All posts by nagaraj11081993

ILT20: ಮತ್ತೊಮ್ಮೆ ಫೈನಲ್​ಗೇರಿದ MI ಪಡೆ – Kannada News | MI Emirates in to the final after sealing the game by 7 wickets

ಇಂಟರ್​ನ್ಯಾಷನಲ್ ಲೀಗ್ ಟಿ20 ಟೂರ್ನಿಯ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಬಲಿಷ್ಠ ಅಬುಧಾಬಿ ನೈಟ್ ರೈಡರ್ಸ್ ತಂಡಕ್ಕೆ ಸೋಲುಣಿಸಿ ಎಂಐ ಎಮಿರೇಟ್ಸ್ ತಂಡವು ಫೈನಲ್​ಗೇರಿದೆ. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಎಂಐ ಎಮಿರೇಟ್ಸ್ ತಂಡದ ನಾಯಕ ಕೀರನ್ ಪೊಲಾರ್ಡ್ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಅಬುಧಾನಿ ನೈಟ್ ರೈಡರ್ಸ್ ತಂಡವು 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು ಕಲೆಹಾಕಿದ್ದು ಕೇವಲ 120 ರನ್​ಗಳು ಮಾತ್ರ.

121 ರನ್​​ಗಳ ಸುಲಭ ಗುರಿಯನ್ನು ಬೆನ್ನತ್ತಿದ ಎಂಐ ಎಮಿರೇಟ್ಸ್ ತಂಡವು 16.1 ಓವರ್​ಗಳಲ್ಲಿ ಗುರಿ ಮುಟ್ಟುವ ಮೂಲಕ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಎಂಐ ಎಮಿರೇಟ್ಸ್​ ತಂಡವು ಎರಡನೇ ಬಾರಿಗೆ ಫೈನಲ್​ಗೇರಿದೆ.

ಭಾನುವಾರ ನಡೆಯಲಿರುವ ಫೈನಲ್​ನಲ್ಲಿ ಡೆಸರ್ಟ್ ವೈಪರ್ಸ್ ಹಾಗೂ ಎಂಐ ಎಮಿರೇಟ್ಸ್ ತಂಡಗಳು ಮುಖಾಮುಖಿಯಾಗಲಿದ್ದು, ಈ ಪಂದ್ಯದಲ್ಲಿ ಗೆಲ್ಲುವ ತಂಡ ಇಂಟರ್​ನ್ಯಾಷನಲ್ ಲೀಗ್ ಟಿ20 ಟೂರ್ನಿಯ ಚಾಂಪಿಯನ್ ಎನಿಸಿಕೊಳ್ಳಲಿದೆ.

 

Source link

ಕಿಚ್ಚ ಸುದೀಪ್ ಕಾಲೆಳೆದ ರೀತಿಗೆ ನಾಚಿ ನೀರಾದ ಹಾಸ್ಯ ನಟ ಯೋಗಿ ಬಾಬು – Kannada News | Kiccha Sudeep’s Humorous Jibe at Yogi Babu on ‘Mark’ Movie pressmeet

ಕಿಚ್ಚ ಸುದೀಪ್ (Kichcha Sudeep) ಅವರು ‘ಮಾರ್ಕ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಯಶಸ್ಸು ಕಂಡಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಈ ನಿರೀಕ್ಷೆಯನ್ನು ಮೀರಿ ಸಿನಿಮಾ ಯಶಸ್ಸು ಕಂಡಿದೆ ಎಂದರೂ ತಪ್ಪಾಗಲಾರದು. ಈ ಸಿನಿಮಾದಲ್ಲಿ ತಮಿಳು ನಟ ಯೋಗಿ ಬಾಬು ಕೂಡ ನಟಿಸಿದ್ದಾರೆ. ಈ ಚಿತ್ರದ ಬಗ್ಗೆ ಸುದೀಪ್ ಮಾತನಾಡುವಾಗ ಯೋಗಿ ಬಾಬು ಅವರನ್ನು ಹೊಗಳಿದರು.

ಯೋಗಿ ಬಾಬು ಅವರು ಸ್ಟಾರ್ ಹೀರೋಗಳಿಗಿಂತ ಬ್ಯುಸಿ ಎಂದರೂ ತಪ್ಪಾಗಲಾರದು. ಅವರು ಹಲವು ಸ್ಟಾರ್ ಹೀರೋಗಳ ಸಿನಿಮಾದಲ್ಲಿ ನಟಿಸುತ್ತಿರುತ್ತಾರೆ. ‘ಮಾರ್ಕ್’ ಚಿತ್ರದಲ್ಲಿ ಅವರು ಬಣ್ಣ ಹಚ್ಚಿದ್ದರು. ಅವರು ಹಂತ ಹಂತವಾಗಿ ಸಿನಿಮಾ ಶೂಟ್​ಗೆ ಬಂದಿದ್ದರಂತೆ. ಈ ಬಗ್ಗೆ ಸುದೀಪ್ ಮಾತನಾಡಿದ್ದರು.

‘ನಮ್ಮ ಸೆಟ್​​​ನಲ್ಲಿ ಬ್ಯುಸಿ ಹೀರೋ ಎಂದರೆ ಅದು ಯೋಗಿ ಬಾಬು. ನಮ್ಮ ಸೆಟ್​​ನಲ್ಲಿ ಒಂದು ಕಾಲು, ಮತ್ತೊಂದು ಸೆಟ್​​​ನಲ್ಲಿ ಮತ್ತೊಂದು ಕಾಲಿತ್ತು. ಅವರು ಇನ್​​ಸ್ಟಾಲ್​​ಮೆಂಟ್ ಅಲ್ಲಿ ನಟಿಸಿದ್ದಾರೆ. ವಾಹನ ಖರೀದಿ ಮಾಡ್ತೀರಾ. ಹಣವನ್ನು ಮಾತ್ರ ಇನ್​​ಸ್ಟಾಲ್​ಮೆಂಟ್​​ನಲ್ಲಿ ಕಟ್ಟೋದು ತಾನೆ? ವಾಹನ ಇನ್​​ಸ್ಟಾಲ್​​ಮೆಂಟ್​​ನಲ್ಲಿ ಬರುತ್ತಾ’ ಎಂದು ಪ್ರಶ್ನೆ ಮಾಡಿದ್ದಾರೆ ಸುದೀಪ್.

