All posts by nagaraj11081993

ಜಬ್ಬಾರ್, ನಸೀರ್ ಅಹ್ಮದ್​ ರಾಜೀನಾಮೆಗೆ ಹೈಕಮಾಂಡ್ ಸೂಚಿಸಿದ್ದೇಕೆ? ಕಾರಣ ತಿಳಿಸಿದ ಜಮೀರ್! – Kannada News | Minority Leaders Resign: Zameer Ahmed Reveals Reasons Behind Jabbar and Naseer Ahmed’s Exit from Key Posts

ಬೆಂಗಳೂರು, ಏಪ್ರಿಲ್ 14: ಉಪಚುನಾವಣೆ ಬೆನ್ನಲ್ಲೇ ಕಾಂಗ್ರೆಸ್​​ನಲ್ಲಿ ಅಲ್ಪಸಂಖ್ಯಾತರ ಅಸಮಾಧಾನ ಭುಗಿಲೆದ್ದಿದೆ. ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ತಲೆದಂಡವಾಗಿದೆ. ಇದೀಗ ಈ ಬೆಳವಣಿಗೆಗಳಿಗೆ ಕಾರಣ ಏನೆಂಬುದನ್ನು ಸಚಿವ ಜಮೀರ್ ಅಹ್ಮದ್ ಬಹಿರಂಗಪಡಿಸಿದ್ದಾರೆ. ಜಬ್ಬಾರ್ ವಿಚಾರವಾಗಿ ಮಾತನಾಡಿದ ಜಮೀರ್ ಅಹ್ಮದ್, ಹೈಕಮಾಂಡ್‌ನಿಂದ ವೈಯಕ್ತಿಕ ಸಂಪರ್ಕದ ಕೊರತೆಯಿಂದ ಅವರು ಮನನೊಂದು ಮನೆಯಲ್ಲೇ ಉಳಿದಿದ್ದರು. ಅಲ್ಲದೆ, ಅನಾರೋಗ್ಯವೂ ಇದಕ್ಕೆ ಕಾರಣ ಎಂದು ತಿಳಿಸಿದ್ದಾರೆ. ಪಕ್ಷದ ಅಭ್ಯರ್ಥಿಯ ಗೆಲುವು ಮುಖ್ಯ ಎಂದು ಜಬ್ಬಾರ್‌ಗೆ ಮನವಿ ಮಾಡಿದ್ದರೂ, ಪಕ್ಕದ ಮನೆಗೇ ಬಂದು ತಮ್ಮ ಮನೆಗೆ ಹೈಕಮಾಂಡ್ ನಾಯಕರು ಭೇಟಿ ನೀಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು ಎಂದು ಜಮೀರ್ ತಿಳಿಸಿದ್ದಾರೆ.

ಇನ್ನು ನಸೀರ್ ಅಹ್ಮದ್ ಅವರ ವಿಷಯದಲ್ಲಿ ಮಾತನಾಡಿ, ಮಾನ್ಯ ಮುಖ್ಯಮಂತ್ರಿಗಳು ಬಾಗಲಕೋಟೆ ಉಪಚುನಾವಣೆಯ ಜವಾಬ್ದಾರಿಯನ್ನು ಅವರಿಗೆ ವಹಿಸಿದ್ದರು. ನಸೀರ್ ಅಹ್ಮದ್ ಹತ್ತು ದಿನಗಳ ಕಾಲ ಬಾಗಲಕೋಟೆಯಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದಾರೆ. ದಾವಣಗೆರೆಗೆ ಬಂದು ಹೋಗಲು ಅನುಮತಿ ಕೇಳಿದಾಗ, ಅಲ್ಲಿಯೇ ಉಳಿದು ಕೆಲಸ ಮಾಡಲು ಮುಖ್ಯಮಂತ್ರಿಗಳು ಸೂಚಿಸಿದ್ದರು ಎಂದು ಜಮೀರ್ ಅಹ್ಮದ್ ಸ್ಪಷ್ಟಪಡಿಸಿದ್ದಾರೆ. ದಾವಣಗೆರೆಯಲ್ಲಿ ಸ್ಥಳೀಯ ಮುಸ್ಲಿಮರಲ್ಲಿ ಅಸಮಾಧಾನವಿದ್ದರೂ, ಈಗ ಪರಿಸ್ಥಿತಿ ಸುಧಾರಿಸಿದ್ದು, ಗೆಲುವು ನಿಶ್ಚಿತ ಎಂದು ಜಮೀರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Vishu Festival: ಕರಾವಳಿಯ ಸೌರ ಯುಗಾದಿಯ ಮಹತ್ವ ಮತ್ತು ಆಚರಣೆಯ ವೈಶಿಷ್ಟ್ಯಗಳು – Kannada News | Vishu Festival: Karnataka and Kerala’s New Year Celebrations, Traditions and Significance

ಭಾರತೀಯ ಸಂಸ್ಕೃತಿಯಲ್ಲಿ ಹೊಸ ವರ್ಷದ ಆರಂಭವನ್ನು ವಿವಿಧ ಹೆಸರುಗಳಿಂದ ಆಚರಿಸಲಾಗುತ್ತದೆ. ಕರ್ನಾಟಕದ ಕರಾವಳಿ ಭಾಗದಲ್ಲಿ ಹಾಗೂ ಕೇರಳದಲ್ಲಿ ಅತ್ಯಂತ ಸಡಗರದಿಂದ ಆಚರಿಸಲಾಗುವ ಹಬ್ಬವೇ ‘ವಿಷು’. ಸೂರ್ಯನು ಮೀನ ರಾಶಿಯಿಂದ ಮೇಷ ರಾಶಿಗೆ ಪ್ರವೇಶಿಸುವ ಸುಸಂದರ್ಭವನ್ನು ಈ ಹಬ್ಬವು ಸೂಚಿಸುತ್ತದೆ. ಸಂಸ್ಕೃತದಲ್ಲಿ ‘ವಿಷು’ ಎಂದರೆ ‘ಸಮಾನ’ ಎಂದರ್ಥ. ಈ ದಿನದಂದು ಹಗಲು ಮತ್ತು ರಾತ್ರಿಯ ಅವಧಿ ಸಮಾನವಾಗಿರುತ್ತದೆ ಎಂಬ ಭೌಗೋಳಿಕ ಹಿನ್ನೆಲೆ ಈ ಹೆಸರಿಗಿದೆ. ಇದನ್ನು ಕರಾವಳಿಯ ಜನರು ‘ಬಿಶು’ ಎಂದೂ ಕರೆಯುತ್ತಾರೆ.

ಹಬ್ಬದ ಪ್ರಮುಖ ಆಕರ್ಷಣೆ ‘ವಿಷು ಕಣಿ’ :

ವಿಷು ಹಬ್ಬದ ಅತ್ಯಂತ ಪವಿತ್ರವಾದ ಸಂಪ್ರದಾಯವೆಂದರೆ ‘ವಿಷು ಕಣಿ’ ನೋಡುವುದು. ಹಬ್ಬದ ದಿನ ಬೆಳಿಗ್ಗೆ ಕಣ್ಣು ಬಿಟ್ಟ ತಕ್ಷಣ ಕಾಣುವ ಮೊದಲ ದೃಶ್ಯ ಮಂಗಳಕರವಾಗಿರಬೇಕು ಎಂಬುದು ಇದರ ಹಿಂದಿನ ಆಶಯ. ದೇವರ ಮನೆಯಲ್ಲಿ ಅಕ್ಕಿ, ತೆಂಗಿನಕಾಯಿ, ಸೌತೆಕಾಯಿ, ಹಣ್ಣು-ಹಂಪಲು, ಚಿನ್ನ, ಬೆಳ್ಳಿ ನಾಣ್ಯಗಳು ಮತ್ತು ಕನ್ನಡಿಯನ್ನಿಟ್ಟು ಅಲಂಕರಿಸಲಾಗುತ್ತದೆ. ಈ ಆಚರಣೆಯಲ್ಲಿ ಹಳದಿ ಬಣ್ಣದ ‘ಕಣಿಕೊನ್ನ’ (ಕರ್ಣಿಕಾರ) ಹೂವುಗಳಿಗೆ ವಿಶೇಷ ಸ್ಥಾನವಿದೆ. ಬೆಳಿಗ್ಗೆ ಹಿರಿಯರು ಮನೆಯ ಸದಸ್ಯರ ಕಣ್ಣುಗಳನ್ನು ಮುಚ್ಚಿ ಕರೆತಂದು ಈ ‘ಕಣಿ’ಯನ್ನು ತೋರಿಸುತ್ತಾರೆ.

‘ವಿಷು ಕೈನೀಟಂ’ ಮತ್ತು ಹಿರಿಯರ ಆಶೀರ್ವಾದ:

ಮನೆಯ ಹಿರಿಯರು ಕಿರಿಯರಿಗೆ ಹಣವನ್ನು ನೀಡಿ ಆಶೀರ್ವದಿಸುವ ಪದ್ಧತಿಯನ್ನು ‘ವಿಷು ಕೈನೀಟಂ’ ಎನ್ನಲಾಗುತ್ತದೆ. ಇದು ಕೇವಲ ಹಣದ ಹಂಚಿಕೆಯಲ್ಲ, ಬದಲಾಗಿ ಮುಂದಿನ ವರ್ಷ ಪೂರ್ತಿ ಮನೆಯಲ್ಲಿ ಆರ್ಥಿಕ ಸಮೃದ್ಧಿ ನೆಲೆಸಲಿ ಎಂಬ ಹಾರೈಕೆಯಾಗಿದೆ.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ರುಚಿಕರವಾದ ವಿಷು ಭೋಜನ:

ವಿಷು ಹಬ್ಬದ ಅಡುಗೆಯಲ್ಲಿ ಸಮತೋಲನವಿರುತ್ತದೆ. ಜೀವನದ ಸುಖ-ದುಃಖಗಳನ್ನು ಸಮನಾಗಿ ಸ್ವೀಕರಿಸಬೇಕು ಎಂಬ ಸಂದೇಶ ನೀಡಲು ಈ ದಿನ ಕಹಿ, ಸಿಹಿ, ಹುಳಿ ಮತ್ತು ಉಪ್ಪು ಮಿಶ್ರಿತ ಖಾದ್ಯಗಳನ್ನು ಸಿದ್ಧಪಡಿಸಲಾಗುತ್ತದೆ. ‘ವಿಷು ಕಂಜಿ’ (ಗಂಜಿ) ಮತ್ತು ಪಾಯಸ ಈ ದಿನದ ವಿಶೇಷ.

ಸಾಂಸ್ಕೃತಿಕ ಮಹತ್ವ:

ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ವಿಷು ಹಬ್ಬವು ಸುಗ್ಗಿ ಕಾಲದ ಮುಕ್ತಾಯ ಮತ್ತು ಹೊಸ ಬಿತ್ತನೆಯ ಆರಂಭದ ಸಂಕೇತವೂ ಹೌದು. ದೇವಸ್ಥಾನಗಳಲ್ಲಿ ಈ ದಿನ ವಿಶೇಷ ಪೂಜೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ನಮ್ಮ ಸಂಪ್ರದಾಯದ ಶ್ರೀಮಂತಿಕೆಯನ್ನು ಬಿಂಬಿಸುವ ವಿಷು ಹಬ್ಬವು ಸಮೃದ್ಧಿ, ಶಾಂತಿ ಮತ್ತು ಹೊಸ ಭರವಸೆಗಳನ್ನು ಹೊತ್ತು ತರುತ್ತದೆ. ಕೇವಲ ಧಾರ್ಮಿಕ ಆಚರಣೆಯಷ್ಟೇ ಅಲ್ಲದೆ, ಕುಟುಂಬದವರೆಲ್ಲರೂ ಒಂದೆಡೆ ಸೇರಿ ಸಂಭ್ರಮಿಸುವ ಈ ಹಬ್ಬವು ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Gold Rates: ಚಿನ್ನದ ಬೆಲೆ 135 ರೂ ಹೆಚ್ಚಳ; ಇಲ್ಲಿದೆ ದರಪಟ್ಟಿ – Kannada News | Gold prices 14th april 2026 gold rates rise as silver remains unmoved news in kannada

ಬೆಂಗಳೂರು, ಏಪ್ರಿಲ್ 14: ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರಿಳಿತಗಳನ್ನು ಕಾಣುತ್ತಲೇ ಇದೆ. ಒಂದು ದಿನ ಕಡಿಮೆಗೊಂಡರೆ, ಮತ್ತೊಂದು ದಿನ ಏರಿಕೆ ಆಗುತ್ತಿದೆ. ಇವತ್ತು ಮಂಗಳವಾರ ಚಿನ್ನದ ಬೆಲೆಯಲ್ಲಿ (Gold Rates) ಗ್ರಾಮ್​​ಗೆ 135 ರೂಗಳಷ್ಟು ಹೆಚ್ಚಳ ಆಗಿದೆ. ಇದರ ಬೆಲೆ ಮತ್ತೊಮ್ಮೆ 14,000 ರೂ ಗಡಿ ದಾಟಿ ಹೋಗಿದೆ. ಇದೇ ವೇಳೆ, ಬೆಳ್ಳಿ ಬೆಲೆ ಇವತ್ತು ಬದಲಾವಣೆ ಕಂಡಿಲ್ಲ. ನಿನ್ನೆಯ ದರವೇ ಮುಂದುವರಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,41,100 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,53,930 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 25,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,41,100 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 25,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 26,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಏಪ್ರಿಲ್ 14ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,393 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,110 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,545 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 255 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,393 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,110 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 255 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,110 ರೂ
  • ಚೆನ್ನೈ: 14,220 ರೂ
  • ಮುಂಬೈ: 14,110 ರೂ
  • ದೆಹಲಿ: 14,125 ರೂ
  • ಕೋಲ್ಕತಾ: 14,110 ರೂ
  • ಕೇರಳ: 14,110 ರೂ
  • ಅಹ್ಮದಾಬಾದ್: 14,115 ರೂ
  • ಜೈಪುರ್: 14,125 ರೂ
  • ಲಕ್ನೋ: 14,125 ರೂ
  • ಭುವನೇಶ್ವರ್: 14,110 ರೂ

ಇದನ್ನೂ ಓದಿ: ಕಿಸಾನ್ ವಿಕಾಸ್ ಪತ್ರ; ಹಣ ಡಬಲ್ ಮಾಡುವ ಪೋಸ್ಟ್ ಆಫೀಸ್ ಸ್ಕೀಮ್

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 581 ರಿಂಗಿಟ್ (13,709 ರುಪಾಯಿ)
  • ದುಬೈ: 527.75 ಡಿರಾಮ್ (13,406 ರುಪಾಯಿ)
  • ಅಮೆರಿಕ: 147 ಡಾಲರ್ (13,716 ರುಪಾಯಿ)
  • ಸಿಂಗಾಪುರ: 189.40 ಸಿಂಗಾಪುರ್ ಡಾಲರ್ (13,879 ರುಪಾಯಿ)
  • ಕತಾರ್: 526 ಕತಾರಿ ರಿಯಾಲ್ (13,479 ರೂ)
  • ಸೌದಿ ಅರೇಬಿಯಾ: 538 ಸೌದಿ ರಿಯಾಲ್ (13,376 ರುಪಾಯಿ)
  • ಓಮನ್: 56.05 ಒಮಾನಿ ರಿಯಾಲ್ (13,583 ರುಪಾಯಿ)
  • ಕುವೇತ್: 43.56 ಕುವೇತಿ ದಿನಾರ್ (13,267 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 255 ರೂ
  • ಚೆನ್ನೈ: 260 ರೂ
  • ಮುಂಬೈ: 255 ರೂ
  • ದೆಹಲಿ: 255 ರೂ
  • ಕೋಲ್ಕತಾ: 255 ರೂ
  • ಕೇರಳ: 260 ರೂ
  • ಅಹ್ಮದಾಬಾದ್: 255 ರೂ
  • ಜೈಪುರ್: 255 ರೂ
  • ಲಕ್ನೋ: 255 ರೂ
  • ಭುವನೇಶ್ವರ್: 260 ರೂ
  • ಪುಣೆ: 255

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಸುರಕ್ಷತೆಗೆ ಮೊದಲ ಆದ್ಯತೆ: ಮುಂಬೈ ಹಳಿಗಳ ಮೇಲೆ ಓಡಲಿದೆ ಮೊದಲ ‘ಕ್ಲೋಸ್ಡ್ ಡೋರ್’ ನಾನ್-ಎಸಿ ರೈಲು – Kannada News | Mumbai’s First Non AC Sealed Door Local Train, What Makes It Stand Out

ಮುಂಬೈ, ಏಪ್ರಿಲ್ 14: ಮುಂಬೈನ ರೈಲು(Train) ಹಳಿಗಳ ಮೇಲೆ ಪ್ರತಿದಿನ ಲಕ್ಷಾಂತರ ಕನಸುಗಳು ಪ್ರಯಾಣಿಸುತ್ತವೆ. ಆದರೆ, ಆ ಕನಸುಗಳ ಜೊತೆಗೇ ಸಾವು ಕೂಡ ತೆರೆದ ಬಾಗಿಲುಗಳ ರೂಪದಲ್ಲಿ ಹೊಂಚು ಹಾಕುತ್ತಿರುತ್ತದೆ. 2025ರ ಜೂನ್‌ನಲ್ಲಿ ನಡೆದ ‘ಮುಂಬ್ರಾ ರೈಲು ಅಪಘಾತ’ ಇಡೀ ದೇಶವನ್ನು ನಡುಗಿಸಿತ್ತು. ಕಿಕ್ಕಿರಿದು ತುಂಬಿದ್ದ ರೈಲಿನ ತೆರೆದ ಬಾಗಿಲಿನಿಂದ ಆಯತಪ್ಪಿ ಬಿದ್ದ ಪ್ರಯಾಣಿಕರು ಪ್ರಾಣ ಕಳೆದುಕೊಂಡಾಗ, “ಪ್ರಗತಿಗಿಂತ ಪ್ರಯಾಣಿಕರ ಪ್ರಾಣ ಮುಖ್ಯ” ಎಂಬ ಕೂಗು ಕೇಳಿಬಂತು.

ಇದೀಗ ಆ ಕೂಗಿಗೆ ಉತ್ತರ ಸಿಕ್ಕಿದೆ, ಭಾರತೀಯ ರೈಲ್ವೆಯ ಇತಿಹಾಸದಲ್ಲೇ ಮೊದಲ ಬಾರಿಗೆ, ಹವಾನಿಯಂತ್ರಣ (AC) ಇಲ್ಲದಿದ್ದರೂ ಬಾಗಿಲುಗಳು ಸ್ವಯಂಚಾಲಿತವಾಗಿ ಮುಚ್ಚುವ ಹೈಟೆಕ್ ರೈಲೊಂದು ಸಿದ್ಧವಾಗಿದೆ.

ರೈಲ್ವೆ ಮಂತ್ರಿಯ ಸಂಕಲ್ಪ, ಎಂಜಿನಿಯರ್‌ಗಳ ಸಾಧನೆ
ಪ್ರಯಾಣಿಕರ ಸುರಕ್ಷತೆಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದೆಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ನೀಡಿದ ಕಟ್ಟುನಿಟ್ಟಿನ ನಿರ್ದೇಶನದ ಫಲವಾಗಿ ಈ ‘ಪ್ರೊಟೊಟೈಪ್’ (ಮೂಲಮಾದರಿ) ರೈಲು ಸೃಷ್ಟಿಯಾಗಿದೆ. ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ICF) ರೈಲ್ವೆ ಮಂಡಳಿಯ ಸಹಯೋಗದೊಂದಿಗೆ ಈ 12 ಬೋಗಿಗಳ (ಸಂಖ್ಯೆ 268201-268212) ರೈಲನ್ನು ವಿನ್ಯಾಸಗೊಳಿಸಿದೆ.

ಮತ್ತಷ್ಟು ಓದಿ: Video: ತಾಂತ್ರಿಕ ದೋಷ, ನಿಂತಿದ್ದ ರೈಲಿನಿಂದ ಇಳಿದ ಪ್ರಯಾಣಿಕನ ಮೇಲೆ ಹರಿದ ಮತ್ತೊಂದು ರೈಲು

ಈ ರೈಲಿನ  ವೈಶಿಷ್ಟ್ಯವೇನು?
ಜೀವ ರಕ್ಷಕ ಬಾಗಿಲುಗಳು: ಮೆಟ್ರೋ ರೈಲುಗಳ ಮಾದರಿಯಲ್ಲಿ ಇದರ ಬಾಗಿಲುಗಳು ತಾವಾಗಿಯೇ ಮುಚ್ಚಿಕೊಳ್ಳುತ್ತವೆ. ಬಾಗಿಲು ಪೂರ್ಣವಾಗಿ ಮುಚ್ಚದ ಹೊರತು ರೈಲು ಇಂಚೂ ಚಲಿಸುವುದಿಲ್ಲ, ಇದು ಬೀಳುವ ಭಯವಿಲ್ಲದ ಪ್ರಯಾಣವನ್ನು ಖಚಿತಪಡಿಸುತ್ತದೆ.

ಇದೊಂದು ವೆಸ್ಟಿಬುಲ್ ರೈಲಾಗಿದ್ದು, ಆರು ಬೋಗಿಗಳ ಎರಡು ಘಟಕಗಳನ್ನು ಒಳಗೊಂಡಿದೆ. ಪ್ರಯಾಣಿಕರು ಎಸಿ ರೈಲುಗಳಲ್ಲಿ ಇರುವಂತೆ ಒಂದು ಬೋಗಿಯಿಂದ ಮತ್ತೊಂದು ಬೋಗಿಗೆ ಆರಾಮವಾಗಿ ಚಲಿಸಬಹುದು. ಇದರಲ್ಲಿ ಪ್ರಥಮ ದರ್ಜೆ (First Class) ಎಂಬ ಭೇದವಿಲ್ಲ. ಎಲ್ಲರಿಗೂ ಸಮಾನವಾದ ಆಧುನಿಕ ಸೌಲಭ್ಯಗಳಿವೆ. ಮಹಿಳೆಯರ ಸುರಕ್ಷತೆಗಾಗಿ ವಿಶೇಷ ಬೋಗಿಗಳ ವ್ಯವಸ್ಥೆ ಮಾಡಲಾಗಿದೆ.

