸಿಕೊಂಡಿದ್ದರು. ಇದಾಗ್ಯೂ ಅವರಿಗೆ ಆಡುವ ಬಳಗದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಆದರೆ ಈ ಬಾರಿ ಅವರನ್ನು 15 ಸದಸ್ಯರುಗಳ ಬಳಗದಿಂದಲೇ ಕೈ ಬಿಡಲಾಗಿದೆ.

ತಿಲಕ್ ವರ್ಮಾ: ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ಸರಣಿಯಲ್ಲಿ ಕಾಣಿಸಿಕೊಂಡಿದ್ದ ತಿಲಕ್ ವರ್ಮಾ ಅವರನ್ನು ಸಹ ಈ ಬಾರಿ ತಂಡದಿಂದ ಕೈ ಬಿಡಲಾಗಿದೆ. ಏಕೆಂದರೆ ಕಳೆದ ಸರಣಿಯಲ್ಲಿ ಶುಭ್​​ಮನ್ ಗಿಲ್ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ತಿಲಕ್ ವರ್ಮಾಗೆ ಅವಕಾಶ ನೀಡಲಾಗಿತ್ತು.

ರುತುರಾಜ್ ಗಾಯಕ್ವಾಡ್: ಸೌತ್ ಆಫ್ರಿಕಾ ವಿರುದ್ಧದ 2ನೇ ಪಂದ್ಯದಲ್ಲಿ ರುತುರಾಜ್ ಗಾಯಕ್ವಾಡ್ 105 ರನ್​ಗಳ ಭರ್ಜರಿ ಇನಿಂಗ್ಸ್ ಆಡಿದ್ದರು. ಆದರೆ ಈ ಬಾರಿ ಅವರನ್ನು ತಂಡದಿಂದ ಕೈ ಬಿಡಲಾಗಿದೆ. ಬದಲಾಗಿ ಗಾಯದಿಂದ ಚೇತರಿಸಿಕೊಂಡಿರುವ ಶ್ರೇಯಸ್ ಅಯ್ಯರ್ ಅವರನ್ನು ಆಯ್ಕೆ ಮಾಡಲಾಗಿದೆ.

ಭಾರತ ಏಕದಿನ ತಂಡ : ಶುಭ್​ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ, ಪ್ರಸಿದ್ಧ್ ಕೃಷ್ಣ, ಅರ್ಷದೀಪ್ ಸಿಂಗ್, ಕುಲ್ದೀಪ್ ಯಾದವ್, ರಿಷಭ್ ಪಂತ್, ನಿತೀಶ್ ಕುಮಾರ್ ರೆಡ್ಡಿ, ಯಶಸ್ವಿ ಜೈಸ್ವಾಲ್.

Published On – 7:23 am, Sun, 11 January 26

Source link

ಚಿತ್ರಮಂದಿರಕ್ಕೆ ಬೆಂಕಿ ಇಟ್ಟ ಪ್ರಭಾಸ್ ಫ್ಯಾನ್ಸ್; ‘ದಿ ರಾಜಾ ಸಾಬ್’ ನೋಡುವಾಗ ಘಟನೆ – Kannada News | Fire inside theatre during Prabhas starrer The Raja Saab movie screening

ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಸಿನಿಮಾ ಜನವರಿ 9ರಂದು ಬಿಡುಗಡೆ ಆಯಿತು. ಪ್ರಭಾಸ್ (Prabhas) ಅವರ ಅಭಿಮಾನಿಗಳು ಈ ಸಿನಿಮಾವನ್ನು ಮುಗಿಬಿದ್ದು ನೋಡುತ್ತಿದ್ದಾರೆ. ಎಲ್ಲ ಚಿತ್ರಮಂದಿರಗಳಲ್ಲಿ ಸಂಭ್ರಮಾಚರಣೆ ಜೋರಾಗಿದೆ. ಆದರೆ ಕೆಲವರು ಸಂಭ್ರಮದ ವೇಳೆ ಮೈಮರೆತಿದ್ದಾರೆ. ‘ದಿ ರಾಜಾ ಸಾಬ್’ (The Raja Saab) ಸಿನಿಮಾ ಪ್ರದರ್ಶನ ಆಗುತ್ತಿದ್ದ ಚಿತ್ರಮಂದಿರದ ಒಳಗೆ ಪಟಾಕಿ ಸಿಡಿಸಲಾಗಿದೆ. ಆರತಿ ಬೆಳಗಲಾಗಿದೆ. ಇದರಿಂದಾಗಿ ಬೆಂಕಿ ಹೊತ್ತಿಕೊಂಡಿದೆ. ಅದೃಷ್ಟವಶಾತ್, ದೊಡ್ಡ ಅನಾಹುತ ಆಗುವುದು ತಪ್ಪಿದೆ.

ಇದು ಪ್ರಭಾಸ್ ನಟಿಸಿರುವ ಮೊದಲ ಹಾರರ್ ಸಿನಿಮಾ. ಆ ಕಾರಣದಿಂದ ಈ ಚಿತ್ರದ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಮಾರುತಿ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಪ್ರಭಾಸ್ ಅವರು ಬೇರೆ ಬೇರೆ ಗೆಟಪ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಎಂಟ್ರಿ ಸೀನ್ ನೋಡಿ ಖುಷಿಯಾದ ಪ್ರೇಕ್ಷಕರು ಚಿತ್ರಮಂದಿರದ ಒಳಗೆ ಪಟಾಕಿ ಹೊಡೆದಿದ್ದಾರೆ.

ಅಂದಹಾಗೆ, ಈ ಘಟನೆ ನಡೆದಿರುವುದು ಆಂಧ್ರದಲ್ಲೋ ಅಥವಾ ತೆಲಂಗಾಣದಲ್ಲೋ ಅಲ್ಲ. ಬದಲಿಗೆ, ಒಡಿಸ್ಸಾದಲ್ಲಿ! ಪ್ರಭಾಸ್ ಅವರು ಫ್ಯಾನ್ ಇಂಡಿಯಾ ಸ್ಟಾರ್. ಅವರಿಗೆ ಎಲ್ಲ ಕಡೆಗಳಲ್ಲಿ ಅಭಿಮಾನಿಗಳು ಇದ್ದಾರೆ. ಒಡಿಸ್ಸಾದ ರಾಯಗಡದಲ್ಲಿ ಇರುವ ‘ಅಶೋಕ ಟಾಕೀಸ್’ನಲ್ಲಿ ಅಭಿಮಾನಿಗಳು ಆರತಿ ಬೆಳಗಿದ್ದಾರೆ. ಪಟಾಕಿ ಹಚ್ಚಿದ್ದಾರೆ. ಇದರಿಂದ ಚಿತ್ರಮಂದಿರದ ಪರದೆ ಬಳಿ ಬೆಂಕಿ ಹೊತ್ತಿಕೊಂಡಿದೆ.

ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ದೊಡ್ಡ ಅನಾಹುತಿ ತಪ್ಪಿದೆ ಎಂದು ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಅದೇ ರೀತಿ ಬೇರೆ ಚಿತ್ರಮಂದಿರಗಳಲ್ಲಿ ಪ್ರಭಾಸ್ ಅವರ ಅಭಿಮಾನಿಗಳು ಮೊಸಳೆಯ ಪ್ರತಿಕೃತಿಯನ್ನು ಹಿಡಿದು ಬಂದಿದ್ದಾರೆ. ಈ ಸಿನಿಮಾದಲ್ಲಿ ಪ್ರಭಾಸ್ ಅವರು ಮೊಸಳೆ ಜೊತೆ ಫೈಟ್ ಮಾಡುವ ದೃಶ್ಯವಿದೆ. ಅದರಿಂದ ಪ್ರೇರೇಪಿತರಾದ ಅಭಿಮಾನಿಗಳು ಚಿತ್ರಮಂದಿರಕ್ಕೆ ಮೊಸಳೆ ಹೊತ್ತು ತಂದಿದ್ದಾರೆ.

