ವರದಕ್ಷಿಣೆಗಾಗಿ ಗರ್ಭಿಣಿಯನ್ನು ಕೊಂದು ರಹಸ್ಯವಾಗಿ ಅತ್ತೆ-ಮಾವನಿಂದ ಅಂತ್ಯ ಸಂಸ್ಕಾರ – Kannada News | Rajasthan: Pregnant Woman Killed for Dowry, In laws Attempt Secret Cremation
ಜೈಪುರ, ಜನವರಿ 05: ದೇಶ ಎಷ್ಟೇ ಮುಂದುವರೆದಿದ್ದರೂ, ಜನರು ಎಷ್ಟೇ ಶಿಕ್ಷಣ ಪಡೆದಿದ್ದರೂ ಸಮಾಜದಲ್ಲಿ ವರದಕ್ಷಿಣೆ(Dowry) ಎಂಬುದು ಪಿಡುಗಾಗಿಯೇ ಉಳಿದಿದೆ. ಇನ್ನೂ ಕೂಡ ವರದಕ್ಷಿಣೆಗಾಗಿ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಂತಿಲ್ಲ. ರಾಜಸ್ಥಾನದ ಧೋಲ್ಪುರದಲ್ಲಿ ವರದಕ್ಷಿಣೆ ತಂದಿಲ್ಲವೆಂದು ನಾಲ್ಕು ತಿಂಗಳ ಗರ್ಭಿಣಿಯನ್ನೇ ಅತೆತ-ಮಾವ ಕೊಲೆ ಮಾಡಿ ರಹಸ್ಯವಾಗಿ ಅಂತ್ಯ ಸಂಸ್ಕಾರ ನಡೆಸಿರುವ ಘಟನೆ ವರದಿಯಾಗಿದೆ. ಆರೋಪಿ ಕುಟುಂಬ ಸದಸ್ಯರು ಆಕೆಯ ಪೋಷಕರಿಗೆ ತಿಳಿಸದೆ ಆಕೆಯ ಶವವನ್ನು ಅಂತ್ಯಸಂಸ್ಕಾರ ಮಾಡಿ ಗ್ರಾಮದಿಂದ ಪರಾರಿಯಾಗಿದ್ದಾರೆ. 24 ವರ್ಷದ ಗುಡಿಯಾ ಎಂಬ…