All posts by nagaraj11081993

ಲವ್ ಜಿಹಾದ್ ಪ್ರಕರಣ: 9000 ವಿಡಿಯೋ, ಫೋಟೋ ಪತ್ತೆಯಾದ್ರೂ ಅರೆಸ್ಟ್ ಇಲ್ಲವೇಕೆ? ಪೊಲೀಸರಿಗೆ ಕಾಂಗ್ರೆಸ್​ ಶಾಸಕರಿಂದ ಒತ್ತಡ ಆರೋಪ – Kannada News | Musthafa Khadri Love Jihad: Police Face Heat Over Evidence, Political Pressure in Koppal

ಕೊಪ್ಪಳ, ಏ.14: ಜಿಲ್ಲೆಯಲ್ಲಿ ಬೆಳಕಿಗೆ ಬಂದಿರುವ ಮುಸ್ತಫಾ ಖಾದ್ರಿ ಎಂಬಾತನ ಲವ್ ಜಿಹಾದ್ ಆರೋಪ ಪ್ರಕರಣ ಈಗ ಹೊಸ ತಿರುವು ಪಡೆದಿದೆ. ಆರೋಪಿಯ ಮೊಬೈಲ್‌ನಲ್ಲಿ ಸಾವಿರಾರು ಅಶ್ಲೀಲ ವಿಡಿಯೋಗಳು ಮತ್ತು ಅಕ್ರಮ ಚಟುವಟಿಕೆಗಳ ಸಾಕ್ಷ್ಯಗಳಿದ್ದರೂ ಪೊಲೀಸರು ಆತನನ್ನು ಬಂಧಿಸಲು ಹಿಂಜರಿಯುತ್ತಿರುವುದು ಸಾರ್ವಜನಿಕರಲ್ಲಿ ಮತ್ತು ರಾಜಕೀಯ ವಲಯದಲ್ಲಿ ಹಲವು ಅನುಮಾನಗಳನ್ನು ಮೂಡಿಸಿದೆ.

ಬಂಧಿತನಾಗದ ಆರೋಪಿ ಮುಸ್ತಫಾ ಖಾದ್ರಿಯ ಮೊಬೈಲ್‌ನಲ್ಲಿ ಸುಮಾರು 9,000ಕ್ಕೂ ಅಧಿಕ ಅಶ್ಲೀಲ ವಿಡಿಯೋಗಳು ಮತ್ತು 7,000ಕ್ಕೂ ಅಧಿಕ ಫೋಟೋಗಳು ಪತ್ತೆಯಾಗಿವೆ ಎಂದು ಹೇಳಲಾಗಿದೆ. ಇದಲ್ಲದೆ, ಈತ ರಾಜಾರೋಷವಾಗಿ ಹುಕ್ಕಾ ಮತ್ತು ಗಾಂಜಾ ಸೇವಿಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದರೂ, ಪೊಲೀಸರು ಕೇವಲ ನೋಟಿಸ್ ನೀಡಿ ವಿಚಾರಣೆ ನಡೆಸುತ್ತೇವೆ ಎಂದು ಕಾಲಹರಣ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಬಿಜೆಪಿ ಮುಖಂಡ ಬಸವರಾಜ್ ಕ್ಯಾವಟರ್, “ಈ ಲವ್ ಜಿಹಾದ್ ಪ್ರಕರಣದ ಹಿಂದೆ ಕಾಂಗ್ರೆಸ್ ಸರ್ಕಾರದ ಕೈವಾಡವಿದೆ. ಜಿಲ್ಲೆಯ ಪ್ರಭಾವಿ ಶಾಸಕರು ಮತ್ತು ಸಂಸದರ ಒತ್ತಡಕ್ಕೆ ಮಣಿದು ಪೊಲೀಸರು ಆರೋಪಿಯನ್ನು ಬಂಧಿಸುತ್ತಿಲ್ಲ” ಎಂದು ದೂರಿದ್ದಾರೆ. ಇಷ್ಟೊಂದು ಸಾಕ್ಷ್ಯಗಳಿದ್ದರೂ ಕ್ರಮ ಕೈಗೊಳ್ಳದ ಪೊಲೀಸರ ನಿರ್ಲಕ್ಷ್ಯದ ವಿರುದ್ಧ ಅವರು ಕಿಡಿ ಕಾರಿದ್ದಾರೆ.

ಇದನ್ನೂ ಓದಿ: ತಾನೇ ಈ ಮಗುವಿನ ತಂದೆ ಹೌದೋ ಅಲ್ಲವೋ ಎಂಬ ಅನುಮಾನ, 6 ವರ್ಷದ ಮಗನನ್ನು ಕೊಂದು ಶವವ ನದಿಗೆಸೆದ ತಂದೆ

ದೂರು ದಾಖಲಾಗಿ ಎರಡು ದಿನಗಳಾದರೂ ಬಂಧನವಾಗದಿರುವುದು ಪ್ರಕರಣಕ್ಕೆ ಮತ್ತಷ್ಟು ಗಹನತೆ ತಂದಿದೆ. ಪೊಲೀಸರು ಈ ಪ್ರಕರಣವನ್ನು ಹಳ್ಳ ಹಿಡಿಸುತ್ತಿದ್ದಾರೆಯೇ ಅಥವಾ ಪ್ರಭಾವಿಗಳ ಒತ್ತಡಕ್ಕೆ ಮಣಿದಿದ್ದಾರೆಯೇ ಎಂಬುದು ಸದ್ಯದ ಪ್ರಶ್ನೆಯಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ನೀನೆಂಥಾ ಕಳ್ಳ ಮಾರಾಯಾ: ಕದಿಯಲು ಹೋಗಿ ಶೆಟರ್​ನಲ್ಲಿ ತಲೆ ಸಿಕ್ಕಿಸಿಕೊಂಡ ಕಳ್ಳ – Kannada News | Theft Gone Wrong: Burglar Gets Trapped in Shop Shutter Mid Break In

