All posts by nagaraj11081993

‘ಧುರಂಧರ್’ ಸಿನಿಮಾದ ಟಿಕೆಟ್ ಬೆಲೆ ತಗ್ಗಿಸಿದ ಚಿತ್ರತಂಡ; ಕಾರಣ ಏನು? – Kannada News | Ranveer Singh starrer Dhurandhar movie ticket price slashed due to this reason

ರಿಯಲ್ ಘಟನೆಯನ್ನು ಆಧರಿಸಿ ತಯಾರಾದ ‘ಧುರಂಧರ್’ (Dhurandhar) ಸಿನಿಮಾ ಬಿಡುಗಡೆ ಆಗಿ ಒಂದು ತಿಂಗಳು ಕಳೆದಿದೆ. ಈಗಲೂ ದೇಶಾದ್ಯಂತ ಈ ಸಿನಿಮಾ ಪ್ರದರ್ಶನ ಕಾಣುತ್ತಿದೆ. ರಣವೀರ್ ಸಿಂಗ್, ಸಾರಾ ಅರ್ಜುನ್, ಅಕ್ಷಯ್ ಖನ್ನಾ (Akshaye Khanna) ಮುಂತಾದವರು ನಟಿಸಿದ ಈ ಸಿನಿಮಾಗೆ ಬಹುತೇಕ ಪಾಸಿಟಿವ್ ವಿಮರ್ಶೆ ಸಿಕ್ಕಿದೆ. ಇಷ್ಟು ದಿನಗಳ ತನಕವೂ ಈ ಸಿನಿಮಾದ ಟಿಕೆಟ್ ಬೆಲೆ ದುಬಾರಿ ಆಗಿತ್ತು. ಆದರೆ ಈಗ ಟಿಕೆಟ್ ಬೆಲೆ ಕಡಿಮೆ ಮಾಡಲಾಗಿದೆ. ಆಯ್ದ ಕೆಲವು ಚಿತ್ರಮಂದಿರಗಳಲ್ಲಿ ಈಗ ಕೇವಲ 199 ರೂಪಾಯಿಗೆ ‘ಧುರಂಧರ್’ ಸಿನಿಮಾದ ಟಿಕೆಟ್ ಸಿಗಲಿದೆ.

‘ಧುರಂಧರ್’ ಸಿನಿಮಾ ಡಿಸೆಂಬರ್ 5ರಂದು ಬಿಡುಗಡೆ ಆಗಿತ್ತು. ಆಗ ಈ ಸಿನಿಮಾದ ಟಿಕೆಟ್ ಬೆಲೆ ಮುಗಿಲು ಮುಟ್ಟಿತ್ತು. ಸಿನಿಮಾದ ಅವಧಿ 3 ಗಂಟೆ 30 ನಿಮಿಷ ಆದ್ದರಿಂದ ಚಿತ್ರಮಂದಿರಗಳಲ್ಲಿ ಒಂದೇ ದಿನ ಹೆಚ್ಚು ಶೋ ಹಾಕಲು ಕಷ್ಟಪಡಬೇಕಿತ್ತು. ಕಡಿಮೆ ಅವಧಿಯ ಎರಡು ಸಿನಿಮಾಗಳ ಜಾಗವನ್ನು ‘ಧುರಂಧರ್’ ಆಕ್ರಮಿಸಿಕೊಳ್ಳುತ್ತದೆ. ಆ ಕಾರಣದಿಂದಾಗಿ ಸಿನಿಮಾ ಟಿಕೆಟ್ ಬೆಲೆ 250ರಿಂದ ಆರಂಭ ಆಗಿ, ಒಂದೂವರೆ ಸಾವಿರ ರೂಪಾಯಿ ತನಕವೂ ಆಗಿತ್ತು. ಆದರೆ ಈಗ ಟಿಕೆಟ್ ಬೆಲೆ ಕಡಿಮೆ ಮಾಡಲು ನಿರ್ಧರಿಸಲಾಗಿದೆ.

32ನೇ ದಿನ ‘ಧುರಂಧರ್’ ಸಿನಿಮಾದ ಕಲೆಕ್ಷನ್ ಗಣನೀಯವಾಗಿ ತಗ್ಗಿದೆ. ಇಷ್ಟು ದಿನಗಳ ಕಾಲ ಬಹುಕೋಟಿ ರೂಪಾಯಿ ಕಲೆಕ್ಷನ್ ಮಾಡುತ್ತಿದ್ದ ಈ ಸಿನಿಮಾ 32ನೇ ದಿನದಲ್ಲಿ ಕೇವಲ 4.75 ಕೋಟಿ ರೂಪಾಯಿ ಗಳಿಸಿತು. ಮುಂದಿನ ದಿನಗಳಲ್ಲಿ ಕಲೆಕ್ಷನ್ ಇನ್ನಷ್ಟು ತಗ್ಗಲಿದೆ ಎಂಬುದು ಖಚಿತ ಆಗಿದೆ. ಹಾಗಾಗಿ ಟಿಕೆಟ್ ಬೆಲೆ ಕಡಿಮೆ ಮಾಡುವ ಮೂಲಕ ಪ್ರೇಕ್ಷಕರನ್ನು ಸೆಳೆಯಲು ಚಿತ್ರತಂಡ ಮುಂದಾಗಿದೆ.

ಗೋಲ್ಡ್ ಕ್ಲಾಸ್ ರೀತಿಯ ಟಿಕೆಟ್​​ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಸಾಮಾನ್ಯ ಆಸನಗಳ ಟಿಕೆಟ್ ಬೆಲೆಯನ್ನು ತಗ್ಗಿಸಲಾಗಿದೆ. ಆದರೆ ಈ ಆಫರ್ ಇರುವುದು ಒಂದು ದಿನ ಮಾತ್ರ ಹಾಗೂ ಆಯ್ದ ಕೆಲವು ಚಿತ್ರಮಂದಿರಗಳಲ್ಲಿ ಮಾತ್ರ ಎಂದು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ. ಇದರಿಂದ ಚಿತ್ರದ ಕಲೆಕ್ಷನ್ ಮತ್ತೆ ಹೆಚ್ಚುತ್ತಾ ಎಂಬುದನ್ನು ಕಾದು ನೋಡಬೇಕು.

ಇದನ್ನೂ ಓದಿ: ಒಂದೇ ವರ್ಷದಲ್ಲಿ ಅಕ್ಷಯ್ ಖನ್ನಾ ಸಿನಿಮಾಗಳ ಕಲೆಕ್ಷನ್ 2 ಸಾವಿರ ಕೋಟಿ ರೂಪಾಯಿ!

‘ಧುರಂಧರ್’ ಸಿನಿಮಾಗೆ ಆದಿತ್ಯ ಧಾರ್ ಅವರು ನಿರ್ದೇಶನ ಮಾಡಿದ್ದಾರೆ. ರಣವೀರ್ ಸಿಂಗ್, ಸಂಜಯ್ ದತ್, ಅಕ್ಷಯ್ ಖನ್ನಾ, ಸಾರಾ ಅರ್ಜುನ್, ಅರ್ಜುನ್ ರಾಮ್​​ಪಾಲ್ ಮುಂತಾದವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ‘ಜಿಯೋ ಸ್ಟುಡಿಯೋಸ್’ ಮತ್ತು ‘ಬಿ62 ಸ್ಟುಡಿಯೋಸ್’ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹರಿದ್ವಾರದ ಘಾಟ್‌ಗಳಿಗೆ ಹಿಂದೂಯೇತರರ ಪ್ರವೇಶ ನಿಷೇಧವೇ? – Kannada News | Uttarakhand government plans to ban non Hindus entering 105 ghats in Haridwar

ನವದೆಹಲಿ, ಜನವರಿ 6: 2027ರಲ್ಲಿ ನಡೆಯುವ ಅರ್ಧ ಕುಂಭಮೇಳವನ್ನು ಗಮನದಲ್ಲಿಟ್ಟುಕೊಂಡು ಉತ್ತರಾಖಂಡ ಸರ್ಕಾರವು ಹರಿದ್ವಾರದ (Haridwar) ಗಂಗಾ ಘಾಟ್‌ಗಳಲ್ಲಿ ಹಿಂದೂಯೇತರರ ಪ್ರವೇಶದ ಕುರಿತು ಕಠಿಣ ನಿಯಮಗಳನ್ನು ಜಾರಿಗೆ ತರುವ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿದೆ. ಹರಿದ್ವಾರದಲ್ಲಿ ಸುಮಾರು 120 ಚದರ ಕಿಲೋಮೀಟರ್ ಪ್ರದೇಶದಲ್ಲಿ ಹರಡಿರುವ 105 ಘಾಟ್‌ಗಳಲ್ಲಿ ಹಿಂದೂಯೇತರರಿಗೆ ಪ್ರವೇಶ ನಿಷೇಧವನ್ನು ಪರಿಗಣಿಸಲಾಗುತ್ತಿದೆ.

