All posts by nagaraj11081993

Video: ಕೇರಳದ ರೈಲ್ವೆ ನಿಲ್ದಾಣದ ಪಾರ್ಕಿಂಗ್​ನಲ್ಲಿ ಅಗ್ನಿ ಅವಘಡ, 200ಕ್ಕೂ ಅಧಿಕ ವಾಹನಗಳು ಭಸ್ಮ – Kannada News | Large Blaze at Kerala Railway Station Leaves Hundreds of Vehicles Damaged

ತ್ರಿಶೂರ್, ಜನವರಿ 05: ತ್ರಿಶೂರ್ ರೈಲ್ವೆ ನಿಲ್ದಾಣದ ಪಾರ್ಕಿಂಗ್​ನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, 200ಕ್ಕೂ ಅಧಿಕ ವಾಹನಗಳು ಸುಟ್ಟು ಭಸ್ಮವಾಗಿವೆ. ಪ್ಲಾಟ್‌ಫಾರ್ಮ್ ಸಂಖ್ಯೆ 2 ರ ಬಳಿ ಇರುವ ದ್ವಿಚಕ್ರ ವಾಹನಗಳ ಪಾರ್ಕಿಂಗ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಪ್ರಯಾಣಿಕರು ಮತ್ತು ಹತ್ತಿರದ ನಿವಾಸಿಗಳಲ್ಲಿ ಭಯಭೀತರಾಗಿದ್ದಾರೆ. ವರದಿಗಳ ಪ್ರಕಾರ, 6.45ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಜ್ವಾಲೆ ವೇಗವಾಗಿ ಪಾರ್ಕಿಂಗ್ ಪ್ರದೇಶವನ್ನು ಆವರಿಸಿಕೊಂಡಿತ್ತು. ಪ್ರತಿನಿತ್ಯ ಸುಮಾರು 500ಕ್ಕೂ ಹೆಚ್ಚು ಬೈಕ್​ಗಳನ್ನು ಅಲ್ಲಿ ನಿಲುಗಡೆ ಮಾಡಲಾಗುತ್ತದೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Bengaluru Air Quality: ಕಳೆದ ವರ್ಷಕ್ಕಿಂತ ಈ ವರ್ಷ ಕುಸಿಯಲಿದೆಯೇ ಬೆಂಗಳೂರಿನ ಏರ್ ಕ್ವಾಲಿಟಿ? – Kannada News | Bangalore Air Pollution Crisis: Will Bengaluru’s air quality deteriorate this year compared to last year?

ಕಳೆದ ವರ್ಷಕ್ಕಿಂತ ಈ ವರ್ಷ ಕುಸಿಯಲಿದೆಯೇ ಬೆಂಗಳೂರಿನ ಏರ್ ಕ್ವಾಲಿಟಿ?

ಬೆಂಗಳೂರು, ಜನವರಿ 05: ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕದ ಪ್ರಕಾರ (Bengaluru Air Quality) ಇಂದಿನ ಗಾಳಿಯ ಗುಣಮಟ್ಟ 175 ಇದ್ದು, ನಗರದ ಹಲವು ಭಾಗಗಳಲ್ಲಿ ಇದಕ್ಕೂ ಕಳಪೆ ಏರ್ ಕ್ವಾಲಿಟಿ ಕಂಡುಬರುತ್ತಿದೆ. ಇಂದೂ PM2.5 82 ಇದ್ದರೆ, PM10 108 ಇದೆ. ಕಳೆದ ಕೆಲ ದಿನಕ್ಕೆ ಹೋಲಿಸಿದರೆ ಇಂದಿನ ಏರ್ ಕ್ವಾಲಿಟಿ ಸುಧಾರಿಸಿದೆ ಎನಿಸಿದರೂ WHO ಪ್ರಕಾರ ಈ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿದೆ

ಈ ವರ್ಷ ಇನ್ನೂ ಹದಗೆಡಬಹುದು ಗಾಳಿಯ ಗುಣಮಟ್ಟ

ಇತ್ತೀಚಿನ ವರದಿಗಳ ಪ್ರಕಾರ, ಕಲ್ಯಾಣ ನಗರದಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕವು (AQI) ಆಗಾಗ್ಗೆ 170 ದಾಟುತ್ತಿದ್ದು, ಇದು ನಗರದಲ್ಲೇ ಅತ್ಯಂತ ಕಳಪೆ ಮಟ್ಟದ ಗಾಳಿ ಇರುವ ಪ್ರದೇಶಗಳಲ್ಲಿ ಒಂದಾಗಿದೆ. ವಾಹನ ದಟ್ಟಣೆಗೆ ಕುಖ್ಯಾತಿ ಪಡೆದಿರುವ ಸಿಲ್ಕ್ ಬೋರ್ಡ್ ಜಂಕ್ಷನ್, ನೈಟ್ರೋಜನ್ ಡೈಆಕ್ಸೈಡ್ (NO2) ಮತ್ತು ಧೂಳಿನ ಕಣಗಳ ಅತಿ ದೊಡ್ಡ ಕೇಂದ್ರವಾಗಿದೆ. ಹೀಗಿರುವಾಗ ಕಳೆದ ವರ್ಷಕ್ಕಿಂತ ಈ ವರ್ಷದಲ್ಲಿ ಗಾಳಿಯ ಗುಣಮಟ್ಟ ಇನ್ನೂ ಹದಗೆಡಬಹುದೆಂದು ತಜ್ಞರು ಹೇಳುತ್ತಾರೆ. ಸಾರ್ವಜನಿಕರು ತಮ್ಮ ಆರೋಗ್ಯ ಕಾಯ್ದುಕೊಳ್ಳಲು, ಮನೆಯಿಂದ ಹೊರಗೆ ಹೊರಟಾಗ ಮಾಸ್ಕ್‌ ಧರಿಸುವುದರ ಜೊತೆಗೆ ಬೆಳಗ್ಗೆ ಸಂಜೆ ವೇಳೆಗೆ ಹೊರ ಹೋಗುವುದನ್ನು ಕಡಿಮೆ ಮಾಡುವಂತೆ ಸಲಹೆ ನೀಡಲಾಗಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು –175
  • ಮಂಗಳೂರು-170
  • ಮೈಸೂರು – 151
  • ಬೆಳಗಾವಿ – 168
  • ಕಲಬುರ್ಗಿ – 90
  • ಶಿವಮೊಗ್ಗ – 178
  • ಬಳ್ಳಾರಿ – 189
  • ಹುಬ್ಬಳ್ಳಿ- 159
  • ಉಡುಪಿ –166
  • ವಿಜಯಪುರ –99

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ದೊಡ್ಡ ಬೆಲೆ ತೆರಬೇಕಾಗುತ್ತೆ, ವೆನೆಜುವೆಲಾ ಹಂಗಾಮಿ ಅಧ್ಯಕ್ಷರಿಗೂ ಬೆದರಿಕೆ ಹಾಕಿದ ಟ್ರಂಪ್ – Kannada News | Trump Warns Venezuela’s Vice President of Serious Consequences Amid Tensions

ವಾಷಿಂಗ್ಟನ್, ಜನವರಿ 05: ಒಂದೆಡೆ ಯುದ್ಧಕ್ಕೆ ಮುಂದಾಗಿರುವ ದೇಶಗಳಿಗೆ ಶಾಂತಿ ಪಾಠ ಮಾಡುತ್ತಾ, ಮತ್ತೊಂದೆಡೆ ಖುದ್ದು ತಾನೇ ಡಾನ್ ರೀತಿಯ ವರ್ತನೆಯನ್ನು ಟ್ರಂಪ್ ತೋರುತ್ತಿದ್ದಾರೆ. ವೆನೆಜುವೆಲಾ ಅಧ್ಯಕ್ಷ ನಿಕೋಲಾಸ್ ಮಡುರೊರನ್ನು ಸೆರೆಹಿಡಿದ ಕಾರ್ಯಾಚರಣೆಯ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ವೆನೆಜುವೆಲಾದ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವ ಡೆಲ್ಸಿ ರೊಡ್ರಿಗಸ್ ಅವರಿಗೂ ಬೆದರಿಕೆ ಹಾಕಿದ್ದಾರೆ.

ಅಷ್ಟೇ ಅಲ್ಲದೆ ಟ್ರಂಪ್ ಕೊಲಂಬಿಯಾ ಅಧ್ಯಕ್ಷ ಗುಸ್ತಾವೊ ಪೆಟ್ರೋಗೆ ಎಚ್ಚರಿಕೆ ಸಂದೇಶ ರವಾನಿಸಿರುವುದು ಲ್ಯಾಟಿನ್ ಅಮೆರಿಕಾದ್ಯಂತ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಅಮೆರಿಕದ ಕಾರ್ಯಾಚರಣೆಯು ಲ್ಯಾಟಿನ್ ಅಮೆರಿಕಾದ ಸಾರ್ವಭೌಮತ್ವದ ಮೇಲಿನ ದಾಳಿಯಾಗಿದ್ದು ಇದು ಮಾನವೀಯ ಬಿಕ್ಕಟ್ಟಿಗೆ ಕಾರಣವಾಗಬಹುದು ಎಂದು ಪೆಟ್ರೋ ತೀವ್ರವಾಗಿ ಖಂಡಿಸಿದ್ದರು.

‘ಅಮೆರಿಕದ ಕಾರ್ಯಾಚರಣೆಯ ಬೆನ್ನಲ್ಲೇ ಸರ್ಕಾರ ರಾಷ್ಟ್ರೀಯ ಭದ್ರತಾ ಸಭೆಯನ್ನು ನಡೆಸಿದ್ದು, ವೆನೆಝುವೆಲಾದಿಂದ ಬೃಹತ್ ಪ್ರಮಾಣದಲ್ಲಿ ನಿರಾಶ್ರಿತರು ದೇಶದೊಳಗೆ ನುಗ್ಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಕೊಲಂಬಿಯಾ–ವೆನೆಝುವೆಲಾ ಗಡಿಯುದ್ದಕ್ಕೂ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ’ ಎಂದು ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.

