All posts by nagaraj11081993

ಏ 15ಕ್ಕೆ ಬೆಂಗಳೂರಿಗೆ ಬಂದಿಳಿಯಲಿರುವ ಮೋದಿ: ಪ್ರಧಾನಿ ಮಂಡ್ಯ ಪ್ರವಾಸದ ವಿವರ ಹೀಗಿದೆ – Kannada News | PM Narendra Modi Adichunchanagiri Visit on april 15: Here are the details of the PM Mandya visit

ಭೈರವೈಕ್ಯ ಮಂದಿರ, ಪ್ರಧಾನಿ ಮೋದಿImage Credit source: tv9 kannada

ಮಂಡ್ಯ, ಏಪ್ರಿಲ್​ 14: ಆದಿಚುಂಚನಗಿರಿಯಲ್ಲಿ (Adichunchanagiri) ಸುಮಾರು 80 ಕೋಟಿ ರೂ ವೆಚ್ಚದಲ್ಲಿ ಬೈರವೈಕ್ಯ ಮಂದಿರ ನಿರ್ಮಾಣವಾಗಿದ್ದು, ಸದ್ಯ ಉದ್ಘಾಟನೆಗೆ ಸಜ್ಜಾಗಿದೆ. ಚಾಲುಕ್ಯ, ಹೊಯ್ಸಳ, ಚೋಳರು ಮತ್ತು ಗಂಗರ ಕಾಲದ ಶಿಲ್ಪಕಲೆಗಳ ಸಮಾಗಮದೊಂದಿಗೆ ದ್ರಾವಿಡ ಶೈಲಿಯಲ್ಲಿ ನಿರ್ಮಾಣವಾಗಿರುವ ಮಂದಿರವನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಉದ್ಘಾಟನೆ ಮಾಡಲಿದ್ದಾರೆ. ಹೀಗಾಗಿ ನಾಳೆ ಅಂದರೆ ಏಪ್ರಿಲ್​ 15ರಂದು ಮಂಡ್ಯಕ್ಕೆ ಆಗಮಿಸಲಿದ್ದಾರೆ.

ಪ್ರಧಾನಿ ಮೋದಿ ಕಾರ್ಯಕ್ರಮದ ವೇಳಾಪಟ್ಟಿ ಹೀಗಿದೆ 

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಠಕ್ಕೆ ಭೇಟಿ ಹಿನ್ನೆಲೆ ನಾಳೆ ಬೆಳಗ್ಗೆ 10.05ಕ್ಕೆ HAL ಏರ್​ಪೋರ್ಟ್​ಗೆ ಪ್ರಧಾನಿ ಮೋದಿ ಆಗಮಿಸಿಲಿದ್ದಾರೆ. 10.10ಕ್ಕೆ ಬೆಂಗಳೂರಿನ ಹೆಚ್​​ಎಎಲ್​ನಿಂದ ತೆರಳುವ ಅವರು, ಬೆಳಗ್ಗೆ 10.50ಕ್ಕೆ ಆದಿಚುಂಚನಗಿರಿ ತಪೋವನ ಹೆಲಿಪ್ಯಾಡ್‌ಗೆ ಆಗಮಿಸುತ್ತಾರೆ. ಬಳಿಕ ರಸ್ತೆ ಮೂಲಕ ಶ್ರೀಕ್ಷೇತ್ರ ಆದಿಚುಂಚನಗಿರಿಗೆ ಆಗಮಿಸುತ್ತಾರೆ.

ಇದನ್ನೂ ಓದಿ: ಏಪ್ರಿಲ್ 15ರಂದು ಮಂಡ್ಯಕ್ಕೆ ಆಗಮಿಸಲಿರುವ ಮೋದಿ! ಆದಿಚುಂಚನಗಿರಿ ಮಠದಲ್ಲಿ ಗದ್ದಿಗೆ ಉದ್ಘಾಟನೆ

ಮೊದಲು ಗೋರಕ್ಷಕನಾಥರು ತಪಸ್ಸು ಮಾಡಿದ ಜ್ವಾಲಾಪೀಠ ದರ್ಶನ ಮಾಡಲಿರುವ ಪ್ರಧಾನಿ ಮೋದಿ, ನಂತರ ಕಾಲಭೈರವೇಶ್ವರಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಇನ್ನು ಶ್ರೀಗಿರಿ ತಪೋವನದಿಂದ 1.5 ಕಿ.ಮೀ. ದೂರದಲ್ಲಿರುವ ಶ್ರೀಗುರು ಭೈರವೈಕ್ಯ ಮಂದಿರವನ್ನು ಬೆಳಗ್ಗೆ 11 ಗಂಟೆಗೆ ಉದ್ಘಾಟಿಸಲಿದ್ದಾರೆ. ನಂತರ ಬಿಜಿಎಸ್ ಕ್ರೀಡಾಂಗಣದಲ್ಲಿ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಭಕ್ತರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಬಳಿಕ HAL ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಕೇರಳಕ್ಕೆ ಪ್ರಯಾಣ ಬೆಳೆಸಲಿದ್ದಾರೆ.

ಆದಿಚುಂಚನಗಿರಿಯಲ್ಲಿ ಹಬ್ಬದ ಸಂಭ್ರಮ: 2 ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ

ಇನ್ನು ಪ್ರಧಾನಿ ಮೋದಿ ಆಗಮನ ಹಿನ್ನೆಲೆ ಆದಿಚುಂಚನಗಿರಿಯಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಆದಿಚುಂಚನಗಿರಿ ಕ್ಷೇತ್ರದಾದ್ಯಂತ ಫ್ಲೆಕ್ಸ್, ಕಟೌಟ್ಸ್ ರಾರಾಜಿಸುತ್ತಿವೆ. ಮಠದ ಕ್ರೀಡಾಂಗಣದಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದ್ದು, ಕಾರ್ಯಕ್ರಮದಲ್ಲಿ 1 ಲಕ್ಷಕ್ಕೂ ಅಧಿಕ ಜನ ಭಾಗವಹಿಸುವ ನಿರೀಕ್ಷೆ ಇದೆ. ಹೀಗಾಗಿ ಆದಿಚುಂಚನಗಿರಿಯಲ್ಲಿ 2 ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ.

ನಾಳೆ ಮದ್ಯ ಮಾರಾಟ ನಿಷೇಧ

ಆದಿಚುಂಚನಗಿರಿ ಸುತ್ತಮುತ್ತ ನಾಳೆ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ. ನಾಳೆ ಬೆಳಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರು ಪಟ್ಟಣ ಪಂಚಾಯಿತಿಯ 8 ಕಿಮೀ ವ್ಯಾಪ್ತಿಯಲ್ಲಿ ಮದ್ಯ ಮಾರಾಟಕ್ಕೆ ನಿಷೇಧಿಸಿ ಮಂಡ್ಯ ಡಿಸಿ ಡಾ.ಕುಮಾರ್ ಆದೇಶ ಹೊರಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 3:15 pm, Tue, 14 April 26

Source link

ಒತ್ತಡದ ನಡುವೆಯೂ ಏರದ ಪೆಟ್ರೋಲ್ ಬೆಲೆ; ಪೆಟ್ರೋಲಿಯಂ ಕಂಪನಿಗಳಿಗೆ ಒಂದು ಲೀಟರ್ ಪೆಟ್ರೋಲ್​ಗೆ ಆಗುತ್ತಿರುವ ನಷ್ಟವೆಷ್ಟು ಗೊತ್ತಾ? – Kannada News | OMCs losing Rs 18 and 35 on the sale of 1 ltr Petrol and Diesel, report says

ನವದೆಹಲಿ, ಏಪ್ರಿಲ್ 14: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಗಗನಕ್ಕೇರುತ್ತಿದ್ದರೂ, ದೇಶದಲ್ಲಿ ಇಂಧನ ದರವನ್ನು ಸ್ಥಿರವಾಗಿಟ್ಟಿರುವುದು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಪ್ರಸ್ತುತ ತೈಲ ಮಾರಾಟ ಕಂಪನಿಗಳು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 18 ರೂ ಮತ್ತು ಪ್ರತಿ ಲೀಟರ್ ಡೀಸೆಲ್ ಮೇಲೆ 35 ರೂ ನಷ್ಟ ಅನುಭವಿಸುತ್ತಿವೆ ಎಂದು ಮೂಲಗಳು ತಿಳಿಸಿವೆ. ದಶಕದ ಹಿಂದೆಯೇ ಸರ್ಕಾರವು ಪೆಟ್ರೋಲಿಯಂ ಉತ್ಪನ್ನಗಳಿಗೆ ಮಾರುಕಟ್ಟೆ ಆಧಾರಿತವಾದ ಬೆಲೆ ವ್ಯವಸ್ಥೆ ಮಾಡಿತ್ತು. ಅಂದರೆ ತೈಲ ಬೆಲೆ (crude oil prices) ಏರಿಕೆಯಾದಾಗ ಪೆಟ್ರೋಲ್, ಡೀಸಲ್ ಬೆಲೆ ಏರಿಸುವ ಅವಕಾಶ ಇತ್ತು. ಆದರೂ ಕೂಡ ಸರ್ಕಾರದ ನಿರ್ದೇಶನದ ಮೇರೆಗೆ ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್, ಡೀಸಲ್ ಬೆಲೆ ಏರಿಸಿಲ್ಲ.

ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC), ಭಾರತ್ ಪೆಟ್ರೋಲಿಯಂ (BPCL) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ (HPCL) ಕಂಪನಿಗಳು ಏಪ್ರಿಲ್ 2022 ರಿಂದ ಪೆಟ್ರೋಲ್ ಮತ್ತು ಡೀಸಲ್​ನ ಚಿಲ್ಲರೆ ಮಾರಾಟ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ರಷ್ಯಾ-ಉಕ್ರೇನ್ ಯುದ್ಧದ ನಂತರ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 120 ಡಾಲರ್ ದಾಟಿದ್ದರೂ, ಭಾರತದಲ್ಲಿ ಜನರ ಹಿತದೃಷ್ಟಿಯಿಂದ ದರ ಏರಿಕೆ ಮಾಡಲಾಗಿಲ್ಲ.

ಮ್ಯಾಕ್ವಾರಿ ಗ್ರೂಪ್ ವರದಿಯ ಪ್ರಕಾರ, “ಕಚ್ಚಾ ತೈಲ ಬೆಲೆಯು ಪ್ರತಿ ಬ್ಯಾರೆಲ್‌ಗೆ 135-165 ಡಾಲರ್ ತಲುಪಿದಾಗ, ತೈಲ ಕಂಪನಿಗಳ ನಷ್ಟವು ಒಂದು ಲೀಟರ್ ಪೆಟ್ರೋಲ್​ಗೆ 18 ರೂ, ಹಾಗೂ ಡೀಸಲ್​ಗೆ 35 ರೂನಷ್ಟು ಹೆಚ್ಚಾಗುತ್ತದೆ.”

ಇದನ್ನೂ ಓದಿ: ಬ್ಯಾಟರಿ ಸ್ವಾವಲಂಬನೆಗೆ 3.5 ಲಕ್ಷ ಕೋಟಿ ರೂ ಯೋಜನೆ; ಬ್ಯಾಟರಿ ತಯಾರಕರ ಪಟ್ಟಿ ರೂಪಿಸಲು ಸರ್ಕಾರ ಸಜ್ಜು

ಅಬಕಾರಿ ಸುಂಕ ಇಳಿಸಿದ್ದರಿಂದ ಏನು ಉಪಯೋಗ?

ಕಳೆದ ತಿಂಗಳು ತೈಲ ಕಂಪನಿಗಳು ದಿನಕ್ಕೆ ಸುಮಾರು 2,400 ಕೋಟಿ ರೂನಂತೆ ನಷ್ಟ ಅನುಭವಿಸುತ್ತಿದ್ದವು. ಕೇಂದ್ರ ಸರ್ಕಾರ ಇತ್ತೀಚೆಗೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ ₹10 ರಷ್ಟು ಕಡಿತಗೊಳಿಸಿದ ನಂತರ, ಈ ನಷ್ಟದ ಪ್ರಮಾಣ ದಿನಕ್ಕೆ 1,600 ಕೋಟಿ ರೂಗೆ ಇಳಿಕೆಯಾಗಿದೆ.

ಸರ್ಕಾರ ಕಡಿತಗೊಳಿಸಿದ ₹10 ಸುಂಕದ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸದೆ, ಕಂಪನಿಗಳ ನಷ್ಟವನ್ನು ಸರಿದೂಗಿಸಲು ಬಳಸಿಕೊಳ್ಳಲಾಗುತ್ತಿದೆ. ಆದರೂ ನಷ್ಟದ ಪ್ರಮಾಣ ಸಂಪೂರ್ಣವಾಗಿ ತಗ್ಗಿಲ್ಲ.

ಏಪ್ರಿಲ್ ಕೊನೆಯಲ್ಲಿ ಪೆಟ್ರೋಲ್ ಬೆಲೆ ಏರಿಕೆ?

ಇನ್ನು, ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಂತಹ ಪ್ರಮುಖ ರಾಜ್ಯಗಳ ಚುನಾವಣೆಗಳು ಚಾಲನೆಯಲ್ಲಿವೆ. ಇವು ಮುಗಿದು, ಏಪ್ರಿಲ್ ಅಂತ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಕೆಲವರು ಅಂದಾಜಿಸುತ್ತಿದ್ದಾರೆ. 2022ರಿಂದಲೂ ಪೆಟ್ರೋಲ್, ಡೀಸಲ್ ಬೆಲೆ ಏರಿಕೆ ಮಾಡದೇ ಇರುವ ಸರ್ಕಾರಕ್ಕೆ ಈಗ ತೈಲ ಬೆಲೆ ಒತ್ತಡದಿಂದ ಪೆಟ್ರೋಲ್ ಬೆಲೆ ಏರಿಸುವುದು ಅನಿವಾರ್ಯವಾಗಬಹುದಾ?

ಇದನ್ನೂ ಓದಿ: ಫೆಬ್ರುವರಿಯಲ್ಲಿ ಶೇ. 3.21 ಇದ್ದ ರೀಟೇಲ್ ಹಣದುಬ್ಬರ ಮಾರ್ಚ್​ನಲ್ಲಿ ಶೇ. 3.4ಕ್ಕೆ ಏರಿಕೆ

ಪೆಟ್ರೋಲ್ ಬೆಲೆ ಏರಿಕೆಯಿಂದ ಆರ್ಥಿಕತೆಯ ಮೇಲೆ ಪರಿಣಾಮ

ಭಾರತವು ತನ್ನ ತೈಲ ಅಗತ್ಯದ ಶೇ. 88 ರಷ್ಟನ್ನು ಆಮದು ಮಾಡಿಕೊಳ್ಳುತ್ತದೆ. ಕಚ್ಚಾ ತೈಲ ಬೆಲೆಯಲ್ಲಿ ಪ್ರತಿ 10 ಡಾಲರ್ ಏರಿಕೆಯಾದಾಗ, ಭಾರತದ ಚಾಲ್ತಿ ಖಾತೆ ಕೊರತೆ (Current Account Deficit) ಹೆಚ್ಚಾಗುತ್ತದೆ. ಅಲ್ಲದೆ, ಸಂಪೂರ್ಣ ಅಬಕಾರಿ ಸುಂಕವನ್ನು ತೆಗೆದುಹಾಕಿದರೂ ಸಹ ಪ್ರಸ್ತುತ ಜಾಗತಿಕ ಬೆಲೆಗೆ ಹೋಲಿಸಿದರೆ ತೈಲ ಕಂಪನಿಗಳ ನಷ್ಟವನ್ನು ಸರಿದೂಗಿಸಲು ಸಾಧ್ಯವಿಲ್ಲ ಎಂದು ವರದಿ ಹೇಳಿದೆ.

ಮುಂದಿನ ದಿನಗಳಲ್ಲಿ ಜಾಗತಿಕ ಪರಿಸ್ಥಿತಿ ಸುಧಾರಿಸದಿದ್ದರೆ ಅಥವಾ ದೇಶೀಯ ದರಗಳಲ್ಲಿ ಬದಲಾವಣೆ ಮಾಡದಿದ್ದರೆ, ಈ ತೈಲ ಕಂಪನಿಗಳ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಹದಗೆಡುವ ಆತಂಕ ಎದುರಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ದೆಹಲಿ-ಡೆಹ್ರಾಡೂನ್ ನಡುವಿನ ಪ್ರಯಾಣದ ಸಮಯ ಈಗ ಕೇವಲ ಎರಡೂವರೆ ಗಂಟೆ, ಆರ್ಥಿಕ ಕಾರಿಡಾರ್ ಉದ್ಘಾಟಿಸಿದ ಪ್ರಧಾನಿ ಮೋದಿ – Kannada News | Faster Roads Ahead: Modi Launches Delhi Dehradun Expressway, Travel Time Slashed

ಡೆಹ್ರಾಡೂನ್, ಏಪ್ರಿಲ್ 14: ದೇಶದ ಮೂಲಸೌಕರ್ಯ ಇತಿಹಾಸದಲ್ಲಿ ಇಂದು ಮತ್ತೊಂದು ಸುವರ್ಣ ಅಧ್ಯಾಯ ಬರೆಯಲಾಗಿದೆ. ಬಹುನಿರೀಕ್ಷಿತ 213 ಕಿ.ಮೀ. ಉದ್ದದ ದೆಹಲಿ-ಡೆಹ್ರಾಡೂನ್ ಆರ್ಥಿಕ ಕಾರಿಡಾರ್‌ ಅನ್ನು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ(Narendra Modi) ಉದ್ಘಾಟಿಸಿದ್ದಾರೆ. ಈ ಕಾರಿಡಾರ್ ಕೇವಲ ರಸ್ತೆಯಲ್ಲ, ಇದು ದೆಹಲಿ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳ ಅಭಿವೃದ್ಧಿಯ ವೇಗಕ್ಕೆ ಹೊಸ ಶಕ್ತಿ ನೀಡಲಿರುವ ‘ವೇಗದ ಪಥ’ ಎಂದರು.

ಈ ಮೊದಲು ದೆಹಲಿಯಿಂದ ಡೆಹ್ರಾಡೂನ್ ತಲುಪಲು ಕನಿಷ್ಠ 6 ಗಂಟೆಗಳ ಕಾಲ ಬೇಕಾಗುತ್ತಿತ್ತು. ಆದರೆ, ಈ ಪ್ರವೇಶ-ನಿಯಂತ್ರಿತ (Access-controlled) ಹೆದ್ದಾರಿಯಿಂದಾಗಿ ಈಗ ಪ್ರಯಾಣದ ಸಮಯ ಕೇವಲ 2.5 ಗಂಟೆಗೆ (150 ನಿಮಿಷ) ಇಳಿಕೆಯಾಗಲಿದೆ. ಇದು ಪ್ರವಾಸಿಗರಿಗೆ ಮತ್ತು ನಿತ್ಯ ಪ್ರಯಾಣಿಕರಿಗೆ ವರದಾನವಾಗಲಿದೆ.

ಪರಿಸರ ಮತ್ತು ಅಭಿವೃದ್ಧಿಯ ನಡುವೆ ಸಮತೋಲನ ಕಾಯ್ದುಕೊಳ್ಳಲು ಈ ಯೋಜನೆಯಲ್ಲಿ ವಿಶೇಷ ಗಮನ ಹರಿಸಲಾಗಿದೆ. ಏಷ್ಯಾದಲ್ಲೇ ಅತಿ ಉದ್ದವಾದ 12 ಕಿ.ಮೀ. ಎತ್ತರದ (Elevated) ವನ್ಯಜೀವಿ ಕಾರಿಡಾರ್ ಅನ್ನು ಇಲ್ಲಿ ನಿರ್ಮಿಸಲಾಗಿದೆ. ಆನೆಗಳು ಸೇರಿದಂತೆ ಕಾಡು ಪ್ರಾಣಿಗಳು ರಸ್ತೆಯ ಅಡೆತಡೆಯಿಲ್ಲದೆ ಸಂಚರಿಸಲು ಮೀಸಲಾದ ಅಂಡರ್‌ಪಾಸ್‌ಗಳು ಮತ್ತು ಸುರಂಗಗಳನ್ನು ನಿರ್ಮಿಸಲಾಗಿದೆ. ಇದು ಮಾನವ-ಪ್ರಾಣಿ ಸಂಘರ್ಷವನ್ನು ತಡೆಯಲು ಸಹಕಾರಿ. ಸುಧಾರಿತ ಸಂಚಾರ ನಿರ್ವಹಣಾ ವ್ಯವಸ್ಥೆಯು ಸಂಚಾರದ ಹರಿವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತದೆ.

ಈ ಕಾರಿಡಾರ್ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ಮತ್ತು ಈಸ್ಟರ್ನ್ ಪೆರಿಫೆರಲ್ ಎಕ್ಸ್‌ಪ್ರೆಸ್‌ವೇಗಳೊಂದಿಗೆ ಸಂಪರ್ಕ ಸಾಧಿಸುವುದರಿಂದ ಸುಗಮ ಸಂಚಾರಕ್ಕೆ ದಾರಿ ಮಾಡಿಕೊಡುತ್ತದೆ. 100ಕ್ಕೂ ಹೆಚ್ಚು ಅಂಡರ್‌ಪಾಸ್‌ಗಳು, ಸೇತುವೆಗಳು ಮತ್ತು ವಿಶ್ವದರ್ಜೆಯ ಮಾರ್ಗ ಬದಿಯ ಸೌಲಭ್ಯಗಳನ್ನು ಇದು ಹೊಂದಿದೆ.

ಮತ್ತಷ್ಟು ಓದಿ: ಪ್ರಧಾನಿ ಮೋದಿಗಾಗಿ ಸಿದ್ಧವಾದ ನಾಲ್ವಡಿ ಒಡೆಯರ್ ಮಾದರಿ ಪೇಟದ ವಿಶೇಷಗಳೇನು ಗೊತ್ತಾ? ಇಲ್ಲಿದೆ ನೋಡಿ

ಸುಮಾರು 11,800 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಆರು ಪಥಗಳ ಹೆದ್ದಾರಿಯು ಪ್ರಾದೇಶಿಕ ವ್ಯಾಪಾರ ಮತ್ತು ಪ್ರವಾಸೋದ್ಯಮಕ್ಕೆ ದೊಡ್ಡ ಮಟ್ಟದ ಉತ್ತೇಜನ ನೀಡಲಿದೆ. ಟೋಲ್ ದರಗಳು ಸ್ವಲ್ಪ ಹೆಚ್ಚಿದ್ದರೂ, ಇಂಧನ ಉಳಿತಾಯ ಮತ್ತು ಸಮಯದ ಲಾಭವು ಪ್ರಯಾಣಿಕರಿಗೆ ಆರ್ಥಿಕವಾಗಿ ಲಾಭದಾಯಕವಾಗಲಿದೆ ಎಂದು ವಿಶ್ಲೇಷಿಸಲಾಗಿದೆ. ಒಟ್ಟಾರೆಯಾಗಿ, ದೆಹಲಿ-ಡೆಹ್ರಾಡೂನ್ ಕಾರಿಡಾರ್ ಭಾರತದ ರಸ್ತೆ ಸಾರಿಗೆ ವ್ಯವಸ್ಥೆಯು ಜಾಗತಿಕ ಮಟ್ಟಕ್ಕೆ ಏರುತ್ತಿರುವುದಕ್ಕೆ ಸಾಕ್ಷಿಯಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಪಟಾಕಿ ಕಿಚನ್ ಆರಂಭಿಸಿದ ರಕ್ಷಿತಾ ಶೆಟ್ಟಿ; ಏನಿದರ ವಿಶೇಷ? – Kannada News | Rakshitha Shetty Launches ‘Pataki Kitchen’: Bigg Boss Star’s New Culinary Venture

ರಕ್ಷಿತಾ ಶೆಟ್ಟಿ (Rakshitha Shetty) ಅವರು ಬಿಗ್ ಬಾಸ್ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿದರು. ಬಿಗ್ ಬಾಸ್ ಮನೆಯಲ್ಲಿ ಅವರಿಗೆ ರಘು ಜೊತೆ ಒಳ್ಳೆಯ ಬಾಂಧವ್ಯ ಬೆಳೆಯಿತು. ಈ ಬಾಂಧವ್ಯ ಬಿಗ್ ಬಾಸ್ ಮುಗಿದ ಬಳಿಕವೂ ಮುಂದುವರಿದಿದೆ. ಈಗ ರಕ್ಷಿತಾ ಶೆಟ್ಟಿ ಅವರು ಹೊಸ ಹೆಜ್ಜೆ ಇಟ್ಟಿದ್ದಾರೆ. ಅವರು ‘ಪಟಾಕಿ ಕಿಚನ್’ ಆರಂಭಿಸಿದ್ದಾರೆ. ಹಳ್ಳಿಯಲ್ಲಿ ಈ ಕಿಚನ್ ನಿರ್ಮಿಸಲಾಗಿದ್ದು, ಇದರಲ್ಲಿ ರಕ್ಷಿತಾ ಶೆಟ್ಟಿ ಅವರು ಅಡುಗೆ ಮಾಡಲಿದ್ದಾರೆ.

ರಕ್ಷಿತಾ ಶೆಟ್ಟಿ ಅವರು ಮೂಲತಃ ಯೂಟ್ಯೂಬರ್. ಅಡುಗೆ ವಿಡಿಯೋ ಮಾಡುತ್ತಿದ್ದ ಅವರು, ಭಿನ್ನ ಮಾತಿನ ಶೈಲಿಯಲ್ಲಿ ಗಮನ ಸೆಳೆದರು. ಅವರು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಹೆಸರು ಮಾಡಿದರು. ಈ ಕಾರಣಕ್ಕೆ ಅವರಿಗೆ ಬಿಗ್ ಬಾಸ್​​ನಲ್ಲಿ ಅವಕಾಶ ಸಿಕ್ಕಿತು. ಅವರು ಈ ವೇದಿಕೆಯನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಂಡರು. ರಕ್ಷಿತಾ ಶೆಟ್ಟಿ ಅವರು ಬಿಗ್ ಬಾಸ್ ರನ್ನರ್ ಅಪ್ ಕೂಡ ಆದರು. ಈಗ ತಮ್ಮ ಯೂಟ್ಯೂಬ್ ಕಾಯಕ ಮುಂದುವರಿಸಿದ್ದಾರೆ.

ಇದನ್ನೂ ಓದಿ: ‘ದೊಡ್ಮನೆ ಹಬ್ಬ’ದಲ್ಲಿ ರಕ್ಷಿತಾ ಶೆಟ್ಟಿ ಕಣ್ಣೀರು; ತಬ್ಬಿ ಸಂತೈಸಿದ ರಘು-ಗಿಲ್ಲಿ

ಬಿಗ್ ಬಾಸ್ ಮನೆಯಲ್ಲಿದ್ದಾಗ ಪಟಾಕಿ ರಕ್ಷಿತಾ ಎಂಬ ಬಿರುದು ಅವರಿಗೆ ಸಿಕ್ಕಿತ್ತು. ಇದನ್ನು ಮುಂದುವರಿಸಿಕೊಂಡು ಹೋಗಲು ಅವರು ನಿರ್ಧರಿಸಿದ್ದಾರೆ. ಈ ಕಾರಣಕ್ಕೆ ಅವರು ತಮ್ಮ ಕಿಚನ್​​ಗೆ ‘ಪಟಾಕಿ ಕಿಚನ್’ ಎಂದು ನಾಮಕರಣ ಮಾಡಿದ್ದರು. ಇದನ್ನು ಉದ್ಘಾಟಿಸಲು ರಘು ಅವರು ಬೆಂಗಳೂರಿನಿಂದ ಮಂಗಳೂರಿಗೆ ತೆರಳಿದ್ದರು. ರಿಬ್ಬನ್ ಕಟ್ ಮಾಡಿ ಕಿಚನ್ ಉದ್ಘಾಟನೆ ಮಾಡಲಾಗಿದೆ.

ಮಣ್ಣಿನ ಹೂಜಿಯಲ್ಲಿ ನೀರನ್ನು ಇಡಲಾಗಿದೆ. ಅಲ್ಲಿನ ಗೋಡೆಯ ಮೇಲೆ ರಕ್ಷಿತಾ ಫೋಟೋ ಇದ್ದು, ಅದಕ್ಕೆ ಹಲವು ಕೈಗಳಿವೆ. ಪಟಾಕಿ ಕಿಚನ್ ಅಲ್ಲಿ ಮೊದಲ ದಿನ ಏಡಿ ಘೀ ರೋಸ್ಟ್​​ನ ರಘು ಮಾಡಿದ್ದಾರೆ. ರಘು ಅವರು ಅಡುಗೆ ಮಾಡುವುದನ್ನು ತುಂಬಾನೇ ಇಷ್ಟಪಡುತ್ತಾರೆ. ಈ ಕಾರಣಕ್ಕೆ ‘ಪಟಾಕಿ ಕಿಚನ್’ ಅಲ್ಲಿ ಮೊದಲ ದಿನ ರಘು ಅಡುಗೆ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಟಿಮ್ ಡೇವಿಡ್ ಯಾಕೆ 5.35 ಲಕ್ಷ ರೂ. ದಂಡ ಕಟ್ಟಬೇಕು? – Kannada News | Why was RCB’s Tim David fined 5.35 lakh rs in IPL 2026

IPL 2026: ಐಪಿಎಲ್​ನ 20ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಮುಂಬೈ ಇಂಡಿಯನ್ಸ್ (MI) ತಂಡಗಳು ಮುಖಾಮುಖಿಯಾಗಿದ್ದವು. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಆರ್​​ಸಿಬಿ ಆಟಗಾರ ಟಿಮ್ ಡೇವಿಡ್ ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಶಿಸ್ತು ಕ್ರಮಕ್ಕೆ ಒಳಗಾಗಿದ್ದಾರೆ.

ಪಂದ್ಯದ ವೇಳೆ ಮೈದಾನದಲ್ಲಿದ್ದ ಅಂಪೈರ್‌ಗಳ ಸೂಚನೆಯನ್ನು ಪದೇ ಪದೇ ನಿರ್ಲಕ್ಷಿಸಿದ ಕಾರಣಕ್ಕಾಗಿ ಟಿಮ್ ಡೇವಿಡ್ ಅವರಿಗೆ ಪಂದ್ಯದ ಸಂಭಾವನೆಯ ಶೇ. 25ರಷ್ಟು ದಂಡ ಮತ್ತು ಒಂದು ಡಿಮೆರಿಟ್ ಪಾಯಿಂಟ್ ವಿಧಿಸಲಾಗಿದೆ.

ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.4ರ ಅಡಿಯಲ್ಲಿ ಅವರು ತಪ್ಪಿತಸ್ಥರೆಂದು ಕಂಡುಬಂದಿದೆ. ಇದು “ಪಂದ್ಯದ ಸಮಯದಲ್ಲಿ ಅಂಪೈರ್ ಸೂಚನೆಯನ್ನು ಪಾಲಿಸದಿರುವುದಕ್ಕೆ” ಸಂಬಂಧಿಸಿದ ನಿಯಮವಾಗಿದೆ.

ದಂಡ ವಿಧಿಸಲು ಕಾರಣವೇನು?

ಪಂದ್ಯದ ನಿರ್ಣಾಯಕ ಹಂತದಲ್ಲಿ ಚೆಂಡು ಒದ್ದೆಯಾದಾಗ ಅದನ್ನು ಬದಲಾಯಿಸುವ ಪ್ರಕ್ರಿಯೆಯಲ್ಲಿ ಡೇವಿಡ್ ಅಸಹಕಾರ ತೋರಿದ್ದರು.

  • 18ನೇ ಓವರ್: ಆರ್‌ಸಿಬಿ ಬ್ಯಾಟಿಂಗ್ ವೇಳೆ ಚೆಂಡು ಒದ್ದೆಯಾದಾಗ, ಅಂಪೈರ್‌ಗಳು ಬದಲೀ ಚೆಂಡನ್ನು ನೀಡಿದ್ದರು. ಆದರೆ ಟಿಮ್ ಡೇವಿಡ್ ಆ ಚೆಂಡನ್ನು ಅಂಪೈರ್‌ಗಳಿಗೆ ಹಿಂದಿರುಗಿಸದೆ ತಮ್ಮ ಬಳಿಯೇ ಇಟ್ಟುಕೊಂಡು ಪರೀಕ್ಷಿಸುತ್ತಿದ್ದರು. ಅಂಪೈರ್‌ಗಳಾದ ವೀರೇಂದ್ರ ಶರ್ಮಾ ಮತ್ತು ಸ್ವರೂಪಾನಂದ ಕಣ್ಣೂರ್ ಅವರು ಚೆಂಡನ್ನು ನೀಡುವಂತೆ ಪದೇ ಪದೇ ಕೇಳಿದರೂ ಡೇವಿಡ್ ವಿಳಂಬ ಮಾಡಿದ್ದರು.
  • 20ನೇ ಓವರ್: ಇದೇ ರೀತಿಯ ಘಟನೆ ಪಂದ್ಯದ ಕೊನೆಯ ಓವರ್‌ನಲ್ಲೂ ಮರುಕಳಿಸಿತು. ಅಂಪೈರ್‌ಗಳ ಸೂಚನೆಯನ್ನು ಪದೇ ಪದೇ ಕಡೆಗಣಿಸಿದ್ದು ‘ಲೆವೆಲ್ 1’ ಅಪರಾಧವೆಂದು ಪರಿಗಣಿಸಲಾಯಿತು.

ಮ್ಯಾಚ್ ರೆಫರಿ ತೀರ್ಪು:

ಪಂದ್ಯ ಮುಗಿದ ನಂತರ ಮ್ಯಾಚ್ ರೆಫರಿ ಅವರು ಟಿಮ್ ಡೇವಿಡ್ ವಿರುದ್ಧ ಶಿಸ್ತು ಕ್ರಮ ಜರುಗಿಸಿದರು. ಡೇವಿಡ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದರಿಂದ ಯಾವುದೇ ಅಧಿಕೃತ ವಿಚಾರಣೆಯ ಅಗತ್ಯವಿರಲಿಲ್ಲ. ಹೀಗಾಗಿ ಟಿಮ್ ಡೇವಿಡ್​ಗೆ ಪಂದ್ಯ ಶುಲ್ಕದ ಶೇ.25 ರಷ್ಟು ದಂಡ ವಿಧಿಸಿದ್ದಾರೆ.

ಈ ದಂಡದೊಂದಿಗೆ, ಡೇವಿಡ್ ಅವರ ಅಶಿಸ್ತಿನ ಮೇಲೆ ಒಂದು ‘ಡಿಮೆರಿಟ್ ಪಾಯಿಂಟ್’ನೀಡಲಾಗಿದೆ. ಮುಂದಿನ ಪಂದ್ಯಗಳಲ್ಲಿ ಇಂತಹ ತಪ್ಪುಗಳು ಮರುಕಳಿಸಿದರೆ ಅವರು ಪಂದ್ಯದ ನಿಷೇಧವನ್ನು ಎದುರಿಸಬೇಕಾಗಬಹುದು.

ಎಷ್ಟು ರೂ. ದಂಡ ಕಟ್ಟಬೇಕು?

ಟಿಮ್ ಡೇವಿಡ್ ಐಪಿಎಲ್ 2026ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ತಂಡದಿಂದ ಪ್ರತಿ ಪಂದ್ಯಕ್ಕೆ ಅಂದಾಜು ₹21.42 ಲಕ್ಷ ಮ್ಯಾಚ್ ಫೀ ಪಡೆಯುತ್ತಾರೆ. ಇದೀಗ ಶಿಸ್ತು ಕ್ರಮದ ಹಿನ್ನೆಲೆಯಲ್ಲಿ ಅವರು ಸುಮಾರು ₹5.35 ಲಕ್ಷ ದಂಡ ಪಾವತಿಸಬೇಕಾಗುತ್ತದೆ.

ಏಕೆಂದರೆ ಟಿಮ್ ಡೇವಿಡ್ ಅವರ 2026ರ ಐಪಿಎಲ್ ವೇತನ 3 ಕೋಟಿ ರೂ. ಐಪಿಎಲ್ ನಿಯಮದಂತೆ ಒಟ್ಟು ವೇತನವನ್ನು ಲೀಗ್ ಹಂತದ 14 ಪಂದ್ಯಗಳಿಗೆ ಹಂಚಲಾಗುತ್ತದೆ. ಅದರಂತೆ ಪ್ರತಿ ಪಂದ್ಯಕ್ಕೆ ಅವರಿಗೆ ಅಂದಾಜು ₹21.42 ಲಕ್ಷ ಸಂದಾಯವಾಗುತ್ತದೆ.

ಇದೀಗ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಅಂಪೈರ್ ಸೂಚನೆ ಉಲ್ಲಂಘಿಸಿದ್ದಕ್ಕಾಗಿ ಟಿಮ್ ಡೇವಿಡ್​ ಅವರಿಗೆ ಪಂದ್ಯ ಶುಲ್ಕದ 25% ದಂಡ ವಿಧಿಸಲಾಗಿದೆ. ₹21.42 ಲಕ್ಷದ ಶೇ. 25 ಎಂದರೆ ಅವರು ಸುಮಾರು ₹5.35 ಲಕ್ಷ ದಂಡ ತೆರಬೇಕಾಗುತ್ತದೆ.

ಇದನ್ನೂ ಓದಿ: ಬೌಲಿಂಗ್ ನೀಡುವುದು ಅಪಾಯಕಾರಿ… ಜಡೇಜಾಗೆ ಓವರ್​ ನೀಡದ ಪರಾಗ್..!

ಒಂದೇ ಪಂದ್ಯದಲ್ಲಿ ಎರಡು ಬಾರಿ ಅಂಪೈರ್ ಸೂಚನೆ ಮೀರಿದ ಕಾರಣ (ಲೆವೆಲ್ 1 ಅಪರಾಧ), ಹಣಕಾಸಿನ ದಂಡದ ಜೊತೆಗೆ ಅವರ ಶಿಸ್ತಿನ ದಾಖಲೆಗೆ ಒಂದು ಡಿಮೆರಿಟ್ ಪಾಯಿಂಟ್ ಕೂಡ ಸೇರ್ಪಡೆಯಾಗಿದೆ. ಹೀಗಾಗಿ ಮುಂದಿನ ಪಂದ್ಯಗಳಲ್ಲಿ ಟಿಮ್ ಡೇವಿಡ್ ಡಿಮೆರಿಟ್ ಪಾಯಿಂಟ್ ಸಿಗದಂತೆ ಎಚ್ಚರವಹಿಸಬೇಕು. ಏಕೆಂದರೆ ಪದೇ ಪದೇ ಇಂತಹ ತಪ್ಪುಗಳನ್ನು ಮಾಡಿದ್ರೆ ಒಂದು ಪಂದ್ಯದ ನಿಷೇಧಕ್ಕೆ ಒಳಗಾಗಲಿದ್ದಾರೆ.

Source link

AFMC Admission 2026: ವೈದ್ಯಕೀಯ ಶಿಕ್ಷಣದ ಜೊತೆಗೆ ದೇಶ ಸೇವೆಗೆ ಇಲ್ಲಿದೆ ಸುವರ್ಣ ಅವಕಾಶ – Kannada News | AFMC Pune: Become a Doctor and Officer in Indian Armed Forces, Secure MBBS Career Path

ನೀವು ವೈದ್ಯರಾಗಿ ಸಮಾಜ ಸೇವೆ ಮಾಡುವ ಜೊತೆಗೆ, ಭಾರತೀಯ ಸಶಸ್ತ್ರ ಪಡೆಗಳಲ್ಲಿ ಅಧಿಕಾರಿಯಾಗಿ ದೇಶ ಸೇವೆ ಮಾಡುವ ಕನಸು ಕಾಣುತ್ತಿದ್ದೀರಾ? ಹಾಗಿದ್ದಲ್ಲಿ, ಪುಣೆಯ ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜು (AFMC) ನಿಮಗೆ ಅತ್ಯುತ್ತಮ ವೇದಿಕೆಯಾಗಿದೆ. ಇಲ್ಲಿನ ಶಿಕ್ಷಣವು ಕೇವಲ ಪದವಿಗೆ ಸೀಮಿತವಾಗಿರದೆ, ಶಿಸ್ತುಬದ್ಧ ಜೀವನ ಮತ್ತು ಉಜ್ವಲ ವೃತ್ತಿಜೀವನಕ್ಕೆ ದಾರಿಯಾಗಿದೆ.

AFMC ಎಂದರೇನು? ಇದರ ಐತಿಹಾಸಿಕ ಹಿನ್ನೆಲೆ:

ಮೇ 1, 1948 ರಂದು ಸ್ಥಾಪನೆಯಾದ AFMC (Armed Forces Medical College) ದೇಶದ ಅತ್ಯಂತ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಗಳಲ್ಲಿ ಒಂದಾಗಿದೆ. ಏಷ್ಯಾದಲ್ಲೇ ಸಶಸ್ತ್ರ ಪಡೆಗಳಿಂದ ಸ್ಥಾಪಿಸಲ್ಪಟ್ಟ ಮೊದಲ ವೈದ್ಯಕೀಯ ಕಾಲೇಜು ಎಂಬ ಹೆಗ್ಗಳಿಕೆ ಇದಕ್ಕೆ ಇದೆ. ಇಲ್ಲಿ ವೈದ್ಯಕೀಯ (MBBS), ನರ್ಸಿಂಗ್, ದಂತವೈದ್ಯಕೀಯ ಮತ್ತು ಅರೆವೈದ್ಯಕೀಯ ಕ್ಷೇತ್ರಗಳಲ್ಲಿ ವಿಶ್ವದರ್ಜೆಯ ತರಬೇತಿಯನ್ನು ನೀಡಲಾಗುತ್ತದೆ.

ಕೋರ್ಸ್ ಮುಗಿದ ತಕ್ಷಣವೇ ಉದ್ಯೋಗ ಖಚಿತ!

AFMC ಯಲ್ಲಿ ಓದುವ ವಿದ್ಯಾರ್ಥಿಗಳಿಗೆ ಇರುವ ದೊಡ್ಡ ಅನುಕೂಲವೆಂದರೆ ಉದ್ಯೋಗದ ಭರವಸೆ. MBBS ಪೂರ್ಣಗೊಳಿಸಿದ ನಂತರ ಅಭ್ಯರ್ಥಿಗಳನ್ನು ನೇರವಾಗಿ ಭಾರತೀಯ ಸೇನೆ, ನೌಕಾಪಡೆ ಅಥವಾ ವಾಯುಪಡೆಯಲ್ಲಿ ‘ಲೆಫ್ಟಿನೆಂಟ್’ ಶ್ರೇಣಿಯ ಅಧಿಕಾರಿಗಳಾಗಿ ನೇಮಿಸಲಾಗುತ್ತದೆ. ಪ್ರವೇಶದ ಸಮಯದಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ಮಿಲಿಟರಿ ಸೇವೆಯ ಕುರಿತಾದ ಬಾಂಡ್‌ಗೆ ಸಹಿ ಹಾಕಬೇಕಾಗುತ್ತದೆ. ಇದು ನಿಮ್ಮ ವೃತ್ತಿಜೀವನದ ಭದ್ರತೆಗೆ ನಾಂದಿಯಾಗುತ್ತದೆ.

ಪ್ರವೇಶಕ್ಕೆ ಇರಬೇಕಾದ ಅರ್ಹತೆಗಳು:

ಈ ಪ್ರತಿಷ್ಠಿತ ಸಂಸ್ಥೆಗೆ ಸೇರಲು ಕೆಲವು ಕಟ್ಟುನಿಟ್ಟಾದ ನಿಯಮಗಳಿವೆ. ಅಭ್ಯರ್ಥಿಗಳು ಭಾರತ, ನೇಪಾಳ ಅಥವಾ ಭೂತಾನ್ ನಾಗರಿಕರಾಗಿರಬೇಕು. ಅಭ್ಯರ್ಥಿಗಳು ಅವಿವಾಹಿತರಾಗಿರಬೇಕು. ಮಾತ್ರವಲ್ಲದೆ, ಕೋರ್ಸ್ ಮುಗಿಯುವವರೆಗೆ ವಿವಾಹವಾಗುವಂತಿಲ್ಲ. ಮಿಲಿಟರಿ ಮಾನದಂಡಗಳ ಪ್ರಕಾರ ಅಭ್ಯರ್ಥಿಗಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಸಂಪೂರ್ಣ ಸದೃಢರಾಗಿರಬೇಕು.

ಶೈಕ್ಷಣಿಕ ಅರ್ಹತೆ ಏನು?

12ನೇ ತರಗತಿಯಲ್ಲಿ ಇಂಗ್ಲಿಷ್, ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರವನ್ನು (PCMB) ಕಡ್ಡಾಯವಾಗಿ ಓದಿರಬೇಕು. ವಿಜ್ಞಾನ ವಿಷಯಗಳಲ್ಲಿ ಕನಿಷ್ಠ ಶೇ.60 ಒಟ್ಟು ಅಂಕಗಳನ್ನು ಹೊಂದಿರಬೇಕು. ಇಂಗ್ಲಿಷ್ ಮತ್ತು ಪ್ರತಿ ವಿಜ್ಞಾನ ವಿಷಯದಲ್ಲಿ ಕನಿಷ್ಠ ಶೇ.50 ಅಂಕಗಳು ಇರಬೇಕು. 10ನೇ ತರಗತಿಯಲ್ಲಿ ಗಣಿತ ವಿಷಯದಲ್ಲಿ ಉತ್ತೀರ್ಣರಾಗಿರುವುದು ಕಡ್ಡಾಯ.

ಇದನ್ನೂ ಓದಿ: ಕೆಲಸಕ್ಕೆ ಸೇರಿದ ಮೊದಲ ದಿನವೇ ವೈದ್ಯೆ ರಾಜೀನಾಮೆ; ವೈದ್ಯಕೀಯ ಲೋಕದ ಕರಾಳ ಮುಖ ಅನಾವರಣ!

ಆಯ್ಕೆ ಪ್ರಕ್ರಿಯೆ ಮತ್ತು ಸೀಟುಗಳ ವಿವರ:

AFMC ಪ್ರವೇಶವು ಕೇವಲ ಮೆರಿಟ್ ಮೇಲೆ ಮಾತ್ರ ನಡೆಯುತ್ತದೆ. ಅಭ್ಯರ್ಥಿಗಳು ಕಡ್ಡಾಯವಾಗಿ NEET ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಒಟ್ಟು 150 ಸೀಟುಗಳ ಲಭ್ಯತೆಯಿದ್ದು (ಮಾಹಿತಿ ಪ್ರಕಾರ ಬದಲಾಗಬಹುದು), ಇದರಲ್ಲಿ ಸಾಮಾನ್ಯವಾಗಿ 115 ಹುಡುಗರಿಗೆ ಹಾಗೂ 30 ಹುಡುಗಿಯರಿಗೆ ಮೀಸಲಿಡಲಾಗುತ್ತದೆ (5 ಸೀಟುಗಳು ವಿದೇಶಿ ಅಭ್ಯರ್ಥಿಗಳಿಗೆ). NEET ಅಂಕಗಳ ಆಧಾರದ ಮೇಲೆ ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳಿಗೆ ಸಂದರ್ಶನ ಮತ್ತು ದೈಹಿಕ ಪರೀಕ್ಷೆಗಳನ್ನು ನಡೆಸಲಾಗುತ್ತದೆ.

AFMC ಕೇವಲ ಒಂದು ಕಾಲೇಜಲ್ಲ, ಅದು ದೇಶಪ್ರೇಮ ಮತ್ತು ವೈದ್ಯಕೀಯ ಸೇವೆಯ ಸಂಗಮ. ಇಲ್ಲಿ ಕಲಿಯುವ ವಿದ್ಯಾರ್ಥಿಗಳು ದೇಶದ ಗಡಿ ಕಾಯುವ ಯೋಧರಿಗೆ ಚಿಕಿತ್ಸೆ ನೀಡುವ ಗೌರವಾನ್ವಿತ ವೃತ್ತಿಯನ್ನು ನಿರ್ವಹಿಸುತ್ತಾರೆ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಜರ್ಮನ್‌ನಲ್ಲಿ ಡ್ರೀಮ್‌ ಜಾಬ್‌ ಗಿಟ್ಟಿಸಿಕೊಂಡ ಭಾರತೀಯ ಮಹಿಳೆ ಹೇಳಿದ್ದೇನು ನೋಡಿ – Kannada News | Indian woman gets job abroad despite not knowing German language

ಓದು ಮುಗಿಯುತ್ತಿದ್ದಂತೆ ಹೆಚ್ಚಿನವರು ವಿದೇಶದತ್ತ (foreign) ಹಾರುತ್ತಾರೆ. ಅಲ್ಲೇ ಉದ್ಯೋಗ ಗಿಟ್ಟಿಸಿಕೊಂಡು ಸೆಟ್ಲ್ ಆಗುತ್ತಾರೆ. ಆದರೆ ಇದೀಗ ಭಾರತೀಯ ಮಹಿಳೆ ಸ್ಥಳೀಯ ಭಾಷೆ ತಿಳಿಯದಿದ್ದರೂ ಪ್ರಾಡಕ್ಟ್ ಮ್ಯಾನೇಜರ್ ಹುದ್ದೆಯಲ್ಲಿದ್ದಾರೆ. ಜರ್ಮನಿಯಲ್ಲಿ (Germany) ಕೆಲಸ ಗಿಟ್ಟಿಸಿಕೊಂಡ ಬಗ್ಗೆ ಈ ಮಹಿಳೆ ವಿವರಿಸಿದ್ದಾರೆ. ಈ ವಿಡಿಯೋ ಆನ್‌ಲೈನ್‌ನಲ್ಲಿ ಚರ್ಚೆಗೆ ನಾಂದಿ ಹಾಡಿದೆ.

simran.khokha ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ಸಿಮ್ರಾನ್ ಖೋಖಾ ಎಂಬ ಮಹಿಳೆ ಕೆಲಸ ಹೇಗೆ ಸಿಕ್ಕಿತು ಎನ್ನುವುದನ್ನು ವಿವರಿಸಿರುವುದನ್ನು ಕಾಣಬಹುದು. ವಿದೇಶಕ್ಕೆ ತೆರಳಲು ಯೋಜಿಸುತ್ತಿರುವ ಉದ್ಯೋಗಾಕಾಂಕ್ಷಿಗಳಲ್ಲಿ ಕಂಡುಬರುವ ಸಾಮಾನ್ಯ ಕಾಳಜಿಯನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ. ನನಗೆ ಜರ್ಮನಿಯಲ್ಲಿ ಪ್ರಾಡಕ್ಟ್ ಮ್ಯಾನೇಜರ್ ಕೆಲಸ ಸಿಕ್ಕಿತು. ನನಗೆ ಸ್ಥಳೀಯ ಜರ್ಮನ್ ಭಾಷೆ ಕೂಡ ಬರುವುದಿಲ್ಲ. ಆದರೆ ಇದು ನನ್ನ ಕನಸಿನ ಕೆಲಸವನ್ನು ಭದ್ರಪಡಿಸಿಕೊಳ್ಳಲು ಸಹಾಯ ಮಾಡಿತು. ಆದರೆ ಜರ್ಮನಿಯಲ್ಲಿ ಭಾಷೆ ಮುಖ್ಯವಲ್ಲ ಎಂದು ಇದರ ಅರ್ಥವಲ್ಲ, ಮತ್ತು ಈ ಸಲಹೆ ಪ್ರತಿಯೊಂದಕ್ಕೂ ಕೆಲಸ ಮಾಡುವುದಿಲ್ಲ. ಆದರೆ ಈ ಸಲಹೆಯು ಹೆಚ್ಚಿನ ಕೌಶಲ್ಯ, ಹೆಚ್ಚಿನ ಪ್ರಭಾವ ಬೀರುವ ಪಾತ್ರಗಳಿಗೆ ಕೆಲಸ ಮಾಡುತ್ತದೆ ಎಂದು ಹೇಳಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಇಲ್ಲಿನ ಅನೇಕ ತಂತ್ರಜ್ಞಾನ ಕಂಪನಿಗಳು ಸಂಪೂರ್ಣವಾಗಿ ಇಂಗ್ಲಿಷ್‌ನಲ್ಲಿ ಕಾರ್ಯನಿರ್ವಹಿಸುತ್ತವೆ. ಭಾಷೆ ಯಾವುದೇ ಇರಲಿ, ಜರ್ಮನಿಯಲ್ಲಿ ನನ್ನ ಕನಸಿನ ಉದ್ಯೋಗವನ್ನು ಪಡೆಯಲು ನನಗೆ ಸಹಾಯ ಮಾಡಿದ ನಾಲ್ಕು ಹಂತಗಳು ಇಲ್ಲಿವೆ. ಇದು ನಿಮಗೂ ಸಹಾಯ ಮಾಡಬಹುದು. ಮೊದಲು, ನನ್ನ ಲಿಂಕ್ಡ್‌ಇನ್ ಪ್ರೊಫೈಲ್ ಮತ್ತು ರೆಸ್ಯೂಮ್ ಅನ್ನು ಪರಿಷ್ಕರಿಸುವುದು. ಆದ್ದರಿಂದ ನನ್ನ ರೆಸ್ಯೂಮ್ ನಾಲ್ಕು ವಿಭಾಗಗಳನ್ನು ಒಳಗೊಂಡಿತ್ತು. ನಾನು ಕ್ಯಾನ್ವಾದಿಂದ ಕ್ಲೀನ್ ಒಂದು ಪುಟದ ರೆಸ್ಯೂಮ್ ಟೆಂಪ್ಲೇಟ್ ಅನ್ನು ಬಳಸಿದ್ದೇನೆ ಮತ್ತು ಟೀಲ್ ಮತ್ತು ಜಾಬ್‌ಸ್ಕ್ಯಾನ್‌ನಂತಹ ಎಐ ಪರಿಕರಗಳನ್ನು ಬಳಸಿಕೊಂಡು ಕೆಲಸದ ವಿವರಣೆಯಿಂದ ಕನಿಷ್ಠ 50% ಕೀವರ್ಡ್‌ಗಳನ್ನು ನನ್ನ ರೆಸ್ಯೂಮ್‌ಗೆ ಸೇರಿಸಿದೆ. ನನ್ನ ಲಿಂಕ್ಡ್‌ಇನ್‌ಗಾಗಿ ನಾನು ಅದೇ ಪ್ರಕ್ರಿಯೆಯನ್ನು ಬಳಸಿದ್ದೇನೆ ಎಂದು ಹೇಳಿದ್ದಾರೆ.

ಎರಡನೆಯದಾಗಿ, ನಾನು ನಿರ್ದಿಷ್ಟ ಪೋರ್ಟಲ್‌ಗಳಲ್ಲಿ ಉದ್ಯೋಗ ಅರ್ಜಿಗಳನ್ನು ಗುರಿಯಾಗಿಸಿಕೊಂಡೆ. ಹಾಗಾಗಿ ನನ್ನ ಅರ್ಜಿಗಳನ್ನು ಸಲ್ಲಿಸಲು ನಾನು ಉದ್ಯೋಗ ಪೋರ್ಟಲ್‌ಗಳ ಪಟ್ಟಿಯನ್ನು ಬಳಸಿದೆ. ಮೂರನೆಯದು, ನೆಟ್‌ವರ್ಕಿಂಗ್. ಜರ್ಮನ್ ವಿಶ್ವವಿದ್ಯಾಲಯಗಳು ಆಯೋಜಿಸುವ ಉಚಿತ ಕಾರ್ಯಕ್ರಮಗಳು ಮತ್ತು ವೆಬಿನಾರ್‌ಗಳಲ್ಲಿ ನಾನು ನೆಟ್‌ವರ್ಕ್ ಮಾಡಿದ್ದೇನೆ. ನಾಲ್ಕನೆಯದಾಗಿ, ಆದ್ದರಿಂದ ನಾನು ಸಂಬಂಧಿತ ನಾಯಕರಿಗೆ ಕೋಲ್ಡ್ ಔಟ್ ರೀಚ್ ಮೆಸೇಜ್‌ಗಳನ್ನು ಕಳುಹಿಸಿದೆ. ನಾನು ಗುರಿಯಾಗಿಸಿಕೊಂಡ ಕಂಪನಿಗಳ ಲೀಡರ್‌ನ್ನು ತಲುಪಲು ನಾನು ಟೆಂಪ್ಲೇಟ್ ಅನ್ನು ಬಳಸಿದೆ ಎಂದು ಹೇಳಿರುವುದನ್ನು ನೋಡಬಹುದು.

ಇದನ್ನೂ ಓದಿ: 10 ಕೋಟಿ ರೂ ದುಡ್ಡಿದ್ರೂ ಭಾರತ ತೊರೆಯಲು ಮುಂದಾದ ವ್ಯಕ್ತಿ, ಕಾರಣ ಇದೇ ನೋಡಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಉತ್ತಮ ಸಲಹೆಗಳು, ವಿಶೇಷವಾಗಿ ನೆಟ್‌ವರ್ಕಿಂಗ್ ವಿಭಾಗ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಭಾಷಾ ಅಡೆತಡೆಗಳಿಗೆ ಹೆದರುವ ಜನರಿಗೆ ಇದು ನಿಜವಾಗಿ ಸಹಾಯಕವಾಗಿದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಕೋಲ್ಡ್ ಔಟ್ರೀಚ್ ವಾಸ್ತವವಾಗಿ ಜನರು ಯೋಚಿಸುವುದಕ್ಕಿಂತ ಹೆಚ್ಚು ಕೆಲಸ ಮಾಡುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:41 pm, Tue, 14 April 26

Source link

ವಚನಾನಂದ ಸ್ವಾಮೀಜಿ ಸತ್ಯಹರಿಶ್ಚಂದ್ರರಲ್ಲ: ಎರಡೂ ಟ್ರಸ್ಟ್‌ಗಳ ವಿರುದ್ಧ ಯತ್ನಾಳ್ ಗಂಭೀರ ಆರೋಪ – Kannada News | Vijayapura MLA Basangouda Patil Yatnal Reacts On Vachanananda Swamiji Expelled And Panchamasali peeta

ವಿಜಯಪುರ, (ಏಪ್ರಿಲ್ 14): ಹರಿಹರ ಪಂಚಮಸಾಲಿ ಗುರುಪೀಠದಿಂದ ವಚನಾನಂದಶ್ರೀ ಉಚ್ಚಾಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಪರ ವಿರೋಧಗಳು ವ್ಯಕ್ತವಾಗುತ್ತಿವೆ. ಇನ್ನು ಈ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagowda Patil Yatnal) ಪ್ರತಿಕ್ರಿಯಿಸಿದ್ದು, ವಚನಾನಂದ ಸ್ವಾಮೀಜಿ ಸತ್ಯಹರಿಶ್ಚಂದ್ರರಲ್ಲ, ಎರಡೂ ಟ್ರಸ್ಟ್‌ಗಳನ್ನು ಖಾಸಗಿ ಆಸ್ತಿ ಮಾಡಿಕೊಂಡಿದ್ದಾರೆ. ಕೂಡಲಸಂಗಮ ಪೀಠಗಳ ಟ್ರಸ್ಟ್​ ನಂಬಿಕೆ ಕಳೆದುಕೊಂಡಿದೆ. ಪ್ರಾಮಾಣಿಕವಾಗಿ ಸಮುದಾಯಕ್ಕಾಗಿ ಕೆಲಸ ಮಾಡುವವರು ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ವಿಜಯಪುರದಲ್ಲಿಂದು ಮಾಧ್ಯಮಗಳಿಗೆ ಮಾತನಾಡಿದ ಯತ್ನಾಳ್, ಟ್ರಸ್ಟ್​ಗಳು ಸರ್ಕಾರವನ್ನು ಬ್ಲ್ಯಾಕ್​ಮೇಲ್​ ಮಾಡುವುದಕ್ಕೆ ಇವೆ. ಬಿ.ಎಸ್​.ಯಡಿಯೂರಪ್ಪ ಸಿಎಂ ಆಗಿದ್ದಾಗ 11 ಕೋಟಿ ರೂ. ಕೊಟ್ಟಿದ್ದರು. ಆದರೆ ಹಣಕಾಸಿನ ದಾಖಲೆಗಳು ನಕಲಿಯಾಗಿವೆ. 2 ಟ್ರಸ್ಟ್​ಗಳ ಮೇಲೆ ಜನರು ನಂಬಿಕೆ ವಿಶ್ವಾಸ ಕಳೆದುಕೊಂಡಿದ್ದಾರೆ. ವಚನಾನಂದ ಸ್ವಾಮೀಜಿ ಸತ್ಯಹರಿಶ್ಚಂದ್ರ ಅಲ್ಲ. ಈ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪಿಸಲು ನನಗೆ ಅವಕಾಶ ನೀಡಲಿಲ್ಲ. ನಮ್ಮದೇ ಸರ್ಕಾರ ಇದ್ದರೂ ಮಾತನಾಡಲು ಅವಕಾಶ ನೀಡಲಿಲ್ಲ. ಯಡಿಯೂರಪ್ಪ, ಬೊಮ್ಮಾಯಿ ಸಿಎಂ ಇದ್ದಾಗ ಹಣ ನೀಡಲಾಗಿತ್ತು. ಇವರ ಮನೆ ಬೆಕ್ಕು, ನಾಯಿ ಇವರ ಮಾತು ಕೇಳಲ್ಲ ಎಂದು ಕಿಡಿಕಾರಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತೂಕ ಇಳಿಕೆ ಮತ್ತು ಹೊಳೆಯುವ ಚರ್ಮಕ್ಕಾಗಿ ಸಮಂತಾ ಮಾಡುತ್ತಾರೆ ಈ 8 ಕಾರ್ಯ – Kannada News | Samantha Ruth Prabhu shared her 8 step morning routine

ಸಮಂತಾ ಋತ್ ಪ್ರಭು (Samantha Ruth Prabhu) ದಕ್ಷಿಣದ ಸ್ಟಾರ್ ನಟಿ. 16 ವರ್ಷಗಳಿಂದಲೂ ಅವರು ಚಿತ್ರರಂಗದಲ್ಲಿದ್ದಾರೆ. ಸಮಂತಾ ಮೊದಲಿನಿಂದಲೂ ಫಿಟ್​​ನೆಸ್​​ ಒತ್ತು ನೀಡುವ ನಟಿಯಾಗಿದ್ದರು. ಆದರೆ ಕೆಲ ವರ್ಷಗಳ ಹಿಂದೆ ಉಂಟಾದ ಅನಾರೋಗ್ಯದ ಬಳಿಕ ಫಿಟ್​​ನೆಸ್ ಅನ್ನು ಮತ್ತಷ್ಟು ಗಂಭೀರವಾಗಿ ಪರಿಗಣಿಸಿದ್ದು ಮಾತ್ರವೇ ಅಲ್ಲದೆ, ಫಿಟ್​​ನೆಸ್​ ಬಗ್ಗೆ ಖುದ್ದು ಜಾಗೃತಿ ಮೂಡಿಸಲು ಆರಂಭಿಸಿದರು. ಪಾಡ್​ಕಾಸ್ಟ್​​ಗಳ್ನು ಮಾಡಿದರು. ಬೇರೆಯವರ ಪಾಡ್​​ಕಾಸ್ಟ್​​ಗೆ ಹೋಗಿ ಫಿಟ್​​ನೆಸ್​ನ ಅವಶ್ಯಕತೆಗಳ ಬಗ್ಗೆ ಹೇಳಿದರು. ಇದೀಗ ಸಮಂತಾ, ತಾವು ಫಿಟ್ ಆಗಿರಲು ಮತ್ತು ಚರ್ಮದ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿದಿನ ಮಾಡುವ ಎಂಟು ಕಾರ್ಯಗಳನ್ನು ವಿವರಿಸಿದ್ದಾರೆ. ಇದನ್ನು ಅವರು ‘ಪವರ್ ಮಾರ್ನಿಂಗ್’ ಎಂದು ಕರೆದಿದ್ದಾರೆ. ಆ ಎಂಟು ಸ್ಟೆಪ್ಸ್ ಹೀಗಿವೆ…

ಸಮಂತಾ ಪ್ರತಿದಿನ ಪಾಲಿಸುವ ಎಂಟು ಸ್ಟೆಪ್ಸ್

  • ಬೆಳಿಗ್ಗೆ ಎದ್ದ ತಕ್ಷಣ ಮೊದಲ ಒಂದು ಗಂಟೆ ಕಾಲ ಮೊಬೈಲ್ ಫೋನ್, ಇಮೇಲ್ ಅಥವಾ ಸುದ್ದಿಯಿಂದ ದೂರವಿರಿ. ಇದು ಮೆದುಳಿನ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಸಮಂತಾ ಮೊಬೈಲ್ ಅನ್ನು ಕಡಿಮೆ ಬಳಸುತ್ತಾರಂತೆ.
  • ಎದ್ದ ಬಳಿಕ ಕನಿಷ್ಠ ಐದು ನಿಮಿಷಗಳ ಕಾಲ ಪ್ರಶಾಂತವಾಗಿ ಕುಳಿತು ಆಳವಾಗಿ ಉಸಿರಾಡಿ. ಇದು ನರಮಂಡಲವನ್ನು ಶಾಂತಗೊಳಿಸುತ್ತದೆ ಮತ್ತು ದೇಹವು ಕೊಬ್ಬನ್ನು ವೇಗವಾಗಿ ಕರಗಿಸಲು ಸಹಾಯ ಮಾಡುತ್ತದೆ.
  • ಎದ್ದ 10 ನಿಮಿಷಗಳ ಒಳಗೆ ಮುಖದ ಮೇಲೆ ಸೂರ್ಯನ ಬೆಳಕು ಬೀಳುವಂತೆ ನೋಡಿಕೊಳ್ಳಿ. ಇದು ದೇಹದ ಜೈವಿಕ ಗಡಿಯಾರವನ್ನು (Body Clock) ಸರಿಪಡಿಸುತ್ತದೆ. ಸಮಂತಾ ಇದನ್ನು ತಪ್ಪದೇ ಮಾಡುತ್ತಾರಂತೆ.
  • ಬೆಳಿಗ್ಗೆ ಉಗುರುಬೆಚ್ಚಗಿನ ನೀರಿಗೆ ಲಿಂಬೆ ರಸ, ಹಳದಿ, ಆಪಲ್ ಸೈಡರ್ ವಿನೆಗರ್ ಮತ್ತು ಸ್ವಲ್ಪ ಆಲಿವ್ ಎಣ್ಣೆಯನ್ನು ಬೆರೆಸಿ ಕುಡಿಯಿರಿ. ಇದು ದೇಹದ ಅಸಿಡಿಟಿಯನ್ನು ಕಡಿಮೆ ಮಾಡುತ್ತದೆ.
  • ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರವಾಗಿಡುವ ಪ್ರೋಟೀನ್ ಮತ್ತು ಫೈಬರ್ ಭರಿತ ಉಪಹಾರವನ್ನು ಸೇವಿಸಿ. ಇದರಿಂದ ಜಂಕ್ ಫುಡ್ ತಿನ್ನುವ ಬಯಕೆ ಕಡಿಮೆಯಾಗುತ್ತದೆ. ಜಂಕ್ ಫುಡ್ ಅನ್ನು ತಿನ್ನಲೇಬೇಡಿ ಎಂಬುದು ಸಮಂತಾರ ಮನವಿ.
  • ಬೆಳಿಗ್ಗೆ 11 ಗಂಟೆಯೊಳಗೆ ಯಾವುದಾದರೊಂದು ವ್ಯಾಯಾಮ ಅಥವಾ ಕನಿಷ್ಠ ದೈಹಿಕ ಚಟುವಟಿಕೆಯನ್ನು ಮಾಡಿ. ಇದರಿಂದ ದೇಹ ಫಿಟ್ ಆಗಿರುತ್ತದೆ. ಸಮಂತಾ ದಿನದ ಎರಡು ಗಂಟೆ ಜಿಮ್​​ನಲ್ಲಿ ಕಳೆಯುತ್ತಾರೆ.
  • ಉಪಹಾರ ಸೇವಿಸಿದ ನಂತರವೇ ಕಾಫಿ ಅಥವಾ ಟೀ ಕುಡಿಯಿರಿ. ಖಾಲಿ ಹೊಟ್ಟೆಯಲ್ಲಿ ಕೆಫೀನ್ ಸೇವನೆಯನ್ನು ತಪ್ಪಿಸಿ.
  • ಅಂದು ನೀವು ಸಾಧಿಸಬೇಕಾದ ಕೆಲಸಗಳನ್ನು ಮೊದಲೇ ನಿರ್ಧರಿಸಿ ಬರೆದಿಡಿ. ಇದು ಮೆದುಳನ್ನು ಅನಗತ್ಯ ವಿಷಯಗಳತ್ತ ಹೋಗದಂತೆ ತಡೆದು ಏಕಾಗ್ರತೆ ಹೆಚ್ಚಿಸುತ್ತದೆ.

ಸಮಂತಾ ಅವರು ಈ ಹಂತಗಳನ್ನು ಕನಿಷ್ಠ 21 ದಿನಗಳ ಕಾಲ ಸತತವಾಗಿ ಪಾಲಿಸುವಂತೆ ಸಲಹೆ ನೀಡಿದ್ದಾರೆ. ಇದು ಕೇವಲ ತೂಕ ಇಳಿಕೆಗೆ ಮಾತ್ರವಲ್ಲದೆ, ಮಾನಸಿಕ ಆರೋಗ್ಯ ಮತ್ತು ಚರ್ಮದ ಕಾಂತಿಗೂ ಸಹಕಾರಿ ಎಂದು ಅವರು ತಿಳಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬೌಲಿಂಗ್ ನೀಡುವುದು ಅಪಾಯಕಾರಿ… ಜಡೇಜಾಗೆ ಓವರ್​ ನೀಡದ ಪರಾಗ್..! – Kannada News | Why ravindra jadeja is not bowled Against SRH

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 21ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಸೋಲನುಭವಿಸಿದೆ. ಹೈದರಾಬಾದ್​ನ ರಾಜೀವ್ ಗಾಂಧಿ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಆರ್​ ತಂಡದ ನಾಯಕ ರಿಯಾನ್ ಪರಾಗ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಎಸ್​ಆರ್​ಹೆಚ್ ತಂಡವು ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು.

ಅದರಲ್ಲೂ ನಾಯಕ ಇಶಾನ್ ಕಿಶನ್ 44 ಎಸೆತಗಳಲ್ಲಿ 91 ರನ್ ಬಾರಿಸಿದರೆ, ಅನುಭವಿ ದಾಂಡಿಗ ಹೆನ್ರಿಕ್ ಕ್ಲಾಸೆನ್ 26 ಎಸೆತಗಳಲ್ಲಿ 40 ರನ್​ ಚಚ್ಚಿದರು. ಈ ಇಬ್ಬರು ಬ್ಯಾಟರ್​ಗಳ ಸಿಡಿಲಬ್ಬರದ ಹೊರತಾಗಿಯೂ ರಿಯಾನ್ ಪರಾಗ್ ಅನುಭವಿ ಸ್ಪಿನ್ ಆಲ್​ರೌಂಡರ್ ರವೀಂದ್ರ ಜಡೇಜಾಗೆ ಚೆಂಡು ನೀಡಿರಲಿಲ್ಲ ಎಂಬುದೇ ಅಚ್ಚರಿ.

ಅಂದರೆ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರವೀಂದ್ರ ಜಡೇಜಾ ಒಂದೇ ಒಂದು ಓವರ್ ಎಸೆದಿರಲಿಲ್ಲ. ಇತ್ತ ಎಸ್​ಆರ್​ಹೆಚ್ ಬ್ಯಾಟರ್​ಗಳು ಅಬ್ಬರಿಸುತ್ತಿದ್ದರೂ ರಿಯಾನ್ ಪರಾಗ್​, ಜಡೇಜಾಗೆ ಓವರ್ ನೀಡಿಲ್ಲ ಏಕೆ? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.  ಈ ಪ್ರಶ್ನೆಗೆ ಖುದ್ದು ರಿಯಾನ್ ಪರಾಗ್ ಸ್ಪಷ್ಟನೆ ನೀಡಿದ್ದಾರೆ.

ಸನ್​ರೈಸರ್ಸ್​ ಹೈದರಾಬಾದ್ ಪರ ಇಶಾನ್ ಕಿಶನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದರು. ಇತ್ತ ಇಶಾನ್ ಎಡಗೈ ಬ್ಯಾಟರ್ ಆಗಿರುವುದರಿಂದ, ಎಡಗೈ ಸ್ಪಿನ್ನರ್ ಆದ ರವೀಂದ್ರ ಜಡೇಜಾ ಅವರಿಗೆ ಬೌಲಿಂಗ್ ನೀಡುವುದು ಅಪಾಯಕಾರಿ ಎಂದು ಭಾವಿಸಿದೆ. ಹೀಗಾಗಿ ಜಡೇಜಾಗೆ ಓವರ್​ ನೀಡಿ ರನ್ ಬಿಟ್ಟುಕೊಡಲು ನಾನು ಬಯಸಲಿಲ್ಲ ಎಂದು ರಿಯಾನ್ ಪರಾಗ್ ಹೇಳಿದ್ದಾರೆ.

ಅಚ್ಚರಿಯ ವಿಷಯವೆಂದರೆ, ರವೀಂದ್ರ ಜಡೇಜಾ ಅವರಿಗೆ ಬೌಲಿಂಗ್ ನೀಡುವ ಬದಲು ರಿಯಾನ್ ಪರಾಗ್ ಅವರೇ ಒಂದು ಓವರ್ ಬೌಲಿಂಗ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ರವಿ ಬಿಷ್ಣೋಯ್ ಅವರಿಗೆ ಹೆಚ್ಚಿನ ಜವಾಬ್ದಾರಿ ನೀಡಿದ್ದಾರೆ. ಇವೆಲ್ಲವೂ ಕೇವಲ ಒಂದು ‘ಕ್ಷಣಿಕ ನಿರ್ಧಾರ’ ಆಗಿತ್ತು ಎಂದು ರಿಯಾನ್ ತನ್ನ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಇನ್ನು  ಹೈದರಾಬಾದ್‌ನ ಪಿಚ್ ಸಂಪೂರ್ಣವಾಗಿ ಬ್ಯಾಟಿಂಗ್‌ಗೆ ಪೂರಕವಾಗಿತ್ತು. ಸ್ಪಿನ್ನರ್‌ಗಳಿಗೆ ಹೆಚ್ಚಿನ ತಿರುವು ಸಿಗುತ್ತಿರಲಿಲ್ಲ. ಇಂತಹ ‘ಬೆಲ್ಟರ್’ ಪಿಚ್‌ನಲ್ಲಿ ಜಡೇಜಾ ಅವರ ವೇಗದ ಸ್ಪಿನ್ ಹೆಚ್ಚು ಎಫೆಕ್ಟಿವ್ ಆಗದಿರಬಹುದು ಎಂಬ ಭಯ ಟೀಮ್ ಮ್ಯಾನೇಜ್‌ಮೆಂಟ್‌ನಲ್ಲಿತ್ತು. ಹೀಗಾಗಿ ಅವರನ್ನು ಬೌಲಿಂಗ್​ನಿಂದ ಹೊರಗಿಡಲಾಗಿದೆ ಎಂಬ ಮಾತುಗಳು ಕೂಡ ಕೇಳಿ ಬಂದಿವೆ.

ಟೀಕೆಗಳ ಸುರಿಮಳೆ:

ಮಾಜಿ ಕ್ರಿಕೆಟಿಗ ಕೆ. ಶ್ರೀಕಾಂತ್ ಸೇರಿದಂತೆ ಹಲವು ತಜ್ಞರು ರಿಯಾನ್ ಪರಾಗ್ ಹಾಗೂ ರಾಜಸ್ಥಾನ್ ರಾಯಲ್ಸ್ ಟೀಮ್ ಮ್ಯಾನೇಜ್ಮೆಂಟ್​ನ ಈ ನಿರ್ಧಾರವನ್ನು ಕಟುವಾಗಿ ಟೀಕಿಸಿದ್ದಾರೆ.

“ವಿಶ್ವದ ಶ್ರೇಷ್ಠ ಆಲ್-ರೌಂಡರ್ ಒಬ್ಬರು ತಂಡದಲ್ಲಿದ್ದಾಗ, ಎದುರಾಳಿಗಳು 200ಕ್ಕೂ ಹೆಚ್ಚು ರನ್ ಗಳಿಸುತ್ತಿದ್ದರೂ ಅವರಿಗೆ ಬೌಲಿಂಗ್ ನೀಡದಿರುವುದು ದೊಡ್ಡ ತಪ್ಪು,” ಎಂದು ಶ್ರೀಕಾಂತ್ ಅಭಿಪ್ರಾಯಪಟ್ಟಿದ್ದಾರೆ.

ಬ್ಯಾಟಿಂಗ್‌ನಲ್ಲಿ ಮಿಂಚಿದ ‘ಜಡ್ಡು’

ಬೌಲಿಂಗ್‌ನಲ್ಲಿ ಅವಕಾಶ ಸಿಗದಿದ್ದರೂ, ಬ್ಯಾಟಿಂಗ್‌ನಲ್ಲಿ ರವೀಂದ್ರ ಜಡೇಜಾ ತಮ್ಮ ತಾಕತ್ತು ಪ್ರದರ್ಶಿಸಿದರು. ಕೇವಲ 32 ಎಸೆತಗಳಲ್ಲಿ 45 ರನ್ ಸಿಡಿಸುವ ಮೂಲಕ ರಾಜಸ್ಥಾನ್ ರಾಯಲ್ಸ್​ ತಂಡವನ್ನು ಗೆಲುವಿನ ಹತ್ತಿರ ತರಲು ಪ್ರಯತ್ನಿಸಿದರು. ಆದರೆ ತಂಡ ಅಂತಿಮವಾಗಿ ಗುರಿ ತಲುಪಲು ವಿಫಲವಾಯಿತು.

ಇದೀಗ ರಾಜಸ್ಥಾನ್ ರಾಯಲ್ಸ್​ ತಂಡದ ಸೋಲಿಗೆ ನಾಯಕ ರಿಯಾನ್ ಪರಾಗ್ ತೆಗೆದುಕೊಂಡ ನಿರ್ಧಾರವೇ ಕಾರಣ ಎನ್ನಲಾಗುತ್ತಿದೆ. ಅಂದರೆ ಅನುಭವಿ ಆಟಗಾರನಾಗಿ ರವೀಂದ್ರ ಜಡೇಜಾ ಅವರನ್ನು ಬಳಸಿಕೊಳ್ಳದೇ ಇರುವುದರಿಂದ ಸನ್​ರೈಸರ್ಸ್ ಹೈದರಾಬಾದ್ ತಂಡ 216 ರನ್​ಗಳ ಬೃಹತ್ ಮೊತ್ತ ಪೇರಿಸಲು ಸಾಧ್ಯವಾಯಿತು.

ಇದನ್ನೂ ಓದಿ: ಟಿ20 ಕ್ರಿಕೆಟ್​ನಲ್ಲಿ ಹಿಂದೆಂದೂ ಕಂಡರಿಯದ ವಿಶ್ವ ದಾಖಲೆ ನಿರ್ಮಿಸಿದ RCB

ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ತಂಡವು 19 ಓವರ್​ಗಳಲ್ಲಿ 159 ರನ್​​ಗಳಿಸಿ ಆಲೌಟ್ ಆಗುವ ಮೂಲಕ 57 ರನ್​ಗಳಿಂದ ಸೋಲೊಪ್ಪಿಕೊಂಡಿದೆ. ಈ ಗೆಲುವಿನೊಂದಿಗೆ ಸನ್​ರೈಸರ್ಸ್ ಹೈದರಾಬಾದ್ ತಂಡವು ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ.

Source link