ಪ್ರಯಾಣಿಕರ ಆತಂಕ ಮತ್ತು ಸವಾಲು
ಬಾಗಿಲು ಮುಚ್ಚಿದರೆ ಎಸಿ ಇಲ್ಲದ ರೈಲಿನಲ್ಲಿ ಉಸಿರುಗಟ್ಟಬಹುದು ಎಂಬ ಆತಂಕ ಪ್ರಯಾಣಿಕರಲ್ಲಿದೆ. ಮುಂಬೈನ ವಿಪರೀತ ಬಿಸಿಲು ಮತ್ತು ಜನದಟ್ಟಣೆಯಲ್ಲಿ ಗಾಳಿಯ ಸಂಚಾರ ಹೇಗಿರಲಿದೆ ಎಂಬುದು ಸದ್ಯದ ದೊಡ್ಡ ಪ್ರಶ್ನೆ. ಆದರೆ, ರೈಲ್ವೆ ಇಲಾಖೆಯು ಗಾಳಿಯ ಮುಕ್ತ ಸಂಚಾರಕ್ಕಾಗಿ ವಿಶೇಷ ‘ವೆಂಟಿಲೇಶನ್’ ವ್ಯವಸ್ಥೆಯನ್ನು ಅಳವಡಿಸಿದ್ದು, ಪ್ರಾಯೋಗಿಕ ಓಡಾಟದ ನಂತರ ಇದಕ್ಕೆ ಅಂತಿಮ ರೂಪ ನೀಡಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಪ್ರಧಾನಿ ಮೋದಿ ಉದ್ಘಾಟಿಸಲಿರುವ ಭೈರವೈಕ್ಯ ಮಂದಿರ ಹೇಗಿದೆ? ಇಲ್ಲಿದೆ ವಿಡಿಯೋ – Kannada News | Inside PM Modi’s Inauguration: Adichunchanagiri’s Stunning Rs 80 Crore Bhairavaikya Mandira Revealed

ಮಂಡ್ಯ, ಏಪ್ರಿಲ್ 14: ಆದಿಚುಂಚನಗಿರಿಯಲ್ಲಿ ನಿರ್ಮಾಣವಾಗಿರುವ ಭವ್ಯ ಶ್ರೀ ಭೈರವೈಕ್ಯ ಮಂದಿರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 15 ರಂದು ಉದ್ಘಾಟಿಸಲಿದ್ದಾರೆ. ಕಳೆದ 10 ವರ್ಷಗಳಿಂದ ನಿರ್ಮಾಣ ಹಂತದಲ್ಲಿದ್ದ ಈ ಮಂದಿರ, ಸುಮಾರು 80 ಕೋಟಿ ರೂಪಾಯಿ ವೆಚ್ಚದಲ್ಲಿ ತಲೆ ಎತ್ತಿದೆ. ಈ ಮಂದಿರವು ಬಾಲ ಗಂಗಾಧರನಾಥ ಸ್ವಾಮೀಜಿಯವರ ಐಕ್ಯ ಸ್ಥಳದಲ್ಲಿದೆ. ಮಂದಿರದ ನಿರ್ಮಾಣವು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಕನಸಾಗಿತ್ತು. ಮಂದಿರವು ಹೊಯ್ಸಳ, ಚಾಲುಕ್ಯ, ಚೋಳ ಮತ್ತು ಗಂಗರ ಕಾಲದ ಶಿಲ್ಪಕಲೆಗಳ ಸಮಾಗಮವನ್ನು ಹೊಂದಿದೆ. ದ್ರಾವಿಡ ಶೈಲಿಯಲ್ಲಿ ನಿರ್ಮಿಸಿರುವ ಈ ಮಂದಿರ ವಾಸ್ತುಶಿಲ್ಪದ ಒಂದು ಅದ್ಭುತವಾಗಿದೆ. ಇದರ ಉದ್ಘಾಟನೆಗೆ ಕ್ಷಣಗಣನೆ ಆರಂಭಗೊಂಡಿದ್ದು, ಅಂತಿಮ ಸಿದ್ಧತೆಗಳು ಭರದಿಂದ ಸಾಗಿವೆ. ಪ್ರಧಾನಿ ಮೋದಿ ಅವರ ಆಗಮನಕ್ಕಾಗಿ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಮಂದಿರ ಹೇಗಿದೆ ಎಂಬುದನ್ನು ಈ ವಿಡಿಯೋದಲ್ಲಿ ನೋಡಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅರ್ಧ ಗಂಟೆಯಲ್ಲಿ ಮನೆಗೆ ಬಾ..: ಸಚಿವ ಜಮೀರ್​​ಗೆ ಸಿಎಂ ಸಿದ್ದರಾಮಯ್ಯ ಬುಲಾವ್ – Kannada News | Karnataka Politics: CM Calls Zameer Ahmed for Urgent Talks Following Minority Dissent

ಬೆಂಗಳೂರು. ಏ.14: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ನಂತರ ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಭಿನ್ನಮತದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಜಮೀರ್ ಅಹಮದ್ ಖಾನ್‌ಗೆ ತುರ್ತು ಬುಲಾವ್ ನೀಡಿದ್ದಾರೆ. ಸಿಎಂ ನಿವಾಸ ಕಾವೇರಿಯಲ್ಲಿ ಇನ್ನೇನು ಕೆಲವೇ ನಿಮಿಷಗಳಲ್ಲಿ ಸಿದ್ದರಾಮಯ್ಯ ಜಮೀರ್ ಅಹಮದ್ ಅವರೊಂದಿಗೆ ಮಹತ್ವದ ಸಭೆ ನಡೆಸಲಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರದಲ್ಲಿ ಅಲ್ಪಸಂಖ್ಯಾತ ನಾಯಕರ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು. ಚುನಾವಣಾ ಪ್ರಚಾರದಲ್ಲಿ ಜಮೀರ್ ಅಹಮದ್ ಭಾಗಿಯಾಗಿರಲಿಲ್ಲ ಎಂಬ ಆರೋಪ ಕೇಳಿಬಂದಿದೆ. ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಹಿನ್ನೆಲೆಯಲ್ಲಿ ಅಬ್ದುಲ್ ಜಬ್ಬಾರ್ ಈಗಾಗಲೇ ಅಲ್ಪಸಂಖ್ಯಾತ ಘಟಕದಿಂದ ರಾಜೀನಾಮೆ ನೀಡಿದ್ದಾರೆ. ಇದೇ ಕಾರಣಕ್ಕೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿದ್ದ ನಜೀರ್ ಅಹಮದ್ ಅವರನ್ನೂ ಕೂಡ ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ. ಹೈಕಮಾಂಡ್ ಸೂಚನೆಯಂತೆ ನಜೀರ್ ಅಹಮದ್ ರಾಜೀನಾಮೆ ನೀಡಲು ನಿರಾಕರಿಸಿದ ಕಾರಣ ಅವರನ್ನು ವಜಾಗೊಳಿಸಲಾಗಿದೆ. ಇದೀಗ ಜಮೀರ್ ಅಹಮದ್ ಖಾನ್ ಮತ್ತು ಸಿದ್ದರಾಮಯ್ಯ ನಡುವಿನ ಈ ಚರ್ಚೆಯು ಮತ್ತಷ್ಟು ಗೊಂದಲಗಳನ್ನು ನಿವಾರಿಸುವುದೇ ಅಥವಾ ಹೊಸ ವಿವಾದಗಳನ್ನು ಸೃಷ್ಟಿಸುವುದೇ ಎಂಬುದನ್ನು ಕಾದು ನೋಡಬೇಕಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ತ್ರಿಷಾ ಮನೆಯಲ್ಲಿ ಬಾಂಬ್ ಇಟ್ಟಿದ್ದೇವೆ, ಇನ್ನೇನು ಸ್ಫೋಟ ಗೊಳ್ಳುತ್ತೆ’ – Kannada News | Trisha’s Chennai Home Bomb Threat: Police Probe Fake Call, Fans Relieved