ಮತ್ತಷ್ಟು ಓದಿ: ತಾಕತ್ತಿದ್ರೆ ಬಂದು ಹಿಡಿ ಎಂದು ಟ್ರಂಪ್​ಗೆ ಸವಾಲೆಸೆದಿದ್ದ ವೆನಿಜುವೆಲಾ ಅಧ್ಯಕ್ಷ; ಸದ್ದಿಲ್ಲದೆ ಬಂಧಿಸಿ ಕರೆದೊಯ್ದ ಅಮೆರಿಕ ಸೇನೆ

ಅಮೆರಿಕ ಸೇನಾಪಡೆಯ ವಿಶೇಷ ಪಡೆಗಳು ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ವಶಪಡಿಸಿಕೊಂಡು ಜೈಲಿಗೆ ಹಾಕಿದ ನಂತರ, ಮಧ್ಯಂತರ ನಾಯಕಿ ಡೆಲ್ಸಿ ರೊಡ್ರಿಗಸ್ ಅವರಿಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇರ ಎಚ್ಚರಿಕೆ ನೀಡಿದ್ದಾರೆ. ಹಂಗಾಮಿ ಅಧ್ಯಕ್ಷರಾಗಿರುವ ಡೆಲ್ಸಿ ರೊಡ್ರಿಗಸ್ ಅಮೆರಿಕದೊಂದಿಗೆ ಸಹಕರಿಸದಿದ್ದರೆ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ದಿ ಅಟ್ಲಾಂಟಿಕ್‌ಗೆ ನೀಡಿದ ಸಂದರ್ಶನದಲ್ಲಿಮಾತನಾಡಿದ ಟ್ರಂಪ್, ಹಂಗಾಮಿ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಸರಿಯಾದದ್ದನ್ನು ಮಾಡದಿದ್ದರೆ, ಅವಳು ಮಡುರೊಗಿಂತ ದೊಡ್ಡ ಬೆಲೆಯನ್ನು ತೆರಬೇಕಾಗುತ್ತದೆ, ಬಹುಶಃ ದೊಡ್ಡ ಬೆಲೆಯನ್ನು ತೆರಬೇಕಾಗುತ್ತದೆ ಎಂದು ಹೇಳಿದರು.

ಟ್ರಂಪ್ ಬೇಡಿಕೆ ಏನು?
ವೆನೆಜುವೆಲಾದ ಅಗಾಧವಾದ ಕಚ್ಚಾ ತೈಲ ನಿಕ್ಷೇಪಗಳಲ್ಲಿ ಅಮೆರಿಕ ಹೂಡಿಕೆಗೆ ಪ್ರವೇಶವನ್ನು ತೆರೆಯುವುದು ಸೇರಿದಂತೆ ವಾಷಿಂಗ್ಟನ್‌ನ ಗುರಿಗಳನ್ನು ಪೂರೈಸುವವರೆಗೆ ಮಡುರೊ ಅವರ ಸರ್ಕಾರದ ಜೊತೆ ಕೆಲಸ ಮಾಡಲು ಸಿದ್ಧ ಎಂದು ಟ್ರಂಪ್ ಆಡಳಿತ ಹೇಳುತ್ತದೆ. ವೆನೆಜುವೆಲಾದ ಸುಪ್ರೀಂ ಕೋರ್ಟ್ ಮತ್ತು ಮಿಲಿಟರಿ ಅಧಿಕಾರಿಗಳು ರೊಡ್ರಿಗಸ್ ಅವರನ್ನು ಮಧ್ಯಂತರ ಅಧ್ಯಕ್ಷರನ್ನಾಗಿ ದೃಢಪಡಿಸಿದ ನಂತರ ಟ್ರಂಪ್ ಅವರ ಎಚ್ಚರಿಕೆ ಬಂದಿದೆ.

ಕೊಲಂಬಿಯಾದಲ್ಲಿ ನಡೆಯುತ್ತಿರುವ ಕೊಕೇನ್ ಉತ್ಪಾದನೆ ಮತ್ತು ಅಲ್ಲಿಂದ ಅಮೆರಿಕಕ್ಕೆ ಹರಿಯುತ್ತಿರುವ ಮಾದಕ ದ್ರವ್ಯಗಳ ಬಗ್ಗೆ ಟ್ರಂಪ್ ಕೆಂಡಾಮಂಡಲವಾಗಿದ್ದಾರೆ. ಕೊಲಂಬಿಯಾದ ಡ್ರಗ್ ಫ್ಯಾಕ್ಟರಿಗಳಿಂದ ಅಮೆರಿಕಕ್ಕೆ ವಿಷ ಹರಿದು ಬರುತ್ತಿದೆ ಎಂದು ಹೇಳಿದ್ದರು.

