ಮತ್ತೆ ಮ್ಯಾಜಿಕ್ ಮಾಡುತ್ತಾ ‘ಲವ್ ಮಾಕ್ಟೆಲ್ 3’? ಬಿಡುಗಡೆ ಯಾವಾಗ? – Kannada News | Darling Krishna starrer Love Mocktail 3 movie release date announced
ಕೋವಿಡ್ ಸಮಯದಲ್ಲಿ ಒಟಿಟಿಯಲ್ಲಿ ದೊಡ್ಡ ಹಿಟ್ ಆಗಿತ್ತು ‘ಲವ್ ಮಾಕ್ಟೆಲ್’ (Love Mocktail) ಸಿನಿಮಾ. ಡಾರ್ಲಿಂಗ್ ಕೃಷ್ಣಗೆ ನಟನಾಗಿ ಮಾತ್ರವಲ್ಲದೆ ನಿರ್ದೇಶಕನಾಗಿಯೂ ದೊಡ್ಡ ಗೆಲುವು ತಂದುಕೊಟ್ಟ ಸಿನಿಮಾ. ಹಾಸ್ಯ, ಭಾವುಕತೆ, ಗೆಳೆತನ, ಒಳ್ಳೆಯ ಸಂಗೀತ ಎಲ್ಲವುಗಳ ಮಿಶ್ರಣವಾಗಿದ್ದ ‘ಲವ್ ಮಾಕ್ಟೆಲ್’ ಅನ್ನು ಸಿನಿಮಾ ಸರಣಿಯಾಗಿ ಮುಂದುವರೆಸಿದ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್, 2022 ರಲ್ಲಿ ‘ಲವ್ ಮಾಕ್ಟೆಲ್ 2’ ಸಿನಿಮಾ ನಿರ್ಮಿಸಿದರು. ಆ ಸಿನಿಮಾ ಸಹ ಹಿಟ್ ಆಯ್ತು. ಇದೀಗ ಇದೇ ಜೋಡಿ ‘ಲವ್ ಮಾಕ್ಟೆಲ್…