‘ಪ್ಯಾಕಪ್ ಎಂದು ಹೇಳುತ್ತಿದ್ದರು. ಇನ್ನೇನು ಸೆಟ್​​ನಿಂದ ಹೋಗಬೇಕು, ಯೋಗಿ ಅವರು ಬಂದಿದ್ದಾರೆ ಶೂಟ್ ಮಾಡಬೇಕು ಎಂದು ನಿರ್ದೇಶಕರು ಹೇಳುತ್ತಿದ್ದರು. ಅವರು ನಮ್ಮ ಆಸ್ತಿ. ಇಡೀ ತಂಡ ಚೆನ್ನಾಗಿ ಕೆಲಸ ಮಾಡಿದೆ’ ಎಂದು ಸುದೀಪ್ ಅವರು ಹೇಳಿದ್ದರು.

ಇದನ್ನೂ ಓದಿ:  ‘ನಗ್ತಾ ಇರಿ, ಖುಷಿಯಾಗಿರಿ’; ಮಾತಿನ ಮೂಲಕ ವಿಶ್ ಮಾಡಿದ ಸುದೀಪ್

ಯೋಗಿ ಬಾಬು ತಮಿಳಿನ ಖ್ಯಾತ ನಾಮರಲ್ಲಿ ಒಬ್ಬರು. ಅವರು ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ತಮಿಳಿನ ಬಹುತೇಕ ಸ್ಟಾರ್​ ಗಳ ಜೊತೆ ನಟಿಸಿದ್ದಾರೆ. ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕ್ಯಾಪ್ಟನ್ಸಿ ಬೇಕೆ ಬೇಕು ಎಂದು ಇಷ್ಟು ಕೆಳಮಟ್ಟಕ್ಕೆ ಇಳಿಯಬಾರದಿತ್ತು ಅಶ್ವಿನಿ – Kannada News | Ashwini Gowda Bigg Boss Captaincy Row: Victim Card Sparks Outrage

ಬಿಗ್ ಬಾಸ್ (Bigg Boss) ಮನೆಯಲ್ಲಿ ಅಶ್ವಿನಿ ಗೌಡ ಅವರು ಈ ವಾರ ಕ್ಯಾಪ್ಟನ್ಸಿ ಟಾಸ್ಕ್​ಗೆ ಆಯ್ಕೆ ಆಗಿದ್ದರು. ಆದರೆ, ಧನುಷ್ ಎದುರು ಗೆಲ್ಲಲು ಅವರಿಗೆ ಸಾಧ್ಯವಾಗಲೇ ಇಲ್ಲ. ಈಗ ಅಶ್ವಿನಿ ಗೌಡ ಅವರು ನಡೆದುಕೊಂಡ ರೀತಿ ಚರ್ಚೆಗೆ ಕಾರಣವಾಗಿದೆ. ಅವರು ಆಟದಲ್ಲಿ ಉಂಟಾದ ತೊಂದರೆಯನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳಲು ಮುಂದಾಗಿದ್ದರು. ಅವರು ಇಷ್ಟು ಕೆಳಮಟ್ಟಕ್ಕೆ ಇಳಿಯಬಾರದಿತ್ತು ಎಂದು ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯಪಟ್ಟಿದ್ದಾರೆ..

ಈ ವಾರ ಅಶ್ವಿನಿ ಗೌಡಗೆ ಅದೃಷ್ಟ ಒಲಿದಿತ್ತು. ಅವರು ಗಿಲ್ಲಿ ಸಹಾಯದಿಂದ ನೇರವಾಗಿ ಕ್ಯಾಪ್ಟನ್ಸಿ ರೇಸ್​​ಗೆ ಆಯ್ಕೆ ಆದರು. ಗಿಲ್ಲಿ ಕ್ಯಾಪ್ಟನ್ ಆಗಿದ್ದರಿಂದ ಅವರಿಗೂ ಈ ಅವಕಾಶ ಸಿಕ್ಕಿತು. ನಂತರ ಆಟ ಆಡಿ ರಾಶಿಕಾ ಹಾಗೂ ಧನುಶ್ ಕ್ಯಾಪ್ಟನ್ಸಿ ರೇಸ್​ಗೆ ಅರ್ಹತೆ ಪಡೆದರು. ಆ ಬಳಿಕ ಜೋಡಿ ಮಾಡಿ ಆಟ ಆಡಿಸಲಾಯಿತು.

ಧನುಶ್ ಹಾಗೂ ಅಶ್ವಿನಿ ಒಂದು ಜೋಡಿ, ರಾಶಿಕಾ ಹಾಗೂ ಗಿಲ್ಲಿ ಒಂದು ಜೋಡಿ. ಅಶ್ವಿನಿ ತಂಡದಲ್ಲಿ ಇದ್ದ ಧನುಶ್ ಉತ್ತಮವಾಗಿ ಆಡಿದ್ದರಿಂದ ಅವರ ತಂಡ ಗೆದ್ದಿತು. ಧನುಶ್ ಹಾಗೂ ಅಶ್ವಿನಿ ಅಂತಿಮವಾಗಿ ಕೊನೆಯ ಹಂತದ ಕ್ಯಾಪ್ಟನ್ಸಿ ರೇಸ್​ಗೆ ಆಯ್ಕೆ ಆದರು. ಇಬ್ಬರ ಮಧ್ಯೆ ಪಜಲ್ ಟಾಸ್ಕ್ ನಡೆಯುವಾಗ ಉಸ್ತುವಾರಿ ಮಾಡಿದ ತಪ್ಪಿನಿಂದ ನಿಯಮ ಪಾಲನೆ ಆಗಿಲ್ಲ. ಇದನ್ನು ಗಮನಿಸಿದ ಬಿಗ್ ಬಾಸ್ ಆಟ ರದ್ದು ಮಾಡಿ, ವೋಟಿಂಗ್​ಗೆ ಅವಕಾಶ ಕೊಟ್ಟರು. ಧನುಶ್​ಗೆ ಬಹುಮತದ ವೋಟ್ ಬಂದು ವಿನ್ ಆದರು.

