Headlines

nagaraj11081993

ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ! ತೀವ್ರ ಸ್ವರೂಪ ಪಡೆದುಕೊಂಡ ಲೆಕ್ಕ ಕೊಡಿ ಅಭಿಯಾನ

ದಾವಣಗೆರೆ, ಏಪ್ರಿಲ್ 13: ಹರಿಹರ ಪಂಚಮಸಾಲಿ ಪೀಠದ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ್ದು, ಲೆಕ್ಕ ಕೊಡಿ ಅಭಿಯಾನ ತೀವ್ರ ಸ್ವರೂಪ ಪಡೆದಿದೆ. ಪಂಚಮಸಾಲಿ ಗುರುಪೀಠದ ಧರ್ಮದರ್ಶಿ ಮಂಡಳಿ ಹಾಗೂ ಭಕ್ತರ ನಡುವಿನ ಸಂಘರ್ಷ ಮಠದ ಆವರಣದಲ್ಲಿ ಹೈಡ್ರಾಮಾ ಸೃಷ್ಟಿಸಿದೆ. ಹೀಗಾಗಿ ಮಠದ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೀಠದ ಆಡಳಿತ ಮತ್ತು ನಡೆಯ ಬಗ್ಗೆ ಲೆಕ್ಕಪತ್ರ ನೀಡುವಂತೆ ಭಕ್ತರು ಆಗ್ರಹಿಸಿದ್ದಾರೆ. ಮಾಜಿ ಶಾಸಕರಾದ ಹೆಚ್​.ಎಸ್.ಶಿವಶಂಕರ, ಅರುಣಕಮಾರ್, ಹೂವಿನ ಹಡಗಲಿಯ ಹಾಲಪ್ಪ ಸೇರಿ ಪ್ರಮುಖರಿಂದ…

Read More

ಮುಂಬೈ ಇಂಡಿಯನ್ಸ್​ಗೆ ನ್ಯಾಯ… ಡೆಲ್ಲಿ ಕ್ಯಾಪಿಟಲ್ಸ್​ಗೆ ಅನ್ಯಾಯ..!

IPL 2026: ಐಪಿಎಲ್ 2026ರ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಓವರ್ ಮಧ್ಯದಲ್ಲಿ ಗ್ಲೌಸ್ ಬದಲಾಯಿಸಿದ್ದು ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಕ್ರಿಕೆಟ್ ಅಭಿಮಾನಿಗಳು ಮತ್ತು ವಿಶ್ಲೇಷಕರು ಅಂಪೈರ್‌ಗಳ ನಿರ್ಧಾರದ ಬಗ್ಗೆ ಪ್ರಶ್ನೆ ಎತ್ತುತ್ತಿದ್ದಾರೆ. ಏನಿದು ಘಟನೆ? ಆರ್‌ಸಿಬಿ ವಿರುದ್ಧದ ಪಂದ್ಯದ ವೇಳೆ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಮಾಡುತ್ತಿದ್ದಾಗ, ಓವರ್ ಮುಗಿಯುವ ಮೊದಲೇ ಹೊಸ ಗ್ಲೌಸ್ ಬೇಕೆಂದು ಕೇಳಿದರು. ಆರಂಭದಲ್ಲಿ ಅಂಪೈರ್‌ಗಳು ಇದಕ್ಕೆ ಅನುಮತಿ ನೀಡದಿದ್ದರೂ, ನಂತರ ಪಾಂಡ್ಯ…

Read More

Video: ನ್ಯೂಸ್ ಪೇಪರ್ ವಿತರಕನ ಮೇಲೆ ಬೀದಿ ನಾಯಿ ದಾಳಿ

ಜೈಪುರ, ಏಪ್ರಿಲ್ 13: ನ್ಯೂಸ್ ಪೇಪರ್ ವಿತರಕನ ಮೇಲೆ ಬೀದಿ ನಾಯಿ ದಾಳಿ ನಡೆಸಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಅವರು ಬೈಕ್​​ನಲ್ಲಿ ಹೋಗುತ್ತಿರುವಾಗ ಇದ್ದಕ್ಕಿದ್ದಂತೆ ನಾಯಿ ಇದ್ದಕ್ಕಿದ್ದಂತೆ ದಾಳಿ ನಡೆದಿದೆ. ಅವರ ಕಾಲನ್ನು ಹಿಡಿದು ಕೆಳಗೆ ಎಳೆದಿದೆ. ಏನೇ ಪ್ರಯತ್ನ ಪಟ್ಟರೂ ನಾಯಿ ಬಿಡಲು ಸಿದ್ಧವಿರಲಿಲ್ಲ. ಕೊನೆಗೆ ಸ್ಥಳೀಯರು ಸ್ಥಳಕ್ಕೆ ಬಂದು ಕೋಲಿನಿಂದ ಹೊಡೆದು ಹೇಗೋ ಆ ನಾಯಿಯಿಂದ ವ್ಯಕ್ತಿಯನ್ನು ಕಾಪಾಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ದೇಶಾದ್ಯಂತ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ.     ವಿಡಿಯೋ…

Read More

ಗಂಡ ಹೆಂಡತಿ ಜಗಳಕ್ಕೆ ಅತ್ತೆ ಬಲಿ! ತವರಿನಿಂದ ಪತ್ನಿ ಕರೆದೊಯ್ಯುವಾಗ ಅಡ್ಡ ಬಂದಿದ್ದಕ್ಕೆ ಭೀಕರವಾಗಿ ಕೊಂದ ವ್ಯಕ್ತಿ

ಬೆಂಗಳೂರು, ಏಪ್ರಿಲ್ 13: ನಗರದಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ನಡೆದ ಹಲ್ಲೆ ಪ್ರಕರಣವು ಇದೀಗ ಕೊಲೆ (Murder) ಪ್ರಕರಣವಾಗಿ ಮಾರ್ಪಟ್ಟಿದೆ. ಮಣಿಕಿರಣ್ ಎಂಬಾತ ತನ್ನ ಹೆಂಡತಿಯನ್ನು ಬಲವಂತವಾಗಿ ತವರು ಮನೆಯಿಂದ ಕರೆದುಕೊಂಡು ಹೋಗಲು ಮುಂದಾದಾಗ ಮಧ್ಯ ಬಂದ ಮಾಗೇಶ್ವರಿ ಎಂಬಾಕೆಯ ಮೇಲೆ ಹಲ್ಲೆ ನಡೆಸಲಾಗಿತ್ತು. ಈ ಹಿನ್ನೆಲೆ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಆಕೆ, ಭಾನುವಾರ ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ. ಹೆಂಡತಿ ಬರಲ್ಲ ಅಂದರೂ ಬಲವಂತವಾಗಿ ಕರೆದೊಯ್ಯಲು ಮುಂದಾದ ಪತಿ ಮಣಿಕಿರಣ್ ಹಾಗೂ ಆತನ…

Read More

ಹಾಸನ: ಪತಿ, 7 ವರ್ಷದ ಮಗನನ್ನು ಬಿಟ್ಟು ಪ್ರಿಯಕರನ ಜೊತೆ ಕಾರಿನಲ್ಲೇ ಮದುವೆಯಾದ ಮಹಿಳೆ!

ಹಾಸನ, ಏಪ್ರಿಲ್ 13: ಎಂಟು ವರ್ಷಗಳ ಕಾಲ ಪತಿಯೊಂದಿಗೆ ಸಂಸಾರ ನಡೆಸಿದ್ದ ಗೃಹಿಣಿಯೊಬ್ಬರು, ಈಗ ತನ್ನ ಏಳು ವರ್ಷದ ಮಗ ಹಾಗೂ ಪತಿಯನ್ನು ಬಿಟ್ಟು ಪ್ರಿಯಕರನ ಜೊತೆ ಕಾರಿನಲ್ಲೇ ವಿವಾಹವಾಗಿರುವ ವಿಚಿತ್ರ ಘಟನೆ ಹಾಸನದಲ್ಲಿ (Hassan) ನಡೆದಿದೆ. ಒಂದು ಬಾರಿ ಓಡಿಹೋಗಲು ಯತ್ನಿಸಿದ್ದಾಗ ಪೋಷಕರ ದೂರಿನ ಮೇರೆಗೆ ಪೊಲೀಸರು ಮಧ್ಯ ಪ್ರವೇಶಿಸಿ ಮನವೊಲಿಸಿ ಮಹಿಳೆಯನ್ನು ಸಾಂತ್ವನ ಕೇಂದ್ರಕ್ಕೆ ಕಳುಹಿಸಿದ್ದರು ಎಂಬುದು ತಿಳಿದುಬಂದಿದೆ. ಆದರೆ, ನಂತರ ಅಲ್ಲಿಂದಲೂ ಹೇಗೋ ತಪ್ಪಿಸಿಕೊಂಡ ಆಕೆ, ಪ್ರಿಯಕರನ ಜತೆ ಓಡಿಹೋಗಿ ಕಾರಿನಲ್ಲೇ ಮದುವೆಯಾಗಿದ್ದಾರೆ!…

Read More

ನವ ಭಾರತದ ನಾಯಕತ್ವ ಈಗ ಮಹಿಳೆಯರ ಕೈಗೆ: ಸರ್ವಪಕ್ಷಗಳ ಸಹಕಾರದೊಂದಿಗೆ ಇತಿಹಾಸ ಬರೆಯಲು ದೇಶ ಸಿದ್ಧ: ಪ್ರಧಾನಿ ಮೋದಿ ಜೈಕಾರ

ನವದೆಹಲಿ, ಏಪ್ರಿಲ್ 13: ನಮ್ಮ ದೇಶದ ಸಂಸತ್ತು ಹೊಸ ಇತಿಹಾಸವನ್ನು ಸೃಷ್ಟಿಸುವ ಹಂತಕ್ಕೆ ಹತ್ತಿರದಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ. ‘‘ಇದು 21 ನೇ ಶತಮಾನದ ಪ್ರಮುಖ ನಿರ್ಧಾರಗಳಲ್ಲಿ ಒಂದಾಗಿದೆ ಎಂದು ನಾನು ಬಹಳ ಖುಷಿಯಿಂದ ಹೇಳುತ್ತಿದ್ದೇನೆ, ಇದು ಮಹಿಳಾ ಶಕ್ತಿಗೆ ಸಮರ್ಪಿತವಾಗಿದೆ. ನಮ್ಮ ದೇಶದ ಸಂಸತ್ತು ಹೊಸ ಇತಿಹಾಸವನ್ನು ಸೃಷ್ಟಿಸುವ ಹಂತಕ್ಕೆ ಹತ್ತಿರದಲ್ಲಿದೆ’’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮಹಿಳಾ ಮೀಸಲಾತಿ ಮಸೂದೆಯನ್ನು ಚರ್ಚಿಸಿ ಸುಮಾರು ನಲವತ್ತು ವರ್ಷಗಳು ಕಳೆದಿವೆ. ಇದರಲ್ಲಿ…

Read More

ಬಿಎಂಟಿಸಿಯ ಈ ಬಸ್ಸಿನಲ್ಲಿ ಕೇವಲ 6 ರೂ.ಗೆ ಮೆಟ್ರೋ ನಿಲ್ದಾಣಕ್ಕೆ ಹೋಗಬಹುದು!: ಎಲ್ಲಿಂದ ಎಲ್ಲಿಗೆ? ಇಲ್ಲಿದೆ ಮಾಹಿತಿ

ಬೆಂಗಳೂರು, ಏ.13: ಸಿಲಿಕಾನ್​​ ಸಿಟಿಯ ಜನರಿಗೆ ಒಂದು ಗುಡ್​​​ ನ್ಯೂಸ್​​ ಕಾದಿದೆ. ಇನ್ಮುಂದೆ ಬಿಎಂಟಿಸಿಯ ಈ ಬಸ್ಸಿನಲ್ಲಿ ಕೇವಲ 6 ರೂ, ಗೆ ಹೋಗಬಹುದು. ನಗರದ ಹರಲೂರು, ಕಸವನಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳ ನಿವಾಸಿಗಳಿಗೆ ಮೆಟ್ರೋ ನಿಲ್ದಾಣ ತಲುಪಲು ಇದ್ದ ಅತಿದೊಡ್ಡ ಸಮಸ್ಯೆಗೆ ಈಗ ಪರಿಹಾರ ಸಿಕ್ಕಿದೆ. ಬಿಎಂಟಿಸಿಯು ‘ಹಳದಿ ಮಾರ್ಗ’ದ (Yellow Line) ಮೆಟ್ರೋ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸಲು MF-22E ಮತ್ತು MF-22EA ಎಂಬ ಹೊಸ ಫೀಡರ್ ಬಸ್ ಸೇವೆಗಳನ್ನು ಆರಂಭಿಸಿದೆ. ಈ ಫೀಡರ್ ಬಸ್‌ಗಳು…

Read More

ಕುಂದಾಪುರದ ಸರ್ಕಾರಿ ಶಾಲೆಗೆ ಬಂದ ಎಐ ರೋಬೋಟ್​​ ಟೀಚರ್​: ಕಾರ್ಯನಿರ್ವಹಣೆ ಹೇಗೆ?

