ಪಟಾಕಿ ಕಿಚನ್ ಆರಂಭಿಸಿದ ರಕ್ಷಿತಾ ಶೆಟ್ಟಿ; ಏನಿದರ ವಿಶೇಷ? – Kannada News | Rakshitha Shetty Launches ‘Pataki Kitchen’: Bigg Boss Star’s New Culinary Venture

ರಕ್ಷಿತಾ ಶೆಟ್ಟಿ (Rakshitha Shetty) ಅವರು ಬಿಗ್ ಬಾಸ್ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿದರು. ಬಿಗ್ ಬಾಸ್ ಮನೆಯಲ್ಲಿ ಅವರಿಗೆ ರಘು ಜೊತೆ ಒಳ್ಳೆಯ ಬಾಂಧವ್ಯ ಬೆಳೆಯಿತು. ಈ ಬಾಂಧವ್ಯ ಬಿಗ್ ಬಾಸ್ ಮುಗಿದ ಬಳಿಕವೂ ಮುಂದುವರಿದಿದೆ. ಈಗ ರಕ್ಷಿತಾ ಶೆಟ್ಟಿ ಅವರು ಹೊಸ ಹೆಜ್ಜೆ ಇಟ್ಟಿದ್ದಾರೆ. ಅವರು ‘ಪಟಾಕಿ ಕಿಚನ್’ ಆರಂಭಿಸಿದ್ದಾರೆ. ಹಳ್ಳಿಯಲ್ಲಿ ಈ ಕಿಚನ್ ನಿರ್ಮಿಸಲಾಗಿದ್ದು, ಇದರಲ್ಲಿ ರಕ್ಷಿತಾ ಶೆಟ್ಟಿ ಅವರು ಅಡುಗೆ ಮಾಡಲಿದ್ದಾರೆ.

ರಕ್ಷಿತಾ ಶೆಟ್ಟಿ ಅವರು ಮೂಲತಃ ಯೂಟ್ಯೂಬರ್. ಅಡುಗೆ ವಿಡಿಯೋ ಮಾಡುತ್ತಿದ್ದ ಅವರು, ಭಿನ್ನ ಮಾತಿನ ಶೈಲಿಯಲ್ಲಿ ಗಮನ ಸೆಳೆದರು. ಅವರು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಹೆಸರು ಮಾಡಿದರು. ಈ ಕಾರಣಕ್ಕೆ ಅವರಿಗೆ ಬಿಗ್ ಬಾಸ್​​ನಲ್ಲಿ ಅವಕಾಶ ಸಿಕ್ಕಿತು. ಅವರು ಈ ವೇದಿಕೆಯನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಂಡರು. ರಕ್ಷಿತಾ ಶೆಟ್ಟಿ ಅವರು ಬಿಗ್ ಬಾಸ್ ರನ್ನರ್ ಅಪ್ ಕೂಡ ಆದರು. ಈಗ ತಮ್ಮ ಯೂಟ್ಯೂಬ್ ಕಾಯಕ ಮುಂದುವರಿಸಿದ್ದಾರೆ.

ಇದನ್ನೂ ಓದಿ: ‘ದೊಡ್ಮನೆ ಹಬ್ಬ’ದಲ್ಲಿ ರಕ್ಷಿತಾ ಶೆಟ್ಟಿ ಕಣ್ಣೀರು; ತಬ್ಬಿ ಸಂತೈಸಿದ ರಘು-ಗಿಲ್ಲಿ

ಬಿಗ್ ಬಾಸ್ ಮನೆಯಲ್ಲಿದ್ದಾಗ ಪಟಾಕಿ ರಕ್ಷಿತಾ ಎಂಬ ಬಿರುದು ಅವರಿಗೆ ಸಿಕ್ಕಿತ್ತು. ಇದನ್ನು ಮುಂದುವರಿಸಿಕೊಂಡು ಹೋಗಲು ಅವರು ನಿರ್ಧರಿಸಿದ್ದಾರೆ. ಈ ಕಾರಣಕ್ಕೆ ಅವರು ತಮ್ಮ ಕಿಚನ್​​ಗೆ ‘ಪಟಾಕಿ ಕಿಚನ್’ ಎಂದು ನಾಮಕರಣ ಮಾಡಿದ್ದರು. ಇದನ್ನು ಉದ್ಘಾಟಿಸಲು ರಘು ಅವರು ಬೆಂಗಳೂರಿನಿಂದ ಮಂಗಳೂರಿಗೆ ತೆರಳಿದ್ದರು. ರಿಬ್ಬನ್ ಕಟ್ ಮಾಡಿ ಕಿಚನ್ ಉದ್ಘಾಟನೆ ಮಾಡಲಾಗಿದೆ.

ಮಣ್ಣಿನ ಹೂಜಿಯಲ್ಲಿ ನೀರನ್ನು ಇಡಲಾಗಿದೆ. ಅಲ್ಲಿನ ಗೋಡೆಯ ಮೇಲೆ ರಕ್ಷಿತಾ ಫೋಟೋ ಇದ್ದು, ಅದಕ್ಕೆ ಹಲವು ಕೈಗಳಿವೆ. ಪಟಾಕಿ ಕಿಚನ್ ಅಲ್ಲಿ ಮೊದಲ ದಿನ ಏಡಿ ಘೀ ರೋಸ್ಟ್​​ನ ರಘು ಮಾಡಿದ್ದಾರೆ. ರಘು ಅವರು ಅಡುಗೆ ಮಾಡುವುದನ್ನು ತುಂಬಾನೇ ಇಷ್ಟಪಡುತ್ತಾರೆ. ಈ ಕಾರಣಕ್ಕೆ ‘ಪಟಾಕಿ ಕಿಚನ್’ ಅಲ್ಲಿ ಮೊದಲ ದಿನ ರಘು ಅಡುಗೆ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *