All posts by nagaraj11081993

ಶೇಂಗಾ ತಿಂದ್ರೆ ತೂಕ ಕಡಿಮೆಯಾಗುತ್ತಾ ಅಥವಾ ಹೆಚ್ಚಾಗುತ್ತಾ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ – Kannada News | How Peanuts Affect Your Weight

ಚಳಿಗಾಲದಲ್ಲಿ ಕಡಲೆಕಾಯಿ ಅಥವಾ ಶೇಂಗಾ (Peanuts) ಸೇವನೆಯನ್ನು ಯಥೇಚ್ಛವಾಗಿ ಮಾಡುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು ಎನ್ನಲಾಗುತ್ತದೆ. ಈ ವಾತಾವರಣಕ್ಕೆ ಮಾತ್ರವಲ್ಲ, ಎಲ್ಲಾ ಕಾಲಕ್ಕೂ ಇದು ಒಳ್ಳೆಯದು. ಆದರೆ ಕಡಲೆಕಾಯಿ ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆ ಎಂಬುದು ಕೆಲವರ ನಂಬಿಕೆ, ಇನ್ನು ಕೆಲವರು ಇದು ತೂಕ ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎನ್ನುತ್ತಾರೆ. ಇವೆರಡರಲ್ಲಿ ಯಾವುದು ಸತ್ಯ! ಕಡಲೆಕಾಯಿ ಅಥವಾ ಶೇಂಗಾದಲ್ಲಿರುವ ಕ್ಯಾಲೊರಿಗಳು, ತೂಕ (Weight) ಹೆಚ್ಚಾಗುವುದಕ್ಕೆ ಸಹಾಯ ಮಾಡುತ್ತದೆಯೋ ಅಥವಾ ಕಡಿಮೆ ಮಾಡುತ್ತದೆಯೋ, ಜೊತೆಗೆ ಯಾರು ಇದನ್ನು ಸೇವನೆ ಮಾಡಬಾರದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ. ಸಂಪೂರ್ಣ ಮಾಹಿತಿ ಇಲ್ಲಿದೆ.

ಶೇಂಗಾ ಸೇವನೆಯಿಂದ ತೂಕ ಕಡಿಮೆಯಾಗುತ್ತಾ ಅಥವಾ ಹೆಚ್ಚುತ್ತಾ?

ದೆಹಲಿಯ ಜಿಟಿಬಿ ಆಸ್ಪತ್ರೆಯ ಮಾಜಿ ಆಹಾರ ತಜ್ಞೆ ಡಾ. ಅನಾಮಿಕಾ ಗೌರ್ ತಿಳಿಸಿರುವ ಮಾಹಿತಿ ಅನುಸಾರ, ಶೇಂಗಾದಲ್ಲಿ ಪ್ರೋಟೀನ್ ಅಧಿಕವಾಗಿದ್ದು ಸಂಶೋಧನೆಗಳ ಪ್ರಕಾರ, ಪ್ರೋಟೀನ್ ಹೆಚ್ಚಿರುವ ಆಹಾರ ಸೇವನೆಯಿಂದ ತೂಕ ಹೆಚ್ಚಾಗುವುದಿಲ್ಲ. ಅದರಲ್ಲಿಯೂ ಕಡಲೆಕಾಯಿಯಲ್ಲಿರುವ ಸುಮಾರು 25% ಕ್ಯಾಲೊರಿಗಳು ಪ್ರೋಟೀನ್‌ನಿಂದ ಬರುತ್ತವೆ. ಸಸ್ಯ ಆಧಾರಿತ ಪ್ರೋಟೀನ್ ದೇಹವನ್ನು ಪ್ರವೇಶಿಸಿದಾಗ, ಅದು ಹೊಟ್ಟೆ ತುಂಬಿದ ಭಾವನೆಯನ್ನು ಉಂಟುಮಾಡುತ್ತದೆ. ಹೀಗಾಗಿ ಹಸಿವು ಕಡಿಮೆಯಾಗಿ, ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ. ಇದು ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಶೇಂಗಾದಲ್ಲಿ ಫೈಬರ್ ಅಂಶವಿದ್ದು ಇದು ಹೊಟ್ಟೆಗೂ ಒಳ್ಳೆಯದು. ಆದರೆ ತುಪ್ಪ ಅಥವಾ ಎಣ್ಣೆಯಲ್ಲಿ ಹುರಿದ ಕಡಲೆಕಾಯಿಯನ್ನು ತಿಂದರೆ ತೂಕ ಹೆಚ್ಚಾಗುತ್ತದೆ.

ಬೆಲ್ಲದೊಂದಿಗೆ ಶೇಂಗಾ ಸೇವನೆ ಮಾಡಿ:

ಸಾಮಾನ್ಯವಾಗಿ ಬೆಲ್ಲದೊಂದಿಗೆ ಕಡಲೆಕಾಯಿ ಅಥವಾ ಶೇಂಗಾ ತಿನ್ನುವ ಅಭ್ಯಾಸ ದೇಹಕ್ಕೆ ಸಾಕಷ್ಟು ಪ್ರಯೋಜನಕಾರಿ. ಬೆಲ್ಲದಲ್ಲಿ ಉತ್ಕರ್ಷಣ ನಿರೋಧಕಗಳಿವೆ ಮತ್ತು ಶೇಂಗಾದಲ್ಲಿ ಪ್ರೋಟೀನ್ ಇರುತ್ತದೆ. ಹಾಗಾಗಿ ಈ ಸಂಯೋಜನೆ ಆರೋಗ್ಯಕ್ಕೆ ಒಳ್ಳೆಯದು. ಆದರೆ ಕೆಲವರು ಮಾತ್ರ ಶೇಂಗಾ ತಿನ್ನುವುದನ್ನು ಕಡಿಮೆ ಮಾಡಬೇಕು. ಅಲ್ಲದೆ, ದಿನಕ್ಕೆ 25 ಗ್ರಾಂ ಗಿಂತ ಹೆಚ್ಚು ತಿನ್ನಬಾರದು.

ಇದನ್ನೂ ಓದಿ: ಸುಲಭವಾಗಿ ತೂಕ ಇಳಿಸಿಕೊಳ್ಳಲು ಬಯಸಿದರೆ ಪ್ರತಿದಿನ ಬೆಳಗ್ಗೆ ಈ ನಾಲ್ಕು ಕೆಲಸಗಳನ್ನು ಮಾಡಿ

ಶೇಂಗಾ ಯಾರಿಗೆ ಒಳ್ಳೆಯದಲ್ಲ:

  • ಮಲಬದ್ಧತೆ ಸಮಸ್ಯೆ ಇರುವವರಿಗೆ.
  • ಕಡಲೆಕಾಯಿಂದ ಅಲರ್ಜಿ ಇರುವವರಿಗೆ.
  • ತುಂಬಾ ಕಡಿಮೆ ತೂಕ ಇರುವವರಿಗೆ.
  • ಅಧಿಕ ರಕ್ತದೊತ್ತಡ ಮತ್ತು ಮೂತ್ರಪಿಂಡ ಕಾಯಿಲೆ ಇರುವ ರೋಗಿಗಳಿಗೆ ಒಳ್ಳೆಯದಲ್ಲ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿದ್ದರಾಮಯ್ಯ ವಿರುದ್ಧ ಪ್ರಲ್ಹಾದ್​​ ಜೋಶಿ ವಾಗ್ದಾಳಿ – Kannada News | Pralhad Joshi Condemns Hubballi Incident, Sparks of Siddaramaiah and Police

ಬೆಂಗಳೂರು, ಜನವರಿ 08: ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತೆಯನ್ನ ಅರೆನಗ್ನಗೊಳಿಸಿ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೇಂದ್ರ ಸಚಿವ ಪ್ರಲ್ಹಾದ್​​ ಜೋಶಿ ಪೊಲೀಸರ ನಡೆ ಮತ್ತು ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅರೆಸ್ಟ್ ಮಾಡಲು ಹೋದಾಗ ಬಿಜೆಪಿ ಕಾರ್ಯಕರ್ತೆಯೇ ಬಟ್ಟೆ ಬಿಚ್ಚಿಕೊಂಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿಕೆ ಕೊಡುತ್ತಾರೆ, ನಾಚಿಕೆ ಆಗಲ್ವಾ ನಿಮಗೆ ಎಂದಿದ್ದಾರೆ. ಇನ್ನು ಅವರು ಬಟ್ಟೆ ಬಿಚ್ಚಿವಾಗ ಪೊಲೀಸರು ಶೂಟಿಂಗ್ ಮಾಡುತ್ತಾ ನಿಂತಿದ್ದರಾ ಎಂದು ಪ್ರಶ್ನಿಸಿದ್ದಾರೆ. ಪ್ರಕರಣ ನ್ಯಾಯೋಚಿತ ತನಿಖೆ ಆಗದಿದ್ದರೆ ನಾವು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

 

Source link

ಎಷ್ಟು ಅದ್ದೂರಿಯಾಗಿದೆ ನೋಡಿ ಅಲ್ಲು ಅರ್ಜುನ್ ಹೊಸ ಮಲ್ಟಿಪ್ಲೆಕ್ಸ್ – Kannada News | Allu Arjun owned Allu Cinemas to Open New Branch In Kokapet Here is the theater Look

ಅಲ್ಲು ಅರ್ಜುನ್ ಅವರು ‘ಅಲ್ಲು ಸಿನಿಮಾಸ್’ ಹೊಂದಿದ್ದಾರೆ. ಇದರ ಹೊಸ ಶಾಖೆ ಹೈದರಾಬಾದ್​​ನ ಕೋಕಾಪೇಟೆಯಲ್ಲಿ ಆರಂಭ ಆಗುತ್ತಿದೆ. ಸಂಕ್ರಾಂತಿ ಸಂದರ್ಭದಲ್ಲಿ ಇದು ಉದ್ಘಾಟನೆ ಆಗುವ ನಿರೀಕ್ಷೆ ಇದೆ. ಈ ಥಿಯೇಟರ್ ಝಲಕ್​​ನ ಅವರು ಹಂಚಿಕೊಂಡಿದ್ದಾರೆ. ಈ ಥಿಯೇಟರ್ ಹೇಗಿದೆ ಎಂಬುದರ ವಿಡಿಯೋನ ಮೇಲೆ ನೋಡಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬಳಸಿದ ಟೀ ಪುಡಿಯನ್ನು ಎಸೆಯುವ ಬದಲು ಈ ರೀತಿ ಉಪಯೋಗಿಸಿ – Kannada News | You can reuse Leftover tea leaves in this way

ಹೆಚ್ಚಿನ ಮನೆಗಳಲ್ಲಿ ಬೆಳಗ್ಗೆ ಮತ್ತು ಸಂಜೆ ಟೀ ಮಾಡೇ ಮಾಡ್ತಾರೆ. ಮತ್ತು ಚಹಾ ಮಾಡಿದ ಬಳಿಕ ಬಳಸಿದ ಚಹಾ ಪುಡಿಯನ್ನು (tea leaves) ಕಸದ ಬುಟ್ಟಿಗೆ ಎಸೆಯುವ ತಪ್ಪನ್ನು ಸಹ ಮಾಡುತ್ತಾರೆ. ಹೀಗೆ ಎಸೆಯುವ ಬದಲು ಬಳಸಿದ ಚಹಾ ಪುಡಿಯನ್ನು ಹಲವು ರೀತಿಯಲ್ಲಿ ಮರು ಬಳಕೆ ಮಾಡಬಹುದು. ಚಹಾ ಎಲೆಗಳು ಲೆಕ್ಕವಿಲ್ಲದಷ್ಟು ಪ್ರಯೋಜನಗಳನ್ನು ಹೊಂದಿದ್ದು, ಬಳಸಿದ ಟೀ  ಪುಡಿಯನ್ನು ಹೇಗೆಲ್ಲಾ ಮರು ಬಳಕೆ ಮಾಡಬಹುದು, ಅವುಗಳಿಂದ ಏನೆಲ್ಲಾ ಉಪಯೋಗಗಳಿವೆ ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿದುಕೊಳ್ಳಿ.

ಬಳಸಿದ ಚಹಾ ಪುಡಿಯನ್ನು ಈ ರೀತಿ ಮರುಬಳಕೆ ಮಾಡಿ:

ಗಿಡಗಳಿಗೆ ಗೊಬ್ಬರ: ಬಳಸಿದ ಚಹಾ ಪುಡಿ ಸಸ್ಯಗಳಿಗೆ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಅವು ಮಣ್ಣಿಗೆ ಸಾವಯವ ಪದಾರ್ಥ ಮತ್ತು ಸ್ವಲ್ಪ ಆಮ್ಲೀಯ ಅಂಶವನ್ನು ಒದಗಿಸುತ್ತವೆ, ಇದು ಹೂಬಿಡುವ ಸಸ್ಯಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದಕ್ಕಾಗಿ ಬಳಸಿದ ಚಹಾ ಪುಡಿಯನ್ನು ಯಾವುದೇ ಹಾಲು ಅಥವಾ ಸಕ್ಕರೆ ಕಣಗಳು ಉಳಿಯದಂತೆ ನೀರಿನಿಂದ ತೊಳೆದು ಒಣಗಿಸಿ ನೇರವಾಗಿ ಮಣ್ಣಿನಲ್ಲಿ ಮಿಶ್ರಣ ಮಾಡಿ ಅಥವಾ ಗೊಬ್ಬರದೊಂದಿಗೆ ಮಿಶ್ರಣ ಮಾಡಿ ಗಿಡಗಳ ಬುಡಕ್ಕೆ ಹಾಕಿ.