ಉಡುಪಿ, ಏಪ್ರಿಲ್​​ 13: ತಂತ್ರಜ್ಞಾನ ಅಭಿವೃದ್ಧಿ ಹಿನ್ನೆಲೆ ವರ್ಷದಿಂದ ವರ್ಷಕ್ಕೆ ಶಿಕ್ಷಣ ಕ್ಷೇತ್ರದಲ್ಲಿಯೂ ಭಾರಿ ಸುಧಾರಣೆಗಳು ಕಂಡುಬರುತ್ತಿವೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ 111 ವರ್ಷಗಳ ಇತಿಹಾಸ ಹೊಂದಿರುವ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೈಂದೂರು ಸಮೀಪದ ವಂಡ್ಸೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜನರೇಟಿವ್ ಎಐ ಶಿಕ್ಷಕ ರೋಬೋಟ್ ಪರಿಚಯಿಸಲಾಗಿದೆ. ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ರೋಬೋಟ್​​ ಶಿಕ್ಷಕರಂತಹ ವಿನೂತನ ಪ್ರಯೋಗ ಇದೇ ಮೊದಲಾಗಿದೆ. ಐರಿಸ್ (IRIS) ಎಂಬ ಈ ರೋಬೋಟನ್ನು ನೀತಿ ಆಯೋಗದ ಅಟಲ್ ಟಿಂಕರಿಂಗ್…

Read More

Gold Rates: ಚಿನ್ನ, ಬೆಳ್ಳಿ ಬೆಲೆ ಇಳಿಕೆ; ಇಲ್ಲಿದೆ ದರಪಟ್ಟಿ

ಬೆಂಗಳೂರು, ಏಪ್ರಿಲ್ 13: ಚಿನ್ನ, ಬೆಳ್ಳಿ ಬೆಲೆಗಳ ಏರಿಳಿತ ಮುಂದುವರಿದಿದೆ. ಇಂದು ಸೋಮವಾರ ಚಿನ್ನದ ಬೆಲೆ (Gold Rates) ಗ್ರಾಮ್​ಗೆ 35 ರೂ ಕಡಿಮೆಗೊಂಡಿದೆ. ಹೆಚ್ಚಿನ ದೇಶಗಳಲ್ಲಿ ಇದರ ಬೆಲೆ ಸ್ವಲ್ಪವಾಗಿ ಇಳಿಮುಖವಾಗಿದೆ. ಬೆಳ್ಳಿ ಬೆಲೆಯೂ ಇವತ್ತು ಕಡಿಮೆಗೊಂಡಿದೆ. ಗ್ರಾಮ್​ಗೆ 5 ರೂನಷ್ಟು ತಗ್ಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,39,750 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,52,460 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ…

Read More

ಶಿವಣ್ಣ ಬಳಿಕ ‘ಪೆದ್ದಿ’ ಸೆಟ್ ಸೇರಿದ ಮತ್ತೋರ್ವ ಕನ್ನಡದ ಖ್ಯಾತ ಕಲಾವಿದ

ತೆಲುಗಿನ ಸ್ಪೋರ್ಟ್ಸ್ ಡ್ರಾಮಾ ‘ಪೆದ್ದಿ’ ಸಿನಿಮಾದ ಶೂಟ್ ಭರದಿಂದ ಸಾಗುತ್ತಿದೆ. ಈ ಚಿತ್ರದಲ್ಲಿ ರಾಮ್ ಚರಣ್ ಹೀರೋ ಆದರೆ, ಕನ್ನಡದ ಶಿವರಾಜ್​​ಕುಮಾರ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಈಗ ಕನ್ನಡದ ಹೀರೋ ಒಬ್ಬರ ಎಂಟ್ರಿ ಆಗಿದೆ. ಅವರು ಬೇರೆ ಯಾರೂ ಅಲ್ಲ, ಸಾಯಿ ಕುಮಾರ್. ತಮ್ಮ ಕಂಚಿನ ಕಂಠದ ಮೂಲಕ ಗಮಮ ಸೆಳೆದ ಅವರು, ಈಗ ‘ಪೆದ್ದಿ’ ಸಿನಿಮಾದ ಭಾಗ ಆಗಿದ್ದಾರೆ. ಸಾಯಿ ಕುಮಾರ್ ಅವರು ಕನ್ನಡ ಮಾತ್ರವಲ್ಲದೆ, ಪರಭಾಷೆಯಲ್ಲೂ ನಟಿಸಿದ್ದಾರೆ. ಅವರು ತೆಲುಗು…

Read More