SSLC ಪ್ರಶ್ನೆಪತ್ರಿಕೆ ಸೋರಿಕೆ: ಟಿವಿ9 ವರದಿ ಬೆನ್ನಲ್ಲೇ ಸೆಂಟರ್ ಪತ್ತೆ, ಡಿಡಿಪಿಐ ಸ್ಥಳಕ್ಕೆ ಭೇಟಿ – Kannada News | TV9 Identifies Exam Centre Where SSLC Question Paper Was Leaked
ಬೆಳಗಾವಿ, ಜನವರಿ 10: ಎಸ್‌ಎಸ್‌ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷೆಯ ಸಮಾಜ ವಿಜ್ಞಾನ ವಿಷಯದ ಪ್ರಶ್ನೆಪತ್ರಿಕೆ ಸೋರಿಕೆ (SSLC Exam Paper Leak) ಆರೋಪ ಕೇಳಬಂದಿದೆ. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಮಾಜ ವಿಜ್ಞಾನ ಪ್ರಶ್ನೆಪತ್ರಿಕೆ ವೈರಲ್ ಆಗಿದೆ. ಆದರೆ ಇದೀಗ ಪ್ರಶ್ನೆಪತ್ರಿಕೆ ಲೀಕ್ ಆದ ಪರೀಕ್ಷಾ ಕೇಂದ್ರ ಪತ್ತೆ ಆಗಿದೆ. ಟಿವಿ9 ವರದಿ ಗಮನಿಸಿ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಸೆಂಟರ್ ಪತ್ತೆ ಮಾಡಲಾಗಿದೆ. ಬೆಳಗಾವಿಯ ಪರೀಕ್ಷಾ ಕೇಂದ್ರವಾಗಿದ್ದು, ಲಕ್ಷ್ಮೀನಗರದಲ್ಲಿರುವ ಸೇಂಟ್ ಮೀರಾ ಶಾಲೆಯಿಂದ ಸೋರಿಕೆಯಾಗಿರುವ ಸಂಶಯ ವ್ಯಕ್ತವಾಗಿದೆ. ಪ್ರಶ್ನೆಪತ್ರಿಕೆ ಮೇಲಿರುವ…