ಲಕ್ನೋ, ಏಪ್ರಿಲ್ 14: ಕಳ್ಳನೊಬ್ಬ ಕಳ್ಳತನ ಮಾಡಿ ಓಡಿ ಹೋಗುವಾಗ ಶೆಟರ್ ಹಾಗೂ ಗೋಡೆಯ ಮಧ್ಯದಲ್ಲಿ ತಲೆ ಸಿಕ್ಕಿಸಿಕೊಂಡಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್​ನಲ್ಲಿ ನಡೆದಿದೆ. ಇಂದಿರಾಪುರಂ ಪ್ರದೇಶದ ಅಭಯ್ ಖಾಂಡ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಕಳ್ಲನೊಬ್ಬ ಹೃದ್ರೋಗ ತಜ್ಞರ ಚಿಕಿತ್ಸಾಲಯದ ಮೇಲ್ಛಾವಣಿಯ ಮೂಲಕ ಪ್ರವೇಶಿಸಲು ಪ್ರಯತ್ನಿಸಿದ್ದಾನೆ. ಹಿಂದೆ ಬರಲೂ ಆಗದೆ ಮುಂದೆ ಹೋಗಲೂ ಆಗದೆ ಫಜೀತಿ ಅನುಭವಿಸಿದ್ದಾನೆ.ಆತ ಕೂಗಿಕೊಂಡಾಗ ನಿಕ್ ಸಿಬ್ಬಂದಿ ವಿಷಯ ಗೊತ್ತಾಗಿತ್ತು. ಪೊಲೀಸರಿಗೆ ಆತನನ್ನು ಸುರಕ್ಷಿತವಾಗಿ ಕೆಳಗಿಳಿಸುವುದು ಕೂಡ ಕಷ್ಟದ ಕೆಲಸವಾಗಿತ್ತು. ಎಚ್ಚರಿಕೆಯಿಂದ ಕೆಲವು ಉಪಕರಣಗಳನ್ನು ಬಳಸಿ ಕೊನೆಗೂ ಆತನನ್ನು ಬಿಡುಗಡೆಗೊಳಿಸಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಪ್ರಧಾನಿ ಮೋದಿಗಾಗಿ ಸಿದ್ಧವಾದ ನಾಲ್ವಡಿ ಒಡೆಯರ್ ಮಾದರಿ ಪೇಟದ ವಿಶೇಷಗಳೇನು ಗೊತ್ತಾ? ಇಲ್ಲಿದೆ ನೋಡಿ – Kannada News | Special Mysore Peta for PM Modi: Artist Nandan Singh Crafts Wadiyar Style Turban for Adichunchanagiri Event

ಮೈಸೂರು, ಏಪ್ರಿಲ್ 14: ಮಂಡ್ಯ ಜಿಲ್ಲೆಯ ಆದಿಚುಂಚನಗಿರಿಯಲ್ಲಿ ನಡೆಯಲಿರುವ ಭೈರವೈಕ್ಯ ಮಂದಿರ ಲೋಕಾರ್ಪಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ಮೈಸೂರು ಪೇಟ ಧರಿಸಿ ಗಮನ ಸೆಳೆಯಲಿದ್ದಾರೆ. ಮೈಸೂರಿನ ಹೆಸರಾಂತ ಕಲಾವಿದ ನಂದನ್ ಸಿಂಗ್ ಅವರು ಪ್ರಧಾನಿಗಾಗಿಯೇ ಈ ಪೇಟವನ್ನು ಸಿದ್ಧಪಡಿಸಿದ್ದಾರೆ. ಇದರ ತಯಾರಿಗೆ ಐದು ದಿನಗಳ ಕಾಲ ತಗಲಿದೆ. ಬನಾರಸ್ ಬಟ್ಟೆ ಹಾಗೂ ವಿಶೇಷ ಮೋಲ್ಡ್ ಬಳಸಿ ತಯಾರಿಸಿರುವ ಈ ಪೇಟವು, ಮೈಸೂರು ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಧರಿಸುತ್ತಿದ್ದ ಶೈಲಿಯಲ್ಲಿದೆ. ಪೇಟದ ಮಧ್ಯಭಾಗದಲ್ಲಿ ರಾಜ ಲಾಂಛನ ‘ಗಂಡಭೇರುಂಡ’ ವಿನ್ಯಾಸವನ್ನು ಅಳವಡಿಸಲಾಗಿದ್ದು, ‘ನಮ್ಮೂರು ನಮ್ಮೋರು’ ಸೇವಾ ಸಂಸ್ಥೆಯ ಮೂಲಕ ಪ್ರಧಾನಿಗಳಿಗೆ ಇದನ್ನು ಅರ್ಪಿಸಲಾಗುತ್ತಿದೆ. ನಿರ್ಮಲಾನಂದನಾಥ ಶ್ರೀಗಳ ಮಾರ್ಗದರ್ಶನದಲ್ಲಿ ಈ ಕಲಾಕೃತಿ ಮೂಡಿಬಂದಿದೆ. ಪೇಟ ತಯಾರಿಸಿದ ಕಲಾವಿದ ನಂದನ್ ಹಾಗೂ ಟ್ರಸ್ಟ್ ಸದಸ್ಯರ ಜೊತೆ ಟಿವಿ9 ಮೈಸೂರು ಪ್ರತಿನಿಧಿ ರಾಮ್ ನಡೆಸಿರುವ ಮಾತುಕತೆ ಇಲ್ಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಾನೇ ಈ ಮಗುವಿನ ತಂದೆ ಹೌದೋ ಅಲ್ಲವೋ ಎಂಬ ಅನುಮಾನ, 6 ವರ್ಷದ ಮಗನನ್ನು ಕೊಂದು ಶವವ ನದಿಗೆಸೆದ ತಂದೆ – Kannada News | Father Kills 6 Year Old Son Over Paternity Doubt, Body Thrown in Krishna River

ಪುಣೆ, ಏಪ್ರಿಲ್ 14: ತಾನೇ ಈ ಮಗುವಿನ ತಂದೆ ಹೌದೋ ಅಲ್ಲವೋ ಎಂಬ ಅನುಮಾನದಲ್ಲಿ ತನ್ನ ಆರು ವರ್ಷದ ಮಗನನ್ನು ತಂದೆ ಕೊಲೆ(Murder) ಮಾಡಿ ಕೃಷ್ಣಾ ನದಿಗೆ ಎಸೆದಿರುವ ಘಟನೆ ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿ ಭಾಗದಲ್ಲಿ ನಡೆದಿದೆ. ಮಗ ತನ್ನ ಹೋಲಿಕೆ ಇಲ್ಲ ಎಂದು ಅನುಮಾನ ಪಟ್ಟ ತಂದೆ ಡಿಎನ್​ಎ ಪರೀಕ್ಷೆ ಮಾಡಿಸುವ ಬದಲು ಮಗನನ್ನೇ ಕೊಲೆ ಮಾಡಿ ನದಿಗೆ ಎಸೆದಿದ್ದಾನೆ.

ವಿಜಯಪುರ ಜಿಲ್ಲೆಯ ನಾಗಠಾಣೆ ಗ್ರಾಮದ ಮಲ್ಲಿಕಾರ್ಜುನ ಆರೇಕರಿ ಮತ್ತು ಭಾಗ್ಯಶ್ರೀ ದಂಪತಿಯ ಆರು ವರ್ಷದ ಮಗ ಸಿದ್ಧಾರ್ಥ್. ಸುಂದರವಾಗಿದ್ದ ಆ ಮಗು ತನ್ನ ತಂದೆಯನ್ನೇ ಹೋಲುತ್ತಿಲ್ಲ ಎಂದು ಕೆಲವು ಪರಿಚಯಸ್ಥರು ಹೇಳಿದ್ದ ಹಿನ್ನಲೆಯಲ್ಲಿ ಮಲ್ಲಿಕಾರ್ಜುನನ ತಲೆಯಲ್ಲಿ ವಿಷ ಬಿತ್ತಿತ್ತು. ಕಳೆದ ಒಂದೂವರೆ ವರ್ಷಗಳಿಂದ ಇದೇ ವಿಷಯಕ್ಕೆ ದಂಪತಿ ನಡುವೆ ಜಗಳ ನಡೆಯುತ್ತಿತ್ತು. ಕೊನೆಗೆ ಈ ಸಂಶಯ ಕೊಲೆಯಲ್ಲಿ ಅಂತ್ಯವಾಯಿತು.

ಶಾಲೆಗೆಂದು ಕರೆದೊಯ್ದು ನದಿಗೆ ಎಸೆದ ಕಟುಕ
ಮಾರ್ಚ್ 16ರಂದು ಮಗನನ್ನು ಶಾಲಾ ಪ್ರವೇಶಕ್ಕಾಗಿ (School Admission) ಕರೆದುಕೊಂಡು ಹೋಗುವುದಾಗಿ ಹೆಂಡತಿಗೆ ಸುಳ್ಳು ಹೇಳಿದ ಮಲ್ಲಿಕಾರ್ಜುನ, ಮಗನಿಗೆ ಹೊಸ ಬಟ್ಟೆಗಳನ್ನು ತೊಡಿಸಿ ವಿಜಯಪುರದಿಂದ ಮಹಾರಾಷ್ಟ್ರದ ಕರಾಡ್‌ಗೆ ಕರೆದೊಯ್ದಿದ್ದಾನೆ. ಕರಾಡ್ ತಾಲೂಕಿನ ವಡೋಲಿ ಭಿಕೇಶ್ವರ ಬಳಿಯ ಕೃಷ್ಣಾ ನದಿಯ ದಡಕ್ಕೆ ಮಗನನ್ನು ಕರೆದೊಯ್ದ ಆತ, ಕಿಂಚಿತ್ತೂ ದಯೆಯಿಲ್ಲದೆ ಮಗನನ್ನು ತುಂಬಿ ಹರಿಯುತ್ತಿದ್ದ ನದಿಗೆ ಎಸೆದಿದ್ದಾನೆ. ಮಗು ನೀರಿನಲ್ಲಿ ಮುಳುಗಿ ಪ್ರಾಣಬಿಟ್ಟ ನಂತರ, ಏನೂ ಗೊತ್ತಿಲ್ಲದವನಂತೆ ಮನೆಗೆ ಮರಳಿದ್ದಾನೆ.

ಮಾರ್ಚ್ 18 ರಂದು ಕರಾಡ್ ಪೊಲೀಸರಿಗೆ ನದಿಯ ದಡದಲ್ಲಿ ಮಗುವಿನ ಗುರುತು ಪತ್ತೆಯಾಗದ ಶವ ಸಿಕ್ಕಿತ್ತು. ಇತ್ತ ಮಲ್ಲಿಕಾರ್ಜುನ ಮಗನನ್ನು ಹಾಸ್ಟೆಲ್‌ಗೆ ಸೇರಿಸಿದ್ದೇನೆ ಎಂದು ಹೆಂಡತಿಯನ್ನು ನಂಬಿಸಿದ್ದ. ಆದರೆ ಏಪ್ರಿಲ್ 1 ರಂದು ಮಗ ಸಿದ್ಧಾರ್ಥ್‌ನ ಹುಟ್ಟುಹಬ್ಬದ ದಿನ ಪತಿಯನ್ನು ಪದೇ ಪದೇ ಒತ್ತಾಯಿಸಿದಾಗ ಆತ ನೀಡಿದ ಅಸಂಬದ್ಧ ಉತ್ತರಗಳು ಅನುಮಾನ ಹುಟ್ಟಿಸಿದವು. ಕೂಡಲೇ ಆಕೆ ಪೊಲೀಸರಿಗೆ ನಾಪತ್ತೆ ದೂರು ನೀಡಿದರು.

ಮತ್ತಷ್ಟು ಓದಿ: ಅನೈತಿಕ ಸಂಬಂಧಕ್ಕೆ ಅಡ್ಡಿ: ಪ್ರಿಯಕರನ ಜೊತೆ ಸೇರಿ ಪತಿಗೇ ಚಟ್ಟ ಕಟ್ಟಿದ ಪತ್ನಿ; ಕೊಲೆ ಬಳಿಕ ಅಮಾಯಕಳಂತೆ ನಾಟಕ

ತನಿಖೆಯಲ್ಲಿ ಸತ್ಯ ಒಪ್ಪಿಕೊಂಡ ಆರೋಪಿ
ಕರ್ನಾಟಕ ಮತ್ತು ಮಹಾರಾಷ್ಟ್ರ ಪೊಲೀಸರು ಜಂಟಿಯಾಗಿ ತಾಂತ್ರಿಕ ವಿಶ್ಲೇಷಣೆ ನಡೆಸಿದಾಗ, ಮಲ್ಲಿಕಾರ್ಜುನನ ಮೊಬೈಲ್ ಲೊಕೇಶನ್ ಕರಾಡ್ ಬಳಿ ಇರುವುದು ಪತ್ತೆಯಾಯಿತು. ಪೊಲೀಸರ ತೀವ್ರ ವಿಚಾರಣೆಯ ಎದುರು ನಿಲ್ಲಲಾಗದ ಪಾಪಿ ತಂದೆ, ತನ್ನ ಸಂಶಯದ ಕಾರಣಕ್ಕಾಗಿ ಮಗನನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ.

ಇದು ಅತ್ಯಂತ ಕ್ರೂರ ಮತ್ತು ಪೂರ್ವಯೋಜಿತ ಕೃತ್ಯ, ಮಗುವನ್ನು ತನ್ನನ್ನು ಹೋಲುತ್ತಿಲ್ಲ ಎಂಬ ಕಾರಣಕ್ಕಾಗಿ ಹತ್ಯೆ ಮಾಡಿರುವುದು ತನಿಖೆಯಲ್ಲಿ ದೃಢಪಟ್ಟಿದೆ, ಎಂದು ವಿಜಯಪುರ ಗ್ರಾಮೀಣ ಡಿವೈಎಸ್‌ಪಿ ಟಿ.ಎಸ್. ಸುಲ್ಪಿ ತಿಳಿಸಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದ್ದು, ಘಟನಾ ಸ್ಥಳಕ್ಕೆ ಕರೆದೊಯ್ದು ಮಹಜರು ನಡೆಸಲಾಗಿದೆ. ಸಮಾಜವೇ ತಲೆತಗ್ಗಿಸುವಂತಹ ಈ ಕೃತ್ಯದಿಂದಾಗಿ ನಾಗಠಾಣೆ ಗ್ರಾಮದಲ್ಲಿ ಮೌನ ಆವರಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 8:49 am, Tue, 14 April 26

Source link

‘ಮೊದಲ ಬಾಲ್​​ನಲ್ಲೇ ಸೂರ್ಯವಂಶಿ ವಿಕೆಟ್​​ನ ತೆಗೆಯಬೇಕು ಅಂದುಕೊಂಡಿದ್ದೆ’; ಪ್ರಫುಲ್ ಹಿಂಗೆ

ಪ್ರಫುಲ್ ಹಿಂಗೆ ಅವರು ಮೊದಲ ಪಂದ್ಯದಲ್ಲೇ ಗಮನ ಸೆಳೆದಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್‌ ತಂಡದ ಪರ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಪ್ರಫುಲ್ ಹಿಂಗೆ ನಾಲ್ಕು ವಿಕೆಟ್ ಪಡೆದಿದ್ದಾರೆ. ಅವರು ಮೊದಲ ಓವರ್​​ನಲ್ಲೇ ಮೂರು ವಿಕೆಟ್ ಕಿತ್ತು ದಾಖಲೆ ಬರೆದಿದ್ದಾರೆ. ಅವರು ನಾಗ್ಪುರದವರು. ಅವರು ಮೊದಲ ಪಂದ್ಯದ್ಲೇ ಗಮನ ಸೆಳೆದಿದ್ದಾರೆ.

‘ಮೊದಲ ಪಂದ್ಯ ಆಡಿದರೆ ನಾನು ನಾಲ್ಕು ವಿಕೆಟ್ ತೆಗೆಯುತ್ತೇನೆ ಎಂದು ಮೊದಲೇ ಅಂದುಕೊಂಡಿದ್ದೆ. ವೈಭವ್ ಅವರನ್ನು ಮೊದಲ ಬಾಲ್​​ನಲ್ಲೇ ಔಟ್ ಮಾಡ್ತೀನಿ ಎಂದು ಮೊದಲೇ ಅಂದುಕೊಂಡಿದ್ದೆ’ ಎಂದು ಪ್ರಫುಲ್ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಗಳೂರಲ್ಲಿ ಮಾಲಿನ್ಯದ ಭೀತಿ, ಕರಾವಳಿಯಲ್ಲಿ ಶುದ್ಧ ಗಾಳಿ! ಅಸ್ತಮಾ ರೋಗಿಗಳಿಗೆ ಎಚ್ಚರ – Kannada News | Bengaluru Air Quality Alert: Dust and Heat Affect AQI; Tips for Respiratory Health

ಬೆಂಗಳೂರು, ಏ.14: ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆ ಗಾಳಿಯ ಗುಣಮಟ್ಟದಲ್ಲಿ ಭಾರೀ ಬದಲಾವಣೆಗಳು ಕಂಡು ಬಂದಿಲ್ಲ. ರಾಜ್ಯದ ಬಹುತೇಕ ಭಾಗಗಳಲ್ಲಿ ಗಾಳಿಯ ಗುಣಮಟ್ಟವು ‘ತೃಪ್ತಿಕರ’ (Satisfactory) ದಿಂದ ‘ಸಾಧಾರಣ’ (Moderate) ಮಟ್ಟದಲ್ಲಿದೆ. ಬಿಸಿಲಿನ ತಾಪ ಹೆಚ್ಚಿರುವುದರಿಂದ, ಹಾಗೂ ವಾಹನ ದಟ್ಟಣೆಯಿಂದ ಕೆಲವು ಕಡೆ ಧೂಳಿನ ಪ್ರಮಾಣ ಸ್ವಲ್ಪ ಏರಿಕೆಯಾಗಿದೆ. ಈ ಬಗ್ಗೆ ಇಲ್ಲಿದೆ ವರದಿ. ಸಿಲ್ಕ್ ಬೋರ್ಡ್, ಪೀಣ್ಯ ಮತ್ತು ಹೆಬ್ಬಾಳದಂತಹ ಪ್ರದೇಶಗಳಲ್ಲಿ ವಾಹನ ದಟ್ಟಣೆ ಹಾಗೂ ರಸ್ತೆ ಧೂಳಿನಿಂದಾಗಿ ಗಾಳಿಯ ಗುಣಮಟ್ಟವು 100 ದಾಟಿದ್ದು, ಉಸಿರಾಟದ ಸಮಸ್ಯೆ ಇರುವವರು ಸ್ವಲ್ಪ ಜಾಗ್ರತೆ ವಹಿಸುವುದು ಉತ್ತಮ ಎಂದು ಹೇಳಲಾಗಿದೆ.

ಮಂಗಳೂರು ಮತ್ತು ಉಡುಪಿಯಲ್ಲಿ ಸಮುದ್ರದ ತಂಗಾಳಿಯ ಪ್ರಭಾವದಿಂದಾಗಿ ರಾಜ್ಯದಲ್ಲೇ ಅತ್ಯಂತ ಸ್ವಚ್ಛವಾದ ಗಾಳಿ ದಾಖಲಾಗಿದೆ. ಕಲಬುರಗಿ ಮತ್ತು ರಾಯಚೂರು ಭಾಗಗಳಲ್ಲಿ ಬಿಸಿ ಗಾಳಿಯ (Heatwave) ಪ್ರಭಾವ ಇರುವುದರಿಂದ ಧೂಳಿನ ಕಣಗಳು ಗಾಳಿಯಲ್ಲಿ ಹೆಚ್ಚಾಗಿ ತೇಲುತ್ತಿವೆ, ಇದರಿಂದಾಗಿ ವಾಯು ಗುಣಮಟ್ಟ ‘ಸಾಧಾರಣ’ ಮಟ್ಟದಲ್ಲಿದೆ.

ಮಲೆನಾಡು ಮತ್ತು ಕೊಡಗು ಭಾಗದಲ್ಲಿ ಹಸಿರು ಹೆಚ್ಚಿರುವುದರಿಂದ ಗಾಳಿಯು ಉತ್ತಮವಾಗಿದೆ. ಆದರೆ, ಪ್ರವಾಸಿ ತಾಣಗಳಲ್ಲಿ ವಾಹನ ಸಂಚಾರ ಇಂದು ಹೆಚ್ಚಿರುವುದರಿಂದ ರಸ್ತೆ ಬದಿಯಲ್ಲಿ ಸ್ವಲ್ಪ ಧೂಳಿನ ಪ್ರಮಾಣ ಕಂಡುಬರಬಹುದು. ಬೆಳಗಾವಿ, ಹುಬ್ಬಳ್ಳಿ ಮತ್ತು ಕಲಬುರಗಿ ಭಾಗಗಳಲ್ಲಿ ಬಿಸಿಲು ಹೆಚ್ಚಾಗಿರುವುದರಿಂದ ಮತ್ತು ಗಾಳಿಯಲ್ಲಿ ತೇವಾಂಶ ಕಡಿಮೆಯಿರುವುದರಿಂದ ಧೂಳಿನ ಕಣಗಳು (PM10) ಹೆಚ್ಚಿವೆ. ಕಲಬುರಗಿಯಲ್ಲಿ ತಾಪಮಾನ 41°C ದಾಟುತ್ತಿರುವುದರಿಂದ ಗಾಳಿಯ ಗುಣಮಟ್ಟ ‘ಸಾಧಾರಣ’ ಮಟ್ಟದಲ್ಲಿದೆ. ಚಿಕ್ಕಮಗಳೂರಿನಲ್ಲಿ ಗಾಳಿಮಟ್ಟ ಸಂಚಾರಕ್ಕೆ ಯೋಗ್ಯವಾಗಿದ್ದು, ಉಸಿರಾಟದ ಸಮಸ್ಯೆ ಇರುವವರಿಗೆ ಯಾವುದೇ ಹೆಚ್ಚಿನ ತೊಂದರೆ ಇಲ್ಲ.

ನಗರ AQI ಮಟ್ಟ ಗುಣಮಟ್ಟದ ಸ್ಥಿತಿ
ಮಂಗಳೂರು 52 ತೃಪ್ತಿಕರ (Satisfactory)
ಮೈಸೂರು 68 ತೃಪ್ತಿಕರ (Satisfactory)
ಹುಬ್ಬಳ್ಳಿ 85 ತೃಪ್ತಿಕರ (Satisfactory)
ಬೆಂಗಳೂರು 105 ಸಾಧಾರಣ (Moderate)
ಕಲಬುರಗಿ 122 ಸಾಧಾರಣ (Moderate)

ಉಸಿರಾಟದ ಸಮಸ್ಯೆ ಅಥವಾ ಅಸ್ತಮಾ ಇರುವವರು ಬೆಂಗಳೂರಿನಂತಹ ನಗರಗಳಲ್ಲಿ ಸಂಜೆ ವೇಳೆ ಹೊರಹೋಗುವಾಗ ಮಾಸ್ಕ್ ಧರಿಸುವುದು ಸೂಕ್ತ ಎಂದು ತಜ್ಞರು ಹೇಳಿದ್ದಾರೆ. ನಿಮ್ಮ ಮನೆಯ ಕಿಟಕಿಗಳನ್ನು ಮಧ್ಯಾಹ್ನದ ಸಮಯದಲ್ಲಿ ಮುಚ್ಚಿಡುವುದರಿಂದ ಧೂಳು ಒಳಬರುವುದನ್ನು ತಡೆಯಬಹುದು.ಯುಗಾದಿ ಹಬ್ಬದ ಅಂಗವಾಗಿ ಮನೆಯ ಮುಂದೆ ನೀರು ಹಾಕಿ ರಂಗೋಲಿ ಇಡುವುದರಿಂದ ರಸ್ತೆಯ ಧೂಳು ಗಾಳಿಯಲ್ಲಿ ಸೇರುವುದು ಕಡಿಮೆಯಾಗುತ್ತದೆ.

ಇದನ್ನೂ ಓದಿ: ಬಿಸಿಲಿನ ತಾಪಕ್ಕೆ ಬೆಂದ ಕರುನಾಡು: ಈ ಜಿಲ್ಲೆಗಳಲ್ಲಿ ಸಂಜೆ ಮಳೆ ಸಂಭವ; ಹವಾಮಾನ ಇಲಾಖೆ ನೀಡಿದ ಎಚ್ಚರಿಕೆ ಏನು?

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

ಉತ್ತಮ- 0-50

ಮಧ್ಯಮ – 50-100

ಕಳಪೆ – 100-150

ಅನಾರೋಗ್ಯಕರ – 150-200

ಗಂಭೀರ – 200 – 300

ಅಪಾಯಕಾರಿ – 300 -500+

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದೊಡ್ಡ ಬಜೆಟ್ ಆದರೂ ನಿರ್ಮಾಪಕರಿಗೆ ಕೆಲವೇ ದಿನಗಳಲ್ಲಿ ಲಾಭ ತಂದ ಅಡಿವಿ ಶೇಷ್ – Kannada News | Adivi Sesh’s Dakayat is a Blockbuster: Box Office Success and Pre Release Profit

ಅಡಿವಿ ಶೇಷ್ ಅವರ ಖಾತೆಯಲ್ಲಿ ಮತ್ತೊಂದು ಹಿಟ್ ಚಿತ್ರ ಸೇರಿಕೊಂಡಿದೆ. ಕಳೆದ ವಾರ ತೆರೆಗೆ ಬಂದ ‘ಡಕಾಯತ್’ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಚಿತ್ರವು ಕೇವಲ ನಾಲ್ಕು ದಿನಗಳಲ್ಲಿ ಒಳ್ಳೆಯ ಗಳಿಕೆ ಮಾಡಿದೆ. ಕೆಲವೊಂದು ಸಿನಿಮಾಗಳು ರಿಲೀಸ್​​ಗೂ ಮೊದಲೇ ಒಳ್ಳೆಯ ಬಿಸ್ನೆಸ್ ಮಾಡುತ್ತವೆ. ಇನ್ನೂ ಕೆಲವು ಸಿನಿಮಾಗಳು ಸಿನಿಮಾ ರಿಲೀಸ್ ಆದ ಬಳಿಕ ಒಳ್ಳೆಯ ಕಲೆಕ್ಷನ್ ಮಾಡುತ್ತವೆ. ‘ಡಕಾಯತ್’ ಈ ಎರಡೂ ವಿಷಯಗಳಲ್ಲಿ ಯಶಸ್ಸನ್ನು ಸಾಧಿಸಿದೆ.

ಈ ಆಕ್ಷನ್ ಥ್ರಿಲ್ಲರ್ ಚಿತ್ರದ ನಿರ್ಮಾಪಕರು ಸುಮಾರು 65 ಕೋಟಿ ರೂ.ಗಳ ಬೃಹತ್ ಬಜೆಟ್ ಸಿನಿಮಾ ಮಾಡಿದ್ದಾರೆ. ಅವರು ಚಿತ್ರದ ಆರಂಭಿಕ ದಿನದ ಕಲೆಕ್ಷನ್ ಬಗ್ಗೆ ಅವರು ಹೆಚ್ಚು ಚಿಂತಿಸುತ್ತಿಲ್ಲ. ಏಕೆಂದರೆ ಚಿತ್ರವು ಡಿಜಿಟಲ್, ಸ್ಯಾಟಲೈಟ್ ಮತ್ತು ಆಡಿಯೋ ಹಕ್ಕುಗಳ ಮಾರಾಟದ ಮೂಲಕ ಬಿಡುಗಡೆಗೆ ಮುನ್ನವೇ 48 ಕೋಟಿ ರೂ.ಗಳನ್ನು ಗಳಿಸಿದೆ. ಈ ಒಪ್ಪಂದಗಳಿಂದಾಗಿ, ನಿರ್ಮಾಪಕರು ಬಿಡುಗಡೆಗೆ ಮುನ್ನವೇ ಬಹಳ ಸುರಕ್ಷಿತವಾಗಿ ಉಳಿದಿದ್ದಾರೆ.