ಇದನ್ನೂ ಓದಿ: ‘ದಿ ರಾಜಾ ಸಾಬ್’ ಪ್ರೀಮಿಯರ್ ಶೋ: ಚಿತ್ರಮಂದಿರದಲ್ಲಿ ಪ್ರಭಾಸ್ ಫ್ಯಾನ್ಸ್ ಗಲಾಟೆ

‘ದಿ ರಾಜಾ ಸಾಬ್’ ಸಿನಿಮಾ ವಿಶ್ರ ಪ್ರತಿಕ್ರಿಯೆ ಪಡೆದಿದೆ. ನಿರೀಕ್ಷಿತ ಮಟ್ಟಕ್ಕಿಂತ ಕಡಿಮೆ ಕಲೆಕ್ಷನ್ ಆಗುತ್ತಿದೆ. ಪ್ರಭಾಸ್, ಸಂಜಯ್ ದತ್, ನಿಧಿ ಅಗರ್​ವಾಲ್, ಬೋಮನ್ ಇರಾನಿ, ಮಾಳವಿಕಾ ಮೋಹನನ್, ರಿದ್ಧಿ ಕುಮಾರ್ ಮುಂತಾದ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Daily Devotional: ವಾರಕ್ಕೆ ಒಂದು ಸಲವಾದ್ರೂ ಮಕ್ಕಳಿಗೆ ಅಭ್ಯಂಗನ ಸ್ನಾನ ಮಾಡಿಸಬೇಕು ಯಾಕೆ? – Kannada News | Daily Devotional: The Ancient Wisdom of Castor Oil Baths for Children’s Well being

ಬೆಂಗಳೂರು, ಜನವರಿ 11: ಪ್ರಾಚೀನ ಕಾಲದಿಂದಲೂ ಭಾರತೀಯ ಸಂಸ್ಕೃತಿಯಲ್ಲಿ ಅರಳೆಣ್ಣೆ (ಕ್ಯಾಸ್ಟರ್ ಆಯಿಲ್) ಮಹತ್ವಪೂರ್ಣ ಸ್ಥಾನ ಪಡೆದುಕೊಂಡಿದೆ. ಜ್ಯೋತಿಷ್ಯ, ಆಧ್ಯಾತ್ಮಿಕ ಮತ್ತು ಧಾರ್ಮಿಕ ದೃಷ್ಟಿಕೋನದಿಂದ ಇದು ಅನೇಕ ಶುಭ ಫಲಗಳನ್ನು ನೀಡುತ್ತದೆ. ವಿಶೇಷವಾಗಿ ಮಕ್ಕಳಿಗೆ ವಾರಕ್ಕೊಮ್ಮೆಯಾದರೂ ಅರಳೆಣ್ಣೆ ಅಭ್ಯಂಜನ ಸ್ನಾನ ಮಾಡಿಸುವುದು ಉತ್ತಮ ಎಂದು ಹೇಳಲಾಗುತ್ತದೆ. ಗಂಡು ಮಕ್ಕಳಿಗೆ 21 ವರ್ಷದವರೆಗೆ ಮತ್ತು ಹೆಣ್ಣು ಮಕ್ಕಳಿಗೆ 18 ವರ್ಷದವರೆಗೆ ಇದನ್ನು ಪಾಲಿಸುವುದು ಪ್ರಯೋಜನಕಾರಿ.

ಅರಳೆಣ್ಣೆಯನ್ನು ತಲೆಗೆ, ಹೊಕ್ಕಳಿಗೆ, ಪಾದಗಳಿಗೆ ಮತ್ತು ಅಂಗೈಗಳಿಗೆ ಹಚ್ಚಿ ಸ್ವಲ್ಪ ಸಮಯ ಬಿಸಿಲಿನಲ್ಲಿ ಓಡಾಡಲು ಬಿಡುವುದರಿಂದ ದೇಹದ ಉಷ್ಣಾಂಶ ಸಮತೋಲನಗೊಳ್ಳುತ್ತದೆ. ಇದು ಆರೋಗ್ಯ ಸಮಸ್ಯೆಗಳು ಮತ್ತು ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ. ಮಕ್ಕಳನ್ನು ಹೆಚ್ಚು ಕ್ರಿಯಾಶೀಲರನ್ನಾಗಿ ಮಾಡುತ್ತದೆ. ಜ್ಯೋತಿಷ್ಯ ಪ್ರಕಾರ, ಈ ಅಭ್ಯಾಸವು ಕರ್ಮಫಲಗಳನ್ನು ಕಡಿಮೆ ಮಾಡಿ, ಬುದ್ಧಿಶಕ್ತಿಯನ್ನು ಚುರುಕುಗೊಳಿಸುತ್ತದೆ ಮತ್ತು ಗ್ರಹದೋಷಗಳನ್ನು ನಿವಾರಿಸುತ್ತದೆ. ಈ ಸಾಂಪ್ರದಾಯಿಕ ವಿಧಾನವು ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಮಹತ್ತರ ಕೊಡುಗೆ ನೀಡುತ್ತದೆ. ನಂತರ ಮಂದ ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿಸುವುದು ಉತ್ತಮ. ದೊಡ್ಡವರೂ ಕೂಡ ಇದನ್ನು ಪಾಲಿಸಬಹುದು ಎಂದು ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.

 

 

 

Source link

Kalaburagi: ಕಳ್ಳತನ ಕೇಸ್​​ ತನಿಖೆ ವೇಳೆ ಖಾಕಿಗೇ ಶಾಕ್​: ಜೈಲಿನಲ್ಲಿ ಪತ್ತೆಯಾದ ಆರೋಪಿ! – Kannada News | More Than 40 Cases Against Bengaluru Thief Dadiya Shiva Exposed by Kalaburagi Police

ಕಲಬುರಗಿ, ಜನವರಿ 11: ಒಂಟಿ ಮನೆಗಳನ್ನೇ ಟಾರ್ಗೆಟ್​​ ಮಾಡಿ ಕದಿಯುತ್ತಿದ್ದ ಮತ್ತು ಮಹಿಳೆಯ ಮೈಮೇಲಿನ ಆಭರಣವನ್ನೂ ರಾಬರಿ ನಡೆಸಿದ್ದ ಕಳ್ಳನಿಗೆ ಬಲೆ ಬೀಸಿದ್ದ ಪೊಲೀಸರೇ ಆರೋಪಿಯ ಹಿಸ್ಟರಿ ಕಂಡು ದಂಗಾಗಿರುವ ಘಟನೆ ನಡೆದಿದೆ. ಕಳವು ಪ್ರಕರಣ ಸಂಬಂಧ ಆರೋಪಿ ಬೆಂಗಳೂರು ಮೂಲದ ಶಿವಕುಮಾರ್ ಅಲಿಯಾಸ್ ದಡಿಯಾ ಶಿವನಿಗಾಗಿ ಪೊಲೀಸರು ಎಲ್ಲೆಡೆ ಹುಡುಕಿದ್ದಾರೆ. ಆದ್ರೆ ಅದಾಗಲೇ ಆತ ಮತ್ತೊಂದು ಕಳ್ಳತನ ಪ್ರಕರಣ ನಡೆಸಿ ಜೈಲು ಸೇರಿರುವ ವಿಚಾರ ಬಯಲಾಗಿದೆ. ಸದ್ಯ ಬಾಡಿ ವಾರೆಂಟ್ ಮೇಲೆ ಆತನನ್ನ ಕರೆತಂದು ಕಲಬುರಗಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಕಳೆದ ಮೇ ತಿಂಗಳನಲ್ಲಿ ಹೆಂಡತಿ ಊರಾದ ಕಲಬುರಗಿಗೆ ಬಂದಿದ್ದ ದಡಿಯಾ ಶಿವ ಇಲ್ಲೂ ತನ್ನ ಕೈಚಳಕ ತೋರಿಸಿದ್ದ. ಚಂದ್ರಶೇಖರ ನಾಗಲೀಕರ್ ಎಂಬವರ ಮನೆಯ ಸುಮಾರು 9 ಲಕ್ಷ ಮೌಲ್ಯದ ಚಿನ್ನಾಭರಣವ ದೋಚಿದ್ದ. ಹಾಗೆಯೇ ವೈದ್ಯ ಚಂದ್ರಶೇಖರ್​​ ಅವರ ತಾಯಿ ಮೈಮೇಲಿದ್ದ ಚಿನ್ನವನ್ನೂ ದರೋಡೆ ಮಾಡಿದ್ದ. ಚಂದ್ರಶೇಖರ್​​ ಪ್ರತಿನಿತ್ಯ ಕ್ಲಿನಿಕ್​​ಗೆ ಹೋಗೋದನ್ನು ಗಮನಿಸಿದ್ದ ಈತ ಮನೆಯಲ್ಲಿ ಅವರ ತಾಯಿ ಗುರುಬಾಯಿ ಇರೋದನ್ನು ವಾಚ್​​ ಮಾಡಿದ್ದ. ಅವರ ಕತ್ತಿನಲ್ಲಿದ್ದ ಚಿನ್ನದ ಸರ ಸೇರಿ ಬಂಗಾರ ದೋಚಿದ್ದ. ಸಣ್ಣ ಸುಳಿವನ್ನ ಕೂಡ ಬಿಡದೇ ಏಸ್ಕೇಪ್ ಆಗಿದ್ದ ಈತನನ್ನ ಹಿಡಿಯೋದೇ ಪೊಲೀಸರಿಗೆ ಸವಾಲಿನ ಕೆಲಸವಾಗಿತ್ತು. ಈ ನಡುವೆ ಆರೋಪಿಯ ಪತ್ತೆಗಿಳಿದ ಪೊಲೀಸರಿಗೇ ಶಾಕಿಂಗ್​​ ಸನ್ನಿವೇಶ ಎದುರಾಗಿದೆ. ಅವರು ಹುಡುಕುತ್ತಿದ್ದ ಆರೋಪಿ ದಡಿಯಾ ಶಿವ ಮತ್ತೊಂದು ಕೇಸ್​​ನಲ್ಲಿ ಅದಾಗಲೇ ಬೆಂಗಳೂರಿನ ಪರಪ್ಪನ ಅಗ್ರಹಾರ ಸೇರಿರೋದು ಗೊತ್ತಾಗಿದೆ.