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ರೊಡ್ರಿಗಸ್ ಅವರೊಂದಿಗೆ ಮಾತನಾಡಿದ್ದಾರೆ ಮತ್ತು ಅವರು ಅಮೆರಿಕದ ಷರತ್ತುಗಳ ಮೇಲೆ ಕೆಲಸ ಮಾಡಲು ಸಿದ್ಧರಿದ್ದಾರೆ ಎಂದು ಹೇಳಿದ್ದರು. ನಂತರ ಟ್ರಂಪ್ ಅವರು ವೆನೆಜುವೆಲಾದಲ್ಲಿ ಜೀವನದ ಗುಣಮಟ್ಟವನ್ನು ಸುಧಾರಿಸಲು ರೊಡ್ರಿಗಸ್ ಅಮೆರಿಕದ ಸಲಹೆಯನ್ನು ಸ್ವೀಕರಿಸಲು ಸಿದ್ಧರಿದ್ದಾರೆ ಎಂದು ಹೇಳಿಕೊಂಡಿದ್ದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬೆಂಗಳೂರು ಏರ್​ಪೋರ್ಟ್ ಚೆಕಿಂಗ್ ಪಾಯಿಂಟ್ ಬಳಿಯೇ ರೋಡ್​ರೇಜ್: ಸಿನಿಮೀಯ ರೀತಿಯಲ್ಲಿ ಕಾರು ಚೇಸ್ ಮಾಡಿ ಬೈಕ್ ಸವಾರನ ಕಿರಿಕ್ – Kannada News | Road Rage Near Bengaluru Airport Checking Point: Biker Chases Cab in Filmy Style Car Chase, Video goes viral

ದೇವನಹಳ್ಳಿ, ಜನವರಿ 5: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎಬಿ) ಸೆಕ್ಯೂರಿಟಿ ಚೆಕಿಂಗ್ ಪಾಯಿಂಟ್​ ಬಳಿಯೇ ಸಿನಿಮೀಯ ರೋಡ್​ರೇಜ್ ನಡೆದಿದೆ. ಕ್ಯಾಬ್ ಚಾಲಕ ಮತ್ತು ಬೈಕ್ ಸವಾರನ ನಡುವೆ ಉಂಟಾದ ಕಿರಿಕ್ ಏರ್‌ಪೋರ್ಟ್‌ ರಸ್ತೆಯಲ್ಲಿ ಕಾರು–ಬೈಕ್ ಚೇಸ್‌ಗೆ ತಿರುಗಿದ್ದು, ಭದ್ರತಾ ಸಿಬ್ಬಂದಿ ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಬೈಕ್ ಸವಾರ ಕ್ಯಾಬ್ ಅನ್ನು ಸಿನಿಮೀಯವಾಗಿ ಹಿಂಬಾಲಿಸಿಕೊಂಡು ಹೋಗಿ, ಏರ್‌ಪೋರ್ಟ್ ಸೆಕ್ಯೂರಿಟಿ ಚೆಕಿಂಗ್ ಪಾಯಿಂಟ್ ಬಳಿ ಅಡ್ಡಗಟ್ಟಿ ಗಲಾಟೆ ನಡೆಸಿದ್ದಾನೆ. ಹಿಂಬದಿ ಬರುತ್ತಿದ್ದ ಮತ್ತೊಂದು ಕಾರಿನ ಚಾಲಕನ ಮೊಬೈಲ್‌ ಕ್ಯಾಮರಾದಲ್ಲಿ ಘಟನೆಯ ವಿಡಿಯೋ ರೆಕಾರ್ಡ್ ಆಗಿದೆ.

ಬೈಕ್ ಸವಾರ ಕ್ಯಾಬ್ ಅನ್ನು ಹಿಂಬಾಲಿಸಿ ಅಡ್ಡಗಟ್ಟಿದ ವೇಳೆ, ಕಾರಿನೊಳಗಿದ್ದ ಯುವತಿ ಭಯಭೀತಳಾಗಿದ್ದಾಳೆ. ನಡು ರಸ್ತೆಯಲ್ಲಿ ನಡೆದ ಈ ಗಲಾಟೆಯಿಂದ ಕೆಲಕಾಲ ವಾಹನ ಸಂಚಾರಕ್ಕೂ ಅಡಚಣೆ ಉಂಟಾಗಿದೆ. ಸ್ಥಳಕ್ಕೆ ಧಾವಿಸಿದ ಏರ್‌ಪೋರ್ಟ್ ಭದ್ರತಾ ಸಿಬ್ಬಂದಿ ಇಬ್ಬರಿಗೂ ಬುದ್ಧಿವಾದ ಹೇಳಿ, ಪರಿಸ್ಥಿತಿಯನ್ನು ಶಾಂತಗೊಳಿಸಿದ್ದಾರೆ. ಈ ಘಟನೆ ದೇವನಹಳ್ಳಿ ವಿಮಾನ ನಿಲ್ದಾಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕ ಹವಾಮಾನ ವರದಿ: ರಾಜ್ಯದಲ್ಲಿ ಮುಂದುವರೆದ ಶುಷ್ಕ ವಾತಾವರಣ – Kannada News | Bengaluru temperature: Dry weather all over karnataka

ರಾಜ್ಯದಲ್ಲಿ ಮುಂದುವರೆದ ಶುಷ್ಕ ವಾತಾವರಣ

ಬೆಂಗಳೂರು, ಜನವರಿ 05: ಕಳೆದ ಕೆಲ ದಿನಗಳಿಂದ ರಾಜ್ಯದ ಕೆಲವೆಡೆ ತುಂತುರು ಮಳೆ, ಇನ್ನೂ ಕೆಲವೆಡೆ ಒಣಹವೆಯ (Weather Forecast) ವಾತಾವರಣ ಮನೆಮಾಡಿದೆ. ಬೆಂಗಳೂರಿನಲ್ಲಿ ಹಲವು ದಿನಗಳಿಂದ ಮಂಜು ಮುಸುಕಿದ ಹವಾಮಾನ ಕಂಡುಬರುತ್ತಿದೆ. ದಕ್ಷಿಣ ಒಳನಾಡು ಸೇರಿದಂತೆ ಕರಾವಳಿ ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿಯೂ ನಿನ್ನೆಯಂತೆಯೇ ಇಂದೂ ಒಣ ಹವೆ ಮುಂದುವರಿಯಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.

ಎಲ್ಲೆಲ್ಲಿ ಒಣಹವೆ?

ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಚಾಮರಾಜನಗರ, ಮೈಸೂರು, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.

ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ. ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರಿನಲ್ಲಿ ಮಂಜು

ಬೆಂಗಳೂರಿನಲ್ಲಿ ಇಂದು ಮಂಜು ಕವಿದ ವಾತಾವರಣವಿದ್ದು, ತಾಪಮಾನ ಕನಿಷ್ಠ 16°C ಇದ್ದು, ಗರಿಷ್ಠ 28°C ಇರಲಿದೆ ಎಂದು ಇಲಾಖೆ ತಿಳಿಸಿದೆ. ಈ ರೀತಿಯ ತೀವ್ರ ಚಳಿಯಿಂದ ಜನರ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದು, ಬೆಚ್ಚಗಿನ ಹೊದಿಕೆ ಹೊತ್ತುಕೊಳ್ಳಬೇಕು ಹಾಗೂ ಬಿಸಿ ಆಹಾರ ಸೇವನೆ ಮಾಡಬೇಕೆಂದು ವೈದ್ಯರು ಸೂಚಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Daily Devotional: ಕುಂಕುಮಾರ್ಚನೆ ಹೆಣ್ಣು ಅಥವಾ ಗಂಡು ಯಾರು ಮಾಡಬೇಕು? – Kannada News | Daily Devotional: Who Can Perform This Devotional Practice and Its Benefits

ಬೆಂಗಳೂರು, ಜನವರಿ 05: ಕುಂಕುಮಾರ್ಚನೆಯನ್ನು ಯಾರು ಮಾಡಬಹುದು ಎಂಬ ಪ್ರಶ್ನೆಗೆ ಸ್ಪೀಕರ್‌ ಅವರು, ಈ ಪೂಜಾ ವಿಧಾನವನ್ನು ಎಲ್ಲರೂ ಮಾಡಬಹುದು ಎಂದು ಸ್ಪಷ್ಟಪಡಿಸುತ್ತಾರೆ. ವಿದ್ಯಾರ್ಥಿಗಳು, ವ್ಯಾಪಾರಸ್ಥರು, ರೈತರು, ಉದ್ಯೋಗದಲ್ಲಿರುವವರು ಸೇರಿದಂತೆ ಪ್ರತಿಯೊಬ್ಬರೂ ಇದನ್ನು ಆಚರಿಸಬಹುದು. ಮಕ್ಕಳ ಕೈಯಿಂದ ಕುಂಕುಮಾರ್ಚನೆ ಮಾಡಿಸುವುದರಿಂದ ಸಂಸ್ಕಾರ, ಜ್ಞಾನ ವೃದ್ಧಿ, ತಾಳ್ಮೆ ಮತ್ತು ದುಷ್ಟ ಶಕ್ತಿಗಳ ಕಾಟದಿಂದ ರಕ್ಷಣೆ ದೊರೆಯುತ್ತದೆ. ಗಂಡಸರು ಶುಕ್ರವಾರದಂದು ಕುಂಕುಮಾರ್ಚನೆ ಮಾಡಿದರೆ ವ್ಯಾಪಾರದಲ್ಲಿ ಲಾಭ, ಸಾಲಗಳಿಂದ ಮುಕ್ತಿ ಸಿಗುತ್ತದೆ ಎಂದು ಹೇಳಲಾಗಿದೆ. ಹೆಂಗಸರಿಗೆ ದೀರ್ಘ ಸುಮಂಗಲಿತ್ವ, ಮಕ್ಕಳೊಂದಿಗೆ ಸೌಹಾರ್ದತೆ, ಗಂಡನ ಕೆಟ್ಟ ಅಭ್ಯಾಸಗಳ ನಿವಾರಣೆ, ಆಸ್ತಿ ವೃದ್ಧಿ, ಮತ್ತು ಹಣಕಾಸಿನ ಅನುಕೂಲಗಳು ದೊರೆಯುತ್ತವೆ. ರೋಗಿಗಳು ಮತ್ತು ದೇಹದಲ್ಲಿ ಕಂಟಕ ಇರುವವರೂ ಕೂಡ ಇದನ್ನು ಮಾಡುವುದರಿಂದ ಶುಭ ಫಲ ಪಡೆಯುತ್ತಾರೆ. ಈ ನಂಬಿಕೆ ಆಧಾರಿತ ಪೂಜಾ ವಿಧಾನದಿಂದ ಆತ್ಮಸ್ಥೈರ್ಯ ವೃದ್ಧಿಯಾಗಿ ಸಮಾಜದಲ್ಲಿ ಉತ್ತಮ ಗುರುತಿಸುವಿಕೆ ದೊರೆಯುತ್ತದೆ ಎಂದು ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.