ಪಾತ್ರೆಗಳನ್ನು ಸ್ವಚ್ಛಗೊಳಿಸಬಹುದು: ನಾನ್-ಸ್ಟಿಕ್ ಪಾತ್ರೆಗಳು ಸರಿಯಾಗಿ ಕ್ಲೀನ್‌ ಆಗದಿದ್ದರೆ, ಬಳಸಿದ ಚಹಾ ಪುಡಿಯನ್ನು ನೀರಿನಲ್ಲಿ ಕುದಿಸಿ ಅದಕ್ಕೆ ಸ್ವಲ್ಪ ವಿನೆಗರ್‌ ಸೇರಿಸಿ ಈ ದ್ರಾವಣವನ್ನು ನಾನ್‌ಸ್ಟಿಕ್‌ ಪಾತ್ರೆಗೆ ಸೇರಿಸಿ ಸ್ವಲ್ಪ ಹೊತ್ತು ಹಾಗೆಯೇ ಬಿಡಿ. ನಂತರ ಆ ಪಾತ್ರೆಯನ್ನು ಡಿಶ್‌ವಾಶ್‌ ಲಿಕ್ವಿಡ್‌ನಿಂದ ಸ್ವಚ್ಛಗೊಳಿಸಿ. ಇದು ಯಾವುದೇ ಹಾನಿಯಾಗದಂತೆ ನಾನ್‌ಸ್ಟಿಕ್‌ ಪಾತ್ರೆಗಳನ್ನು ಸ್ವಚ್ಛಗೊಳಿಸುತ್ತವೆ ಮತ್ತು ವಾಸನೆಯನ್ನು ತೆಗೆದುಹಾಕುತ್ತದೆ.

ಫ್ರಿಡ್ಜ್‌ ವಾಸನೆಯನ್ನು ತೆಗೆದುಹಾಕುತ್ತದೆ: ರೆಫ್ರಿಜರೇಟರ್‌ನಿಂದ ಬರುವ ಕೆಟ್ಟ ವಾಸನೆಯನ್ನು ತೆಗೆದುಹಾಕಲು ಚಹಾ ಪುಡಿ ಸಹಕಾರಿ. ಇದಕ್ಕಾಗಿ ನೀವು ಬಳಸಿದ ಚಹಾ ಪುಡಿಯನ್ನು ಚೆನ್ನಾಗಿ ತೊಳೆದು ಹತ್ತಿ ಬಟ್ಟೆಯಲ್ಲಿ ಸುತ್ತಿ ಫ್ರಿಡ್ಜ್‌ನ ಒಂದು ಮೂಲೆಯಲ್ಲಿ ಇಟ್ಟು ಬಿಡಿ. ಇದು ಫ್ರಿಡ್ಜ್‌ನಿಂದ ಬರುವ ದುರ್ವಾಸನೆಯನ್ನು ಪರಿಣಾಮಕಾರಿಯಾಗಿ ತೊಡೆದು ಹಾಕುತ್ತದೆ.

ಇದನ್ನೂ ಓದಿ: ಎಲೆಕೋಸನ್ನು ಕ್ಲೀನ್‌ ಮಾಡುವ ಸರಿಯಾದ ವಿಧಾನ ಯಾವುದು? ನೀವು ತಿಳಿಯಲೇಬೇಕಾದ ಮಾಹಿತಿಯಿದು

ಚರ್ಮಕ್ಕೆ ಪ್ರಯೋಜನಕಾರಿ: ಬಳಸಿದ ಚಹಾ ಪುಡಿ ನಿಮ್ಮ ಚರ್ಮಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿ. ನೀವು ಅವುಗಳನ್ನು ಬಳಸಿ ಎಕ್ಸ್‌ಫೋಲಿಯೇಟಿಂಗ್ ಸ್ಕ್ರಬ್ ತಯಾರಿಸಬಹುದು. ಜೊತೆಗೆ  ಬಳಸಿದ ಚಹಾ ಎಲೆಗಳನ್ನು ಪುಡಿಮಾಡಿ ಜೇನುತುಪ್ಪ, ಮೊಸರು ಅಥವಾ ನಿಂಬೆ ಸೇರಿಸಿ ಫೇಸ್‌ ಪ್ಯಾಕ್‌ ಕೂಡ ತಯಾರಿಸಬಹುದು.  ಇದಲ್ಲದೆ ಬಳಸಿದ ಚಹಾ ಪುಡಿಯನ್ನು ಬಿಸಿ ನೀರಿನಲ್ಲಿ ನೆನೆಸಿ ಅದರಲ್ಲಿ ನಿಮ್ಮ ಪಾದಗಳನ್ನು ಇಡುವುದರಿಂದ ಪಾದದ ಬಿರುಕುಗಳು ಕಡಿಮೆಯಾಗುತ್ತವೆ, ಸ್ನಾಯುಗಳು ಸಡಿಲಗೊಳ್ಳುತ್ತವೆ ಮತ್ತು ನೋವು ಕಡಿಮೆಯಾಗುತ್ತದೆ.

ನೈಸರ್ಗಿಕ ಕಂಡೀಷನರ್:‌ ಚಹಾ ಎಲೆಗಳು ಕೂದಲಿಗೆ ಪ್ರಯೋಜನಕಾರಿ. ಚಹಾ ಎಲೆಗಳು ಹೊಳಪನ್ನು ಹೆಚ್ಚಿಸುವುದಲ್ಲದೆ ಕಂಡಿಷನರ್ ಆಗಿಯೂ ಕಾರ್ಯನಿರ್ವಹಿಸುತ್ತವೆ. ಚಹಾ ತಯಾರಿಸಿದ ನಂತರ, ಉಳಿದ ಚಹಾ ಪುಡಿಯನ್ನು ಎಸೆಯುವ ಬದಲು ಅದನ್ನು ಶುದ್ಧ ನೀರಿನಿಂದ ತೊಳೆಯಿರಿ ಮತ್ತು ಜರಡಿ ಮೂಲಕ ಸೋಸಿ. ನಂತರ ಒಂದು ಪಾತ್ರೆಯಲ್ಲಿ ನೀರನ್ನು ಸೇರಿಸಿ ಅದಕ್ಕೆ ಚಹಾಪುಡಿ ಹಾಕಿ ಮತ್ತೆ ಕುದಿಸಿ. ಈ ನೀರಿನಿಂದ ನಿಮ್ಮ ಕೂದಲನ್ನು ನಿಯಮಿತವಾಗಿ ತೊಳೆಯಿರಿ. ಇದು ನಿಮ್ಮ ಕೂದಲಿಗೆ ಹೊಳಪನ್ನು ನೀಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Viral: ಬೆಂಗಳೂರು ಜೀವನ ದುಬಾರಿಯಲ್ಲ; ತಿಂಗಳ ಖರ್ಚು ವೆಚ್ಚ ಹಂಚಿಕೊಂಡ ಯುವಕ – Kannada News | Young man says life in Bangalore is not that expensive

ಬೆಂಗಳೂರು, ಜನವರಿ 08: ಈಗೇನಿದ್ದರೂ ಕೈಯಲ್ಲಿ ದುಡ್ಡಿದರೆ (money) ಮಾತ್ರ ಜೀವನ ನಡೆಸಲು ಸಾಧ್ಯ. ಬೆಂಗಳೂರು (Bengaluru) ಅಂದ್ರೆ ಎಷ್ಟು ದುಡಿದ್ರು ಸಾಕಲ್ಲ ಅನ್ನೋದು ಅನೇಕರ ಅಭಿಪ್ರಾಯ. ಆದರೆ, ಬೆಂಗಳೂರಿನಲ್ಲಿ ವಾಸಿಸುವ 24 ವರ್ಷದ ಕೇರಳಿಗನೊಬ್ಬ ತನ್ನ ಮಾಸಿಕ ಖರ್ಚು ವೆಚ್ಚದ ಬಗ್ಗೆ ಹಂಚಿಕೊಂಡಿದ್ದಾನೆ. ತಿಂಗಳಿಗೆ 27,300 ರೂ ಖರ್ಚು ಆಗುತ್ತಿದ್ದು, ಈ ನಗರವು ತುಂಬಾ ದುಬಾರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾನೆ. ಈ ರೆಡ್ಡಿಟ್ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನಾನಾ ರೀತಿಯ ಅಭಿಪ್ರಾಯಗಳು ವ್ಯಕ್ತವಾಗಿವೆ.

ಪರ್ಸನಲ್ ಫೈನಾನ್ಸ್ ಇಂಡಿಯಾ (Personalfinanceindia) ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಯುವಕನೊಬ್ಬ ತಿಂಗಳ ಖರ್ಚು ವೆಚ್ಚಗಳ ಬಗ್ಗೆ ವಿವರಿಸಿರುವುದನ್ನು ಕಾಣಬಹುದು. ಒಂಟಿಯಾಗಿ 1 ವರ್ಷ ಇಲ್ಲಿ ವಾಸಿಸಿದ ನಂತರ ನನ್ನ ಖರ್ಚುಗಳು ಇಲ್ಲಿವೆ” ಎಂಬ ಶೀರ್ಷಿಕೆಯನ್ನು ನೀಡಲಾಗಿದೆ.

ವೈರಲ್‌ ಪೋಸ್ಟ್‌ ಇಲ್ಲಿದೆ

1 Year of living alone and here are my expenses
byu/adarshhehe inpersonalfinanceindia

ನಾನು ರೂಮ್‌ಮೇಟ್‌ನೊಂದಿಗೆ 1BHK ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದೇನೆ. ಒಟ್ಟು ಬಾಡಿಗೆ 13,000 ರೂ, ಆದರೆ ರೂಮ್‌ಮೇಟ್‌ ಇರುವುದರಿಂದ ನಾನು 7000 ರೂ ನೀಡಬೇಕಾಗುತ್ತದೆ. ಹೀಗಾಗಿ ನನ್ನ ಒಟ್ಟು ಮಾಸಿಕ ಬಾಡಿಗೆ 7,000 ರೂ, ಆಹಾರ ವೆಚ್ಚ 10,800 ರೂ, ಪ್ರಯಾಣದ ವೆಚ್ಚ 1,000 ರೂ, ಊರ ಪ್ರಯಾಣದ ವೆಚ್ಚ 4,000 ರೂ, ವೈ-ಫೈ 500 ರೂ, ನೀರು (ಬಿಲ್ + ಕುಡಿಯುವ ಶುಲ್ಕ) 450 ರೂ, ಜಿಮ್ 570 ರೂ ಹಾಗೂ ಇತರೆ ಖರ್ಚು 3,000 ರೂ  ತಿಂಗಳ ಒಟ್ಟು ಖರ್ಚು 27,300 ರೂ ಆಗುತ್ತದೆ ಎಂದು ವಿವರಿಸಿದ್ದಾನೆ.

ಕೇವಲ 3 ಕಿಲೋಮೀಟರ್ ದೂರದಲ್ಲಿ ವಾಸಿಸುವ ನನ್ನ ಕೆಲ ಸ್ನೇಹಿತರು ತಿಂಗಳಿಗೆ 45,000 ರೂ ಖರ್ಚು ಮಾಡುತ್ತಾರೆ. ನನ್ನ ಸ್ನೇಹಿತರ 1BHK ಮನೆ ಬಾಡಿಗೆ 26,000 ರೂ ಆಗಿದೆ. ನಿಮ್ಮ ಜೀವನಶೈಲಿ ನಿಮ್ಮ ನಿಯಂತ್ರಣದಲ್ಲಿದ್ದರೆ ಬೆಂಗಳೂರು ಪ್ರಾಮಾಣಿಕವಾಗಿ ಹೇಳಬೇಕೆಂದರೆ ಅಷ್ಟು ದುಬಾರಿಯಲ್ಲ ಎಂದು ಹೇಳಿದ್ದಾನೆ.

ಇದನ್ನೂ ಓದಿ:2025ರಲ್ಲಿ 47 ಲಕ್ಷ ರೂ. ಖರ್ಚು ಮಾಡಿದ ಬೆಂಗಳೂರಿನ ದಂಪತಿ

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಒಬ್ಬ ಬಳಕೆದಾರ ನೀವು ತುಂಬಾ ಬುದ್ಧಿವಂತರು ಮತ್ತು ಬಜೆಟ್‌ನಲ್ಲಿ ಮನೆಯನ್ನು ಹೇಗೆ ನಡೆಸಬೇಕೆಂದು ತಿಳಿದಿದ್ದೀರಿ.. ನಿಮ್ಮನ್ನು ಅತ್ಯುತ್ತಮ ರೀತಿಯಲ್ಲಿ ಬೆಳೆಸಿದ ನಿಮ್ಮ ಪೋಷಕರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ. ಇನ್ನೊಬ್ಬರು ಖರ್ಚು ವೆಚ್ಚಗಳು ನಿಯಂತ್ರಣದಲ್ಲಿದ್ದರೆ ಬೆಂಗಳೂರು ಜೀವನ ಆರಾಮದಾಯಕ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪಕ್ಕದ ಮನೆಯವರ ಮೇಲೆ ವರದಕ್ಷಿಣೆ ಕಿರುಕುಳ ಕೇಸ್ ದಾಖಲಿಸುವಂತಿಲ್ಲ: ಕರ್ನಾಟಕ ಹೈಕೋರ್ಟ್​​ – Kannada News | IPC 498A Not Applicable to Neighbours: Karnataka High Court

ಬೆಂಗಳೂರು, ಜನವರಿ 08: ವರದಕ್ಷಿಣೆ ಕಿರುಕುಳ ಪ್ರಕರಣದ ವಿಚಾರವಾಗಿ ಕರ್ನಾಟಕ ಹೈಕೋರ್ಟ್​​ ಮಹತ್ವದ ಆದೇಶ ನೀಡಿದೆ. ಪಕ್ಕದ ಮನೆಯವರ ಮೇಲೆ 498ಎ ಅಡಿ ಕೇಸ್ ದಾಖಲಿಸುವಂತಿಲ್ಲ ಎಂದಿರುವ ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಪೀಠ, ತಮ್ಮ ಮೇಲೆ ದಾಖಲಾಗಿರುವ ಕೇಸ್​​ ರದ್ದುಪಡಿಸುವಂತೆ ಮಹಿಳೆ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯಮಾಡಿ ದೂರು ರದ್ದುಗೊಳಿಸಿದೆ. ಮುನಿರತ್ನಮ್ಮ ಎಂಬಾಕೆ ಪತಿ, ಅತ್ತೆ, ಮಾವ, ನಾದಿನಿ ಹಾಗೂ ಪಕ್ಕದ ಮನೆ ಮಹಿಳೆ ಮೇಲೆಯೂ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆಂದು ದೂರು ದಾಖಲಿಸಿದ್ದರು. ಆದರೆ 498ಎ ಅಡಿ ಸಂಬಂಧಿಗಳ ವಿರುದ್ಧ ದೂರು ದಾಖಲಿಸಬಹುದೇ ಹೊರತು, ಪಕ್ಕದ ಮನೆಯವರ ವಿರುದ್ಧ ದೂರಿಗೆ ಅವಕಾಶವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ವೈವಾಹಿಕ ವಿವಾದದಲ್ಲಿ ಪತಿ, ಪತ್ನಿ ಅಥವಾ ಇತರ ಕುಟುಂಬ ಸದಸ್ಯರ ನಡುವಿನ ವಿಷಯದಲ್ಲಿ ಪರಿಚಿತವಲ್ಲದ ವ್ಯಕ್ತಿ ಅಥವಾ ನೆರೆಹೊರೆಯವರನ್ನು IPC ಸೆಕ್ಷನ್ 498A ಅಡಿಯಲ್ಲಿ ಪ್ರಕರಣಕ್ಕೆ ಒಳಪಡಿಸಲು ಸಾಧ್ಯವಿಲ್ಲ ಎಂದು ಕೋರ್ಟ್​​ ಹೇಳಿದೆ. ಜೊತೆಗೆ ಆಶಾ ಎಂಬುವರ ವಿರುದ್ಧದ ದೂರು ರದ್ದುಪಡಿಸಿದೆ. ಆಶಾ ಅವರ ವಿರುದ್ಧ IPC ಸೆಕ್ಷನ್‌ 498A, 504, 506, 323 ಹಾಗೂ 34 ಅಡಿಯಲ್ಲಿ ಆರೋಪಿಯಾಗಿಸಲಾಗಿತ್ತು.

ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್​​ನಲ್ಲಿ ಉದ್ಯೋಗವಕಾಶ; ಸಂಶೋಧನಾ ಸಹಾಯಕ ಹುದ್ದೆಗೆ ನೇಮಕಾತಿ

ಹೈಕೋರ್ಟ್​ನಲ್ಲಿ ಕೆಲಸ ಕೊಡಿಸೋದಾಗಿ ವಂಚನೆ

ಹೈಕೋರ್ಟ್​ನಲ್ಲಿ ಕಾಯಂ ಕೆಲಸ ಕೊಡಿಸುವುದಾಗಿ ಹೇಳಿ ನಂಬಿಸಿ ಐವರಿಂದ 54 ಲಕ್ಷ ಹಣ ಪಡೆದು ವಂಚಿಸಿರುವ ಆರೋಪ ಸಂಬಂಧ 7 ಮಂದಿ ವಿರುದ್ಧ ಗಂಗಮ್ಮನಗುಡಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. 2023ರಲ್ಲಿ ಹೈಕೋರ್ಟ್​​ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಈ ವೇಳೆ ಕಾಯಂ ಕೆಲಸ ಕೊಡಿಸೋದಾಗಿ ಹೇಳಿ ಸುಮಿತ್, ಶಿವಕುಮಾರ್, ಮಹಿಮಾ, ಹರ್ಷ, ಹರ್ಷಿತಾ ಎಂಬವರಿಗೆ ಮೋಸ ಮಾಡಲಾಗಿದೆ. ಈ ಸಂಬಂಧ ಸುದರ್ಶನ್ ಆಡ್ಯಾಂತಾಯ್, ಲವಿನಾ ಜನೆಟ್ ಮೆಂಟೋರ್, ಮಹೇಂದ್ರ, ಜೈಸನ್ ಡಿಸೋಜಾ ಸೇರಿದಂತೆ 7 ಜನರ ವಿರುದ್ಧ ದೂರು ದಾಖಲಾಗಿದೆ. ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ದಾಖಲೆ ನಕಲಿ ಮಾಡಿ ದೋಖಾ ಎಸಗಲಾಗಿದೆ. ಅಲ್ಲದೆ FDA, SDA ಹಾಗೂ ಜಾರಿಕಾರ ಹುದ್ದೆಗಳಿಗೆ ಆಹ್ವಾನಿಸಿದ್ದ ಅರ್ಜಿಗಳ ದಾಖಲೆಗಳನ್ನೇ ತಿರುಚಿ ಕೆಲಸ ಕೊಡಿಸೋದಾಗಿ ವಂಚನೆ ಮಾಡಿರುವ ಬಗ್ಗೆ ಆರೋಪ ಕೇಳಿಬಂದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬೆಳಗಾವಿ ಬಾಯ್ಲರ್ ಸ್ಫೋಟ: ಚಿಕಿತ್ಸೆ ಫಲಿಸದೆ ನಾಲ್ವರು ಕಾರ್ಮಿಕರು ಸಾವು; ಮೃತರ ಸಂಖ್ಯೆ 7ಕ್ಕೆ ಏರಿಕೆ – Kannada News | Belagavi; Inamdar Sugar Factory Boiler Blast: Death Toll Rises to 7

ಬೆಳಗಾವಿ, ಜನವರಿ 08: ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮರಕುಂಬಿ ಗ್ರಾಮದ ಬಳಿಯ ಇನಾಮ್​ದಾರ್ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ ಪ್ರಕರಣಕ್ಕೆ (boiler explosion) ಸಂಬಂಧಿಸಿದಂತೆ ಚಿಕಿತ್ಸೆ ಫಲಿಸದೆ ಖಾಸಗಿ ಆಸ್ಪತ್ರೆಯಲ್ಲಿ ಇಂದು ಒಂದೇ ದಿನ ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದಾರೆ (death). ಆ ಮೂಲಕ ಮೃತಪಟ್ಟವರ ಸಂಖ್ಯೆ 7ಕ್ಕೆ ಏರಿಕೆ ಆಗಿದೆ. ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಮೃತರ ಸಂಖ್ಯೆ 7ಕ್ಕೆ ಏರಿಕೆ

ಅಕ್ಷಯ ತೋಪಡೆ, ದೀಪಕ್ ಮುನವಳ್ಳಿ, ಸುದರ್ಶನ ಬನೋಶಿ, ಬೈಲಹೊಂಗಲ ತಾಲೂಕಿನ ಅರವಳ್ಳಿ ನಿವಾಸಿ ಮಂಜುನಾಥ ಮಡಿವಾಳಪ್ಪ ಕಾಜಗಾರ್, ಗೋಕಾಕ್ ತಾಲೂಕಿನ ಗೊಡಚಿನಮಲ್ಕಿ ಗ್ರಾಮದ ನಿವಾಸಿ ಭರತೇಶ ಸಾರವಾಡಿ, ತೇರದಾಳ ಅಥಣಿ ಪಟ್ಟಣದ ನಿವಾಸಿ ಮಂಜುನಾಥ್ ತೇರದಾಳ, ಬಾಗಲಕೋಟ ಜಿಲ್ಲೆಯ ಮರೆಗುದ್ದಿ ಗ್ರಾಮದ ಗುರುಪಾದಪ್ಪ ತಮ್ಮನ್ನವರ್​​ ಮೃತ ದುರ್ದೈವಿಗಳು.