ನಾಯಕಿ ತ್ರಿಷಾ (Trisha) ಮನೆಗೆ ಬಂದಿರುವ ಬಾಂಬ್ ಬೆದರಿಕೆ ಸಂಚಲನ ಸೃಷ್ಟಿಸಿದೆ. ಸಿನಿಮಾ ಸೆಲೆಬ್ರಿಟಿಗಳನ್ನು ಗುರಿಯಾಗಿಸಿಕೊಂಡು ಬಾಂಬ್ ಬೆದರಿಕೆ ಹಾಕಿದ್ದ ಅಪರಿಚಿತ ವ್ಯಕ್ತಿಯನ್ನು ಬಂಧಿಸಲು ಪೊಲೀಸರು ಹುಡುಕಾಟ ನಡೆಸಿದ್ದಾರೆ. ತ್ರಿಷಾ ಮನೆಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ ಎನ್ನಲಾಗಿದೆ. ಇದು ಕೆಲವು ಕಾಲ ಅಭಿಮಾನಿಗಳಲ್ಲಿ ಸಾಕಷ್ಟು ಆತಂಕ ಸೃಷ್ಟಿ ಮಾಡಿತ್ತು.

ಚೆನ್ನೈನ ಅಲ್ವಾರ್‌ಪೇಟೆಯಲ್ಲಿರುವ ತ್ರಿಷಾ ಅವರ ನಿವಾಸದಲ್ಲಿ ಬಾಂಬ್ ಇಡಲಾಗಿದೆ ಎಂದು ಪೊಲೀಸ್ ನಿಯಂತ್ರಣ ಕೊಠಡಿಗೆ ಅಪರಿಚಿತ ವ್ಯಕ್ತಿಯಿಂದ ಫೋನ್ ಕರೆ ಬಂದಿತ್ತು. ಆ ವ್ಯಕ್ತಿ ಸ್ವಲ್ಪ ಹೊತ್ತಿನಲ್ಲೇ ಬಾಂಬ್ ಸ್ಫೋಟಗೊಳ್ಳಲಿದೆ ಎಂದು ಎಚ್ಚರಿಸಿದಾಗ ಪೊಲೀಸರು ಆಘಾತಕ್ಕೊಳಗಾದರು. ಎಚ್ಚೆತ್ತ ತೇನಂಪೇಟೆ ಪೊಲೀಸರು ತಕ್ಷಣವೇ ಬಾಂಬ್ ನಿಷ್ಕ್ರಿಯ ದಳ (ಬಿಡಿಡಿಎಸ್) ಮತ್ತು ಭದ್ರತಾ ಸಿಬ್ಬಂದಿಯೊಂದಿಗೆ ತ್ರಿಷಾ ಅವರ ಮನೆಗೆ ತಲುಪಿದರು. ಪೊಲೀಸ್ ತಂಡಗಳು ತ್ರಿಷಾ ಅವರ ಮನೆಯ ಪ್ರತಿಯೊಂದು ಮೂಲೆಯನ್ನೂ ಸಂಪೂರ್ಣವಾಗಿ ಪರಿಶೀಲಿಸಿದವು.

ಸುಮಾರು ಗಂಟೆಗಳ ಕಾಲ ನಡೆದ ಈ ಹುಡುಕಾಟದಲ್ಲಿ ಯಾವುದೇ ಸ್ಫೋಟಕಗಳು ಕಂಡುಬಂದಿಲ್ಲ. ಕೊನೆಗೆ, ಇದು ಹುಸಿ ಬಾಂಬ್ ಕರೆ ಎಂದು ದೃಢಪಟ್ಟಾಗ ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಈ ಸಮಯದಲ್ಲಿ, ತ್ರಿಷಾ ಶೂಟಿಂಗ್‌ಗಾಗಿ ಹೊರಗೆ ಇದ್ದಾರೋ ಅಥವಾ ಮನೆಯಲ್ಲಿದ್ದಾರೋ ಎಂಬುದು ಇನ್ನೂ ಸ್ಪಷ್ಟವಾಗಬೇಕಿದೆ.

ಈ ನಕಲಿ ಫೋನ್ ಕರೆ ಎಲ್ಲಿಂದ ಬಂತು? ಯಾರು ಮಾಡಿದ್ದಾರೆ? ಎಂಬ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸೈಬರ್ ಕ್ರೈಮ್ ಪೊಲೀಸರ ಸಹಾಯದಿಂದ, ಫೋನ್ ಸಿಗ್ನಲ್‌ಗಳ ಆಧಾರದ ಮೇಲೆ ಆರೋಪಿಗಳನ್ನು ಗುರುತಿಸಲು ಪ್ರಯತ್ನಿಸುತ್ತಿದ್ದಾರೆ. ಸಾಮಾನ್ಯವಾಗಿ ಇಂತಹ ಕೆಲಸಗಳನ್ನು ಮಾಡುವವರು ಮಾನಸಿಕ ಅಸ್ವಸ್ಥರು ಅಥವಾ ದರೋಡೆಕೋರರಾಗಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ.

ಇದನ್ನೂ ಓದಿ: ‘ಇಂಥವರಿಗೆಲ್ಲ ತ್ರಿಷಾ ಉತ್ತರಿಸಬೇಕಿಲ್ಲ’; ಖಡಕ್ ಆಗಿ ಹೇಳಿದ ಖುಷ್ಬೂ ಸುಂದರ್

ತಮಿಳು ಚಿತ್ರರಂಗದ ಟಾಪ್ ನಟರ ಮನೆಗಳಿಗೆ ಬಾಂಬ್ ಬೆದರಿಕೆ ಕರೆಗಳು ಬಂದಿರುವುದು ಇದೇ ಮೊದಲಲ್ಲ. ಈ ಹಿಂದೆ, ರಜನಿಕಾಂತ್, ವಿಜಯ್, ಅಜಿತ್ ಮತ್ತು ಸೂರ್ಯ ಅವರಂತಹ ಸ್ಟಾರ್ ಹೀರೋಗಳ ಮನೆಗಳಿಗೂ ಇದೇ ರೀತಿಯ ಹುಸಿ ಬಾಂಬ್ ಬೆದರಿಕೆ ಕರೆಗಳು ಬಂದಿವೆ. ತ್ರಿಷಾ ಅವರ ಮನೆಯನ್ನು ಗುರಿಯಾಗಿಸಿಕೊಂಡು ಇತ್ತೀಚೆಗೆ ನಡೆಸಲಾದ ದಾಳಿ ಚರ್ಚೆಯ ವಿಷಯವಾಗಿದೆ. ಈ ಘಟನೆ ಮತ್ತೊಮ್ಮೆ ಸೆಲೆಬ್ರಿಟಿಗಳ ಸುರಕ್ಷತೆಯ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

49 ಲಕ್ಷ ರೂ. ಟಿಕೆಟ್ ಇದ್ದರೂ ವಿಮಾನವೇರಲು ಬಿಡಲಿಲ್ಲ! ಕೋರ್ಟ್ ಮೆಟ್ಟಿಲೇರಿತು ಬೆಂಗಳೂರು ವಿಮಾನ ನಿಲ್ದಾಣದ ಅಪರೂಪದ ಪ್ರಕರಣ – Kannada News | FIR Against KLM Airlines CEO: Family Denied Boarding at Bengaluru Airport Despite Spending Rs 49 Lakh on Tickets

ಕೆಎಲ್‌ಎಂ ಏರ್‌ಲೈನ್ಸ್Image Credit source: KLM Royal Dutch Airlines Instagram

ಬೆಂಗಳೂರು, ಏಪ್ರಿಲ್ 14: ಕುಟುಂಬದೊಂದಿಗೆ ಪೆರು ದೇಶಕ್ಕೆ ಪ್ರವಾಸಕ್ಕೆಂದು ತೆರಳಲು ಸಿದ್ಧವಾಗಿದ್ದ ತಮಿಳುನಾಡಿನ ಕುಟುಂಬವೊಂದಕ್ಕೆ ಕೆಎಲ್‌ಎಂ ರಾಯಲ್ ಡಚ್ ಏರ್‌ಲೈನ್ಸ್ (KLM Royal Dutch Airlines) ಸಿಬ್ಬಂದಿ ಬೋರ್ಡಿಂಗ್ ನಿರಾಕರಿಸಿರುವ ಘಟನೆ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್​ರೀಯ ವಿಮಾನ ನಿಲ್ದಾಣದಲ್ಲಿ (KIA) ನಡೆದಿದೆ. ಅದೀಗ ಕಾನೂನು ಸಮರಕ್ಕೆ ದಾರಿ ಮಾಡಿಕೊಟ್ಟಿದೆ. ಈ ಸಂಬಂಧ ವಿಮಾನಯಾನ ಸಂಸ್ಥೆಯ ಸಿಇಒ ಮತ್ತು ಸಿಒಒ ಸೇರಿದಂತೆ ಉನ್ನತ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ದೇವನಹಳ್ಳಿ ಸಿವಿಲ್ ಕೋರ್ಟ್​ ಆದೇಶಿಸಿದೆ.

ಏನಿದು ಘಟನೆ?

ತಮಿಳುನಾಡಿನ ಸೇಲಂ ಮೂಲದ ವೈದ್ಯಕೀಯ ಸಂಸ್ಥೆಯೊಂದರ ಅಧ್ಯಕ್ಷ ಜೆ.ಎಸ್. ಸತೀಶ್‌ ಕುಮಾರ್ ತಮ್ಮ ಕುಟುಂಬದ ಎಂಟು ಸದಸ್ಯರೊಂದಿಗೆ ಪೆರು ಪ್ರವಾಸಕ್ಕೆ ಯೋಜಿಸಿದ್ದರು. ಇದಕ್ಕಾಗಿ ಸುಮಾರು 49 ಲಕ್ಷ ರೂಪಾಯಿ ವೆಚ್ಚ ಮಾಡಿ ಬಿಸಿನೆಸ್ ಕ್ಲಾಸ್ ಟಿಕೆಟ್‌ಗಳನ್ನು ಬುಕ್ ಮಾಡಿದ್ದರು. 2024ರ ಜೂನ್ 19 ರಂದು ಬೆಂಗಳೂರಿನಿಂದ ವಿಮಾನ ಏರಲು ಸಿದ್ಧರಾಗಿದ್ದ ಇವರಿಗೆ, ಕೊನೆಯ ಕ್ಷಣದಲ್ಲಿ ಪೆರು ವೀಸಾ ಇಲ್ಲ ಎಂಬ ಕಾರಣ ನೀಡಿ ವಿಮಾನ ಏರಲು ಸಿಬ್ಬಂದಿ ತಡೆದಿದ್ದರು.

ವೀಸಾ ನಿಯಮಗಳ ಗೊಂದಲ

ಸತೀಶ್‌ ಕುಮಾರ್ ಅವರ ಪ್ರಕಾರ, ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರು ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾ ಅಥವಾ ಷೆಂಗೆನ್ ವೀಸಾ ಹೊಂದಿದ್ದರೆ ಪೆರು ದೇಶಕ್ಕೆ ಪ್ರವೇಶಿಸಲು ಪ್ರತ್ಯೇಕ ವೀಸಾ ಅಗತ್ಯವಿಲ್ಲ. ಈ ನಿಯಮವಿದ್ದರೂ ಏರ್‌ಲೈನ್ಸ್ ಸಿಬ್ಬಂದಿ ಇದನ್ನು ತಪ್ಪಾಗಿ ಅರ್ಥೈಸಿ ಪ್ರವಾಸಕ್ಕೆ ಅಡ್ಡಿಪಡಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

‘ರೆಡ್ ಫ್ಲ್ಯಾಗ್’ನಿಂದ ಮತ್ತಷ್ಟು ತೊಂದರೆ

ಘಟನೆ ಬಳಿಕ ಕುಟುಂಬದವರು ಪ್ರತಿಭಟಿಸಿದಾಗ, ಏರ್‌ಲೈನ್ಸ್ ಸಂಸ್ಥೆಯು ಅವರ ವಿರುದ್ಧ ‘ರೆಡ್ ಫ್ಲ್ಯಾಗ್ (Internal Red-flagging)’ ಮಾಡಿದೆ ಎಂದು ಆರೋಪಿಸಲಾಗಿದೆ. ಇದರಿಂದಾಗಿ ಸತೀಶ್‌ಕುಮಾರ್ ಅವರ ಮಗ ಸಿಂಗಾಪುರಕ್ಕೆ ತೆರಳಿದಾಗ ಪೆರುನಿಂದ ಗಡಿಪಾರು ಮಾಡಲಾಗಿದೆ ಎಂಬ ತಪ್ಪು ಮಾಹಿತಿಯ ಆಧಾರದ ಮೇಲೆ ವಿಚಾರಣೆ ಎದುರಿಸಬೇಕಾಯಿತು. ಈ ಅವಮಾನ ಮತ್ತು ಆರ್ಥಿಕ ನಷ್ಟದ ವಿರುದ್ಧ ಕುಟುಂಬ ನ್ಯಾಯಾಲಯದ ಮೊರೆ ಹೋಗಿದೆ.

‘ರೆಡ್ ಫ್ಲ್ಯಾಗ್’ ಎಂದರೇನು?