ಇತ್ತೀಚೆಗೆ, ಶ್ರೀ ಗಂಗಾ ಸಭೆಗೆ ಸಂಬಂಧಿಸಿದ ಕೆಲವು ಅಧಿಕಾರಿಗಳು ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಬೇಡಿಕೆಗಳನ್ನು ಸಲ್ಲಿಸಿದ್ದರು. 2027ರಲ್ಲಿ ನಡೆಯುವ ಅರ್ಧ ಕುಂಭಮೇಳದೊಂದಿಗೆ ಹರಿದ್ವಾರದ ಗಂಗಾ ಘಾಟ್‌ಗಳಿಗೆ ಹಿಂದೂಯೇತರರ ಪ್ರವೇಶ ನಿಷೇಧ ಆರಂಭವಾಗಬಹುದು. ಈ ಬಗ್ಗೆ ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸಂದರ್ಶನವೊಂದರಲ್ಲಿ ಸುಳಿವು ನೀಡಿದ್ದಾರೆ. ಹರಿದ್ವಾರ ಪವಿತ್ರ ನಗರವಾಗಿದ್ದು, ಸರ್ಕಾರವು ಅದರ ಆಧ್ಯಾತ್ಮಿಕ ಘನತೆಯನ್ನು ಕಾಪಾಡಿಕೊಳ್ಳಲು ಬದ್ಧವಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: World’s Largest Shiva Linga: ಬಿಹಾರದಲ್ಲಿ ಪ್ರತಿಷ್ಠಾಪನೆಗೆ ಸಿದ್ಧವಾದ ವಿಶ್ವದ ಅತಿದೊಡ್ಡ ಏಕಶಿಲಾ ಶಿವಲಿಂಗ; ಇಲ್ಲಿನ ವಿಶೇಷತೆ ತಿಳಿಯಿರಿ

ರಾಜ್ಯ ಸರ್ಕಾರವು ಋಷಿಕೇಶ ಮತ್ತು ಹರಿದ್ವಾರಗಳನ್ನು ಸನಾತನ ಪವಿತ್ರ ನಗರಗಳೆಂದು ಘೋಷಿಸುವ ಸಾಧ್ಯತೆಯನ್ನು ಪರಿಗಣಿಸುತ್ತಿದೆ. ಮುಖ್ಯಮಂತ್ರಿಯ ಹೇಳಿಕೆ ಪ್ರಕಾರ, ಈ ಎರಡು ನಗರಗಳು ಸನಾತನ ಸಂಪ್ರದಾಯ ಮತ್ತು ನಂಬಿಕೆಯ ಪ್ರಮುಖ ಕೇಂದ್ರಗಳಾಗಿದ್ದು, ದೇಶಾದ್ಯಂತ ಮತ್ತು ವಿದೇಶಗಳಿಂದ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತಿವೆ. ಆದ್ದರಿಂದ, ಜನಸಂದಣಿ ನಿಯಂತ್ರಣ, ಭದ್ರತೆ ಮತ್ತು ಪಾವಿತ್ರ್ಯವನ್ನು ಕಾಪಾಡಿಕೊಳ್ಳಲು ಸರ್ಕಾರ ಎಲ್ಲಾ ಆಯ್ಕೆಗಳನ್ನು ಅನ್ವೇಷಿಸುತ್ತಿದೆ.

ಇದನ್ನೂ ಓದಿ: ಹರಿದ್ವಾರದ ಮಾನಸ ದೇವಿ ದೇವಸ್ಥಾನದಲ್ಲಿ ಕಾಲ್ತುಳಿತ, ಆರು ಮಂದಿ ಸಾವು

ಹರಿದ್ವಾರವು ಪ್ರತಿ ವರ್ಷ 5 ಕೋಟಿಗೂ ಹೆಚ್ಚು ಭಕ್ತರನ್ನು ಆಕರ್ಷಿಸುತ್ತದೆ. 2027ರಲ್ಲಿ ನಡೆಯುವ ಅರ್ಧ ಕುಂಭಮೇಳ, ಶ್ರಾವಣ ಮಾಸದಲ್ಲಿ ನಡೆಯುವ ಕನ್ವರ್ ಯಾತ್ರೆ ಮತ್ತು ಗಂಗಾ ಕಾರಿಡಾರ್ ಯೋಜನೆಯನ್ನು ಪರಿಗಣಿಸಿ ರಾಜ್ಯ ಸರ್ಕಾರವು ಜನಸಂದಣಿಯನ್ನು ಉತ್ತಮವಾಗಿ ನಿರ್ವಹಿಸಲು ಮತ್ತು ಧಾರ್ಮಿಕ ಪಾವಿತ್ರ್ಯವನ್ನು ಕಾಪಾಡಿಕೊಳ್ಳಲು ವ್ಯವಸ್ಥೆಗಳನ್ನು ಮತ್ತಷ್ಟು ಬಲಪಡಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ 105 ಗಂಗಾ ಘಾಟ್‌ಗಳ ಸಮೀಕ್ಷೆಯನ್ನು ನಡೆಸಲಾಗಿದೆ ಮತ್ತು ಅವುಗಳ ಪುನರಾಭಿವೃದ್ಧಿ ಮತ್ತು ಪುನರ್ನಿರ್ಮಾಣಕ್ಕೆ ಸಿದ್ಧತೆಗಳು ಪ್ರಾರಂಭವಾಗಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On – 3:37 pm, Tue, 6 January 26

Source link

ಪೈರಸಿ ತಡೆಯಲು ದಿಟ್ಟ ಹೆಜ್ಜೆ ಇಟ್ಟ ತೆಲುಗು ಚಿತ್ರರಂಗ – Kannada News | Tollywood signed memorandum with police to stop piracy

ತೆಲುಗು ಚಿತ್ರರಂಗ (Tollywood), ಭಾರತದ ಚಿತ್ರರಂಗಗಳಲ್ಲಿಯೇ ಅತ್ಯಂತ ಲಾಭದಾಯಕ ಚಿತ್ರರಂಗವಾಗಿದೆ. ಭಾರತೀಯ ಚಿತ್ರರಂಗ ಎಂದರೆ ಬಾಲಿವುಡ್ ಎಂಬ ವಿದೇಶಿಗರ ನಂಬಿಕೆಯನ್ನು ಅಳಿಸಿ ಹಾಕಿದ ಶ್ರೇಯ ತೆಲುಗು ಚಿತ್ರರಂಗಕ್ಕೆ ಸಲ್ಲಬೇಕಿದೆ. ‘ಬಾಹುಬಲಿ’, ‘ಆರ್​ಆರ್​ಆರ್’ ಸೇರಿದಂತೆ ಇನ್ನೂ ಹಲವು ಸಿನಿಮಾಗಳ ಮೂಲಕ ವಿಶ್ವಮಟ್ಟದಲ್ಲಿ ತೆಲುಗು ಚಿತ್ರರಂಗ ಜನಪ್ರಿಯತೆ ಕಂಡಿದೆ. ದೊಡ್ಡ ಚಿತ್ರರಂಗಗಳಲ್ಲಿ ಅತಿ ಹೆಚ್ಚು ಯಶಸ್ವಿ ಸರಾಸರಿ ಹೊಂದಿರುವ ಚಿತ್ರರಂಗವೂ ತೆಲುಗು ಚಿತ್ರರಂಗವೇ ಆಗಿದೆ. ಆದರೆ ತೆಲುಗು ಚಿತ್ರರಂಗವನ್ನು ಪೈರಸಿ ಎಂಬುದು ದಶಕಗಳಿಂದಲೂ ಕಾಡುತ್ತಲೇ ಬಂದಿದೆ. ಆದರೆ ಇತ್ತೀಚೆಗೆ ಈ ಪೈರಸಿ ತಡೆಗಾಗಿ ಚಿತ್ರರಂಗ ಕೆಲವು ದಿಟ್ಟ ಹೆಜ್ಜೆಗಳನ್ನು ಇಡುತ್ತಿದೆ.

ಕೋವಿಡ್ ಬಳಿಕ ಆದ ಒಟಿಟಿ ಕ್ರಾಂತಿಯ ಅಡ್ಡಪರಿಣಾಮವಾಗಿ ಪೈರಸಿ ಮೊದಲಿಗಿಂತಲೂ ಹೆಚ್ಚಾಗಿದೆ ಮತ್ತು ಮೊದಲಿಗಿಂತಲೂ ಹೆಚ್ಚು ವಿಸ್ತಾರವನ್ನು ಪಡೆದುಕೊಂಡಿದೆ. ಈಗಂತೂ ಬೆರಳ ತುದಿಯಲ್ಲಿ ಪೈರಸಿ ಸಿನಿಮಾಗಳು ಲಭ್ಯವಾಗುವಂತಾಗಿದೆ. ಇದರಿಂದಾಗಿ ಚಿತ್ರರಂಗಗಳಿಗೆ ವಾರ್ಷಿಕ ಸಾವಿರಾರು ಕೋಟಿ ನಷ್ಟವಾಗುತ್ತಿದೆ. ಇದರಲ್ಲಿ ಹೆಚ್ಚು ನಷ್ಟ ಅನುಭವಿಸುತ್ತಿರುವುದು ತೆಲುಗು ಚಿತ್ರರಂಗ. ಏಕೆಂದರೆ ಚಿತ್ರಮಂದಿರ ಮತ್ತು ಒಟಿಟಿಗಳಲ್ಲಿ ತೆಲುಗು ಸಿನಿಮಾಗಳಿಗೆ ಒಳ್ಳೆಯ ಬೇಡಿಕೆ ಇದೆ. ಅಲ್ಲದೆ, ಪೈರಸಿ ಕೋರರು ಟಾರ್ಗೆಟ್ ಮಾಡುತ್ತಿರುವುದು ಸಹ ತೆಲುಗು ಸಿನಿಮಾಗಳನ್ನೇ ಹೆಚ್ಚು.

ಇತ್ತೀಚೆಗಿನ ವರ್ಷಗಳಲ್ಲಿ ತೆಲುಗು ಚಿತ್ರರಂಗ ಈ ಪೈರಸಿ ತಡೆಯಲು ದಿಟ್ಟ ಹೆಜ್ಜೆಗಳನ್ನು ಇಡುತ್ತಾ ಬಂದಿದೆ. ಮೆಗಾಸ್ಟಾರ್ ಚಿರಂಜೀವಿ ನೇತೃತ್ವದಲ್ಲಿ ಟಾಲಿವುಡ್​ನ ಪ್ರಮುಖ ವ್ಯಕ್ತಿಗಳನ್ನು ಒಳಗೊಂಡ ಉನ್ನತ ವರ್ಗದ ನಿಯೋಗ ಕಾಲ ಕಾಲಕ್ಕೆ ಸೈಬರ್ ಪೊಲೀಸರನ್ನು ಭೇಟಿ ಮಾಡಿ ಪೈರಸಿ ಬಗ್ಗೆ ದೂರುಗಳನ್ನು ನೀಡುತ್ತಲೇ ಬಂದಿದೆ. ಸರ್ಕಾರದ ಸಿನಿಮಾಟೊಗ್ರಫಿ ಸಚಿವರು, ಗೃಹ ಮಂತ್ರಿಗಳನ್ನು ಸಹ ಭೇಟಿ ಮಾಡಿ ದೂರುಗಳನ್ನು ನೀಡಲಾಗಿತ್ತು.

ಇದನ್ನೂ ಓದಿ:ದೀಕ್ಷಿತ್ ಶೆಟ್ಟಿ ವೇಗಕ್ಕೆ ಬ್ರೇಕ್ ಇಲ್ಲ, ಮತ್ತೊಂದು ಬಿಗ್ ಬಜೆಟ್ ತೆಲುಗು ಸಿನಿಮಾನಲ್ಲಿ ನಟನೆ

ಅದರ ಫಲವಾಗಿ ಐಬೊಮ್ಮ ರವಿ ಸೇರಿದಂತೆ ಇನ್ನೂ ಕೆಲವು ಪ್ರಮುಖ ಪೈರಸಿಕೋರರನ್ನು ಸೈಬರಾಬಾದ್ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದು, ಅವರು ನಡೆಸುತ್ತಿದ್ದ ಕೆಲವಾರು ಪೈರಸಿ ಸೈಟ್​ ಮತ್ತು ಅಪ್ಲಿಕೇಶನ್​​ಗಳನ್ನು ಬಂದ್ ಮಾಡಿಸಿದ್ದಾರೆ. ಇತ್ತೀಚೆಗಷ್ಟೆ ತೆಲುಗು ಸಿನಿಮಾ ಚೇಂಬರ್​​ಗೆ ನೂತನ ಅಧ್ಯಕ್ಷರಾಗಿ ಖ್ಯಾತ ಸಿನಿಮಾ ನಿರ್ಮಾಪಕ ದಗ್ಗುಬಾಟಿ ಸುರೇಶ್ ಬಾಬು ಆಯ್ಕೆ ಆಗಿದ್ದು, ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಪೈರಸಿ ತಡೆ ಕುರಿತಾಗಿ ಪೊಲೀಸರೊಂದಿಗೆ ಮೆಮೊರ್ಯಾಂಡಮ್ (ಜ್ಞಾಪಕ ಪತ್ರ) ಸಹಿ ಮಾಡಿಕೊಂಡಿದ್ದಾರೆ.

ಇದರಂತೆ ಪೈರಸಿ ತಡೆಗೆ ಪೊಲೀಸರು ಮತ್ತು ತೆಲುಗು ಚಿತ್ರರಂಗ ಇನ್ನು ಮುಂದೆ ಜೊತೆ-ಜೊತೆಯಾಗಿ ಕೆಲಸ ಮಾಡಲಿದೆ. ಈಗಾಗಲೇ ಲಭ್ಯವಿರುವ ಪೈರಸಿ ಸೈಟುಗಳನ್ನು ತೆಗೆದು ಹಾಕುವ ಜೊತೆಗೆ ಮುಂದಿನ ದಿನಗಳಲ್ಲಿ ಸಿನಿಮಾಗಳ ಪೈರಸಿ ಆಗದಂತೆ ತಡೆಯುವ ಪ್ರಯತ್ನಗಳನ್ನು ಒಕ್ಕೂರಲಿನಿಂದ ಮಾಡುವ ಯೋಜನೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಶ್ಯಾಂಪೂಗೆ ಈ ವಸ್ತುವನ್ನು ಬೆರೆಸಿ ಹಚ್ಚಿದರೆ ನಯವಾದ ರೇಷ್ಮೆಯಂತಹ ಕೂದಲು ನಿಮ್ಮದಾಗುತ್ತದೆ

ಹೊಳೆಯುವ ಸೊಂಪಾದ ಕೂದಲು (hair) ನಮ್ಮದಾಗಬೇಕೆಂದು ಪ್ರತಿಯೊಬ್ಬರೂ ಬಯಸುತ್ತಾರೆ. ಇದಕ್ಕಾಗಿ ದುಬಾರಿ ಶ್ಯಾಂಪೂ, ಕಂಡೀಷನರ್‌ಗಳನ್ನು ಹಚ್ಚಿಕೊಳ್ಳುತ್ತಾರೆ. ಹೊಳೆಯುವ ಕೂದಲಿಗಾಗಿ ಕೆರಾಟಿನ್‌ನಂತಹ ಚಿಕಿತ್ಸೆಗಳ ಮೊರೆ ಹೋಗ್ತಾರೆ. ಆದ್ರೆ ಇದರಿಂದ ಯಾವುದೇ ಹೆಚ್ಚಿನ ಫಲಿತಾಂಶಗಳು ದೊರೆಯುವುದಿಲ್ಲ ಬದಲಾಗಿ ಕೂದಲು ಉದುರುವ ಸಮಸ್ಯೆ ಇನ್ನಷ್ಟು ಹೆಚ್ಚಾಗುತ್ತಾರೆ. ಹೀಗಿರುವಾಗ ಶ್ಯಾಂಪೂ ಜೊತೆ ಗ್ಲಿಸರಿನ್‌ ಸೇರಿಸಿ ಕೂದಲಿಗೆ ಹಚ್ಚಿ, ಇದು ಕೂದಲನ್ನು ರೇಷ್ಮೆಯ ಹಾಗೆ ಹೊಳೆಯುವಂತೆ ಮಾಡುವುದಲ್ಲದೆ ಕೂದಲು ಉದುರುವಿಕೆ, ತಲೆಹೊಟ್ಟು ಸಮಸ್ಯೆಗಳನ್ನು ಸಹ ನಿವಾರಿಸುತ್ತದೆ. ಹಾಗಿದ್ರೆ ಕೂದಲಿನ ಆರೈಕೆಗೆ ಗ್ಲಿಸರಿನ್‌ ಅನ್ನು ಹೇಗೆ ಬಳಸುವುದು ನೋಡೋಣ.

ಕೂದಲಿನ ಆರೈಕೆಗೆ ಗ್ಲಿಸರಿನ್:‌

ಗ್ಲಿಸರಿನ್‌ ತ್ವಚೆಯ ಆರೈಕೆಗೆ ಮಾತ್ರವಲ್ಲ ಕೂದಲಿನ ಆರೈಕೆಗೂ ಪ್ರಯೋಜನಕಾರಿ. ಹೌದು ಗ್ಲಿಸರಿನ್ ಕೂದಲಿನಲ್ಲಿ ತೇವಾಂಶವನ್ನು ಉಳಿಸಿಕೊಳ್ಳಲು, ತಲೆಹೊಟ್ಟು ಕಡಿಮೆ ಮಾಡಲು ಮತ್ತು ಕೂದಲು ಉದುರುವುದನ್ನು ತಡೆಯಲು ಸಹಾಯ ಮಾಡುತ್ತದೆ. ಅಲ್ಲದೆ ಗ್ಲಿಸರಿನ್‌ ಕೂದಲನ್ನು ಬೇರುಗಳಿಂದ ಕಂಡೀಷನ್ ಮಾಡುತ್ತದೆ, ನೆತ್ತಿಯ ಮೇಲೆ ಆರೋಗ್ಯಕರ ಕೂದಲು ಬೆಳವಣಿಗೆಗೆ ಸೂಕ್ತವಾದ ವಾತಾವರಣವನ್ನು ಸೃಷ್ಟಿಸುತ್ತದೆ ಹೀಗೆ ಇದು ನೆತ್ತಿಯ ಒಟ್ಟಾರೆ ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿ.

ಇದನ್ನೂ ಓದಿ: ದಿನಕ್ಕೆ 15 ನಿಮಿಷಗಳ ಕಾಲ ಸ್ಕಿಪ್ಪಿಂಗ್‌ ಮಾಡಿದ್ರೆ ದೇಹದಲ್ಲಿ ಏನೆಲ್ಲಾ ಬದಲಾವಣೆಗಳು ಆಗುತ್ತವೆ ಗೊತ್ತಾ?

ಕೂದಲಿನ ಆರೈಕೆಗೆ ಗ್ಲಿಸರಿನ್‌ ಬಳಸುವುದು ಹೇಗೆ?

ಸ್ವಲ್ಪ ಶ್ಯಾಂಪೂಗೆ 1 ಟೀ ಸ್ಪೂನ್‌ ಗ್ಲಿಸರಿನ್‌ ಸೇರಿಸಿ ಜೊತೆಗೆ ಅದಕ್ಕೆ ಸ್ವಲ್ಪ ನೀರನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ಈ ಗ್ಲಿಸರಿನ್‌ ಮಿಶ್ರಿತ ಶ್ಯಾಂಪೂವಿನಿಂದ ಕೂದಲನ್ನು ತೊಳೆಯಿರಿ. ಅಲ್ಲದೆ ಶಾಂಪೂ ಮಾಡಿದ ನಂತರ ನೀವು ಗ್ಲಿಸರಿನ್‌ ಅನ್ನು ಕಂಡಿಷನರ್ ರೀತಿಯಲ್ಲೂ ಬಳಸಬಹುದು. ಇದಕ್ಕಾಗಿ ಶ್ಯಾಂಪೂ ಮಾಡಿದ ನಂತರ ಇತರೆ ಕಂಡೀಷನ್‌ ಬದಲಿಗೆ ಗ್ಲಿಸರಿನ್ ನೊಂದಿಗೆ ಸ್ವಲ್ಪ ನೀರು ಬೆರೆಸಿ ನಿಮ್ಮ ಕೂದಲಿಗೆ ಹಚ್ಚಿ, ನಂತರ ತೊಳೆಯಿರಿ.  ಇದು ಕೂದಲಿಗೆ ಅಗತ್ಯವಾದ ತೇವಾಂಶ ಮತ್ತು ಪೋಷಣೆಯನ್ನು ಒದಗಿಸುತ್ತವೆ ಮತ್ತು ಕೂದಲಿನ ನೈಸರ್ಗಿಕ ಮೃದುತ್ವ ಮತ್ತು ಹೊಳಪನ್ನು ಪುನಃಸ್ಥಾಪಿಸಲು ಸಹಾಯ ಮಾಡುತ್ತವೆ. ತಲೆಹೊಟ್ಟು, ಸೀಳು ತುದಿ ಕೂದಲು, ಒಣ ಕೂದಲು ಸಮಸ್ಯೆಯನ್ನು ನಿವಾರಿಸುತ್ತದೆ. ಜೊತೆಗೆ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

ಕೂದಲಿನ ಆರೈಕೆಗೆ ಈ ಮನೆಮದ್ದುಗಳ ಜೊತೆ ಜೊತೆಗೆ ಸಾಕಷ್ಟು ನೀರು ಕುಡಿಯುವುದು, ಸಮತೋಲಿತ ಆರೋಗ್ಯಕರ ಆಹಾರವನ್ನು ಸೇವನೆ ಮಾಡುವುದು ಸಹ ಅತ್ಯಗತ್ಯವಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೂದಲು ತುಂಬಾ ಉದುರುತ್ತಿದ್ದರೆ ಶಾಂಪೂ, ಸೀರಮ್‌ ಬದಲಿಸುವ ಬದಲು ಈ ಒಂದು ಕೊರತೆಯನ್ನು ಸರಿದೂಗಿಸಿಕೊಳ್ಳಿ – Kannada News | Keratin for Hair: How Protein Helps Hair Growth

ಕೂದಲು (Hair) ಉದುರಲು ಪ್ರಾರಂಭವಾದ ತಕ್ಷಣ, ಶಾಂಪೂ, ಎಣ್ಣೆ ಅಥವಾ ಸೀರಮ್‌ಗಳನ್ನು ಬದಲಾಯಿಸಲಾಗುತ್ತದೆ. ಆದರೆ ನಿಜವಾದ ಸಮಸ್ಯೆ ಪ್ರತಿನಿತ್ಯ ಸೇವನೆ ಮಾಡುತ್ತಿರುವ ಆಹಾರದಿಂದಲೂ ಬರಬಹುದು ಎಂಬುದು ನಿಮಗೆ ತಿಳಿದಿದೆಯೇ… ಹೌದು, ಕೂದಲು ತೆಳುವಾಗಿ ಹೊಳಪು ಕಳೆದುಕೊಳ್ಳುವುದಲ್ಲದೆ, ಉದುರುವುದು ಕೇವಲ ಮಾಲಿನ್ಯದಿಂದ ಮಾತ್ರವಲ್ಲ, ಈ ಸಮಸ್ಯೆಗೆ ಪ್ರೋಟೀನ್ (Protein) ಕೊರತೆಯೂ ಕಾರಣವಾಗಿರಬಹುದು. ದೇಹ ಸಾಕಷ್ಟು ಪ್ರಮಾಣದಲ್ಲಿ ಪ್ರೋಟೀನ್ ಪಡೆಯದಿದ್ದಾಗ, ಅದು ತನ್ನ ಆದ್ಯತೆಗಳನ್ನು ಬದಲಾಯಿಸಿಕೊಳ್ಳುವ ಮೂಲಕ ಹೃದಯ ಮತ್ತು ಮೆದುಳಿನಂತಹ ಪ್ರಮುಖ ಅಂಗಗಳಿಗೆ ಪ್ರೋಟೀನ್ ಕಳುಹಿಸಿ, ಕೂದಲಿನ ಬೆಳವಣಿಗೆಯನ್ನು ನಿಲ್ಲಿಸುತ್ತದೆ. ಈ ಆಂತರಿಕ ಪೌಷ್ಟಿಕಾಂಶದ ಕೊರತೆಯನ್ನು ಸರಿಯಾಗಿ ಗುರುತಿಸಿ, ಆಹಾರದ ಮೂಲಕ ಕೂದಲನ್ನು ಮತ್ತೆ ಬಲಪಡಿಸಿಕೊಳ್ಳುವುದು ಇಂದಿನ ದಿನಗಳಲ್ಲಿ ಬಹಳ ಮುಖ್ಯವಾಗಿದೆ. ಹಾಗಾದರೆ ಪ್ರೋಟೀನ್ ಕೊರತೆಯಿಂದ ಏನೆಲ್ಲಾ ಆಗುತ್ತದೆ, ದೇಹಕ್ಕೆ ಎಷ್ಟು ಪ್ರಮಾಣದಲ್ಲಿ ಪ್ರೋಟೀನ್ ಬೇಕಾಗುತ್ತದೆ ಮತ್ತು ಕೂದಲು ಉದುರದಂತೆ ಕಾಪಾಡಿಕೊಳ್ಳಲು ಯಾವ ರೀತಿಯ ಆಹಾರಗಳನ್ನು ಸೇವನೆ ಮಾಡಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಪ್ರೋಟೀನ್ ಕೊರತೆಯಿಂದ ಕೂದಲಿನಲ್ಲಿ ಆಗುವಂತಹ ಬದಲಾವಣೆಗಳು:

  • ಕೂದಲು ಬೆಳೆಯುವುದಕ್ಕೆ ತುಂಬಾ ಸಮಯ ತೆಗೆದುಕೊಳ್ಳುತ್ತದೆ.
  • ಉಗುರುಗಳು ಸುಲಭವಾಗಿ ಮುರಿಯುತ್ತವೆ.
  • ಕೂದಲು ತೆಳುವಾಗುವುದು ನೆತ್ತಿಯ ಮಧ್ಯದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.
  • ಕೂದಲು ಹೊಳಪು ಕಳೆದುಕೊಂಡು ಹುಲ್ಲಿನಂತೆ ನಿರ್ಜಿವವಾಗುತ್ತದೆ.

ಎಷ್ಟು ಪ್ರಮಾಣದಲ್ಲಿ ಪ್ರೋಟೀನ್ ಸೇವನೆ ಮಾಡಬೇಕು?

ಸಾಮಾನ್ಯವಾಗಿ, ವಯಸ್ಕನು ದೇಹದ ತೂಕದ ಪ್ರತಿ ಕಿಲೋಗ್ರಾಂಗೆ 0.8 ರಿಂದ 1 ಗ್ರಾಂ ಪ್ರೋಟೀನ್ ಸೇವಿಸಬೇಕು. ಉದಾಹರಣೆಗೆ, 60 ಕೆಜಿ ತೂಕವಿರುವ ವ್ಯಕ್ತಿ ದಿನಕ್ಕೆ 50 ರಿಂದ 60 ಗ್ರಾಂ ಪ್ರೋಟೀನ್ ಸೇವನೆ ಮಾಡಬೇಕು. ಜೊತೆಗೆ ಹೆಚ್ಚಿನ ಕಾರ್ಬೋಹೈಡ್ರೇಟ್ ಸೇವನೆ ಅನೇಕರಲ್ಲಿ ಪ್ರೋಟೀನ್ ಕೊರತೆಗೆ ಕಾರಣವಾಗುತ್ತದೆ ಎಂಬುದನ್ನು ಮರೆಯಬಾರದು.

ಇದನ್ನೂ ಓದಿ: 40 ವರ್ಷ ದಾಟಿದ ಮಹಿಳೆಯರಲ್ಲಿ ಕೂದಲು ಉದುರುವಿಕೆಯ ಸಮಸ್ಯೆ ಕಾಣಿಸಿಕೊಳ್ಳಲು ಕಾರಣವೇ ಇದು!

ಕೂದಲಿಗೆ ಉತ್ತಮವಾದ ಪ್ರೋಟೀನ್ ಭರಿತ ಆಹಾರಗಳು:

  • ಮೊಟ್ಟೆಗಳು: ಇವು ಪ್ರೋಟೀನ್, ಬಯೋಟಿನ್ ಮತ್ತು ಸಲ್ಫರ್‌ ಅಂಶಗಳಿಂದ ಸಮೃದ್ಧವಾಗಿವೆ.
  • ಪನೀರ್ ಮತ್ತು ಟೋಫು: ಇವು ಸಸ್ಯಾಹಾರಿಗಳಿಗೆ ಉತ್ತಮ ಆಯ್ಕೆಗಳಾಗಿವೆ.
  • ದ್ವಿದಳ ಧಾನ್ಯಗಳು: ಪ್ರತಿದಿನ ದ್ವಿದಳ ಧಾನ್ಯಗಳನ್ನು ಸೇವಿಸುವುದರಿಂದ ಅಮೈನೋ ಆಮ್ಲಗಳು ದೊರೆಯುತ್ತವೆ.
  • ಮೊಸರು: ಗ್ರೀಕ್ ಮೊಸರು ಸಾಮಾನ್ಯ ಮೊಸರಿಗಿಂತ ಹೆಚ್ಚಿನ ಪ್ರೋಟೀನ್ ಅಂಶವನ್ನು ಹೊಂದಿರುತ್ತದೆ.
  • ಮೀನು ಮತ್ತು ಕೋಳಿ: ಇವುಗಳಿಂದ ಸುಲಭವಾಗಿ ಪ್ರೋಟೀನ್‌ ಅಂಶವನ್ನು ಪಡೆಯಬಹುದು.

ಇಷ್ಟು ಮಾತ್ರವಲ್ಲ, ಈ ವಿಷಯದಲ್ಲಿ ನಿಮ್ಮ ಜೀರ್ಣಶಕ್ತಿಯೂ ಮುಖ್ಯವಾಗುತ್ತದೆ. ಏಕೆಂದರೆ ಪ್ರೊಟೀನ್ ಸೇವನೆ ಮಾಡುವುದು ಮಾತ್ರವಲ್ಲ, ದೇಹದಿಂದ ಅದರ ಹೀರಿಕೊಳ್ಳುವಿಕೆಯೂ ಸಹ ಮುಖ್ಯವಾಗುತ್ತದೆ. ನಿಮಗೆ ಗ್ಯಾಸ್, ಆಮ್ಲೀಯತೆ ಅಥವಾ ಜೀರ್ಣಕಾರಿ ಸಮಸ್ಯೆಗಳಿದ್ದರೆ, ನೀವು ಸೇವಿಸುವ ಪ್ರೋಟೀನ್ ಸರಿಯಾಗಿ ಹೀರಲ್ಪಡದಿರಬಹುದು. ಆದ್ದರಿಂದ, ಕೂದಲಿನ ಆರೋಗ್ಯವನ್ನು ಉತ್ತೇಜಿಸಲು, ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಿಕೊಳ್ಳುವುದು ಕೂಡ ಮುಖ್ಯವಾಗಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Makar Sankranti 2026: ಮಕರ ಸಂಕ್ರಾಂತಿ ಯಾವಾಗ? ಸುಗ್ಗಿ ಹಬ್ಬದ ಸಂಪ್ರದಾಯ ಮತ್ತು ಮಹತ್ವ ತಿಳಿಯಿರಿ – Kannada News | Makar Sankranti 2026: Harvest Festival, Rituals and Auspicious Timings

ಸೂರ್ಯನು ಉತ್ತರ ದಿಕ್ಕಿಗೆ ಚಲಿಸುತ್ತಿದ್ದಂತೆ ಹಬ್ಬದ ಋತು ಪ್ರಾರಂಭವಾಗುತ್ತದೆ. ಇದು ಜನವರಿ 14 ರಂದು ಆಚರಿಸಲಾಗುವ ಶುಭ ಮಕರ ಸಂಕ್ರಾಂತಿಯೊಂದಿಗೆ ಪ್ರಾರಂಭವಾಗುತ್ತದೆ. ದೇಶಾದ್ಯಂತ ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ಆದರೆ, ಹಬ್ಬವನ್ನು ವಿಭಿನ್ನ ಹೆಸರುಗಳು ಮತ್ತು ವಿಧಾನಗಳೊಂದಿಗೆ ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿ ಹಬ್ಬವು ಕತ್ತಲೆಯಿಂದ ಬೆಳಕಿಗೆ, ಶೀತದಿಂದ ಶಕ್ತಿಗೆ ಪರಿವರ್ತನೆಯ ಸಮಯವನ್ನು ಸೂಚಿಸುತ್ತದೆ.

ಧನು ರಾಶಿಯಿಂದ ಸೂರ್ಯ ಮಕರ ರಾಶಿಗೆ ಪ್ರವೇಶಿಸುವ ಹಬ್ಬ ಇದು. ಸಂಕ್ರಾಂತಿ ಕೇವಲ ಹಬ್ಬವಲ್ಲ, ಪ್ರಕೃತಿಯಲ್ಲಿನ ಬದಲಾವಣೆಗಳ ಸಂಕೇತವೂ ಆಗಿದೆ. ಭಾರತೀಯ ಸಂಪ್ರದಾಯದಲ್ಲಿ, ಇದು ಬಹಳ ಶುಭ ಸಮಯ. ಕೈಯಲ್ಲಿ ಹೊಸ ಬೆಳೆ ಇದೆ. ಎಲ್ಲಾ ರೈತರು ಸಂತೋಷವಾಗಿದ್ದಾರೆ. ಮನೆ ಧಾನ್ಯಗಳ ರಾಶಿಯಿಂದ ತುಂಬಿರುತ್ತದೆ. ಅದಕ್ಕಾಗಿಯೇ, ಮಕರ ಸಂಕ್ರಾಂತಿಯು ಎಲ್ಲ ರೀತಿಯಲ್ಲೂ ಸಂತೋಷವನ್ನು ತರುತ್ತದೆ, ಹೆಚ್ಚಾಗಿ ಎಳ್ಳು ಮತ್ತು ಬೆಲ್ಲದಿಂದ ಮಾಡಿದ ಸಿಹಿ ತಿನಿಸುಗಳಿಂದ ಹಿಡಿದು, ಮನೆಯ ಮುಂದೆ ರಂಗೋಲಿ, ಸಿಹಿತಿಂಡಿಗಳು, ಆಕಾಶದಲ್ಲಿ ಹಾರುವ ವರ್ಣರಂಜಿತ ಗಾಳಿಪಟಗಳವರೆಗೆ ದೇಶದ ಪ್ರತಿಯೊಂದು ಭಾಗಗಳಲ್ಲಿ ವಿಭಿನ್ನವಾಗಿ ಆಚರಿಸಲಾಗುತ್ತದೆ.

ಸಂಕ್ರಾಂತಿ ಹಬ್ಬವು ಭಾರತದಾದ್ಯಂತ 2-4 ದಿನಗಳವರೆಗೆ ಆಚರಿಸಲಾಗುವ ಸುಗ್ಗಿ ಹಬ್ಬವಾಗಿದ್ದು, ಪ್ರತಿ ದಿನಕ್ಕೂ ಅದರದೇ ಆದ ವಿಶಿಷ್ಟ ಹೆಸರುಗಳು ಮತ್ತು ಸಂಪ್ರದಾಯಗಳಿವೆ. ಕರ್ನಾಟಕದ ಬಯಲುನಾಡು ಪ್ರದೇಶಗಳಲ್ಲಿ ಇದನ್ನು ಭೋಗಿ, ಸಂಕ್ರಾಂತಿ (ಸಂಕ್ರಮಣ), ಮತ್ತು ಕಣುಮ/ಕರಿ ಎಂದು ಮೂರು ದಿನಗಳ ಕಾಲ ಆಚರಿಸುತ್ತಾರೆ, ಮೊದಲ ದಿನ ಹೊಸ ಬೆಳೆ ಪೂಜೆ, ಎರಡನೇ ದಿನ ಎಳ್ಳು-ಬೆಲ್ಲ ವಿನಿಮಯ ಮತ್ತು ಗಾಳಿಪಟ ಹಾರಿಸುವುದು, ಮೂರನೇ ದಿನ ಜಾನುವಾರುಗಳ ಪೂಜೆ ಮಾಡುವ ಸಂಪ್ರದಾಯವಿದೆ.

ಇದನ್ನೂ ಓದಿ: ಮನೆಯಲ್ಲಿ ತಪ್ಪಿಯೂ ಈ ಜಾಗದಲ್ಲಿ ಹಣ ಇಡಬೇಡಿ, ಸಾಲ ಹೆಚ್ಚಾಗಬಹುದು

ಪಂಚಾಂಗದ ಪ್ರಕಾರ, ಜನವರಿ 14 ರಂದು ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಅದು ಮಧ್ಯಾಹ್ನ 3:13 ರಿಂದ ಸಂಜೆ 5:45 ರವರೆಗೆ ಇರುತ್ತದೆ. (ಅವಧಿ: 2 ಗಂಟೆ 32 ನಿಮಿಷಗಳು) ಇಲ್ಲದಿದ್ದರೆ, ಮಕರ ಸಂಕ್ರಾಂತಿಯ ಮಹಾ ಶುಭ ಅವಧಿ ಮಧ್ಯಾಹ್ನ 3:13 ರಿಂದ ಸಂಜೆ 4:58 ರವರೆಗೆ ಇರುತ್ತದೆ. ಪವಿತ್ರ ಸ್ನಾನ, ಸೂರ್ಯನಿಗೆ ನೈವೇದ್ಯ, ದಾನ, ಭಕ್ತಿ ಆಚರಣೆಗಳು ಮತ್ತು ಉಪವಾಸ ಮುರಿಯುವುದು ಈ ಸಮಯದಲ್ಲಿ ಮಾತ್ರ ಮಾಡಬೇಕು ಎಂದು ವಿದ್ವಾಂಸರು ಹೇಳುತ್ತಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಿಲೀಸ್​​ ವೇಳೆ ಕೋರ್ಟ್ ಮೆಟ್ಟಿಲು ಹತ್ತಿದ ‘ಜನ ನಾಯಗನ್’ ಟೀಂ; ಆಗಿದೆ ದೊಡ್ಡ ಸಮಸ್ಯೆ – Kannada News | Jana Nayagan Censor Trouble: Vijay’s Film Release in Doubt, High Court Approached

ಎಲ್ಲವೂ ಅಂದುಕೊಂಡಂತೆ ನಡೆದರೆ ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ (Jana Nayagan) ಸಿನಿಮಾ ಜನವರಿ 9ರಂದು ರಿಲೀಸ್ ಆಗಲಿದೆ. ಈ ವಾಕ್ಯವನ್ನು ಹೇಳಲು ಒಂದು ಕಾರಣವೂ ಇದೆ. ಸದ್ಯ ‘ಜನ ನಾಯಗನ್’ ತಂಡಕ್ಕೆ ಸೆನ್ಸಾರ್ ಸಮಸ್ಯೆ ಆಗಿದೆ. ಡಿಸೆಂಬರ್ 19ರಂದು ಸೆನ್ಸಾರ್ ತಂಡ ಸಿನಿಮಾ ವೀಕ್ಷಿಸಿದೆ. ಸಿನಿಮಾ ರಿಲೀಸ್ ಹತ್ತಿರವಾದರೂ ಇನ್ನೂ ಪ್ರಮಾಣಪತ್ರ ಸಿಕ್ಕಿಲ್ಲ. ಈ ವಿಷಯ ಚರ್ಚೆ ಹುಟ್ಟುಹಾಕಿದೆ. ಇದನ್ನು ಪ್ರಶ್ನಿಸಿ ತಂಡದವರು ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ.

ರಾಜಕೀಯ ಕಥಾ ಹಂದರದ ಕಥೆ, ಧರ್ಮದ ವಿಷಯಗಳ ಬಗ್ಗೆ ಸಿನಿಮಾ ಮಾಡುವಾಗ ಹೆಚ್ಚು ಎಚ್ಚರಿಕೆ ಇರಬೇಕು. ಒಂದು ದೃಶ್ಯ, ಡೈಲಾಗ್ ಸಮಾಜದಲ್ಲಿ ಕಾಡ್ಗಿಚ್ಚು ಹೊತ್ತಿಸಬಹುದು. ಹೀಗಾಗಿ, ಈ ರೀತಿಯ ಸಿನಿಮಾಗಳನ್ನು ಸೆನ್ಸಾರ್ ಮಂಡಳಿಯವರು ಹೆಚ್ಚು ಎಚ್ಚರಿಕೆಯಿಂದ ವೀಕ್ಷಿಸುತ್ತಾರೆ. ‘ಜನ ನಾಯಗನ್’ ಸಿನಿಮಾ ವೀಕ್ಷಿಸಿದ ಸೆನ್ಸಾರ್ ಮಂಡಳಿ ಕೆಲವು ದೃಶ್ಯಗಳಿಗೆ ಕತ್ತರಿ ಹಾಕಲು ಸೂಚಿಸಿದೆ. ಕೆಲವು ಪದಗಳಿಗೆ ಮ್ಯೂಟ್ ಮಾಡುವಂತೆ ನಿರ್ದೇಶಿಸಿದೆ.

ಈ ಬದಲಾವಣೆಗಳನ್ನು ಮಾಡಿ ತಂಡದವರು ಸಿನಿಮಾನ ಸೆನ್ಸಾರ್ ಮಂಡಳಿಗೆ ಸಲ್ಲಿಕೆ ಮಾಡಿದ್ದಾರೆ. ಆದರೆ, ಅವರ ಕಡೆಯಿಂದ ಸೆನ್ಸಾರ್ ಪತ್ರ ಸಿಕ್ಕಿಲ್ಲ. ಸೆನ್ಸಾರ್ ಪತ್ರ ಇಲ್ಲದೆಯೇ ಸಿನಿಮಾ ರಿಲೀಸ್ ಮಾಡಲು ಸಾಧ್ಯವಿಲ್ಲ. ರಿಲೀಸ್​​ಗೆ ಇನ್ನು ಕೆಲವೇ ದಿನ ಬಾಕಿ ಇದೆ. ಹೀಗಾಗಿ, ತಂಡದವರು ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದೆ.

ಈಗಾಗಲೇ ಏಕ ಪರದೆ ಚಿತ್ರಮಂದಿರಗಳಿಗೆ ಬುಕಿಂಗ್ ಆರಂಭಿಸಲಾಗಿದೆ. ಬೆಂಗಳೂರಿನಲ್ಲಿ ಏಕಪರದೆಗಳಲ್ಲಿ ಮುಂಜಾನೆ ಶೋಗೆ ಸಾವಿರ ರೂಪಾಯಿ ಟಿಕೆಟ್ ದರ ನಿಗದಿ ಮಾಡಲಾಗಿದೆ. ಆದಾಗ್ಯೂ ಟಿಕೆಟ್ ಸೋಲ್ಡ್​ ಔಟ್ ಆಗಿದೆ. ಇದು ಚರ್ಚೆಗೆ ಕಾರಣ ಆಗಿದೆ. ಇಷ್ಟು ದುಬಾರಿ ಟಿಕೆಟ್ ದರ ನಿಗದಿ ಮಾಡಿದ ಬಗ್ಗೆಯೂ ಪ್ರಶ್ನೆ ಎದುರಾಗಿದೆ.