ಇದನ್ನೂ ಓದಿ: ಬೆಳಗಾವಿಯ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ, ಮೂವರು ಕಾರ್ಮಿಕರ ಸಾವು, 5 ಮಂದಿಗೆ ಗಾಯ

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮರಕುಂಬಿ ಗ್ರಾಮದ ಬಳಿಯ ಇನಾಮ್​ದಾರ್ ಸಕ್ಕರೆ ಕಾರ್ಖಾನೆಯಲ್ಲಿ ಬುಧವಾರ ಬಾಯ್ಲರ್ ಸ್ಫೋಟಗೊಂಡು ಎಂಟು ಜನರಲ್ಲಿ ಮೂವರು ಕಾರ್ಮಿಕರು ಸಾವನ್ನಪ್ಪಿದ್ದರು. ವಿಕ್ರಮ ಇನಾಮದಾರ್​​ ಎಂಬುವವರಿಗೆ ಕಾರ್ಖಾನೆ ಸೇರಿದೆ. ನಿನ್ನೆ ಕಾರ್ಖಾನೆ ವಾಲ್ ದುರಸ್ತಿ ಮಾಡುವಾಗ ವಾಲ್ ಸ್ಫೋಟಗೊಂಡು ಕುದಿಯುವ ಕಬ್ಬಿನ ಹಾಲು ಕಾರ್ಮಿಕರ ಮೈಮೇಲೆ ಬಿದ್ದಿತ್ತು. ಗಂಭೀರವಾಗಿ ಗಾಯಗೊಂಡವರನ್ನು ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚಿಕಿತ್ಸೆ ಫಲಿಸದೆ ಒಬ್ಬೊಬ್ಬರೇ ಕಾರ್ಮಿಕರು ಸಾವನ್ನಪ್ಪಿದ್ದಾರೆ.

ಸರ್ಕಾರ ಹಾಗೂ ಕಾರ್ಖಾನೆ ಆಡಳಿತ ಮಂಡಳಿ ವಿರುದ್ಧ ತೀವ್ರ ಆಕ್ರೋಶ

ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಮೃತ ಕಾರ್ಮಿಕರ ಕುಟುಂಬಸ್ಥರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರ್ಖಾನೆ ಸ್ಪಂದಿಸುತ್ತಿಲ್ಲ, ಸರ್ಕಾರ ಕೂಡ ಯಾವುದೇ ಪರಿಹಾರ ನೀಡಿಲ್ಲ ಎಂದು ಸರ್ಕಾರ ಹಾಗೂ ಕಾರ್ಖಾನೆ ಆಡಳಿತ ಮಂಡಳಿ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Apply Now: ಕೃಷಿ ಇಲಾಖೆಯಲ್ಲಿ 1100 ಮೇಲ್ವಿಚಾರಕ ಹುದ್ದೆಗಳಿಗೆ ನೇಮಕಾತಿ; ಹೀಗೆ ಅರ್ಜಿ ಸಲ್ಲಿಸಿ – Kannada News | Rajasthan Agriculture Supervisor Recruitment 2025: 1100 Posts Apply Now!

ಸರ್ಕಾರಿ ಉದ್ಯೋಗಗಳಿಗಾಗಿ ಕಾಯುತ್ತಿರುವವರಿಗೆ ಗುಡ್​ ನ್ಯೂಸ್​ ಇಲ್ಲಿದೆ. ರಾಜಸ್ಥಾನದ ಕೃಷಿ ಇಲಾಖೆಯು 1,100 ಮೇಲ್ವಿಚಾರಕ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದೆ. ರಾಜಸ್ಥಾನ ಸಿಬ್ಬಂದಿ ಆಯ್ಕೆ ಮಂಡಳಿ (RSSB) ಈ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಈ ನೇಮಕಾತಿ ಡ್ರೈವ್ 944 ನಗರ ಮತ್ತು 156 ಗ್ರಾಮೀಣ ಪ್ರದೇಶಗಳನ್ನು ಒಳಗೊಂಡಿದೆ.

ಅಧಿಕೃತ ಅಧಿಸೂಚನೆಯ ಪ್ರಕಾರ , ಆನ್‌ಲೈನ್ ಅರ್ಜಿ ಪ್ರಕ್ರಿಯೆಯು ಜನವರಿ 13 ರಂದು ಪ್ರಾರಂಭವಾಗಲಿದ್ದು, ಫೆಬ್ರವರಿ 11 ರವರೆಗೆ ಇರಲಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು recruitment.rajasthan.gov.in ಮತ್ತು sso.rajasthan.gov.in ವೆಬ್‌ಸೈಟ್‌ಗಳ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಮಾತ್ರ ಸ್ವೀಕರಿಸಲಾಗುತ್ತದೆ ಎಂದು ಮಂಡಳಿ ಸ್ಪಷ್ಟಪಡಿಸಿದೆ.

ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಶೈಕ್ಷಣಿಕ ಮತ್ತು ವಯೋಮಿತಿಗೆ ಸಂಬಂಧಿಸಿದ ಅರ್ಹತಾ ಮಾನದಂಡಗಳನ್ನು ಪೂರೈಸಬೇಕು. ಅಭ್ಯರ್ಥಿಗಳು ಕೃಷಿ/ತೋಟಗಾರಿಕೆಯಲ್ಲಿ ಬಿ.ಎಸ್ಸಿ ಪದವಿಯನ್ನು ಹೊಂದಿರಬೇಕು. ಕೃಷಿಯನ್ನು ಪ್ರಮುಖ ವಿಷಯವಾಗಿಟ್ಟುಕೊಂಡು 12 ನೇ ತರಗತಿಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಲು ಅರ್ಹರು. ಕೆಲವು ವರ್ಗಗಳಿಗೆ ರಾಜಸ್ಥಾನ ಸಿಇಟಿ ಅರ್ಹತೆಯೂ ಸಹ ಅಗತ್ಯವಿದೆ.

OMR ಮಾದರಿಯಲ್ಲಿ ಲಿಖಿತ ಪರೀಕ್ಷೆ:

ಆಯ್ಕೆ ಪ್ರಕ್ರಿಯೆಯು ಲಿಖಿತ ಪರೀಕ್ಷೆ, ನಂತರ ದಾಖಲೆ ಪರಿಶೀಲನೆ ಮತ್ತು ಅಂತಿಮವಾಗಿ ವೈದ್ಯಕೀಯ ಪರೀಕ್ಷೆಯನ್ನು ಒಳಗೊಂಡಿರುತ್ತದೆ. ಲಿಖಿತ ಪರೀಕ್ಷೆಯನ್ನು OMR ಆಧಾರಿತ ಆಫ್‌ಲೈನ್ ಮೋಡ್‌ನಲ್ಲಿ ನಡೆಸಲಾಗುತ್ತದೆ. ತಾತ್ಕಾಲಿಕ ಪರೀಕ್ಷೆಯ ದಿನಾಂಕ ಜೂನ್ 18, 2026. ಅಗತ್ಯವಿದ್ದರೆ, ಮಂಡಳಿಯು ಒಂದಕ್ಕಿಂತ ಹೆಚ್ಚು ಹಂತಗಳಲ್ಲಿ ಪರೀಕ್ಷೆಯನ್ನು ನಡೆಸಬಹುದು.