ಆ ಬಳಿಕ ಅಲ್ಲಿ ನಡೆದಿದ್ದೇ ಬೇರೆ. ಅಶ್ವಿನಿ ಅವರು ಧನುಶ್ ಬಳಿ ಬಂದು ಒಂದಷ್ಟು ವಿಷಯಗಳನ್ನು ಹೇಳಿದರು. ‘ನೀವು ನನ್ನಿಂದ ಕ್ಯಾಪ್ಟನ್ಸಿ ಕಿತ್ತುಕೊಂಡ್ರಿ, ನಂಗೆ ಅನ್ಯಾಯ ಆಗಿದೆ, ನೀವು ನನಗೆ ಕ್ಯಾಪ್ಟನ್ಸಿ ಕೊಡ್ತೀನಿ ಎಂದು ಹೇಳಬಹುದಿತ್ತು’ ಎಂದೆಲ್ಲ ಹೇಳಿದ್ದಾರೆ. ಶತಾಯ ಗತಾಯ ಕ್ಯಾಪ್ಟನ್ ಆಗಲೇಬೇಕು ಎಂದು ಅವರು ತಾವು ಸಂತ್ರಸ್ತೆ ಎಂಬ ಕಾರ್ಡ್ ಪ್ಲೇ ಮಾಡಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಕನ್ನಡ: ‘ಅಶ್ವಿನಿ ಗೌಡ ಸೋಲಬೇಕು ಅಂತ ಬಯಸುವವರೇ ಜಾಸ್ತಿ ಜನ ಇದ್ದಾರೆ’

ಧನುಶ್ ಉದ್ದೇಶ ಪೂರ್ವಕವಾಗಿ ಮಾಡಿದ ತಪ್ಪು ಇದಲ್ಲ. ಹಾಗಿದ್ದಿದ್ದರೆ ಬಿಗ್ ಬಾಸ್ ಈ ಬಗ್ಗೆ ಘೋಷಣೆ ಮಾಡುತ್ತಿದ್ದರು. ಉಸ್ತುವಾರಿಗಳ ಕಣ್ತಪ್ಪಿನಿಂದ ಆದ ಮಿಸ್ಟೇಕ್ ಇದು. ಹೀಗಿರುವಾಗ ಕ್ಯಾಪ್ಟನ್ಸಿ ತಮಗೆ ಬೇಕು ಎಂದು ಕೇಳೋದು ಎಷ್ಟು ಸರಿ ಎಂಬುದು ಅನೇಕರ ಪ್ರಶ್ನೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Daily Devotional: ದೇವರ ಮನೆಯಲ್ಲಿ ನೀರಿನ ಚೆಂಬನ್ನು ಇಡುವುದು ಯಾಕೆ? – Kannada News | Unlocking Prosperity: Why a Water Pot in Your Pooja Room is Essential

ಬೆಂಗಳೂರು, ಜ.3: ಮನೆಯಲ್ಲಿ ದೇವರ ಕೃಪೆಗೆ ಪಾತ್ರರಾಗಲು ಒಂದು ಸರಳ ಮತ್ತು ಶಕ್ತಿಶಾಲಿ ತಂತ್ರವಿದೆ. ಹಿಂದೂ ಸಂಪ್ರದಾಯದ ಪ್ರಕಾರ, ಮನೆಯಲ್ಲಿ ದೈವಿಕ ಶಕ್ತಿ ಮತ್ತು ಸಕಾರಾತ್ಮಕ ಕಂಪನಗಳನ್ನು ಹೆಚ್ಚಿಸಲು ದೇವರ ಮನೆಯಲ್ಲಿ ನೀರಿನ ಚೆಂಬನ್ನು ಇಡುವುದು ಅತ್ಯಂತ ಶುಭಕರ. ಇದು ಕುಟುಂಬದಲ್ಲಿ ಸುಖ, ಶಾಂತಿ, ನೆಮ್ಮದಿ ಮತ್ತು ಯಶಸ್ಸನ್ನು ತರುತ್ತದೆ. ನಿಮ್ಮ ದೇವರ ಮನೆಯಲ್ಲಿ, ಯಾವುದೇ ದಿಕ್ಕಿನಲ್ಲಿದ್ದರೂ ಪರವಾಗಿಲ್ಲ, ಈಶಾನ್ಯ ದಿಕ್ಕಿನಲ್ಲಿ ಒಂದು ಸಣ್ಣ ತಾಮ್ರದ ಚೆಂಬಿನಲ್ಲಿ ಶುದ್ಧ ನೀರನ್ನು ತುಂಬಿಸಿ. ಇದರ ಮೇಲೆ ತಟ್ಟೆಯನ್ನು ಮುಚ್ಚಬಾರದು. ಈ ನೀರಿಗೆ ಸ್ವಲ್ಪ ಬೆಲ್ಲ ಅಥವಾ ತುಳಸಿಯನ್ನು ಸೇರಿಸುವುದು ಇನ್ನಷ್ಟು ಶುಭವನ್ನು ತರುತ್ತದೆ. ಮೂರು ದಿನಕ್ಕೊಮ್ಮೆ ಈ ನೀರನ್ನು ಬದಲಾಯಿಸಿ. ಬದಲಿಸಿದ ನೀರನ್ನು ಮನೆಯಾದ್ಯಂತ ಪ್ರೋಕ್ಷಿಸಬಹುದು ಅಥವಾ ಸ್ನಾನಕ್ಕೆ ಬಳಸಬಹುದು. ಈ ಆಚರಣೆಯಿಂದ ನಕಾರಾತ್ಮಕ ಶಕ್ತಿಗಳು ದೂರವಾಗಿ, ಇಷ್ಟಾರ್ಥಗಳು ಈಡೇರುತ್ತವೆ ಮತ್ತು ಮಹಾಲಕ್ಷ್ಮಿಯ ಕೃಪೆಗೆ ಪಾತ್ರರಾಗುತ್ತೀರಿ. ಇದು ವರುಣ ದೇವನ ಆಶೀರ್ವಾದವನ್ನೂ ತರುತ್ತದೆ ಎಂದು ನಿತ್ಯಭಕ್ತಿಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಜೆಟ್ 70 ಕೋಟಿ, ಒಟ್ಟಾರೆ ಕಲೆಕ್ಷನ್ 1.5 ಕೋಟಿ; ದೊಡ್ಡ ದುರಂತ ಕಂಡ ಮೋಹನ್​ಲಾಲ್ ಸಿನಿಮಾ – Kannada News | Mohanlal’s Vrushabha Disaster: 70 Cr Budget, one and half Cr Collection Flop

ಸ್ಟಾರ್ ಹೀರೋಗಳು ಸಿನಿಮಾದಲ್ಲಿ ನಟಿಸಿದ್ದಾರೆ ಎಂದರೆ ಬಹುತೇಕ ಸಂದರ್ಭಗಳಲ್ಲಿ ಹಾಕಿದ ಬಂಡವಾಳ ಮರಳಿ ಬರುತ್ತದೆ ಎಂಬ ನಂಬಿಕೆ ನಿರ್ಮಾಪಕರಿಗೆ ಇರುತ್ತದೆ. ನಿರ್ಮಾಪಕರು ಸೇಫ್ ಆಗುತ್ತಾರೆ. ಸಲ್ಮಾನ್ ಖಾನ್, ದಳಪತಿ ವಿಜಯ್, ರಜನಿಕಾಂತ್ ಸೇರಿದಂತೆ ಅನೇಕರ ಸಿನಿಮಾ ವಿಮರ್ಶೆಯಲ್ಲಿ ಸೋತರೂ ಒಳ್ಳೆಯ ಗಳಿಕೆ ಮಾಡಿದ ಉದಾಹರಣೆ ಇದೆ. ಈಗ ‘ವೃಷಭ’ ಸಿನಿಮಾದಲ್ಲಿ ಅದು ಸುಳ್ಳಾಗಿದೆ. ಡಿಸೆಂಬರ್ 25ರಂದು ರಿಲೀಸ್​ ಆದ  ಮೋಹನ್​ಲಾಲ್ (Mohanlal) ಅಭಿನಯದ ಈ ಚಿತ್ರದ ಬಜೆಟ್ 70 ಕೋಟಿ ರೂಪಾಯಿ. ಭಾರತದ ಒಟ್ಟಾರೆ ಗಳಿಕೆ ಒಂದೂವರೆ ಕೋಟಿ ರೂಪಾಯಿ.

ಕನ್ನಡದ ನಂದ ಕಿಶೋರ್ ಅವರು ‘ವೃಷಭ’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಈ ಮೊದಲು ಅವರು ಕನ್ನಡದಲ್ಲಿ ‘ಪೊಗರು’ ರೀತಿಯ ಸಿನಿಮಾಗಳನ್ನು ನೀಡಿದ್ದಾರೆ. ಈಗ ಅವರು ಮಲಯಾಳಂಗೆ ತೆರಳಿದ್ದು ಅಲ್ಲಿ ನಿರೀಕ್ಷಿತ ಮಟ್ಟದ ಗೆಲುವು ಸಿಕ್ಕಿಲ್ಲ. ಸಿನಿಮಾದಲ್ಲಿ ಮೋಹನ್​ಲಾಲ್ ಜೊತೆ ಕನ್ನಡದವರಾದ ಸಮರ್ಜಿತ್ ಲಂಕೇಶ್, ರಾಗಿಣಿ ದ್ವಿವೇದಿ, ಗರುಡ ರಾಮ್ ಮೊದಲಾದವರು ನಟಿಸಿದ್ದಾರೆ.

‘ವೃಷಭ’ ಸಿನಿಮಾ ಪುನರ್ಜನ್ಮದ ಕಥೆಯನ್ನು ಹೊಂದಿದೆ. ಈ ಸಿನಿಮಾದಲ್ಲಿ ರಾಜರ ಕಥೆ ಕೂಡ ಬರುತ್ತದೆ. ಹೀಗಾಗಿ, ಅದ್ದೂರಿ ಸೆಟ್​​ಗಳ ನಿರ್ಮಾಣ ಮಾಡಲಾಗಿತ್ತು. ಇದಕ್ಕೆ ಸಾಕಷ್ಟು ಹಣ ವ್ಯಯಿಸಲಾಗಿದೆ. ಒಂದು ಅಂದಾಜಿನ ಪ್ರಕಾರ ಸಿನಿಮಾದ ಬಜೆಟ್ 70 ಕೋಟಿ ರೂಪಾಯಿ. ಈ ಸಿನಿಮಾ ಭಾರತದ ಒಟ್ಟೂ ಕಲೆಕ್ಷನ್ 1.60 ಕೋಟಿ ರೂಪಾಯಿ ಆಸುಪಾಸಿನಲ್ಲಿದೆ. ವಿಶ್ವ ಮಟ್ಟದಲ್ಲಿ ಚಿತ್ರದ ಗಳಿಕೆ 2 ಕೋಟಿ ರೂಪಾಯಿ ಆಗಿದೆ ಎನ್ನಲಾಗಿದೆ.