ಅಂತರಾಷ್ಟ್ರೀಯ ಪ್ರಯಾಣದಲ್ಲಿ ‘ರೆಡ್ ಫ್ಲ್ಯಾಗಿಂಗ್ (Red-flagging)’ ಎಂದರೆ ಒಬ್ಬ ಪ್ರಯಾಣಿಕನನ್ನು ‘ಹೆಚ್ಚಿನ ನಿಗಾ ವಹಿಸಬೇಕಾದ ವ್ಯಕ್ತಿ’ ಎಂದು ವಿಮಾನಯಾನ ಸಂಸ್ಥೆಗಳು ಅಥವಾ ವಲಸೆ ಅಧಿಕಾರಿಗಳ ಡೇಟಾಬೇಸ್‌ನಲ್ಲಿ ಗುರುತು ಮಾಡುವುದು. ಇದು ಒಂದು ರೀತಿಯ ಡಿಜಿಟಲ್ ಎಚ್ಚರಿಕೆಯಾಗಿದ್ದು, ಪ್ರಯಾಣಿಕನು ಈ ಹಿಂದೆ ವೀಸಾ ನಿಯಮಗಳನ್ನು ಉಲ್ಲಂಘಿಸಿದ್ದಾನೆ, ಗಡಿಪಾರು (Deported) ಆಗಿದ್ದಾನೆ ಅಥವಾ ಅನುಮಾನಾಸ್ಪದ ಚಟುವಟಿಕೆಗಳಲ್ಲಿ ತೊಡಗಿದ್ದಾನೆ ಎಂಬ ಸಂಕೇತವನ್ನು ನೀಡುತ್ತದೆ. ಒಮ್ಮೆ ಈ ರೀತಿ ‘ರೆಡ್ ಫ್ಲ್ಯಾಗ್’ ಆದರೆ, ಆ ಪ್ರಯಾಣಿಕನು ಯಾವುದೇ ದೇಶಕ್ಕೆ ಹೋದರೂ ವಿಮಾನ ನಿಲ್ದಾಣಗಳಲ್ಲಿ ತೀವ್ರ ವಿಚಾರಣೆ, ತಪಾಸಣೆ ಮತ್ತು ಪದೇ ಪದೇ ಬೋರ್ಡಿಂಗ್ ನಿರಾಕರಣೆಯಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೊದಲ ಹಾಲಿವುಡ್ ಸಂದರ್ಶನದಲ್ಲಿ ಯಶ್ ಹೇಳಿದ್ದೇನು? – Kannada News | Yash is at CinemaCon 2026 promoting Ramayana and Toxic

ನಟ ಯಶ್ (Yash) ಪ್ಯಾನ್ ಇಂಡಿಯಾ ದಾಟಿ ಈಗ ಪ್ಯಾನ್ ವರ್ಲ್ಡ್ ಮೇಲೆ ಕಣ್ಣಿಟ್ಟಿದ್ದಾರೆ. ತಮ್ಮ ‘ಟಾಕ್ಸಿಕ್’ ಸಿನಿಮಾವನ್ನು ಇಂಗ್ಲೀಷ್​​ನಲ್ಲಿಯೂ ಚಿತ್ರೀಕರಿಸಿದ್ದು, ವಿದೇಶಗಳಲ್ಲಿ ಸಿನಿಮಾ ಅನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ. ಇದೀಗ ಯಶ್ ನಟನೆಯ ‘ರಾಮಾಯಣ’ ಸಿನಿಮಾ ಸಹ ಜಾಗತಿಕವಾಗಿ ಗಮನ ಸೆಳೆಯುತ್ತಿದ್ದು, ಸಿನಿಮಾದ ಪ್ರಚಾರಕ್ಕಾಗಿ ಇತ್ತೀಚೆಗಷ್ಟೆ ನಟ ಯಶ್ ಲಾಸ್ ಏಂಜಲ್ಸ್ ನಲ್ಲಿ ನಡೆದ ‘ಸಿನಿಮಾಕಾನ್ 2026’ ಈ ವೇಳೆ ಅವರು ತಮ್ಮ ಮೊದಲ ಹಾಲಿವುಡ್ ಸಂದರ್ಶನ ನೀಡಿದ್ದಾರೆ.

‘ರಾಮಾಯಣ’ ಸಿನಿಮಾದ ನಿರ್ಮಾಪಕ ನಮಿತ್ ಮಲ್ಹೋತ್ರಾ ಮತ್ತು ನಟ ಯಶ್ ಅವರುಗಳು ‘ಸಿನಿಮಾಕಾನ್ 2026’ನಲ್ಲಿ ಭಾಗಿ ಆಗಿದ್ದರು. ಈ ವೇಳೆ ಕೆಲವಾರು ಹಾಲಿವುಡ್ ಟಿವಿ, ಮ್ಯಾಗಜೀನ್​​ಗಳಿಗೆ ಸಂದರ್ಶನವನ್ನು ಇಬ್ಬರೂ ನೀಡಿದ್ದಾರೆ. ಈ ವೇಳೆ ನಟ ಯಶ್ ಅವರು ‘ರಾಮಾಯಣ’ ಮತ್ತು ‘ಟಾಕ್ಸಿಕ್’ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗುತ್ತಿದೆ.

ಫ್ಯಾನ್​​ಡಾಗೊ ಸೇರಿದಂತೆ ಇನ್ನೂ ಕೆಲವು ಸಿನಿಮಾ ಟಿವಿ, ಮ್ಯಾಗಜೀನ್​​​ಗಳಿಗೆ ಯಶ್ ಮತ್ತು ನಮಿತ್ ಮಲ್ಹೋತ್ರಾ ಸಂದರ್ಶನ ನೀಡಿದ್ದಾರೆ. ಯಶ್ ಹಾಗೂ ನಮಿತ್ ಅವರು ಸಂದರ್ಶನ ನೀಡುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಯಶ್, ಎಂದಿನಂತೆ ಗಡ್ಡ ಬಿಟ್ಟು, ನೀಲಿ ಬಣ್ಣದ ಜಾಕೆಟ್, ಜೀನ್ಸ್ ಪ್ಯಾಂಟ್ ಧರಿಸಿ ಖಡಕ್ ಆಗಿ ಕಾಣುತ್ತಿದ್ದಾರೆ.

ಇದನ್ನೂ ಓದಿ:ಯಶ್ ರಾವಣನ ಪಾತ್ರ ಒಪ್ಪಿಕೊಳ್ಳಲು ಕಾರಣ ಆಗಿದ್ದು ಆ ಒಂದು ವಿಷಯ

ಯಶ್ ಅವರು ‘ರಾಮಾಯಣ’ ಸಿನಿಮಾನಲ್ಲಿ ರಾವಣನ ಪಾತ್ರದಲ್ಲಿ ನಟಿಸಿದ್ದಾರೆ. ರಣ್​​ಬೀರ್ ಕಪೂರ್ ಅವರು ರಾಮನ ಪಾತ್ರದಲ್ಲಿ, ಸಾಯಿ ಪಲ್ಲವಿ ಸೀತೆಯ ಪಾತ್ರದಲ್ಲಿ ನಟಸಿದ್ದಾರೆ. ‘ರಾಮಾಯಣ’ ಸಿನಿಮಾಕ್ಕೆ ಯಶ್ ಅವರು ಸಹ ನಿರ್ಮಾಪಕ ಸಹ ಹೌದು. ಕೆಲ ದಿನಗಳ ಹಿಂದೆ ನಟ ರಣ್​​ಬೀರ್ ಕಪೂರ್ ಅವರು ಕಾಮಿಕಾನ್​​ಗೆ ಹೋಗಿ ‘ರಾಮಾಯಣ’ದ ಪ್ರಚಾರ ಮಾಡಿದ್ದರು. ಹಾಲಿವುಡ್​​ನಲ್ಲಿ ಸಿನಿಮಾದ ಟೀಸರ್ ಅನ್ನು ಬಿಡುಗಡೆ ಮಾಡಿದ್ದರು.

ಯಶ್ ನಟನೆಯ ‘ರಾಮಾಯಣ’ ಸಿನಿಮಾ ಇದೇ ವರ್ಷ ನವೆಂಬರ್ ತಿಂಗಳಲ್ಲಿ ಬಿಡುಗಡೆ ಆಗಲಿದೆ. ‘ಟಾಕ್ಸಿಕ್’ ಸಿನಿಮಾ ಜೂನ್ 4ಕ್ಕೆ ತೆರೆಗೆ ಬರಲಿದೆ. ‘ಟಾಕ್ಸಿಕ್’ ಸಿನಿಮಾಕ್ಕೆ ಸಹ ಕೆವಿಎನ್ ಜೊತೆಗೆ ಯಶ್ ಸಹ ಬಂಡವಾಳ ಹೂಡಿದ್ದಾರೆ. ಸಿನಿಮಾನಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್, ಹುಮಾ ಖುರೇಷಿ, ತಾರಾ ಸುತಾರಿಯಾ ಅವರುಗಳು ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ಗೀತು ಮೋಹನ್​​ದಾಸ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕಿಸಾನ್ ವಿಕಾಸ್ ಪತ್ರ; ಹಣ ಡಬಲ್ ಮಾಡುವ ಪೋಸ್ಟ್ ಆಫೀಸ್ ಸ್ಕೀಮ್ – Kannada News | Post office scheme Kisan Vikas Patra, investment amount, maturity, interest, tax and other details

ಜನಪ್ರಿಯ ಪೋಸ್ಟ್ ಆಫೀಸ್ ಸ್ಕೀಮ್​ಗಳಲ್ಲಿ ಕಿಸಾನ್ ವಿಕಾಸ್ ಪತ್ರವೂ (Kisan Vikas Patra) ಒಂದು. ಮೂಲತಃ ರೈತರಿಗೆಂದು ಇಂಡಿಯಾ ಪೋಸ್ಟ್ ಸಂಸ್ಥೆ 1988ರಲ್ಲಿ ಈ ಸ್ಕೀಮ್ ಅನ್ನು ಆರಂಭಿಸಿತ್ತು. ಇದನ್ನೀಗ ಎಲ್ಲರಿಗೂ ಲಭ್ಯವಾಗಿಸಲಾಗಿದೆ. 10 ವರ್ಷ ಮೇಲ್ಪಟ್ಟ ವಯಸ್ಸಿನ ಯಾವುದೇ ಭಾರತೀಯ ನಾಗರಿಕರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಅಪ್ರಾಪ್ತರಾಗಿದ್ದರೆ ಅವರ ಹೆಸರಿನಲ್ಲಿ ದೊಡ್ಡವರು ಖಾತೆ ತೆರೆದು, ನಂತರ ಅವರಿಗೆ ವರ್ಗಾವಣೆ ಮಾಡಲು ಅವಕಾಶ ಇದೆ.

ಕಿಸಾನ್ ವಿಕಾಸ್ ಪತ್ರದಲ್ಲಿ ಹೂಡಿಕೆ, ಅವಧಿ ಇತ್ಯಾದಿ ಮಾಹಿತಿ

ಕಿಸಾನ್ ವಿಕಾಸ್ ಪತ್ರದ ಅಕೌಂಟ್ 115 ತಿಂಗಳಿಗೆ ಮೆಚ್ಯೂರ್ ಆಗುತ್ತದೆ. ಅಂದರೆ, 9 ವರ್ಷ 5 ತಿಂಗಳಷ್ಟು ದೀರ್ಘದ ಯೋಜನೆ ಇದು. ಕನಿಷ್ಠ ಹೂಡಿಕೆ 1,000 ರೂ ಇದ್ದರೆ, ಗರಿಷ್ಠಕ್ಕೆ ಮಿತಿ ಇಲ್ಲ. ಆದರೆ, 10,000 ರೂ ಹಾಗೂ ಹೆಚ್ಚಿನ ಹಣದ ಹೂಡಿಕೆ ಮಾಡಿದರೆ ಅದರ ಆದಾಯ ಮೂಲವನ್ನು ತೋರಿಸಬೇಕು.

ಇದನ್ನೂ ಓದಿ: ಕೇವಲ 2,000 ರೂ ಹೂಡಿಕೆಯಲ್ಲಿ ಕೋಟಿ ರೂ ಗಳಿಸಬೇಕಾ? ಎಸ್​ಐಪಿ ಜೊತೆ ಸ್ಟೆಪಪ್ ತಂತ್ರ ಅನುಸರಿಸಿ

ಇದರಲ್ಲಿ ಮಾಡುವ ಹೂಡಿಕೆಯು ಮೆಚ್ಯೂರಿಟಿಗೆ ಬಂದಾಗ ಎರಡು ಪಟ್ಟು ಹೆಚ್ಚಿರುತ್ತದೆ. ಅಂದರೆ, 10 ವರ್ಷದೊಳಗೆ ನಿಮ್ಮ ಹಣ ಡಬಲ್ ಆಗಿರುತ್ತದೆ. ಕಿಸಾನ್ ವಿಕಾಸ್ ಪತ್ರ ಯೋಜನೆಯ ಕೆಲ ವಿವರ ಇಂತಿವೆ:

  • ಕೆವಿಪಿ ಯೋಜನೆ ಅವಧಿ: 115 ತಿಂಗಳು
  • ಹೂಡಿಕೆ ವಿಧಾನ: ಲಂಪ್ಸಮ್
  • ವಾರ್ಷಿಕ ಬಡ್ಡಿ: ಶೇ. 7.5
  • ಹೂಡಿಕೆ ಮೊತ್ತ: 1,000 ರೂನಿಂದ ಗರಿಷ್ಠ ಎಷ್ಟು ಬೇಕಾದರೂ.
  • ಎಲ್ಲಿ ಹೂಡಿಕೆ: ಪೋಸ್ಟ್ ಆಫೀಸ್ ಹಾಗೂ ಇಂಡಿಯಾ ಪೋಸ್ಟ್ ವೆಬ್​ಸೈಟ್​ನಲ್ಲಿ

ಇದನ್ನೂ ಓದಿ: ವಾಲಂಟರಿ ಪ್ರಾವಿಡೆಂಟ್ ಫಂಡ್; ನಿಮ್ಮ ಇಪಿಎಫ್ ಕಾರ್ಪಸ್ ಹೆಚ್ಚಿಸುವ ಒಂದು ಪ್ಲಾನ್

ಕಿಸಾನ್ ವಿಕಾಸ್ ಪತ್ರಕ್ಕೆ ತೆರಿಗೆ ಲಾಭ ಇಲ್ಲ

ಇತರ ಕೆಲ ಸ್ಮಾಲ್ ಸೇವಿಂಗ್ಸ್ ಸ್ಕೀಮ್​ಗಳಂತೆ ಕಿಸಾನ್ ವಿಕಾಸ್ ಪತ್ರ ಯೋಜನೆಯಿಂದ ಟ್ಯಾಕ್ಸ್ ಬೆನಿಫಿಟ್ ಇರುವುದಿಲ್ಲ. ಅಂದರೆ, ಸೆಕ್ಷನ್ 80ಸಿ ಅಡಿಯಲ್ಲಿ ಇದಕ್ಕೆ ಡಿಡಕ್ಷನ್ ಸೌಲಭ್ಯ ಇರುವುದಿಲ್ಲ. ಇದಕ್ಕೆ ಸಿಗುವ ಬಡ್ಡಿಗೆ ತೆರಿಗೆ ಅನ್ವಯ ಆಗುತ್ತದೆ. ಪ್ರತೀ ವರ್ಷ ಉತ್ಪತ್ತಿಯಾಗುವ ಬಡ್ಡಿ ಹಣಕ್ಕೆ ಶೇ 10ರಷ್ಟು ಟಿಡಿಎಸ್ ಕಡಿತಗೊಳಿಸಲಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link