ಬಿಡುಗಡೆಗೂ ಮುನ್ನವೇ ಭಾರಿ ಚೇತರಿಕೆ ಕಂಡಿದ್ದರಿಂದ.. ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಎಂದು ಪರಿಗಣಿಸಬೇಕಾದರೆ, ಚಿತ್ರಮಂದಿರಗಳಲ್ಲಿ ಕೇವಲ 17 ಕೋಟಿ ರೂ. (ಷೇರ್) ಗಳಿಸಬೇಕಾಗಿತ್ತು.ಬಿಡುಗಡೆಗೂ ಮುನ್ನದ ವ್ಯವಹಾರಗಳನ್ನು ನೋಡಿದ ನಂತರ, ಚಿತ್ರವು ಖಂಡಿತವಾಗಿಯೂ ಉತ್ತಮ ಓಪನಿಂಗ್ ಪಡೆಯುತ್ತದೆ ಎಂದು ಉದ್ಯಮ ಮೂಲಗಳು ಊಹಿಸಿದ್ದವು.

ಈ ಸಿನಿಮಾ ನಾಲ್ಕು ದಿನಗಳಲ್ಲಿ ವಿಶ್ವಾದ್ಯಂತ ಸುಮಾರು 40 ಕೋಟಿ ರೂ. ಗಳಿಸಿತು. ಯಾರೂ ನಿರೀಕ್ಷಿಸದ ರೀತಿಯಲ್ಲಿ, 17 ಕೋಟಿ ಥಿಯೇಟ್ರಿಕಲ್ ಶೇರ್ ಮಾರ್ಕ್ ಅನ್ನು ಬಹಳ ಬೇಗನೆ ದಾಟುವ ಮೂಲಕ, ಅಡಿವಿ ಶೇಷ್ ಮತ್ತೊಮ್ಮೆ ಬಾಕ್ಸ್ ಆಫೀಸ್‌ನಲ್ಲಿ ಗೆದ್ದಿದ್ದಾರೆ.

ಇದನ್ನೂ ಓದಿ: ‘ಗೂಢಚಾರಿ 2’ ಸಿನಿಮಾದಲ್ಲಿ ಅಡಿವಿ ಶೇಷ್​ಗೆ ಜೋಡಿಯಾದ ಬಾಲಿವುಡ್​ ಬೆಡಗಿ ಬನಿತಾ ಸಂಧು

ಸೋಮವಾರ ಸಿನಿಮಾ ಉತ್ತಮ ಕಲೆಕ್ಷನ್ ಮಾಡಿದೆ. ಈ ಚಿತ್ರಕ್ಕೆ ಏಪ್ರಿಲ್ 13ರಂದು 2 ಕೋಟಿ ರೂಪಾಯಿ ಗಳಿಕೆ ಆಗಿದೆ. ಸಿನಿಮಾಗೆ ಭಾರತದಲ್ಲಿ 22 ಕೋಟಿ ರೂಪಾಯಿ ಗಳಿಕೆ ಆಗಿದೆ. ಸಿನಿಮಾಗೆ ಸಕಾರಾತ್ಮಕ ವಿಮರ್ಶೆ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮಂಡ್ಯಕ್ಕೆ ಬುಧವಾರ ಮೋದಿ ಭೇಟಿ: ಆದಿಚುಂಚನಗಿರಿಯಲ್ಲಿ ಭೈರವೈಕ್ಯ ಮಂದಿರ ಉದ್ಘಾಟನೆ, ಪ್ರಧಾನಿಗಾಗಿ ಸಿದ್ಧವಾಗಿದೆ ಮೈಸೂರು ಪೇಟ! – Kannada News | PM Modi Mandya Visit: Inauguration of Bhairavaikya Mandira at Adichunchanagiri; Special Mysore Peta Ready for PM

ಪ್ರಧಾನಿ ಮೋದಿಗಾಗಿ ಸಿದ್ಧವಾಗಿರುವ ವಿಶೇಷ ಮೈಸೂರು ಪೇಟ ಹಾಗೂ ಮೋದಿ ಸಂಗ್ರಹ ಚಿತ್ರImage Credit source: TV9 Network

ಮಂಡ್ಯ, ಏಪ್ರಿಲ್ 14: ಮಂಡ್ಯ (Mandya) ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಕ್ಷೇತ್ರಕ್ಕೆ ನಾಳೆ (ಏಪ್ರಿಲ್ 15) ಪ್ರಧಾನಿ ನರೇಂದ್ರ ಮೋದಿ (Narendra Modi) ಆಗಮಿಸಲಿದ್ದಾರೆ. ಶ್ರೀಕ್ಷೇತ್ರದ ಮಾಜಿ ಪೀಠಾಧಿಪತಿಗಳಾದ ಪರಮಪೂಜ್ಯ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಅವರ ಸ್ಮರಣಾರ್ಥ ನಿರ್ಮಾಣಗೊಂಡಿರುವ ಭವ್ಯ ‘ಶ್ರೀ ಗುರು ಭೈರವೈಕ್ಯ ಮಂದಿರ’ವನ್ನು ಪ್ರಧಾನಿ ಲೋಕಾರ್ಪಣೆಗೊಳಿಸಲಿದ್ದಾರೆ. ಬಳಿಕ ಭಕ್ತರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಆದಿಚುಂಚನಗಿರಿ ಕ್ಷೇತ್ರದಲ್ಲಿ ಹಬ್ಬದ ಸಂಭ್ರಮ

ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಇಡೀ ಆದಿಚುಂಚನಗಿರಿ ಕ್ಷೇತ್ರ ಮಧುವಣಗಿತ್ತಿಯಂತೆ ಕಂಗೊಳಿಸುತ್ತಿದೆ. ದ್ರಾವಿಡ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಈ ಭೈರವೈಕ್ಯ ಮಂದಿರವು ಹಲವು ವಿಶೇಷತೆಗಳಿಂದ ಕೂಡಿದೆ. ಕಾರ್ಯಕ್ರಮಕ್ಕಾಗಿ ಬಿಜಿಎಸ್ ಕ್ರೀಡಾಂಗಣದಲ್ಲಿ ಬೃಹತ್ ವೇದಿಕೆ ನಿರ್ಮಾಣವಾಗಿದ್ದು, ಒಂದು ಲಕ್ಷಕ್ಕೂ ಅಧಿಕ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ. ಮುನ್ನೆಚ್ಚರಿಕಾ ಕ್ರಮವಾಗಿ 2000ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

ಮೋದಿಗಾಗಿ ವಿಶೇಷ ಮೈಸೂರು ಪೇಟ!

ಈ ಭೇಟಿಯ ವೇಳೆ ಪ್ರಧಾನಿ ಮೋದಿಯವರಿಗಾಗಿ ವಿಶೇಷ ‘ಮೈಸೂರು ಪೇಟ’ ಸಿದ್ಧಪಡಿಸಲಾಗಿದೆ. ಮೈಸೂರಿನ ಕಲಾವಿದ ನಂದನ್ ಸಿಂಗ್ ಅವರು ಐದು ದಿನಗಳ ನಿರಂತರ ಶ್ರಮದಿಂದ ಇದನ್ನು ತಯಾರಿಸಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಧರಿಸುತ್ತಿದ್ದ ಮಾದರಿಯಲ್ಲಿರುವ ಈ ಪೇಟವು ಬನಾರಸ್ ಬಟ್ಟೆ ಮತ್ತು ಗಂಡಭೇರುಂಡ ವಿನ್ಯಾಸದಿಂದ ಕೂಡಿದೆ. ನಿರ್ಮಲಾನಂದನಾಥ ಶ್ರೀಗಳ ಅಣತಿಯಂತೆ ‘ನಮ್ಮೂರು ನಮ್ಮೋರು’ ಸೇವಾ ಸಂಸ್ಥೆಯ ವತಿಯಿಂದ ಈ ಗೌರವ ಅರ್ಪಿಸಲಾಗುತ್ತಿದೆ.

ಪ್ರಧಾನಿ ಮೋದಿ ದಿನಚರಿ ಹೀಗಿದೆ

  • ಬೆಳಿಗ್ಗೆ ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರಿನ ಎಚ್‌ಎಎಲ್ (HAL) ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ.
  • ಬೆಳಿಗ್ಗೆ 10:50ಕ್ಕೆ ಎಚ್‌ಎಎಲ್‌ನಿಂದ ಹೆಲಿಕಾಪ್ಟರ್ ಮೂಲಕ ಆದಿಚುಂಚನಗಿರಿ ಹೆಲಿಪ್ಯಾಡ್ ತಲುಪಲಿದ್ದಾರೆ.
  • ಬೆಳಿಗ್ಗೆ 11 ಗಂಟೆಗೆ ರಸ್ತೆ ಮಾರ್ಗವಾಗಿ ಶ್ರೀಕ್ಷೇತ್ರದ ಮಠಕ್ಕೆ ತಲುಪಿ, ಭೈರವೈಕ್ಯ ಮಂದಿರದ ಉದ್ಘಾಟನೆ ನೆರವೇರಿಸಲಿದ್ದಾರೆ.
  • ನಂತರ ಬಿಜಿಎಸ್ ಕ್ರೀಡಾಂಗಣದಲ್ಲಿ ನಡೆಯುವ ಬೃಹತ್ ಸಾರ್ವಜನಿಕ ಸಮಾರಂಭದಲ್ಲಿ ಭಕ್ತರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
  • ಕಾರ್ಯಕ್ರಮದ ನಂತರ ಮತ್ತೆ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಮರಳಿ, ಅಲ್ಲಿಂದ ಕೇರಳ ಪ್ರವಾಸಕ್ಕೆ ತೆರಳಲಿದ್ದಾರೆ.

ಇದನ್ನೂ ಓದಿ: ಏಪ್ರಿಲ್ 15ರಂದು ಮಂಡ್ಯಕ್ಕೆ ಆಗಮಿಸಲಿರುವ ಮೋದಿ! ಆದಿಚುಂಚನಗಿರಿ ಮಠದಲ್ಲಿ ಗದ್ದಿಗೆ ಉದ್ಘಾಟನೆ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ನನಗೆ ಒಂಟಿಯಾಗಿರೋದೇ ಇಷ್ಟ’; ಬ್ಯಾಚುಲರ್​ ಆಗೇ ಇರೋ ಸೂಚನೆ ಕೊಟ್ಟ ತೆಲುಗು ನಟ – Kannada News | Ram Pothineni on Being Single: ‘Happier Alone’ Says Tollywood Star

ತೆಲುಗು ಸ್ಟಾರ್ ರಾಮ್ ಪೋಥಿನೇನಿ ತಮ್ಮ ಸತತವಾಗಿ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಅವರ ಕೊನೆಯ ಚಿತ್ರ ‘ಆಂಧ್ರ ಕಿಂಗ್ ತಾಲೂಕ’ ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆಯಿತು. ಆದಾಗ್ಯೂ, ಕೆಲವು ಕಾರಣಗಳಿಂದ, ಈ ಚಿತ್ರ ಬಿಸ್ನೆಸ್ ಮಾಡಿಲ್ಲ. ರಾಮ್ ಪ್ರಸ್ತುತ ತಮ್ಮ ಮುಂದಿನ ಪ್ರಾಜೆಕ್ಟ್ ನಿರತರಾಗಿದ್ದಾರೆ. ರಾಮ್ ತೆಲುಗು ಉದ್ಯಮದ ಬ್ಯಾಚುಲರ್‌ಗಳಲ್ಲಿ ಒಬ್ಬರು. ಅವರಿಗೆ ಪ್ರಸ್ತುತ 37 ವರ್ಷ. ಈ ಮಧ್ಯೆ, ಆಂಧ್ರ ಕಿಂಗ್ ತಾಲೂಕ ಚಿತ್ರದಲ್ಲಿ ತಮ್ಮೊಂದಿಗೆ ನಟಿಸಿದ್ದ ಭಾಗ್ಯಶ್ರೀ ಬೋರ್ಸೆ ಅವರೊಂದಿಗೆ ರಾಮ್ ರಿಲೇಶನ್​ಶಿಪ್​ನಲ್ಲಿದ್ದಾರೆ ಎಂಬ ವದಂತಿ ಇತ್ತು. ಇಬ್ಬರೂ ಒಟ್ಟಿಗೆ ಚಲನಚಿತ್ರ ಪ್ರಚಾರಗಳಲ್ಲಿ ವ್ಯಾಪಕವಾಗಿ ಭಾಗವಹಿಸಿದರು. ಆದಾಗ್ಯೂ, ಈಗ ಸುಂದರ ನಾಯಕ ಅವರು ಒಂಟಿಯಾಗಿರಲು ಇಷ್ಟಪಡುತ್ತಾರೆ ಎಂದು ಆಘಾತಕಾರಿ ಕಾಮೆಂಟ್‌ಗಳನ್ನು ಮಾಡಿದ್ದಾರೆ.

‘ನಾನು ಬಾಲ್ಯದಿಂದಲೂ ಒಬ್ಬಂಟಿಯಾಗಿರುವುದಕ್ಕೆ ಒಗ್ಗಿಕೊಂಡಿದ್ದೇನೆ. ನನ್ನ ಬಿಡುವಿನ ಸಮಯವನ್ನು ಸಹ ನಾನು ಆನಂದಿಸುತ್ತೇನೆ. ಸ್ನೇಹಿತರು ಮತ್ತು ಇತರ ಜನರೊಂದಿಗೆ ಸಮಯ ಕಳೆಯಲು ನನಗೆ ಇಷ್ಟವಾದರೂ, ನನಗಾಗಿ ಸಮಯ ತೆಗೆದುಕೊಳ್ಳುವುದನ್ನು ನಾನು ಆನಂದಿಸುತ್ತೇನೆ. ಆ ಏಕಾಂತ ನನಗೆ ಬಹಳಷ್ಟು ಮಾನಸಿಕ ಶಾಂತಿಯನ್ನು ನೀಡುತ್ತದೆ’ ಎಂದಿದ್ದಾರೆ ಅವರು.

‘ಯಾರಾದರೂ ನನ್ನ ಜೀವನದಲ್ಲಿ ಬಂದರೆ, ನಾನು ಅವರೊಂದಿಗೆ ಸಮಯ ಕಳೆಯಲು ಸಿದ್ಧ. ಯಾರೂ ಬರದಿದ್ದರೆ, ನಾನು ಒಬ್ಬಂಟಿಯಾಗಿ ಹೆಚ್ಚು ಸಂತೋಷವಾಗಿರುತ್ತೇನೆ. ಇದು ನನ್ನ ವ್ಯಕ್ತಿತ್ವ, ಉದ್ದೇಶಪೂರ್ವಕ ನಿರ್ಧಾರವಲ್ಲ. ಚಿತ್ರರಂಗದಲ್ಲಿ, ನೀವು ಯಾವಾಗಲೂ ನೂರಾರು ಜನರೊಂದಿಗೆ ಇರಬೇಕು. ಆದರೆ ಇಷ್ಟೊಂದು ಜನರ ನಡುವೆಯೂ, ನಾನು ನನಗಾಗಿ ವಿಶೇಷ ಜಗತ್ತನ್ನು ಸೃಷ್ಟಿಸಿಕೊಂಡಿದ್ದೇನೆ. ವಿಶೇಷವಾಗಿ ಲಾಕ್‌ಡೌನ್ ಸಮಯದಲ್ಲಿ, ನಾನು ಒಂದೂವರೆ ವರ್ಷಗಳ ಕಾಲ ಒಬ್ಬಂಟಿಯಾಗಿದ್ದೆ’ ಎಂದು ರಾಮ್ ಹೇಳಿದರು.

ಇದನ್ನೂ ಓದಿ: ಟಾಲಿವುಡ್​​ನಲ್ಲಿ ಕೆಟ್ಟ ಅನುಭವ, ತೆಲುಗು ಚಿತ್ರರಂಗದ ಇನ್ನೊಂದು ಮುಖ ತೆರೆದಿಟ್ಟ ಯುವತಿ

ಪ್ರಸ್ತುತ, ಈ ನಾಯಕನ ಕಾಮೆಂಟ್‌ಗಳು ವೈರಲ್ ಆಗಿವೆ. ನೆಟ್ಟಿಗರು ಇದಕ್ಕೆ ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಅವರು ಮದುವೆ ಆಗುತ್ತಾರಾ ಅಥವಾ ಸಿಂಗಲ್ ಆಗೇ ಇರುತ್ತಾರಾ ಎಂಬ ಪ್ರಶ್ನೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ನಡುರಸ್ತೆಯಲ್ಲಿ ಗರ್ಭಿಣಿಯ ಮೈಮುಟ್ಟಿ ಕಿರುಕುಳ ಕೊಟ್ಟ ವ್ಯಕ್ತಿ – Kannada News | Outrage in Jaipur: Pregnant Woman Harassed in Public, Sparks Ange

ಜೈಪುರ, ಏಪ್ರಿಲ್ 14: ಗರ್ಭಿಣಿಯೊಬ್ಬರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ವ್ಯಕ್ತಿಯೊಬ್ಬ ಹಿಂದಿನಿಂದ ಬಂದು ಆಕೆಯ ಮೈಮುಟ್ಟಿ ಲೈಂಗಿಕ ಕಿರುಕುಳ ಕೊಟ್ಟಿರುವ ಘಟನೆ ಜೈಪುರದಲ್ಲಿ ನಡೆದಿದೆ. ಬೀಚ್ ಕಾಲೋನಿಯಲ್ಲಿ ಆಕೆ ನಡೆದುಕೊಂಡು ಹೋಗುತ್ತಿರುವಾಗ ಹಿಂಬಾಲಿಸಿ ಬಂದ ಆತ ಹಿಂದಿನಿಂದ ಆಕೆಯ ಮೈಮುಟ್ಟಿದ್ದಾನೆ. ಆಕೆ ಕಿರುಚಿದಾಗ ಆತ ಅಲ್ಲಿಂದ ಪರಾರಿಯಾಗಿದ್ದಾನೆ. ಘಟನೆಯ ಸಿಸಿಟಿವಿ ದೃಶ್ಯಗಳು ಪೊಲೀಸ್ ಆಡಳಿತದಲ್ಲಿ ಕೋಲಾಹಲಕ್ಕೆ ಕಾರಣವಾಗಿವೆ. ಮಾರ್ಚ್ 25 ರಂದು ಸಂಜೆ 6 ಗಂಟೆ ಸುಮಾರಿಗೆ ಗರ್ಭಿಣಿಯೊಬ್ಬರು ಫೋನ್‌ನಲ್ಲಿ ಮಾತನಾಡುತ್ತಾ ಕಾಲೋನಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರು.

ಈ ಹಠಾತ್ ದಾಳಿಯಿಂದ ಆ ಮಹಿಳೆ ಭಯಭೀತಳಾಗಿದ್ದಳು, ಆದರೆ ಅವಳು ಧೈರ್ಯ ತಂದುಕೊಂಡು ಜೋರಾಗಿ ಕಿರುಚಲು ಪ್ರಾರಂಭಿಸಿದಳು. ಮಹಿಳೆಯ ಧ್ವನಿ ಸುತ್ತಮುತ್ತಲಿನ ಜನರಿಗೆ ಎಚ್ಚರಿಕೆ ನೀಡುವ ಮೊದಲೇ ಆರೋಪಿ ಸ್ಥಳದಿಂದ ಪರಾರಿಯಾಗಿದ್ದ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಯನ್ನು ಗುರುತಿಸಲು ಪ್ರಯತ್ನಿಸಲಾಗುತ್ತಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link