ಇದನ್ನೂ ಓದಿ: ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕ್ರೆಡಿಟ್ ಆಫೀಸರ್ ನೇಮಕಾತಿ; ಕೂಡಲೇ ಅರ್ಜಿ ಸಲ್ಲಿಸಿ

ಅರ್ಜಿ ಸಂಖ್ಯೆ ಮತ್ತು SSO ID ಅಗತ್ಯ:

ಪರೀಕ್ಷೆಗೆ ಪ್ರವೇಶ ಪತ್ರಗಳನ್ನು ಆನ್‌ಲೈನ್‌ನಲ್ಲಿ ನೀಡಲಾಗುತ್ತದೆ. ಅಭ್ಯರ್ಥಿಗಳು ತಮ್ಮ SSO ಲಾಗಿನ್ ಮತ್ತು ನೇಮಕಾತಿ ಪೋರ್ಟಲ್ ಮೂಲಕ ಅವುಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಅಭ್ಯರ್ಥಿಗಳು ತಮ್ಮ ಅರ್ಜಿ ಸಂಖ್ಯೆ ಮತ್ತು SSO ಐಡಿಯನ್ನು ಸುರಕ್ಷಿತವಾಗಿರಿಸಿಕೊಳ್ಳುವಂತೆ ಸೂಚಿಸಲಾಗಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಒಂದು ಬಾರಿ ನೋಂದಣಿ (OTR) ಶುಲ್ಕವನ್ನು ಪಾವತಿಸಬೇಕು. OTR ಶುಲ್ಕವಿಲ್ಲದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಈಗಾಗಲೇ ಸರ್ಕಾರಿ ಸೇವೆಯಲ್ಲಿರುವ ಅಭ್ಯರ್ಥಿಗಳು ತಮ್ಮ ಇಲಾಖೆಯಿಂದ ನಿರಾಕ್ಷೇಪಣಾ ಪ್ರಮಾಣಪತ್ರ (NOC) ಅನ್ನು ಸಲ್ಲಿಸಬೇಕು.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:55 pm, Thu, 8 January 26

Source link

ಬಿಜೆಪಿ ಕಾರ್ಯಕರ್ತೆಯ ಬಟ್ಟೆಬಿಚ್ಚಿ ಹಲ್ಲೆ ಪ್ರಕರಣ: ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದ ರಾಷ್ಟ್ರೀಯ ಮಹಿಳಾ ಆಯೋಗ – Kannada News | BJP Worker Disrobed by Police: NCW Orders Action, Seeks Report in 5 Days

ಹುಬ್ಬಳ್ಳಿ, ಜ.8: ಬಿಜೆಪಿ ಕಾರ್ಯಕರ್ತೆಯನ್ನ (BJP Worker) ಬಟ್ಟೆಬಿಚ್ಚಿ ಪೊಲೀಸರು ಥಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಹಿಳಾ ಆಯೋಗವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದೆ. ಈ ಬಗ್ಗೆ ಕರ್ನಾಟಕದ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಕೂಡ ಬರೆದಿದೆ. ಹುಬ್ಬಳ್ಳಿಯಲ್ಲಿ ಮಹಿಳಾ ಕಾರ್ಯಕರ್ತೆಯೊಬ್ಬರನ್ನು ಬಂಧಿಸುವ ಸಂದರ್ಭದಲ್ಲಿ ಪೊಲೀಸರು ಅವರ ಮೇಲೆ ಹಲ್ಲೆ ನಡೆಸಿ, ಬಟ್ಟೆ ಹರಿದಿರುವ ಆಕ್ಷೇಪಾರ್ಹ ವಿಡಿಯೋ ವೈರಲ್ ಆದ ಬೆನ್ನಲ್ಲೇ ಆಯೋಗವು ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದೆ. ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಶ್ರೀಮತಿ ವಿಜಯಾ ರಹಾಟ್ಕರ್ ಅವರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಇದು ಮಹಿಳೆಯ ಘನತೆ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಉಲ್ಲಂಘನೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಮೂಲಕ ರಾಷ್ಟ್ರೀಯ ಮಹಿಳಾ ಆಯೋಗವು ಕರ್ನಾಟಕದ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ತಕ್ಷಣವೇ ಎಫ್‌ಐಆರ್ ದಾಖಲಿಸಿಕೊಂಡು ಲಭ್ಯವಿರುವ ವಿಡಿಯೋ ಸಾಕ್ಷ್ಯಗಳನ್ನು ಬಳಸಿಕೊಂಡು ನಿಖರ ಹಾಗೂ ಸಮಯಬದ್ಧ ತನಿಖೆ ನಡೆಸಬೇಕು. ಕರ್ತವ್ಯ ಲೋಪ ಎಸಗಿದ ಹಾಗೂ ಮಹಿಳೆಯ ಜತೆಗೆ ಅಸಭ್ಯವಾಗಿ ವರ್ತಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಈ ಪತ್ರದಲ್ಲಿ ತಿಳಿಸಿದ್ದಾರೆ. ಸಂತ್ರಸ್ತ ಮಹಿಳೆಗೆ ಅಗತ್ಯ ವೈದ್ಯಕೀಯ ಚಿಕಿತ್ಸೆ, ಮಾನಸಿಕ ಬೆಂಬಲ, ಕಾನೂನುಬದ್ಧ ಪರಿಹಾರವನ್ನು ಒದಗಿಸಬೇಕು ಎಂದು ಹೇಳಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೈಗೊಂಡ ಕ್ರಮಗಳ ಬಗ್ಗೆ 5 ದಿನಗಳ ಒಳಗೆ ವಿವರವಾದ ವರದಿಯನ್ನು ಸಲ್ಲಿಸುವಂತೆ ಆಯೋಗವು ಕರ್ನಾಟಕ ಸರ್ಕಾರಕ್ಕೆ ಸೂಚಿಸಿದೆ.

ಕಾಂಗ್ರೆಸ್ ನಾಯಕಿ ಸೇರಿ 9 ಮಂದಿ ವಿರುದ್ಧ ಕೇಸ್:

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ಕಾಂಗ್ರೆಸ್ (Congress) ಸದಸ್ಯೆ ಸುವರ್ಣಾ ಕಲಕುಂಟ್ಲಾ, ಡೇವಿಡ್ ಸೇರಿದಂತೆ ಒಟ್ಟು 9 ಜನರ ವಿರುದ್ಧ ಕೊಲೆ ಯತ್ನ, ಜೀವ ಬೆದರಿಕೆ, ಗಲಭೆ ಸೇರಿ ಗಂಭೀರ ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ.ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್‌ 109, 115(2), 118(1), 189(2), 191(2), 74, 190 ಹಾಗೂ 351ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: BJP ಕಾರ್ಯಕರ್ತೆಯನ್ನ ವಿವಸ್ತ್ರಗೊಳಿಸಿದ್ದು ಯಾರು? ಮಹಿಳೆಯ ಹೈಡ್ರಾಮಾವೋ? ಪೊಲಿಸರ ಕ್ರೌರ್ಯವೋ?

ಪ್ರಕರಣದ ಬಗ್ಗೆ ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪರಮೇಶ್ವರ್ ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ. ಒಬ್ಬ ಪೊಲೀಸ್ ಕಮಿಷನರ್ ಪ್ರಕರಣದ ಕುರಿತು ಅಧಿಕೃತವಾಗಿ ಹೇಳಿಕೆ ನೀಡಿದ ಬಳಿಕ ಇನ್ನೇನು ಅನುಮಾನಕ್ಕೆ ಅವಕಾಶ ಇದೆ? ಪೊಲೀಸರು ಆಕೆಯನ್ನು ವಿವಸ್ತ್ರ ಮಾಡಿಲ್ಲ. ಆಕೆಯೇ ಸ್ವಯಂವಾಗಿ ಬಟ್ಟೆ ತೆಗೆದುಕೊಂಡಿದ್ದಾಳೆ ಎಂದು ಕಮಿಷನರ್ ಹೇಳಿದ್ದಾರೆ ಎಂದು ಸಚಿವ ಪರಮೇಶ್ವರ್ ಹೇಳಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಅಲೆಗಳ ವಿರುದ್ಧ ಹೋಗಲು ಸಮಯ ಬೇಕು’; ‘ಟಾಕ್ಸಿಕ್’ ಟೀಸರ್​ಗೆ ಸುದೀಪ್ ವಿಶ್ – Kannada News | Sudeep Wishes Yash on ‘Toxic’ Teaser: Sandalwood Unity Surprises Fans

ಕನ್ನಡ ಚಿತ್ರರಂಗದಲ್ಲಿ ಸ್ಟಾರ್​​ಗಳ ಮಧ್ಯೆ ಯಾವುದೂ ಸರಿ ಇಲ್ಲ, ಒಬ್ಬರಿಗೊಬ್ಬರು ಬೆಂಬಲ ಕೊಡೋದಿಲ್ಲ ಎಂಬಿತ್ಯಾದಿ ಮಾತುಗಳು ಆಗಾಗ ಕೇಳಿ ಬರುತ್ತಾ ಇರುತ್ತವೆ. ಈಗ ಕನ್ನಡ ಚಿತ್ರರಂಗದಲ್ಲಿ ಅಚ್ಚರಿಯ ಬೆಳವಣಿಗೆ ನಡೆದಿದೆ. ‘ಟಾಕ್ಸಿಕ್’ ಸಿನಿಮಾದ ಟೀಸರ್ (Toxic Teaser) ನೋಡಿದ ಸುದೀಪ್ ಅವರು ಯಶ್​​ಗೆ ವಿಶ್ ಮಾಡಿದ್ದಾರೆ. ‘ಟಾಕ್ಸಿಕ್’ ಟೀಸರ್ ಬೋಲ್ಡ್ ಎಂದವರಿಗೂ ಅವರ ಬಳಿ ಉತ್ತರವಿದೆ. ಈ ಬೆಳವಣಿಗೆ ಸ್ಯಾಂಡಲ್​​ವುಡ್ ಪಾಲಿಗೆ ಪಾಸಿಟಿವ್ ಎಂಬ ಮಾತುಗಳು ಕೇಳಿ ಬಂದಿವೆ.

ಇಂದು (ಜನವರಿ 8) ಯಶ್ ಜನ್ಮದಿನ. ಈ ವಿಶೇಷ ದಿನದಂದು ‘ಟಾಕ್ಸಿಕ್’ ಚಿತ್ರದ ಟೀಸರ್ ರಿಲೀಸ್ ಆಗಿದೆ.ಈ ಟೀಸರ್ ಬಗ್ಗೆ ಮಾಹಿತಿ ನೀಡಲು ಯಶ್ ಟ್ವೀಟ್ ಮಾಡಿದ್ದರು. ರಾಯ ಅನ್ನೋದು ಯಶ್ ಮಾಡುತ್ತಿರುವ ಪಾತ್ರದ ಹೆಸರು. ಪಾತ್ರವನ್ನು ಪರಿಚಯಿಸುವ ರೀತಿಯಲ್ಲಿ ಈ ಟೀಸರ್ ಇದೆ. ಈ ಟೀಸರ್ ಬಗ್ಗೆ ಯಶ್ ಮಾಡಿದ ಟ್ವೀಟ್​ನ ಸುದೀಪ್ ರೀಟ್ವೀಟ್ ಮಾಡಿಕೊಂಡಿದ್ದಾರೆ.

‘ಯಶ್​​ಗೆ ಶುಭಾಶಯಗಳು. ಅಲೆಗಳ ವಿರುದ್ಧ ಸಾಗಲು ಯಾವಾಗಲೂ ಸಮಯ ಬೇಕಾಗುತ್ತದೆ.ಈ ಹೊಸ ಹೆಜ್ಜೆ ನಿಮ್ಮನ್ನು ಅದೃಷ್ಟದ ಬಳಿ ಕೊಂಡೊಯ್ಯಲಿ. ನೀವು ನಿಮ್ಮ ಗುರಿಯನ್ನು ನಿರ್ಧರಿಸಿದ್ದೀರಿ’ ಎಂದು ಸುದೀಪ್ ಹೇಳಿದ್ದಾರೆ. ಈ ಟ್ವೀಟ್ ಸಾಕಷ್ಟು ವೈರಲ್ ಆಗುತ್ತಿದೆ. ಫ್ಯಾನ್ಸ್ ಅಚ್ಚರಿ ಹೊರಹಾಕಿದ್ದಾರೆ.

‘ಟಾಕ್ಸಿಕ್’ ಟೀಸರ್ ತುಂಬಾನೇ ಬೋಲ್ಡ್ ಆಗಿದೆ. ಇದನ್ನು ಅನೇಕರು ಟೀಕಿಸಿದ್ದಾರೆ. ಈ ಟೀಕೆಗಳು ಕೇಳಿ ಬಂದಿದ್ದರಿಂದಲೇ ‘ಅಲೆಗಳ ವಿರುದ್ಧ ಹೋಗಲು ಸಾಕಷ್ಟು ಸಮಯ ಬೇಕು’ ಎಂದು ಯಶ್ ಟ್ವೀಟ್ ಮಾಡಿರಬಹುದು ಎಂದು ಹೇಳಲಾಗುತ್ತಾ ಇದೆ.

ಯಶ್ ಅವರಿಗೆ ಸುದೀಪ್ ವಿಶ್ ಮಾಡಿದ್ದು ಅನೇಕರಿಗೆ ಅಚ್ಚರಿ ತಂದಿದೆ. ‘ಇದನ್ನು ನಾವು ನಿರೀಕ್ಷಿಸಿರಲಿಲ್ಲ’ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು, ‘ಇದು ನಮ್ಮ ಕಿಚ್ಚ ಸುದೀಪ್. ಯಶ್ ಹಾಗೂ ಸುದೀಪ್ ಮಧ್ಯೆ ಇರುವ ಬಾಂಡ್​​ನ ಅಭಿಮಾನಿಗಳೇ ಹಾಳು ಮಾಡಿದರು’ ಎಂದು ಕೆಲವರು ಹೇಳಿದ್ದಾರೆ.

ಇದನ್ನೂ ಓದಿ: ಹಾಲಿವುಡ್​ ರೇಂಜ್​​​ನಲ್ಲಿದೆ ‘ಟಾಕ್ಸಿಕ್​’ ಟೀಸರ್; ಎಲ್ಲರಿಗೂ ವಾರ್ನಿಂಗ್ ಕೊಟ್ಟ ‘ರಾಯ’

ಯಶ್ ಅವರು ‘ಕೆಜಿಎಫ್ 2’ ಬಳಿಕ ಒಪ್ಪಿಕೊಂಡ ಸಿನಿಮಾ ‘ಟಾಕ್ಸಿಕ್’. ಈ ಚಿತ್ರದ ಟೀಸರ್ ನೋಡಿದ ಫ್ಯಾನ್ಸ್ ಮೆಚ್ಚಿಕೊಳ್ಳುತ್ತಿದ್ದಾರೆ. ಕೆಲವರು ಟೀಸರ್ ಸಖತ್ ಬೋಲ್ಡ್ ಎನ್ನುತ್ತಿದ್ದಾರೆ. ಸಿನಿಮಾನ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link