Source link

ವಿಜಯಪುರ: 56 ಕೆಜಿ ತೂಕದ ಗೋಧಿ ಮೂಟೆ ಹೊತ್ತು ಅಯೋಧ್ಯೆಗೆ ಪಾದಯಾತ್ರೆ ಹೊರಟ ರಾಮ ಭಕ್ತ! – Kannada News | Devotee Carries 56 Kg Wheat Sack on Foot March to Ayodhya Ram Mandir From Vijayapura, Watch Video

ವಿಜಯಪುರ, ಜನವರಿ 5: ಶ್ರೀರಾಮನ ಭಕ್ತರೊಬ್ಬರು 56 ಕೆಜಿ ತೂಕದ ಗೋಧಿ ಮೂಟೆ ಹೊತ್ತುಕೊಂಡು ಅಯೋಧ್ಯೆಗೆ ಪಾದಯಾತ್ರೆ ಹೊರಟಿದ್ದಾರೆ. ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬಳಗಾನೂರ ಗ್ರಾಮದ ಕೇದಾರಲಿಂಗ ಕುಂಬಾರ ಎಂಬವರು ಗೋಧಿ ಮೂಟೆ ಹೊತ್ತು ಪಾದಯಾತ್ರೆ ಹೊರಟವರು. ಇದಕ್ಕಾಗಿಯೇ ಕೇದಾರಲಿಂಗ ಕುಂಬಾರ ಪ್ರತಿನಿತ್ಯ ಮೂಟೆ ಹೊತ್ತು 20 ಕಿಮೀ ನಡೆದಾಡಿ ಅಭ್ಯಾಸ ಮಾಡಿದ್ದರು.

ಗೋಸಂಕ್ಷಣೆ ಉದ್ದೇಶ, ಪ್ರತಿ ಮನೆಗೆ ಒಂದು ಗೋವು ಸಾಕುವಂತಾಗಲಿ ಎಂದು ರಾಮನಿಗೆ ಹರಕೆ ಹೊತ್ತು ಈ ಕೈಂಕರ್ಯ ಕೈಗೊಂಡಿದ್ದೇನೆ ಎಂದು ಕೇದಾರಲಿಂಗ ಕುಂಬಾರ ತಿಳಿಸಿದ್ದಾರೆ. ಸತತ ಎರಡು ತಿಂಗಳು ಪಾದಯಾತ್ರೆ ಮೂಲಕ ಸಾಗಿ ಅಯೋಧ್ಯೆ ತಲುಪುತ್ತೇನೆಂದು ತಿಳಿಸಿದ್ದಾರೆ. ಕೇದಾರಲಿಂಗ ಕುಂಬಾರ ಯಾತ್ರೆಗೆ ಗ್ರಾಮದ ಜನರು ಮೆಚ್ಚುಗೆ ವ್ಯಕ್ತಪಡಿಸಿ ನೆರವು ನೀಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Assam Earthquake: ಅಸ್ಸಾಂನಲ್ಲಿ 5.1 ತೀವ್ರತೆಯ ಪ್ರಬಲ ಭೂಕಂಪ – Kannada News | Earthquake in Assam: 5.1 Magnitude Rocks Morigaon and Neighbouring States

ಗುವಾಹಟಿ, ಜನವರಿ 05: ಅಸ್ಸಾಂನಲ್ಲಿ 5.1 ತೀವ್ರತೆಯ ಪ್ರಬಲ ಭೂಕಂಪ(Earthquake) ಸಂಭವಿಸಿದೆ. ಅಸ್ಸಾಂನ ಮೋರಿಗಾಂವ್ ಜಿಲ್ಲೆಯಲ್ಲಿ ಸೋಮವಾರ ಬೆಳಗಿನ ಜಾವ 4.17ಕ್ಕೆ ಭೂಕಂಪ ಸಂಭವಿಸಿದೆ. ಯಾವುದೇ ಜೀವಹಾನಿಯಾಗಲಿ, ಆಸ್ತಿಪಾಸ್ತಿ ಹಾನಿಯ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ. ಮೋರಿಗಾಂವ್ ಮತ್ತು ಹತ್ತಿರದ ಜಿಲ್ಲೆಗಳು ಸೇರಿದಂತೆ ಮಧ್ಯ ಅಸ್ಸಾಂನ ಹಲವಾರು ಭಾಗಗಳಲ್ಲಿ ಭೂಕಂಪನದ ಅನುಭವವಾಗಿದ್ದು, ನಿವಾಸಿಗಳು ತಮ್ಮ ಮನೆಗಳಿಂದ ಹೊರಗೆ ಓಡಿಬಂದಿದ್ದರು.