ಇದನ್ನೂ ಓದಿ: ‘ಜನ ನಾಯಗನ್’ ರಿಲೀಸ್​ಗೆ ಸಂಕಷ್ಟ? ಇನ್ನೂ ಸಿಕ್ಕಿಲ್ಲ ಸೆನ್ಸಾರ್ ಪತ್ರ

ಎಚ್​. ವಿನೋದ್ ನಿರ್ದೇಶನ ಇರುವ ಈ ಸಿನಿಮಾದಲ್ಲಿ ವಿಜಯ್ ಮುಖ್ಯ ಭೂಮಿಕೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇದು ಅವರ ಕೊನೆಯ ಸಿನಿಮಾ ಆಗಲಿದೆ. ಪೂಜಾ ಹೆಗ್ಡೆ, ಮಮಿತಾ ಬೈಜು ಮೊದಲಾದವರು ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಜೂಲಿಯನ್ ಅಸ್ಸೆಂಜ್ ಬಿಡುಗಡೆಗೆ ಕಾರಣವಾದ ಪ್ರಸಿದ್ಧ ವಕೀಲ ಬ್ಯಾರಿ ಪೊಲಾಕ್ ಈಗ ನಿಕೋಲಸ್​ರನ್ನೂ ಬಿಡಿಸ್ತಾರಾ? – Kannada News | Nicolas Maduro’s Defense: Barry Pollack, The Man Who Freed Julian Assange

ವಾಷಿಂಗ್ಟನ್, ಜನವರಿ 06: ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ(Nicolas Maduro)
ಈಗ ಅಮೆರಿಕದ ವಶದಲ್ಲಿದ್ದಾರೆ. ಅದಕ್ಕೂ ಮುನ್ನ ತಾಕತ್ತಿದ್ದರೆ ತನ್ನ ಹಿಡೀರಿ ಎಂದು ನಿಕೋಲಸ್ ಡೊನಾಲ್ಡ್​ ಟ್ರಂಪ್​ಗೆ ಸವಾಲು ಹಾಕಿದ್ದರು. ಸವಾಲನ್ನು ಸವಾಲಾಗಿಯೇ ಸ್ವೀಕರಿಸಿ ಅಮೆರಿಕ ಸೇನೆಯು ಕ್ಯಾರಕಾಸ್​ನಲ್ಲಿ ನಿಕೋಲಸ್ ಬಂಧಿಸುವಲ್ಲಿ ಯಶಸ್ವಿಯಾಗಿತ್ತು. ಈಗ ನಿಕೋಲಸ್ ಅಮೆರಿಕದ ವಶದಲ್ಲಿದ್ದಾರೆ.  ನಿಕೋಲಸ್​ನಷ್ಟೇ ಅವರ ವಕೀಲ ಬ್ಯಾರಿ ಪೊಲಾಕ್ ಅವರ ಬಗ್ಗೆಯೂ ಹೆಚ್ಚು ಚರ್ಚೆ ನಡೆಯುತ್ತಿದೆ. ಸಾಮಾನ್ಯ ವಕೀಲರ ಬಗ್ಗೆ ಇಷ್ಟೇಕೆ ಚರ್ಚೆ ಎಂದು ನಿಮಗೆ ಅನಿಸಬಹುದು ಆದರೆ ಅವರು ಸಾಮಾನ್ಯ ವಕೀಲರಲ್ಲ.

ಅಸಾಧ್ಯವಾದುದ್ದನ್ನು ಕೂಡ ಸಾಧ್ಯವಾಗಿಸಿ ತೋರಿಸುವ ಛಲ ಅವರಿಗಿದೆ. ಅಮೆರಿಕದ ಜೈಲಿನಿಂದ ಜೂಲಿಯನ್ ಅಸ್ಸೆಂಜ್ ಅವರ ಬಿಡುಗಡೆಗೆ ಕಾರಣರಾದ ಪ್ರಸಿದ್ಧ ವಕೀಲರಿವರು. ಇದೀಗ ಅಮೆರಿಕದಲ್ಲಿ ಮಾದಕವಸ್ತು ಭಯೋತ್ಪಾದನೆ ಮತ್ತು ಮಾದಕವಸ್ತು ಕಳ್ಳಸಾಗಣೆ ಆರೋಪಗಳನ್ನು ನಿಕೋಲಸ್ ಎದುರಿಸುತ್ತಿದ್ದಾರೆ. ಅವರ ರಕ್ಷಣೆಗೆ ಬ್ಯಾರಿ ಮುಂದಾಗಿದ್ದಾರೆ.

ನಿಕೋಲಸ್ ಮಡುರೊ ಅವರ ವಕೀಲ ಬ್ಯಾರಿ ಯಾರು?
ಅಮೆರಿಕದಲ್ಲಿ ನಿಕೋಲಸ್ ಮಡುರೊ ವಿರುದ್ಧದ ಐತಿಹಾಸಿಕ ಮತ್ತು ಪ್ರಮುಖ ಕಾನೂನು ಹೋರಾಟವು ಹೊಸ ತಿರುವು ಪಡೆದುಕೊಂಡಿದೆ. ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸ್ಸಾಂಜೆ ಅವರನ್ನು ಅಮೆರಿಕದ ಜೈಲಿನಿಂದ ಬಿಡುಗಡೆ ಮಾಡುವುದು ಅಸಾಧ್ಯವೆಂದುಕೊಂಡಿರುವಾಗ ಪೋಲಾಕ್ ಅವರು ಅಸ್ಸಾಂಜೆಯನ್ನು ಹೊರಕ್ಕೆ ತಂದಿದ್ದರು.ಈಗ ನ್ಯಾಯಾಲಯದಲ್ಲಿ ವೆನೆಜುವೆಲಾದ ಅಧ್ಯಕ್ಷ ಮಡುರೊ ಅವರ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.

ಮತ್ತಷ್ಟು ಓದಿ: Video: ವೆನೆಜುವೆಲಾದ ಅಧ್ಯಕ್ಷೀಯ ಭವನದ ಬಳಿ ಗುಂಡಿನ ದಾಳಿ, ಸ್ಫೋಟದ ಸದ್ದು

ಬ್ಯಾರಿ ಜೆ ಪೊಲಾಕ್ ವಾಷಿಂಗ್ಟನ್ ಡಿಸಿಯಲ್ಲಿ ಪ್ರಸಿದ್ಧ ವಕೀಲರಾಗಿದ್ದು, ಕಳೆದ ಮೂರು ದಶಕಗಳಿಂದ ಅಮೆರಿಕದ ಅತ್ಯಂತ ಸೂಕ್ಷ್ಮ ಮತ್ತು ವಿವಾದಾತ್ಮಕ ಪ್ರಕರಣಗಳನ್ನು ಗೆದ್ದು ಬೀಗಿದ್ದಾರೆ. ಪ್ರತಿಷ್ಠಿತ ಕಾನೂನು ಸಂಸ್ಥೆ ಹ್ಯಾರಿಸ್, ಸೇಂಟ್ ಲಾರೆಂಟ್ ಹಾಗೂ ವೆಚ್ಸ್ಲರ್‌ನಲ್ಲಿ ಪಾಲುದಾರರಾಗಿದ್ದಾರೆ ಮತ್ತು ರಾಷ್ಟ್ರೀಯ ಭದ್ರತೆ, ಅಂತಾರಾಷ್ಟ್ರೀಯ ಅಪರಾಧ ಮತ್ತು ಹೆಚ್ಚಿನ ಮಟ್ಟದ ಫೆಡರಲ್ ವಿಚಾರಣೆಗಳಲ್ಲಿ ಅನುಭವಿ. ನ್ಯಾಯಾಲಯದಲ್ಲಿ ಪ್ರಕರಣಗಳನ್ನು ಆಳವಾಗಿ ಅಧ್ಯಯನ ಮಾಡುವ ಮತ್ತು ಜಡ್ಜ್​ ಮುಂದೆ ಪರಿಣಾಮಕಾರಿಯಾಗಿ ವಾದಿಸುವ ಚಾಕಚಕ್ಯತೆ ಅವರಿಗಿದೆ.

ಪೊಲಾಕ್ ಅವರನ್ನು ಆರಿಸಿಕೊಂಡಿದ್ದೇಕೆ?
ಮಡುರೊ ವಿರುದ್ಧದ ಪ್ರಕರಣ ಸಾಮಾನ್ಯವಾದುದ್ದಲ್ಲ, ಅಮೆರಿಕದಲ್ಲಿ ಕೊಕೇನ್ ಪೂರೈಕೆ ಜಾಲವನ್ನು ರಕ್ಷಿಸಲು ಮಡುರೊ 25 ವರ್ಷಗಳ ಕಾಲ ತನ್ನ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಅಮೆರಿಕದ ಪ್ರಾಸಿಕ್ಯೂಟರ್​ಗಳ ವಾದವಾಗಿದೆ. ಪೊಲಾಕ್ ಅವರ ಅನುಭವವು ಮಡುರೊಗೆ ನಿರ್ಣಾಯಕವಾಗಿದೆ.

ನಿಕೋಲಸ್ ಪ್ರಕರಣ
ನ್ಯೂಯಾರ್ಕ್‌ನ ದಕ್ಷಿಣ ಜಿಲ್ಲಾ ನ್ಯಾಯಾಲಯದಲ್ಲಿ ಮಡುರೊ ಅವರ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ನ್ಯಾ. ಆಲ್ವಿನ್ ಹೆಲ್ಲರ್‌ಸ್ಟೈನ್ ಅಧ್ಯಕ್ಷತೆ ವಹಿಸಿದ್ದಾರೆ. ಸಿನಾಲೋವಾ ಕಾರ್ಟೆಲ್‌ನಂತಹ ಮಾದಕವಸ್ತು ಜಾಲಗಳಿಗೆ ಮಡುರೊ ಲಾಜಿಸ್ಟಿಕಲ್ ಬೆಂಬಲವನ್ನು ಒದಗಿಸಿದ್ದಾರೆ ಮತ್ತು ಮಾದಕವಸ್ತು ಕಳ್ಳಸಾಗಣೆದಾರರಿಗೆ ರಾಜತಾಂತ್ರಿಕ ಪಾಸ್‌ಪೋರ್ಟ್‌ಗಳನ್ನು ಸಹ ಒದಗಿಸಿದ್ದಾರೆ ಎಂದು ಪ್ರಾಸಿಕ್ಯೂಷನ್ ಆರೋಪಿಸಿದೆ.

ಅಮೆರಿಕದ ಬೇಹುಗಾರಿಕೆ ಕಾನೂನುಗಳ ಅಡಿಯಲ್ಲಿ ನಡೆದ ಅಸ್ಸಾಂಜೆಯವರ ಪ್ರಕರಣವನ್ನು ಬಹುತೇಕ ಅಸಾಧ್ಯವೆಂದು ಪರಿಗಣಿಸಲಾಗಿತ್ತು. ಆದಾಗ್ಯೂ, ಪೊಲಾಕ್ ಅವರ ಮಾತು ಮತ್ತು ಕಾನೂನು ತಂತ್ರವು ಅಮೆರಿಕವನ್ನು ಒಪ್ಪಂದಕ್ಕೆ ಒಪ್ಪಿಕೊಳ್ಳುವಂತೆ ಮಾಡಿತು. ಅದಕ್ಕಾಗಿಯೇ ಅಂತಾರಾಷ್ಟ್ರೀಯ ರಾಜಕೀಯದಲ್ಲಿ ಸಿಲುಕಿರುವವರು ಅವರನ್ನು ಮೊದಲ ಹಾಗೂ ಕಟ್ಟಕಡೆಯ ಭರವಸೆಯ ವಕೀಲ ಎಂದೇ ಭಾವಿಸುತ್ತಾರೆ. ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸ್ಸೆಂಜ್ ತಮ್ಮ 13 ವರ್ಷಗಳ ಕಾನೂನು ಹೋರಾಟವನ್ನು ಕೊನೆಗೊಳಿಸಿ, ಯುಎಸ್ ಜತೆ ಒಪ್ಪಂದ ಮಾಡಿಕೊಂಡು, ನ್ಯಾಯಾಲಯದಲ್ಲಿ ಬೇಹುಗಾರಿಕೆ ಪ್ರಕರಣದಲ್ಲಿ ತಪ್ಪೊಪ್ಪಿಕೊಂಡು ಬಂಧಮುಕ್ತರಾಗಿದ್ದು 2024ರ ಜೂನ್ 26ರಂದು ತಮ್ಮ ತಾಯ್ನಾಡು ಆಸ್ಟ್ರೇಲಿಯಾಗೆ ಹೋಗಿದ್ದರು. ಅವರಿಗೆ 62 ತಿಂಗಳುಗಳ ಶಿಕ್ಷೆ ವಿಧಿಸಲಾಗಿತ್ತು.

ಮಡುರೊ ಪತ್ನಿಯನ್ನು ರಕ್ಷಿಸುವವರ್ಯಾರು?
ಅಮೆರಿಕದ ನ್ಯಾಯಾಂಗ ಇಲಾಖೆಯ ಮಾಜಿ ಪ್ರಾಸಿಕ್ಯೂಟರ್ ಮಾರ್ಕ್ ಡೊನ್ನೆಲ್ಲಿ ಅವರು ಮಡುರೊ ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರ ಪ್ರಕರಣವನ್ನು ಕೈಗೆತ್ತಿಕೊಂಡಿದ್ದಾರೆ. ಇದರರ್ಥ ನಿಕೋಲಸ್ ಕುಟುಂಬವು ಅಮೆರಿಕದ ಅತ್ಯಂತ ಅನುಭವಿ ವಕೀಲರನ್ನು ಕಾನೂನು ಹೋರಾಟದಲ್ಲಿ ಕಣಕ್ಕಿಳಿಸಿದೆ.

ಜಗತ್ತಿಗೆ ಯಾಕಿಷ್ಟು ಕುತೂಹಲ?
ಇದು ಕೇವಲ ಮಾದಕವಸ್ತು ವಿಚಾರಣೆಯಲ್ಲ, ಬದಲಾಗಿ ಅಮೆರಿಕದ ಆಡಳಿತ ಬದಲಾವಣೆ ನೀತಿ, ಅಂತಾರಾಷ್ಟ್ರೀಯ ಕಾನೂನು ಮತ್ತು ಸಾರ್ವಭೌಮತ್ವದ ಪರೀಕ್ಷೆಯಾಗಿದೆ. ಈ ಪ್ರಕರಣದಲ್ಲಿ ಪೊಲಾಕ್‌ಗೆ ಕಾನೂನು ಪರಿಹಾರ ಸಿಕ್ಕರೆ, ಅದು ಅಮೆರಿಕದ ಪ್ರಾಸಿಕ್ಯೂಷನ್ ವ್ಯವಸ್ಥೆಗೆ ದೊಡ್ಡ ಹೊಡೆತವಾಗುವುದಂತೂ ಸತ್ಯ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 2:49 pm, Tue, 6 January 26

Source link

ಶಾನ್​ದಾರ್ ಶತಕದೊಂದಿಗೆ ಹೊಸ ಮೈಲಿಗಲ್ಲು ದಾಟಿದ ಸ್ಟೀವ್ ಸ್ಮಿತ್ – Kannada News | Ashes: Steve Smith brings up his 37th Test century

ಸ್ಟೀವ್ ಸ್ಮಿತ್ (Steve Smith) ಟೆಸ್ಟ್ ಕ್ರಿಕೆಟ್​​ನಲ್ಲಿ  37ನೇ ಶತಕ ಸಿಡಿಸಿದ್ದಾರೆ. ಈ ಶತಕದೊಂದಿಗೆ ಆ್ಯಶಸ್ ಸರಣಿಯಲ್ಲಿ ಸ್ಮಿತ್ ವಿಶೇಷ ಮೈಲಿಗಲ್ಲನ್ನು ದಾಟಿದ್ದಾರೆ. ಸಿಡ್ನಿ ಕ್ರಿಕೆಟ್​ ಗ್ರೌಂಡ್​ನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡವು ಮೊದಲು ಬ್ಯಾಟಿಂಗ್ ಮಾಡಿ 384 ರನ್​ ಕಲೆಹಾಕಿತು.

Source link

Bengaluru: ಡ್ರಗ್ಸ್​ ದಂಧೇಕೋರರಿಗೆ ಶಾಕ್​; 3 ಕೆ.ಜಿ. MDMA ಸೀಜ್​, ಇಬ್ಬರು ಅರೆಸ್ಟ್​

ಬೆಂಗಳೂರು, ಜನವರಿ 06: ಹೊಸ ವರ್ಷದ ಸಂಭ್ರಮದ ನಡುವೆ ಬೆಂಗಳೂರು ಪೊಲೀಸರು 3 ಕೋಟಿ ಮೌಲ್ಯದ ಎಂಡಿಎಂಎ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ. ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಸಿದ ದಾಳಿಯಲ್ಲಿ ಅಂದಾಜು 3.16 ಕೋಟಿ ರೂ. ಮೌಲ್ಯದ, 3 ಕೆ.ಜಿ. 169 ಗ್ರಾಂ ತೂಕದ ಎಂಡಿಎಂಎ ಕ್ರಿಸ್ಟಲ್ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಯದ್ ತಾರಿಕ್ ಇಕ್ಬಾಲ್, ಶೇಕ್ ಮೊಹಮ್ಮದ್ ಅರ್ಬಾಸ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರು ಬೆಂಗಳೂರು ನಿವಾಸಿಗಳಾಗಿದ್ದು, ಹೊಸ ವರ್ಷದ ಪಾರ್ಟಿಗಳಿಗೆ ಮಾದಕ ವಸ್ತುಗಳನ್ನು ಪೂರೈಸಲು ಸಿದ್ಧತೆ ನಡೆಸಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಡ್ರಗ್ಸ್‌ಗಳನ್ನು ನೈಜೀರಿಯಾ ಮೂಲದ ವ್ಯಕ್ತಿಯಿಂದ ಪಡೆದಿರುವ ಶಂಕೆ ವ್ಯಕ್ತವಾಗಿದ್ದು, ಆತನ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link