ಇದನ್ನೂ ಓದಿ: ತನ್ನ 11 ತಿಂಗಳ ಮಗುವಿಗೆ ವಿಷ ನೀಡಿ ತಾನೂ ಆತ್ಮಹತ್ಯೆ ಮಾಡಿಕೊಂಡ ಮಹಿಳೆ!

ಸದ್ಯ ಬಾಡಿ ವಾರೆಂಟ್ ಮೇಲೆ ಆತನನ್ನ ವಶಕ್ಕೆ ಪಡೆದಿರೋ ಕಲಬುರಗಿ ಪೊಲೀಸರು, ದಡಿಯಾ ಶಿವನ ಇತಿಹಾಸ ಕಂಡು ದಂಗಾಗಿದ್ದಾರೆ. ಒಂದೆರಡಲ್ಲ ಈತನ ಮೇಲೆ 40ಕ್ಕೂ ಹೆಚ್ಚು ಕೇಸ್​​ಗಳಿರೋದು ಗೊತ್ತಾಗಿದೆ. ಈ ಹಿಂದೆ ಹೆಂಡತಿ ತವರಲ್ಲಿ ಕದ್ದ ಬಂಗಾರ ಇಡಲು ಹೋಗಿ ಈತ ಸಿಕ್ಕಿಬಿದ್ದಿದ್ದ ಎನ್ನಲಾಗಿದ್ದು, ಈ ಬಾರಿ ಅದೇ ಊರಲ್ಲಿ ಕದ್ದು ಮತ್ತೆ ಪೊಲೀಸರ ಅತಿಥಿಯಾಗಿದ್ದಾನೆ. ಆರೋಪಿ ಮೇಲಿರುವ ಪ್ರಕರಣಗಳ ತನಿಖೆಗೆ ಪೊಲೀಸರು ಮುಂದಾಗಿದ್ದು, ಇತರ ಠಾಣೆಗಳಿಗೂ ಈತನ ಬಗ್ಗೆ ಮಾಹಿತಿ ನೀಡಿದ್ದಾರೆ. ಪೊಲೀಸರ ಜೊತೆಗೇ ಕಣ್ಣಾಮುಚ್ಚಾಲೆ ಆಡ್ತಿದ್ದ ಆರೋಪಿ ಪತ್ತೆಯಿಂದ ಹಲವು ಪ್ರಕರಣಗಳು ಕೊನೆಗೂ ಬಯಲಾಗಿವೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 6:58 am, Sun, 11 January 26

Source link

Horoscope Today 11 January: ಇಂದು ಈ ರಾಶಿಯವರಿಗೆ ಹಿತಶತ್ರುಗಳ ಕಾಟ

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 11-01-2026 ರ ಭಾನುವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ಪ್ರಸ್ತುತಪಡಿಸಿದ್ದಾರೆ. ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ಪುಷ್ಯ ಮಾಸ, ಹೇಮಂತ ಋತು, ಕೃಷ್ಣ ಪಕ್ಷ, ಅಷ್ಟಮಿ, ಚಿತ್ತಾ ನಕ್ಷತ್ರ, ಸುಕರ್ಮ ಯೋಗ ಮತ್ತು ಕೌಲವ ಕರಣಗಳೊಂದಿಗೆ ಕೂಡಿತ್ತು. ಸೂರ್ಯ ಧನುಸ್ಸು ರಾಶಿಯಲ್ಲಿ ಮತ್ತು ಚಂದ್ರ ತುಲಾ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಈ ದಿನ ಕಾಲಾಷ್ಟಮಿಯ ವಿಶೇಷ ದಿನವಾಗಿದ್ದು, ಶಿವ, ರುದ್ರ ಮತ್ತು ಕಾಲಭೈರವನ ಆರಾಧನೆಯು ಶುಭಕರವಾಗಿದೆ. ಸುಳ್ಯ ಚೆನ್ನಕೇಶವ ಸ್ವಾಮಿಗಳ ರಥೋತ್ಸವ ಮತ್ತು ರಾಣೆಬೆನ್ನೂರಿನಲ್ಲಿ ಸತ್ಯವಿಜಯ ತೀರ್ಥರ ಆರಾಧನಾ ಮಹೋತ್ಸವವು ಈ ದಿನ ನಡೆದಿವೆ. ಅಲ್ಲದೆ, ಇದು ಲಾಲ್ ಬಹದ್ದೂರ್ ಶಾಸ್ತ್ರಿಗಳ ಪುಣ್ಯ ತಿಥಿ ದಿನವೂ ಆಗಿದೆ.

ಡಾ. ಬಸವರಾಜ ಗುರೂಜಿ ಅವರು ಪ್ರತಿ ರಾಶಿಯವರಿಗೆ ಉದ್ಯೋಗ, ಹಣಕಾಸು, ಸಂಬಂಧಗಳು, ಆರೋಗ್ಯ ಮತ್ತು ಇತರೆ ಕ್ಷೇತ್ರಗಳಲ್ಲಿನ ದಿನದ ಫಲಗಳನ್ನು ವಿವರಿಸಿದ್ದಾರೆ. ಪ್ರತಿಯೊಂದು ರಾಶಿಗೂ ಅದೃಷ್ಟ ಬಣ್ಣ, ಶುಭ ಪ್ರಯಾಣದ ದಿಕ್ಕು, ಅದೃಷ್ಟ ಸಂಖ್ಯೆ ಮತ್ತು ವಿಶೇಷ ಮಂತ್ರ ಜಪದ ಬಗ್ಗೆಯೂ ಸಲಹೆ ನೀಡಲಾಗಿದೆ.

 

 

 

Source link

Horoscope Today 11 January : ಇಂದು ಈ ರಾಶಿಯವರಿಗೆ ಪ್ರತ್ಯಕ್ಷ ಜ್ಞಾನ ಸಿಗದೇ ಬಂಧುಗಳ‌ ನಡುವೆಯೇ ವೈಮನಸ್ಯ ಬರಬಹುದು – Kannada News | Daily Horoscope: Zodiac Predictions Today Career, Love and Finance Insights

ಮೇಷ ರಾಶಿ:

ನಿಮ್ಮ ಸಂಕಲ್ಪವನ್ನು ಬದಲಿಸಲಾರಿರಿ. ಪರೀಕ್ಷೆಯ ಫಲಿತಾಂಶದ ಮೇಲೆ ನಿಮ್ಮ ಮುಂದಿನ ಅಭ್ಯಾಸವು ನಿರ್ಣಯವಾಗಲಿದೆ. ವಿವಾಹಕ್ಕೆ ಬಂದಿರುವ ವಿಘ್ನಗಳನ್ನು ನೀವು ಪರಿಹರಿಸಿಕೊಳ್ಳುವುದು ಅನಿವಾರ್ಯವಾದೀತು. ಓದಿನಲ್ಲಿ ಆಸಕ್ತಿ ಕಡಿಮೆಯಾಗಿ ಅನ್ಯ ಚಟುವಟಿಕೆಯಲ್ಲಿ ತೊಡಗುವಿರಿ. ಸಹೋದರನಿಗೆ ನಿಮ್ಮಿಂದ ಅಲ್ಪವಾದರೂ ಸಹಾಯ ಮಾಡುವ ಮನಸ್ಸಾಗುವುದು. ಇಂದು ಆಗಬೇಕಾದ ಕೆಲಸಗಳನ್ನು ವೇಗವಾಗಿಯೂ ಹಾಗೂ ಬಹಳ ಎಚ್ಚರಿಕೆಯಿಂದ ಮಾಡುವಿರಿ. ಸಹೋದರನಿಂದ ಅನಿರೀಕ್ಷಿತ ಸಹಾಯವು ಸಿಗಬಹುದು. ಸಾಲವಾಗಿ ಪರಿಚಿತರಿಗೆ ಹಣವನ್ನು ಕೊಡಬೇಕಾದೀತು. ದಾಂಪತ್ಯದ ಕಲಹದಲ್ಲಿ ಮೌನವಹಿಸಿ ನೀವೇ ಶಾಂತಗೊಳಿಸಿ. ಆಗಾಗ ನಕಾರಾತ್ಮಕ ಅಂಶಗಳು ನಿಮ್ಮೊಳಗೆ ಏನನ್ನೋ ಮಾಡುತ್ತಾ ಇರುತ್ತದೆ. ಹೊಸ ವ್ಯಕ್ತಿಗಳ ಪರಿಚಯವಾಗಲಿದ್ದು ಆಪ್ತತೆಯೂ ಬೆಳೆದು, ವಿನಾಕಾರಣ ದೂರವೂ ಆಗಬಹುದು. ಪ್ರತ್ಯಕ್ಷ ಜ್ಞಾನ ಸಿಗದೇ ಬಂಧುಗಳ‌ ನಡುವೆಯೇ ವೈಮನಸ್ಯ ಬೇಡ.

ವೃಷಭ ರಾಶಿ:

ಪ್ರತಿಭೆಗೆ ಸೂಕ್ತ ಸ್ಥಳವನ್ನು ಪಡೆಯುವಿರಿ. ನಿಮ್ಮಲ್ಲಿ ಧಾರ್ಮಿಕ ಆಸಕ್ತಿಯ ಕೊರತೆ ಕಾಣಿಸುವುದು. ಉದ್ಯಮ ಕ್ಷೇತ್ರದಲ್ಲಿ ಹೊಸ ಸಹೋದ್ಯೋಗಿಗಳ ಸಹಕಾರ ಸಿಗಲಿದೆ. ನಿಮ್ಮದನ್ನಾಗಿ ಮಾಡಿಕೊಂಡಿದ್ದು ಸ್ವಲ್ಪ ಭೂಮಿಯು ಪರರ ಪಾಲಾಗಬಹುದು. ನೀವು ಇಂದು ಬೇಸರದಿಂದ ಯಾರ ಸಹಾಯವನ್ನೂ ಇಚ್ಛಿಸುವುದಿಲ್ಲ. ಪುಣ್ಯ ಸ್ಥಳಗಳ ದರ್ಶನವು ಅನಿರೀಕ್ಷಿತವಾಗಿ ಮಾಡುವಿರಿ. ಮಾನಸಿಕ ದುರ್ಬಲತೆಯಿಂದ ಇಂದು ಕಾರ್ಯವನ್ನು ಮಾಡುವಿರಿ. ಆಲಸ್ಯವು ಇಂದಿನ ಕಛೇರಿಯ ಕೆಲಸವನ್ನು ನಿಧಾನ ಮಾಡಿಸುವುದು. ಮನೋನಿಗ್ರಹದ ಬಗ್ಗೆ ಗಮನವನ್ನು ಕೊಡುವುದು ಮುಖ್ಯವಾಗಿರಲಿ. ನಿಮ್ಮ ಸ್ವಭಾವವು ಇದ್ದಕಿದ್ದಂತೆ ಬದಲಾಗಿ ಪ್ರೀತಿಸುವವರಿಗೆ ಇದು ಕಷ್ಟವಾಗಬಹುದು. ಹಿತಶತ್ರುಗಳನ್ನು ದೂರವಿಟ್ಟು ಕೆಲಸವನ್ನು ಸಾಧಿಸಿಕೊಳ್ಳಬೇಕಾಗಿದೆ. ಜೀವನ ಸಂಗಾತಿಯ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ನಿಮ್ಮ ಜಿಜ್ಞಾಸೆಗೆ ಸೂಕ್ತ ಜನರಿಂದ ಪರಿಹಾರ ಸಿಗಲಿದೆ. ನಿಮ್ಮ ಮಾತುಗಳು ದುರುಪಯೋಗ ಆಗಬಹುದು.

ಮಿಥುನ ರಾಶಿ:

ನಿಮ್ಮ ಪ್ರಮುಖ ಅಂಶಗಳು ಬದಲಾಗುವುದು. ರಾಜಕಾರಣಿಗಳಿಗೆ ಅಧಿಕಾರಿಗಳಿಂದ ಸಂಕಟ ಕಾಣಿಸುವುದು. ಸಹೋದ್ಯೋಗಿಗಳ ಜೊತೆ ವಿರೋಧ ಕಟ್ಟಿಕೊಂಡ ಕಾರಣ ಇಂದಿನ ಕಛೇರಿಯ ಕೆಲಸವು ಅಸ್ತವ್ಯಸ್ತವಾಗುವುದು. ದೊಡ್ಡ ನಗರಗಳಲ್ಲಿ ಸುತ್ತಾಡುವ ಇಚ್ಛೆಯನ್ನು ಸ್ನೇಹಿತರಲ್ಲಿ ಹೇಳುವಿರಿ. ಯಾಂತ್ರಿಕ ಕಾರ್ಯದಲ್ಲಿ ಹೆಚ್ಚು ಸಫಲತೆ ಸಿಗಲಿದೆ. ವೃತ್ತಿಯಲ್ಲಿ ಮಹಿಳೆಯರಿಗೆ ಉನ್ನತ ಸ್ಥಾನ ಸಿಗಬಹುದು. ಸ್ವಂತ ಉದ್ಯಮಕ್ಕೆ ವೇಗವನ್ನು ಕೊಡುವ ಕಾರ್ಯವು ಆಗಬೇಕಿದೆ. ತಂದೆಯಿಂದ ಸಂಪತ್ತನ್ನು ಪಡೆಯುವಿರಿ. ಸಹೋದ್ಯೋಗಿಯ ಕಾರಣದಿಂದ ನಿಮಗೆ ಬೈಗುಳ ಸಿಗುವುದು. ಭಯವನ್ನು ಬಿಟ್ಟು ಸಣ್ಣ ಅವಕಾಶವನ್ನಾದರೂ ಪಡೆಯಿರಿ. ಇಂದು ಅಸಾಧ್ಯ ಕಾರ್ಯದಲ್ಲಿ ದುಸ್ಸಾಹಸ ಮಾಡುವುದು ಬೇಡ. ಸಕಾರಾತ್ಮಕ ಚಿಂತನೆಯ ಬಗ್ಗೆ ಹೆಚ್ಚು ಗಮನವಿರಲಿ. ಜೀವನ ಸಂಗಾತಿಯ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ಸಾಮಾಜಿಕ ಕೆಲಸಗಳು ಗೌರವವನ್ನು ಕೊಡುವುವು.

ಕರ್ಕಾಟಕ ರಾಶಿ:

ಕೃಷಿ ವ್ಯಾಪಾರದಲ್ಲಿ ಲಾಭವು ಸಿಗಲಿದ್ದು, ಇಂದು ತೊಡಗಿಕೊಳ್ಳಲು ಸಾಧ್ಯವಾಗಸು. ಇಂದು ನಿರುದ್ಯೋಗಿಗಳಿಗೆ ಒಂದೊಂದೆ ಚಿಂತೆ ಕಾಡುವುದು. ಶತ್ರುಗಳ ತೊಂದರೆಯಿಂದ ತಪ್ಪಿಸಿಕೊಳ್ಳಲು ನಿಮ್ಮ ಬೇರೆ ಕೆಲಸಗಳನ್ನು ಪಕ್ಕಕ್ಕಿರಿಸುವಿರಿ. ಅನಿರೀಕ್ಷಿತ ಸಹಾಯವು ನಿಮಗೆ ಸಿಕ್ಕಲಿದೆ. ನಿಮ್ಮ ಆತ್ಮವಿಶ್ವಾಸವು ಒಂದು ಮಿತಿಯಲ್ಲಿ ಇರಲಿ. ನಿಮಗೆ ಅಧಿಕಾರವನ್ನು ಕೊಡುವ ಬಗ್ಗೆ ಮಾತುಕತೆಗಳು ನಡೆಯಬಹುದು. ವ್ಯಕ್ತಿಗಳ ಮೇಲೆ ವಿರಕ್ತಿ ಉಂಟಾಗಬಹುದು. ಒಡಂಬಡಿಕೆಗೆ ಸರಿಯಾಗಿ ವ್ಯವಹಾರವಿದ್ದರೆ ಚೆಂದ ಬಲವಂತವಾಗಿ ನೆಮ್ಮದಿಯನ್ನು ತಂದುಕೊಳ್ಳುವಿರಿ. ನಿಮ್ಮ ಯೋಜನೆಯನ್ನು ಸುಲಭ ಮಾಡಿಕೊಂಡು ಖರ್ಚನ್ನು ಕಡಿತಗೊಳಿಸಿ. ಸಾಮಾಜಿಕ ಚಟುವಟಿಕೆಯಲ್ಲಿ ಬಹಳ ದಿನಗಳ ಅನಂತರ ಭಾಗವಹಿಸುವಿರಿ. ಪ್ರಣಯದಲ್ಲಿ ಆಸಕ್ತಿಯು ಹೆಚ್ಚು ಇರುವುದು. ಮನಸ್ಸು ಉದ್ವೇಗದಿಂದ ಹೊರಬರಲು ಮನಸ್ಸು ಮಾರ್ಗವನ್ನು ಹುಡುಕುವುದು.‌ ಸಮಾಜದಲ್ಲಿ ಗೌರವ, ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳುವಿರಿ. ನೂತನ ಉದ್ಯೋಗಕ್ಕೆ ಪ್ರವೇಶಿಸಲು ಮುಜುಗರವಾಗಲಿದೆ.

ಸಿಂಹ ರಾಶಿ:

ಮನೆಯ ನಿರ್ಮಾಣಕ್ಕೆ ಆಪ್ತರ ಸಲಹೆಯನ್ನು ಪಡೆಯಬಹುದು. ಇಂದು ಕಾರ್ಯದ ಸ್ಥಳದಲ್ಲಿ ಹೆಚ್ಚಿನ ಒತ್ತಡವಿರುತ್ತದೆ. ಎಲ್ಲ ವ್ಯಕ್ತಿ, ವಸ್ತು, ಹುದ್ದೆಗಳ ಮೇಲೆ ವಿರಕ್ತಿ ಉಂಟಾಗಬಹುದು. ನಿಮ್ಮವರ ಇಂಗಿತವನ್ನು ಅರ್ಥಮಾಡಿಕೊಳ್ಳುವಲ್ಲಿ ಸೋಲುವಿರಿ. ನೆರೆಹೊರೆಯರಿಂದ ತೊಂದರೆ ಬರಬಹುದು. ಕೋಪದಿಂದ ಸಿಗುವ ಸ್ಥಾನ ತಪ್ಪಬಹುದು. ಸಾಹಿತ್ಯಾಸಕ್ತರಿಗೆ ಅನುಕೂಲಕರವಾದ ಸನ್ನಿವೇಶಗಳು ಬರಬಹುದು. ನಿಮ್ಮ ಯೋಜನೆಯನ್ನು ಸುಲಭ ಮಾಡಿಕೊಂಡು ಖರ್ಚನ್ನು ಕಡಿತಗೊಳಿಸಿ. ಆಪ್ತರನ್ನು ಕಳೆದುಕೊಳ್ಳುವ ಭಯವು ಉಂಟಾಗಬಹುದು. ಧನಲಾಭದಿಂದ ಆರ್ಥಿಕತೆಯೂ ಸುಸ್ಥಿರವಾಗುವುದು. ಬಹಳ ದಿನಗಳಿಂದ ಸಾಗುತ್ತಿದ್ದ ಕೆಲಸವನ್ನು ಇಂದೇ ಮುಗಿಸಬೇಕೆಂದು ನಿರ್ಧರಿಸುವಿರಿ. ಸಂದರ್ಭವನ್ನು ನೋಡಿ ಮಾತನಾಡುವುದು ಉತ್ತಮ. ಸುಲಭದ ಕೆಲಸಗಳನ್ನು ಮೊದಲು ಮಾಡಿಕೊಳ್ಳಿ. ಇಲ್ಲವಾದರೆ ನಕಾರಾತ್ಮಕ ಸಂದೇಶ ನಿಮ್ಮಿಂದ ಹೋಗಬಹುದು.

ಕನ್ಯಾ ರಾಶಿ:

ಆದಾಯ ಮೂಲದಲ್ಲಿ ತೊಂದರೆ ಕಾಣಿಸಿಕೊಳ್ಳಬಹುದು. ಅದೃಷ್ಟವನ್ನು ನಂಬುವುದಕ್ಕಿಂತ ಸಾಮರ್ಥ್ಯವನ್ನು ನಂಬುವುದು ಒಳ್ಳೆಯದು. ಅತಿಯಾದ ಧನಾರ್ಜನೆಯ ಚಿಂತೆಯು ನಿಮ್ಮ ಎಲ್ಲ‌ ಕೆಲಸಗಳನ್ನು ಮರೆಸುವುದು. ಕಾನೂನು ಸಮರದಲ್ಲಿ ಸೋಲುಣ್ಣಬೇಕಾಗುವುದು. ನಿಮ್ಮ ದಿಕ್ಕನ್ನು ಇನ್ನೊಂದು‌ಕಡೆಗೆ ತಿರುಗಿಸಲು ಪ್ರಯತ್ನ ಮಾಡಬಹುದು. ನಿಮ್ಮ ವ್ಯಕ್ತಿತ್ವದ ನಿರ್ಮಾಣವು ಇನ್ನಷ್ಟು ಆಗಬೇಕಿದೆ. ಅನುಕರಿಸುವ ಸ್ವಭಾವವು ಹೆಚ್ಚು ಇರುವುದು. ಮೇಲಧಿಕಾರಿಗಳ ಜೊತೆ ಕಲಹ ಮಾಡಿಕೊಳ್ಳುವಿರಿ. ಮಿತ್ರರ ನಡುವೆ ಪ್ರೇಮವ ವಿವಾರಕ್ಕೆ ದ್ವೇಷವು ಬೆಳೆಯಬಹುದು. ವೃತ್ತಿಯಲ್ಲಿ ಒತ್ತಡವು ಹೆಚ್ಚಾಗಿರುವುದು. ಸಂಗಾತಿಯ ಜೊತೆ ಸಮಾರಂಭಗಳಲ್ಲಿ ಭಾಗವಹಿಸುವಿರಿ‌. ತಾಯಿಯ ಜೊತೆ ಕಲಹವಾಡಿ ಅವರನ್ನು ಬೇಸರಿಸುವಿರಿ. ಉದ್ಯಮದಲ್ಲಿ ಸಹವರ್ತಿಗಳು ರೂಪುಗೊಳ್ಳುವರು. ಅವಧಿಗೆ ಮೊದಲೇ ಕಾರ್ಯವನ್ನು ಮುಗಿಸಿ, ಇನ್ನಷ್ಟು ಮಾಡಬೇಕಾಗುವುದು.

ತುಲಾ ರಾಶಿ:

ಸ್ವಾಭಿಮಾನಕ್ಕೆ ಧಕ್ಕೆಯಾದಲ್ಲಿ ಸೋಲುವಿರಿ. ನಿಮ್ಮ ವ್ಯಾಪಾರ ಯೋಜನೆಗೆ ಸರಿಯಾದ ರೂಪ ಸಿಗಲಿದೆ‌ ಯಶಸ್ಸು. ಮಾತಿನಲ್ಲಿ ಉದ್ವೇಗವು ಹೆಚ್ಚಿರಲಿದೆ. ನಿಮ್ಮೊಳಗೇ ನಾನಾ ದ್ವಂದ್ವಗಳು ಕಾಣಿಸಿಕೊಳ್ಳಲಿವೆ. ನಕಾರಾತ್ಮಕ ಭಾವನೆಗಳಿಂದ ನಿಮಗೆ ಕಿರಿಕಿರಿಯಾಗಿ ಬಿಡಲೂ ಸಾಧ್ಯವಾಗದು. ಸಾಲ ಹೆಚ್ಚಾಗುವ ಭೀತಿಯು ಇರುವುದು. ಸಂಗಾತಿಯ ಪರವಾಗಿ ನೀವು ಮಾತನಾಡುವುದು ಅಚ್ಚರಿಯಾದೀತು. ಎಲ್ಲದಕ್ಕೂ ಲೆಕ್ಕಾಚಾರವನ್ನು ಹಾಕಿ ಮಾಡಿದರೂ ಅನಂತರ ಅದು ಕೈ ತಪ್ಪಬಹುದು. ನಿಮ್ಮ ಔದಾರ್ಯವನ್ನು ದುರ್ಬಳಕೆ ಮಾಡಿಕೊಳ್ಳಬಹುದು. ಒರಟು ಸ್ವಭಾವವನ್ನು ಬಿಡುವುದು ಉತ್ತಮ. ಅಧ್ಯಾತ್ಮ ಬಲದಿಂದ ದ ಅತ್ಮಬಲವನ್ನು ತಂದುಕೊಳ್ಳುವಿರಿ. ಅತಿಯಾದ ಧನಾರ್ಜನೆಯ ಚಿಂತೆಯು ನಿಮ್ಮ ಎಲ್ಲ‌ ಕೆಲಸಗಳನ್ನು ಮರೆಸುವುದು. ಕಾನೂನು ಸಮರದಲ್ಲಿ ಸೋಲುಣ್ಣಬೇಕಾಗುವುದು. ನಿಮ್ಮ ವ್ಯಕ್ತಿತ್ವದ ನಿರ್ಮಾಣವು ಇನ್ನಷ್ಟು ಆಗಬೇಕಿದೆ. ನಿಮ್ಮ‌ ಮೇಲೆ ಯಾರಾದರೂ ಆರೋಪವನ್ನು ಮಾಡಬಹುದು.

ವೃಶ್ಚಿಕ ರಾಶಿ:

ಸಹನೆಯು ಬೇಕಾದಲ್ಲಿ ಉದ್ವಿಗ್ನವಾಗುವಿರಿ. ಔದ್ಯೋಗಿಕ ನಿರ್ಣಯವನ್ನು ತೆಗೆದುಕೊಳ್ಳಲು ಸಮಯವನ್ನು ಪಡೆಯಿರಿ. ಸದಾ ಕಾಲ ಹೊಸತನ್ನು ಅಪೇಕ್ಷಿಸುವಿರಿ. ನಿಮ್ಮ ವಸ್ತುವನ್ನು ಅನ್ಯರಿಗೆ ಕೊಟ್ಟು ಕಳೆದುಕೊಂಡು ಸಂಕಟಪಡುವಿರಿ. ಆದಾಯವನ್ನು ಹೆಚ್ಚು ಮಾಡಿಕೊಳ್ಳುವುದು ಅನಿವಾರ್ಯವಾದೀತು. ಒತ್ತಾಯದಿಂದ ಯಾರನ್ನೂ ಬಳಸಿಕೊಳ್ಳವುದು ಬೇಡ. ನಿಮಗೆ ವಹಸಿದ ಕೆಲಸದಲ್ಲಿ ನಿಷ್ಠೆಯನ್ನು ತೋರಿಸುವಿರಿ. ನೀವು ಅಂದುಕೊಂಡ ಕಾರ್ಯವು ಪ್ರಶಾಂತವಾಗಿ ಕೊನೆಗೊಳ್ಳುವುದು. ಆರ್ಥಿಕ ವ್ಯವಹಾರದಲ್ಲಿ ನೀವು ಇಂದು ದುರ್ಬಲರಾಗುವಿರಿ. ಹೊಸ ಕಾರ್ಯದಲ್ಲಿ ಹುಮ್ಮಸ್ಸು ಅತಿಯಾಗುವುದು. ಕೆಲವು ಸ್ವಭಾವವನ್ನು ತೋರಿಸುವುದು ಉಚಿತವಾಗದು. ಸ್ವಾವಲಂವನೆಯಿಂದ ಜೀವನವನ್ನು ನಡೆಸುವಿರಿ. ನಿಮಗೆ ವಹಸಿದ ಕೆಲಸದಲ್ಲಿ ನಿಷ್ಠೆಯನ್ನು ತೋರಿಸುವಿರಿ. ಇಂದಿನ ಅಶುಭವಾರ್ತೆ ನಿಮ್ಮನ್ನು ಅಲ್ಪ ಕುಗ್ಗಿಸಬಹುದು. ವ್ಯರ್ಥ ಕಾಲಹರಣವನ್ನು‌ ಮಾಡಿ ಸಂಪತ್ತನ್ನೂ ಕಳೆದುಕೊಳ್ಳಬೇಕಾಗುವುದು.

ಧನು ರಾಶಿ:

ಹಣಕ್ಕಾಗಿ ಮಕ್ಕಳು ಪೀಡಿಸಬಹುದು. ಪ್ರೇಮವನ್ನು ಪೂರ್ಣವಾಗಿ ನಂಬಲಾಗದು. ಇಂದು ಅನಗತ್ಯ ಓಡಾಟದಿಂದ ಆರಂಭ. ನೀವು ಕೆಲವು ಅಹಿತಕರ ಸುದ್ದಿಗಳು ನಿಮ್ಮನ್ನು ಕುಗ್ಗಿಸಬಹುದು. ಸ್ನೇಹಿತರು ನಿಮ್ಮ ಸಮಯವನ್ನು ವ್ಯರ್ಥ ಮಾಡಬಹುದು. ಸ್ವಾಭಿಮಾನವನ್ನು ಬಿಟ್ಟು ಇರುವುದು ಕಷ್ಟವಾದೀತು. ಕುಟುಂಬದ ಜವಾಬ್ದಾರಿಗಳು ಹೆಚ್ಚಾಗಬಹುದು. ಕೋಪದಲ್ಲಿ ಏನನ್ನಾದರೂ ಹೇಳುವಿರಿ. ಕಠಿಣ ಕೆಲಸವನ್ನು ಸರಳ ಮಾಡಿಕೊಳ್ಳುವ ವಿಧಾನವು ಗೊತ್ತಿರಲಿ. ಹಳೆಯ ಸ್ನೇಹಿತರ ಭೇಟಿಯನ್ನು ಮಾಡುವ ಮನಸ್ಸಾಗುವುದು. ಇಂದು ಶಾರೀರಿಕ ಪೀಡೆ ಅತಿಯಾಗಬಹುದು. ಇಂದಿನ ಖರ್ಚು ನಿಮ್ಮನ್ನು ಕುಗ್ಗಿಸಬಹುದು. ಅಶಿಸ್ತಿನ ಕಾರಣ ಹಿರಿಯರಿಂದ ಬೈಸಿಕೊಳ್ಳಬೇಕಾಗುವುದು. ನಿಮ್ಮ ವಸ್ತುವನ್ನು ಅನ್ಯರಿಗೆ ಕೊಟ್ಟು ಕಳೆದುಕೊಂಡು ಸಂಕಟಪಡುವಿರಿ. ಹಳೆಯ ವಸ್ತುಗಳನ್ನು ದುರಸ್ತಿ ಮಾಡಿಕೊಂಡು ಬಳಸುವಿರಿ. ಇಂದು ಸ್ವಂತ ಉದ್ಯಮವು ಹೆಚ್ಚು ಸವಾಲಿನಿಂದ ಇರುವುದು. ಭೂಮಿಯ ಉತ್ಪನ್ನದಿಂದ ಲಾಭವಾಗಲಿದೆ.

