ಕಸ ಮುಕ್ತ ಬೆಂಗಳೂರಿಗೆ ಜಿಬಿಎ ಮಾಸ್ಟರ್ ಪ್ಲಾನ್: ಕಸ ವಿಂಗಡಿಸದಿದ್ದರೆ ಬೀಳಲಿದೆ ಭಾರಿ ದಂಡ! – Kannada News | Garbage Free Bengaluru Master Plan: Heavy Fines for Not Segregating Waste

ಹಸಿ, ಒಣ ತ್ಯಾಜ್ಯ (ಸಂಗ್ರಹ ಚಿತ್ರ)Image Credit source: INKDABBI

ಬೆಂಗಳೂರು, ಏಪ್ರಿಲ್​ 18: ರಾಜಧಾನಿ ಬೆಂಗಳೂರಿಗೆ ಅಂಟಿಕೊಂಡಿರುವ ಬಹುದೊಡ್ಡ ಶಾಪ ಅಂದರೆ ಅದು ಕಸ (Garbage). ಗಾರ್ಬೇಜ್ ಸಿಟಿ ಎಂಬ ಕುಖ್ಯಾತಿ ಹೋಗಿಲ್ಲ. ಹೀಗಾಗಿ ಘನತ್ಯಾಜ ನಿರ್ವಹಣೆಗೆ ಕಟ್ಟುನಿಟ್ಟಿನ ನಿಯಮ ಜಾರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮುಂದಾಗಿದೆ. ಕಸ ವಿಂಗಡಣೆ ನಿಯಮ ಪಾಲನೆ ಮಾಡಿಲ್ಲ ಅಂದ್ರೆ ಒಂದು ಸಾವಿರ ರೂಪಾಯಿ ದಂಡ ಬೀಳೋದು ಗ್ಯಾರಂಟಿ.

ಕಸ ವಿಂಗಡಣೆ ಕಡ್ಡಾಯ

ಸಿಲಿಕಾನ್​ ಸಿಟಿಗೆ ಗಾರ್ಬೇಜ್​​ನ​​ದ್ದೇ ಟೆನ್ಷನ್. ಕಸ ವಿಂಗಡಣೆ ಮಾಡಿಕೊಡಿ ಅಂದರೂ ಕೆಲವರು ತಲೆ ಕೆಡಿಸಿಕೊಳ್ಳುತ್ತಿಲ್ಲ. ಹೀಗಾಗಿ ನಗರದಲ್ಲಿ ಕಸ ನಿರ್ವಹಣೆ ನಿಯಮ ಬಿಗಿಗೊಳಿಸಲು ಜಿಬಿಎ ಮುಂದಾಗಿದೆ. ಏಪ್ರಿಲ್ 1ರಿಂದಲೇ ಮನೆಮನೆಗಳಲ್ಲಿ ಕಸ ವಿಂಗಡಣೆ ಕಡ್ಡಾಯಗೊಳಿಸಲು ನಿರ್ಧರಿಸಿದೆ.

ಇದನ್ನೂ ಓದಿ: ಕಸದ ರಾಶಿಗೆ ರಸ್ತೆ, ಫುಟ್​ಪಾತ್ ಮಾಯ! ಜಿಬಿಎ ವಿರುದ್ಧ ರೊಚ್ಚಿಗೆದ್ದ ಜನ

ಹೊಸ ನಿಯಮದಂತೆ ಹಸಿ, ಒಣ ತ್ಯಾಜ್ಯವನ್ನು ವಿಂಗಡಿಸಿ ನೀಡದಿದ್ದರೆ 1 ಸಾವಿರ ರೂ ದಂಡ ವಿಧಿಸಲಾಗುತ್ತದೆ ಎಂದು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ ನಿಗಮ ಎಚ್ಚರಿಸಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ತಲೆದೂರಿದ ಕಸದ ಸಮಸ್ಯೆ: ಜಿಬಿಎ ವಿರುದ್ಧ ಉದ್ಯಮಿ ಕಿರಣ್ ಮಜುಂದಾರ್ ಶಾ ಗರಂ

ಹೊಸ ನಿಯಮದಂತೆ ಹಸಿ, ಒಣ, ನೈರ್ಮಲ್ಯ ಹಾಗೂ ವಿಶೇಷ ತ್ಯಾಜ್ಯವನ್ನು ಪ್ರತ್ಯೇಕವಾಗಿ ವಿಂಗಡಿಸಿ ನೀಡದಿದ್ದರೆ 1 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ. ಎರಡನೇ ಬಾರಿ ಇದೇ ತಪ್ಪು ಮಾಡಿದರೆ, ಎರಡು ಸಾವಿರ ರೂಪಾಯಿ ದಂಡ ವಿಧಿಸಲಾಗುವುದು.

ಕಸದ ಮೇಲಿನ ತೆರಿಗೆ ಹೊರೆ: ಸಾರ್ವಜನಿಕರು ಅಸಮಾಧಾನ

ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಗಳು-2026 ಅನ್ವಯ ದಂಡ ವಿಧಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಆದರೆ ಈ ಕ್ರಮ ಅವೈಜ್ಞಾನಿಕವಾಗಿದ್ದು, ಕಸದ ಮೇಲಿನ ತೆರಿಗೆ ಹೊರೆಯಾಗುತ್ತಿದೆ ಅಂತ ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದಾರೆ. ಹೊಸ ನಿಯಮಗಳ ಮೂಲಕ ಕಸ ಮುಕ್ತ ಬೆಂಗಳೂರಿಗೆ ನೂರೆಂಟು ಸರ್ಕಸ್ ನಡೆಯುತ್ತಿವೆ. ಆದರೆ ಇದಕ್ಕೆ ಪೂರಕವಾಗಿ ನಾಗರಿಕರು ಸಾಥ್ ನೀಡುತ್ತಾರಾ ಅಂತ ಕಾದು ನೋಡಬೇಕಿದೆ.

ವರದಿ: ಲಕ್ಷ್ಮಿ ನರಸಿಂಹ ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *