All posts by nagaraj11081993

ಕೋಗಿಲು ಭೂ ಕಬಳಿಕೆ ಕೇಸ್​​: ಎಲ್ಲ ದಾಖಲೆ ಫೇಕ್​​, ಆರೋಪಿಗಳ ಕಳ್ಳಾಟ ಬಯಲು – Kannada News | Yelahanka Kogilu Land Fraud: Explosive Details of Fake Documents Revealed

ತಾತ್ಕಾಲಿಕ ಟೆಂಟ್​​ನಲ್ಲಿ ವಾಸ.

ಬೆಂಗಳೂರು, ಜನವರಿ 08: ಯಲಹಂಕ ಕೋಗಿಲು ಬಳಿ ಸರ್ಕಾರಿ ಜಮೀನು ಕಬಳಿಕೆ ಪ್ರಕರಣ ಸಂಬಂಧ ತನಿಖೆ ವೇಳೆ ಸ್ಫೋಟಕ ಮಾಹಿತಿಗಳು ಬಹಿರಂಗವಾಗಿವೆ. ಬಂಧಿತ ಆರೋಪಿಗಳಾದ ವಿಜಯ್ ಮತ್ತು ವಸೀಮ್ ಉಲ್ಲಾ ಅಲ್ಲಿಯ ಅಕ್ರಮ ನಿವಾಸಿಗಳಿಂದ ಹಣ ಪಡೆದು ನಕಲಿ ದಾಖಲೆ ಸೃಷ್ಟಿಮಾಡಿದ್ದಾರೆ. ಅಲ್ಲದೆ ಹಕ್ಕುಪತ್ರಗಳನ್ನು ಕೂಡ ನೀಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಈ ಬಗ್ಗೆಯೂ ಯಲಹಂಕ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.

ಇನ್ನು ಈ ಬಗ್ಗೆ ಮಾಹಿತಿ ಇದ್ದರೂ ಸಹ ಯಲಹಂಕ ತಹಶಿಲ್ದಾರ್ ಕ್ರಮ ಕೈಗೊಂಡಿಲ್ಲ. ನಕಲಿ ದಾಖಲೆ ಸೃಷ್ಟಿಸಿ ಒತ್ತುವರಿ ಮಾಡಿಕೊಂಡಿರೋ ಜಮೀನು ವಶಕ್ಕೆ ಪಡೆದಿಲ್ಲ. ನಕಲಿ‌ ದಾಖಲೆಗಳ ಬಗ್ಗೆ ಕ್ರಮ‌ ತೆಗದುಕೊಳ್ಳುವಂತೆ ಸ್ಥಳೀಯ ಯಲಹಂಕ ಪೊಲೀಸ್ ಠಾಣೆ ಗೆ ದೂರನ್ನು ನೀಡಿಲ್ಲ. ಹೀಗಾಗಿ 2022ರಿಂದ 2025ರ ಅವಧಿಯಲ್ಲಿ ಕೆಲಸ ಮಾಡಿರುವ ತಹಶಿಲ್ದಾರರ ವಿಚಾರಣೆ ನಡೆಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ಇದನ್ನೂ ಓದಿ: ಕೋಗಿಲು ಬಡಾವಣೆಯಲ್ಲಿ ಡೆಮಾಲಿಷ್ ಆಗಿದ್ದು 167 ಮನೆ, ಫ್ಲಾಟ್​ಗಾಗಿ ಸಲ್ಲಿಕೆಯಾದ ಅರ್ಜಿ 250ಕ್ಕೂ ಹೆಚ್ಚು!

‘ದೂರಿನ ಆಧಾರದಲ್ಲಿ ತನಿಖೆ’

ಕೋಗಿಲು ಲೇಔಟ್​ನಲ್ಲಿ ಸರ್ಕಾರಿ ಭೂಮಿ ಒತ್ತುವರಿ ಹಿನ್ನೆಲೆಯಲ್ಲಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ಪೂರ್ವ ವಲಯದ ಹೆಚ್ಚುವರಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಹೇಳಿದ್ದಾರೆ. ಪರಿಶೀಲನೆ ವೇಳೆ ಜಾಗ ಕೊಡಿಸುತ್ತೇವೆಂದು ಆರೋಪಿಗಳು ಮೋಸ ಮಾಡಿದ್ದು ಬೆಳಕಿಗೆ ಬಂದಿದೆ. ಹೀಗಾಗಿ ಸರ್ಕಾರಿ ಭೂಮಿ ಒತ್ತುವರಿ, ವಂಚನೆ ಆರೋಪದಡಿ ಇಬ್ಬರನ್ನು ಬಂಧಿಸಲಾಗಿದೆ. ದಾಖಲೆ ನೀಡಿರುವುದರ ಬಗ್ಗೆಯೂ ಪರಿಶೀಲನೆ ಮಾಡಲಾಗುತ್ತಿದೆ. ಎಷ್ಟು ಜನರಿಂದ ಹಣ ಪಡೆದಿದ್ದಾರೆ? ಯಾವ ದಾಖಲೆಗಳನ್ನು ನಕಲಿ ಮಾಡಲಾಗಿದೆ ಎಂದು ತನಿಖೆ ಮಾಡ್ತೇವೆ. ಯಾರೆಲ್ಲ ವಂಚನೆಗೊಳಗಾಗಿದ್ದಾರೆ ಅವರಿಗೆ ದೂರು ನೀಡಲು ಹೇಳಿದ್ದೇವೆ. ಅವರು ದೂರಿನ ಆಧಾರದಲ್ಲಿ ತನಿಖೆ ಮಾಡುತ್ತೇವೆ ಎಂದಿದ್ದಾರೆ.

’26 ಕುಟುಂಬಗಳ ದಾಖಲೆಯಷ್ಟೇ ಸರಿ ಇದೆ’

ಕೋಗಿಲು ಲೇಔಟ್​ನಲ್ಲಿ ಮನೆ ತೆರವಾಗಿರುವವರ ಪೈಕಿ 26 ಜನರಿಗೆ ಮನೆ ಕೊಡಲು ಅವಕಾಶವಿದೆ. ಇಷ್ಟು ಕುಟುಂಬಗಳ ದಾಖಲೆಗಳು ಮಾತ್ರ ಸರಿಯಾಗಿವೆ. ಇನ್ನೂ ಹಲವರ ದಾಖಲೆಗಳನ್ನ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಬೆಂಗಳೂರಿನಲ್ಲಿ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ. ಷರತ್ತು ವಿಧಿಸಿ ಮನೆಗಳನ್ನು ಹಂಚಿಕೆ ಮಾಡಲಾಗುವುದು. ಯಾವುದೇ ಕಾರಣಕ್ಕೂ ಹೊರಗಿನವರಿಗೆ ಮನೆ ನೀಡುವುದಿಲ್ಲ. ಈಗಾಗಲೇ ಸಿಎಂ ಸಭೆ ನಡೆಸಿದ್ದು ಮನೆ ಹಂಚಿಕೆಗೆ ಸೂಚಿಸಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಡಿಪೋ ಮ್ಯಾನೇಜರ್ ಕಿರುಕುಳ: ನೇಣಿಗೆ ಕೊರಳೊಡ್ಡಿದ KSRTC ಚಾಲಕ, ಬಸ್​​​​ನಲ್ಲೇ ಶವ ರವಾನೆ – Kannada News | Shivamogga: KSRTC Driver Suicide; Harassment by Manager Alleged

ಶಿವಮೊಗ್ಗ, ಜನವರಿ 08: ಕೆಎಸ್​ಆರ್​ಟಿಸಿ ಬಸ್ ಚಾಲಕ (KSRTC Driver) ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿರುವಂತಹ ಘಟನೆ ಜಿಲ್ಲೆಯ ಸಾಗರ ತಾಲೂಕಿನ ತ್ಯಾಗರ್ತಿ ಗ್ರಾಮದಲ್ಲಿ ನಡೆದಿದೆ. ನಾಗಪ್ಪ (54) ಆತ್ಮಹತ್ಯೆ ಮಾಡಿಕೊಂಡ ಬಸ್ ಚಾಲಕ. ಡ್ಯೂಟಿ ನೀಡದೇ ಡಿಪೋ ಮ್ಯಾನೇಜರ್​​ ಕಿರುಕುಳ ನೀಡಿದ್ದ ಆರೋಪ ಕೇಳಿಬಂದಿದೆ. ಸದ್ಯ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡ್ಯೂಟಿ ನೀಡಿದೆ ಡಿಪೋ ಮ್ಯಾನೇಜರ್​​ ಕಿರುಕುಳ

ಮೃತ ಕೆಎಸ್ಆರ್​​ಟಿಸಿ ಬಸ್​​ ಚಾಲಕ ನಾಗಪ್ಪ, ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಬಳಿಯ ತ್ಯಾಗರ್ತಿ ಗ್ರಾಮದಲ್ಲಿ ವಾಸವಿದ್ದರು. ನಾಗಪ್ಪ ಅವರಿಗೆ ಕಳೆದ ಒಂದೂವರೆ ತಿಂಗಳಿಂದ ಡಿಪೋ ಮ್ಯಾನೇಜರ್ ಡ್ಯೂಟಿ ನೀಡಿರಲಿಲ್ಲ. ಮೂರ್ನಾಲ್ಕು ಬಾರಿ ಡ್ಯೂಟಿ ಸಿಗದೇ ಮನೆಗೆ ವಾಪಸ್ ಕೂಡ ಬಂದಿದ್ದರು.

ಇದನ್ನೂ ಓದಿ: ಪ್ರತ್ಯೇಕ ಘಟನೆ: ರಸ್ತೆ ಬದಿ‌ ನಿಲ್ಲಿಸಿದ್ದ ಕಾರಿನಲ್ಲಿ ವ್ಯಕ್ತಿಯ ಶವ ಪತ್ತೆ, 16ನೇ ಮಹಡಿಯಿಂದ ಬಿದ್ದು ಟೆಕ್ಕಿ ಸಾವು

ಡ್ಯೂಟಿ ಸಿಗದ ಕಾರಣ ನಾಗಪ್ಪ ಸಾಕಷ್ಟು ಮನನೊಂದಿದ್ದರು. ಹೀಗಾಗಿ ಕಳೆದ ಸೋಮವಾರ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೆಗ್ಗಾನ್ ಆಸ್ಪತ್ರೆಯಲ್ಲಿ ನಾಲ್ಕು ದಿನದ ಬಳಿಕ ಕೊನೆಯುಸಿರೆಳೆದಿದ್ದಾರೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ನಾಗಪ್ಪ ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಇನ್ನು ಕೆಎಸ್ಆರ್​ಟಿಸಿ ನೌಕರರು ಚಾಲಕ ನಾಗಪ್ಪನ ಅಂತಿಮ ದರ್ಶನ ಪಡೆದುಕೊಂಡರು. ಅಷ್ಟೇ ಅಲ್ಲದೆ ಮೃತದೇಹವನ್ನ ಕೆಎಸ್ಆರ್​​ಟಿಸಿ ಬಸ್​ನಲ್ಲೇ ತೆಗೆದುಕೊಂಡು ಹೋದರು.

ಪ್ರೀತಿಸುವಂತೆ ದುಂಬಾಲು ಬಿದ್ದ ಯುವಕ: ಆತ್ಮಹತ್ಯೆ ಮಾಡಿಕೊಂಡ ಅಪ್ರಾಪ್ತೆ

ನೇಣು ಬಿಗಿದುಕೊಂಡು ಅಪ್ರಾಪ್ತ ಯುವತಿ (17) ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ಪಟ್ಟಣದಲ್ಲಿ ನಡೆದಿದೆ. ತನ್ನನ್ನು ಪ್ರೀತಿಸುವಂತೆ ದುಂಬಾಲು ಬಿದ್ದಿದ್ದ ಯುವಕನ ಕಿರುಕುಳಕ್ಕೆ ಮನನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ. ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮಗಳಿಗೆ ಟಾರ್ಚರ್ ಕೊಡ್ತಿದ್ದ ಅಳಿಯನಿಗೆ ಚಟ್ಟ ಕಟ್ಟಿದ ಮಾವ: ರಾಡ್​​ನಿಂದ ಹೊಡೆದು ಕೊಲೆ

ಅಪ್ರಾಪ್ತೆಯನ್ನು ಪ್ರೀತಿಸುವಂತೆ ದೇಬೂರು ಗ್ರಾಮದ ಆದಿತ್ಯ ಎಂಬಾತ ದುಂಬಾಲು ಬಿದ್ದಿದ್ದ ಎನ್ನಲಾಗಿದೆ.  ಆದಿತ್ಯ ನೀಡುತ್ತಿದ್ದ ಕಿರುಕುಳದ ಬಗ್ಗೆ ಅಪ್ರಾಪ್ತೆ ಪೋಷಕರಿಗೆ ತಿಳಿಸಿದ್ದಳು. ಈ ಬಗ್ಗೆ ಅಪ್ರಾಪ್ತೆ ತಂದೆಯಿಂದ ಆದಿತ್ಯಗೆ ಬುದ್ಧ ಮಾತು ಹೇಳಲಾಗಿತ್ತು. ಹೀಗಿದ್ದರೂ ಆದಿತ್ಯ ವರ್ತನೆ ಬದಲಿಸಿಕೊಂಡಿರಲಿಲ್ಲ. ಹೀಗಾಗಿ ಮನನೊಂದು ಅಪ್ರಾಪ್ತೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಪ್ರಕರಣ ಸಂಬಂಧ ಆದಿತ್ಯ ವಿರುದ್ಧ ಯುವತಿ ತಂದೆ ದೂರು ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಕುಟುಂಬ ಸಮೇತ ‘ಟಾಕ್ಸಿಕ್’ ಟೀಸರ್ ನೋಡಿದ ಪ್ರೇಕ್ಷಕರು ಕಂಗಾಲು – Kannada News | Family Audience shocked after watching Yash starrer Toxic movie teaser

ನಟ ಯಶ್ (Yash) ಅವರು ಇಂದು (ಜನವರಿ 8) ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. 40ನೇ ವರ್ಷದ ಜನ್ಮದಿನದ ಪ್ರಯುಕ್ತ ಅಭಿಮಾನಿಗಳಿಗೆ ಅವರು ದೊಡ್ಡ ಗಿಫ್ಟ್ ನೀಡಿದ್ದಾರೆ. ‘ಟಾಕ್ಸಿಕ್’ (Toxic) ಸಿನಿಮಾದಿಂದ ಗಿಫ್ಟ್ ರೂಪದಲ್ಲಿ ಟೀಸರ್ ಬಿಡುಗಡೆ ಮಾಡಲಾಗಿದೆ. ಗೀತು ಮೋಹನ್​ದಾಸ್ ನಿರ್ದೇಶನ ಮಾಡುತ್ತಿರುವ ಈ ಸಿನಿಮಾ ಸಖತ್ ಅದ್ದೂರಿಯಾಗಿ ಮೂಡಿಬರುತ್ತಿದೆ. ಟೀಸರ್ ತುಂಬಾ ಬೋಲ್ಡ್ ಆಗಿದೆ. ಮೊದಲ ಬಾರಿಗೆ ಕುಟುಂಬ ಸಮೇತರಾಗಿ ‘ಟಾಕ್ಸಿಕ್’ ಟೀಸರ್ (Toxic Teaser) ನೋಡಿದ ಫ್ಯಾಮಿಲಿ ಪ್ರೇಕ್ಷಕರಿಗೆ ಶಾಕ್ ಆಗಿದೆ. ಅದರಲ್ಲಿ ಯಶ್ ಅವತಾರ ಕಂಡು ಎಲ್ಲರೂ ಕಂಗಾಲಾಗಿದ್ದಾರೆ.

ಯಶ್ ಅವರು ಫ್ಯಾಮಿಲಿ ಮ್ಯಾನ್. ಈವರೆಗೂ ಅವರು ಕುಟುಂಬ ಸಮೇತರಾಗಿ ಕುಳಿತು ನೋಡುವಂತಹ ಸಿನಿಮಾಗಳನ್ನೇ ಮಾಡಿಕೊಂಡು ಬಂದಿದ್ದಾರೆ. ಅವರಿಗೆ ಫ್ಯಾಮಿಲಿ ಆಡಿಯನ್ಸ್ ಜಾಸ್ತಿ ಇದ್ದಾರೆ. ಹುಟ್ಟುಹಬ್ಬದ ಪ್ರಯುಕ್ತ ಟೀಸರ್ ಬಿಡುಗಡೆ ಆಗುತ್ತದೆ ಎಂದಾಗ ಫ್ಯಾಮಿಲಿ ಆಡಿಯನ್ಸ್ ಕೌತುಕದಿಂದ ಕಾದಿದ್ದರು. ಆದರೆ ಟೀಸರ್ ನೋಡಿದಾಗ ಎಲ್ಲರಿಗೂ ಶಾಕ್ ಎದುರಾಯಿತು.

ಹಾಲಿವುಡ್ ನಟಿಯ ಜೊತೆ ಯಶ್ ಅವರು ತುಂಬಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಹಸಿಬಿಸಿ ದೃಶ್ಯದಲ್ಲಿ ಅವರು ನಟಿಸಿದ್ದಾರೆ. ಟೀಸರ್​ನಲ್ಲಿ ಈ ರೀತಿಯ ದೃಶ್ಯ ಇರಬಹುದು ಎಂದು ಫ್ಯಾಮಿಲಿ ಆಡಿಯನ್ಸ್ ಕಿಂಚಿತ್ತೂ ನಿರೀಕ್ಷಿಸಿರಲಿಲ್ಲ. ಮನೆಯಲ್ಲಿ ಕುಳಿತು, ಟಿವಿಯಲ್ಲಿ ಫ್ಯಾಮಿಲಿ ಸಮೇತರಾಗಿ ಟೀಸರ್ ವೀಕ್ಷಿಸಿದ ಪ್ರೇಕ್ಷಕರು ಒಮ್ಮೆಲೇ ಕಂಗಾಲಾಗಿದ್ದಾರೆ.

ಟಾಕ್ಸಿಕ್ ಸಿನಿಮಾ ಟೀಸರ್:

‘ಕನ್ನಡದ ಪ್ರೇಕ್ಷಕರು ಇದನ್ನು ಊಹಿಸಿರಲಿಲ್ಲ’ ಎಂದು ಅನೇಕರು ಕಮೆಂಟ್ ಮಾಡುತ್ತಿದ್ದಾರೆ. ‘ಕಾರ್ ದೃಶ್ಯ ನಿಜಕ್ಕೂ ಅನಿರೀಕ್ಷಿತವಾಗಿತ್ತು. ಫ್ಯಾಮಿಲಿ ಜೊತೆ ಕುಳಿತು ನೋಡಿದವರ ಪಾಡು ಏನಾಗಿರಬಹುದು ಅಂತ ಊಹಿಸಿ’ ಎಂಬಿತ್ಯಾದಿ ಕಮೆಂಟ್​ಗಳು ಕೂಡ ಬಂದಿವೆ. ಟೀಸರ್ ಈ ರೀತಿ ಇದ್ದರೆ ಒಟ್ಟಾರೆ ಸಿನಿಮಾ ಹೇಗಿರಬಹುದು ಎಂಬ ಕೌತುಕ ಮೂಡಿದೆ.

ಇದನ್ನೂ ಓದಿ: ‘ಟಾಕ್ಸಿಕ್’ ಟೀಸರ್ ನೋಡಿ ಅಚ್ಚರಿ ವ್ಯಕ್ತಪಡಿಸಿದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ

ಕನ್ನಡ ಮತ್ತು ಇಂಗ್ಲಿಷ್​​ನಲ್ಲಿ ‘ಟಾಕ್ಸಿಕ್’ ಸಿನಿಮಾ ಸಿದ್ಧವಾಗುತ್ತಿದೆ. ಇದು ಹಾಲಿವುಡ್ ರೀತಿಯ ಮೇಕಿಂಗ್ ಇರುವ ಸಿನಿಮಾ. ಸಿನಿಮಾದಲ್ಲಿನ ದೃಶ್ಯಗಳು ಕೂಡ ಹಾಗೆಯೇ ಇರಲಿವೆ ಎಂಬುದಕ್ಕೆ ಟೀಸರ್​ನಲ್ಲಿ ಸಾಕ್ಷಿ ಸಿಕ್ಕಿದೆ. ಈವರೆಗೂ ‘ಟಾಕ್ಸಿಕ್’ ಸಿನಿಮಾದ ಕಥೆ ಏನು ಎಂಬುದು ರಿವೀಲ್ ಆಗಿಲ್ಲ. ಆದರೆ ಇದು ಯಾವ ರೀತಿಯ ಸಿನಿಮಾ ಎಂಬುದರ ಝಲಕ್ ಕಾಣಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮ್ಯೂಸಿಕ್ ಮೈಲಾರಿಗೆ ಶಾಕ್: ಉತ್ತರ ಕರ್ನಾಟಕದ ಗಾಯಕನಿಗೆ ಜೈಲೇ ಗತಿ! – Kannada News | Bagalkot Court Rejects Music Mailari Bail plea In POCSO case

ಬಾಗಲಕೋಟೆ, (ಜನವರಿ 08): ‘ಬಾಗಲಕೋಟೆ ಬಸ್ ಸ್ಟ್ಯಾಂಡ್‌ನಾಗ’ ಹಾಡಿನ ಮೂಲಕ ಸೋಷಿಯಲ್ ಮೀಡಿಯಾದಲ್ಲಿ (Social Media) ಟ್ರೆಂಡಿಂಗ್ ಸ್ಟಾರ್ ಆಗಿರುವ ಜಾನಪದ ಗಾಯಕ (Folk Singer) ಮ್ಯೂಸಿಕ್ ಮೈಲಾರಿ ((Music Mailari)) ಜಾಮಿನು ಅರ್ಜಿ ತಿರಸ್ಕೃತಗೊಂಡಿದೆ. 15 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಮೈಲಾರಿಯ ಜಾಮೀನು ಅರ್ಜಿಯನ್ನು ವಜಾ ಮಾಡಿ ಬಾಗಲಕೋಟೆ (Bagalkot) ಜಿಲ್ಲಾ ನ್ಯಾಯಾಲಯ ನ್ಯಾಯಾಧೀಶೆ ಪ್ರೀತಿ ಸಗರ ಜೋಷಿ ಆದೇಶ ಹೊರಡಿಸಿದ್ದಾರೆ. ಇದರಿಂದ ಮೈಲಾರಿಗೆ ಜೈಲೇ ಗತಿಯಾಗಿದೆ.

ಆರ್ಕೆಸ್ಟ್ರಾ ಕಾರ್ಯಕ್ರಮದ ನಂತರ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಬಾಗಲಕೋಟೆ ಜಿಲ್ಲೆಯ ರಬಕವಿಬನಹಟ್ಟಿ ತಾಲೂಕಿನ ಪೋಕ್ಸೊ ಪ್ರಕರಣ ದಾಖಲಾಗಿತ್ತು. ಇದರ ಬೆನ್ನಲ್ಲೇ ತಲೆಮರಿಸಿಕೊಂಡಿದ್ದ ಮೈಲಾರಿ ಇಂದು (ಡಿಸೆಂಬರ್ 17) ಮಹಾರಾಷ್ಟ್ರಕ್ಕೆ ತೆರಳುತ್ತಿರುವಾಗ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಇದೀಗ ಜಾಮೀನು ಕೋರಿ ಮೈಲಾರಿ, ಬಾಗಲಕೋಟೆ ಜಿಲ್ಲಾ ನ್ಯಾಯಾಲಯದ ಪೋಕ್ಸೊ ಫಾಸ್ಟ್ ಟ್ರ್ಯಾಕ್ ಕೋರ್ಟ್ ಮೆಟ್ಟಿಲೇರಿದ್ದು, ಕೋರ್ಟ್​​ ಜನವರಿ 5ರಂದು ವಿಚಾರಣೆ ನಡೆಸಿ ಇಂದಿಗೆ ಆದೇಶ ಕಾಯ್ದಿರಿಸಿತ್ತು. ಇನ್ನೊಂದೆಡೆ ಜೈಲಿನಲ್ಲಿರುವ ಮೈಲಾರಿ ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದ. ಆದ್ರೆ, ಇದೀಗ ಕೋರ್ಟ್ ಜಾಮೀನು ನೀಡಲು ನಿರಾಕರಿಸಿದೆ.

ಇದನ್ನೂ ಓದಿ: ಆರ್ಕೆಸ್ಟ್ರಾದಲ್ಲಿ ಡ್ಯಾನ್ಸ್ ಮಾಡಲು ಬಂದಿದ್ದ ಬಾಲಕಿ ಮೇಲೆ ಅತ್ಯಾಚಾರ: ಸಿಂಗರ್ ಮೈಲಾರಿ ಅರೆಸ್ಟ್

ಮಹಾರಾಷ್ಟ್ರದಲ್ಲಿ ಮೈಲಾರಿ ಬಂಧನ

ಬೆಳಗಾವಿ ಜಿಲ್ಲೆಯ ಗೋಕಾಕ್ ಠಾಣೆಯಲ್ಲಿ ಮೈಲಾರಿ ಸೇರಿ 7 ಜನರ ವಿರುದ್ಧ ಪೋಕ್ಸೋ ಕೇಸ್ ಪ್ರಕರಣ ದಾಖಲಾಗಿತ್ತು. ನಂತರ ಡಿ.15ರಂದು‌ ಮಹಾಲಿಂಗಪುರ ಪೊಲೀಸ್​ ಠಾಣೆಗೆ ಕೇಸ್ ವರ್ಗಾವಣೆಯಾಗಿತ್ತು.ಬಳಿಕ ಮಹಾಲಿಂಗಪುರ ಪೊಲೀಸರು, ಮೈಲಾರಿ ಬಂಧನಕ್ಕೆ ಹುಡುಕಾಟ ನಡೆಸಿದ್ದರು. ಸುಳಿವು ಸಿಗದಿದ್ದಕ್ಕೆ ತಂಡ ರಚನೆ ಮಾಡಿ ಕಾರ್ಯಚರಣೆ ನಡೆಸಲಾಗಿತ್ತು. ಕೊನೆಗೆ ಮಹಾರಾಷ್ಟ್ರದ ಜತ್ತ ವ್ಯಾಪ್ತಿಯಲ್ಲಿ ಮೈಲಾರಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು.

ಮೈಲಾರಿ ವಿರುದ್ಧದ ಪೋಕ್ಸೋ ಪ್ರಕರಣದ ಹಿನ್ನೆಲೆ

025ರ ಅಕ್ಟೋಬರ್ 24ರಂದು ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆರೋಪಿಸಲಾಗಿದೆ. ಬೆಳಗಾವಿ ಜಿಲ್ಲೆಯ ಗ್ರಾಮವೊಂದರಲ್ಲಿ ಆರ್ಕೆಸ್ಟ್ರಾ ಕಾರ್ಯಕ್ರಮದಲ್ಲಿ ಮ್ಯೂಸಿಕ್ ಮೈಲಾರಿ ಹಾಡಲು ಆಗಮಿಸಿದ್ದರು. ಅದೇ ಕಾರ್ಯಕ್ರಮದಲ್ಲಿ ಬೆಳಗಾವಿ ಮೂಲದ ಅಪ್ರಾಪ್ತ ಬಾಲಕಿ ಡ್ಯಾನ್ಸ್ ಮಾಡಲು ಬಂದಿದ್ದಳು ಎನ್ನಲಾಗಿದೆ. ಈ ಕಾರ್ಯಕ್ರಮದ ವೇಳೆ ಮೈಲಾರಿ ಸೇರಿ ಏಳು ಜನರು ಬಾಲಕಿಯನ್ನು ಲಾಡ್ಜ್‌ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಬಾಲಕಿ ದೂರಿನಲ್ಲಿ ಆರೋಪಿಸಿದ್ದಾಳೆ. ಅಲ್ಲದೆ, ಅತ್ಯಾಚಾರ ಎಸಗಿ ವಿಡಿಯೋ ರೆಕಾರ್ಡ್ ಮಾಡಿಕೊಂಡು ಬೆದರಿಕೆ ಹಾಕಿದ್ದಾರೆ ಎಂದು ಗಂಭೀರ ಆರೋಪ ಮಾಡಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಉಗುರು ಬೆಚ್ಚಗಿನ ನೀರು ಕುಡಿಯುವ ಅಭ್ಯಾಸ ನಿಮಗಿದ್ಯಾ? ಇದರಿಂದ ದೇಹದಲ್ಲಿ ಎಷ್ಟೆಲ್ಲಾ ಬದಲಾವಣೆಗಳಾಗುತ್ತೆ ಗೊತ್ತಾ? – Kannada News | Winter Health: Why Lukewarm Water Helps

ಚಳಿಗಾಲದಲ್ಲಿ ಉಗುರು ಬೆಚ್ಚಗಿನ ನೀರು ಕುಡಿಯುವ ಅಭ್ಯಾಸದಿಂದ ಸಿಗುವ ಲಾಭಗಳು

ಚಳಿಗಾಲದಲ್ಲಿ (Winter), ದಿನೇ ದಿನೇ ಚಳಿ ಹೆಚ್ಚಾದಂತೆ, ಜನರು ತಣ್ಣಗಿನ ನೀರು ಕುಡಿಯುವ ಅಭ್ಯಾಸ ಬಿಟ್ಟು ಬಿಸಿ ನೀರನ್ನು ಅಥವಾ ಉಗುರುಬೆಚ್ಚಗಿನ ನೀರು (Lukewarm Water) ಕುಡಿಯಲು ಪ್ರಾರಂಭ ಮಾಡುತ್ತಾರೆ. ಇಂತಹ ವಾತಾವರಣದಲ್ಲಿ, ದೇಹದ ಅಗತ್ಯತೆಗಳು ವಿಭಿನ್ನವಾಗಿರುತ್ತವೆ ಮತ್ತು ಕುಡಿಯುವ ನೀರು ಕೂಡ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ತಣ್ಣೀರು ಕುಡಿಯುವುದು ಅಷ್ಟು ಸೂಕ್ತವಲ್ಲ ಎಂದು ಆರೋಗ್ಯ ತಜ್ಞರು ಕೂಡ ಹೇಳುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ, ಉಗುರು ಬೆಚ್ಚಗಿನ ನೀರು ಕುಡಿಯುವುದು ಬಹಳ ಒಳ್ಳೆಯದು. ಇನ್ನು ಬೆಚ್ಚಗಿನ ನೀರು ದೇಹವನ್ನು ಒಳಗಿನಿಂದ ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ. ಇದು ಜೀರ್ಣಕ್ರಿಯೆಯಿಂದ ಹಿಡಿದು ರೋಗನಿರೋಧಕ ಶಕ್ತಿಯವರೆಗೆ ಎಲ್ಲದಕ್ಕೂ ಒಳ್ಳೆಯದು. ಅಷ್ಟೇ ಅಲ್ಲ, ಈ ಅಭ್ಯಾಸದಿಂದ ಸಾಕಷ್ಟು ಪ್ರಯೋಜನಗಳಿವೆ. ಹಾಗಾದರೆ ಪ್ರತಿನಿತ್ಯ ಎಷ್ಟು ಲೀಟರ್ ನೀರು ಕುಡಿಯುವುದು ಸೂಕ್ತ, ಯಾರಿಗೆ ಒಳ್ಳೆಯದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಉಗುರುಬೆಚ್ಚಗಿನ ನೀರು ಕುಡಿಯುವುದರಿಂದಾಗುವ ಪ್ರಯೋಜನಗಳು:

ದೆಹಲಿ ಎಂಸಿಡಿಯ ಡಾ. ಅಜಯ್ ಕುಮಾರ್ ಹೇಳುವ ಪ್ರಕಾರ, ಉಗುರುಬೆಚ್ಚಗಿನ ನೀರು ಕುಡಿಯುವುದರಿಂದ ದೇಹದ ಆಂತರಿಕ ಉಷ್ಣತೆ ಕಡಿಮೆಯಾಗುತ್ತದೆ, ಇದು ಚಳಿಯಾಗುವುದನ್ನು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲ, ಜೀರ್ಣಾಂಗ ವ್ಯವಸ್ಥೆಯನ್ನು ಸಕ್ರಿಯವಾಗಿರಿಸುವ ಮೂಲಕ ಅನಿಲ, ಅಜೀರ್ಣ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಉಗುರುಬೆಚ್ಚಗಿನ ನೀರು ದೇಹದಿಂದ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ, ಮೂತ್ರಪಿಂಡಗಳು ಮತ್ತು ಯಕೃತ್ತು ಉತ್ತಮವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಚಳಿಗಾಲದಲ್ಲಿ, ಕೀಲುಗಳ ಬಿಗಿತ ಮತ್ತು ಸ್ನಾಯುಗಳ ಒತ್ತಡವನ್ನು ಕಡಿಮೆ ಮಾಡುತ್ತದೆ. ಹೆಚ್ಚುವರಿಯಾಗಿ, ಇದು ಗಂಟಲು ನೋವನ್ನು ಶಮನಗೊಳಿಸುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ, ಇದರಿಂದಾಗಿ ಕಾಲೋಚಿತ ಕಾಯಿಲೆಗಳು ಬರುವ ಅಪಾಯ ಕಡಿಮೆಯಾಗುತ್ತದೆ.

ಇದನ್ನೂ ಓದಿ: ಊಟ ಮಾಡಿದ ತಕ್ಷಣ ನೀರು ಕುಡಿಯುವ ಅಭ್ಯಾಸ ಎಷ್ಟು ಡೇಂಜರ್‌ ನೋಡಿ

ದಿನಕ್ಕೆ ಎಷ್ಟು ಲೀಟರ್ ನೀರು ಕುಡಿಯಬೇಕು?

ಚಳಿಗಾಲದಲ್ಲಿ ಬಾಯಾರಿಕೆ ಕಡಿಮೆಯಾದರೂ, ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ನೀರು ಬೇಕಾಗುತ್ತದೆ. ಸಾಮಾನ್ಯವಾಗಿ, ಆರೋಗ್ಯವಂತ ವ್ಯಕ್ತಿಯು ದಿನಕ್ಕೆ ಸುಮಾರು 2 ರಿಂದ 3 ಲೀಟರ್ ನೀರು ಕುಡಿಯಬೇಕು. ಇದು ವಯಸ್ಸು, ತೂಕ ಮತ್ತು ದೈನಂದಿನ ಚಟುವಟಿಕೆಯನ್ನು ಅವಲಂಬಿಸಿರುತ್ತದೆ. ಒಂದೇ ಬಾರಿಗೆ ನೀರು ಕುಡಿಯುವ ಬದಲು ದಿನವಿಡೀ ಸಣ್ಣ ಸ್ವಲ್ಪ ಸ್ವಲ್ಪ ನೀರು ಕುಡಿಯುವುದು ಉತ್ತಮ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಅಥವಾ ಎರಡು ಗ್ಲಾಸ್ ಉಗುರು ಬೆಚ್ಚಗಿನ ನೀರನ್ನು ಕುಡಿಯುವುದು ಬಹಳ ಪ್ರಯೋಜನಕಾರಿಯಾಗಿದೆ. ಇದರ ಜೊತೆಗೆ ಅತಿಯಾಗಿ ಚಹಾ ಮತ್ತು ಕಾಫಿ ಕುಡಿಯುವುದನ್ನು ತಪ್ಪಿಸಿ. ಪ್ರತಿನಿತ್ಯ ಲಘು ವ್ಯಾಯಾಮ ಮತ್ತು ಸಾಕಷ್ಟು ಪ್ರಮಾಣದಲ್ಲಿ ನಿದ್ರೆ ಮಾಡುವುದನ್ನು ಮರೆಯಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇವರ ಹಣ ಸ್ಥಗಿತ: ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ – Kannada News | Gruhalakshami Money Stop If BPL Rastion Card canceled Says Minister Lakshmi Hebbalkar

ಬೆಂಗಳೂರು, (ಜನವರಿ 08): ರಾಜ್ಯದಲ್ಲಿ ಬಿಪಿಎಲ್ ಕಾರ್ಡುಗಳನ್ನು ಪರಿಶೀಲನೆಗೆ ಒಳಪಡಿಸಿ ಅಕ್ರಮ ಪಡಿತರ ಕಾರ್ಡುಗಳನ್ನು ರದ್ದುಗೊಳಿಸಲಾಗುತ್ತಿದೆ. ಇದರಿಂದ ಅಕ್ರಮ ಪಡಿತರ ಕಾರ್ಡುಗಳನ್ನು ಕೊಟ್ಟು ಗೃಹಲಕ್ಷ್ಮೀ  (Gruhalakshami) ಹಣ ಪಡೆಯುತ್ತಿದ್ದವರಿಗೆ ಹಣವನ್ನು ಕೂಡ ಸ್ಥಗಿತಗೊಳಿಸಲಾಗುತ್ತದೆ. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್​​ ಸ್ಪಷ್ಟಪಡಿಸಿದ್ದಾರೆ.

ಮಾಧ್ಯಮಗಳ ಜತೆ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್, ಬಿಪಿಎಲ್, ಎಪಿಎಲ್ ಹಾಗೂ ಅಂತ್ಯೋದಯ ಕಾರ್ಡುದಾರರಿಗೆ ಈ ಹಿಂದೆ ಗೃಹಲಕ್ಷ್ಮೀ ಹಣ ನೀಡಲಾಗುತ್ತಿತ್ತು. ಆದ್ರೆ, ಇದೀಗ ತೆರಿಗೆ ಕಟ್ಟುವವರ ಬಿಪಿಎಲ್ ಕಾರ್ಡ್​ ರದ್ದುಗೊಳಿಸಲಾಗಿದ್ದು, ಇದೀಗ ಅಂತವರ ಗೃಹಲಕ್ಷ್ಮೀ ಹಣ ಸಹ ಸ್ಥಗಿತಗೊಳಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು? – Kannada News | Bigg Boss Kannada 12 Tasks becoming very tough day by day

ಬಿಗ್​​ಬಾಸ್​​ ಕನ್ನಡ 12ರ (Bigg Boss Kannada) ಫಿನಾಲೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಮನೆಯಲ್ಲಿ ಎಂಟು ಮಂದಿ ಇದ್ದಾರೆ. ಫಿನಾಲೆ ವಾರ ಹತ್ತಿರವಾಗುತ್ತಿದ್ದಂತೆ ಟಾಸ್ಕ್​​ಗಳು ಸಹ ಕಠಿಣವಾಗುತ್ತಿವೆ. ಇದೀಗ ಬಹಳ ಕಷ್ಟವಾದ ಟಾಸ್ಕ್ ಒಂದನ್ನು ಬಿಗ್​​ಬಾಸ್, ಸ್ಪರ್ಧಿಗಳಿಗೆ ನೀಡಿದ್ದಾರೆ. ದೊಡ್ಡ ಪೋಲ್ ನೀಡಿ, ಅದನ್ನು ಕಡ್ಡಿಗಳ ಸಹಾಯದಿಂದ ಮೇಲಿನ ವರೆಗೆ ಹತ್ತುವಂತೆ ಸೂಚಿಸಿದ್ದಾರೆ. ರಘು, ಅಶ್ವಿನಿ, ಕಾವ್ಯಾ, ಧನುಶ್ ಅವರುಗಳು ಆಟವಾಡಲು ಮುಂದಾಗಿದ್ದು, ಬಹಳ ಕಠಿಣವಾದ ಈ ಟಾಸ್ಕ್​​ನಲ್ಲಿ ಗೆದ್ದವರು ಯಾರು? ಬಿದ್ದವರು ಯಾರು? ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಕರ್ನಾಟಕಕ್ಕೆ ಮುಳುವಾದ ಆರ್​ಸಿಬಿ ಬಾಯ್ಸ್; ಟೂರ್ನಿಯಲ್ಲಿ ಮೊದಲ ಸೋಲು – Kannada News | Karnataka Suffers First Loss in Vijay Hazare Trophy to Madhya Pradesh

ವಿಜಯ್ ಹಜಾರೆ ಟ್ರೋಫಿಯಲ್ಲಿ (Vijay Hazare Trophy) ಸತತ 6 ಪಂದ್ಯಗಳನ್ನು ಗೆದ್ದು ಎಲೈಟ್ ಎ ಗುಂಪಿನಲ್ಲಿ ಅಜೇಯ ತಂಡ ಎನಿಸಿಕೊಂಡಿದ್ದ ಕರ್ನಾಟಕ ಟೂರ್ನಿಯಲ್ಲಿ ಮೊದಲ ಸೋಲು ಅನುಭವಿಸಿದೆ. ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಟೂರ್ನಿಯ ಎಲೈಟ್ ಎ ಗುಂಪಿನ ಕೊನೆಯ ಪಂದ್ಯದಲ್ಲಿ ಮಧ್ಯಪ್ರದೇಶ ತಂಡವನ್ನು ಎದುರಿಸಿದ್ದ ಕರ್ನಾಟಕ (Karnataka vs Madhya Pradesh) ತಂಡ 7 ವಿಕೆಟ್​ಗಳ ಹೀನಾಯ ಸೋಲು ಅನುಭವಿಸಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಕರ್ನಾಟಕ ಮಧ್ಯಪ್ರದೇಶದ ಬೌಲಿಂಗ್ ಎದುರು ತತ್ತರಿಸಿತು. ಹೀಗಾಗಿ ತಂಡ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಅತಿ ಕಡಿಮೆ ಮೊತ್ತ 207 ರನ್​ಗಳಿಗೆ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ಮಧ್ಯಪ್ರದೇಶ ಕೇವಲ 3 ವಿಕೆಟ್ ಕಳೆದುಕೊಂಡು 24ನೇ ಓವರ್​ನಲ್ಲಿಯೇ ಗೆಲುವಿನ ದಡ ಮುಟ್ಟಿತು. ಕರ್ನಾಟಕದ ಈ ಸೋಲಿನಲ್ಲಿ ಆರ್​ಸಿಬಿ (RCB) ತಂಡದಲ್ಲಿ ಆಡುವ ಆಟಗಾರರು ಪ್ರಮುಖ ಪಾತ್ರವಹಿಸಿದರು.

ಕರ್ನಾಟಕ ತಂಡಕ್ಕೆ ಮೊದಲ ಸೋಲು

ಮೋದಿ ಮೈದಾನದಲ್ಲಿ ಈ ಹಿಂದೆ ಆಡಿದ್ದ ಎಲ್ಲಾ ಪಂದ್ಯಗಳನ್ನು ಗೆದ್ದುಕೊಂಡಿದ್ದ ಕರ್ನಾಟಕಕ್ಕೆ, ಈ ಪಂದ್ಯದಲ್ಲೂ ಸುಲಭ ಜಯ ಧಕ್ಕಲಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಮಧ್ಯಪ್ರದೇಶದ ಬೌಲರ್​ಗಳು ಇದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಎಂದಿನಂತೆ ಕರ್ನಾಟಕ ತಂಡಕ್ಕೆ ಆರಂಭಿಕರಿಬ್ಬರು ಮೊದಲ ವಿಕೆಟ್​ಗೆ 77 ರನ್​ಗಳ ಜೊತೆಯಾಟವನ್ನು ಒದಗಿಸಿಕೊಟ್ಟರು. ಆದರೆ ಈ ಜೋಡಿ ಬೇರ್ಪಟ್ಟ ಬಳಿಕ ತಂಡದ ಇನ್ನಿಂಗ್ಸ್ ಕುಸಿಯಿತು. ಈ ಟೂರ್ನಿಯಲ್ಲಿ ಅತ್ಯದ್ಭುತ ಫಾರ್ಮ್​ನಲ್ಲಿರುವ ದೇವದತ್ ಪಡಿಕ್ಕಲ್ ಈ ಪಂದ್ಯದಲ್ಲೂ ಉತ್ತಮ ಆರಂಭ ಪಡೆದುಕೊಂಡರು. ಆದರೆ ಅದನ್ನು ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸುವಲ್ಲಿ ಎಡವಿದರು.

5 ವಿಕೆಟ್ ಪಡೆದ ಶಿವಾಂಗ್

ಪಡಿಕ್ಕಲ್ 35 ರನ್ ಬಾರಿಸಿ ಔಟಾದ ಬಳಿಕ ತಂಡದ ಇತರೆ ಬ್ಯಾಟ್ಸ್‌ಮನ್​ಗಳು ಬಂದಷ್ಟೇ ವೇಗವಾಗಿ ಪೆವಿಲಿಯನ್‌ ಸೇರಿಕೊಂಡರು. ಅನುಭವಿ ಕರುಣ್ ನಾಯರ್ ಕಳಪೆ ಪ್ರದರ್ಶನ ಈ ಪಂದ್ಯದಲ್ಲೂ ಮುಂದುವರೆಯಿತು. ಅವರು ಕೇವಲ 10 ರನ್​ಗಳಿಗೆ ಇನ್ನಿಂಗ್ಸ್ ಮುಗಿಸಿದರು. ಶ್ರೀಜಿತ್, ಸ್ಮರಣ್ ಹಾಗೂ ಅಭಿನವ್ ಕೂಡ ಬೇಗನೆ ವಿಕೆಟ್ ಒಪ್ಪಿಸಿದರು. ಹೀಗಾಗಿ ತಂಡ ಒತ್ತಡಕ್ಕೊಳಗಾಗಿತು. ತಂಡದ ಪರ ನಾಯಕ ಮಯಾಂಕ್ ಅತ್ಯಧಿಕ 49 ರನ್​ಗಳ ಇನ್ನಿಂಗ್ಸ್ ಆಡಿದರೆ, ವಿದ್ಯಾದರ್ ಪಾಟೀಲ್ 34 ರನ್​ಗಳ ಕಾಣಿಕೆ ನೀಡಿದರು. ಅಂತಿಮವಾಗಿ ತಂಡ 48 ನೇ ಓವರ್​ನಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 207 ರನ್​ಗಳಿಗೆ ತನ್ನ ಇನ್ನಿಂಗ್ಸ್ ಮುಗಿಸಿತು. ಮಧ್ಯಪ್ರದೇಶ ಪರ ಬೌಲಿಂಗ್‌ನಲ್ಲಿ ಮಿಂಚಿದ ಶಿವಾಂಗ್ ಕುಮಾರ್ 5 ವಿಕೆಟ್​ಗಳ ಗೊಂಚಲು ಪಡೆದರು.

VHT 2025-26: ಮಿಂಚಿದ ಮಯಾಂಕ್, ಪಡಿಕ್ಕಲ್, ಪ್ರಸಿದ್ಧ್; ಕರ್ನಾಟಕಕ್ಕೆ ಸತತ 6ನೇ ಜಯ

ವೆಂಕಟೇಶ್ ಅಯ್ಯರ್​ ಅಜೇಯ ಅರ್ಧಶತಕ

ಈ ಗುರಿ ಬೆನ್ನಟ್ಟಿದ ಮಧ್ಯಪ್ರದೇಶಕ್ಕೆ ಉತ್ತಮ ಆರಂಭ ಸಿಕ್ಕಿತು. ಮೊದಲ ವಿಕೆಟ್​ಗೆ 78 ರನ್​ಗಳ ಜೊತೆಯಾಟ ನಡೆಯಿತು. ಆರಂಭಿಕರಾದ ಯಶ್ ದುಬೆ 48 ರನ್ ಬಾರಿಸಿದರೆ, ಹಿಮಾಂಶು ಮಂತ್ರಿ 34 ರನ್​​ ಕಲೆಹಾಕಿದರು. ಆ ಬಳಿಕ ಬಂದ ವೆಂಕಟೇಶ್ ಅಯ್ಯರ್ ಅಜೇಯ 65 ರನ್ ಬಾರಿಸಿ ತಂಡದ ಗೆಲುವು ಖಚಿತಪಡಿಸಿದರು. ವೆಂಕಟೇಶ್ ಅಯ್ಯರ್ ಈ ಆವೃತ್ತಿಯ ಐಪಿಎಲ್‌ನಲ್ಲಿ ಆರ್​ಸಿಬಿ ಪರ ಕಣಕ್ಕಿಳಿಯುತ್ತಿದ್ದು, ಅವರು ಫಾರ್ಮ್​ ಕಂಡುಕೊಂಡಿರುವುದು ತಂಡಕ್ಕೆ ಶುಭ ಸೂಚಕವಾಗಿದೆ. ವೆಂಕಟೇಶ್ ಜೊತೆಗೆ ಆರ್​ಸಿಬಿ ನಾಯಕ ರಜತ್ ಪಾಟಿದರ್ ಕೂಡ ಮಧ್ಯಪ್ರದೇಶ ತಂಡದಲ್ಲಿದ್ದರು. ಆದರೆ ಅವರಿಗೆ ಈ ಪಂದ್ಯದಲ್ಲಿ ಬ್ಯಾಟಿಂಗ್‌ ಮಾಡುವ ಅವಕಾಶ ಸಿಗಲಿಲ್ಲ. ಇನ್ನು ಈ ಪಂದ್ಯದಲ್ಲಿ ಸೋಲಿನ ಹೊರತಾಗಿಯೂ ಕರ್ನಾಟಕ ತಂಡ ಈ ಗುಂಪಿನಲ್ಲಿ ಅಗ್ರಸ್ಥಾನದಲ್ಲೇ ಮುಂದುವರೆದಿದ್ದು, ಕರ್ನಾಟಕವನ್ನು ಸೋಲಿಸಿದ ಮಧ್ಯಪ್ರದೇಶ 2ನೇ ಸ್ಥಾನವನ್ನು ಪಡೆದುಕೊಂಡಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:03 pm, Thu, 8 January 26

Source link

ಕೊಲ್ಕತ್ತಾದಲ್ಲಿ ಇಡಿ ದಾಳಿ ವೇಳೆ ಹೈಡ್ರಾಮಾ; I-PAC ಕಚೇರಿಗೆ ನುಗ್ಗಿ ಹಸಿರು ಫೈಲ್‌ ಹೊತ್ತೊಯ್ದ ಮಮತಾ ಬ್ಯಾನರ್ಜಿ – Kannada News | ED raids I PAC chief house in Kolkata CM Mamata Banerjee takes green file

ಕೊಲ್ಕತ್ತಾ, ಜನವರಿ 8: ಪಶ್ಚಿಮ ಬಂಗಾಳದ 5 ಕಡೆಗಳಲ್ಲಿ ಇಂದು ಇಡಿ ದಾಳಿ ನಡೆದಿದೆ. ಅದರಲ್ಲೂ ಮುಖ್ಯವಾಗಿ ಜಾರಿ ನಿರ್ದೇಶನಾಲಯ (ED) I-PAC ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ದಾಳಿ ಮಾಡಿದೆ. ಈ ವರ್ಷದ ವಿಧಾನಸಭಾ ಚುನಾವಣೆ ನಡೆಯಲಿರುವ ಬಂಗಾಳದಲ್ಲಿ ನಡೆದ ಈ ದಾಳಿ ಬಹಳ ಮಹತ್ವ ಪಡೆದಿದೆ. ಪಶ್ಚಿಮ ಬಂಗಾಳದಲ್ಲಿ ಜಾರಿ ನಿರ್ದೇಶನಾಲಯದ (ಇಡಿ) ದಾಳಿ ನಡೆಸಿದ ವೇಳೆ ಹೈಡ್ರಾಮಾ ನಡೆದಿದೆ. ಈ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ತಮ್ಮ ಚುನಾವಣಾ ಸಲಹೆಗಾರ ಐಪ್ಯಾಕ್ (I-PAC) ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆಯಿಂದ ಲ್ಯಾಪ್‌ಟಾಪ್, ಫೋನ್ ಮತ್ತು ಬಹು ದಾಖಲೆಗಳನ್ನು ಹೊತ್ತೊಯ್ದಿದ್ದಾರೆ ಎಂದು ಇಡಿ ಆರೋಪಿಸಿದೆ.

