All posts by nagaraj11081993

ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ರಾತ್ರಿಪೂರ್ತಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ

ಆನೇಕಲ್​, ಜನವರಿ 08: ಹಳೆ ದ್ವೇಷದ ಹಿನ್ನೆಲೆ ರೌಡಿಶೀಟರ್ ಗಂಗಾ ಮತ್ತು ಆತನ ಗ್ಯಾಂಗ್, ರೌಡಿಶೀಟರ್ ಕಾರ್ತಿಕ್ ಅಲಿಯಾಸ್ ಸಲಗನನ್ನು ಅಪಹರಿಸಿ ರಾತ್ರಿಪೂರ್ತಿ ಚಿತ್ರಹಿಂಸೆ ನೀಡಿದೆ. ಆನೇಕಲ್ ತಾಲೂಕಿನ ಹುಸ್ಕೂರು ಬಳಿ ಈ ಘಟನೆ ನಡೆದಿದ್ದು, ಕಾರ್ತಿಕ್‌ನನ್ನು ಕಿಡ್ನ್ಯಾಪ್ ಮಾಡುವುದಲ್ಲದೆ, ಆತನ ಬೆರಳನ್ನು ಕತ್ತರಿಸಿ ಕ್ರೂರವಾಗಿ ಹಲ್ಲೆ ಮಾಡಲಾಗಿದೆ. ಇಡೀ ರಾತ್ರಿ ಚಿತ್ರಹಿಂಸೆ ನೀಡಿದ ನಂತರ, ಗ್ಯಾಂಗ್ ಕಾರ್ತಿಕ್‌ನನ್ನು ಹುಸ್ಕೂರು ಬಳಿಯೇ ರಸ್ತೆಗೆ ಎಸೆದು ಪರಾರಿಯಾಗಿದೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ಕಾರ್ತಿಕ್‌ನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಆತನ ಸ್ಥಿತಿ ಚಿಂತಾಜನಕವಾಗಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ರೌಡಿಶೀಟರ್ ಗಂಗಾ ಮತ್ತು ಆತನ ಸಹಚರರ ಬಂಧನಕ್ಕೆ ಬಲೆ ಬೀಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಖುಲಾಯಿಸಲಿದೆಯಾ ಅದೃಷ್ಟ… ಟಿ20 ವಿಶ್ವಕಪ್​ಗೆ ಶ್ರೇಯಸ್ ಅಯ್ಯರ್ ಆಯ್ಕೆ ಸಾಧ್ಯತೆ – Kannada News | T20 World Cup 2026: Shreyas Iyer in line to replace injured Tilak Varma

ಟಿ20 ವಿಶ್ವಕಪ್​ಗೆ 15 ಸದಸ್ಯರುಗಳ ಭಾರತ ತಂಡವನ್ನು ಘೋಷಿಸಲಾಗಿದೆ. ಈ ತಂಡದಲ್ಲಿ ಸ್ಥಾನ ಪಡೆದಿದ್ದ ಟೀಮ್ ಇಂಡಿಯಾದ ಎಡಗೈ ದಾಂಡಿಗ ತಿಲಕ್ ವರ್ಮಾ ಗಾಯಗೊಂಡಿದ್ದಾರೆ. ಈ ಗಾಯದ ಕಾರಣ ಅವರು ಮುಂಬರುವ ಟಿ20 ಸರಣಿಯಲ್ಲಿ ಕಾಣಿಸಿಕೊಳ್ಳುವುದು ಅನುಮಾನ.

ಏಕೆಂದರೆ ತೊಡೆಸಂಧು ಗಾಯದ ಸಮಸ್ಯೆಗೆ ಒಳಗಾಗಿರುವ ತಿಲಕ್ ವರ್ಮಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಹೀಗಾಗಿ ನ್ಯೂಝಿಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಯ ಮೊದಲೆರಡು ಪಂದ್ಯಗಳಿಗೆ ಅಲಭ್ಯರಾಗಲಿರುವುದು ಖಚಿತವಾಗಿದೆ. ಆ ಬಳಿಕ ಸಂಪೂರ್ಣ ಫಿಟ್​ನೆಸ್ ಸಾಧಿಸಿದರೆ ಮಾತ್ರ ಅವರು ನ್ಯೂಝಿಲೆಂಡ್ ವಿರುದ್ಧದ ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಒಂದು ವೇಳೆ ನ್ಯೂಝಿಲೆಂಡ್ ವಿರುದ್ಧದ ಸರಣಿಯಲ್ಲಿ ತಿಲಕ್ ವರ್ಮಾ ಕಣಕ್ಕಿಳಿಯದಿದ್ದರೆ ಅವರನ್ನು ಟಿ20 ವಿಶ್ವಕಪ್​​ನಿಂದ ಕೈ ಬಿಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಏಕೆಂದರೆ ಟಿ20 ವಿಶ್ವಕಪ್ ಶುರುವಾಗುವುದು ಫೆಬ್ರವರಿ 7 ರಿಂದ. ಅದರೊಳಗೆ ತಿಲಕ್ ವರ್ಮಾ ಸಂಪೂರ್ಣ ಫಿಟ್​ನೆಸ್ ಸಾಧಿಸಬೇಕು.

ಇತ್ತ ನ್ಯೂಝಿಲೆಂಡ್ ವಿರುದ್ಧದ ಸರಣಿ ವೇಳೆ ಅವರು ಫಿಟ್​ನೆಸ್ ಸಾಧಿಸಲು ಸಾಧ್ಯವಾಗದೇ ಇದ್ದರೆ ಬಿಸಿಸಿಐ ಆಯ್ಕೆ ಸಮಿತಿ ಬದಲಿ ಆಟಗಾರನ ಮೊರೆ ಹೋಗಲಿದ್ದಾರೆ. ಹೀಗೆ ಬದಲಿ ಆಟಗಾರನಾಗಿ ಎಂಟ್ರಿ ಕೊಡಲು ಇತ್ತ ಶ್ರೇಯಸ್ ಅಯ್ಯರ್ ಸಜ್ಜಾಗಿದ್ದಾರೆ.

ಶ್ರೇಯಸ್ ಅಯ್ಯರ್ ಮಧ್ಯಮ ಕ್ರಮಾಂಕದ ಬ್ಯಾಟರ್. ಈಗಾಗಲೇ ಟಿ20 ಕ್ರಿಕೆಟ್​ನಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ. ಹೀಗಾಗಿ ತಿಲಕ್ ವರ್ಮಾ ನ್ಯೂಝಿಲೆಂಡ್ ವಿರುದ್ಧದ ಸರಣಿಯಿಂದ ಸಂಪೂರ್ಣವಾಗಿ ಹೊರಗುಳಿದರೆ ಶ್ರೇಯಸ್ ಅಯ್ಯರ್​ಗೆ ಚಾನ್ಸ್ ಸಿಗಬಹುದು. ಹೀಗೆ ಅದೃಷ್ಟ ಖುಲಾಯಿಸಿದರೆ ಶ್ರೇಯಸ್ ಅಯ್ಯರ್ ಮುಂಬರುವ ಟಿ20 ವಿಶ್ವಕಪ್​ನಲ್ಲೂ ತಿಲಕ್ ವರ್ಮಾ ಬದಲಿಗೆ ಕಣಕ್ಕಿಳಿಯುವುದನ್ನು ಎದುರು ನೋಡಬಹುದು.

ಟಿ20 ವಿಶ್ವಕಪ್​​​ಗೆ ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್​ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರಿಂಕು ಸಿಂಗ್.

Published On – 2:27 pm, Thu, 8 January 26

Source link

ಅವನಿಗೆ ಕೊಟ್ಟ ಮಾತು ನೆರವೇರಿಸುತ್ತೇನೆ; ಮಗನ ಡಿಢೀರ್ ಸಾವಿನಿಂದ ಜರ್ಝರಿತಗೊಂಡ ಮೈನಿಂಗ್ ಕಿಂಗ್ – Kannada News | Vedanta Chairman Anil Agarwal’s son Agnivesh dies of cardiac arrest in US

ಅನಿಲ್ ಅಗರ್ವಾಲ್ ಮತ್ತು ಮಗ ಅಗ್ನಿವೇಶ್ ಅಗರ್ವಾಲ್

ನವದೆಹಲಿ, ಜನವರಿ 8: ವೇದಾಂತ ಗ್ರೂಪ್​ನ ಛೇರ್ಮನ್ ಅನಿಲ್ ಅಗರ್ವಾಲ್ ಅವರ ಮಗ ಅಗ್ನಿವೇಶ್ ಅಗರ್ವಾಲ್ (Agnivesh Agarwal) ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 49 ವರ್ಷ ವಯಸ್ಸಾಗಿತ್ತು. ತಂದೆ ಅನಿಲ್ ಅಗರ್ವಾಲ್, ತಾಯಿ ಕಿರಣ್ ಅಗರ್ವಾಲ್ ಮತ್ತು ಸಹೋದರಿ ಪ್ರಿಯಾ ಅಗರ್ವಾಲ್ ಹೆಬ್ಬಾರ್ ಅವರನ್ನು ಅಗಲಿದ್ದಾರೆ. ವರದಿಗಳ ಪ್ರಕಾರ, ಅಮೆರಿಕದಲ್ಲಿ ಅಗ್ನಿವೇಶ್ ಹೃದಯ ಸ್ತಂಭನಗೊಂಡು (cardiac arrest) ಇಹಲೋಕ ತ್ಯಜಿಸಿದ್ದಾರೆ. ಅಗ್ನಿವೇಶ್ ನಿಧನಕ್ಕೆ ತಂದೆ ಅಗರ್ವಾಲ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವರು ಆಘಾತ ವ್ಯಕ್ತಪಡಿಸಿದ್ದಾರೆ.

ವೇದಾಂತ ಗ್ರೂಪ್​ನ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅಗ್ನಿವೇಶ್ ಅಗರ್ವಾಲ್ ಅವರು ಸ್ಕೈಯಿಂಗ್ ಆಡುವಾಗ ಅಪಘಾತಗೊಂಡು ಗಾಯಗೊಂಡಿದ್ದರು. ನ್ಯೂಯಾರ್ಕ್​ನ ಮೌಂಟ್ ಸಿನಾಯ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಗುಣಮುಖರಾಗಿದ್ದರು. ಆದರೆ, ಇದೀಗ ದಿಢೀರ್ ಆಗಿ ಕಾರ್ಡಿಯಾಕ್ ಅರೆಸ್ಟ್ ಆಗಿ ನಿಧನರಾಗಿದ್ದಾರೆ. ತಮ್ಮ ಮಗನ ಮರಣವು ತಮ್ಮ ಜೀವನದ ಅತ್ಯಂತ ಕರಾಳ ದಿನ ಎಂದು ತಂದೆ ಹಾಗೂ ಉದ್ಯಮಿ ಅನಿಲ್ ಅಗರ್ವಾಲ್ ಹೇಳಿದ್ದಾರೆ.

ಇದನ್ನೂ ಓದಿ: ಲಕ್ಷ ರೂ ಸಂಬಳ ಪಡೆಯುತ್ತಿರುವ ಪಾಕಿಸ್ತಾನೀಯರ ಸಂಖ್ಯೆ ಎಷ್ಟು ಗೊತ್ತಾ?

ಮಗನಿಗೆ ಕೊಟ್ಟ ಮಾತು…

‘ನನ್ನ ಪ್ರೀತಿಯ ಮಗ ಅಗ್ನಿವೇಶ್ ಬಹಳ ಬೇಗ ನಮ್ಮನ್ನು ಅಗಲಿದ್ದಾನೆ. ಅವನಿಗೆ ವಯಸ್ಸು ಕೇವಲ 49 ವರ್ಷ, ಉತ್ತಮ ಆರೋಗ್ಯ, ಪೂರ್ಣ ಕನಸ್ಸುಗಳನ್ನು ಹೊಂದಿದ್ದ ವ್ಯಕ್ತಿ. ಗಾಯದಿಂದ ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದ. ಕಷ್ಟಗಳು ಕಳೆದವು ಎಂದು ಭಾವಿಸಿದ್ದೆವು. ಆದರೆ, ವಿಧಿಯಾಟ ಬೇರೆಯೇ ಇತ್ತು’ ಎಂದು ಅನಿಲ್ ಅಗರ್ವಾಲ್ ನೋವು ತೋಡಿಕೊಂಡಿದ್ದಾರೆ.

ಅನಿಲ್ ಅಗರ್ವಾಲ್ ಅವರ ಟ್ವೀಟ್

ನನ್ನ ಆತ ಕೇವಲ ಮಗ ಮಾತ್ರವಲ್ಲ, ಸ್ನೇಹಿತ, ಹೆಮ್ಮೆ, ಜಗತ್ತು ಎಲ್ಲವೂ ಆಗಿದ್ದ. ಸ್ವಾವಂಬನೆಯ ಭಾರತ ನಿರ್ಮಾಣವಾಗಬೇಕೆಂಬುದು ಅಗ್ನಿಯ ಕನಸಾಗಿತ್ತು. ಒಂದು ದೇಶವಾಗಿ ನಮಗೇನೂ ಕೊರತೆ ಇಲ್ಲ, ಯಾಕೆ ನಾವು ಹಿಂದುಳಿಯಬೇಕು ಎಂದು ಆಗಾಗ್ಗೆ ಹೇಳುತ್ತಿದ್ದ. ನಾವು ಗಳಿಸುವ ಹಣದಲ್ಲಿ ಶೇ. 75ಕ್ಕಿಂತ ಹೆಚ್ಚಿನದನ್ನು ಸಮಾಜಕ್ಕೆ ಮರಳಿಸುವುದಾಗಿ ಅಗ್ನಿಗೆ ಆಶ್ವಾಸನೆ ಕೊಟ್ಟಿದ್ದೆ. ಇವತ್ತು ಆ ಭರವಸೆಯನ್ನು ಪುನರುಚ್ಚರಿಸುತ್ತೇನೆ. ಇನ್ನಷ್ಟು ಸರಳ ಜೀವನ ನಡೆಸುವ ನಿರ್ಧಾರ ಮಾಡುತ್ತೇನೆ’ ಎಂದು ಅನಿಲ್ ಅಗರ್ವಾಲ್ ಪಣ ತೊಟ್ಟಿದ್ದಾರೆ.

ಪ್ರಧಾನಿ ಸಂತಾಪ

1976ರಲ್ಲಿ ಜನಿಸಿದ ಅಗ್ನಿವೇಶ್ ಅಗರ್ವಾಲ್ ಅವರು ವೇದಾಂತದ ಅಂಗಸಂಸ್ಥೆಯಾದ ತಲ್ವಾಂಡಿ ಸಾಬೊ ಪವರ್​ನ ಛೇರ್ಮನ್ ಆಗಿದ್ದರು. ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಕೂಡ ಸಂತಾಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕದ ಕಾಫಿಗೆ ಯೂರೋಪ್​ನಲ್ಲಿ ಬಲು ಬೇಡಿಕೆ; 2025ರಲ್ಲಿ 2 ಬಿಲಿಯನ್ ಡಾಲರ್ ಮುಟ್ಟಿದ ಭಾರತದ ಒಟ್ಟಾರೆ ಕಾಫಿ ರಫ್ತು

ಅನಿಲ್ ಅಗರ್ವಾಲ್ ಅವರಿಗೆ ಇಬ್ಬರು ಮಕ್ಕಳು. ಅಗ್ನಿವೇಶ್ ಹಾಗು ಪ್ರಿಯಾ. ಆಕರ್ಷ್ ಹೆಬ್ಬಾರ್ ಎಂಬುವರನ್ನು ವಿವಾಹವಾಗಿರುವ ಪ್ರಿಯಾ ಅಗರ್ವಾಲ್ ಅವರು ವೇದಾಂತ ಗ್ರೂಪ್​ನ ಬ್ಯುಸಿನೆಸ್​ಗಳಲ್ಲಿ ಸಕ್ರಿಯವಾಗಿದ್ದಾರೆ. ಅನಿಲ್ ಅಗರ್ವಾಲ್ ಅವರ ಇಬ್ಬರು ತಮ್ಮಂದಿರು ಹಾಗೂ ಅವರ ಕುಟುಂಬ ಸದಸ್ಯರು ಗ್ರೂಪ್​ನ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ವೇದಾಂತ ಸಂಸ್ಥೆಯು ಜಿಂಕ್, ಕಾಪರ್ ಇತ್ಯಾದಿ ಮೈನಿಂಗ್ ನಡೆಸುವ ಕಂಪನಿಗಳನ್ನು ಹೊಂದಿದೆ. ಸೆಮಿಕಂಡಕ್ಟರ್ ಕ್ಷೇತ್ರಕ್ಕೂ ಅದು ಕೈ ಹಾಕಿದೆ. ತಮ್ಮ ಹೆಚ್ಚಿನ ಆದಾಯವನ್ನು ದಾನ ಮಾಡಲು ನಿರ್ಧರಿಸಿದ ಉದ್ಯಮಗಳಲ್ಲಿ ಅನಿಲ್ ಅಗರ್ವಾಲ್ ಕೂಡ ಒಬ್ಬರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ – Kannada News | Next CM DK Shivakumar Slogans Echo at KPCC Office Bangalore Amid Leadership Buzz in Karnataka Congress

ಬೆಂಗಳೂರು, ಜನವರಿ 8: ಬೆಂಗಳೂರಿನ ಕೆಪಿಸಿಸಿ ಕಚೇರಿ ಮುಂದೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಮುಂದಿನ ಮುಖ್ಯಮಂತ್ರಿ ಎಂಬ ಘೋಷಣೆಗಳು ಮೊಳಗಿವೆ. ಕಾರ್ಯಕರ್ತರು, ‘‘ಮುಂದಿನ ಸಿಎಂ ಡಿಕೆ ಶಿವಕುಮಾರ್ ಸಾಹೇಬ್ರಿಗೆ ಜೈ’’ ಎಂದು ಘೋಷಣೆ ಕೂಗಿ ಜೈಕಾರ ಹಾಕಿದ್ದಾರೆ. ಆದರೆ, ಕಾಂಗ್ರೆಸ್ ಹೈಕಮಾಂಡ್ ಡಿಕೆ ಶಿವಕುಮಾರ್ ಅವರನ್ನು ಅಸ್ಸಾಂ ಚುನಾವಣೆಗೆ ಹಿರಿಯ ವೀಕ್ಷಕರನ್ನಾಗಿ ನೇಮಿಸಿದೆ. ಈ ನಿರ್ಧಾರ, ನಾಯಕತ್ವ ಬದಲಾವಣೆಯ ಕುರಿತ ಚರ್ಚೆಗಳಿಗೆ ಪಂಚರಾಜ್ಯಗಳ ಚುನಾವಣೆ ಮುಗಿಯುವವರೆಗೆ ವಿರಾಮ ನೀಡುವ ಪರೋಕ್ಷ ಸಂದೇಶ ಎಂದು ಕಾಂಗ್ರೆಸ್ ವಲಯದಲ್ಲಿ ಚರ್ಚೆಯಾಗುತ್ತಿದೆ. ಡಿಕೆ ಶಿವಕುಮಾರ್ ಕೂಡ ‘ನಾನು ಶಿಸ್ತಿನ ಸಿಪಾಯಿ, ಪಕ್ಷ ಹೇಳಿದಂತೆ ಕೇಳುತ್ತೇನೆ’ ಎಂದು ಹೇಳಿರುವುದು ಈ ಸಂದೇಶಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ. ಕಾರ್ಯಕರ್ತರಲ್ಲಿ ಹುರುಪಿದ್ದರೂ, ಹೈಕಮಾಂಡ್ ಮಟ್ಟದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗೆ ಹಿಂಜರಿಕೆ ಸ್ಪಷ್ಟವಾಗಿ ಗೋಚರಿಸುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲಿ 6 ವರ್ಷದ ಬಾಲಕಿ ಕೊಲೆ ಪ್ರಕರಣ: ಸಿಸಿಟಿವಿ ದೃಶ್ಯದಿಂದ ಹೊರಬಿತ್ತು ಸ್ಫೋಟಕ ಸತ್ಯ – Kannada News | Bengaluru Child Abduction: Yusuf Meer Suspect in Whitefield Murder Probe

ಬೆಂಗಳೂರು, ಜ.8: ವೈಟ್ ಫೀಲ್ಡ್ ಬಳಿ ಆರು ವರ್ಷದ ಬಾಲಕಿಯನ್ನು (Bengaluru Child Abduction) ದುಷ್ಕರ್ಮಿಗಳು ಅಪಹರಿಸಿ ಕೊಲೆ ಮಾಡಿ ಮೋರಿಗೆ ಎಸೆದ ಪ್ರಕರಣ ಸಂಬಂಧಿಸಿದಂತೆ ಸ್ಫೋಟಕ ಸತ್ಯ ಹೊರ ಬಂದಿದೆ. ಪಶ್ಚಿಮ ಬಂಗಾಳ ಮೂಲದ ಇಜಾಮುಲ್‌ ಶೇಕ್‌ ಎಂಬುವವರ ಪುತ್ರಿ ಶಹಜಾನ್‌ ಕತೂನ್‌ (6) ಕೊಲೆಯಾದ ಬಾಲಕಿ. ಇದೀಗ ಈ ಬಾಲಕಿಯ ಕೊಲೆಯ ಸುತ್ತ, ಹಲವು ಅನುಮಾನಗಳು ಮೂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ನಡೆದಿದ್ದಾರೆ.ಈ ಬಾಲಕಿಯ ಕೊಲೆಗೆ ಆಕೆಯ ತಾಯಿಯೇ ನೇರ ಕಾರಣ ಎಂದು ಹೇಳಲಾಗುತ್ತದೆ. ಬಾಲಕಿ ತಾಯಿ ಜೊತೆ ಜಗಳಕ್ಕೆ ಕೊಲೆ ಮಾಡಿರಬಹುದು ಎಂಬ ಅನುಮಾನ ಮೂಡಿದೆ. ಮತ್ತೊಂದು ಕಡೆ ಬಾಲಕಿ ತಾಯಿ ಜತೆಗೆ ಜಗಳ ಮಾಡಿಲ್ಲ ಎಂದು ಬಾಲಕಿಯ ತಂದೆ ಈ ಆರೋಪವನ್ನು ತಳ್ಳಿ ಹಾಕಿದ್ದಾರೆ. ಈಗಾಗಲೇ ಪೊಲೀಸರ ತನಿಖೆಯಲ್ಲಿ ಈ ಕೊಲೆಯನ್ನು ಯೂಸುಫ್ ಮೀರ್ ಎಂಬ ವ್ಯಕ್ತಿ ಮಾಡಿದ್ದಾನೆ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಒಂದು ಸಿಸಿಟಿವಿ ದೃಶ್ಯ ಪತ್ತೆಯಾಗಿದೆ. ಆರೋಪಿ ಯೂಸುಫ್ ಮೀರ್ ಲೇಬರ್ ಶೆಡ್ಗಳಲ್ಲಿರುವ ಎಲ್ಲ ಮಕ್ಕಳ ಜೊತೆ ಚೆನ್ನಾಗಿ ಸಲುಗೆಯಿಂದ ಇದ್ದ. ಪ್ರತಿ ದಿನ ಮಕ್ಕಳಿಗೆ ತಿಂಡಿ ಬಿಸ್ಕೆಟ್ ನೀಡಿ, ಪ್ರೀತಿಯಿಂದ ಕಾಣುತ್ತಿದ್ದ ಎಂದು ಹೇಳಲಾಗಿದೆ. ಅದರೂ ಆತ ಕೊಲೆ ಮಾಡಿದ್ದಾನೆ ಎಂದು ಹೇಳಿದ್ದಾರೆ.

ಆರೋಪಿ ಯೂಸುಫ್ ಮೀರ್ ಮಗುವನ್ನು ಕರೆದೊಯ್ದರುವ ಸಿಸಿಟಿವಿ ದೃಶ್ಯ ಇದೀಗ ಪೊಲೀಸರ ಕೈಗೆ ಸಿಕ್ಕಿದೆ. ಚಾಕೊಲೇಟ್ ಕೊಡಿಸೋದಾಗಿ ಮಗುವನ್ನು ಕರೆದುಕೊಂಡು ಹೋಗಿದ್ದಾನೆ ಎಂದು ಹೇಳಲಾಗಿದೆ. ಕಳೆದ ವಾರ (ಜ.5)ಈ ಘಟನೆ ನಡೆದಿದೆ. ಆರೋಪಿ ಯೂಸೂಫ್ ಒಬ್ಬ ಸೈಕೋ ಎಂಬ ಅನುಮಾನ ಶುರುವಾಗಿದೆ. ಯೂಸೂಫ್ ಮೇಲೆ ಲೇಬರ್ ಶೆಡ್ ನಿವಾಸಿಗಳು ಆತನ ಬಗ್ಗೆ ಹಲವು ಬಾರಿ ದೂರು ನೀಡಿದ್ದಾರೆ. ಹೊಸ ವರ್ಷಕ್ಕೆಂದು ಯೂಸೂಫ್ ಊರಿಗೆ ಹೋಗಿದ್ದಾನೆ. 3 ವರ್ಷಗಳಿಂದ ಈ ಲೇಬರ್ ಶೆಡ್​​ನಲೇ ಇದ್ದ ಎಂದು ಹೇಳಲಾಗಿದೆ. ಹೆಂಡತಿ ಹಾಗೂ ಮಗುವಿನ ಜತೆಗೆ ಊರಿನಲ್ಲೇ ಶ್ವಾಶತವಾಗಿ ಇರಬೇಕು ಎಂದು ಪ್ಲಾನ್​​ ಹಾಕಿಕೊಂಡಿದ್ದ, ಆದ್ರೆ ಕೊಲೆ ಮಾಡಿ ಬೆಂಗಳೂರಿಗೆ ತಪ್ಪಿಸಿಕೊಂಡು ಬಂದಿದ್ದಾನೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಖಾಸಗಿ ಕಂಪನಿಗಳ ಅನುಕೂಲಕ್ಕಾಗಿ ಕರ್ನಾಟಕದ ಚಾಲಕರಿಗೆ ಅನ್ಯಾಯ ಮಾಡಬೇಡಿ: ವಿಮಾನ ನಿಲ್ದಾಣದ ವಿರುದ್ಧ ರಾಮಲಿಂಗಾರೆಡ್ಡಿ ಗರಂ

ಇಲ್ಲಿದೆ ನೋಡಿ ವಿಡಿಯೋ:

ಯೂಸೂಫ್ ತನ್ನ ಊರಿನಲ್ಲೂ ಕೂಡ ಒಂದು ಮಗುವನ್ನು ಕೊಲೆ ಮಾಡಿ ಬಂದಿದ್ದ ಎಂದು ಅಲ್ಲಿನ ಜನ ಹೇಳಿದ್ದಾರೆ. ಪೊಲೀಸರು ಹೇಳಿರುವ ಪ್ರಕಾರ ಆತ ಊರಿನಿಂದ ಬೆಂಗಳೂರಿಗೆ ಬಂದ ಐದು ದಿನದಲ್ಲೇ ಮತ್ತೊಂದು ಕೊಲೆ ಮಾಡಿದ್ದಾನೆ. ಮನೆಯಲ್ಲಿ ಯಾವುದೇ ಜಗಳ ಮಾಡಿಲ್ಲ, ಮಗುವನ್ನು ನಾವು ಕೊಂದಿಲ್ಲ ಎಂದು ಬಾಲಕಿ ಪಾಲಕರು ಹೇಳಿದ್ದಾರೆ. ಇದೀಗ ಸಿಸಿಟಿವಿ ಆಧಾರ ಮೇಲೆ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗಿದೆ. ಮತ್ತೊಂದೆಡೆ ಬಾಲಕಿಯ ಮರಣೋತ್ತರ ಪರೀಕ್ಷೆ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Viral Video: ಹಣ ಕೊಡಿ ಇಲ್ದಿದ್ರೆ ಟ್ರಕ್ ಪಂಕ್ಚರ್ ಮಾಡ್ತೀವಿ, ಕೈಯಲ್ಲಿ ಮೊಳೆಗಳ ಹಿಡಿದು ಹೆಂಗಸರ ಹಗಲು ದರೋಡೆ – Kannada News | Viral Video Shows Women Alleged Extortion of Truck Drivers, Police Take Cognisance

ಕಸ ಕುಡಿಸುವ ಕೈಯಲ್ಲಿ ಈ ಮಹಿಳೆಯರು ಹಿಡಿದಿರುವುದು ಪೊರಕೆಯಲ್ಲ, ಮೊಳೆ ತುಂಬಿರುವ ಕೋಲು, ಇದು ಅವರನ್ನು ರಕ್ಷಿಸಿಕೊಳ್ಳುವುದಕ್ಕೋಸ್ಕರ ಅಲ್ಲವೇ ಅಲ್ಲ, ಜನರನ್ನು ಬೆದರಿಸಿ ಸುಲಿಗೆ ಮಾಡಲು. ರಸ್ತೆಗಳಲ್ಲಿ ಟ್ರಕ್ ಚಾಲಕರನ್ನು ಬೆದರಿಸಿ ಹಣ(Money) ವಸೂಲಿ ಮಾಡುವ ಮಹಿಳೆಯರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮೊಳೆಯನ್ನು ಕೋಲಿಗೆ ಅಂಟಿಸಿಕೊಂಡು ರಸ್ತೆಯಲ್ಲಿ ನಿಂತಿರುವ ಮಹಿಳೆಯರು ಅಲ್ಲಿ ಹೋಗಿ ಬರುವ ಟ್ರಕ್ ಚಾಲಕರ ಬಳಿ ಹಣ ವಸೂಲಿ ಮಾಡಿದ್ದಾರೆ. ಎಲ್ಲರೂ ಇದು ಜನರನ್ನು ಬೆದರಿಸುವ ಮಾರ್ಗ ಎಂದೇ ಕರೆದಿದ್ದಾರೆ.

ಈ ಕ್ಲಿಪ್ ಅನ್ನು ಎಕ್ಸ್​ನಲ್ಲಿ @Khurpenchinfra ಎಂಬ ಹ್ಯಾಂಡಲ್​ನಿಂದ ಹಂಚಿಕೊಳ್ಳಲಾಗಿದೆ, ರಸ್ತೆಯಲ್ಲಿ ಟೋಲ್ ಇಲ್ಲದಿದ್ದರೂ ಇಂಥಾ ಸುಲಿಗೆ ನಿರಂತರವಾಗಿ ನಡೆಯುತ್ತಿದೆ. ಕಾನೂನು ಕಾಣೆಯಾಗಿದೆ ಎಂದು ನೆಟ್ಟಿಗರು ಬರೆದಿದ್ದಾರೆ. ಈ ಘಟನೆ ಎಲ್ಲಿ ನಡೆದಿದೆ ಎನ್ನುವ ಮಾಹಿತಿ ಇಲ್ಲ. ಈ ಘಟನೆ ಎಲ್ಲಿ ನಡೆದಿದೆ ಎಂಬುದು ತಿಳಿದುಬಂದಿಲ್ಲ, ಆದರೆ ವೀಡಿಯೊದಲ್ಲಿ ಕಾಣುವ ಟ್ರಕ್‌ಗಳಲ್ಲಿ ಒಂದು ಪಶ್ಚಿಮ ಬಂಗಾಳ ನೋಂದಣಿ ಸಂಖ್ಯೆಯನ್ನು ಹೊಂದಿರುವಂತೆ ಕಾಣುತ್ತದೆ. ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ 4.5 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿತ್ತು.

ವಿಶೇಷವಾಗಿ ಪಶ್ಚಿಮ ಬಂಗಾಳಕ್ಕೆ ಪ್ರವೇಶಿಸುವ ಟ್ರಕ್​ಗಳಲ್ಲಿ ಸುಲಿಗೆ ಮಾಡುವ ಘಟನೆ ಹೆಚ್ಚಿದೆ ಎಂದು ಕೆಲವು ಬಳಕೆದಾರರು ಆರೋಪಿಸಿದ್ದಾರೆ, ಆದರೆ ಇನ್ನು ಕೆಲವರು ಈ ವೀಡಿಯೊ ಬಿರ್ಭುಮ್ ಜಿಲ್ಲೆಯಿಂದ ಬಂದಿದೆ ಎಂದು ಹೇಳಿಕೊಂಡಿದ್ದಾರೆ.

ಮತ್ತಷ್ಟು ಓದಿ: Video: 12 ಲಕ್ಷ ರೂ ಸಾಲ ತೀರಿಸಲು ಹಣ ನೀಡಿದ ಮಗ, ಕಣ್ಣೀರು ಹಾಕಿದ ತಾಯಿ

ಹಳ್ಳಿಗಳ ಮೂಲಕ ಕಲ್ಲಿದ್ದಲು ಅಥವಾ ಗಣಿಗಾರಿಕೆ ಮಾಡಿದ ವಸ್ತುಗಳನ್ನು ಸಾಗಿಸುವ ಟ್ರಕ್‌ಗಳಿಂದ ಉಂಟಾಗುವ ಧೂಳು ಮತ್ತು ಮಾಲಿನ್ಯದಿಂದಾಗಿ ಸ್ಥಳೀಯ ನಿವಾಸಿಗಳು ಬಳಲುತ್ತಿದ್ದಾರೆ ಎಂದು ವಾದಿಸುವ ಮೂಲಕ ಬಳಕೆದಾರರ ಒಂದು ವಿಭಾಗವು ಇದನ್ನು ಸಮರ್ಥಿಸಲು ಪ್ರಯತ್ನಿಸಿದೆ.

ವಿಡಿಯೋ

ಇತರರು ಈ ಕೃತ್ಯವನ್ನು ತೀವ್ರವಾಗಿ ಖಂಡಿಸಿದರು. ಕಾರಣ ಏನೇ ಇರಲಿ, ಜೀವಗಳಿಗೆ ಬೆದರಿಕೆ ಹಾಕುವುದು ಮತ್ತು ಈ ರೀತಿ ಹಣ ಸಂಗ್ರಹಿಸುವುದು ಅಪಾಯಕಾರಿ ಮತ್ತು ಅದನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಟಾಕ್ಸಿಕ್’ ಇದು ನಿಜಕ್ಕೂ ದೊಡ್ಡವರ ಕತೆ, ಸಣ್ಣವರಿಗಲ್ಲ – Kannada News | Yash’s Toxic movie is only for adults not for minors

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾದ ಟೀಸರ್ ಇಂದು (ಜನವರಿ 08) ಬಿಡುಗಡೆ ಆಗಿದೆ. ಭಾರತದ ಬಹು ನಿರೀಕ್ಷಿತ ಸಿನಿಮಾ ಎನಿಸಿಕೊಂಡಿರುವ ‘ಟಾಕ್ಸಿಕ್’ ಆ ನಿರೀಕ್ಷೆಗೆ ತಕ್ಕಂತೆ ಗುಣಮಟ್ಟದ ಮೇಕಿಂಗ್ ಉಳ್ಳ ಟೀಸರ್ ಅನ್ನೇ ಬಿಡುಗಡೆ ಮಾಡಿದೆ. ಯಶ್, ‘ಕೆಜಿಎಫ್’ ಸಿನಿಮಾಕ್ಕಿಂತಲೂ ಹೆಚ್ಚು ರಗಡ್ ಆಗಿ ಸಿನಿಮಾನಲ್ಲಿ ಕಾಣಿಸಿಕೊಂಡಿರುವುದು ಟೀಸರ್​​ನಿಂದಲೇ ತಿಳಿಯುತ್ತಿದೆ. ಸಿನಿಮಾವನ್ನು ಪಕ್ಕಾ ಹಾಲಿವುಡ್ ‘ಮಾನದಂಡ’ಗಳಿಗೆ ಅನುಗುಣವಾಗಿ ನಿರ್ಮಿಸಿರುವುದು ಟೀಸರ್​​ನಿಂದಲೇ ತಿಳಿಯುತ್ತಿದೆ. ಜೊತೆಗೆ ‘ಟಾಕ್ಸಿಕ್’ ಸಿನಿಮಾ ಪಕ್ಕಾ ‘ದೊಡ್ಡವರ’ ಸಿನಿಮಾ, ಈ ಸಿನಿಮಾ ಕಿರಿಯರಿಗಲ್ಲ ಎಂಬುದನ್ನು ಸಹ ಟೀಸರ್ ಸಾರಿ ಹೇಳುತ್ತಿದೆ.

ಈಗ ಬಿಡುಗಡೆ ಆಗಿರುವ ‘ಟಾಕ್ಸಿಕ್’ ಸಿನಿಮಾದ ಟೀಸರ್​​ನಲ್ಲಿಯೇ ಹಸಿ ಬಿಸಿ ದೃಶ್ಯವಿದೆ. ಯಶ್, ಸ್ಮಶಾನದ ಮುಂದೆ ಕಾರಿನಲ್ಲಿ ಯುವತಿಯೊಟ್ಟಿಗೆ ಲೈಂಗಿಕತೆಯಲ್ಲಿ ತೊಡಗಿರುವ ದೃಶ್ಯವಿದೆ. ಅದನ್ನು ಯಶ್ ಅವರ ರಾಯ ಪಾತ್ರದ ‘ಶಕ್ತಿ’ಯನ್ನು ತೋರ್ಪಡಿಸಲು ನಿರ್ದೇಶಕರು ಬಳಸಿದಂತಿದೆ. ಟೀಸರ್ ನೋಡಿದರೆ ‘ಟಾಕ್ಸಿಕ್’ ಸಿನಿಮಾಕ್ಕೆ ‘ಎ’ ಪ್ರಮಾಣ ಪತ್ರ ಸಿಗುವುದು ಪಕ್ಕಾ ಎನಿಸುತ್ತಿದೆ. ಈ ದೃಶ್ಯವೊಂದೇ ಅಲ್ಲದೆ ಕಳೆದ ವರ್ಷ ಯಶ್ ಹುಟ್ಟುಹಬ್ಬಕ್ಕೆ ಬಿಡುಗಡೆ ಆಗಿದ್ದ ಟೀಸರ್​​ನಲ್ಲಿಯೂ ಸಹ ಸಾಕಷ್ಟು ಹಸಿ-ಬಿಸಿ ದೃಶ್ಯಗಳಿದ್ದವು.

ಕಳೆದ ವರ್ಷ ಬಿಡುಗಡೆ ಆಗಿದ್ದ ಟೀಸರ್​​ನಲ್ಲಿ ಸಾಕಷ್ಟು ವಿದೇಶಿ ಯುವತಿಯರು ಅರೆನಗ್ನರಾಗಿ, ಮಾದಕ ನೃತ್ಯ ಮಾಡುತ್ತಿರುವ ದೃಶ್ಯಗಳು, ಮಾದಕ ವಸ್ತುವನ್ನು ಬಳಸುತ್ತಿರುವ ದೃಶ್ಯಗಳು, ಅಶ್ಲೀಲ ಸಜ್ಞೆಗಳನ್ನು ಮಾಡುತ್ತಿರುವ ದೃಶ್ಯಗಳನ್ನು ಒಳಗೊಂಡಿತ್ತು. ಇದನ್ನೆಲ್ಲ ನೋಡಿದರೆ ‘ಟಾಕ್ಸಿಕ್’ ಸಿನಿಮಾಕ್ಕೆ ಸಿಬಿಎಫ್​​ಸಿ ‘ಎ’ ಪ್ರಮಾಣ ಪತ್ರ ನೀಡುವುದು ಖಾತ್ರಿ ಎನ್ನಬಹುದು.

ಇದನ್ನೂ ಓದಿ:ಫ್ಯಾನ್ಸ್ ಭೇಟಿಯಾಗಲು ಸಾಧ್ಯವಾಗುತ್ತಿಲ್ಲ: ಹುಟ್ಟುಹಬ್ಬಕ್ಕೂ ಮುನ್ನ ಯಶ್ ಸಂದೇಶ

ಅಸಲಿಗೆ ಇದನ್ನು ಮೊದಲೇ ಊಹಿಸಿಯೇ ಚಿತ್ರತಂಡ ಹೆಜ್ಜೆ ಇಟ್ಟಿದೆ ಅನಿಸುತ್ತದೆ. ಇದೇ ಕಾರಣಕ್ಕೆ ‘ಟಾಕ್ಸಿಕ್’ ಸಿನಿಮಾದ ಅಡಿಬರಹದಲ್ಲೇ ಇದು ಮಕ್ಕಳಿಗೆ ಅಥವಾ ಅಪ್ತಾಪ್ತರಿಗಲ್ಲ ಎಂಬ ಸುಳಿವನ್ನು ಚಿತ್ರತಂಡ ನೀಡಿದೆ. ‘ಟಾಕ್ಸಿಕ್’ ಸಿನಿಮಾದ ಅಡಿಬರಹ ಅಥವಾ ಟ್ಯಾಗ್​ಲೈನ್ ‘ಎ ಫೇರಿ ಟೇಲ್ ಆಫ್ ಗ್ರೋನ್ ಅಪ್ಸ್’ (ಒಂದು ದೊಡ್ಡವರ ಕತೆ) ಎಂದಿದೆ. ಹಾಗಾಗಿ ಹೆಚ್ಚು ಹಸಿ-ಬಿಸಿ ದೃಶ್ಯಗಳನ್ನು ಚಿತ್ರೀಕರಿಸಿರುವುದು ಯೋಜಿತ ನಿರ್ಣಯವೇ ಆಗಿದೆ.

ಯಶ್ ತಮ್ಮ ಈ ವರೆಗಿನ ವೃತ್ತಿ ಜೀವನದಲ್ಲಿ ಹಸಿ-ಬಿಸಿ ದೃಶ್ಯಗಳಲ್ಲಿ ನಟಿಸಿದ್ದಿಲ್ಲ. ಆದರೆ ‘ಟಾಕ್ಸಿಕ್’ನಲ್ಲಿ ಮೊದಲ ಬಾರಿಗೆ ಇಂಥಹಾ ದೃಶ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದನ್ನು ಯಶ್ ಅಭಿಮಾನಿಗಳು, ವಿಶೇಷವಾಗಿ ಅವರ ಮಹಿಳಾ ಅಭಿಮಾನಿಗಳು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗಲಿದೆ. ಸಿನಿಮಾ ನಿರ್ದೇಶನ ಮಾಡಿರುವುದು ಗೀತು ಮೋಹನ್​​ದಾಸ್, ಬಂಡವಾಳ ಹೂಡಿರುವುದು ಕೆವಿಎನ್ ಮತ್ತು ಯಶ್ ಅವರ ಮಾನ್​ಸ್ಟರ್ ಮೈಂಡ್ಸ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 11:19 am, Thu, 8 January 26

Source link

Video: ಟೊಮೊಟೊ ಕೊಡಲ್ಲ ಎಂದಿದ್ದಕ್ಕೆ ಮನೆಯೊಡತಿಗೆ ಬೆದರಿಕೆ ಹಾಕಿದ ಸಾಕು ಗಿಳಿ – Kannada News | Parrot threatens owner with calling police

ಗಿಳಿ (Parrot) ಬುದ್ದಿವಂತ ಪಕ್ಷಿಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಮನುಷ್ಯರಂತೆ ಮಾತನಾಡಬಲ್ಲದು ಕೂಡ. ಹೀಗಾಗಿ ಎಲ್ಲರೂ ಈ ಗಿಳಿಯನ್ನು ಸಾಕಲು ಇಷ್ಟ ಪಡುತ್ತಾರೆ. ಆದರೆ ಇಲ್ಲೊಂದು ಸಾಕು ಗಿಳಿಯೂ ಮನೆ ಒಡತಿಗೆ (owner) ಬೆದರಿಕೆ ಹಾಕಿದೆ. ಟೊಮೊಟೊ ಕೊಡದಿದ್ದರೆ ಪೊಲೀಸರನ್ನು ಕರೆಯುತ್ತೇನೆ ಎಂದು ಹೆದರಿಸಿದೆ. ಗಿಳಿಯ ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

@aalianadim ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ ಮನೆಯ ಸಾಕು ಗಿಳಿಯದ್ದಾಗಿದೆ. ಪಂಜರದಲ್ಲಿರುವ ಗಿಳಿಯೂ ಮಹಿಳೆಯ ಬಳಿ ಟೊಮೆಟೊ ಕೇಳುತ್ತಿರುವುದನ್ನು ಕಾಣಬಹುದು. ಆದರೆ ಮನೆಯೊಡತಿಯೂ ನಿರಾಕರಿಸಿದ್ದಕ್ಕೆ, ಕೋಪಗೊಂಡ ಗಿಳಿ ಪೊಲೀಸರಿಗೆ ಕರೆ ಮಾಡುವುದಾಗಿ ಬೆದರಿಕೆ ಹಾಕಲು ಪ್ರಾರಂಭಿಸುತ್ತದೆ. ನಾನು ಪೊಲೀಸರನ್ನು ಕರೆಯುತ್ತೇನೆ ಎಂದೇಳಿ ಪೊಲೀಸ್ ಪೊಲೀಸ್ ಪೊಲೀಸ್ ಎಂದು ಜೋರಾಗಿ ಕೂಗುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ:ಹಸಿದ ಶ್ವಾನಕ್ಕೆ ಆಹಾರ ನೀಡಿ ಹಸಿವು ನೀಗಿಸಿದ ಪುಣ್ಯಾತ್ಮ

ಜನವರಿ 7 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಹದಿನಾಲ್ಕು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಗಿಳಿಗಳು ಮಾತನಾಡುವಾಗ ತುಂಬಾ ಮುದ್ದಾಗಿ ಕಾಣುತ್ತವೆ ಎಂದಿದ್ದಾರೆ. ಮತ್ತೊಬ್ಬರು ಗಿಳಿಗೂ ಹೆದರುವ ಕಾಲ ಬಂದಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಮಹಿಳೆಗೆ ಬ್ಲಾಕ್ ಮೇಲ್ ಮಾಡುತ್ತಿದೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:13 pm, Thu, 8 January 26

Source link

ಚಿಕ್ಕಮಗಳೂರು: ಮುತ್ತಿಗೆಪುರ ಸರ್ಕಾರಿ ಶಾಲಾ ಮಕ್ಕಳಿಗೆ ವಿಮಾನಯಾನ ಭಾಗ್ಯ! ಫ್ಲೈಟ್​ನಲ್ಲಿ ಚಿಣ್ಣರ ಸಂಭ್ರಮ ನೋಡಿ – Kannada News | Chikkamagaluru Government School Students Take First Flight Trip, Muttigepura Kids’ Joy Goes Viral

ಶಿವಮೊಗ್ಗದಿಂದ ಬೆಂಗಳೂರಿಗೆ ಪ್ರವಾಸ ಕೈಗೊಂಡ ಈ ಮಕ್ಕಳು, ಫ್ಲೈಟ್‌ನಲ್ಲಿ ಪ್ರಯಾಣಿಸುವ ಮೂಲಕ ಜೀವನದಲ್ಲಿ ಮರೆಯಲಾಗದ ಅನುಭವ ಪಡೆದುಕೊಂಡಿದ್ದಾರೆ. ವಿಮಾನದಲ್ಲಿ ಕುಳಿತು ಹಾರಾಟದ ಸಂಭ್ರಮ ಅನುಭವಿಸಿದ ಪುಟ್ಟ ಮಕ್ಕಳ ಮುಖದಲ್ಲಿ ಕಂಡ ಖುಷಿ ನೋಡುವುದೇ ಒಂದು ಹಬ್ಬದಂತಿತ್ತು. ಬೆಂಗಳೂರಿಗೆ ಫ್ಲೈಟ್ ಮೂಲಕ ತೆರಳಿ, ಅಲ್ಲಿಂದ ಬಸ್‌ನಲ್ಲಿ ಹಿಂತಿರುಗುವಂತೆ ಪ್ರವಾಸವನ್ನು ಯೋಜಿಸಲಾಗಿತ್ತು.

ಈ ವಿಶಿಷ್ಟ ಪ್ರವಾಸ ಶಿಕ್ಷಕರು, ಪೋಷಕರು, ದಾನಿಗಳು ಹಾಗೂ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (SDMC) ಅವರ ಸಹಕಾರದಿಂದ ಸಾಧ್ಯವಾಗಿದೆ. ಮಕ್ಕಳಿಗೆ ಪುಸ್ತಕದ ಪಾಠಕ್ಕಷ್ಟೇ ಸೀಮಿತವಲ್ಲದೆ, ಜೀವನ ಪಾಠವನ್ನೂ ಕಲಿಸಬೇಕು ಎಂಬ ಉದ್ದೇಶದಿಂದ ಈ ಪ್ರವಾಸವನ್ನು ಆಯೋಜಿಸಲಾಗಿದೆ ಎಂದು ಶಿಕ್ಷಕರು ತಿಳಿಸಿದ್ದಾರೆ.

ಸರ್ಕಾರಿ ಶಾಲೆಗಳು ಎಂದರೆ ಹಿಂದುಳಿದವೆಂಬ ಧೋರಣೆಗೆ ತುತ್ತು ಬೀಳುವವರಿಗೂ ಈ ಶಾಲೆ ಒಂದು ಮಾದರಿಯಾಗಿದೆ. ‘ಸರ್ಕಾರಿ ಶಾಲೆ ಅಂದ್ರೆ ಸುಮ್ನೇನಾ?’ ಎಂಬ ಪ್ರಶ್ನೆಗೆ ಮುತ್ತಿಗೆಪುರದ ಈ ಶಾಲೆ ತನ್ನ ಕಾರ್ಯದ ಮೂಲಕಲೇ ಗಟ್ಟಿಯಾದ ಉತ್ತರ ಕೊಟ್ಟಿದೆ.

ಈ ಹಿಂದೆ, ಕೊಪ್ಪಳ ಜಿಲ್ಲೆಯ ಬಹದ್ದೂರಬಂಡಿ ಗ್ರಾಮದ ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯ ಬೀರಪ್ಪ ಅಂಡಗಿ ಸ್ವಂತ ಖರ್ಚಿನಲ್ಲಿ 24 ವಿದ್ಯಾರ್ಥಿಗಳನ್ನು ಜಿಂದಾಲ್​​ ಏರ್​​ಪೋರ್ಟ್​​ನಿಂದ ವಿಮಾನದಲ್ಲಿ ಬೆಂಗಳೂರಿಗೆ ಪ್ರವಾಸಕ್ಕೆ ಕರೆದೊಯ್ದು ಸುದ್ದಿಯಾಗಿದ್ದರು. ಶಿಕ್ಷಕರು, ಎಸ್​​ಡಿಎಂಸಿ ಸದಸ್ಯರು, ಬಿಸಿಯೂಟ ಅಡುಗೆ ತಯಾರಕರು ಸೇರಿ ಒಟ್ಟು 40 ಜನರು ವಿಮಾನ ಪ್ರಯಾಣ ಮಾಡಿದ್ದರು.

ಒಟ್ಟಿನಲ್ಲಿ, ಖಾಸಗಿ ಶಾಲೆಯವರಿಗೂ ಅಚ್ಚರಿ ಮೂಡಿಸಿದ ಮುತ್ತಿಗೆಪುರದ ಸರ್ಕಾರಿ ಪ್ರಾಥಮಿಕ ಶಾಲೆ ಮಕ್ಕಳ ವಿಮಾನ ಪ್ರವಾಸ, ಸರ್ಕಾರಿ ಶಾಲೆಗಳ ಸಾಮರ್ಥ್ಯಕ್ಕೆ ಹೊಸ ಅರ್ಥ ನೀಡಿದೆ. ಕಾಫಿನಾಡಿನ ಕುಗ್ರಾಮದಿಂದ ಹಾರಿದ ಈ ಪುಟ್ಟ ಕನಸುಗಳು, ಮುಂದಿನ ದಿನಗಳಲ್ಲಿ ಇನ್ನಷ್ಟು ಎತ್ತರಕ್ಕೆ ಹಾರಲಿ ಎಂಬುದೇ ಎಲ್ಲರ ಆಶಯ.

Published On – 12:35 pm, Thu, 8 January 26

Source link

ಸಿದ್ದರಾಮಯ್ಯ-ಡಿ.ಕೆ. ಶಿವಕುಮಾರ್​​ ನಡುವೆ ಸಿಎಂ ಕುರ್ಚಿ ಕದನ: ಇಲ್ಲಿದೆ ರಾಜ್ಯ ರಾಜಕೀಯದ ಬಿಗ್​​ ಅಪ್ಡೇಟ್​!

ಬೆಂಗಳೂರು, ಜನವರಿ 08: ಕರ್ನಾಟಕ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆಯ ಗಡುವು ಮತ್ತೆ ಮುಂದಕ್ಕೆ ಹೋಗಿದೆ. ಪಂಚರಾಜ್ಯ ಚುನಾವಣೆ ಮುಗಿಯುವವರೆಗೂ ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳದಿರಲು ಹೈಕಮಾಂಡ್​​ ನಿರ್ಧರಿಸಿದೆ ಎನ್ನಲಾಗಿದೆ. ಇತ್ತೀಚೆಗೆ, ಸಿಎಂ ಸಿದ್ದರಾಮಯ್ಯ ‘ಎಷ್ಟು ದಿನ ಇರುತ್ತೇವೋ ಗೊತ್ತಿಲ್ಲ’ ಎಂದು ಹೇಳಿದ್ದರೆ, ಡಿ.ಕೆ. ಶಿವಕುಮಾರ್ ‘ಕೊಟ್ಟ ಮಾತಿಗೆ’ ಬದ್ಧರಾಗಿರಬೇಕು ಎಂದು ಹೇಳಿರೋದು ನಾನಾ ಚರ್ಚೆಗಳಿಗೆ ಕಾರಣವಾಗಿತ್ತು. ದೇವರಾಜು ಅರಸು ಅವರ ದಾಖಲೆಯನ್ನೂ ಸಿಎಂ ಆಗಿ ಸಿದ್ದರಾಮಯ್ಯ ಮುರಿದಿರುವ ಕಾರಣ, ಅಧಿಕಾರ ಹಸ್ತಾಂತರ ವಿಚಾರ ಮತ್ತೆ ಮುನ್ನೆಲೆಗೆ ಬಂದಿತ್ತು.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link