ಮೀನುಗಾರಿಕೆಗೆ ತಟ್ಟಿದ ತಾಪಮಾನ ಬಿಸಿ: ಮತ್ಸ್ಯಕ್ಷಾಮ, ಮೀನುಗಾರಿಕೆ ಸ್ಥಗಿತಗೊಳಿಸಿ ದಡ ಸೇರಿದ ಸಾವಿರಾರು ಬೋಟ್‌ಗಳು! – Kannada News | Mangaluru Fishing Crisis: Rising Sea Temperatures Lead to Fish Scarcity; Thousands of Boats Anchored Due to Losses
ಮಂಗಳೂರಿನ ಬಂದರಿನಲ್ಲಿ ನಿಂತಿರುವ ಮೀನುಗಾರಿಕೆ ಬೋಟುಗಳುImage Credit source: tv9 ಮಂಗಳೂರು, ಏಪ್ರಿಲ್ 16: ಕರ್ನಾಟಕ ಕರಾವಳಿ ಜಿಲ್ಲೆಗಳಲ್ಲಿ ಬಿಸಿಗಾಳಿಯ (Karnataka Coastal Weather) ಆರ್ಭಟ ಹೆಚ್ಚಾಗಿದ್ದು, ವಾತಾವರಣ ಬೆಂಕಿ ಕೆಂಡದಂತಾಗಿದೆ. ಈ ತಾಪಮಾನದ ಏರಿಕೆ ಈಗ ಸಮುದ್ರಕ್ಕೂ ತಟ್ಟಿದ್ದು, ಮತ್ಸ್ಯಕ್ಷಾಮ ಉಂಟಾಗಿದೆ. ಬಿಸಿಲಿನ ತಾಪ ತಾಳಲಾರದೆ ಮೀನುಗಳು ತಂಪಾದ ಪ್ರದೇಶ ಹುಡುಕಿಕೊಂಡು ಸಮುದ್ರದಾಳದ ಕಲ್ಲುಬಂಡೆಗಳ ನಡುವೆ ಆಶ್ರಯ ಪಡೆಯುತ್ತಿವೆ. ಇದರ ನೇರ ಪರಿಣಾಮ ಮೀನುಗಾರಿಕೆ ಮೇಲೆ ಉಂಟಾಗಿದ್ದು, ಮೀನುಗಾರರು ಕಂಗಾಲಾಗಿದ್ದಾರೆ. ಮೀನುಗಳು ಸಿಗದ ಕಾರಣ ನೂರಾರು…