ಮಕರ ರಾಶಿ:

ಆತ್ಮಪ್ರಶಂಸೆಯು ಇತರರಿಗೆ ಕೇಳಲಾಗದು. ನೀವು ವಿವಿಧ ಕಡೆಯಿಂದ ಒಳ್ಳೆಯ ಸುದ್ದಿಗಳನ್ನು ಪಡೆಯುತ್ತೀರಿ. ಸಿಕ್ಕ ಅವಕಾಶಗಳನ್ನು ದುರುಪಯೋಗ ಮಾಡಿಕೊಳ್ಳುವಿರಿ. ನಂಬಿಕೆಯಲ್ಲಿ ದ್ರೋಹವಾಗಿದೆ ಎಂದು ಅನ್ನಿಸಬಹುದು. ಕಛೇರಿಯ ನಿಯಮಗಳನ್ನು ನೀವೇ ಉಲ್ಲಂಘಿಸುವಿರಿ. ಮೇಲಧಿಕಾರಿಗಳ ಜೊತೆ ನಿಮಗೆ ಆಪ್ತತೆ ಬೇಡ. ಪರರ ದ್ರವ್ಯವನ್ನು ಕೊಟ್ಟು ನಿಶ್ಚಿಂತರಾಗಿ. ಸಂಗಾತಿಯ ಮನಃಸ್ಥಿತಿಯನ್ನು ಬದಲಿಸಲು ಪ್ರಯತ್ನಿಸುವಿರಿ. ನಿಮಗೆ ಸ್ಥಿರಾಸ್ತಿಯನ್ನು ಮಾರಾಟ ಮಾಡುವ ಅನಿವಾರ್ಯತೆ ಬರಬಹುದು. ಹಳೆಯ ಪ್ರೇಮವನ್ನು ಸಂಗಾತಿಯಲ್ಲಿ ಹೇಳಿಕೊಳ್ಳುವಿರಿ. ನೀವು ಇದರಿಂದ ನಿರಾಳರಾಗುವಿರಿ. ಕಛೇರಿಯಲ್ಲಿ ನಿಮ್ಮ ಮಾತನ್ನು ಪಾಲಿಸುವರು. ವಿದೇಶೀ ವಿನಿಮಯದಿಂದ ಲಾಭವಾಗಲಿದೆ. ನಿಮ್ಮ ಅನುಪಸ್ಥಿತಿಯಲ್ಲಿ ಕೆಲಸವನ್ನು ಬೇರೆಯವರು ಮಾಡುವರು. ಅನಾರೋಗ್ಯವು ಬೆನ್ನು‌ ಬಿಡದ ಬೇತಾಳದಂತೆ ಕಾಡಬಹುದು. ಯಾರ ನಕಾರಾತ್ಮಕ ಮಾತುಗಳೂ ನಿಮ್ಮ ಲೆಕ್ಕಕ್ಕೆ ಬಾರದು. ನಿರುದ್ಯೋಗಿಗಳಿಗೆ ಉದ್ಯೋಗದಲ್ಲಿ ಅವಕಾಶ ಪ್ರಾಪ್ತಿ.

ಕುಂಭ ರಾಶಿ:

ತಪ್ಪುಗ್ರಹಿಕೆಯಿಂದ ಸುಮ್ಮನೇ ಇರಬೇಕಾದೀತು. ವೃತ್ತಿಯ ಕಾರಣಕ್ಕೆ ಮಾಡುವ ಪ್ರಯಾಣದಲ್ಲಿ ಇಷ್ಟವಿರದು. ಸಂಕುಚಿತ ಮನಃಸ್ಥಿತಿಯು ಎಲ್ಲದರಿಂದ ನಿಮ್ಮನ್ನು ದೂರವಿಡುವುದು. ಪಕ್ಷಪಾತವು ನಿಮ್ಮ ಎಲ್ಲ ಸದ್ಭಾವವನ್ನು ನುಂಗಿ ಹಾಕುವುದು. ದಾಂಪತ್ಯದಲ್ಲಿ ಬೇಸರವಿರಲಿದೆ. ಯಾರ ಮೇಲೂ ದೂರನ್ನು ಹೇಳುವುದು ಬೇಡ. ಸಮಯ ಬಂದಾಗ ಎಲ್ಲವೂ ಸ್ಪಷ್ಟವಾಗಿ ಗೋಚರಿಸುವುದು. ಸಮಾರಂಭಗಳಲ್ಲಿ ನೀವು ಹೇಳಿದ ಮಾತು ವಿವಾದವಾಗಬಹುದು. ಸ್ನೇಹಿತರನ್ನು ಕಳೆದುಕೊಂಡಿರುವುದರ ಪರಿಣಾಮವು ಕೂಡಲೇ ಗೊತ್ತಾಗದು. ಅಮೂಲ್ಯ ವಸ್ತುವನ್ನು ಕೊಟ್ಟು ಆರ್ಥಿಕ ಸಂಕಷ್ಟವನ್ನು ತಂದುಕೊಳ್ಳುವಿರಿ. ಕೆಲವು ಸೂಚನೆಗಳು ನಿಮಗೆ ಭವಿಷ್ಯವನ್ನು ತಿಳಿಸಬಹುದು. ಕುಟುಂಬದಲ್ಲಿ ಶಾಂತಿಯು ಕದಡಲು ನಿಮ್ಮ ಪಾತ್ರವೇ ಇರುವುದು. ಕಳೆದುಕೊಂಡ ವಸ್ತುವನ್ನು ಮರಳಿ ಪಡೆಯುವಿರಿ. ನಿಮ್ಮ ಬಗ್ಗೆ ಇತರರಿಗೆ ತಿಳಿವಳಿಕೆ ಕೊಡುವಿರಿ. ಉನ್ನತ ಅಧಿಕಾರಿಗಳ ಮೇಲೆ ಸಿಟ್ಟನ್ನು ಬೇರೆ ಕಡೆಯಲ್ಲಿ ಹೊರಹಾಕುವಿರಿ.

ಮೀನ ರಾಶಿ:

ನೀವು ಮಾಡುವ ಆಸ್ತಿಯ ಹಂಚಿಕೆಯಲ್ಲಿ ಹಳೆಯ ವಿಚಾರಗಳು ಮರುಕಳಿಸುವುದು. ಅನಿರೀಕ್ಷಿತ ಪ್ರಯಾಣದಲ್ಲಿ ಕೆಲವು ಲಾಭವಾಗುವುದು. ಆದರೆ ಅಲ್ಲಿನ ಸಣ್ಣ ವಿಚಾರಕ್ಕೂ ಸಿಟ್ಟಗುವಿರಿ. ರಕ್ಷಣೆಯ ಕಾರ್ಯಗಳಿಗೆ ಸ್ವಲ್ಪ ಅನನುಕೂಲ ಸನ್ನಿವೇಶವು ಇರಲಿದೆ. ಪರಸ್ಪರ ನೆರವಿನಿಂದ ಇಂದಿನ ಕೆಲಸವು ಸಾಧ್ಯವಾಗುವುದು. ಸ್ನೇಹಿತರು ದೂರವಾದ್ದರಿಂದ ನಿಮಗೂ ನೆಮ್ಮದಿ ಸಿಗುವುದು. ಆದಾಯದ ಮೂಲವನ್ನು ಹೆಚ್ಚುಮಾಡಿಕೊಳ್ಳುವಿರಿ. ಸ್ಥಿರಾಸ್ತಿಯನ್ನು ಅಲಕ್ಷ್ಯ ಮಾಡುವಿರಿ‌ ಕಾರಣಾಂತರಗಳಿಂದ ನಿಮ್ಮ‌ ಯಾತ್ರೆಯು ಸ್ಥಗಿತವಾಗುವುದು. ಮನೆಯವರನ್ನು ಕಾಣದೇ ನಿಮಗೆ ಬೇಸರವಾದೀತು. ಅಧ್ಯಾತ್ಮದ ಚಿಂತನೆಯನ್ನು ಇಂದು ಮಾಡುವಿರಿ. ಆರ್ಥಿಕವಾಗಿ ನೀವು ಸಬಲರಾಗುವುದು ನಿಮ್ಮ ನಡತೆಯಲ್ಲಿ ಕಾಣುವುದು. ನಿಮ್ಮ ಬಗ್ಗೆ ಕೀಳರಿಮೆ ಉಂಟಾಗಬಹುದು. ಸಂತೋಷದ ವಾತಾವರಣವು ಮನೆಯಲ್ಲಿ ಇರುವುದು. ನಿರಾಸೆಯಿಂದ ನೀವು ಹೊರಬರುವಿರಿ.

ಜನವರಿ 11,​​ 2026ರ ಪಂಚಾಂಗ:

ಶಾಲಿವಾಹನ ಶಕೆ ೧೯೪೭
ಕ್ರೋಧೀ ಸಂವತ್ಸರ
ದಕ್ಷಿಣಾಯನ
ಹೇಮಂತ ಋತು
ಧನು ಮಾಸ
ಮಹಾನಕ್ಷತ್ರ : ಪೂರ್ವಾಷಾಢ
ಮಾಸ : ಪೌಷ
ಪಕ್ಷ : ಶುಕ್ಲ
ವಾರ : ಶನಿ
ತಿಥಿ : ದ್ವಾದಶೀ / ತ್ರಯೋದಶೀ
ನಿತ್ಯನಕ್ಷತ್ರ : ಮೃಗಶಿರಾ
ಯೋಗ : ಬ್ರಹ್ಮ
ಕರಣ : ಬಾಲವ
ಸೂರ್ಯೋದಯ – 07 – 01 am
ಸೂರ್ಯಾಸ್ತ – 06 – 19 pm

ಶುಭಾಶುಭಕಾಲ :
ರಾಹು ಕಾಲ 09:51 – 11:16
ಯಮಘಂಡ ಕಾಲ 14:05 – 15:30
ಗುಳಿಕ ಕಾಲ 07:02 – 08:27

-ಲೋಹಿತ ಹೆಬ್ಬಾರ್-8762924271 (what’s app only)

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಜನವರಿ 11ರ ದಿನಭವಿಷ್ಯ

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ಮನೆಯಿಂದ ದೂರ ಇದ್ದು, ವ್ಯಾಸಂಗ- ಉದ್ಯೋಗ ಮಾಡುತ್ತಾ ಇರುವವರು ಏಕಾಂತವನ್ನು ಬಯಸುವಿರಿ ಮತ್ತು ಆರ್ಥಿಕ ವಿಚಾರಗಳಲ್ಲಿ ನಿಮ್ಮ ಹಳೆಯ ತಪ್ಪುಗಳಿಂದ ಪಾಠ ಕಲಿಯುವಿರಿ. ಸಂಶೋಧನಾತ್ಮಕ ಕೆಲಸಗಳಿಗೆ ಇಂದಿನ ಶಕ್ತಿ ಪೂರಕವಾಗಿದೆ. ಆಧ್ಯಾತ್ಮಿಕ ಗುರುವಿನ ಭೇಟಿ ಅಥವಾ ದರ್ಶನ ಪಡೆಯುವ ಸಾಧ್ಯತೆ ಇದೆ. ಸಂಬಂಧಗಳಲ್ಲಿ ಸಾಧಾರಣ ಫಲಿತಾಂಶಗಳಿದ್ದರೂ ನಿಮ್ಮ ಉಳಿತಾಯದ ಯೋಜನೆಗಳು ಫಲ ನೀಡಲಿವೆ. ರಹಸ್ಯ ವಿಚಾರಗಳನ್ನು ಯಾರಿಗೂ ತಿಳಿಸಬೇಡಿ. ಅನಿರೀಕ್ಷಿತವಾಗಿ ಪ್ರಯಾಣ ಮಾಡುವ ಸಂದರ್ಭ ಬರಬಹುದು.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ಕೆಲಸದ ಒತ್ತಡವನ್ನು ನೀಗಿಸಲು ಇಂದೇ ಸಿದ್ಧತೆ ಮಾಡಿಕೊಳ್ಳುವಿರಿ. ಕಬ್ಬಿಣ, ತೈಲ ಅಥವಾ ಸಿಮೆಂಟ್ ವ್ಯಾಪಾರಸ್ಥರಿಗೆ ದೊಡ್ಡ ಲಾಭ ಸಿಗಲಿದೆ. ಆಸ್ತಿ ವಿವಾದಗಳು ಸುಲಭವಾಗಿ ಬಗೆಹರಿಯಲಿವೆ. ಕಠಿಣ ಶ್ರಮಕ್ಕೆ ಅಧಿಕಾರಿಗಳಿಂದ ಮೆಚ್ಚುಗೆ ದೊರೆಯಲಿದೆ. ನಿಮ್ಮ ಮೇಲೆ ಅಪವಾದ ಬರದಂತೆ ಎಚ್ಚರ ವಹಿಸಿ. ಹಳೆಯ ಸಾಲಗಳಿಂದ ಮುಕ್ತಿ ಪಡೆಯುವ ಹಾದಿ ಗೋಚರಿಸಲಿದೆ. ಅಜೀರ್ಣ ಸಮಸ್ಯೆಯಾಗದಂತೆ ಆಹಾರದ ಮಿತಿಯಿರಲಿ. ಇಷ್ಟದೇವತೆಯ ಪ್ರಾರ್ಥನೆ ಶುಭ ನೀಡಲಿದೆ. ಮನೆಯಲ್ಲಿ ಇರುವಂಥ ಕೆಲವು ಹಳೇ ವಸ್ತುಗಳನ್ನು ಮಾರಾಟ ಮಾಡುವುದಕ್ಕೆ ನಿರ್ಧಾರ ಮಾಡಲಿದ್ದೀರಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ನಿಮ್ಮ ಆತ್ಮವಿಶ್ವಾಸವು ಉತ್ತುಂಗದಲ್ಲಿರುತ್ತದೆ, ಆದರೆ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಭಾವನಾತ್ಮಕತೆ ಬದಲು ತರ್ಕಕ್ಕೆ ಆದ್ಯತೆ ನೀಡಿ. ಕೆಲಸದ ಸ್ಥಳದಲ್ಲಿ ಹೊಸ ಜವಾಬ್ದಾರಿಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ. ಭೂಮಿಗೆ ಸಂಬಂಧಿಸಿದ ಹಳೆಯ ವ್ಯವಹಾರಗಳು ಲಾಭದಾಯಕವಾಗಿ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಸಂಗಾತಿಯೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಬರಬಹುದು, ಶಾಂತವಾಗಿ ಮಾತನಾಡಿ ಪರಿಸ್ಥಿತಿ ತಿಳಿಗೊಳಿಸಿ. ದೂರದ ಪ್ರಯಾಣದ ಯೋಜನೆಗಳಿದ್ದರೆ ಸದ್ಯಕ್ಕೆ ಮುಂದೂಡುವುದು ಒಳಿತು.

ಲೇಖನ- ಎನ್‌.ಕೆ.ಸ್ವಾತಿ

Source link