ಇದನ್ನೂ ಓದಿ: ಮೋಹನ್​ಲಾಲ್ ತಾಯಿ ಶಾಂತಕುಮಾರಿ ನಿಧನ; ಅಂತಿಮ ನಮನ ಸಲ್ಲಿಸಿದ ಮಮ್ಮುಟಿ

ಅಂದಹಾಗೆ ಈ ಸಿನಿಮಾಗೆ ಒಬ್ಬರಲ್ಲ, ಇಬ್ಬರಲ್ಲ ಬರೋಬ್ಬರಿ 9 ನಿರ್ಮಾಪಕರಿದ್ದಾರೆ. ಬಾಲಿವುಡ್​​ನ ಏಕ್ತಾ ಕಪೂರ್, ಶೋಭಾ ಕಪೂರ್ ಸೇರಿದಂತೆ ಅನೇಕರು ಹಣ ಹೂಡಿದ್ದಾರೆ. ಹಾಕಿದ ಹಣಕ್ಕೆ ಸಾಕಷ್ಟು ನಷ್ಟ ಉಂಟಾಗಿದೆ.
ಸಿನಿಮಾದ ಕಥೆ ಹಾಗೂ ಮೇಕಿಂಗ್ ವಿಷಯದಲ್ಲಿ ಹಳೆಯ ಟೆಕ್ನಿಕ್ ಬಳಸಲಾಗಿದೆ. ಈ ಕಾರಣಕ್ಕೆ ಜನರಿಗೆ ಸಿನಿಮಾ ಇಷ್ಟ ಆಗಿಲ್ಲ. ಸಿನಿಮಾದ ಕಥೆಯಲ್ಲಿ ಗಟ್ಟಿತನ ಇಲ್ಲ. ನಿರೂಪಣೆ ಕೂಡ ಅಷ್ಟು ಉತ್ತಮವಾಗಿಲ್ಲ. ಈ ಎಲ್ಲಾ ಕಾರಣದಿಂದ ಸಿನಿಮಾ ಇಷ್ಟು ಹೀನಾಯ ಕಲೆಕ್ಷನ್ ಮಾಡುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Horoscope Today 03 January: ಈ ರಾಶಿಯವರ ಅದೃಷ್ಟದ ಬಣ್ಣ, ಸಂಖ್ಯೆ ಯಾವುದು? – Kannada News | Astrological Insights for 3 January 2026: Dr. Basavaraj Gurujis Daily Zodiac Forecast

ಬೆಂಗಳೂರು, ಜ.3: ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ ಗುರೂಜಿ ಅವರು 2026ರ ಜನವರಿ 3, ಶನಿವಾರದ ದ್ವಾದಶ ರಾಶಿಗಳ ಫಲಾಫಲ ಕುರಿತು ಮಾಹಿತಿ ನೀಡಿದ್ದಾರೆ. ಈ ದಿನ ವಿಶ್ವಾಸು ನಾಮ ಸಂವತ್ಸರ, ದಕ್ಷಿಣಾಯನ, ಪುಷ್ಯ ಮಾಸ, ಹೇಮಂತ ಋತು, ಶುಕ್ಲ ಪಕ್ಷದ ಪೂರ್ಣಿಮಾ ತಿಥಿ ಇದ್ದು, ಇದನ್ನು ಪುಷ್ಯ ಹುಣ್ಣಿಮೆ ಅಥವಾ ಬನದ ಹುಣ್ಣಿಮೆ ಎಂದು ಕರೆಯಲಾಗುತ್ತದೆ. ಆರ್ದ್ರಾ ನಕ್ಷತ್ರ, ಬ್ರಹ್ಮಯೋಗ ಮತ್ತು ಬವಕರಣೆಗಳೊಂದಿಗೆ ಈ ದಿನವು ಮಾಘ ಸ್ನಾನದ ಪ್ರಾರಂಭಕ್ಕೂ ಪ್ರಶಸ್ತವಾಗಿದೆ. ಶೃಂಗೇರಿಯಲ್ಲಿ ಆರಿದ್ರೋತ್ಸವ, ಮೂಗೂರಿನಲ್ಲಿ ಉತ್ಸವ ಹಾಗೂ ಬನಶಂಕರಿ ವ್ರತ ಆಚರಣೆಯಂತಹ ವಿಶೇಷ ದಿನ ಇದಾಗಿದೆ. ರವಿ ಧನುಸ್ಸು ರಾಶಿಯಲ್ಲಿ ಮತ್ತು ಚಂದ್ರ ಮಿಥುನ ರಾಶಿಯಲ್ಲಿ ಸಂಚರಿಸುವ ಈ ಶುಭ ದಿನದಂದು ಜನ್ಮದಿನ ಮತ್ತು ವಿವಾಹ ವಾರ್ಷಿಕೋತ್ಸವ ಆಚರಿಸುವವರಿಗೆ ಗುರೂಜಿ ಶುಭ ಕೋರಿದ್ದಾರೆ. ಪ್ರತಿಯೊಂದು ರಾಶಿಯವರಿಗೂ ಆರ್ಥಿಕ, ವೃತ್ತಿ, ಕುಟುಂಬ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಸಂಕ್ಷಿಪ್ತ ಭವಿಷ್ಯವನ್ನು ನೀಡಿ, ಅದೃಷ್ಟದ ಬಣ್ಣ, ದಿಕ್ಕು, ಸಂಖ್ಯೆ ಮತ್ತು ಜಪಿಸಬೇಕಾದ ಮಂತ್ರಗಳನ್ನೂ ಸೂಚಿಸಿದ್ದಾರೆ.

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕ ಹವಾಮಾನ ವರದಿ: ರಾಜ್ಯದ ಹಲವು ಕಡೆ ತುಂತುರು ಮಳೆಯಾಗುವ ಸಾಧ್ಯತೆ – Kannada News | Karnataka Weather Forecast, Cold Continues, Next 3 Days

ಬೆಂಗಳೂರು, ಜ.1: ಇಂದು ಕರ್ನಾಟಕದ ಹಲವು (Karnataka Weather Forecast)  ಭಾಗಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ರಾಜ್ಯದಲ್ಲಿ ಮಿಶ್ರ ವಾತಾವರಣ ಇರಲಿದೆ. ಬೆಂಗಳೂರು ಮತ್ತು ದಕ್ಷಿಣ ಒಳನಾಡಿನಲ್ಲಿ ಮೋಡ ಕವಿದ ವಾತಾವರಣವಿದ್ದು, ತುಂತುರು ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27°C (81°F) ಮತ್ತು ಕನಿಷ್ಠ ತಾಪಮಾನ 18°C ​​(64°F) ಇರಲಿದೆ ಎಂದು ಹೇಳಲಾಗಿದೆ. ಕರಾವಳಿ ಕರ್ನಾಟಕ ಮಳೆಯಾಗುವ ಸಾಧ್ಯತೆ ಕಡಿಮೆ ಇದೆ. ಹಾಗೂ ಮಂಗಳೂರು ಮತ್ತು ಉಡುಪಿ ನಗರದಲ್ಲಿ ಬೆಚ್ಚಗಿನ, ಚಳಿ ಹೆಚ್ಚಿರಲಿದೆ.

ಇನ್ನು ಉತ್ತರ ಒಳನಾಡಿನಲ್ಲಿ ಸಾಮಾನ್ಯವಾಗಿ ಒಣ ಹವಾಮಾನ ಮುಂದುವರಿಯಲಿದೆ. ಕಲಬುರಗಿ,ಬೀದರ್, ಮತ್ತು ಬಾಗಲಕೋಟೆಯಲ್ಲಿ ಸಾಮಾನ್ಯ ಚಳಿ ಇದ್ದು, ಗರಿಷ್ಠ 29°C ಮತ್ತು ರಾತ್ರಿ ಇದರ ತಾಪಮಾನ ಕಡಿಮೆ ಇರುತ್ತದೆ. ದಾವಣಗೆರೆ,ಚಿತ್ರದುರ್ಗ, ಮತ್ತು ಬಳ್ಳಾರಿ ಇಂದು ಒಣ ಹವೆ ಮುಂದುವರಿಯುವ ನಿರೀಕ್ಷೆಯಿದೆ. ಮುಂದಿನ 3 ದಿನಗಳಲ್ಲಿ ಕೆಲವು ಕಡೆ ಮಳೆಯಾಗುವ ಸಾಧ್ಯತೆ ಇದ್ದು, ಚಳಿ ಮುಂದುವರಿಯುವ ನಿರೀಕ್ಷೆಯಿದೆ.

ಇದನ್ನೂ ಓದಿ: ಬೆಂಗಳೂರಿಗರಿಗೆ ಬಿಗ್​​ ಶಾಕ್​​​​​: ಚಳಿಗಾಲದಲ್ಲಿ ಹೊರಗೆ ಹೋಗುವ ಮುನ್ನ ಎಚ್ಚರ

ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮಂಡ್ಯ, ಚಿಕ್ಕಬಳ್ಳಾಪುರ, ಕೋಲಾರ, ಚಾಮರಾಜನಗರ, ತುಮಕೂರು, ಮೈಸೂರು, ರಾಮನಗರದಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ಹಾಸನ, ಚಿಕ್ಕಮಗಳೂರು, ಕೊಡಗು, ವಿಜಯನಗರ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ. ಬೀದರ್, ಬಾಗಲಕೋಟೆ, ಬೆಳಗಾವಿ, ಹಾವೇರಿ, ವಿಜಯಪುರ, ಗದಗ, ಕಲಬುರಗಿ, ಧಾರವಾಡ, ಕೊಪ್ಪಳ, ಬಳ್ಳಾರಿ, ರಾಯಚೂರಿನಲ್ಲಿ ಚಳಿ ಮುಂದುವರಿಯಲಿದೆ ಎಂದು ಇಲಾಖೆ ಹೇಳಿದೆ. ಸಂಕ್ರಾಂತಿ ಸಮಯದಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:25 am, Sat, 3 January 26

Source link

‘ಪ್ರಶಾಂತ್ ನೀಲ್ ಅವಕಾಶ ಕೊಡಲಿಲ್ಲ, ಆದರೆ ಅದೃಷ್ಟ ಕೈ ಹಿಡಿಯಿತು’ – Kannada News | Malavika Mohanan missed chance to act in Salaar then got chance in The Raja Saab

ದಕ್ಷಿಣ ಭಾರತ ಚಿತ್ರರಂಗದಲ್ಲಿ ಸಾಕಷ್ಟು ಉತ್ತಮ ನಟಿಯರಿದ್ದಾರೆ. ಬಾಲಿವುಡ್​ನಲ್ಲಿ (Bollywood) ಈಗ ಜನಪ್ರಿಯವಾಗಿರುವ ಕೆಲ ಯುವ ಮತ್ತು ‘ಸ್ಟಾರ್’ ನಟಿಯರಿಗೆ ಹೋಲಿಸಿದರೆ ದಕ್ಷಿಣ ಭಾರತದ ನಟಿಯರು ಬಹಳ ಪ್ರತಿಭಾವಂತರು, ನಟನೆ ಬಲ್ಲವರು ಸಹ. ಬಾಲಿವುಡ್ ನಟಿಯರಂತೆ ಗ್ಲಾಮರ್ ಮತ್ತು ಜೀರೋ ಸೈಜ್, ಬಿಕಿನಿ ದೇಹ ಇಲ್ಲದಿದ್ದರೂ ಪ್ರತಿಭೆಗಂತೂ ಕೊರತೆ ಇಲ್ಲ. ಅಂಥಹಾ ನಟಿಯರಲ್ಲಿ ಮಾಳವಿಕಾ ಮೋಹನನ್ ಸಹ ಒಬ್ಬರು. ಈ ಹಿಂದೆ ಕನ್ನಡದ ‘ನಾನು ಮತ್ತು ವರಲಕ್ಷ್ಮಿ’ ಸಿನಿಮಾನಲ್ಲಿ ನಟಿಸಿರುವ ಮಾಳವಿಕಾ ಮೋಹನನ್, ಆ ನಂತರ ತಮ್ಮ ಪ್ರತಿಭೆಯಿಂದ ಕೆಲ ದೊಡ್ಡ ಸಿನಿಮಾಗಳ ಭಾಗವಾಗಿದ್ದಾರೆ. ಚಿತ್ರರಂಗಕ್ಕೆ ಕಾಲಿಟ್ಟು 13 ವರ್ಷಗಳ ಬಳಿಕ ಇದೀಗ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ ಮಾಳವಿಕಾ ಮೋಹನನ್.

ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಸಿನಿಮಾನಲ್ಲಿ ಮಾಳವಿಕಾ ಮೋಹನನ್ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾನಲ್ಲಿ ಮೂವರು ನಾಯಕಿಯರಿದ್ದು, ಅವರಲ್ಲಿ ಭೈರವಿ ಪಾತ್ರದಲ್ಲಿ ಮಾಳವಿಕಾ ನಟಿಸಿದ್ದಾರೆ. ಇದು ಅವರ ಮೊಟ್ಟ ಮೊದಲ ತೆಲುಗು ಸಿನಿಮಾ. ಅಂದಹಾಗೆ ಅವರು ಈ ಹಿಂದೆ ಪ್ರಭಾಸ್ ಸಿನಿಮಾ ಮೂಲಕವೇ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಡಬೇಕಿತ್ತು, ಆದರೆ ಅದು ಸಾಧ್ಯವಾಗಲಿಲ್ಲ. ನಿರ್ದೇಶಕ ಪ್ರಶಾಂತ್ ನೀಲ್ ಅವರೇ ಸ್ವತಃ ಕರೆ ಮಾಡಿ ಆಫರ್ ಮಾಡಿದ್ದರಂತೆ. ಆದರೆ ಅದು ಕೈಗೂಡಿರಲಿಲ್ಲ. ಈ ಬಗ್ಗೆ ಸ್ವತಃ ಮಾಳವಿಕಾ ಮೋಹನನ್ ಮಾತನಾಡಿದ್ದಾರೆ.

‘ದಿ ರಾಜಾ ಸಾಬ್’ ಸಿನಿಮಾದ ಪ್ರಚಾರಾರ್ಥ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಮಾಳವಿಕಾ ಮೋಹನನ್, ‘ತಮಿಳಿನ ‘ಮಾಸ್ಟರ್’ ಸಿನಿಮಾದ ಬಳಿಕ ನನಗೆ ಪ್ರಶಾಂತ್ ನೀಲ್ ಅವರ ಕಡೆಯಿಂದ ಕರೆ ಬಂತು. ಪ್ರಭಾಸ್ ಅವರ ‘ಸಲಾರ್’ ಸಿನಿಮಾದ ನಾಯಕಿ ಪಾತ್ರಕ್ಕೆ ನನ್ನನ್ನು ಕೇಳಲಾಯ್ತು. ನಾನು ಅವರನ್ನು ಭೇಟಿ ಆದೆ. ಅವರೇ ಖುದ್ದಾಗಿ ನನ್ನ ಕೆಲವು ಚಿತ್ರಗಳನ್ನು ತೆಗೆದುಕೊಂಡರು. ನಾನು ಮಾಡರ್ನ್ ಬಟ್ಟೆಯಲ್ಲಿ ಹೇಗೆ ಕಾಣುತ್ತೀನಿ, ಭಾರತೀಯ ಉಡುಪಿನಲ್ಲಿ ಹೇಗೆ ಕಾಣುತ್ತೀನಿ ಎಂದೆಲ್ಲ ನೋಡಿದರು. ಆದರೆ ಆ ಸಿನಿಮಾಕ್ಕೆ ಬೇರೆ ನಟಿಯನ್ನು (ಶ್ರುತಿ ಹಾಸನ್) ಅವರನ್ನು ಆಯ್ಕೆ ಮಾಡಿದರು. ಆಗ ನನಗೆ ಬಹಳ ಬೇಸರ ಆಗಿತ್ತು’ ಎಂದಿದ್ದಾರೆ ಮಾಳವಿಕಾ.

ಇದನ್ನೂ ಓದಿ:ಪ್ರಭಾಸ್ ಸಿನಿಮಾ ನಿರ್ದೇಶಕನ ಸಂಭಾವನೆ ಎಷ್ಟು ಕೋಟಿ ಗೊತ್ತೆ?

‘ಮೊದಲ ತೆಲುಗು ಸಿನಿಮಾ ಪ್ರಭಾಸ್ ಜೊತೆಗೆ ನಟಿಸಬೇಕು ಎಂದಾಗ ಸಹಜವಾಗಿಯೇ ನನಗೆ ಖುಷಿ ಆಗಿತ್ತು. ಆದರೆ ಪಾತ್ರ ಕೈತಪ್ಪಿದಾಗ ನನಗೆ ಬೇಸರವೂ ಆಗಿತ್ತು. ಆದರೆ ಅದಾದ ಐದಾರು ತಿಂಗಳಲ್ಲೇ ನನಗೆ ಮತ್ತೆ ಕರೆ ಬಂದು, ಪ್ರಭಾಸ್ ಸಿನಿಮಾನಲ್ಲಿ ನಟಿಸಬೇಕು ಎಂದರು. ಆದರೆ ನಾನು ಅವರು ‘ಸಲಾರ್’ಗಾಗಿಯೇ ಕೇಳುತ್ತಿದ್ದಾರೆ ಎಂದುಕೊಂಡು, ಇಲ್ಲ ಬೇರೆ ನಟಿಯ ಆಯ್ಕೆ ಆಗಿರಬೇಕು ನೋಡಿ ಎಂದೆ. ಆದರೆ ಅವರು ಇಲ್ಲ ಇದು ಬೇರೆ ಸಿನಿಮಾಕ್ಕಾಗಿ ಕೇಳುತ್ತಿದ್ದೇವೆ ಎಂದಾಗ ನಾನು ಖುಷಿಯಿಂದ ಒಪ್ಪಿಕೊಂಡೆ’ ಎಂದಿದ್ದಾರೆ ಮಾಳವಿಕಾ.

‘ದಿ ರಾಜಾ ಸಾಬ್’ ಸಿನಿಮಾನಲ್ಲಿ ಭೈರವಿ ಪಾತ್ರದಲ್ಲಿ ನಟಿಸಿದ್ದೇನೆ. ಇದು ಬಹಳ ಭಿನ್ನವಾದ ಪಾತ್ರ. ಹಾಸ್ಯ, ರೊಮಾಂಟಿಕ್, ಆಕ್ಷನ್, ಸೆಂಟಿಮೆಂಟ್ ಎಲ್ಲ ರೀತಿಯ ದೃಶ್ಯಗಳಲ್ಲಿಯೂ ನಾನು ನಟಿಸಿದ್ದೇನೆ. ನನ್ನ ಮಟ್ಟಿಗೆ ಇದು ಸಂಪೂರ್ಣ ಪ್ಯಾಕೇಜ್ ಆಗಿದೆ. ನಿರ್ದೇಶಕ ಮಾರುತಿ ಅವರೇ ಹೇಳಿರುವಂತೆ, ಈ ಸಿನಿಮಾನಲ್ಲಿ ನನ್ನ ಎಲ್ಲ ವರ್ಷನ್ ಅನ್ನೂ ತೋರಿಸಿದ್ದಾರೆ. ಸಿನಿಮಾ ಗೆಲ್ಲುವ ವಿಶ್ವಾಸವಿದೆ. ಪ್ರಭಾಸ್ ಜೊತೆ ನಟಿಸಿದ ಖುಷಿಯೂ ಇದೆ’ ಎಂದಿದ್ದಾರೆ ಮಾಳವಿಕಾ.