ಈ ದಾಳಿಯನ್ನು ಬಿಜೆಪಿಯ ರಾಜಕೀಯ ಪ್ರೇರಿತ ಎಂದು ಸಿಎಂ ಮಮತಾ ಬ್ಯಾನರ್ಜಿ ಆರೋಪಿಸಿದ್ದರೂ ಇಡಿ ಈ ಆರೋಪಗಳನ್ನು ನಿರಾಕರಿಸಿದೆ. ಇದು ಯಾವುದೇ ರಾಜಕೀಯ ಪಕ್ಷಗಳನ್ನು ಗುರಿಯಾಗಿಸಿಕೊಂಡು ನಡೆದ ದಾರಿಯಲ್ಲ ಎಂದು ಹೇಳಿದೆ. ನಾವು ಯಾವುದೇ ಪಕ್ಷದ ಕಚೇರಿಯನ್ನು ಶೋಧಿಸಿಲ್ಲ. ಈ ಶೋಧನೆಯು ಯಾವುದೇ ಚುನಾವಣೆಗಳಿಗೆ ಸಂಬಂಧಿಸಿಲ್ಲ ಮತ್ತು ಹಣ ವರ್ಗಾವಣೆಯ ವಿರುದ್ಧ ನಿಯಮಿತ ಕ್ರಮದ ಭಾಗವಾಗಿದೆ ಎಂದು ED ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದ ಎಸ್​ಐಆರ್​ ಕರಡಿನಲ್ಲಿ 58 ಲಕ್ಷ ಹೆಸರುಗಳು ಡಿಲೀಟ್

ಇಂದು ಬೆಳಿಗ್ಗೆ ಇಡಿ ಟಿಎಂಸಿಯ ರಾಜಕೀಯ ಸಲಹಾ ಸಂಸ್ಥೆಯಾದ I-PACನ ಕಚೇರಿಯ ಮೇಲೆ ದಾಳಿ ನಡೆಸಿದೆ. ತನಿಖಾ ಸಂಸ್ಥೆಯೊಳಗಿನ ಮೂಲಗಳ ಪ್ರಕಾರ, ಈ ದಾಳಿಗಾಗಿ ದೆಹಲಿಯಿಂದ ವಿಶೇಷ ತಂಡ ಆಗಮಿಸಿತ್ತು. ED ಮೂಲಗಳ ಪ್ರಕಾರ, ಈ ದಾಳಿಯು ದೆಹಲಿಯಲ್ಲಿ ದಾಖಲಾಗಿರುವ ಹಳೆಯ ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದ್ದಾಗಿದೆ. ಆ ಪ್ರಕರಣದಲ್ಲಿ ಹಲವಾರು ವಹಿವಾಟುಗಳಲ್ಲಿ I-PAC ಹೆಸರು ಹೊರಬಿದ್ದಿದೆ ಎನ್ನಲಾಗಿದೆ.

ಆದರೆ, ಇಡಿ ದಾಳಿಯ ಸಮಯದಲ್ಲಿ ಪ್ರತೀಕ್ ಜೈನ್ ಅವರ ಮನೆಗೆ ಸಿಎಂ ಮಮತಾ ಬ್ಯಾನರ್ಜಿ ಭೇಟಿ ನೀಡಿದ್ದಾರೆ. ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, “ನನ್ನ ಐಟಿ ಕಚೇರಿಯ ಮೇಲೆ ದಾಳಿ ಮಾಡಲಾಗಿದೆ. ಅವರು ನಮ್ಮ ಪಕ್ಷದ ಹಾರ್ಡ್ ಡಿಸ್ಕ್, ಅಭ್ಯರ್ಥಿಗಳ ಪಟ್ಟಿ ಸೇರಿದಂತೆ ಎಲ್ಲಾ ಮಾಹಿತಿಯನ್ನು ದೋಚಲು ಪ್ರಯತ್ನಿಸುತ್ತಿದ್ದಾರೆ. ಚುನಾವಣೆಗಳು ಸಮೀಪದಲ್ಲಿರುವುದರಿಂದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅವರು ನಮ್ಮ ಪಕ್ಷದ ಎಲ್ಲಾ ಮಾಹಿತಿಯನ್ನು ದೋಚಲು ಪ್ರಯತ್ನಿಸುತ್ತಿದೆ” ಎಂದು ಆರೋಪಿಸಿದ್ದಾರೆ. ಹಾಗೇ, ಪ್ರತೀಕ್ ಜೈನ್ ಅವರ ಮನೆಯಿಂದ ಹಸಿರು ಫೈಲ್ ಅನ್ನು ತೆಗೆದುಕೊಂಡು ಮಮತಾ ಬ್ಯಾನರ್ಜಿ ಅಲ್ಲಿಂದ ಹೊರಟಿದ್ದಾರೆ. ಆ ಫೈಲ್​ನಲ್ಲಿ ಏನಿದೆ ಎಂಬುದು ಸದ್ಯದ ಕುತೂಹಲವಾಗಿದೆ.

ಇದನ್ನೂ ಓದಿ: ಬಂಗಾಳದಲ್ಲಿ ಬಾಬರಿ ಮಸೀದಿ ವಿವಾದದ ಬೆನ್ನಲ್ಲೇ ಅಯೋಧ್ಯೆ ಶೈಲಿಯ ರಾಮ ಮಂದಿರ ನಿರ್ಮಾಣಕ್ಕೆ ಸಿದ್ಧತೆ

ಪ್ರತೀಕ್ ಜೈನ್ ಅವರ ನಿವಾಸದಿಂದ ಹೊರಬಂದ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ. “ಒಂದು ಪಕ್ಷದ ಹಾರ್ಡ್ ಡಿಸ್ಕ್‌ಗಳು ಮತ್ತು ಅಭ್ಯರ್ಥಿಗಳ ಪಟ್ಟಿಗಳನ್ನು ವಶಪಡಿಸಿಕೊಳ್ಳುವುದು ಇಡಿ ಅಥವಾ ಅಮಿತ್ ಶಾ ಅವರ ಕೆಲಸವೇ? ಇದು ದ್ವೇಷದ ರಾಜಕಾರಣ. ಇದಕ್ಕೆ ನಾವು ತಕ್ಕ ಉತ್ತರ ನೀಡುತ್ತೇವೆ” ಎಂದು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:49 pm, Thu, 8 January 26

Source link

ಮನೆಯಲ್ಲಿ ಲಭ್ಯವಿರುವ ಈ ವಸ್ತುಗಳನ್ನು ಬಳಸಿ ನಿಮಿಷಗಳಲ್ಲಿ ಗ್ಯಾಸ್‌ ಸ್ಟವ್‌ ಕ್ಲೀನ್‌ ಮಾಡಬಹುದು – Kannada News | Clean dirty gas stove easily using these tips