ಕಂಪನವು 50 ಕಿಲೋಮೀಟರ್ ಆಳದಲ್ಲಿತ್ತು. ಕಮ್ರೂಪ್ ಮೆಟ್ರೋಪಾಲಿಟನ್, ನಾಗಾಂವ್, ಪೂರ್ವ ಮತ್ತು ಪಶ್ಚಿಮ ಕರ್ಬಿ ಅಂಗ್ಲಾಂಗ್, ಹೊಜೈ, ದಿಮಾ ಹಸಾವೊ, ಗೋಲಾಘಾಟ್, ಜೋರ್ಹತ್, ಶಿವಸಾಗರ್, ಚರೈಡಿಯೊ, ಕ್ಯಾಚಾರ್, ಕರೀಮ್‌ಗಂಜ್, ಹೈಲಕಂಡಿ, ಧುಬ್ರಿ, ದಕ್ಷಿಣ ಸಲ್ಮಾರಾ ಮಂಕಚಾರ್ ಮತ್ತು ಗೋಲ್‌ಪಾರಾ ನಿವಾಸಿಗಳು ಕಂಪನ ಅನುಭವಿಸಿದ್ದಾರೆ. ದರ್ರಾಂಗ್, ತಮುಲ್‌ಪುರ್, ಸೋನಿತ್‌ಪುರ್, ಕಮ್ರೂಪ್, ಬಿಸ್ವನಾಥ್, ಉದಲ್‌ಗುರಿ, ನಲ್ಬರಿ, ಬಜಾಲಿ, ಬರ್ಪೇಟಾ, ಬಕ್ಸಾ, ಚಿರಾಂಗ್, ಕೊಕ್ರಜಾರ್, ಬೊಂಗೈಗಾಂವ್ ಮತ್ತು ಲಖಿಂಪುರ ಸೇರಿದಂತೆ ಉತ್ತರದ ಹಲವಾರು ಜಿಲ್ಲೆಗಳಲ್ಲಿಯೂ ಕಂಪನದ ಅನುಭವವಾಗಿದೆ.

ಭೂಕಂಪದ ಪರಿಣಾಮ ಅಸ್ಸಾಂನ ಆಚೆಗೂ ವಿಸ್ತರಿಸಿದೆ. ಮಧ್ಯ ಪಶ್ಚಿಮ ಅರುಣಾಚಲ ಪ್ರದೇಶದ ಕೆಲವು ಭಾಗಗಳು, ಇಡೀ ಮೇಘಾಲಯ ರಾಜ್ಯ, ಹಾಗೆಯೇ ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರ ಮತ್ತು ಪಶ್ಚಿಮ ಬಂಗಾಳದಿಂದ ಕಂಪನಗಳು ವರದಿಯಾಗಿವೆ. ಭೂಕಂಪನ ವರದಿಯ ಪ್ರಕಾರ, ಮಧ್ಯ ಪೂರ್ವ ಭೂತಾನ್, ಚೀನಾ ಮತ್ತು ಬಾಂಗ್ಲಾದೇಶದ ಕೆಲವು ಭಾಗಗಳಲ್ಲಿ ಕಂಪನದ ಅನುಭವವಾಗುವಷ್ಟು ಪ್ರಬಲವಾಗಿತ್ತು.

ಮತ್ತಷ್ಟು ಓದಿ: Taiwan Earthquake: ತೈವಾನ್​ನಲ್ಲಿ ಪ್ರಬಲ ಭೂಕಂಪ, ನಲುಗಿದ ಕಟ್ಟಡಗಳು

ಬೆಳಗಿನ ಜಾವ ಸಂಭವಿಸಿದ ಹಠಾತ್ ಭೂಕಂಪನವು ಜನರನ್ನು ನಿದ್ದೆಯಿಂದ ಬಡಿದೆಬ್ಬಿಸಿದಂತಾಗಿತ್ತು, ಅನೇಕರು ತಮ್ಮ ಮನೆಗಳಿಂದ ಹೊರಗೆ ಓಡಿಹೋಗುವಂತೆ ಮಾಡಿತು.

ಮೆಕ್ಸಿಕೋದಲ್ಲಿ ಭೂಕಂಪ

ಶುಕ್ರವಾರ ದಕ್ಷಿಣ ಮತ್ತು ಮಧ್ಯ ಮೆಕ್ಸಿಕೋದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ, ಅಧ್ಯಕ್ಷರಾದ ಕ್ಲೌಡಿಯಾ ಶೀನ್‌ಬಾಮ್ ಅವರ ಹೊಸ ವರ್ಷದ ಮೊದಲ ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ ಭೂಕಂಪ ಸಂಭವಿಸಿತ್ತು. ಘಟನೆಯಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದರು. ಭೂಕಂಪದ ತೀವ್ರತೆ 6.5 ರಷ್ಟಿದ್ದು, ಅದರ ಕೇಂದ್ರಬಿಂದು ದಕ್ಷಿಣ ರಾಜ್ಯವಾದ ಗೆರೆರೊದ ಸ್ಯಾನ್ ಮಾರ್ಕೋಸ್ ಪಟ್ಟಣದ ಬಳಿ, ಪೆಸಿಫಿಕ್ ಕರಾವಳಿ ರೆಸಾರ್ಟ್ ಅಕಾಪುಲ್ಕೊ ಬಳಿ ಇತ್ತು.

500 ಕ್ಕೂ ಹೆಚ್ಚು ನಂತರದ ಕಂಪನಗಳು ದಾಖಲಾಗಿವೆ. ಗೆರೆರೋ ನಾಗರಿಕ ರಕ್ಷಣಾ ಸಂಸ್ಥೆಯು ಅಕಾಪುಲ್ಕೊ ಸುತ್ತಮುತ್ತ ಮತ್ತು ರಾಜ್ಯದಾದ್ಯಂತದ ಇತರ ಹೆದ್ದಾರಿಗಳಲ್ಲಿ ಹಲವಾರು ಭೂಕುಸಿತಗಳು ಸಂಭವಿಸಿವೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Horoscope Today 05 January: ಇಂದು ಈ ರಾಶಿಯವರ ಮನೆಯಲ್ಲಿ ಕಲಹ!

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಜನವರಿ 05, ಸೋಮವಾರ, ದಕ್ಷಿಣಾಯನ, ಪುಷ್ಯ ಮಾಸ, ಹೇಮಂತ ಋತು, ಕೃಷ್ಣ ಪಕ್ಷ, ಬಿದಿಗೆ, ಪುಷ್ಯ ನಕ್ಷತ್ರ, ವಿಶ್ಕಂಭ ಯೋಗ, ಗರಜ ಕರಣ ಇರತಕ್ಕಂತಹ ಪರ್ವ ದಿನವಾಗಿದೆ. ರಾಹು ಕಾಲವು ಬೆಳಿಗ್ಗೆ 8 ಗಂಟೆ 6 ನಿಮಿಷದಿಂದ 9 ಗಂಟೆ 2 ನಿಮಿಷದ ತನಕ ಇರುತ್ತದೆ. ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ, ಶುಭ ಕಾಲವು ಬೆಳಿಗ್ಗೆ 9 ಗಂಟೆ 34 ನಿಮಿಷದಿಂದ 10 ಗಂಟೆ 59 ನಿಮಿಷದ ತನಕ ಇರಲಿದೆ. ಇದು ಶಿವನ ಲಹರಿಗಳು, ಶಿವ ನಾಮಸ್ಮರಣೆಗೆ ಪ್ರಶಸ್ತವಾದ ಸೋಮವಾರ. ಇಂದು ರವಿಯು ಧನು ರಾಶಿಯಲ್ಲಿ ಹಾಗೂ ಚಂದ್ರನು ಕರ್ಕಾಟಕ ರಾಶಿಯ ಪುಷ್ಯ ನಕ್ಷತ್ರದಲ್ಲಿ ಸಂಚಾರ ಮಾಡುತ್ತಿರುತ್ತಾರೆ ಎಂದು ಡಾ. ಬಸವರಾಜ ಗುರೂಜಿ ಹಾರೈಸಿದ್ದಾರೆ.

Source link

ಟಿ೨೦ ಕ್ರಿಕೆಟ್‌ನಲ್ಲಿ ಹಿಂದೆಂದೂ ಕಂಡರಿಯದ ವಿಶ್ವ ದಾಖಲೆ ನಿರ್ಮಿಸಿದ ಸ್ಪೇನ್ – Kannada News | Spain Creates New World Record in T20Is

ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಸ್ಪೇನ್ ತಂಡವು ಹೊಸ ವಿಶ್ವ ದಾಖಲೆ ನಿರ್ಮಿಸಿದೆ. ಅದು ಕೂಡ ಹಿಂದೆಂದೂ ಕಂಡರಿಯದ ವರ್ಲ್ಡ್​ ರೆಕಾರ್ಡ್​ ಎಂಬುದು ವಿಶೇಷ. ಅಂದರೆ ಟಿ20 ಕ್ರಿಕೆಟ್​ ಇತಿಹಾಸದಲ್ಲೇ ಸತತವಾಗಿ ಅತ್ಯಧಿಕ ಗೆಲುವು ದಾಖಲಿಸಿದ ವಿಶ್ವ ದಾಖಲೆಯನ್ನು ಸ್ಪೇನ್ ತಂಡ ತನ್ನದಾಗಿಸಿಕೊಂಡಿದೆ.

Source link