ಮಾಳವಿಕಾ ಮೋಹನನ್ ದಕ್ಷಿಣದ ಸ್ಟಾರ್ ನಟರುಗಳೊಟ್ಟಿಗೆ ನಟಿಸಿದ್ದಾರೆ. ರಜನೀಕಾಂತ್ ಜೊತೆ ‘ಪೆಟ್ಟ’, ವಿಜಯ್ ಜೊತೆಗೆ ‘ಮಾಸ್ಟರ್’, ಮಮ್ಮುಟಿ ಜೊತೆಗೆ ‘ದಿ ಗ್ರೇಟ್ ಫಾದರ್’ ಮೋಹನ್​​ಲಾಲ್ ಜೊತೆಗೆ ‘ಹೃದಯಪೂರ್ವಂ’, ಧನುಶ್ ಜೊತೆಗೆ ‘ಮಾರನ್’ ಇನ್ನೂ ಕೆಲವಾರು ದೊಡ್ಡ ಸಿನಿಮಾಗಳಲ್ಲಿ ಮಾಳವಿಕಾ ನಟಿಸಿದ್ದು, ‘ದಿ ರಾಜಾ ಸಾಬ್’ ಅವರ ಮೊದಲ ತೆಲುಗು ಸಿನಿಮಾ ಆಗಿದೆ. ಜನವರಿ 9 ರಂದು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್ – Kannada News | Massive landslide blocked the Srinagar Baramulla highway in Kashmir

ಶ್ರೀನಗರ, ಜನವರಿ 2: ಕಾಶ್ಮೀರದ ಶ್ರೀನಗರ-ಬಾರಾಮುಲ್ಲಾ-ಉರಿ ಹೆದ್ದಾರಿಯಲ್ಲಿ ಇಂದು ಬೆಳಿಗ್ಗೆ ಭಾರಿ ಭೂಕುಸಿತ (Landslide) ಸಂಭವಿಸಿದೆ. ಈ ಭಯಾನಕ ಕ್ಷಣ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಹೈವೇಗೆ ದೊಡ್ಡ ಪರ್ವತದ ಅರ್ಧ ಭಾಗ ಉರುಳಿಬಿದ್ದು, ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ವಾಹನ ಸವಾರರು ಪ್ರಾಣ ಉಳಿಸಿಕೊಳ್ಳಲು ಪರದಾಡುತ್ತಿದ್ದರು. ಸದ್ಯಕ್ಕೆ ಯಾವುದೇ ಸಾವುಗಳು ಸಂಭವಿಸಿಲ್ಲ. ಈ ಘಟನೆಯಿಂದ ಜನಪ್ರಿಯ ಪ್ರವಾಸಿ ಕೇಂದ್ರಗಳಾದ ಗುಲ್ಮಾರ್ಗ್, ಪಹಲ್ಗಾಮ್ ಮತ್ತು ಸೋನಾಮಾರ್ಗ್ ಸೇರಿದಂತೆ ಎತ್ತರದ ಪ್ರದೇಶಗಳತ್ತ ಸಾಗುತ್ತಿದ್ದ ಪ್ರವಾಸಿಗರು ಮುಂದೆ ಹೋಗಲು ಸಾಧ್ಯವಾಗಲಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Indian Recruitment 2025: ಭಾರತೀಯ ನೌಕಾಪಡೆಯಲ್ಲಿ ನೇಮಕಾತಿ; ಪಿಯುಸಿ ಪಾಸಾಗಿದ್ರೆ ಕೂಡಲೇ ಅರ್ಜಿ ಸಲ್ಲಿಸಿ – Kannada News | Indian Navy 10+2 B.Tech Cadet Recruitment 2025: Apply Online by Jan 19

ಭಾರತೀಯ ನೌಕಾಪಡೆಯು ಅಧಿಕೃತ ಅಧಿಸೂಚನೆಯ ಮೂಲಕ 10+2 (ಬಿ.ಟೆಕ್) 44 ಕೆಡೆಟ್ ಎಂಟ್ರಿ ಸ್ಕೀಮ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಭಾರತೀಯ ನೌಕಾಪಡೆಯಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಜನವರಿ 19ರ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸತಕ್ಕದ್ದು.

ಶೈಕ್ಷಣಿಕ ಅರ್ಹತೆ:

ಭಾರತೀಯ ನೌಕಾಪಡೆಯ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪಿಯುಸಿ ಪೂರ್ಣಗೊಳಿಸಿರಬೇಕು .

ಆಯ್ಕೆ ಪ್ರಕ್ರಿಯೆ:

ಮೆರಿಟ್ ಪಟ್ಟಿ ಮತ್ತು SSB ಸಂದರ್ಶನ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್​​ನಲ್ಲಿ ಉದ್ಯೋಗವಕಾಶ; ಸಂಶೋಧನಾ ಸಹಾಯಕ ಹುದ್ದೆಗೆ ನೇಮಕಾತಿ

ಅರ್ಜಿ ಸಲ್ಲಿಸುವುದು ಹೇಗೆ?

  • ಮೊದಲನೆಯದಾಗಿ ಭಾರತೀಯ ನೌಕಾಪಡೆಯ ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ.
  • ಭಾರತೀಯ ನೌಕಾಪಡೆಯ 10+2 (ಬಿ.ಟೆಕ್) ಕೆಡೆಟ್ ಎಂಟ್ರಿ ಸ್ಕೀಮ್​​ಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ಭಾರತೀಯ ನೌಕಾಪಡೆಯ ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ನವೀಕರಿಸಿ. ನಿಮ್ಮ ಇತ್ತೀಚಿನ ಛಾಯಾಚಿತ್ರದೊಂದಿಗೆ ಅಗತ್ಯ ಪ್ರಮಾಣಪತ್ರಗಳು/ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಿ.
  • ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ.
  • ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕೊನೆಯದಾಗಿ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link