ಅಡುಗೆಮನೆಯಲ್ಲಿ ಹೆಚ್ಚು ಬಳಸಲ್ಪಡುವ ವಸ್ತು ಎಂದ್ರೆ ಅದು ಗ್ಯಾಸ್‌ ಸ್ಟೌವ್ (gas stove).‌ ಪ್ರತಿನಿತ್ಯ ಅಡುಗೆ ಮಾಡುವ ಕಾರಣ ಇದನ್ನು ಎಷ್ಟೇ ಸ್ವಚ್ಛಗೊಳಿಸಿದರೂ ಸಹ ಗಲೀಜು ಆಗುತ್ತಿರುತ್ತೆ. ಹಾಲು ಉಕ್ಕಿ, ಕುಕ್ಕರ್‌ನಿಂದ ಬರುವ ನೀರು, ಎಣ್ಣೆ ಅಂಶ ಇವೆಲ್ಲವೂ ಬಿದ್ದು ಗ್ಯಾಸ್‌ ಸ್ಟವ್‌ ಮತ್ತು ಗ್ಯಾಸ್‌ ಬರ್ನಲ್‌ ಕೊಳೆಯಾಗುತ್ತವೆ. ಹೆಚ್ಚಿನವರು ಈ ಹಠಮಾರಿ ಕಲೆಗಳನ್ನು ತೊಡೆದುಹಾಕಲು ದುಬಾರಿ ರಾಸಾಯನಿಕಯುಕ್ತ ಕ್ಲೀನರ್‌ಗಳನ್ನು ಬಳಕೆ ಮಾಡುತ್ತಾರೆ. ಇದರ ಬದಲು ಯಾವುದೇ ಖರ್ಚಿಲ್ಲದೆ ಮನೆಯಲ್ಲಿ ಲಭ್ಯವಿರುವ ಈ ಕೆಲವೊಂದು ವಸ್ತುಗಳ ಸಹಾಯದಿಂದ ಬಲು ಸುಲಭವಾಗಿ ಗ್ಯಾಸ್‌ ಸ್ಟೌವ್ ಮೇಲೆ ಅಂಟಿರುವ ಕಲೆಗಳನ್ನು ಹೋಗಲಾಡಿಸಬಹುದು. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಗ್ಯಾಸ್‌ ಸ್ಟೌವ್ ಸ್ವಚ್ಛಗೊಳಿಸಲು ಈ ಸಲಹೆ ಪಾಲಿಸಿ:

ಬೇಕಿಂಗ್ ಸೋಡಾ ಮತ್ತು ವಿನೆಗರ್: ಗ್ಯಾಸ್ ಸ್ಟೌವ್ ಸ್ವಚ್ಛಗೊಳಿಸಲು ಸುಲಭವಾದ ಮಾರ್ಗವೆಂದರೆ ಬೇಕಿಂಗ್ ಸೋಡಾ ಮತ್ತು ಬಿಳಿ ವಿನೆಗರ್ ಬಳಸುವುದು. ಇದಕ್ಕಾಗಿ ಮೊದಲು, ಗ್ಯಾಸ್ ರೆಗ್ಯುಲೇಟರ್ ಆಫ್ ಮಾಡಿ ಮತ್ತು ಬರ್ನರ್ಗಳನ್ನು ತೆಗೆದುಹಾಕಿ. ಸ್ಟೌವ್ ಮೇಲೆ ಅಡಿಗೆ ಸೋಡಾವನ್ನು ಸಿಂಪಡಿಸಿ. ಅದಕ್ಕೆ ಸ್ವಲ್ಪ ಬಿಳಿ ವಿನೆಗರ್ ಸೇರಿಸಿ. ಈ ಮಿಶ್ರಣವು ತಕ್ಷಣವೇ ಗುಳ್ಳೆಗಳಾಗಿ ಬದಲಾಗುತ್ತದೆ ಮತ್ತು ಫೋಮ್ ಸೃಷ್ಟಿಯಾಗುತ್ತದೆ. ಈ ಫೋಮ್ ಸ್ಟೌವ್ ಮೇಲೆ ಸಂಗ್ರಹವಾಗಿರುವ ಗ್ರೀಸ್ ಮತ್ತು ಎಣ್ಣೆಯ ಕಠಿಣ ಕಲೆಗಳನ್ನು ಮೃದುಗೊಳಿಸುತ್ತದೆ. 10 ನಿಮಿಷಗಳ ನಂತರ, ಹಳೆಯ ಟೂತ್ ಬ್ರಷ್ ಅಥವಾ ಸ್ಪಾಂಜ್‌ನಿಂದ ನಿಧಾನವಾಗಿ ಉಜ್ಜಿ ಮತ್ತು ಒದ್ದೆಯಾದ ಬಟ್ಟೆಯಿಂದ ಒರೆಸಿದರೆ ಗ್ಯಾಸ್‌ ಸ್ಟೌವ್ ಕ್ಲೀನ್‌ ಆಗುತ್ತದೆ.

ನಿಂಬೆ ಮತ್ತು ಉಪ್ಪು: ಗ್ಯಾಸ್‌ ಸ್ಟೌವ್‌ ಸ್ವಚ್ಛಗೊಳಿಸಲು ಇದು ಅದ್ಭುತವಾಗಿ ಕೆಲಸ ಮಾಡುತ್ತದೆ. ನಿಂಬೆಹಣ್ಣನ್ನು ಅರ್ಧದಷ್ಟು ಕತ್ತರಿಸಿ ಆ ಹೋಳುಗಳ ಮೇಲೆ ಉಪ್ಪು ಸೇರಿಸಿ ಸ್ಟೌವ್‌ ಮೇಲೆ ನಿಧಾನವಾಗಿ ಉಜ್ಜಿ.  ನಿಂಬೆಯಲ್ಲಿರುವ ಆಮ್ಲ ಮತ್ತು ಉಪ್ಪಿನ ಅಪಘರ್ಷಕ ಶಕ್ತಿಯು ಗಟ್ಟಿಯಾಗಿ ಅಂಟಿರುವ ಕಲೆಗಳನ್ನು ಸಡಿಲಗೊಳಿಸುತ್ತದೆ. ನಂತರ ಅದನ್ನು ಒಣ ಬಟ್ಟೆಯಿಂದ ಒರೆಸಿ ಕಲೆಗಳು ಸಂಪೂರ್ಣವಾಗಿ ಹೋಗುತ್ತದೆ.

ಇದನ್ನೂ ಓದಿ: ಎಲೆಕೋಸನ್ನು ಕ್ಲೀನ್‌ ಮಾಡುವ ಸರಿಯಾದ ವಿಧಾನ ಯಾವುದು? ನೀವು ತಿಳಿಯಲೇಬೇಕಾದ ಮಾಹಿತಿಯಿದು

ಬಿಸಿನೀರು ಮತ್ತು ಪಾತ್ರೆ ತೊಳೆಯುವ ದ್ರವ: ಸ್ಟೋವ್‌ನ ಸಣ್ಣ ಭಾಗಗಳಾದ ಗ್ರೇಟ್‌ಗಳು ಮತ್ತು ಬರ್ನರ್ ರಿಂಗ್‌ಗಳನ್ನು ಸ್ವಚ್ಛಗೊಳಿಸಲು ಬಿಸಿನೀರು ತುಂಬಾ ಪರಿಣಾಮಕಾರಿಯಾಗಿದೆ. ಒಂದು ಬಕೆಟ್ ಬಿಸಿ ನೀರಿನಲ್ಲಿ ಕೆಲವು ಹನಿ ಪಾತ್ರೆ ತೊಳೆಯುವ ದ್ರವವನ್ನು ಮಿಶ್ರಣ ಮಾಡಿ. ಬರ್ನರ್ ರಿಂಗ್‌ಗಳು ಮತ್ತು ಗ್ರೇಟ್‌ಗಳಂತಹ ಸಣ್ಣ ಭಾಗಗಳನ್ನು 15 ನಿಮಿಷಗಳ ಕಾಲ ಆ ನೀರಿನಲ್ಲಿ ನೆನೆಸಿ. ನೆನೆಸಿದ ನಂತರ, ಬ್ರಷ್ ಬಳಸಿ ಸ್ಕ್ರಬ್ ಮಾಡಿ ಮತ್ತು ತೊಳೆಯಿರಿ. ಈ ವಿಧಾನವು ಗ್ರೀಸ್ ಕಲೆಗಳು

ಒಲೆಯನ್ನು ಚೆನ್ನಾಗಿ ಸ್ವಚ್ಛಗೊಳಿಸಿದ ನಂತರ, ಒಲೆಯ ಮೇಲೆ ಕೆಲವು ಹನಿ ತೆಂಗಿನ ಎಣ್ಣೆ ಅಥವಾ ಸಾಸಿವೆ ಎಣ್ಣೆಯನ್ನು ಹಚ್ಚಿ ಒಣ ಬಟ್ಟೆಯಿಂದ ನಿಧಾನವಾಗಿ ಒರೆಸಿ. ಈ ಸುಲಭವಾದ ಸಲಹೆಯು ಗ್ಯಾಸ್‌ ಸ್ಟೌವ್‌ಗೆ  ಹೊಸ ಹೊಳಪನ್ನು ನೀಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link